ಭಾನುವಾರ, ಜನವರಿ 30, 2022

ಸಂತೋಷದ ಹೊನಲು ಆದರ್ಶದ ಮುಗಿಲು ನಮ್ಮಿ ಅಪರೂಪದ ಗುರುಗಳು (ಲೇಖನ) - ಪೂಜಾ ಎಂ ಪಿ.

ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರಃ 
 ಗುರುವನ್ನ ಸಾಕ್ಷಾತ್ ದೇವರು ಎಂದು ಹೇಳುವ ಭಾರತೀಯರು, ಪ್ರಸ್ತುತದಲ್ಲಿ  ಈ ನುಡಿಯಿಂದ ಅಂತರ ಪಡೆದಂತಿದೆ. ಕೇವಲ ಪಠ್ಯ ಮಾತ್ರ ಹೇಳಿಕೊಡುವ ಭೋದಕರಾಗಿ ಬದಲಾಗಹೊರಟಿದ್ದಾರೆ. ಗುರುವೆಂದರೆ ಪ್ರತಿಯೊಬ್ಬ ವಿದ್ಯಾರ್ಥಿಯ ಮಾರ್ಗದರ್ಶಕರು, ತಮ್ಮ ವ್ಯಕ್ತಿತ್ವ ಮತ್ತು ನಡವಳಿಕೆಯಿಂದ ವಿದ್ಯಾರ್ಥಿಗಳ ಬಾಳಿಗೆ ಆದರ್ಶವಾಗಿ, ಸೋಲು - ಗೆಲುವನ್ನು ಸಮವಾಗಿ ಸ್ವೀಕರಿಸಿ ಮುನ್ನುಗ್ಗಲು ಸಹಕರಿಸೋ ಸ್ಪೂರ್ತಿಯ ಚಿಲುಮೆ.  ಬದುಕಿಗೆ ಬೇಕಾದ ಮೌಲ್ಯಗಳನ್ನು ಪರಿಚಯಿಸಿ ಅಳವಡಿಸಿಕೊಳ್ಳಲು ಪ್ರೇರೇಪಿಸಿ, ಅತ್ಯುತ್ತಮ ಜೀವನ ನಡೆಸಲು ದಾರಿ ತೋರುವ ರೂವಾರಿಗಳು.

ಇಂತಹ ಅಗಾಧ ಶಕ್ತಿಯುಳ್ಳ , ತನು-ಮನವನ್ನು ವಿದ್ಯಾರ್ಥಿಗಳ ಏಳಿಗೆಗಾಗಿ ಮೀಸಲಿಟ್ಟ ಅಪರೂಪದ ಶಿಕ್ಷಕರೇ ಸಾಂಸ್ಕೃತಿಕ ನಗರಿ ಮೈಸೂರಿನ ಜೆ ಎಸ್ ಎಸ್ ವಿಜ್ಞಾನ, ವಾಣಿಜ್ಯ ಮತ್ತು  ಕಲಾ ಕಾಲೇಜಿನ ಕನ್ನಡ ವಿಭಾಗದ  ಸಹಾಯಕ ಪ್ರಾಧ್ಯಾಪಕರು ಎನ್ ಸಂತೋಷ್ ಕುಮಾರ್, ಭೋದಿಸುವುದಷ್ಟೇ ಅಲ್ಲದೆ ಹಲವಾರು ಉಪಯುಕ್ತ ಮಾಹಿತಿಗಳೊಂದಿಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುತ್ತಾರೆ, ಉದಾಹರಣೆ ಸಹಿತ ಸಕಾರಾತ್ಮಕ ಭಾವನೆಯನ್ನು ಪರಿಚಯಿಸುತ್ತಾರೆ.  ಆರ್ಥಿಕವಾಗಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ , ಅವರ ಪ್ರತಿಭೆಯನ್ನು ಗುರುತಿಸಿ ವೇದಿಕೆ ಕಲ್ಪಿಸಿ ಯಾವುದೇ ಪ್ರತಿಫಲ ಅಪೇಕ್ಷಿಸದೆ,ಏಳು ಬೀಳಿನಲ್ಲಿ ಜೊತೆಯಿದ್ದು ಗುರಿ ಮುಟ್ಟಲು ಸಹಾಯ ಮಾಡುವ ಮಾದರಿ ಗುರುಗಳು.  

ಇದಲ್ಲದೆ ಸಾಮಾಜಿಕ ಕಳಕಳಿ ಹೊಂದಿರೋ ಸೇವಾ ಮನೋಭಾವವುಳ್ಳ  ಇವರು  ಐದು ವರ್ಷಗಳಿಂದ ಪ್ರಸಿದ್ಧವಾದ ಯಶಸ್ವಿ  ಕಾರ್ಯಕ್ರಮಗಳ ನಿರೂಪಿಸಿರುವ,ಎನ್ ಎಸ್ ಎಸ್ ನ ದಕ್ಷ ಹಾಗೂ ಪ್ರಾಮಾಣಿಕ ಕಾರ್ಯಕ್ರಮ ಅಧಿಕಾರಿಯಾಗಿದ್ದಾರೆ. ವರ್ಷಕ್ಕೆ ಸಾವಿರಕ್ಕೂ ಅಧಿಕ ಕಾರ್ಯಕ್ರಮ ಮಾಡುವ ಕ್ರಿಯಾಶೀಲರು,ಮೂರು ವರ್ಷಗಳ ಕಾಲ ಕೆ ಎಸ್ ಗದ್ದಿಗೆಯನ್ನು ದತ್ತು ಪಡೆದು ಹಲವಾರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಹಾಡಿ ಶಾಲೆಗಳನ್ನು ಗುರುತಿಸಿ,ಶಾಲಾ ಕಟ್ಟಡಗಳಿಗೆ ರಂಗು ರಂಗಿನ ಕಲಾಕೃತಿಗಳ ಬಿಡಿಸಿ, ಮಕ್ಕಳು ಶಾಲೆಯತ್ತ ಆಕರ್ಷಿತರಾಗುವಂತೆ ಮಾಡಿದ್ದಾರೆ.
ಅಲ್ಮೇರಾ, ನೀರಿನ ಶುದ್ದೀಕರಣ ಯಂತ್ರ, ಸ್ಮಾರ್ಟ್ ಟಿವಿ, ಕಲಿಕಾ ಸಾಮಾಗ್ರಿ ಮುಂತಾದ ಪಠ್ಯ ಪೂರಕಗಳನ್ನು , ಸಮಾಜಮುಖಿ ಚಿಂತಕರಾದ ಕ್ರಿಯಾಶೀಲ ನಿರ್ದೇಶಕರಾದ ತೇಜಸ್ವಿಯವರ ಸಹಯೋಗದೊಂದಿಗೆ ಒದಗಿಸಿದ್ದಾರೆ, ಸದ್ದಿಲ್ಲದೆ ಎಲೆಮಾರೆಕಾಯಿಯಂತೆ ಸರ್ಕಾರಿ ಶಾಲೆ ಕಾಲೇಜುಗೆ ಸಹಾಯ ಮಾಡಲು ಮುಂದಾಗಿರುವ ತೇಜುರವರ ಈ ಗುಣವು ಸಮಾಜಕ್ಕೆ ಶ್ಲಾಘನೀಯವಾಗಿದೆ.

 ವಿಜೇತ  ನಾಗಭೂಷಣ್ ರವರ ಸಸ್ಯಾಧಾಮದಿಂದ  ಗಿಡಗಳನ್ನು ಪಡೆದು ಸ್ವಯಂ ಸೇವಕರ ಜೊತೆಯಲ್ಲಿ  ಇದುವರೆಗೂ ಸಹಸ್ರಾರು ಸಸಿಗಳನ್ನು ನೆಟ್ಟು ಅದರ ಪೋಷಣೆ ಮಾಡುತ್ತಿದ್ದಾರೆ,
ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿ , ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ, ದೇವಾಲಯಗಳ ಸ್ವಚ್ಛತೆ ಕಾರ್ಯವಂತು ಬಾಯಿಯ ಮೇಲೆ ಬೆರಳಿಡುವಂತೆ ಮಾಡಿದೆ,ಅಲ್ಲದೆ ಅನಾಥಾಶ್ರಮ, ವೃದ್ದಾಶ್ರಮಗಳಿಗೆ ಆಗಾಗ್ಗೆ ಭೇಟಿ ನೀಡಿ ಭರವಸೆಯ ಮಾತಾಡಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ, ದಿನಸಿ ಮತ್ತಿತರ ಪದಾರ್ಥಗಳನ್ನು ನೀಡಿದ್ದಾರೆ. ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಮಾಸ್ಕ್ ಮತ್ತು ಆಹಾರವನ್ನು ಹಂಚುತ್ತಾ ಜಾಗೃತಿ ಮೂಡಿಸುವುದರಲ್ಲಿ ನಿರತರಾಗಿದ್ದರು.

ಮುಖ್ಯವಾಗಿ ಆಕರ್ಷಿಸುವ ಹಾಗೆ ಅಪರೂಪ ಎನಿಸುವ ಶ್ರೀಯುತರ ಗುಣವೆಂದರೆ ತಾವೆಷ್ಟೇ ಸೇವೆ ಮಾಡಿದರು ,ಶ್ರಮ ಪಟ್ಟಿದ್ದರು ಸಹ ನಾನೇನು ಮಾಡಿಲ್ಲ ಎಲ್ಲವೂ ನಮ್ಮ ತಂಡದ ಸಹಕಾರದಿಂದ ಆದುದ್ದು ಎಂದು ಹೇಳುವ ಸರಳ ಸಜ್ಜನ ವ್ಯಕ್ತಿಯಾಗಿದ್ದಾರೆ. 
ಅವರ ಕಾರ್ಯಗಳ ಮೆಚ್ಚಿ ಯಾವುದಾದರೂ ಸಂಘ ಸಂಸ್ಥೆಗಳು ಅಭಿನಂದಿಸಿ, ಪ್ರಶಸ್ತಿ ಪ್ರದಾನ ಮಾಡಲು ಮುಂದಾದರೆ, ಒಮ್ಮೆಲೇ ನಿರಾಕರಿಸಿ ಏನೇ ಪ್ರಶಸ್ತಿ ಇದ್ದರು ಅದನ್ನು ನಮ್ಮ ವಿದ್ಯಾರ್ಥಿಗಳಿಗೆ ಕೊಡಿ,ನಿಜವಾದ ಅರ್ಹರು ಎಂದು ಹೇಳುವ ಶ್ರೇಷ್ಠ ವ್ಯಕ್ತಿತ್ವ ಇವರದ್ದು. ಇಂದು ತೃಣದಷ್ಟು ಮಾಡಿ ಪರ್ವತದಷ್ಟು ಎಂದು ಬಿಂಬಿಸಿಕೊಂಡು ಪ್ರಚಾರಕ್ಕೆ ಮುಗಿಬೀಳುವ, ಪ್ರಶಸ್ತಿಗೆ ದುಂಬಾಲು ಬೀಳುವ  ಜನರ ಪೈಕಿ ಇಂಥಹ ನಿಸ್ವಾರ್ಥ ನಿಷ್ಕಲ್ಮಶ ಸಮಾಜ ಸೇವಕರಾದ ಗುರುಗಳಿರುವುದು ನಮ್ಮ ಹೆಮ್ಮೆ.
ಧನ್ಯೋಸ್ಮಿ.. 💐🙏🏻
 ✍️ಪೂಜಾ ಎಂ ಪಿ.
ಮೇಳಾಪುರ ಶ್ರೀರಂಗಪಟ್ಟಣ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

2 ಕಾಮೆಂಟ್‌ಗಳು:

  1. ತುಂಬಾ ಅದ್ಭುತವಾಗಿದೆ ನಿಮ್ಮ ಲೇಖನ,ಎಲ್ಲರಿಗೂ ಸಂತೋಷ ಸರ್ ಅಂತಹ ಗುರುಗಳು ಸಿಗಲ್ಲಿ ಎಂದು ಬಯಸುತ್ತೇನೆ.

    ಪ್ರತ್ಯುತ್ತರಅಳಿಸಿ
  2. ಗುರುಗಳ ಮೇಲಿನ ಅಭಿಪ್ರಾಯವನ್ನು ಅದ್ಭುತವಾಗಿ ಮಂಡಿಸಿದ್ದ್ದೀರಿ

    ಪ್ರತ್ಯುತ್ತರಅಳಿಸಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...