ಅಂಗಡಿಯವನನ್ನು ಕೇಳಿದೆ
ಈ ಕುರಾನಿನ ಬೆಲೆಯೆಷ್ಟು?
ತೋಬಾ !ತೋಬಾ!
ಹಾಗೆನ್ನಬಾರದು 'ಹದಿಯಾ" ಅದು
ಬಣ್ಣ ಬಣ್ಣದ ಬೇರೆ ಬೇರೆ ಡಿಜೈನಿನ
ರ್ಯಾಪರಿನ ಕುರಾನುಗಳು,
ಹದಿಯಾ ಕೂಡಾ ಬೇರೆ ಬೇರೆ
ಒಳಗಿರುವ ಅಕ್ಷರಗಳು
ಅಂದಿನಂತೆಯೇ..
ಅರ್ಥಗಳು ಅವರವರ ಭಾವಕ್ಕೆ
ರ್ಯಾಪರಿನಂತೆ!
ಕಪಾಟಿನಲ್ಲಿ ಧೂಳು ಮೆತ್ತಿದ
ಗಾಜಿನ ಹಿಂದೆ ಇನ್ನಷ್ಟು ಪುಸ್ತಕಗಳ ಪೇರಿಸಿದ್ದ!
ಒಂದರ ಬೆನ್ನಿಗೆ ಇನ್ನೊಂದರಂತೆ
ಗೀತೆ, ಗ್ರಂಥಾ ಸಾಹೀಬ್,ಬೈಬಲ್..
ಎಲ್ಲದಕ್ಕೂ ಹದಿಯಾ ಪಟ್ಟಿ ಬರೆದೇ ಇತ್ತು!
- ಮಹಮ್ಮದ್ ರಫೀಕ್ , ಕೊಟ್ಟೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ