ಭಾನುವಾರ, ಜನವರಿ 30, 2022

ಕೆಚ್ಚೆದೆಯ ಕಲಿ (ಕವಿತೆ) - ಮೊಹಮ್ಮದ್ ಅಜರುದ್ದೀನ್

ಭಾರತಾಂಬೆಯ ಹೆಮ್ಮೆಯ ಸುಪುತ್ರನೇ
ದೇಶದ ಕೆಚ್ಚೆದೆಯ ಕಲಿಯೇ
ಯುವಜನರ ಮುತ್ತಿನ ಮಾಣಿಕ್ಯನೇ
ಭಾರತದ ಚೇತನ ಶಕ್ತಿಯೇ ||

ನೀನು ಯಾರಿಗೂ ಅಂಜದ ವೀರ
ಸ್ವಾತಂತ್ರ್ಯ ಪಡೆಯಲು ಹೋರಾಡಿದ ಧೀರ
ಯೌವ್ವನದಲ್ಲಿ ನೀನು ಕಂಡೆ ನೂರಾರು ಕನಸು  
ಯುವಕರ ಪಾಲಿಗೆ ಈಗ ಕನಸೇ ನನಸು  ||
ಅಪ್ರತಿಮ ದೇಶಭಕ್ತನೇ
ಭಾರತಾಂಬೆಯ ವೀರ ಸೇನಾನಿಯೇ
ಬ್ರಿಟೀಷರ ಪಾಲಿಗೆ ಶಕ್ತಿಯ ಚೆಂಡೇ
ಸ್ವಾತಂತ್ರ್ಯ ಹೋರಾಟದ ಹೆಮ್ಮೆಯ ಗಂಡೇ ||

ಕೋಟ್ಯಾಂತರ ಜನರಿಗೆ ಸ್ಪೂರ್ತಿಯೂ
ದೇಶದ ಅಪ್ರತಿಮ ದೇಶಭಕ್ತನೂ
ಇತಿಹಾಸ ಪುಟದಲ್ಲಿ ಉಳಿದಿರುವ ಶೂರನೂ
ನಿನ್ನ ಸಾವು ಇಂದಿಗೂ ನಿಗೂಢವೂ ||

ನೇತಾಜಿ ಎಂಬ  ಹೆಮ್ಮೆ ಅಮರ  
ಈ ನಾಡಲ್ಲಿ ನೀನು ಸಮರ
ನಮ್ಮ ನಾಡಿನ ಕೆಚ್ಚೆದೆ ಹುಲಿಯೇ
ನಿನಗೆ ನನ್ನ ಕೋಟಿ ವಂದನೆ ||  

- ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ
ಅಕ್ಕಿಹೆಬ್ಬಾಳು ಗ್ರಾಮ
ಕೃಷ್ಣರಾಜಪೇಟೆ ತಾಲ್ಲೂಕು
ಮಂಡ್ಯ ಜಿಲ್ಲೆ-571605


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...