ಶನಿವಾರ, ಜನವರಿ 1, 2022

ರೈತಣ್ಣನಿಗೊಂದು ನಮನ (ಕವಿತೆ) - ಶಾಂತಾರಾಮ ಶಿರಸಿ

 ಅರಿತವರು ಅನುಭವದಿಂದ ಹೇಳಿಹರು ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲೆಂದು, 
"ಮೇಟಿಯಿಂ ರಾಟೆ ನಡೆದುದಲ್ಲದೆ-ದೇಶ
ದಾಟವೆ ಕೆಡಗುಂ"ಸರ್ವಜ್ಞ ನ ನುಡಿ ಅರಿಯಬೇಕು ಶ್ರೇಷ್ಠ ವೆಂದು, 
ಜೈ ಕಿಸಾನ್ ಎಂದು ಕೂಗಿ ಸಾರಿ-ಸಾರಿ ಹೇಳಿಹರು ಶ್ರೇಷ್ಠರು ಅಂದು, 
ರೈತನಿಗೆ ನಮಿಸುತಿರು ಎಂದೆಂದೂ.. 

ಹಸಿವ ನೀಗಿಸಿ ಒರೆಸುವನು ಕಂಬನಿ,
ಶ್ರೇಷ್ಠ ಕಾಯಕದ ಹಿಂದಿದೆ ರೈತನ ಬೆವರ ಹನಿ,
ಹಗಲು-ರಾತ್ರಿ ಎನ್ನದೇ ಸುರಿಸುವನು ಯಾರಿಗೂ ಕಾಣದಿರುವ ಕಣ್ಣ ಕಂಬನಿ..

ಭೂ ತಾಯಿಯ ಪ್ರೀತಿಯ ಕುವರ, 
ಭೂಮಿಯನು ಉತ್ತಿ-ಬಿತ್ತಿ ಉಳುಮೆಯ ಮಾಡಿ ಕಾಣುವನು ಬೆಳೆದು ನಿಂತ ಪೈರಿನ  ಹಸಿರ,
ರೈತನಿಗೆ ಬೆನ್ನೆಲುಬಾಗಿ ನಿಲ್ಲುತ್ತವೆ ನೇಗಿಲು-ನೊಗ, ರಗಡ್ ಎತ್ತು-ಕೋಣ, ಆಧುನಿಕ ಯಂತ್ರ-ಜ್ಞಾನದ ತಂತ್ರ, 
ರೈತನು ಬೆಳೆದ ಹಸಿರಿನಿಂದ ನಾವಾಡುತಿಹೆವು ಉಸಿರ, 
ಅನ್ನ - ಆಹಾರದ ಹಿಂದಿದೆ ರೈತನ ಬೆವರಿನ ಶ್ರಮ ಅಪಾರ, 
ಅನ್ನವನು ನೀಡಿ ಹಸಿವ ನೀಗಿಸುವ ಸರದಾರ, 
ನಾವು ಬದುಕಲು ರೈತನೇ ಆಧಾರ, 
ರೈತನಿಗೆ ನಮಿಸುತಿರು ನಿರಂತರ, 
ಜೈ ಕಿಸಾನ್ ಎಂಬ ಶ್ರೇಷ್ಠರ ನುಡಿಯು ಹೊತ್ತಿದೆ ಭಾರ, 
"ಅನ್ನತೋ ಪ್ರಾಣ:
ಪ್ರಾಣತೋ ಪರಬ್ರಹ್ಮ"
"ಅನ್ನದಾತೋ-ಸುಖೀಭವ" ನಿತ್ಯ-ಸತ್ಯ ಸಾರ
ಕೃಷಿಯಿಂದ ಕೂಡಿದ ಬದುಕು
ಖುಷಿಯಿಂದ ಮುಂದೂಕು... 
-  ಶಾಂತಾರಾಮ ಶಿರಸಿ, 
ಉತ್ತರ ಕನ್ನಡ.. 
8762110543



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...