ಶನಿವಾರ, ಜೂನ್ 14, 2025

ಅಪ್ಪನಿಗೆ ಹೀಗೊಂದು ಕೃತಜ್ಞತೆ(ಕವಿತೆ) - ಶಿವಶೋಭ ಸುತೆ.

ಮಕ್ಕಳೆಂದು ಹಿಗ್ಗುವ ಮನದಲಿ 
ವೇದನೆ ತುಂಬಿದ ಕಣ್ಣಾಲೀ||ಪ||

ಅಪ್ಪನ ದಿನವಿದೆಯೆಂದು 
ಅಪ್ಪನ ಬಳಿ ಬಂದು 
ಕುಶಲೋಪಚಾರ ಕೇಳದೆ 
ಥಟ್ಟನೆ ಒಂದು ಭಾವಚಿತ್ರವ ಸೆರೆಹಿಡಿದ! ||೧||

ನಮ್ಮ ಹಸಿವುನೀಗಿಸಿಕೊಳ್ಳುವ ಮುನ್ನ 
ಒಮ್ಮೆ ನೆನೆಯಿರಿ! ಅಪ್ಪನ ಸಹಸ್ರ ಬೆವರಿನ ಹನಿಗಳನ್ನ!
ಶ್ರಮ ಸುರಿದ ಸಂಸಾರದ ಒಡಲ ತುಂಬಲು 
ತನ್ನ ಒಡಲಿಗೆ ತಣ್ಣೀರಿನ ಬಟ್ಟಲು!||೨||

ರಾಶಿ ರಾಶಿ ಬಟ್ಟೆ ಖರೀದಿಸುವ ಮುನ್ನ 
ಒಮ್ಮೆ ನೋಡಿರಿ!ಅಪ್ಪನ ಅಂಗಿಯ ದಾರದ ಹೊಲಿಗೆಯನ್ನ!
ಹಗಲು-ಇರುಳು ಎನ್ನದೆ ದುಡಿಯುತ್ತಿರುವುದು 
ನನ್ನಯ ಕಣ್ಣಾಗಿರುವ ಆಸೆಗಳ ಪೂರೈಸುವುದು!||೩||

ಬಟ್ಟೆಗೆ ತಕ್ಕ ಬಣ್ಣ ಬಣ್ಣದ ಪಾದರಕ್ಷೆ ತೆಗೆದುಕೊಳ್ಳುವ ಮುನ್ನ 
ಒಮ್ಮೆ ಮುಟ್ಟಿ ನೋಡಿ! ಬರಿಗಾಲಲ್ಲಿ ನಡೆದು ಒಡೆದ ಹಿಮ್ಮಡಿಯನ್ನ!
ಎಲ್ಲರ ಒಳಿತಿಗಾಗಿ ಮೀಸಲಿಡುತ್ತಿದ್ದ ಸಿರಿವಂತಿಕೆ!
ತನಗಾಗಿ ತಾನು ಎನ್ನುವುದ ಮೆರೆತಿದ್ದು,ಅವನ ಹೃದಯವಂತಿಕೆ!||೪||

ಕಾ(ಬೇ)ಡಿ ಕೇಳದೆ ಅಷ್ಟೈಶ್ವರ್ಯಗಳನು ಕೊಟ್ಟ ಜೀವಕೆ 
ಸಣ್ಣದೊಂದು ನೋವ ನೀಡದಿರು, ಆ ನೊಂದ ಮನಕೆ 
ಜೀವದ ಬೊಂಬೆ ಇರುವಾಗಲೇ!
ಅವರ ಸೇವೆ ಮಾಡು, ಹೆತ್ತ ಋಣವ ತೀರಿಸುವೆ ಆಗಲೇ!||೫||

- (ಶಿವಶೋಭ ಸುತೆ)ಶಿಲ್ಪಾ ಮಲ್ಲಿಕೇರಿಮಠ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...