"ಅವನಲ್ಲಿನ ಹೆಣ್ಣು"
"ಬಯಸಿ ಸಿಗುವ ಪ್ರೀತಿಗಿಂತ
ಹರಸಿ ಬರುವ ಪ್ರೀತಿ ಹೆಚ್ಚು"...
" ಮನದ ಬಯಕೆಗೆ ಹಿತವ ಹೆರಗುವ
ಮನ ಮನಸ್ಸುಗಳು ಹೆಚ್ಚು"...
" ಸಂಕೋಲೆ ಸಂಕೋಲೆ ಸಂಕೋಲೆ
ಈ ಸಂಬಂಧ ಸಂಕೋಲೆ"....
"ತನ್ನ ತನದ ಹುಡುಕಾಟದಲ್ಲಿ
ತೊರೆದಿದೆ ತನ್ನವರೆಲ್ಲವಾ"....
"ಒಮ್ಮೆ ತಿರುಗಿ ಹಿಂದೆ ನೋಡಿದೆ
ತಾನು ಹುಟ್ಟಿ ಬೆಳೆದ ದೇಗುಲವಾ"....
"ಎನ್ನ ಒಪ್ಪದ ಮನೆ ಮಂದಿಯೊಳು
ನಾನೆಂಗ ಕೂತು ಬೆರೆಯಾಲಿ"....
"ಹಕ್ಕಿ ತನ್ನ ಗೂಡು ತೊರೆದು
ರೆಕ್ಕೆ ಬಿಚ್ಚಿ ಹಾರ ಬಯಸಿದೆ"...
"ಸೂರು ಇಲ್ಲದ ಬದುಕಿಗೊಂದು
ಆಸರೆಯ ಹರಸಿ ಹೊರಟಿದೆ"...
"ಕಂಬನಿಯ ಹೊರೆಸುವ ಕೈಗಳ
ಆಲಿಂಗನಕ್ಕಾಗಿ ಮಿಡಿದಿದೆ"...
"ತನ್ನವರೆಲ್ಲಾ ಇದ್ದು ಇಲ್ಲದಾಂಗ
ಅನಾತರಂತೆ ಇಂದು ನಾನಾದೆನಲ್ಲಾ"....
"ಏಕಾಂಗಿಯಾಗಿ ನಾನಿಂದು
ಬೀದಿಯಲ್ಲಿ ಬಂದು ಬಿದ್ದೆನಲ್ಲಾ"...
"ಕಣ್ಣಾಡಿಸಿ ಅತ್ತ ಹಿತ್ತ ನೋಡುತ
ತವಕದಿ ಒಬ್ಬೊಂಟಿಯಾಗಿ ನಿಂತಿದೆ"...
"ನಿರೀಕ್ಷೆಯ ಕನಸಹೊತ್ತು ಮುಂದೆ ಸಾಗಿದೆ".....
" ಪುಂಡ ಪೋಕರ ಕಾಮದಾಸೆಗೆ
ಎನ್ನ ಕನಸ ಕೋಟೆ ಚಿದ್ರವಾಗಿದೆ"...
"ಅವರ ಕ್ಷಣಿಕ ಸುಕದ ಆಸೆಗೆ
ಬಂದು ಎರಗಿದರು ನಾಲ್ವರು"...
"ಎನ್ನ ಭಾವನೆಯ ಕಟ್ಟೆ ಯೊಡೆದು
ಕಣ್ಣೀರಿನ ಹೊಳೆ ಹರಿದು"......
"ಒಪ್ಪಿಕೊಂಡು ಅಪ್ಪಿಕೊಳ್ಳುವ
ಮನಸೊಂದು ಬೇಕಿದೆ"...
"ಬಾಳ ಬಂಡಿಯಲ್ಲಿ ಪ್ರೀತಿ ತೋರುವ
ಹೃದಯವೊಂದು ಬೇಕಿದೆ "...
"ಜೀವನದಲ್ಲಿ ಕೈ ಹಿಡಿದು
ಮುನ್ನೆಡೆಸುವ ಸಾಂಗತ್ಯವ ಬಯಸಿದೆ"........
"ಭಾನು ಭುವಿ ಎಲ್ಲಾ ನೋಡುತ
ಹಕ್ಕಿ ತಾನು ರೆಕ್ಕೆ ಬಿಚ್ಚಿ ಹಾರ ಬಯಸಿದೆ"...
"ಮುಗಿಲೆತ್ತರಕ್ಕೆ ಬಾನೆತ್ತರಕ್ಕೆ"....
_✍️ಕಾರಭ.
ಕಾರಭ,
S/O ರಂಗಸ್ವಾಮಿ,
ಎಂಜಿನಿಯರಿಂಗ್ ವಿದ್ಯಾರ್ಥಿ
ಹಾಸನ (ಜಿಲ್ಲೆ),
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
🥰
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏🏻🙏🏻🙏🏻🙏🏻🥰
ಅಳಿಸಿUltimate Bro keep it up
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏🏻🙏🏻🙏🏻🙏🏻🙏🏻🙏🏻
ಅಳಿಸಿಧನ್ಯವಾದಗಳು 🙏🏻🙏🏻🙏🏻🙏🏻
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏🏻🙏🏻🙏🏻🙏🏻🥰
ಪ್ರತ್ಯುತ್ತರಅಳಿಸಿArthapurnavagide.
ಪ್ರತ್ಯುತ್ತರಅಳಿಸಿSuper bro
ಪ್ರತ್ಯುತ್ತರಅಳಿಸಿ