ಭಾನುವಾರ, ಜನವರಿ 30, 2022

ಮನಮಿಡಿಯುವ ದೀಪ ಧಾರಿಣಿ (ಪುಸ್ತಕ ಅವಲೋಕನ) - ಶ್ರೀ ದಯಾನಂದ ಪಾಟೀಲ

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯ ಯುವ ಸಾಹಿತಿ
ಸಹನ,ಅರ್,  ಅದಡದವರು ಬರೆದಿರುವ 

ದೀಪ ಧಾರಿಣಿ ಕವನ ಸಂಕಲನ ಅರ್ಥಪೂರ್ಣ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಮೋಸ ವಂಚನೆ ನಂಬಿಕೆ ದ್ರೋಹ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಕವನಸಂಕಲನದಲ್ಲಿ ಮೂಡಿ ಬಂದಿದೆ, ಸಹನಾ ಅವರ ಸಾಹಿತ್ಯ ಬಗ್ಗೆ ಕಳಕಳಿ ಮೆಚ್ಚುವಂತದ್ದು,
ಓಡುತ್ತಾ,-ಓಡುತ್ತಾ ಸಂಬಂಧಗಳ
ಸರಪಳಿಯ ಕಡಿದು ಹಾಕುವ ಕತ್ರಿ ಯಾದೆ,
ಹಣವಿಲ್ಲದೆ ಸುಖವಾಗಿದ್ದ ನೀನು
ಹಣಗಳಿಸಿ ಅನಾಥನಾದೆ,
ಮಾನವ ಅನಾದಿಕಾಲದಿಂದ ತನ್ನ ಸಂಸಾರವನ್ನು ಉತ್ತಮ ರೀತಿಯಿಂದಶಾಂತಿ ಹಾಗೂ ನೆಮ್ಮದಿಯ ಜೀವನ ಮಾಡಿಕೊಂಡು ಇತರರಿಗೆ ಮಾದರಿಯಾಗಿ ಸ್ನೇಹಜೀವಿ ಮಾನವೀಯತೆ  ಗುಣಗಳನ್ನು ಅಳವಡಿಸಿಕೊಂಡು ಮುಂದಿನ ಜನಾಂಗಕ್ಕೆ ಮಾದರಿ ಆಗಿದ್ದರು, ಅಂದಿನ ಜನ,ಆದರೆ ದಿನಗಳು ಕಳೆದಂತೆ ಹಣ ಮತ್ತು ಅಧಿಕಾರಕ್ಕಾಗಿ ಹಗಲು-ಇರುಳು ಎನ್ನದೆ ಸಂಬಂಧ ಬೇಡವಾಗಿ ನಾನು ನನ್ನ ಕುಟುಂಬ ಸ್ವಾರ್ಥ ಮನೋಭಾವನೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ, ಬಡತನ ಇದ್ದರೂ ಪರವಾಗಿಲ್ಲ ನೆಮ್ಮದಿ ಮುಖ್ಯ , ಸಂತೋಷ ಅನುಭವಿಸಲು ವೇಳೆ ಇಲ್ಲವಾಗಿದೆ, ಹಣ ಇದ್ದರು ಕೂಡ ಕುಟುಂಬದ ಜೊತೆ ಇರುವುದು ಅಪರೂಪ ಇಂದಿನ ದಿನಗಳಲ್ಲಿ, ಕವಿತ್ರಿ ಕವನದಲ್ಲಿ ವಿವರಿಸಿದ್ದಾರೆ,
ಮುಖಾಮುಖಿ ಭೇಟಿ ಯು,
ಅಪರೂಪದ ಚಿಲುಮೆ ಯಾಗಿದೆ,
ಮೊಬೈಲ್ನಲ್ಲಿ ಎಲ್ಲಾ
ಮುಗಿದು ನಾಂದಿಯಾಗಿದೆ,
ಕಳೆದ ಅಂದಿನ ದಿನಗಳು ಮರೆಯಲು ಸಾಧ್ಯವಿಲ್ಲ ಒಬ್ಬರ ಮನೆಗೆ ಮತ್ತೊಬ್ಬರು ಪರಂಪರೆ ನಮ್ಮದು ನೆರೆಹೊರೆಯ ಸಂಬಂಧ ಮರೆಯಲಾಗದ  ನೆನಪು ಹಬ್ಬ ಇರಲಿ ಸೂತಕ ಇರಲಿ ಹುಟ್ಟುಹಬ್ಬ ಇರಲಿ ಹೀಗೆ ಎಲ್ಲರೂ ಕೂಡಿಕೊಂಡು ಭಾಗವಹಿಸುತ್ತಿದ್ದರು ಜಾತಿ ಭೇದ ಇರಲಿಲ್ಲ ಎಲ್ಲರೂ ನಮ್ಮವರು ಎಂಬ ಭಾವನೆ, ಈಗ ಸತ್ತರೆ ಹುಟ್ಟುಹಬ್ಬದ ಯಾವುದೇ ಕಾರ್ಯಕ್ರಮ ನಡೆಯಲಿಮೊಬೈಲ್ನಲ್ಲಿ ಎಲ್ಲಾ ಮಾತುಕತೆ ನಡೆದಿದೆ ಒಂದು ರೀತಿಯಲ್ಲಿ ಹೇಳಬೇಕಾದರೆ ಮೊಬೈಲ್ ಸಂಬಂಧವನ್ನು ಹಳ್ಳ ಹಿಡಿಸಿದೆ ಅಂದರೆ ತಪ್ಪಾಗಲಾರದು, ಇನ್ನಾದರೂ ಸಂಬಂಧಕ್ಕೆ ಬೆಲೆ ನೀಡಿ ಪ್ರೀತಿ-ವಿಶ್ವಾಸಕ್ಕೆ ಭದ್ರ ಬುನಾದಿ ಹಾಕಿ, ಕವಿತ್ರಿ ನೈಜಘಟನೆಗಳನ್ನು ಕವನ ರೂಪದಲ್ಲಿ ಅಳವಡಿಸಿಕೊಂಡಿರುವುದು ನಿಜಕ್ಕೂ ಅಭಿನಂದನೀಯ,
ಮುಳುಗುತ್ತಿದೆ ಮುಳುಗುತ್ತಿದೆ,
ಹಣದ ದಾಹದಿಂದ ಮನುಷ್ಯತ್ವ ಮುಳುಗುತ್ತಿದೆ,
ಹಣ ಇಂದು ಪ್ರತಿಯೊಬ್ಬರನ್ನು ಹುಚ್ಚು ಹಿಡಿಸಿದೆ ಹಣಕ್ಕಾಗಿ ಕೊಲೆ ವರದಕ್ಷಿಣೆ ಕಿರುಕುಳ ಆಸ್ತಿಗಾಗಿ ಅಣ್ಣನ ಕೊಲೆ ತಂದೆ ಮಗನ ಕೊಲೆ ಮಗ ತಂದೆಯ  ಕೊಲೆ ಮಲತಾಯಿಯ ಕಂದಮ್ಮನ ಕೊಲೆ ಹೀಗೆ ಹತ್ತು ಹಲವು ಘಟನೆಗಳು ಪ್ರತಿದಿನ ನಡೆಯುತ್ತಿರುವುದು ವಿಷಾದನೀಯ ಮಾನವ ಇಂದು ರಾಕ್ಷಸನಾಗಿ ಮಾನವೀಯತೆ ಪ್ರೀತಿ ವಿಶ್ವಾಸಕ್ಕೆ ಕೊಳ್ಳೆ ಇಟ್ಟಿದ್ದಾನೆ ಯಾರನ್ನು? ನಂಬಬೇಕು ಯಾರನ್ನು ನಂಬಬಾರದು ಹೀಗೆ ತ್ರಿಶಂಕು ಸ್ಥಿತಿಯಲ್ಲಿ ನಿಂತಿದ್ದಾನೆ, ಎಲ್ಲರೂ ಹಣಕ್ಕೆ ದಾಸರಾಗಿದ್ದಾರೆ ಮಾಡಬಾರದ ಕೆಲಸ ಮಾಡುತ್ತಿದ್ದಾರೆ ಎಲ್ಲಿದೆ? ಪ್ರೀತಿ ದಯೆ ಕರುಣೆ ಮಮತೆ ಮನುಷ್ಯ ಮನುಷ್ಯನಾಗಿ ಉಳಿದಿಲ್ಲ ಇದಕ್ಕೆ ಕಾರಣರು ಯಾರು? ಪ್ರಪಂಚಕ್ಕೆ ಶಾಂತಿ ಬಾಂಧವ್ಯಸಾರಿದ ಸ್ವಾಮಿ ವಿವೇಕಾನಂದರು ಅವರು ನಡೆದಾಡುವ ಪುಣ್ಯಭೂಮಿಯಲ್ಲಿಚುನಾವಣೆಯಲ್ಲಿ ಮತದಾನ ಮಾಡಲಿಕ್ಕೆ ಹಣ ಸಂದಾಯ ಮಾಡಬೇಕು ಅಂದಾಗ ಮಾತ್ರ ಮತದಾನಕ್ಕೆ ಸೈ ಪ್ರತಿಯೊಂದಕ್ಕೂ ಹಣ ಹಣ ಹಣ ಇದ್ದರೆ ಅವನೇ ಅವನೇ ಧಣಿ ಅವನೇ ಗಣಿ ಇಂಥ ಘಟನೆಗಳು ಇಂದಿನ ದಿನಮಾನಗಳಲ್ಲಿ ಕಾಣಲು ಸಾಧ್ಯ ನಿಜಕ್ಕೂ ವಿಷಾದನೀಯ ಮೊದಲು ಗುಣವಂತ ನಿಗೆಕಿಮ್ಮತ್ತು ಇತ್ತು ಆದರೆ ಈಗ ಹಣವಂತ ನಿಗೆ ಇದು ನಿಜಕ್ಕೂ ವಿಷಾದನೀಯ,
ಮನೆಯ ಮೇಲೊಂದು ಮನೆಯ,
ನಿರ್ಮಿಸಿ ಯಾರಿಗೆ ಬಿಟ್ಟು, ಮಸಣ ವ
ಸೇರುವೆ,
ಬಡವರ ದುರ್ಬಲರ ಕಣ್ಣೀರನ್ನು ಬಂಡವಾಳ ಮಾಡಿಕೊಂಡು ಅಚ್ಚುಕಟ್ಟಾದ ಮನೆಯನ್ನು ಕಟ್ಟಿ ನೆಮ್ಮದಿಯ ನಾಲ್ಕು ದಿನ ಮನೆಯಲ್ಲಿಇರಲು ಅವಕಾಶ ನೀಡುವುದಿಲ್ಲ ವಿಧಿ ತನ್ನ ಜೀವನವನ್ನು ಮನೆ ಕಟ್ಟಡದಲ್ಲಿ ಕಳೆದುಹೋಗಿ ಜೀವನದ ಅಂತ್ಯ ಬಂದಾಗ ನಿರಾಶಾಭಾವನೆ ಬರುತ್ತೆ ನನ್ನ ಜೀವನ ಇಷ್ಟು ಬೇಗ ಅಂತ್ಯ? ತನಗೋಸ್ಕರ ಮಜಲುಗಳ ಮೇಲೆ ಮಜಲು ನಿರ್ಮಿಸಿ ಸುಖಂ ತೋರಿಸಲು ನಾನೇ ಇಲ್ಲ ನಾನು ನಾನು ದುಡಿದು ಆಸ್ತಿ ಮಾಡಿ ಹೆಂಡರು ಮಕ್ಕಳಿಗೆ ಮಕ್ಕಳಿಗೆ ಬಿಟ್ಟು ಹೋಗುವಾಗ ನಿರಾಸೆ ಅಷ್ಟಿಷ್ಟಲ್ಲ ನೆನೆದರೆ ಮೈ ಕಂಪನಆಗುತ್ತೆ  ಅದೇ ರೀತಿ ಎಚ್ಚರಿಕೆಯ ಗಂಟೆ ಅಂದರೆ ತಪ್ಪಾಗಲಾರದು,
ಕಾಣದಾಗಿದೆ ಗುಡಿ  ಕೈಗಾರಿಕೆ ಯು
ಧ್ವನಿ ಯತ್ತಿವೆ ಧೂಳೆಬ್ಬಿಸುವ ಕಾರ್ಖಾನೆಯು,
ತಲ್ಲಣಿಸುತ್ತಿದೆ ಕನ್ನಡ ಭಾಷಾ ನುಡಿಯು
ಟಸು ಪುಸು ಇಂಗ್ಲಿಷ್ ಕೇಕೆ ಹಾಕಿವೆ,
ಪುರಾತನ ಕಾಲದಿಂದ ಹಳ್ಳಿ ಪ್ರದೇಶ ಅಲ್ಲದೆ ನಗರ ಪ್ರದೇಶಗಳು ಕುಂಬಾರಿಕೆ ಬಡಗಿತನ ಕಮ್ಮಾರಿಕೆ ಬುಟ್ಟಿ ಹೆಣೆಯುವಕೆಲಸ ಹೀಗೆ ಹತ್ತು ಹಲವಾರು ಕೈಗಾರಿಕೆಗಳು ಜನರ ಮುಖ್ಯ ಉದ್ಯೋಗವಾಗಿತ್ತು ನಿರುದ್ಯೋಗ ಸಮಸ್ಯೆ ಕಣ್ಮರೆಯಾಗಿತ್ತು ದುಡಿಮೆಯೇ ದೇವರು ತಿಳಿದುಕೊಂಡ ಜನ ಸ್ವಾಭಿಮಾನಿಗಳು ಯಾರು ಯಾ ರ ಹಂಗು ಇಲ್ಲದೆ ಕಾಯಕದ ಮೇಲೆ ನಿಷ್ಠೆ ಭಕ್ತಿ ಆದರೆ ಇಂದು  ಗುಡಿ ಕೈಗಾರಿಕೆಗಳ ಬೇಡಿಕೆ ಕಡಿಮೆಯಾಗಿ ಇಂದು ಅದೇ ಜಾಗದಲ್ಲಿ ಯಂತ್ರಗಳ ಮೂಲಕ ವಸ್ತುಗಳ ತಯಾರಿಕೆ ಪ್ರಾರಂಭವಾಗಿದೆ, ಇದರಿಂದ ಪರಿಸರ ಮಾಲಿನ್ಯದಿಂದ ನೀರು ವಿಷ ಹರಿಯುತ್ತಿದೆ ಇದರಿಂದ ಬೆಳೆ ರೋಗ ಪೀಡಿತವಾಗಿ ಸರಿಯಾದ ಬೆಳೆ ಬಾರದೆ ರೈತ ಆರ್ಥಿಕ ಬಾಧೆಯಿಂದ  ನರಳುತ್ತಿದ್ದಾನೆ, ಸರ್ಕಾರದ ವಿನಾಶಕಾರಿ ನೀತಿಯಿಂದ ರೈತ ಬೀದಿಗೆ ಬಿದ್ದಿದ್ದಾನೆ ರಾಜಕೀಯ ಪಕ್ಷಗಳು ಬಂಡವಾಳಶಾಹಿಗಳ ಪರವಾಗಿ ನಿಂತಿವೆ ನಾಡು  ಉಳಿಸಬೇಕಾದ ಸರ್ಕಾರ ಹಾಗೂ ವಿರೋಧ ಪಕ್ಷ ರೈತರ ಜನರ ಪಾಲಿಗೆ ಮರಣ ಶಾಸನ,
ಇಂಗ್ಲಿಷ್ ಭಾಷೆ ಹಳ್ಳಿಯಿಂದ ನಗರ ಪ್ರದೇಶಗಳಲ್ಲಿ ಕೂಡ ತನ್ನ ಪ್ರಭುತ್ವ ಸಾಧಿಸುತ್ತಿದೆ ಸರ್ಕಾರಿ ಶಾಲೆಗಳಿಗೆ ಕಳುಹಿಸುವ ಮನೋಭಾವನೆ ಇಲ್ಲದಿರುವುದು ವಿಷಾದ ಲಕ್ಷಾಂತರ ರೂಪಾಯಿ ಖರ್ಚುಮಾಡಿ  ಶಾಲೆಗಳಿಗೆ ಕಳಿಸಲಾಗುತ್ತಿದೆ ಇಂಗ್ಲಿಷ್ ವ್ಯಾಮೋಹ ಇಂದಿನ ಪಾಲಕರಲ್ಲಿ ಹೆಚ್ಚಾಗುತ್ತಿರುವುದು ವಿಷಾದನೀಯ ಇದರಿಂದ ಕನ್ನಡ ಭಾಷೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಕನ್ನಡಕ್ಕಿಂತ ಇಂಗ್ಲಿಷ್ ಹೊಸದು ಕನ್ನಡ ಭಾಷೆ ಪುರಾತನ ಕಾಲದಿಂದ ತನ್ನದೇ ಆದ ಪ್ರಾಬಲ್ಯ ಹೊಂದಿದ ಭಾಷೆ ಕನ್ನಡದಲ್ಲಿ ಎಂಟು ಜನ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡನಾಡಲ್ಲಿ ಸ್ವಾರ್ಥ ರಾಜಕೀಯ ನಿರಭಿಮಾನಿ ಕನ್ನಡಿಗರಿಂದ ಇಂಥ ಸಂಕಟ ಬಂದಿರುವುದು ನಿಜಕ್ಕೂ ಖಂಡನೀಯ ಇನ್ನಾದರೂ ಕನ್ನಡಿಗರು ಕನ್ನಡ ಭಾಷೆ ನೆಲ-ಜಲ ಬಗ್ಗೆ ವಿಚಾರ ಮಾಡಲಿ ಕನ್ನಡ ಕಟ್ಟುವ ವೀರ ರಾಗಲಿ ಇದು ಸರಕಾರ ಮಾಡುವ ಕೆಲಸವಲ್ಲ ಪ್ರತಿಯೊಬ್ಬ ಕನ್ನಡಿಗರಿಂದ ಕೆಲಸ ಆಗಬೇಕಾಗಿದೆ,
ಯುವ ಸಾಹಿತಿ ಕುಮಾರಿ ಸಹನಾ ಆರ್, ಎಂ ಅವರ ಸಾಹಿತ್ಯ ಸೇವೆ ನಿರಂತರವಾಗಿ ಸಾಗಲಿ, ಅವರಿಗೆ ಶುಭವಾಗಲಿ,
- ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ  ಮಹಾರಾಷ್ಟ್ರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...