ನೀರೇ ನೀರೇ ನೀನೆಷ್ಟು ಸುಂದರೆ
ನೀನಿಲ್ಲದಿರೆ ಇಲ್ಲವೇ ಈ ಧರೆ
ಎಂತಹ ಅದೃಷ್ಟವಂತೆ ಈ ವಸುಂದರೆ
ಭುವಿಯಲ್ಲೂ ನೀನೇ ನೀರೇ
ಬಾನಲ್ಲೂ ನೀನೇ ನೀರೇ
ಹಸಿರು ಚಿಗುರಲು ನೀನೇ ನೀರೇ
ಹೂವ ನಗುವಲು ನೀನೇ ನೀರೇ
ನೀನಿಲ್ಲದೆ ಹೂವು ಇರದು
ಹಣ್ಣು ಬಿರಿಯದು, ಕೋಗಿಲೆ ಉಲಿಯದು
ಜಗದಲ್ಲಿ ಎಲ್ಲವೂ ನಿಷ್ಕ್ರಿಯ
ಎಲ್ಲಾ ಜೀವಿಗಳಿಗೂ ನೀನೇ ಚೈತನ್ಯ
ಜಲವೇ ಇಲ್ಲದೆ ಜಲಚರ ವಿಲ್ಲ
ಜಲವೇ ಇಲ್ಲದೆ ಜನ ಜೀವನವಿಲ್ಲ
ಜಲವೆ ಸಕಲ ಜೀವಕ್ಕೆ ಜೀವನಾಧಾರ
ನಿನ್ನಿಂದಲೆ ಆದಿ, ನಿನ್ನಿಂದಲೇ ಅಂತ್ಯ
ನಿನ್ನನ್ನು ಸಿಂಗರಿಸಿದರೆ ನವ ವ ದುವೆ ನೀರೇ
ನೀನು ಮುನಿದರೆ ಮಾರಿಯೇ ನೀರೆ
ನೀನು ಒಲಿದರೆ ಮಮತೆಯ ಆ ಗರವೇ ನೀರೆ
ನಿನ್ನಿಂದಲೇ ಸಂತಸ ನಿನ್ನಿಂದಲೇ ದುಃಖ ನೀರೇ
- ವಿಜಯ ಲಕ್ಷ್ಮಿ. ಕೋಡಿಯಾಲ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕವನ ಚೆನ್ನಾಗಿದೆ. ಪ್ರಾಸ ಬದ್ದವಾಗಿದೆ.__ ಜಿ.ಎಸ್.ಪ್ರಕಾಶ್.ಬೆಂಗಳೂರು ೯೭.
ಪ್ರತ್ಯುತ್ತರಅಳಿಸಿ