ದೇವರ ಕೈ ಜಾರಿ ಬಂದ ನನ್ನಮ್ಮ
ಸುಖ ಸಂಸಾರಕ್ಕೆ ಅಂದು ಅಂಜಿಕೆಯಿಂದ ಕೊರಳೊಡ್ಡಿ ಗಂಡನ ಮಡಿಲು ಸೇರಿದೆ.
ನವ ಮಾಸಗಳಲ್ಲೆ ಜೀವನದ ಎಲ್ಲಾ ಕನಸುಗಳಿಗೆ ರೆಕ್ಕೆ ಕಟ್ಟಿ ಲಾಲಿ ಹಾಡಿದೆ//
ನಿನ್ನ ಪ್ರಾಣವು ಲೆಕ್ಕಿಸದೆ ಪುನರ್ಜನ್ಮದಂತೆ ಇನ್ನೊಂದು ಜನ್ಮವನ್ನೆ ಸೃಷ್ಟಿಸಿದೆ.
ಮಗು ಹುಟ್ಟಿದಾಗ ಅಳುತ್ತಿತ್ತು,ನೀನು ಮಾತ್ರ ಆಶ್ಚರ್ಯ ಅದ್ಭುತಗಳ ಸಮ್ಮಿಲನದಲ್ಲಿ ನಗುತ್ತಿದ್ದೆ//
ಉಸಿರು ಹೆಸರು ಬದುಕು ಕೊಟ್ಟು ಹರಸಿ ಮುತ್ತು ಇಟ್ಟವಳು.
ಹಸಿದಾಗ ಅವಳ ಹಸಿವ ಮುಚ್ಚಿಟ್ಟು ತುತ್ತು ಇಟ್ಟವಳು//
ತಪ್ಪು ಮಾಡದಹಾಗೆ ಬೇರೆಯವರ ಮುಂದೆ ತಲೆ ತಗ್ಗಿಸದಹಾಗೆ ಬದುಕು ಕಲಿಸಿದವಳು.
ಅಪ್ಪನ ಜೊತಗೆ ಕಷ್ಟ ಕಾರ್ಪಣ್ಯಗಳ ಸಹಿಸಿ ಸಂಸಾರದ ನೌಕೆಯನ್ನು ದಡ ಸೇರಿಸಿದವಳು//
ಸೋಲೇ ಗೆಲುವಿನ ಸೋಪಾನವೆಂದು ಪ್ರತಿ ಹೆಜ್ಜೆಯಲ್ಲು ಬೆನ್ನೇಲುಬಾಗಿ ನಿಲ್ಲುವಳು.
ಮಳೆಯಲ್ಲಿ ಒದ್ದೆಯಾದರೆ, ಬೈಗುಳದಲ್ಲು ಪ್ರೀತಿ ನೀಡುವಳು//
ಬದುಕಿನ ಅವಿಭಾಜ್ಯ ಅಂಗವಾಗಿ ಅಭಿವೃದ್ದಿಗೆ ನಾಂದಿಯಾದವಳು.
ಸೋತಾಗ ಆತ್ಮ ಸ್ಥೈರ್ಯ ತುಂಬಿದವಳು//
ಸಂಸಾರದ ಸಾರಥಿಯಾಗಿ ಮನ ಮನೆಯ ಬೆಳಗಿಸಿದೆ.
ತ್ಯಾಗದ ದೃಷ್ಟಿಯಲ್ಲಿ ಸಂಭ್ರಮದ ವರ್ಷಾಚರಣೆಯಾಗಿಸಿದೆ//
ಜಗದೊಳು ಮಿಗಿಲು ನಿನ್ನ ಒಲವು,ಜನ್ಮದ ನಂಟು ಬೆಸೆದಿದೆ.
ಪ್ರತಿ ಸಾರಿ ಸಲಹಲಾಗದೆ, ಅಮ್ಮಾ ಎಂಬ ಅಮೂರ್ತ ರೂಪವನ್ನೇ,ದೇವರೆ ನಮಗೆ ನೀಡಿದೆ//
- ಸಹನಾ ಯಶವಂತ್ ಗೌಡ
ಕ ರಾ ಮು ವಿ ಮೈಸೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ತುಂಬಾ ಚನ್ನಾಗಿ ಇದೆ
ಪ್ರತ್ಯುತ್ತರಅಳಿಸಿ