ಕಾಲದ ಹರಿವು
ಯಾರಿಗಾಗಿಯೂ ನಿಲ್ಲದು ಕಾಲದ ಹರಿವು
ನಿಗೂಢ ಅದರ ಚಲನಾ ಪಥವು
ಬೋರ್ಗರೆವ ಕ್ಷಣಗಳ ಚಲನವಲನವು
ಮುನ್ನುಗ್ಗುವದು ಕಾಣದಂತೆ ಪ್ರತಿಕ್ಷಣವು......!!
ಅಗೋಚರ ಕಾಲದ ಪರಿಪಾಠವು
ಅದಮ್ಯ ಅಸರ ರಭಸದ ಹರಿವು
ಅಸಾಧ್ಯ ಸಮಯದ ಪ್ರತಿ ಮಿಡಿತವು
ಅಮೋಘ ಖುಷಿಯಾದರೆ ನೆನೆವ ನಿತ್ಯವು.....!!
ಸಾಗಿದವರಿಲ್ಲ ಕಾಲದ ಕಾಲವ ಮೀರಿದವು
ಗೋಚರಕ್ಕಿಲ್ಲ ಸವೆಸಿದ ಹಿಂದಿನ ಕಾಲವು
ಕ್ಷಣಕ್ಷಣವು ಹೊಸತನದ ಮುಂಜಾವು
ಮುಂದಿನ ಅಡಿಗಳಲ್ಲಿ ನಾವು ನಗುವ ಹೂಬಣವು....!!
ಕೂರದಿರು ಕೈಕಟ್ಟಿ ಕಾಣದೆ ಬದುಕಿನ ತಿರುವು
ನೆಗೆದು ಸಾಗುವ ಹಿಡಿದು ಇಂದಿನ ಕ್ಷಣಗಳ ನಾವು
ಮುಗ್ಗರಿಸದಿರಲಿ ಕಾಲದ ಹರಿವಿನ ಪಥಗಳ ಫಲವು
ಮುಂದೆ ಕಾದಿವೆ ಕಣ್ಣು ನೇವರಿಸುವ ವಿಸ್ಮಯಗಳ ಹರಿವು....!!
- ಅಶ್ವಿನಿ ಭೀ ಬರಗಾಲಿ
ವೀವೆಕಾನಂದ ನಗರ
ಗೋಕಾಕ -591307.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ