ಬೆಳಕು ತಂದ ದೇವತೆ (ನ್ಯಾನೋ ಕಥೆ)
ನಯನ ಕಾಲೇಜಿನ ದಿನಗಳಿಂದಲೂ ಸಮಾಜ
ಸೇವೆಯಲ್ಲಿ ಆಸಕ್ತಿ ಹೊಂದಿದ ಮಧ್ಯಮ ವರ್ಗ
ಕುಟುಂಬದ ಹುಡುಗಿ.ಅನಾಥ ಮಕ್ಕಳಿಗೆ ಆಕೆ
ಆಗಾಗ ಬಟ್ಟೆ ತಿನಿಸು ಕೊಟ್ಟು ಬರುವುದು,
ಅವರ ಜೊತೆ ಆಟ ಪಾಠ ಅವಳಿಗಿಷ್ಟ.ಆ
ಅನಾಥಾಲಯದಲ್ಲಿ ಒಂದು ಅಂಧ ಮಗು
ಇತ್ತೀಚೆಗೆ ಬಂದು ಸೇರಿತ್ತು.ಆ ಮಗುವೆಂದರೆ
ನಯನಳಿಗೆ ತುಂಬಾ ಮುದ್ದು.ಹೇಗಾದರೂ
ಅದಕ್ಕೆ ದೃಷ್ಟಿ ಬರುವಂತೆ ಮಾಡಬೇಕೆಂದು
ಬಯಸಿದಳು.ನೇತ್ರತಜ್ಞರ ಭೇಟಿ ಮಾಡಿದ್ದಳು.
ಇಂದು ನಯನಳ ಹುಟ್ಟುಹಬ್ಬ. ದೇವಾಲಯಕ್ಕೆ
ಹೋಗಿ,ಅಲ್ಲಿಂದಲೇ ಅನಾಥಾಲಯಕ್ಕೆ ಸಿಹಿ
ಹಂಚಲು ಆಟೋದಲ್ಲಿ ತೆರಳಿದಳು.ದುರಾದೃಷ್ಟ
ವಶಾತ್ ಎದುರಿಗೆ ಬರುತ್ತಿದ್ದ ಲಾರಿಯೊಂದು
ನಿಯಂತ್ರಣ ತಪ್ಪಿ ಆಟೋಕ್ಕೆ ಗುದ್ದಿ ನಯನ
ಮಾರಣಾಂತಿಕ ಗಾಯಗಳಿಂದ ಆಸ್ಪತ್ರೆ ಸೇರಿದಳು.
ಇತ್ತ ಅನಾಥಾಲಯದ ಮಗುವಿಗೆ ನೇತ್ರತಜ್ಞರು
ಕರೆಸಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿ ದೃಷ್ಟಿ
ನೀಡಿದರು.ಅಂಧ ಮಗುವಿನ ದೃಷ್ಟಿಗೆ ಬೆಳಕು
ತಂದ ದೇವತೆ ಬೇರಾರೂ ಅಲ್ಲ. ಅಪಘಾತದಿಂದ
ಮೃತಳಾದ ನಯನ.ಸಾಯುವ ಕೊನೆಗಳಿಗೆಯಲ್ಲಿ
ತನ್ನಾಸೆಯನ್ನು ವೈದ್ಯರಿಗೆ ತಿಳಿಸಿದ್ದಳು.
- ಭವ್ಯ ಟಿ.ಎಸ್.
ಶಿಕ್ಷಕರು.ಹೊಸನಗರ
ಶಿವಮೊಗ್ಗ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ