ಶನಿವಾರ, ಆಗಸ್ಟ್ 14, 2021

ಸ್ವಾತಂತ್ರ್ಯ ದಿನಾಚರಣೆ (ಕವಿತೆ) - ಶ್ರೀ ಪುರುಷೋತ್ತಮ ಪೆಮ್ನಳ್ಳಿ, ಪಾವಗಡ.

ಸ್ವಾತಂತ್ರ್ಯ ದಿನಾಚರಣೆ

ಭಾರತ ಮಾತೆಯ ಮಡಿಲಲಿ ನೆಲಸಿಹೆವು
ತಾಯ ಪೂಜಿಸುವ ಮಕ್ಕಳು ನಾವಾಗಿಹೆವು
ವಿಶಾಲತೆಯ ಕೀರ್ತಿ ಹೊತ್ತ ದೇಶ ನಮ್ಮದು
ಹಿಂಸೆ ಮೋಸ ದುರ್ನಡತೆ ಇಲ್ಲಿ ಸಲ್ಲದು...

ಹಿಮಾಲಯ‌ ಕಾಂಚನಗಂಗಾದ ಭವ್ಯತೆಯ
ಸಾಗರ ಚುಂಬನದ ಕನ್ಯಾಕುಮಾರಿಯ
ಹೊಂದಿಯ ಹೆಮ್ಮೆಯ ಭಾರತ ದೇಶ ನಮ್ಮದು
ಸೋದರತೆ ಕರುಣೆ ಮಮತೆ ಇಲ್ಲಿ ಇರುವುದು...

ಗಂಗಾ ತುಂಗಾ ಸಿಂಧೂ ಯಮುನಾ ಬ್ರಹ್ಮಪುತ್ರ
ನದಿಯ ವರಪ್ರಸಾದದ ತವರು ನೆಲವಿದು
ಗಾಂದೀಜಿ ಸುಭಾಷ್ ಅಂಬೇಡ್ಕರ ಆಜಾದರ
ಆದರ್ಶಗಳ ಬಿತ್ತಿ ಹೊತ್ತ ಭರತ ಭೂಮಿ ನಮ್ಮದು...

ರಾಮಾಯಣ ಮಹಾಭಾರತ ಕಾವ್ಯ ರಚನೆಯ
ಮಹಾನೀಯರ ಹೊತ್ತಿರುವಳು  ಜನನಿಯು
ಕೆಂಪುಕೋಟೆಯಲ್ಲಿ  ರಾಷ್ಟ್ರಧ್ವಜದ ನೋಟವು
ಕಲಿಸಿದೆ ಯುವಶಕ್ತಿಗೆ ದೇಶಪ್ರೇಮ ಪಾಠವು...

ಮೌರ್ಯ ಮೊಗಲ ರಜಪೂತ ಉತ್ತರ ಭಾಗದಿ
ಕದಂಬ ಚೋಳ ವಿಜಯನಗರ ದಕ್ಷಿಣ ಭಾಗದಿ
ಆಳ್ವಿಕೆಗಳ ಸೊಬಗು ಉಳಿದಿಹುದು ಇತಿಹಾಸದಿ
ಕಾಣುವುದು ವಿಜಯ ತಿಲಕ ಮಾತೆಯ ಮೊಗದಿ...

ದೇಶಸೇವೆಗೆ ಪ್ರಾಣತೆತ್ತಿ‌ಹರು ಹಲವು ವೀರರು
ಸಂಸ್ಕೃತಿಯ ಆಚರಣೆಯಲಿ ನಮಗ್ಯಾರು ಸಮಾನರು
ಸ್ವಾತಂತ್ರ್ಯದ ವಿಜಯ ತಿಲಕ ಧರಿಸಿಹಳು ಮಾತೆಯು
ಹಲವು ಭಾಷೆ ಮಕ್ಕಳ ಸಲುಹಿದ ಪೂಜ್ಯ ಮಾತೆಯು...

ಬೆಳಗಲಿ ಭಾರತಾಂಬೆಯ ಕೀರ್ತಿ ಪತಾಕೆಯು
ಮನದಾಳದಿ ನೆಲಸಿರಲಿ ಎಲ್ಲರಲೂ ದೇಶಭಕ್ತಿಯು..

- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ
ದೂ ೯೬೩೨೨೯೬೮೦೯.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...