ಸೋಮವಾರ, ಆಗಸ್ಟ್ 23, 2021

ಸ್ನೇಹ ಸಂಬಂಧ- ಸಾಟಿ ಇಲ್ಲದ ಬಂಧ (ಲೇಖನ) - ಎಲ್.ಎಸ್. ಆಶಾಶ್ರೀಧರ್. ಶಿವಮೊಗ್ಗ.

ಸ್ನೇಹ ಸಂಬಂಧ- ಸಾಟಿ ಇಲ್ಲದ ಬಂಧ

ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ. ಸ್ನೇಹ ಗುಡಿಯಾದರೆ ಪ್ರೀತಿ ದೇವರು. 'ಸ್ನೇಹ' ಎಂಬ ಸಂಸ್ಕೃತ ಪದದ ಅರ್ಥ ಎಣ್ಣೆ ಎಂದು.  ಗೆಳೆತನ ಅದರಂತೆಯೇ ಜಿಗುಟಾಗಿರಬೇಕು ಎಂದರ್ಥ. 
   ಸ್ನೇಹಿತರೆಂದೂ ಸ್ವಾರ್ಥಿಗಳಲ್ಲ. ಆದರೆ ಇಲ್ಲ ಅಂತ ಹೇಳಲಿಕ್ಕಾಗುವುದಿಲ್ಲ. ಆದರೆ ಶ್ರೀಹರಿಗಿಂತ ಉತ್ತಮ ಸ್ನೇಹಿತ ಮತ್ತೊಬ್ಬರಿಲ್ಲ. ಎಷ್ಟು ಹುಡುಕಿದರೂ ಅವನಲ್ಲಿ ಸ್ವಾರ್ಥ ಕಾಣಿಸುವುದೇ ಇಲ್ಲ. ಉತ್ತಮ ಗೆಳೆತನಕ್ಕೆ ಕೃಷ್ಣ ಸುಧಾಮರ, ರಾಮಾಂಜನೇಯರ ಉದಾಹರಣೆ ತೆಗೆದುಕೊಳ್ಳಬಹುದು. ಉತ್ತಮ ಗೆಳೆತನಕ್ಕೆ ಯಾವುದೇ ಜಾತಿ ಅಂತಸ್ತಿರುವುದಿಲ್ಲ. ರಕ್ತಸಂಬಂಧಕ್ಕಿಂತ ಸ್ನೇಹ ಸಂಬಂಧ ದೊಡ್ಡದು.
  1935ರಲ್ಲಿ ಅಮೇರಿಕಾದಲ್ಲಿ ನಡೆದ ಘಟನೆಗೆ, ಸ್ನೇಹಕ್ಕೆ, ಸ್ನೇಹಿತರಿಗೆ ಗೌರವ ನೀಡುವ ಸಂಬಂಧ ಅಮೇರಿಕಾದಲ್ಲಿ 1958 ರಲ್ಲಿ ಗ್ರೀಟಿಂಗ್ ಕಾರ್ಡನ್ನು ತಯಾರಿಸಿ ವಿಶ್ವ ಸ್ನೇಹಿತರ ದಿನಾಚರಣೆಯನ್ನು ಆಚರಿಸಿದರು. 
      ನಿರ್ಮಲ, ಪವಿತ್ರ, ಅಮೂಲ್ಯವಾದ ವಿಶ್ವಾಸವುಳ್ಳ ಸ್ನೇಹ ದೊರೆಯುವುದೇ  ಅಪರೂಪವಾಗಿದೆ. ಸಿಕ್ಕರೆ ಅವನೇ ಧನ್ಯ. ಉತ್ತಮ ಸ್ನೇಹಿತರು ಕಷ್ಟದ ಜೀವನದ ಪಯಣದಲ್ಲಿ ಬಿಸಿಲು,ಮಳೆ ತಡೆಯುವ ಕೊಡೆಗಳಿದ್ದಂತೆ. ಪ್ರಪಂಚದ ಸುಂದರವಾದ, ಬೆಲೆಕಟ್ಟಲಾಗದ ಸಂಬಂಧ, ಜೀವನ ನಡೆಸಲು ಸ್ಫೂರ್ತಿ ಅಂದರೆ ಅದು ಸ್ನೇಹ. ಒಬ್ಬ ಒಳ್ಳೆಯ ಸ್ನೇಹಿತ ಅವನ ಗೆಳೆಯ, ಅವನು ಹೇಗೇ ಇದ್ದರೂ ಅವನನ್ನು ಪ್ರೀತಿಸುತ್ತಾನೆ. ಏಕೆಂದರೆ ರಕ್ತ ಸಂಬಂಧಿಗಳಿಗಿಂತಲೂ ಹೆಚ್ಚು ಅರ್ಥ ಮಾಡಿಕೊಂಡಿರುತ್ತಾನೆ.  
       ಕವಿ ಚೆನ್ನವೀರ ಕಣವಿ ಅವರು ಒಂದು ಕವಿತೆಯಲ್ಲಿ ಹೇಳ್ತಾರೆ- "ಇನಿವಿರಿದು ಗೆಳೆತನದ ಗುಟ್ಟಿಹುದು ನಲ್ಗೆಳೆಯ ಭಿನ್ನಣದ ನುಡಿಯಲ್ಲಿ ಎದೆಯ ಮೀಟಿ ಜೀವ ಜೀವಕೆ ಇಂಬುಕಾಯ್ವರು. ನಾಲ್ವರಿರೆ ಚದುರಂಗ ಬಲವಿದಕೆ ಯಾವ ಸಾಟಿ", ಎಷ್ಟು ಚೆನ್ನಾಗಿ ಹೇಳಿದ್ದಾರೆ. ಕಷ್ಟ ಸುಖದಲ್ಲಿ ಜೊತೆಯಾಗುವ ಶುದ್ಧಮನದ ನಾಲ್ಕು ಜನ ಗೆಳೆಯರಿದ್ದರೇ ಬೇರೆ ಯಾವ ಬಲಕ್ಕೂ ಸಾಟಿ ಇಲ್ಲ. 
       ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಅಪರಿಚಿತರಾಗಿ ನಮ್ಮ ಜೀವನದಲ್ಲಿ ಬಂದು ಶಾಶ್ವತವಾಗಿ ಉಳಿಯುವ ಸುಂದರವಾದ ಸಂಬಂಧವೇ ಸ್ನೇಹ. ಗೆಳೆತನ ಒಂದು ಅಮೂಲ್ಯ ಸಂಪತ್ತು. ಬದುಕಿನ ವಿವಿಧ ಹಂತಗಳಲ್ಲಿ ಆತ್ಮೀಯರಾಗುವ ಜನರಲ್ಲಿ ಸಮಾನ ಮನಸ್ಕತೆ ಇದ್ದರೆ ಉತ್ತಮ ಗೆಳೆಯರಾಗಿ  ಜೊತೆಯಾಗುತ್ತಾರೆ, ಶಾಶ್ವತವಾಗಿ ಉಳಿಯುತ್ತಾರೆ. ಆದರೂ ಚಿಕ್ಕಂದಿನ ಗೆಳೆತನ ಇನ್ನೂ ಕಾಪಾಡಿಕೊಂಡು ಬಂದಿರುವುದು, ಅಂದು ನಾವು ವಿನಿಮಯ ಮಾಡಿಕೊಂಡ ವಸ್ತುಗಳನ್ನು ಇನ್ನೂ ಜೊತೆಯಿಟ್ಟುಕೊಂಡು ಮರಳಿ ಮರಳಿ ನೋಡುವುದರಲ್ಲಿರುವ ಆನಂದ ಬೇರೆಲ್ಲೂ ಸಿಗುವುದಿಲ್ಲ. ಅಂತಹ ಒಂದು ಅನುಭವ ನನ್ನಲ್ಲಿರುವುದು ನನಗೆ ಖುಷಿಯ ವಿಚಾರ. ವಠಾರದಲ್ಲಿದ್ದ ನಾವುಗಳು ಲಿಂಗಭೇದ ವಿಲ್ಲದೇ,ಜಾತಿ,ಅಂತಸ್ತುಗಳ ಭೇದವಿಲ್ಲದೇ ಜೊತೆಯಾಟವಾಡಿದ ನೆನಪು ಅದೆಷ್ಟು ಸೊಗಸು..!        
ಹಲವಾರು ನೆನಪುಗಳು ಅವುಗಳಿಗೆ ಜೊತೆಯಾಗುತ್ತವೆ. 
ನಮ್ಮ ಸುಧಾಮೂರ್ತಿ ಅಮ್ಮ ಅವರು ಹೇಳಿದಂತೆ, ಅತ್ಯುತ್ತಮ ಗೆಳೆಯರು ಎಂದರೆ-ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ. ನಿಜ ಅಲ್ವೇ. ಸಂಸಾರದಲ್ಲಿ ಪ್ರೀತಿಯ ಜೊತೆಗೆ ಸ್ನೇಹವೂ ಮಿಳಿತಗೊಂಡಾಗ ಎಂಥಾ ಕಷ್ಟಗಳನ್ನೂ ನಿವಾರಿಸಿಕೊಳ್ಳಬಹುದು.
ಒಬ್ಬ ಉತ್ತಮ ಗೆಳೆಯ ಹೇಗೆ ಅಂದ್ರೆ- ನಮ್ಮ ನಗುವಿಗೆ ಜೊತೆಯಾಗುವ ನೂರಾರು ಗೆಳೆಯರಿಗಿಂತ ನಮ್ಮ ಕಣ್ಣೀರಿಗೆ ಸ್ಪಂದಿಸುವವನಾಗಿರುತ್ತಾನೆ.
    ಗೆಳೆತನದಲ್ಲಿ ಗೆಳೆಯರ ಆಸೆ ಹಲವು ಬಗೆಯದಿರಬಹುದು. ಒಬ್ಬರಿಗೆ ಕಾಡುವಂತ ಗೆಳೆಯ ಬೇಕು ಎನಿಸಿದರೆ, ಇನ್ನೊಬ್ಬರಿಗೆ ನಗುವಿನಲ್ಲಿ ಮಾತ್ರವಲ್ಲದೇ ಕಷ್ಟದಲ್ಲಿಯೂ ಸಹ 'ನಾಇರುವೆ' ಎಂದು ಭರವಸೆ ಕೊಡುವ ಗೆಳೆಯ ಬೇಕು. ಹೀಗೆ.....

ಮನುಷ್ಯರು ಸದಾ ಹೇಳುತ್ತಾರೆ-ಜೀವಂತವಿದ್ದರೆ ಮುಂದೆ ಭೇಟಿಯಾಗೋಣ ಅಂತ. ಆದರೆ ಒಬ್ಬ ಒಳ್ಳೆಯ ಗೆಳೆಯ ಹೇಳ್ತಾನೆ-ಭೇಟಿಯಾಗ್ತಾ ಇದ್ರೆ ಜೀವಂತವಾಗಿರ್ತೀವಿ ಅಂತ. ಎಂಥಾ ಮಾತು!. ಗೆಳೆತನದಲ್ಲಿ ಏನೆಲ್ಲಾ ಭಾವನೆಗಳು ಬರ್ತಾವೆ ನೋಡಿ- ಕಭಿ ಜಗಡಾ, ಕಭಿ ಮಸ್ತಿ, ಕಭಿ ಆಂಸೂ, ಕಭಿ ಹಸೀ, ಚೋಟಾಸ ಫಲ್, ಚೋಟೀ ಚೋಟೀ ಖುಷಿ, ಏಕ್ ಪ್ಯಾರ್ ಕೀ ಕಶ್ತೀ ಔರ್ ದೇರ್ ಸಾರಿ ಮಸ್ತಿ, ಬಸ್ ಇಸ್ಕೀ ನಾಮ್ ತೋ ಹೈ *ದೋಸ್ತೀ*.
       ಗೆಳೆತನ ಅನ್ನೋದು ಒಂದು  ನಿಶ್ಯಬ್ದ ಬಂಧ ಅಂತಾನೆ ಹೇಳಬಹುದು. ಹೆಚ್ಚು ಹಳೆಯದಾದ, ಹೆಚ್ಚು ಗಟ್ಟಿಯಾದ, ಆಳವಾದ, ಸ್ಪಷ್ಟವಾದ, ಹತ್ತಿರವಾದ, ಬೆಚ್ಚನೆ ಭಾವ ನೀಡುವಂತಹ, ಕಡಿಮೆ ಮಾತಿನ ಹೆಚ್ಚು ಅರ್ಥ ಮಾಡಿಕೊಳ್ಳುವ ಒಂದು ಅತ್ಯುತ್ತಮ ಭಾವನೆ. ಇಂತಹ ಸ್ನೇಹಿತರು ದೊರೆತರೆ ಆ ಸ್ನೇಹಿತ ಧನ್ಯ.  ದ್ವೇಷ ಸಾವನ್ನು ತಂದರೆ, ಸ್ನೇಹ ಸಾವನ್ನೇ ಜಯಿಸುತ್ತೆ ಅಂತ ಅನ್ನೋ ಮಾತು ನಿಜವಾದುದು.  ಪ್ರೀತಿ ನಿನಗೇನಾದ್ರೂ ಆದ್ರೆ ನಾನ್ ಬದುಕಿರೋಲ್ಲ ಅಂತ ಅಂದ್ರೆ, ಸ್ನೇಹ ನಿನಗೇನಾಗಲಿಕ್ಕೂ ನಾನ್ ಬಿಡೋದಿಲ್ಲ ಅಂತನ್ನುತ್ತಂತೆ. ಎಷ್ಟೋ ಜನ ಹೇಳಿದ್ದು ಕೇಳಿರ್ತೀವಿ- ಮೊದಲು ಪರಿಚಯವಾಯ್ತು,  ನಂತರ ಸ್ನೇಹ ಆಯ್ತು, ಆಮೇಲೆ ಪ್ರೀತಿ ಆಗಿದ್ದು ಅಂತ. ಪ್ರೀತಿಗೆ ಸ್ನೇಹವೇ ಸೇತುವೆಯಾಗಿದ್ದು ಅಲ್ವೇ. ಸ್ನೇಹವ ಬಯಸದ ಜೀವವೇ ಇಲ್ಲ ಎನ್ನಬಹುದು. ಆದರೂ ವ್ಯಕ್ತಿಯನ್ನು ನೋಡಿ ಮಾಡುವ ಸ್ನೇಹಕ್ಕಿಂತ ವ್ಯಕ್ತಿತ್ವ ನೋಡಿ ಮಾಡುವ ಸ್ನೇಹ ಬಹಳ ಗಟ್ಟಿಯಾಗಿ ನಿಲ್ಲುವುದು.  ಪ್ರಕೃತಿಯಲ್ಲೂ ಸಹ ನಾವು ಇದನ್ನು ಕಾಣಬಹುದು. 

ಈಗಿನ ಮಕ್ಕಳು ಮೊಬೈಲ್ ಗೇಮ್ ಗಳನ್ನು  ಸ್ನೇಹಿತರೊಡನೆ ಆಡುವುದರಲ್ಲಿ  ಅದೇನು ಸೊಗಸು ಕಾಣುತ್ತಾರೋ ನಾನಂತೂ ಅರಿಯೇ. 
 **ಗೆಳೆತನದ* *ಸುವಿಶಾಲ* *ಆಲದಡಿ* *ಪಸರಿಸಿಹ* 
 *ತಣ್ಣೆಳಲ ತಂಪಿನಲಿ** **ತಂಗಿರುವೆನು* 
 *ಗೆಳೆತನವೆ ಈ ಬಾಳ* *ಸಂಜೀವಿನಿ** 
 *ವಿಶ್ವದಂತಹಕರಣ* *ನುಂದಾಕಿನಿ* 
ಎನ್ನುವ 
.... *ಕವಿ ಚೆನ್ನವೀರ ಕಣವಿ...** ಯವರ ಮಾತಿನಂತೆ 
     ಸರಿಸಾಟಿ ಇಲ್ಲದ ಅನುಬಂಧ ಸ್ನೇಹಿತರ ಈ ಸಂಬಂಧ. ಸಹಜ ಸ್ನೇಹ ಮಧುರ, ಕೊನೆಯಿರದ ಸ್ನೇಹ ನಮ್ಮದಾಗಿರಲಿ.
 ಇಂತಹ ಸ್ನೇಹಕ್ಕೆ  ನನ್ನ ಒಂದು ನಮನ. 
    
-ಎಲ್.ಎಸ್. ಆಶಾಶ್ರೀಧರ್. ಶಿವಮೊಗ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...