ಭಾನುವಾರ, ಜನವರಿ 30, 2022

ಬಾಡದ ಹೂವು- ಆಸೆ ಹಲವು (ಕವಿತೆ) - ಶಾಂತಾರಾಮ ಶಿರಸಿ

ಕಣ್ತೆರೆದು ನೋಡಿದರೆ ಪ್ರಪಂಚ ಸುಂದರವಾಗಿ ಸೃಷ್ಚಿಸಿಹನು ಆ ದೇವರು, 
ಈ ಸುಂದರ ಪ್ರಪಂಚದಲ್ಲಿ  ಎಲ್ಲರೂ ಬದುಕುವ ಆಸೆಯನು ಹೊಂದಿ ಉಸಿರಾಡುತಿಹರು, 
ಅದರಲ್ಲಿ ಅವೆಷ್ಟೋ ಹೊಸದಾಗಿ ಮೊಳಕೆಯೊಡೆದು ಬದುಕಿನತ್ತ ಪುಟ್ಟ ಹೆಜ್ಜೆ ಹಾಕುತ್ತಿರುವ ಚಿಗುರು, 
ಚಿಗುರಿಗೂ ಆಸೆಯುಂಟು ಹಲವಾರು, 
ಆ ಚಿಗುರು ಬೆಳೆದು ಹೂವಾಗಿ ಅರಳಲು ನೀರೆರೆದು ಪೋಷಿಸುವವರ್ಯಾರು... 

ಬದುಕಿನಲ್ಲಿ ಅರಳಬೇಕಾಗಿರುವ ಮೊಗ್ಗಿವಳು, 
ಅರಳಿದರೂ ಎಂದೂ ಬಾಡದವಳು, 
ಎಲ್ಲರಂತೆ ಬದುಕಿ ಬಾಳಬೇಕಾಗಿರುವವಳು, 
ಅರಳಿ ತನ್ನ  ಘಮವನ್ನು ಲೋಕಕೆ ಪಸರಿಸುವವಳು...

ಎಲ್ಲರಂತೆ ಅವಳಿಗೂ ಇದೆ ಭರವಸೆಯ  ಬಾಳು, 
ಒಲ್ಲದ ಮನಸ್ಸಿನವಳೆಂದು ನಿಂದನೆಗೆ ಒಳಗಾಗುವವಳು,
ನಿಂದಿಸಿ ಮನವೊಲ್ಲೆಯೆಂದರೂ ಹೃದಯದ ಮಾತು ಕೇಳುವವಳು,
ಕಷ್ಟದಲಿ ನೆರವಾಗುವವಳು-ಬದುಕಿನಲಿ ಏಳು-ಬೀಳನು ಕಂಡವಳು, 
ತನ್ನ ನೋವನು ತನ್ನಲ್ಲಿಯೇ ಅರಗಿಸಿಕೊಂಡವಳು, 
ಬದುಕಿಗೆ ಭರವಸೆಯ ತುಂಬಿದವಳು.. 

ಕಿರುನಗೆಯ ಹೊರಸೂಸಿ- ಸವಿಜೇನ ಸಿಹಿಯ ಮಧುರ ಮಾತುಗಳನಾಡುವವಳು, 
ಹಲವರ ಮನವ ಗೆದ್ದವಳು-ಹೃದಯದರಮನೆಯಲ್ಲಿ ನೆಲೆಸಿರಿವವಳು, 
ಭಾವನೆಗಳೊಂದಿಗೆ ಪ್ರೀತಿಯ ಸಂಬಂಧಗಳ ಬೆಸೆಯುವವಳು... 

ನಂಬಿದವರ ಬದುಕಿಗೆ ಆಸರೆಯಾಗಿರುವವಳು, 
ಕೈಯ್ಯಾರೆ ಕಣ್ಣ ಕಂಬನಿ ಒರೆಸಿ ತುತ್ತು ತಿನಿಸುವವಳು,
ಎಂದೂ ಬಾಡದ ಹೂ ಯಾರಿವಳು-ಯಾರಿವಳು...
- ಶಾಂತಾರಾಮ ಶಿರಸಿ,
ಉತ್ತರ ಕನ್ನಡ
8762110543
7676106237



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...