ಶನಿವಾರ, ಆಗಸ್ಟ್ 14, 2021

ಕರ್ನಾಟಕ ವೈಭವ (ಕವನ) - ಶ್ರೀ ರವಿನಾಗ್ ತಾಳ್ಯ, ಚಿತ್ರದುರ್ಗ ಜಿಲ್ಲೆ.

 ಕರ್ನಾಟಕ ವೈಭವ

ನೋಡು ಬಾರಾ ಒಮ್ಮೆ ಕರುನಾಡ ವೈಭವ, ಧನ್ಯನಿಲ್ಲಿ ಜನ್ಮಿಸಿದಾ ಮಾನವ

ಮಲೆನಾಡ ಸಿರಿ ಶಿವಮೊಗ್ಗ, ಮಡಿಕೇರಿ, ಚಾಮರಾಜ ನಗರ, ಕೊಡಗು ನಿಸರ್ಗ ನಿರ್ಮಿತ ಸ್ವರ್ಗ

ವೀರವನಿತೆ ಓಬವ್ವನ, ಕಲ್ಲಿನ ಕೋಟೆಯ ವೀರ ಮದಕರಿಯ ಚಿತ್ರದುರ್ಗ

ಚಿನ್ನದ ಮಾವಿನ ಕೋಲಾರ, ಖನಿಜದ ಖನಿ ಬಳ್ಳಾರಿ, ಗತವೈಭವದ ವಿಜಯನಗರ

ಸಕ್ಕರೆಯ ನಾಡು ಮಂಡ್ಯ, ಚನ್ನಪಟ್ಟಣದ ಗೊಂಬೆಗೆ ಹೆಸರು ರಾಮನಗರ

ಬಸವಣ್ಣ ಜನಿಸಿದ, ಪಿಸುಮಾತಿನ ಮೊಗಸಾಲೆಯ ಗುಮ್ಮಟ ನಗರಿ ವಿಜಯಪುರ

ಕೈವಾರ, ಮುರುಗಮಲ್ಲವಿಹ, ವಿಶ್ವೇಶ್ವರಯ್ಯ ಹುಟ್ಟಿದ ಚಿಕ್ಕಬಳ್ಳಾಪುರ 

ಕೆಂಪೇಗೌಡರು ಕಟ್ಟಿದ ರಾಜಧಾನಿ ಬೆಂಗಳೂರು, ಜ್ಞಾನ ದಾಸೋಹಕೆ ತೆಂಗಿನ ತುಮಕೂರು,

ತಾಯಿ ಚಾಮುಂಡಿ, ನಂಜುಂಡೇಶ್ವರ, ಟಿಪ್ಪು, ಒಡೆಯರ ಅರಮನೆಯ ಮೈಸೂರು

ಐತಿಹಾಸಿಕ ಕೋಟೆ, ಬಿದರಿ ಕಲೆ ತವರು, ವಿಶ್ವಗುರು ಬಸವರ ಕಲ್ಯಾಣ ಕ್ರಾಂತಿಯ ಬೀದರು 

ಶೃಂಗೇರಿ ಶಾರದೆ, ಹೊರನಾಡು ಅನ್ನಪೂರ್ಣೆ, ಅಮೃತೇಶ್ವರ, ಕಳಸೇಶ್ವರ, ಬಾಳೆ ಹೊನ್ನೂರು, 

ಕಲ್ಲತ್ತಗಿರಿ, ಬಾಬ ಬುಡನ್ ಗಿರಿ, ಕುದುರೆಮುಖ, ಪ್ರಕೃತಿ ಸೊಬಗಿನ ಕಾಫಿ ನಾಡು ಚಿಕ್ಕಮಗಳೂರು 

ಉಡುಪಿ ಶ್ರೀಕೃಷ್ಣ, ಮೂಕಾಂಬೆ, ದುರ್ಗಾಂಬೆ, ಮಂಜುನಾಥ, ಸುಬ್ರಹ್ಮಣ್ಯರ ನೆಲ, ಯಕ್ಷಗಾನದ ಮಂಗಳೂರು

ಗೊಮ್ಮಟೇಶ, ಹಳೇಬೀಡು ಬೇಲೂರು ಚನ್ನಕೇಶವ, ಹಾಸನಾಂಬೆ ಹಾಸನದಿ ನೆಲೆಸಿಹರು

ಧಾರವಾಡವು ಮಠ, ಮಂದಿರ, ಸಾಹಿತ್ಯ, ಸಂಗೀತ, ಸ್ವರ ರತ್ನಗಳ ತವರು, ರೊಟ್ಟಿ, ಪೇಡಕೆ ಹೆಸರು 

ಉತ್ತರಕನ್ನಡದಿ ನಿಸರ್ಗ, ಜಲಪಾತ, ಕಡಲು, ಅಣುಸ್ಥಾವರ, ಶಿರಸಿ ಮಾರಿಕಾಂಬೆ, ಮುರುಡೇಶ್ವರ, ಗೋಕರ್ಣ 

ಗದಗವದು ಕುಮಾರವ್ಯಾಸ, ಪಂಪ, ಲಕ್ಷ್ಮೀಶ ಕವಿಗಳ ತಾಣ, ನೆಲೆಸಿಹ ವೀರನಾರಾಯಣ

ಬೆಳಗಾವಿಯಲಿ ಗೋಕಾಕ ಜಲಪಾತ,  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, 

ವೀರರಾಣಿ ಚೆನ್ನಮ್ಮ, ಸವದತ್ತಿ ಯಲ್ಲಮ್ಮ, ಅಥಣಿ ಚಪ್ಪಲಿಗೆ ಹೆಸರಾದ  ಕುಂದಾನಗರಿ

ಸವಣೂರ ಖಾರ, ಬ್ಯಾಡಗಿ ಮೆಣಸಿಗೆ ಹಾವೇರಿ, ಯದುವಂಶದ ದೊರೆಗಳ ನಾಡು ಯಾದಗಿರಿ

ಬಹುಮನಿ ಕೋಟೆ, ದರ್ಗಾ, ಬುದ್ಧ ವಿಹಾರ, ಬಸವ ಮಂದಿರ ಭಾವೈಕ್ಯತೆಯ ಕಲಬುರ್ಗಿ

ಶಾಖೋತ್ಪನ್ನ ವಿದ್ಯುತ್ತಿಗೆ ಚಿನ್ನದ ರಾಯಚೂರು, ಕೊಪ್ಪಳದಿ ಇಂದ್ರಕೀಲ ಪರ್ವತ, ಚಾಲುಕ್ಯ ಜೈನ ಪರಂಪರೆ

ಬಾಗಲಕೋಟೆಯಲಿ ಬಾದಾಮಿ, ಐಹೊಳೆ, ಪಟ್ಟದ ಕಲ್ಲು, ಇಳಕಲ್ಲ ಸೀರೆ, ಬೆಣ್ಣೆ ದೋಸೆ ಜವಳಿಗೆ ದಾವಣಗೆರೆ

ದೇವಲೋಕವ ನಾಚಿಸುವ ಕರುನಾಡ ವೈಭವ, ಇಲ್ಲಿ ಹುಟ್ಟಿ ಮತ್ಯಾಕೆ ಬೇಡಲಿ ಕಾಣದ ಸ್ವರ್ಗವ.

 - ರವಿನಾಗ್ ತಾಳ್ಯ
ಹೊಳಲ್ಕೆರೆ ತಾಲ್ಲೂಕು,
ಚಿತ್ರದುರ್ಗ ಜಿಲ್ಲೆ,
ತಾಳ್ಯ - 577527.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...