ಗುರುವಾರ, ಆಗಸ್ಟ್ 12, 2021

ತವರು (ಜಾನಪದ ಶೈಲಿ ತ್ರಿಪದಿ) - ಭವ್ಯ ಟಿ.ಎಸ್.ಶಿಕ್ಷಕರು, ಹೊಸನಗರ. ಶಿವಮೊಗ್ಗ.


ತವರು

ತವರೂರು ನೆರಳೀವ ಆಲದ ಮರದಂಗ
ಕಷ್ಟಸುಖಕೆ ಮರಗುವರು//ತಾಯ್ತಂದೆ
ಕೊನೆವರೆಗೂ ಆಸರೆಯಾಗುವರು//

ತವರೀನ ಹಾದೀಲಿ ಬೆಳ್ದಿಂಗಳು ಚೆಲ್ದಂಗ
ಹೆತ್ತವ್ವನ ಮಖದಲ್ಲಿ ಚಂದ್ರಮ//ಕಂಡವ್ನೆ
ನೋವುಂಡು ತವರ ಬೆಳಗ್ಯಾಳೋ//

ತವರ ಮನೆಯು ಗುಡಿಸಲಾದರೇನು
ಕೂಸಿಗೆ ಅದೇ ಅರಮನೆಯು//ಅವ್ವನ
ಮಡಿಲಲ್ಲಿ ಸ್ವರ್ಗನೇ ಕಂಡೇನು//

ಹುಟ್ಟಿ ಬೆಳೆದ ಮನೆ ತವರಾದರೇನು
ಸೇರಿ ಗಂಡನ ಮನೆಯ//ನಾನಾದೆ
ಬಂದ್ಹೋಗೋ ನೆಂಟ್ತಿ ತವರೀಗೆ//

- ಭವ್ಯ ಟಿ.ಎಸ್.
ಶಿಕ್ಷಕರು.ಹೊಸನಗರ
ಶಿವಮೊಗ್ಗ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...