ಯಾರನ್ನು ನಂಬ ಬೇಕು
ಇದ್ದದ್ದು ಇದ್ದಂಗೆ ಹೇಳಿದ್ರೆ ನಿಮಗೆ
ಕೆಂಡದಂತ ಕೋಪ ಬರುತ್ತಾದೆ
ಒಬ್ಬರನ್ನು ನಂಬಿದ್ರೆ ಇನ್ನೊಬ್ಬರನ್ನು ನಂಬಲ್ಲ
ಕ್ಷಣಕ್ಕೊಂದು ಮನಸ್ಸು ಬಿಡಬಾರದೆ
ಯಾರಿಲ್ಲಿ ಒಳ್ಳೆವ್ರು ಯಾರಿಲ್ಲಿ ಕೆಟ್ಟವ್ರು
ಯಾರನ್ನು ನಮ್ಮವರೆಂದು ನಂಬಬೇಕು
ನಮ್ಮಂಗೆ ಇರ್ತಾರೆ ನಮಗೆ ಚೂರಿ ಹಾಗ್ತಾರೆ
ಅವರಿವರು ಸರಿಯಿಲ್ಲವೆಂದು ಹೇಳ್ತಾರೆ
ಮುಖ ನೋಡಿ ಮೊಳ ಹಾಕೋದು ಬಿಡಬೇಕು
ಬಟ್ಟೆ ನೋಡಿ ಮಣಿ ಹಾಕೋದು ಬಿಡಬೇಕು
ಹಣಕ್ಕಾಗಿ ಬೆಲೆ ಕೊಡುವವರ ನಂಬ ಬಾರದು
ಗುಣ ನೋಡಿ ಗೆಳೆತನಕ್ಕೆ ಬೆಲೆ ಕೊಡಬಹುದು
ಸಾವಿರ ಸುಳ್ಳುಗಳ ಹೇಳುವರ ನಂಬುವುದೆ
ಸಾವಿನಿಂದ ಬದುಕಿಸಿದವರ ನಂಬುವುದಿಲ್ಲವೆ
ಮನದಲ್ಲಿ ಮುಳ್ ಚಿಗುರಿ ಮರೆಯಲ್ಲಿ ಚುಚ್ಚಿ
ಮರೆಯಲ್ಲಿ ನಗುವಂತರ ನಂಬುವರು ಮೆಚ್ಚಿ
ಪ್ರಾಣಕ್ಕೆ ಪ್ರಾಣ ಎಂದವರ ಬಿಡುವರು
ಪ್ರಾಣಿತರ ನೋಡಿದವರು ನಂಬುವರು
ಕೋಣೆಯಲ್ಲಿ ಮರೆ ಮಾಚಿ ಕೇಳುವರು
ಸರಿ ಇಲ್ಲ ಎಂದವರ ಮನೆಯಲ್ಲಿ ಕರೆಯುವರು
ಮನುಜನ ಮರ್ಮ ತಿಳಿಯೋದೆಂಗಣ್ಣ
ಇವರು ಕಷ್ಟದ ಕಾಲಕ್ಕೆ ಬರುವರೇನಣ್ಣ
ಮಾತಲ್ಲಿ ಮರುಳು ಮಾಡುವರು ಕಾಣಣ್ಣ
ನೀತಿವಂತರೆ ತಪ್ಪು ಮಾಡ್ತಾರಣ್ಣ
- ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ