ಶನಿವಾರ, ಆಗಸ್ಟ್ 14, 2021

ಹಾವು ದೇವರಲ್ಲ ಅದು ಕೂಡ ಒಂದು ಸಾಮಾನ್ಯ ಜೀವ ಜಂತು (ಲೇಖನ) - ಶ್ರೀ ಅಜೇಯ್ ಪಿ ಎಸ್.

ಹಾವು ದೇವರಲ್ಲ ಅದು ಕೂಡ ಒಂದು ಸಾಮಾನ್ಯ ಜೀವ ಜಂತು


ಸಾಮಾನ್ಯವಾಗಿ ನಮ್ಮ ವಿಜ್ಞಾನ ಸಂಶೋಧನೆ ಹೇಳುವ ಪ್ರಕಾರ ಒಂದು ಹಾವು ಹಾಲನ್ನು ಕುಡಿಯುವುದೆ ಇಲ್ಲ .ಸರೀಸರ್ಪಗಳು ಹಾಲನ್ನಾಗಲಿ ಅಥವಾ  ಹಾಲಿನ  ಉತ್ಪನ್ನಗಳನ್ನಾಗಲಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಮುಖ ಪಶುವೈದ್ಯ ತಜ್ಞರು ಹೇಳಿದ್ದಾರೆ. ಹಾವು ಒಂದು ಸರಿಸರ್ಪಗಳ ( Reptiles ) ಗುಂಪಿಗೆ ಸೇರಿದೆ ಅದು ಕೂಡ ಬೇರೆ ಜೀವಿಗಳಂತೆ ಹೊಟ್ಟೆಪಾಡಿಗಾಗಿ ಆಹಾರಕ್ಕಾಗಿ ಕಪ್ಪೆ, ಇಲಿ,ಹೆಗ್ಗಣಗಳನ್ನು  ತಿಂದು ಬದುಕುತ್ತದೆ . ಆದರೇ  ಈ ಅಜ್ಞಾನದ ಅಂಧಕಾರದಲ್ಲಿ ಮುಳುಗಿದ್ದ ಜನರು  ಹಾವು ಹಾಲನ್ನು ಕುಡಿಯುತ್ತದೆ ಎನ್ನುವ ಕಲ್ಪನೆಯ ಲೋಕದಲ್ಲಿ  ಕಲ್ಲಿನ ನಾಗಣ್ಣನಿಗೆ ಹಾಲನ್ನು ಎರೆಯುತ್ತಾರೆ . ಜೀವಂತ ಹಾವನ್ನು ಎಲ್ಲಿಯಾದರು ಕಂಡಲ್ಲಿ ಅದನ್ನು ಕೊಲ್ಲುತ್ತಾರೆ. ಎಂದು 12ನೇ ಶತಮಾನದಲ್ಲಿ ಜಗಜ್ಯೋತಿ ವಿಶ್ವಗುರು ಬಸವಣ್ಣನವರೆ ತಮ್ಮ ಸತ್ಯದ ವಚನಗಳ ಮೂಲಕ ಇಡೀ ಜಗತ್ತಿಗೆ ಸಾರಿದ್ದಾರೆ ಆದರೂ ನಮ್ಮ ಈ ಜನ ಈ ಮೂಢನಂಬಿಕೆಯನ್ನು ಇನ್ನು ಬಿಟ್ಟಿಲ್ಲ .

ಹಾವಿನ ಬಗ್ಗೆ ಜನರು ನಂಬಿರುವ ಕೆಲವು ಮೌಢ್ಯತೆಯ ವಿಷಯಗಳು 
🔸ಜಗತ್ತಿನ ದೊಡ್ಡ ಸುಳ್ಳೆ0ದರೆ.....ಜೋಡಿ ಇರುವ ಎರೆಡು ಹಾವುಗಳಲ್ಲಿ ಯಾವುದಾದರು ಒಂದು ಹಾವನ್ನು ನಾವು ಕೊಂದರೆ ಉಳಿದ ಇನ್ನೊಂದು ಹಾವು ಮತ್ತೆ ನಮ್ಮನ್ನು  ಹುಡುಕಿಕೊಂಡು ಬಂದು ನಮ್ಮನ್ನು ಕೊಲ್ಲುತ್ತದೆ ಎನ್ನುವುದು.
🔹ಮನುಷ್ಯರು ಅರಿವಿಲ್ಲದೆ ಒದಗಿಸುವ ಆಶ್ರಯ ಮತ್ತು ಆಹಾರವಿದ್ದರೆ ಹಾವು ಮನೆ ಅಥವಾ ಗಜಗಳಿಗೆ ಆಕರ್ಷಿತವಾಗಬಹುದು.
🔸ತೈಪಾನ ಮತ್ತು ಕಂದು ಹಾವುಗಳು ದಂಶಕಗಳನ್ನು ತಿನ್ನುತ್ತವೆ ಮತ್ತು ಅವು ಇಲಿಗಳು ಅಥವಾ ಇಲಿಗಳನ್ನು ಬೇಟೆಯಾಡಲು ಕೃಷಿವಲಯಗಳಿಗೆ ಅಥವಾ ತೋಟಗಳಿಗೆ ಆಕರ್ಷಿತವಾಗುತ್ತವೆ.
🔹( ತೈಪಾನ್ ಎಂದರೆ  ಒಂದು ರೀತಿಯ ತೈಪನ್ಸ್ ಎಲಾಪಿಡ್ ಕುಟುಂಬದಲ್ಲಿ ಆಕ್ಸಿರಾನಸ್ ಕುಲದ ಹಾವುಗಳು.  ಇವ್ವು  ಅತಿ ವೇಗವಾಗಿ ಚಲಿಸುವ ವಿಷಕಾರಿ ಹಾವುಗಳಾಗಿವೆ.)
🔸ನಿಮ್ಮ ನಾಗಣ್ಣನು ದೇವರಾಗಿದ್ದರೆ ಮುಂಗುಸಿ ಹಾವನ್ನು ಏಕೆ ಕೊಲ್ಲುತಿತ್ತು ???? ಎನ್ನುವ ಯೋಚನೆ ನಿಮ್ಮ ತಲೆಯಲ್ಲಿ ಇರಲಿ. ( ಹಾವು ಕೂಡ ಒಂದು ಜೀವ ಜಂತು ಅನ್ನೋದನ್ನು ಮರೆಯಬೇಡಿರಿ )

            ಅಬ್ಬಬ್ಬಾ..... ನಾಗಣ್ಣನ ಮೇಲೆ ಅದೆಂಥ ದೈವ ಭಕ್ತಿ . ನಿಮಗೆ ನಾಗಣ್ಣನ ಮೇಲೆ ಅಷ್ಟೊಂದು ಭಕ್ತಿ, ನಂಬಿಕೆ ದೈವ ರೂಪ ಎನ್ನುವ ಭಾವನೆ ಇದ್ದರೆ  ಜೀವಂತ ಹಾವನ್ನು ಹುಡುಕಿ ಇಲ್ಲ ಅಂದರೆ ಒಂದು ಹಾವನ್ನು ಖರೀದಿಸಿ ಅದಕ್ಕೆ ನಿಮ್ಮ ಕೈಯಿಂದ ಹಾಲನ್ನು ಕುಡಿಸಿ ಈ ಜನಗಳು ನನ್ನ  ಭಕ್ತರು ಎಂದು ಅದು ತಿಳಿದು ನೀವು ಕೊಟ್ಟ ಹಾಲನ್ನು ಕುಡಿಯುತ್ತದೆ. ಹಾಲನ್ನು ಕುಡಿಯದೆ ನಿಮಗೇನಾದರೂ ಕಚ್ಚಿದರೆ ನೀವು ತಿಳಿಯಿರಿ ನೀವಿನ್ನು ಇಂತಹ ಹೊಲಸು ಢಾOಬಿಕತೆಯ ಆಚಾರಣೆಯಲ್ಲಿ ಮುಳುಗಿದ್ದಿರಿ ಎಂದು.

         ಮನುಷ್ಯನು ಕೂಡಾ ಒಂದು ಪ್ರಾಣಿ ಆದರೇ ಇತರ ಪ್ರಾಣಿಗಳಿಗಿಂತ ಮನುಷ್ಯ ಪ್ರಾಣಿಯೂ ತನ್ನ ಮಾತುಗಳಿಂದ, ಯೋಚನೆ ಶಕ್ತಿಯಿಂದ, ಒಳ್ಳೇದು ಕೆಟ್ಟದ್ದನ್ನು ವಿಚಾರ ಮಾಡುವ ವಿಭಿನ್ನ ಆಲೋಚನೆಗಳಿಂದ ಅವನು ಬೇರೆ ಬೇರೆ ಪ್ರಾಣಿಗಳಿಗಿಂದ ತುಂಬಾ ವಿಭಿನ್ನನಾಗಿದ್ದಾನೆ. ಆದರೇ ನಮ್ಮ ಜನರುಗಳು ಯೋಚನೆ ಮಾಡುವ ವಿಚಾರವನ್ನು ಬಿಟ್ಟಿದ್ದಾರೆ ಹಿಂದೆ ಮೂಢನಂಬಿಕೆಯನ್ನು ಸಾರಿದ್ದ ಹಾದಿಯಲ್ಲೆ ಇನ್ನು ತುಂಬಾ ಜನರು ನಡೆಯುತ್ತಿದ್ದಾರೆ. ಯಾವ ವೆಕ್ತಿ ವೈಜ್ಞಾನಿಕವಾಗಿ ಆಲೋಚನೆ, ವಿಚಾರ,ಯಾವುದು ಸುಳ್ಳು ಯಾವುದು ಸತ್ಯವೆಂದು ನಿಖರವಾಗಿ ಚಿಂತನೆ ಮಾಡುವುದಿಲ್ಲವೊ ಆ ವೆಕ್ತಿ ಸತ್ತು ನಾರುತ್ತಿರುವ ಪ್ರಾಣಿ ಶವದಂತೆ.

  ಅಂತಾರಾಷ್ಟ್ರೀಯ ಸಾಕ್ಷರತಾ ದಿನ 2020: ಭಾರತದ ಸಾಕ್ಷರತೆ ಪ್ರಮಾಣವು 77. 7 ಪ್ರತೀಶತ ಆಗಿದ್ದು ಅತ್ಯುತ್ತಮವಾದ ಶಿಕ್ಷಣವನ್ನು ನಮ್ಮ ದೇಶದ ಜನರೆಲ್ಲಾ ಪಡೆದಿದ್ದರೆ ಆದರೇ ನೋವಿನ ವಿಷಯವೇನೆಂದರೆ  ಸತ್ಯದ ಬಗ್ಗೆ ವೈಜ್ಞಾನಿಕವಾಗಿ ಚಿಂತೆ ಮಾಡುವವರು  ತುಂಬಾ  ಅಂದರೆ ತುಂಬಾ  ಕಡಿಮೆಯಾಗಿ ಅಲ್ಲಿ ಅಲ್ಲಿ ನೂರಕ್ಕೆ ಒಬ್ಬರು ಇಬ್ಬರು ಸಿಗಬಹುದು ಅಷ್ಟೇ.....ನಾವು ಶಿಕ್ಷತಾರಾಗಿಯು ಮೂಢನಂಬಿಕೆಯನ್ನು ಪಾಲಿಸಿದರೆ ಹೇಗೆ...?? ನಾವು ಹೇಳುವುದು ಏನೆಂದರೆ ನಾವು ಮೊದಲು ಅಜ್ಞಾನವನ್ನು ಬಿಟ್ಟು ಅಜ್ಞಾನದಲ್ಲಿ ಹೊಕ್ಕಿರುವ ಅನಕ್ಷರಸ್ಥರಿಗೆ  ಸತ್ಯದ ನಿಖರತೆಯ ಮೌಲ್ಯವನ್ನು ತಿಳಿಸುವುದು ಒಬ್ಬ ಅಕ್ಷರಸ್ಥನ ಮಾನವೀಯ ಕರ್ತವ್ಯ.

ಮನೆಮಂದಿಯೆಲ್ಲಾ ಸಂತೋಷದಿಂದ ಇದ್ದು ಮನೆ ಮಕ್ಕಳು, ಹೆಣ್ಣುಮಕ್ಕಳೆಲ್ಲ ಹೊಸ ಉಡುಗೆ ತೊಡುಗೆಗಳನ್ನು ಧರಿಸಿ ಒಂದು ಸುಂದರವಾದ ವಾತಾವರಣವನ್ನು ಕಂಡುಕೊಳ್ಳಲು ಮತ್ತು ದಿನಾಲೂ ಸಾಮಾನ್ಯವಾದ ಆಹಾರವನ್ನು ಸೇವಿಸಿ ಸಾಕಾದ ಜೀವಕ್ಕೆ ಹಬ್ಬಗಳು ಎನ್ನುವ ಹೆಸರಿನಲ್ಲಿ ಮೃಷ್ಟಾನ್ನವನ್ನು ಊಟ ಮಾಡಲು ಹಬ್ಬಗಳನ್ನು ಮಾಡಬೇಕು ಹೊರತು ಹಬ್ಬಗಳಿಂದ ದೇವರು ಶಾಂತಿಯಾಗುತ್ತಾನೆ ಹಬ್ಬಗಳನ್ನು ಆಚರಣೆ ಮಾಡಿಲ್ಲ ಎಂದರೆ.. ದೇವರು ಶಾಪಹಾಕುತ್ತಾನೆ  ಎನ್ನುವ ಮೂಢನಂಬಿಕೆಗಳ ಯೋಚನೆಗಳನ್ನು ಮೊದಲು ಬಿಡಿ. ನಾವು ಯಾರಿಗೂ ಹಿಂಸೆ ಮಾಡಿಲ್ಲ ಅಂದರೆ, ಸಹಾಯ ಮಾಡುವ ಗುಣ ನಮ್ಮಲ್ಲಿದ್ದರೆ, ಬೇರೊಬ್ಬರಿಗೆ ಹಿತವನ್ನು ಬಯಸುವ ಮನಸ್ಸು ನಮ್ಮಲ್ಲಿದ್ದರೆ  ಇಂತಹ ಪುಣ್ಯದ ಕೆಲಸಗಳಲ್ಲಿ ದೇವರು ಇರುತ್ತಾನೆ ನಮ್ಮ ಇಂತಹ ಒಳ್ಳೆಯ ಕರ್ಮದಿಂದ ದೇವರು ನಮ್ಮಿಂದ ಸಂತೋಷವಾಗಿತ್ತಾನೆ ಹೊರತು  ದೇವರು ಎನ್ನುವ ಹೆಸರಿನ ಮೇಲೆ ನೀವು ಮಾಡುವ ಆ ಮೂಢನಂಬಿಕೆ ಗಳಿಂದ ಸೃಷ್ಟಿಕರ್ತನು ಯಾವತ್ತೂ ಒಲಿಯುವುದಿಲ್ಲ.

ಇಲ್ಲಿ ನಾನು ದೇವರು ಎಂದಿದ್ದು ಈ ಮಾನವ ಸೃಷ್ಟಿ ಮಾಡಿದ ಕಾಲ್ಪನಿಕ ಫೋಟೋಗಳಲ್ಲಿ ಇರುವ ಮುಕ್ಕೋಟಿ ದೇವರಿಗಲ್ಲ..... ಈ ಭೂಮಿ ಮೇಲೆ ನಮ್ಮನ್ನೆಲ್ಲ ಸೃಷ್ಟಿ ಮಾಡಿದ ಆ ಸೃಷ್ಟಿಕರ್ತನಿಗೆ  ಅವನಿಗೆ ರೂಪ ಇಲ್ಲ, ಬಣ್ಣ ಇಲ್ಲ, ನಮ್ಮನ್ನು ಬದುಕಲು ಬಿಟ್ಟ, ಬದುಕನ್ನು ಕೊಟ್ಟ ಆಹಾರ, ಗಾಳಿ, ನೀರು ಸೂರ್ಯ, ಭೂಮಿ ಇವುಗಳು ನಿಜವಾದ ದೇವರುಗಳು.

"ಜಾತಿ ಧರ್ಮ ಯಾವುದಾದರೇನಯ್ಯ ಸತ್ಯವೇ ಧರ್ಮದ ಮೂಲವಾಗಬೇಕಯ್ಯ "

 ✍️... ಅಜೇಯ್. ಪಿ. ಎಸ್ - ಯುವಬರಹಗಾರ ಬೀದರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...