ಶನಿವಾರ, ಆಗಸ್ಟ್ 14, 2021

ನಾಗಾಭಿಷೇಕ (ಕವಿತೆ) - ಶ್ರೀಮತಿ ಸೂಗಮ್ಮ ಡಿ ಪಾಟೀಲ್.

ನಾಗಾಭಿಷೇಕ

ಕಲ್ಲ ನಾಗರಿಗೆ ಬೆಲ್ಲದ ಹಾಲು ಎರೆವರು
ಅಳ್ಳು ಬೆಲ್ಲದುಂಡಿಯ ನೈವೇದ್ಯ ಮಾಡುವರು
ದಿಟದಿ ನಾಗ ಕಂಡರೆ ಕೊಲ್ಲೆಂದು ಕೂಗುವರು ಶಾಪ ಪರಿಹಾರಕೆಂದು ಊರೆಲ್ಲ ಸುತ್ತುವರು
ಸುತ್ತಿ ಬೇಸತ್ತು ಅಪರಾಧಿತನದಿ  ಬೇಯಿವರು!!

ಕಲ್ಲ ನಾಗರಿಗೆ ಹಾಲನ್ನು ಎರೆವ ನಮ್ಮ  ಜನರು
ಹಸಿದ ಹೊಟ್ಟೆಗೆ ತುತ್ತು ಅನ್ನವ ನೀಡದಾದರು 
ಉಣ್ಣದ ನಾಗನಿಗೆ ಪ್ರಸಾದವ ಮಾಡುವರು
ಉಣ್ಣೋ ಗುರುವಿಗೆ ನೀಡಲು ಯೋಚಿಸುವರು
ದೇವರ ಹೆಸರಲ್ಲಿ ಮಾಡುವರೆಲ್ಲವ ಮರುಳರು!!

ಮಾಡದಿರಿ ನೀವು  ವ್ಯರ್ಥ ಹಾಲಿನ ಅಭಿಷೇಕವ
ಮಾಡುತಿರಿ ಹಸಿದೂಟ್ಟೆ  ತುಂಬಿಸೋ ಔತಣವ
ತೊರೆಯಿರಿ ಮೌಢ್ಯವ ಬಾಳೋದೆ ನಿನ್ನ  ಗೌರವ
ಸ್ವಚ್ಚ ಮನದಿ ಪೂಜಿಸಿ ನೀಡುವ ನಾಗ ವರವ  
ಬೇಡಿ ಬಡವನಾಗದಿರು ದಾನಿಯಾಗು ಮಾನವ

ಕೊಡದೇ ದಾನಿಯಾಗಲಾರೆ ನೀ ಎಂದಿಗೂ
ಪಡೆದು ಭಿಕ್ಷುಕನಾಗಲಾರೆ ನೀ ಇಂದಿಗೂ
ಸಹಕಾರದಿಂದ  ಸಹಾಯ ಮಾಡುತ್ತ ಸಾಗು
ಮೌಢ್ಯವ ಮೆಟ್ಟಿ ನಡೆ ನೀ ಎಂದೆಂದಿಗೂ
ಬದಲಾಗಿ ಬಾಳು ಮನವೇ ನೀ ಕೊನೆವರೆಗೂ!!

             
- ಶ್ರೀಮತಿ ಸೂಗಮ್ಮ ಡಿ ಪಾಟೀಲ್
ಉತ್ನಾಳ್ ಗ್ರಾಮ (ಬಿಜಾಪುರ ಜಿಲ್ಲೆ)
ಬಿಜಾಪುರ ತಾಲೂಕು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...