ಶನಿವಾರ, ಆಗಸ್ಟ್ 14, 2021

ಬಿಕ್ಕಿ ಅಳುತಿದೆ ಮನ (ಕವಿತೆ) - ಶ್ರೀ ತುಳಸಿದಾಸ ಬಿ ಎಸ್ ರಾಯಚೂರು.

ಬಿಕ್ಕಿ ಅಳುತಿದೆ ಮನ 

ಮಾಯ ಜಾಲಕೆ ಸೋತು
ಹೊತ್ತ ನಾಡನು ಬಿಟ್ಟೆ
ವಾಯುಯಾನದಿ ನೆಲೆಸೆ
ಗಾಯ ಅಂದೆ ಮನಕೆ

ಎಷ್ಟು ಗಳಿಸಿದರೇನು?
ಇಷ್ಟವಾದೀತೆ ನೆಲವು?
ಭಾರತಾಂಬೆಯ ಪಾಠ
ನನ್ನ ಕಾಯಿತಲಿಹುದು

ಹೆತ್ತ ಜೀವದ ಕೊರಗು
ನಿತ್ಯ ಸುಡತಿದೆ ನನ್ನ
ತಣ್ಣಗಾಗದ ಕೋಪ
ಮಣ್ಣು ಸೇರುವವರೆಗು

ಬಂಧ ಕಳಚುವ ಕ್ಷಣವು
ಬಂದು ನಿಲ್ಲಲು ಬೆವೆತೆ
ಅಲ್ಲಿ ಚೆಲುವೆಗೆ ಸೋತು
ಕೈಯ ಹಿಡಿದೆನು

ಯಾರು ನನ್ನವರಿಲ್ಲಿ
ದೂರ ಮಣ್ಣಿನ ಋಣವು
ತಾಯಿ ನಾಡಿನ ಸವಿಗೆ
ಬಿಕ್ಕಿ ಅಳುತಿದೆ ಮನವು

- ಶ್ರೀ ತುಳಸಿದಾಸ ಬಿ ಎಸ್
ಸಹ ಶಿಕ್ಷಕರು, ರಾಯಚೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಣಿಜ್ಯ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...