ನಾಗರ ಪಂಚಮಿ
ಬಂದೈತಿ ಬಾರೇ ಪಂಚಮಿ
ಆಡೋಣವಂತೆ ಜೋಕಾಲಿ
ತಿನ್ನೋಣವಂತೆ ಚಕ್ಕುಲಿ
ಮನೇಲಿ ಮಾಡ್ಯಾರ ಎಳ್ಳುಂಡಿ!
ಕೊಬ್ಬರಿ ಕಣಕವ ಕೈಯಲ್ಲಿ
ತಿರುಗಿಸುವಂತೆ ಖುಷಿಯಲ್ಲಿ
ವಿಧ-ವಿಧ ತಿಂಡಿಯು ಈಗಿಲ್ಲಿ
ಕೂಡಿ ತಿನ್ನೋಣ ಗೆಳೆಯರಿಲ್ಲಿ!
ನಾಗಗೇ ಹಾಲು ಎರೆಯೋಣ
ನಾಗದಾರ ಕೊರಳಲ್ಲಿ ಹಾಕೋಣ
ನಾಗದೋಷವ ಕಳೆಯೋಣ
ಹುತ್ತಿಗೆ ಪೂಜೆಯ ಮಾಡೋಣ!
ಸಂತಸದಿ ಉಯ್ಯಾಲೆ ಆಡೋಣ
ಪಂಚಮಿಯ ಹಬ್ಬವ ಮಾಡೋಣ
ಎಳ್ಳು-ಉಂಡಿಯ ಹಂಚೋಣ
ಎಲ್ಲರೂ ಕೂಡಿ ಹಬ್ಬವ ಮಾಡೋಣ!
- ಶ್ರೀ ಸೋಮಶೇಖರ ಹ ರಾಂಪೂರ ಸಹ ಶಿಕ್ಷಕರು ವಿಜಯಪೂರ ಜಿಲ್ಲೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ