ಹೊಸ ವರುಷಕ ಬಲಗಾಲ ಇಟ್ಟೇನಿ.. !!
ಹೊಸ ವರುಷಕ ಬಲಗಾಲ ಇಟ್ಟೇನಿ....
ನಿನ್ನೆ ದಿವಸವ ನಾ ಬೀಟ್ಟು ಬಂದೇನಿ....
ಕಹಿ ನೆನಪುಗಳ ನಿನ್ನೇನೆ ಮರೆತೇನಿ...
ಸಿಹಿ ಕನಸುಗಳ ಬೊಗಸೆಯಲ್ಲಿ ತುಂಬಿ ನಾ ಹೊಸ ವರುಷಕ ಬಲಗಾಲ ಇಟ್ಟೇನಿ.... !! ಬಲಗಾಲ ಇಟ್ಟೇನಿ.... !!
ಕಷ್ಟಗಳು ಬಂದರೆ ಎಲ್ಲರಿಗೂ ಬರತಾವ...
ಕನಸುಗಳು ಕಂಡರೆ ಎಲ್ಲರಿಗೂ ಕಾಣತಾವ....
ಬಂದ ಕಷ್ಟಗಳ ಎದುರಿಸಲೆಂದೇ ಮುನ್ನುಗ್ಗೆನಿ....
ಕಂಡ ಕನಸುಗಳ ನನಸಾಗಿಸುವ ಹಠ ಹೊತ್ತು ಹೊಸ ವರುಷಕ ಬಲಗಾಲ ಇಟ್ಟೇನಿ.... !! ಬಲಗಾಲ ಇಟ್ಟೇನಿ.... !!
ಹೊಸ ವರುಷವು ಹೊಸ ತನವ ತಂದೈತಿ...
ಕಳೆದ ದಿನಗಳು ಮರೆಯಲಾಗದ ಅನುಭವಗಳ ಕೋಟ್ಟೈತಿ...
ಹೊಸ ತನದಿ ಹೊಸ ಬಾಳ ಜೀವಿಸಲೆಂದು ಹೊರಟೇನಿ...
ಕಲಿತ ಅನುಭವಗಳ ಹಾದಿಯಲ್ಲಿ ಸಾಗಲೆಂದು ಹೊಸ ವರುಷಕ ಬಲಗಾಲ ಇಟ್ಟೇನಿ..... !! ಬಲಗಾಲ ಇಟ್ಟೇನಿ.... !!
ಹೊಸ ವರುಷ ಬಂದೈತಿ ಅಂತ ಎಲ್ಲ ಹರುಷದಿಂದ ಕುಣಿಲಾಕ ಹತ್ತಾರ...
ವರುಷ ಮುಗಿಯಕ ಹತೈತಿ ಅಂತ ಗೆಳೆಯರೊಂದಿಗೆ ಮೋಜು ಮಸ್ತಿ ಮಾಡಾಕ ಹತ್ತಾರ....
ಅದೇ ಹರುಷವು ಪ್ರತಿದಿನವೂ ಇರಲೆಂದು ದೇವರಲ್ಲಿ ಬೇಡುತಿನಿ....
ನಾನ್ ಸಹ ಗೆಳೆಯರೊಂದಿಗೆ ಮೋಜು ಮಸ್ತಿ ಮಾಡಿ ಹೊಸ ವರುಷಕ ಬಲಗಾಲ ಇಟ್ಟೇನಿ.... !! ಬಲಗಾಲ ಇಟ್ಟೇನಿ... !!
- ಮಣಿಕಂಠ ಗೌಡ
ಶಿರಸಿ (ಉ. ಕ )
9482079553
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ