ಶನಿವಾರ, ಜನವರಿ 1, 2022

ನೆನಪಿಲ್ಲೇನೋ ಮಗ (ಕವಿತೆ) - ಸಾಬಣ್ಣ.ಎಚ್.ನಂದಿಹಳ್ಳಿ ಜೆ.

ಒಂಬತ್ತು ತಿಂಗ್ಳು ಹೊತ್ತು
ಹೆತ್ತು ಮುದ್ದು ಮಾಡಿದ್ದು 
ನೆನಪಿಲ್ಲೇನೋ ಮಗ 

ಅಂಗಳದಾಗ ಬಿದ್ದು ಪೆಟ್ಟು
ಮಾಡ್ಕೊಂಡು ಅಳುವಾಗ 
ಸೆರಗ ತೆಗ್ದು ಕಂಬನಿ ಒರಿಸಿದ್ದು 
ನೆನಪಿಲ್ಲೇನೋ ಮಗ

ಅಪ್ಪ ಸಿಟ್ಟೀಲಿ ಜಗರ್ಶ್ಯಾನಂತ
ಓಡೋಡ್ಬಂದು ನನ್ತೆಕ್ಕಿಗ್ಬಿದ್ದಿದ್ದು
ನೆನಪಿಲ್ಲೇನೋ ಮಗ

ಬಾಜುಮನಿ ಹುಡುಗ ಹೊಡ್ದಾನಂತ
ನನ್ನ ಅವರವ್ವನ ಜೊತೆ ಜಗಳ
ಮಾಡುಣಂತ ನೀ ಹಠ ಹಿಡ್ದಿದ್ದು 
ನೆನಪಿಲ್ಲೇನೋ ಮಗ

ಬಾಂಬೆ ಮಿಠಾಯಿ ಬಂದ್ರೆ ಸಾಕು
ಕೊಡ್ಸು ಕೊಡ್ಸು ಅಂತ ಪೀಡ್ಸ್ತಿದ್ದಿದ್ದು
ನೆನಪಿಲ್ಲೇನೋ ಮಗ

ಶಾಪುರ್-ಸುರ್ಪುರ್ ಸಂತಿಗಂದ್ರ
ನಾನ್ಬರ್ತಿನಿ ನಾನ್ಬರ್ತೀನಿ ಅಂತ
ಒಂದೇ ಸಮ ಕುಣ್ದು ಕುಪ್ಳ್ಸ್ತಿದ್ದಿದ್ದು
ನೆನಪಿಲ್ಲೇನೋ ಮಗ

ಎಲ್ರೂತರ ನಿನ್ಗೂ ಮೋಟ್ರುಸೈಕಲ್
ಬೇಕಂತ್ಹಟಮಾಡ್ದಾಗ ತೆಗ್ದ್ಕೊಟ್ಟಿದ್ದು
ನೆನಪಿಲ್ಲೇನೋ ಮಗ

ಹೊಲ್ದಾಗ ನೀ ಕೆಲ್ಸಾ ಮಾಡ್ಲಿಲ್ಲಂತ
ನಿಮ್ಮಪ್ಪ ಮನಿಯಿಂದ ಹೊರ್ಗಾಕ್ದಾಗ
ನಿನ್ನ್ಹುಡ್ಕಿ ಮನಿಗಿ ಕರೆತಂದಿದ್ದು
ನೆನಪಿಲ್ಲೇನೋ ಮಗ

ಮುತ್ತು ಕೊಡೋ ಹೆಂಡ್ತಿಲ್ದಿರುವಾಗ
ನೀನಾ ನನ್ನ ದೇವ್ರು ಅಂತಿದ್ದಿದ್ದು
ನೆನಪಿಲ್ಲೇನೋ ಮಗ

ಹೆಂಡ್ತಿ ಮಾತ್ಕೇಳಿ ನನ್ಬಯ್ಯುವಾಗ
ನಿನ್ಗಾಗಿ ನಾ ಬಾಜು ಮನ್ಯಾಕಿನ
ಜೊತಿ ಜಗಳ ಮಾಡಿದ್ದಿದ್ದು
ನೆನಪಿಲ್ಲೇನೋ ಮಗ
- ಸಾಬಣ್ಣ.ಎಚ್.ನಂದಿಹಳ್ಳಿ ಜೆ
ತಾ||ಶಹಾಪುರ ಜಿಲ್ಲಾ||ಯಾದಗಿರಿ
ಮೊಬೈಲ್ ನಂ-7348983463.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಮಗಾಗಿ ದುಡಿದ ನಾಯಕ ನಮ್ಮ ಜನಕ...

ನಮಗಾಗಿ ದುಡಿದ ನಾಯಕ ನಮ್ಮ ಜನಕ. ಅಪ್ಪ ಎಂದರೆ ಬೆಳಕು. ಅಪ್ಪನಿಂದಲೇ ಈ ಬದುಕು. ಅಪ್ಪನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅಪ್ಪ ಅಮ್ಮನ ಪ್ರೀತಿ ಅತ್ಯಮೂಲ್ಯವ...