ಮತ್ತೆ ಬಂದಿತಿದೋ ಹೊಸ ಕ್ಯಾಲೆಂಡರ್ ವರುಷˌˌˌ
ತರಲಿ ಮನೆಮನಗಳಲ್ಲೂ
ಹೊಸ ಹರುಷˌˌˌ
ವಸಂತನಾಗಮನಕೆ ಮಾವು ಚಿಗುರುವಂತೆˌˌ
ಅಣಿಗೊಳಿಸು ಮನವ ಮರೆತೆಲ್ಲ ಚಿಂತೆˌˌˌ
ಕಳೆದ ಕಹಿ ನೆನಪುಗಳ ಮೆಲುಕದಿರು ಮುಂದೆˌˌ
ಹೊಸ ಗುರಿಯೆಡೆಗೆ ಶುರುವಾಗಲಿ ಪಯಣ ಇಂದೆˌˌ
ನವ ಸಂವತ್ಸರ ತರಲಿ ಹೊಸ ಹೊಸ ಸಂಕಲ್ಪವˌˌ
ಅಡೆತಡೆಗಳ ಮೀರಿ ಒಳಿತೆಡೆಗೆ ಮುನ್ನುಗ್ಗುವˌˌˌ
ನೆಲಜಲ ಪ್ರಾಣ ವಾಯು ಪ್ರಕ್ರತಿ ನಿತ್ಯನೂತನˌˌˌ
ಹೊಸ ಸಂವತ್ಸರ ಮೂಡಿಸಲಿ ನಿನ್ನಲೂ ನಿತ್ಯ ಚೇತನˌˌˌ
ಹಳೆಯ ಬೇರಿನೊಡನೆ ಹೊಸ ಕುಡಿ ಚಿಗುರುತಿದೆˌˌ
ಕಳೆಯ ತೊಡೆಯಲು ಮತ್ತೆ ಹೊಸ ದಿನ ಬಂದೇ ಬರುತಿದೆˌˌ
ಅಣಿಯಾಗು ಸ್ವಾಗತಿಸಲು
ಹೊಸ ದಿನದ ಕ್ಷಣಗಳನುˌˌ
ಋಣಿಯಾಗು ದೈವಕೆ
ಸೂಸುತಿಹನು ಬೆಳ್ಳಿ ಕಿರಣವನುˌˌˌ
- ಮಧುಮಾಲತಿ ರುದ್ರೇಶ್, ಬೇಲೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ