ಮೂಡಿಸುವೆ ಹೂ ಮಲ್ಲಿಗೆ
ನಲ್ಲೆ ನಾ ನಿನ್ನ ಮುಡಿಗೆ
ಮನ ಸೂರೆಗೊಂಡಿದೆ ಆ ನಿನ್ನ ಹೂ ನಗೆ.
ದೇಹಕ್ಕೆ ಮುಪ್ಪಾದರೂ
ಪ್ರೇಮಕೆ ಮುಪ್ಪು ಬಾರದೂ
ಸಂಗಾತಿ ಇದು ನಿತ್ಯ ಸತ್ಯ ತಿಳಿ ಎಂದೂ.
ಅರೆಯದಲ್ಲಿ ನನ್ನ ವರಿಸಿ
ನೀನಾದೆ ನನ್ನಾರಸಿ
ಪ್ರೀತಿಯ ಬೆಳಕನು ಬಾಳಲಿ ಪಸರಿಸಿ.
ಕಷ್ಟ ನೂರು ಬಂದರೂ
ಜೊತೆಯಾಗಿ ನಿಂತೆ ನೀನೂ
ಸಂಸಾರದ ಸಾರ ಅರಿತಾ ರಾಣಿ ಜೇನು.
ಮಡದಿಯಾಗಿ,ಮಾತೆಯಾಗಿ
ನನ್ನ ಪ್ರಿಯ ಸ್ನೇಹಿತೆಯಾಗಿ
ನೀನಿಂತೆ ನನ್ನಯ ಬಾಳಿಗೆ ಆಸರೆಯಾಗಿ.
ನಿನಗಾಗಿ ನೀ ಎಂದೂ
ನನ್ನ ಕೇಳಲಿಲ್ಲ ಏನನೂ
ಮೂರು ಮೊಳದ ಮಲ್ಲಿಗೆ ಒರತು ಏನು ನೀನೂ.
ಮುಪ್ಪಿನಲ್ಲಿ ಮಕ್ಕಳು ಕೈ ಬಿಟ್ಟಾಗ
ನನ್ನ ಕೈ ಹಿಡಿದು ನೀ ಮಂದಹಾಸ ಬೀರಿದಾಗ
ನವ ಚೈತನ್ಯ ತುಂಬಿದೆ ನನ್ನೆದೆಯ ಗೂಡಿನಾಗ.
ನಿನಗೆ ನಾನು,ನನಗೆ ನೀನು
ಇಬ್ಬರೂ ಸೇರಲು ಹಾಲು ಜೇನು
ಎನ್ನುತಾ ನಿನ್ನ ಮುಡಿಗೆ ಮಲ್ಲಿಗೆ ಮೂಡಿಸುವೆ ನಾನು.
✍️ಶ್ರೀಮತಿ ಭಾಗ್ಯ ಗಿರೀಶ್
ಹೊಸದುರ್ಗ
ಮೊ :-9611092394
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ