ಶನಿವಾರ, ಜನವರಿ 8, 2022

ಚೆಲುವೆ (ಜಾನಪದ ಶೈಲಿ ಗೀತೆ) - ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ

ಕೆರೆ ದಂಡೆ ಮೇಲೆ ನಿಂತುಕೊಂಡು
ಮಲ್ಲಿಗೆ ದಂಡೆ ಹೂವ ಮುಡಕೊಂಡು
ಶಶಿಯಂತ ಮೊರೆಯವಳೇ ನೀನ್ಯಾರೆ
ಮುದ್ದು ಚೆಲುವೆ ನೀನ್ಯಾರೆ ನೀನ್ಯಾರೆ//೧//

ಕಿಲಕಿಲನೆ ನಗುತ ನೆಲವನ್ನೇ ಕೆರೆಯುತ
ಹೃದಯವ ಕಲುಕುವ ಹೆಣ್ಣೇ,ನೀನ್ಯಾರೆ
ತುಂಬು ಮನದ ಚೆಲುವೆ ನೀನ್ಯಾರೆ
ನೀನ್ಯಾರೆ ನೀನ್ಯಾರೆ ನೀನ್ಯಾರೆ//೨//

ಉದ್ದನೆ ನಾಗರ ಜಡೆಯವಳೇ
ಜಿಗಿಯುವ ಜಿಂಕೆಯ ನಡೆಯವಳೆ
ಹೊಳೆಯುವ ಸೌಂದರ್ಯವತಿಯೇ
ನೀನ್ಯಾರೆ ನೀನ್ಯಾರೆ ನೀನ್ಯಾರೆ//೩//

ಹಣೆಯಲಿ ರವಿಯಂತ ಬೊಟ್ಟುಯಿಟ್ಟು
ಅಂದದ ಕಣ್ಣಿಗೆ ಕಾಡಿಗೆಯಿಟ್ಟು
ಬಂಗಾರದ ಮೂಗುತಿ ತೊಟ್ಟವಳೇ
ನೀನ್ಯಾರೆ ನೀನ್ಯಾರೆ ನೀನ್ಯಾರೆ//೪//

ಕೈಗೆ ಬಣ್ಣ ಬಣ್ಣದ ಬಳೆಯ  ತೊಟ್ಟು
ಬೆಳ್ಳಿ ಕಾಲ್ಗೆಜ್ಜೆಯ ನಾದವ ಕೊಟ್ಟು
ಮಂದಹಾಸ ಬೀರುತ್ತ,ತುಂಟನಗೆ ಚೆಲ್ಲುತ್ತ
 ಬಿಂಕದ ಸುಂದರಿ ನೀನ್ಯಾರೆ ನೀನ್ಯಾರೆ//೫//

ಬಳುಕುವ ನಡೆ ಚಂದ ಕೋಗಿಲೆಯ ನುಡಿ ಚೆಂದ
ಮಾಣಿಕ್ಯದಂತ ನುಡಿಯವಳೆ ನೀನ್ಯಾರೆ
ನವಿಲಂತ ವೈಯ್ಯಾರಿ ಸೊಬಗಿನ ಬಂಗಾರಿ
ನೀನ್ಯಾರೆ ನೀನ್ಯಾರೆ ನೀನ್ಯಾರೆ//೬//

ವನಕೆಲ್ಲ ಹಸಿರಾಗಿ ಪ್ರಾಣಕ್ಕೆ  ಉಸಿರಾಗಿ
ನನ್ನ ಕನಸ ಕದ್ದ ಕಣ್ಮಣಿ ನೀನ್ಯಾರೆ
ಮನವ ಕಲಕುತ ಕಿಲಕಿಲನೆ ನಗುತ
ನೀರ ಹೊತ್ತು ಬರುವವಳೇ ನೀನ್ಯಾರೆ ನೀನ್ಯಾರೆ//೭//

ಚಿತ್ತದಿ ರಂಗಿನ ಚಿತ್ತಾರ ಪಡೆದು ನೀ ಆಕಾರ
ಹರಿಯುವ ನೀರಂತೆ ಜೇನಿನ ಹೊಳೆಯಂತೆ
ಗುಡಿಯೊಳಗೆ ಎಂದು ನೀ ಬರುವೆ ನನಾ ಚೆಲುವೆ
ತುಂಬು ಮನದವಳೇ ನೀನ್ಯಾರೆ ನೀನ್ಯಾರೆ//೮//✍️
- ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಸಾಹಿತಿ ನಟ ಸಂಘಟಕ 
ಅಂಚೆ ಜೀವ ವಿಮೆ ಮಂಡ್ಯ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

  1. ಜಾನಪದ ಶೈಲಿಯ ರಚನೆ ತುಂಬಾ ಹಿಡಿಸಿತು. ನೀವೊಬ್ಬ ಅದ್ಬುತ ಬರಹಗಾರ ಎಂಬುದರಲ್ಲಿ ಅನುಮಾನವಿಲ್ಲ. ಶುಭವಾಗಲಿ 🌹

    ಪ್ರತ್ಯುತ್ತರಅಳಿಸಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...