ಮಂಗಳವಾರ, ಡಿಸೆಂಬರ್ 31, 2024

ದಿ ಷಂಡರ್...

ದಿ ಷಂಡರ್
~~~~~~~~

ಕ್ಯಾಲೆಂಡರ್ ವರುಷ ಬಂತೆಂದರೆ ಸಾಕು
ಥೇಟ್ ನಮ್ಮೂರ ಮೈದೆವ್ವಗಳೆ ನೆನಪಾಗುತ್ತವೆ
ಕೆದರಿದ ಕೂದಲು, ಬಾತುಕೊಂಡ ಮುಖ
ಓಲಾಡುವ ತೂಗಾಡುವ ಬಾಡಿ
ಹೇಳಿಕೊಳ್ಳಲಾಗದ ಅದುಮಿಟ್ಟುಕೊಂಡೆಲ್ಲ ಉಸಿರನು
ಘಟಸರ್ಪಗಳು ಹೆಡೆಬಿಚ್ಚಿ 
ಕಂಡಕಂಡವರ ಬಳಿಯೆಲ್ಲ
ಬಳಕಾಡುತ ಬುಸ್ ಬುಸ್ಸೆನ್ನುತ್ತವೆ

ಭೂತಗುಡಿಯ ಮುಂದಣ 
ದೆವ್ವಗಳ ಅರಚಾಟಕೇನೋ
ತೂಗುಹಾಕಿದೆವು ಮೌಢ್ಯದ ಪಟ್ಟಿ!
ಹೆಂಡದಂಗಡಿ ಪಬ್ಬುಬಾರುಗಳ
ಧೂಮ್ ಧಾಂಗುಡಿಯ ನರ್ತನಕೀಗ
ಹಿಡಿಯಬೇಕು ಯಾರ ಕೊರಳಪಟ್ಟಿ?

ಹುಣಸೆ ಚುಳುಪಿಯದೊಂದೆ ಏಟಿಗೆ
ಬಿಟ್ಟೋಡುತ್ತಿತ್ತಾ ದೆವ್ವ! ಆಗದಿದ್ದರೆ
ಧರ್ಮದಂಡವಂತೂ ಇತ್ತು
ಮಧ್ಯರಾತ್ರಿಯಲಿ ಏರಿಸಿಕೊಂಡೀ ಪಿತ್ತಕೆ
ಮತ್ತೊಂದು ರಾತ್ರಿಯಲೆ ಎಚ್ಚರ
ನಿಶೆಯಲಿ ಮತ್ತೊಂದು ಸುತ್ತು

ನಮ್ಮ ಮುಳ್ಳುಜಾಲಿ ನೆರಳಾಗಲಿಲ್ಲ ನಿಜ
ಕೊಂಡು ತಂದ ಎಕ್ಸ್ ಮಾಸಿಗೇಕೆ ಜೋಲಿ
ಗಂಧವ ಬೆಳೆಯೋಣವೆಂದರೆ ಕಳ್ಳಕಾಕರ ಕಾಟ
ಕಾನೂನು ಸರಮಾಲೆಗಳ ಪೀಕಲಾಟ
ಥೋss.. ಇದಾಗದ ಕೆಲಸ
ತಲೆ ಚಿಟ್ಟೆನ್ನುತಿದೆ 
'ಚಿಯರ್ಸ್... ಹ್ಯಾಪಿ ನ್ಯೂ ಇಯರ್'

~ ಅರಬಗಟ್ಟೆ ಅಣ್ಣಪ್ಪ

ಹೊಸ ವರ್ಷ ತರಲಿ ಹರ್ಷ...

ಹೊಸ ವರ್ಷ
ತರಲಿ ಹರ್ಷ 

ಹೊಸ ವರ್ಷವು ತರಲಿ ಹರುಷ 
ಮೂಡಲಿ ಮುಖದಲಿ ಪ್ರತಿದಿನ ಸಂತೋಷ 
ಬೆಳೆಸಿಕೊಳ್ಳೋಣ ಪರಸ್ಪರ ಎಲ್ಲರಲೂ ವಿಶ್ವಾಸ 
ಬಾಳಿ ಬದುಕಿ ನಗುನಗುತಾ ಪ್ರತಿ ನಿಮಿಷ

ಮರೆತೆ ಹೋಯಿತು 2024 ರ ಕೊನೆಯ ದಿನ 
ನೆನಪಾಯಿತು 2025 ರ ಮೊದಲ ದಿನ
ಕಷ್ಟದ ದಿನಗಳನ್ನು ಮರೆಯೋಣ 
ಸುಖದ ದಿನಗಳನ್ನು ಮನದಲಿ ಇರಿಸೋಣ 

ಹೊಸ ವರ್ಷ ಹೊಸ ಚಿಂತನೆ 
ಇನ್ನೇಕೆ ಹೋದ ವರ್ಷದ ಯಾತನೆ
ಬದಲಾದದ್ದು ದಿನದರ್ಶಿಕೆ ಮಾತ್ರನೇ 
ಮತ್ತದೇ ಬದುಕಿನ ಪಾತ್ರಗಳ ನಟನೆ 

ಅಂದುಕೊಂಡ ಕೆಲಸಗಳು ಯಶಸ್ವಿಯಾಗಲಿ 
ಬದುಕಿನ ಬಂಡಿ ಸುಖದಿ ಸಾಗಲಿ
ಬೇರೆಯವರ ತಪ್ಪನ್ನು ಕ್ಷಮಿಸುವ ಗುಣ ಬರಲಿ 
ನಿಮ್ಮ ಆತ್ಮವಿಶ್ವಾಸ ಸದಾ ನಿಮ್ಮೊಂದಿಗಿರಲಿ 

ಭಾರತೀಯರಿಗೆ ಯುಗಾದಿಯೇ ಹೊಸ ವರ್ಷವು 
ಎಲ್ಲರಂತೆ ನಾವೂ ಇಂದು ಪಡೆಯೋಣ ಹೊಸ ಹರ್ಷವು 
ಇರಲಿ ದ್ವೇಷ ಅಸೂಯೆ ವಂಚನೆಗೆ ವಿರಾಮವು
ಯಾರು ಏನೇ ಮೋಸ ಮಾಡಲಿ ಸುಮ್ಮನಿರಿ ನೀವು 

ಹೊಸ ವರ್ಷದಂದು ಶಪಥ ಮಾಡಿರಿ 
ಸರ್ವರೊಂದಿಗೂ ನಗುನಗುತಾ ಬಾಳಿರಿ 
ಸಿಹಿಯ ಜೊತೆಗೆ ಹೊಸ ವರ್ಷವ ಸ್ವಾಗತಿಸಿರಿ 
ನಾನೆಂಬ ಅಹಂ ಬಿಟ್ಟು ನಾವೆಂಬ ಭಾವದಿ ಬದುಕಿರಿ 

ಶ್ರೀ ಮುತ್ತು ಯ ವಡ್ಡರ
ಶಿಕ್ಷಕರು 
ಬಾಗಲಕೋಟ
9845568484

ಹುಡುಗಿ ಕಳಿಸಿದ ಶುಭಾಶಯಗಳು...


ಹುಡುಗಿ ಕಳಿಸಿದ ಶುಭಾಶಯಗಳು...


ಹೋದ ವರ್ಷ ಹುಡುಗಿಯೊಬ್ಬಳು
ಹೊಸ ವರ್ಷಕ್ಕೆ, ಶುಭಾಶಯ ಕಳಿಸಿದ್ದಳು
ಅದರಲ್ಲಿ ಎರಡು ಸಾಲು ಹೀಗೆ ಬರೆದಿದ್ದಳು
ಏನು ಮಾರೆಯರೆ ನಿಮ್ಮ ಕವನಗಳು
ಎಷ್ಟು ಆಗಿದರೂ ಮುಗಿಯದ ಚೂಯಿಂಗಮ್ ಗಳು
ಹಲ್ಲು ನೋವು ಕವಿತೆ ಸಾಲು ಕಡಿಮೆ ಇರಲಿ
ಮಕರ ಸಂಕ್ರಾಂತಿಗೆ ಎಳ್ಳು ಬೆಲ್ಲ ಕಳಿಸಿದ್ದಳು
ನಿಮ್ಮ ಕವನಗಳಲ್ಲಿ ಬೆಲ್ಲಕ್ಕಿಂತ ಎಳ್ಳು ಜಾಸ್ತಿ
ನಾವು ಮಧುಮೇಹಿಗಳಲ್ಲ ಜೊಳ್ಳು ತೆಗೆಯಿರಿ
ಶಿವರಾತ್ರಿಗೆ ಬಂದ ವ್ಯಾಟ್ಸಪ್ ಮೆಸೇಜ್
ಕವನ ಕತ್ತಲಲ್ಲಿ ಕಾಣುವ ಮಿಂಚುಳ್ಳಿ ಬೆಳಕು
ಮಿನುಗಲಿ ಆಕಾಶ ನಕ್ಷತ್ರಗಳಂತೆ ಪದಪುಂಜಗಳು
ಯುಗಾದಿಗೆ ಬೇವು ಬೆಲ್ಲ ಕಳಸಿ
ಏನಿದು ಕವಿಗಳೇ ನೋವಿನ ಧ್ವನಿ ಬೇವಿನ ಸೊಪ್ಪು
ಈಗಲೇ ಬಂದೀತೆ ನಿಮ್ಮ ಕವಿತೆಗೆ ಮುಪ್ಪು
ದೀಪಾವಳಿಗೆ ದೀಪ ಹಿಡಿದ ಹುಡುಗಿ ಚಿತ್ರ
ಹತ್ತಿ ತಾ ಉರಿದು ಜಗಕೆ ಬೆಳಕು ಕೊಡಲಿ 
ನಿಮ್ಮ ಕವನಗಳಲ್ಲಿ ಆ ಬೆಳಕು ಮೂಡಲಿ
ರಾತ್ರಿ ಕತ್ತಲು ಆವರಿಸಿದೆ
ಕವಿತೆ ಬರೆಯುವುದು ನಿಲ್ಲಿಸಿದ್ದೇನೆ
    
ಗೊರೂರು ಅನಂತರಾಜು
ಹಾಸನ
ಮೊ: 9449462879

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...