ಗುರುವಾರ, ಆಗಸ್ಟ್ 12, 2021

ಒಲವ ಧಾರೆ (ಕವಿತೆ) ಶ್ರೀಮತಿ ಸೂಗಮ್ಮ ಡಿ ಪಾಟೀಲ್ ಉತ್ನಾಳ್.

ಒಲವಧಾರೆ

ಊರಮುಂದಿನ ಅಗಸಿಯಾಗ್ ದಾರಿ ಕಾಯ್ಕೊಂಡು
ಕುಂತಿದ್ನಿ ಒಮ್ಮೆಯಾದ್ರು ನನ್ನ ತಿರುಗಿ ನೋಡ್ಕೊಂಡು
ನೀ ಹೋಗಬಾರದೇ ಗೆಳತೀ ನನ್ನ ಕರಕೊಂಡು
ಸಿಂಗಾರ ಮಾಡ್ಕೊಂಡ್ ತಿರಗತಿದ್ದಿ, ವೈಯಾರ ಮಾಡ್ಕೊಂಡು
ಹೋಗತಿದ್ದಿ ಮಲ್ಲಿಗಿ ಮೊಗ್ಗಿನ ಮಾಲಿ ಕಟಗೊಂಡು!!


ದಾರಿಯಾಗ ಸುಮ್ನ್  ಹೋಗುತಿದ್ದಿ ಕಣ್ಣ ತಿರಿಗಿಸದೇ
ಎದೆಯ ತುಂಬಾ ನಿನ್ನಾ ಪ್ರತಿಬಿಂಬವೇ ತುಂಬಿಕೊಂಡಿದೆ
ನನ್ನ ಮೊದಲ ಪ್ರೀತಿ ನೀನು ಕಣ್ಣಮುಚ್ಚಿ ಒಪ್ಪಬಾರದೇ
ಬೀದಿ ನೋಡ್ಕೊಂಡು ಕುಂತಿನಿ ಉತ್ತರ ನೀಡಬಾರದೇ
ಬಿಂಕ ಬಿಗುಮಾನವ ಬಿಟ್ಟು ಸಮ್ಮತಿ ಕೊಡಬಾರದೇ!!


ಕೇರಿ ಪೀರಿ ಸುತ್ತುಕೊಂಡು, ಸಂತ್ಯಾನ ಸೀರೆ ತೆಕ್ಕೊಂಡು
ಧಾರೆ ಸೀರೆ ನೀಡಲೆಂದು ಅವ್ವ ಅಪ್ಪನ ಕರಕೊಂಡು
ಹೊಂಟಿವ್ನಿ ಕೇರಿಗೆಲ್ಲ ಊಟ ಹಾಕಿಸ್ತೀನಿ ನಿನ್ನಾ ಕಟಗೊಂಡು
ತವರಿನಿಂದ ತೇರಿನ್ಯಾಗ ರಾಣಿಯಂಗ ಹೊತ್ತುಕೊಂಡು
ನಾಡಿಗೆಲ್ಲ ನನ್ನಾ ಪ್ರೀತಿ ಹೆಂಡ್ತಿ ಅಂತಾ ಹೇಳಿಕೊಂಡು!!


ಸ್ವರ್ಗದಾಗ ಸ್ವಪ್ನ ತಾಣ ನೋಡಲೆರಡು ಕಂಗಳು ಸಾಲದು
ವಜ್ರದೊಡವೆ ಮುತ್ತಿನ ಮೂಗುತಿ ನಿಂಗೆ ನೀಡಬೇಕೆಂದು
ಸಾಲ ಮಾಡಿ ತಂದು ಇಟ್ಟಿವ್ನಿ ಪಟ್ಟದರಸಿಗೆ ಕೊಡಲೆಂದು
ಒಲ್ಲ  ಎಂದು ಒದೆಯಬೇಡ ಕಲ್ಲಮನಸಿನಿಂದ  ನನ್ನೆಂದು
ಕಾಡಿಸ್ಬೇಡ ಪೀಡಿಸ್ಬೇಡ ಮೆಚ್ಚಿ ಮದುವೆಯಾಗೇ ನನ್ನಿಂದು!!
 - ಶ್ರೀಮತಿ ಸೂಗಮ್ಮ ಡಿ ಪಾಟೀಲ್
ಉತ್ನಾಳ್ (ಬಿಜಾಪುರ ಜಿಲ್ಲೆ ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...