ಭಾನುವಾರ, ಜನವರಿ 30, 2022

ವೀರ ಕನ್ನಡಿಗರು (ಕವಿತೆ) - ಸೂಗಮ್ಮ ಡಿ ಪಾಟೀಲ್

ಕನ್ನಡಾಂಬೆಯ ಗರ್ಭದಲ್ಲಿ ಎಂದು
ಜನಿಸಲಾರರು ಇಲ್ಲಿ ಹೇಡಿಗಳೆಂದು
ವೀರ ಮಾತೃವಿಗೆ ವೀರ ಮಕ್ಕಳಿವರು
ಸದಾ ತಾಯಿನಾಡ ರಕ್ಷಣೆಗೆ ನಿಂತಿಹರು!!೧!!


ಕನ್ನಡ ಮಣ್ಣಿನ ಕಣ ಕಣದಲಿ ಶೌರ್ಯವಿದೆ
ಕನ್ನಡಿಗರ ರಕ್ತದ ಹನಿ ಹನಿಯಲಿ ತ್ಯಾಗವಿದೆ
ನುಡಿದಂತೆ ನಡೆಯುವ ನಾಡು ನಮ್ಮದಾಗಿದೆ
ಸಹಸ್ರ ಕೋಟಿ ಕವಿಗಳ ಆಶ್ರಯತಾಣವಾಗಿದೆ!!


ಸ್ವರಾಜ್ಯದಲ್ಲಿ ಜನಿಸಿ ಪರರಾಜ್ಯದ ಮೋಹವೇಕೆ
ಕನ್ನಡಾಂಬೆಯ  ಮಡಿಲಲಿ  ಬೆಳೆದರೆ  ಸಾಕೆ
ತಾಯಿನೆಲದ ಋಣವಿದೆ ನಿಮ್ಮ ಮೇಲೆ ಜೋಕೆ
ನಾಡ ಋಣ ತೀರಿಸದೆ ಪರರಾಜ್ಯದ ಪ್ರಗತಿಬೇಕೆ


ಹಂಬಲವಿರಲಿ ನೀ ಜನಿಸಿದ ನೆಲದಲ್ಲಿ
ಬೆಂಬಲವಿರಲಿ ನೀ ಮೆಟ್ಟಿದ ಮಣ್ಣಲ್ಲಿ
ಶ್ರೇಷ್ಠತನವಿರಲಿ ಕನ್ನಡ ಮಾತಾಡುವಾಗಿಲ್ಲಿ
ಗರ್ವವಿರಲಿ ನಾವು ಕನ್ನಡಿಗರೆಂದಾಗಿಲ್ಲಿ!!


ರಾಜ್ಯದ್ರೋಹಿಗಳಿಗೆಂದು ಕನ್ನಡ ಒಲಿಯದಿಲ್ಲಿ
ಒಲಿದಿದ್ದರೆ ನಾವೇಕೆ ಕಲಿಯುತ್ತಿದ್ದೇವು ಅಲ್ಲಿ
ಆಂಗ್ಲ ಭಾಷೆಯನ್ನಲ್ಲವೇ ಅಂದು ಬ್ರಿಟಿಷರಲ್ಲಿ
ಕಲಿಸಿ ಬೆಳೆಸಿ ಕನ್ನಡ ನೆಲದಾಗ ಕನ್ನಡವನ್ನಿಲ್ಲಿ!!

                   -  ಸೂಗಮ್ಮ ಡಿ ಪಾಟೀಲ್
                ಉತ್ನಾಳ (ವಿಜಯಪುರ ಜಿಲ್ಲೆ )


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...