ಬಡತನದ ಬವಣಿಯಲಿ ಬೇಯುತ್ತ
ಸಂಸಾರದ ಕಷ್ಟಗಳನ್ನು ದಾಟುತ್ತ
ಸಂಸಾರದ ಭಾರವನ್ನು ನೀಗಿಸುತ್ತ
ನಡೆದಿಹರು ಎಲ್ಲವನ್ನು ಮರೆಯುತ್ತ
ಬಿಸಿಲೇ ಇರಲಿ ಮಳೆಯೇ ಇರಲಿ
ಕಲ್ಲು ಮುಳ್ಳುಗಳ ದಾಟುತ ಸಾಗುತ
ತುತ್ತು ಅನ್ನಕ್ಕಾಗಿ ಹಗಲಿರಳು ದುಡಿಯುತ್ತ
ಹೊಟ್ಟೆಪಾಡಿಗಾಗಿ ಹೊಲಿಗೆಯ ಹೊಲಿಯುತ್ತ
ಸಾಗಿಸುವರು ಮಕ್ಕಳು ಬಡತನದ ಜೀವನ
ಗಂಟು ಮೂಟೆ ಹೊತ್ತು ಅಲೆದಾಡುತ್ತಾ
ಬರಿಗಾಲಲಿ ಮಕ್ಕಳನ್ನು ನಡೆಸುತ್ತಾ
ನಲೆದಾಡುವರು ದುಡಿಮೆಗಾಗಿ
ಚಿಕ್ಕ ವಯಸ್ಸಲ್ಲಿಯೇ ಕಷ್ಟ ಸುಖದ ಪಾಠ ಕಲಿತು
ಸಾಗಿಸುವರು ಕಷ್ಟದ ಜೀವನವನ್ನು
ಮುಂದಿನ ಭವಿಷ್ಯದ ಕನಸುಗಳನು
ಹೊಸ ವರ್ಷದ ಹರುಷದ ಗಳಿಗೆಗಳನು
ಸುಖದ ಜೀವನವನ್ನು ನೆನಪು ಹಾಕುವರು
ಕಷ್ಟ ನೋವುಗಳನ್ನು ಮರೆಯುವರು
ಸ್ವಾಗತಿಸುವ ಹೊಸ ವರ್ಷವನ್ನು ಆಸೆಗಳೊಂದಿಗೆ
ಸಂಭ್ರಮಿಸುವರು ಸಂತಸದಿ ಹೊಸ ವರ್ಷವನ್ನು
- ಸವಿತಾ ಆರ್ ಅಂಗಡಿ. ಮುಧೋಳ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ