ಚುಟುಕುಗಳು.
ಭಾವಿಸುವ ಮನಸ್ಸು ಚೊಕ್ಕಟವಾಗಿರಲಿ
ನೋಡುವ ದೃಷ್ಟಿ ನಿರ್ಮಲವಾಗಿರಲಿ
ಕೇಳುವ ಕಿವಿ ಎಚ್ಚರಿಕೆಯಿಂದಿರಲಿ
ನಡೆಯುವ ನಾಲಿಗೆ ಹಿಡಿತದಲ್ಲಿರಲಿ
ಮಾಡುವ ಕೈಗಳು ಮಡಿಯಿಂದಿರಲಿ
ಇವುಗಳನ್ನೆಲ್ಲ ಅನುಸರಿಸಿದರೆ ನಮ್ಮ ಶೀಲ ನಮ್ಮ ಕೈಯಲ್ಲಿದೆ. (೧)
ಜನ ನಮ್ಮನ್ನು ಮೆಚ್ಚಿದ ಆಗಲು ಕೊಂಡಾಡುತ್ತಾರೆ
ನಮ್ಮಿಂದ ಏನಾದರೂ ಪಡೆಯಬೇಕಾದರೂ ಕೊಂಡಾಡುತ್ತಾರೆ ಆದುದರಿಂದ ಕೊಂಡಾಡುವ ವರ ಉದ್ದೇಶವನ್ನು ಕಂಡುಕೊಳ್ಳುವುದು ಒಳ್ಳೆಯದು(೨)
ಎಂಥ ದೊಡ್ಡ ಪದವೀಧರನಗ ಬೇಕಾದರೂ ಒಂದು ಒಂದು ತರಗತಿಯನ್ನು ದಾಟುತ್ತಾ ಹೋಗಬೇಕಾಗುತ್ತದೆ
ಎಂತಹ ದೊಡ್ಡ ಕಟ್ಟಡವನ್ನು ಕಟ್ಟಬೇಕಾದರೆ
ಒಂದೊಂದು ಇಟ್ಟಿಗೆಯನ್ನೂ ಇಡುತ್ತಾ ಸಾಗಬೇಕಾಗುತ್ತದೆ ಸುಮ್ಮನೆ ಅವಸರ ಮಾಡಿದರೆ ಅವಗಡಕ್ಕೆ ಗುರಿಯಾಗಬೇಕಾಗುತ್ತದೆ ಆದರೆ ಗುರಿ ತಲುಪಲಾರೆವು.(೩)
✍️ ಸವಿತಾ ಆರ್ ಅಂಗಡಿ ಮುಧೋಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ