ಒಲವು ಕಲಹ ಪ್ರೀತಿಯೊಳಗೆ
ಜೇನು ಗೂಡಿನಂತೆಯೆ
ಸಹನೆ ಮುನಿಸು ಪ್ರೀತಿಯೊಳಗೆ
ಭೂಮಿ ತಾಯಿಯಂತೆಯೆ
ಬಾಳು ನದಿಗೆ ಗಂಡು-ಹೆಣ್ಣು
ಎರಡು ದಡಗಳಂತೆಯೆ
ಎರಡು ತಾಳ ಸೇರಿ ಹೊರಡೊ
ಒಂದೆ ನಾದದಂತೆಯೆ
ಎರಡು ಕಣ್ಣು ಸೇರಿ ಕಾಣೊ
ವಸ್ತು ಒಂದರಂತೆಯೆ
ಎರಡು ದೇಹ ಚಕ್ರದಂತೆ
ಬಾಳು ಬಂಡಿ ಒಂದೆಯೆ
ತಿರುಗಿ ಬರುವ ಸಮಯದಂತೆ
ಕಷ್ಟ ಸುಖವ ಸಹಿಸುತ
ಭಾನು ಭುವಿಯ ಬೆಳಗಿದಂತೆ
ಕಾಲ ಬದುಕು ಬೆಳಗಲಿ
ಮಿಂದು ಏಳುವ ದೇಹದಂತೆ
ಭಾವ ಮಡಿಯಗೊಳಿಸುವ
ಸರದಿಯಂತೆ ನಮ್ಮನಳಿಸಿ
ಗುರುತು ಕಾಲವೆ ಉಳಿಸಿದೆ
- ತುಳಸಿದಾಸ ಬಿ ಎಸ್,
ಶಿಕ್ಷಕರು ಸಿಂಧನೂರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ