ಭಾನುವಾರ, ನವೆಂಬರ್ 17, 2024

ಚೆಲುವ ಕಮಲ...

 ""ಚೆಲುವ ಕಮಲ""

 ಹಸಿರಿನ ತಂಪಲ್ಲಿ ಅರಳಿದ ತಾವರೆ
 ನಿನ್ನ ಚೆಲುವಿಗೆ ಸಾಟಿ ಇಲ್ಲವೇ ನೀರೆ 
ಕೊಳದ ಪಂಕವೇ ನೀ ನಗಲು ಆಸರೆ
 ಸೃಷ್ಟಿಯ ಸೊಬಗೆಲ್ಲ ನಿನ್ನ ಕೈಸೆರೆ 

ಶ್ರೀ ಲಕ್ಷ್ಮಿಯ ಪ್ರಿಯ ಸಿಂಹಾಸನವಾದೆ
 ಚೆಲುವ ಹೊಗಳಲು ನೀ ಉಪಮೆಯಾದೆ
 ಕೆಸರೊಳಿದ್ದರೂ ಶುಭ್ರತೆಗೆ ಸಾಕ್ಷಿಯಾದೆ
 ನಿರ್ಮಲ ಮನಸಿನ ಬಿಂಬ ನೀನಾದೆ 

ರವಿ ಕಿರಣಕೆ ನೀ ಮುದಗೊಳ್ಳುವೆ 
ಭಾಸ್ಕರನುದಕೆ ಅರಳಿ ನಗುವೆ
ತಾಯಿ ಶಾರದೆಗೂ ಪ್ರಿಯವೆನಿಸುವೆ
ಮೂಲೋಕದಲೂ ನೀ ಖ್ಯಾತಿಯಾಗಿರುವೆ

 ಕಮಲ ಪಂಕಜ ನೈದಿಲೆ ಸರಸಿಜ
 ಹಲವು ಹೆಸರು ಇಹುದು ಸಹಜ 
ನಿನ್ನಿಂದ ಪಾಠ ಕಲಿಯಲಿ ಮನುಜ
 ಅರಿತರೆ ಬದುಕು ಬಂಗಾರ ನಿಜ 
 ಮಧುಮಾಲತಿ ರುದ್ರೇಶ್ ಬೇಲೂರು 

ಕಾಗಿನೆಲೆಯ ಕನಕದಾಸರು...

ಕಾಗಿನೆಲೆಯ ಕನಕದಾಸರು...

ಭಕ್ತಿ ಭಾವಕೆ ಅಜರಾಮರದ ಹೆಸರು ಕನ್ನಡ ಭಾಷೆಯ ವಿಶಿಷ್ಟ ಕೀರ್ತನೆಕಾರರು 
ಯುದ್ಧದಿ ಸೋತ ದಾಸ ಪರಂಪರೆಯ ಹರಿದಾಸರು ಕಾಗಿನೆಲೆಯ ವಾಸಿ ನಮ್ಮ ಶ್ರೀ ಕನಕದಾಸರು

ಹಾವೇರಿಯ ಬಾಡ ಗ್ರಾಮದ ತಿಮ್ಮಪ್ಪ ನಾಯಕ 
ಚಿನ್ನದಂತ ಮಗನ ಹೆತ್ತರು ಬಚ್ಚಮ್ಮ ಬೀರಪ್ಪನಾಯಕ 
ವಿಜಯನಗರ ಸಾಮ್ರಾಜ್ಯದ ಗಂಡೆದೆಯ ದಂಡನಾಯಕ 
ತಿರುಪತಿ ತಿಮ್ಮಪ್ಪನ ಆಶೀರ್ವಾದದ ಕುಲದೀಪಕ

ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿ 
ಉಡುಪಿಯ ಕನಕನ ಕಿಂಡಿಯ ರೂವಾರಿಯಾಗಿ
ಕೃಷ್ಣನ ಪ್ರೀತಿಯ ಭಕ್ತರಾದರು ಲೋಕ ಕಲ್ಯಾಣಕ್ಕಾಗಿ 
ಜಾತಿ ಪದ್ಧತಿಯ ತಾರತಮ್ಯ ತಿರಸ್ಕರಿಸಿದರು ಮನುಕುಲಕ್ಕಾಗಿ

ಕಾಗಿನೆಲೆ ಆದಿಕೇಶವರಾಯರ ಅಂಕಿತದಲಿ 
ಕೀರ್ತನೆಗಳ ರಚಿಸಿ ಹಾಡಿದರು ಕೃಷ್ಣನ ಸ್ಮರಣೆಯಲಿ ಮೋಹನತರಂಗಿಣಿ ನಳಚರಿತ್ರೆ ಕೃತಿಗಳಲಿ 
ಹಲವು ವೈಶಿಷ್ಟ್ಯತೆ ಗಳು ತಲೆಯೆತ್ತಿವೆ ಪುಟಗಳಲಿ

ಮೂಡಿಸಿದ ಶ್ರೀ ಕೃಷ್ಣನ ಅಪ್ರತಿಮ ಭಕ್ತಿಯು 
ನಾಡಿನೆಲ್ಲಡೆ ಹಬ್ಬಿದೆ ಕನಕದಾಸರ ಕೀರ್ತಿಯು 
ಎತ್ತ ನೋಡಿದರತ್ತ ಸ್ಥಾಪಿಸಲಾಗಿದೆ ನಿಮ್ಮ ಮೂರ್ತಿಯು 
ಹುಟ್ಟಿ ಬರಲಿ ದಾಸ ಶ್ರೇಷ್ಠ ಕನಕದಾಸರು ಮನೆಮನೆಯಲ್ಲಿಯು
ಶ್ರೀ ಮುತ್ತು ಯ.ವಡ್ಡರ
 ಶಿಕ್ಷಕರು
 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿ 
ಬಾಗಲಕೋಟ 
9845568484

ಶನಿವಾರ, ನವೆಂಬರ್ 2, 2024

ಎಚ್ಚೆತ್ತ ಭಾವನೆ...

ಎಚ್ಚೆತ್ತ ಭಾವನೆ ...


ಎಚ್ಚೆತ್ತ ಭಾವನೆ ಎತೆತ್ತ ಹೋಡ್ವುದೆ 
ನೂರಾರು ಭಾವಗಳ ನೂಕಿಯಾಚೆ 
ನಿನ್ನ ಸೇರುವ ಇಚ್ಛೆ, 
ಇಚ್ಛಾಶಕ್ತಿಯಾಗಬೇಕಿದೆ.

ಒಲುಮೆಯ ಆಶಿಸುವ 
ಎನ್ನಾಸೆಯ ಆಶಯದ ದೀಪಕೆ
ನಮ್ಮಿಬ್ಬರ ಪ್ರೀತಿಯ ಇಂಧನವ
ಹರಿಸು, 
ಹುರಿಯಲಿ ಜ್ವಜ್ವಾಲ್ಯಮಾನವಾಗಿ,
ಲೋಕವೇ ಬೆಳಗಲಿ ಪ್ರೀತಿಯ 
ನೆರಳಲಿ,
ನೂರು ಭಾವಗಳ ನೂಕಿ 
ಸೇರ ಬೇಕಿದೆ ನಮ್ಮ ಬಾಳ ನೌಕೆ.

ಕಲ್ಪದ ಮೇಲೆ ಹಾಲಿನ 
ಹೊಳೆಯರಿಸಿ ಬೆಳಗುತ್ತಿರುವನು
ಹುಣ್ಣಿಮೆಯ ಚಂದ್ರ,
ಚಂದನದ ಭಾನ ತುಂಬಾ
ನೂರು ಭಾವ ನೂಕಿ, ನೀನ್ನ ಸೇರಲು
ಪ್ರೀತಿ ಎಂಬೊಂದರ ಭಾವ
ಸಾಕೆ.

ತಂಪು ನೀಡುವ ವೃಕ್ಷಗಳ 
ಕಂಪು ಸೂಸುವ ಪುಷ್ಪಗಳ 
ಪೆಂಪ ನಾರು ಬಲ್ಲರೆ 
ಒಡಲೊಳಗಿನ ಹೊರಡದ
ಶಬ್ದಗಳು ಒಡಲೊಳಗೆ 
ನರಳುತ್ತಿದೆ.
ಭಾವಗಳ ನೂಕಿ 
ಭಾವಕ್ಕೂ ನೋವು.


ದೀಪಗಳು ಹಾರಿದ ಭಾವನೆಯ ಜಗತ್ತು
ಸಹನೆಯ ಕಳೆದುಕೊಂಡ ಆಪತ್ತು 
ಸಹಬಾಳ್ವೆಯ ಮಹತ್ತು 
ಇವುಗಳ ತಿಳಿಯದ ಜಗತ್ತಿಗೆ 
ದಾರಿ ದೀಪವೂ ಬೇಕಿದೆ 
ಧೀರ ಬಾಳ್ವೆಯ ನಮ್ಮ ಬದುಕಿಗೆ...
ಮಂಜುನಾಥ್ 
ಮಂಜಿಹಳ್ಳಿ 
9686225964

ರೈತನ ದೀಪಾವಳಿ...

"ರೈತನ ದೀಪಾವಳಿ!"
~~~~~~~~~~~~~

ನೊಗವೆ ಲಕ್ಷ್ಮೀ ದಡಾಕಿ
ನೇಗಿಲೆನ್ನ ಪಟಾಕಿ
ಹೊಲಗತ್ತಲನು ಸೀಳಿ, ಸಿಡಿಯುತಿಹವು ನೋಡಿ!

ಕುಂಟೆ ನೆಲಗುಮ್ಮದಾಟ
ಕೂರಿಗೆಯಲಿ ರಾಕೆಟೋಟ
ಹುಳ್ಳಿಕಾಳುಗಳನು ಚೆಲ್ಲೆ, ನಕ್ಷತ್ರಕಡ್ಡಿ ಬೆಳೆದವಲ್ಲೆ!

ಎದೆಯ ಅಡರ ಬತ್ತಿ ತೀಡಿ
ಹಣೆಯ ಬೆವರ ಎಣ್ಣೆ ಹಿಂಡಿ
ಕರವೆ ಎನ್ನ ದುಡಿಮೆ ದೀಪ, ಪೊರೆದ ಬಸವರೆನ್ನ ನೃಪ!

ಭುವಿಯ ತುಂಬ ಹನುಮ ಬಾಲ
ಸಾಲುಸಾಲು ಹೂಕುಂಡ ಮೇಳ
ಸೂರ್ಯ ಕಿಡಿಯ ತಾಗಿಸಿ, ಜಗದ ದೀಪ ಬೆಳಗಿಸಿ!

ಎಲ್ಲೆಲ್ಲೂ ದೀಪಾವಳಿ! ರೈತನೆರಡು ಕಣ್ಣಬಳಿ!!
ಎಲ್ಲೆಲ್ಲೂ ದೀಪಾವಳಿ! ರೈತನೆರಡು ಕಣ್ಣಬಳಿ!!
~ ಅರಬಗಟ್ಟೆ ಅಣ್ಣಪ್ಪ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...