"ಭಟ್ಟರ ಹಾಡು ಹೆಣ್ಮಕ್ಳೇ ಸ್ಟ್ರಾಂಗು ಗುರು" ಹಾಡಿನ ಸಾರಾಂಶ ಇರುವಂತೆ ಎಲ್ಲಾ ಕ್ಷೇತ್ರದಲ್ಲಿ ಕೂಡ ಹೆಣ್ಣು ಮಕ್ಕಳು ತಮ್ಮ ಕಾರ್ಯ ವೈಖರಿಯಿಂದ ಎಲ್ಲಾ ಕ್ಷೇತ್ರಗಳನ್ನು ನಿಭಾಯಿಸಬಲ್ಲಳು ಎಂಬುದನ್ನು ಸಾಬೀತು ಮಾಡುತ್ತಾರೆ. ಆದರೆ ಆರೋಗ್ಯದ ವಿಚಾರಕ್ಕೆ ಬಂದರೆ ಮಾತ್ರ ಸ್ಟ್ರಾಂಗ್ ಅಲ್ಲ ಅನ್ಸುತ್ತೆ! ಹೆಂಡತಿ ಆದಗಾ ಗಂಡನನ್ನು, ತಾಯಿ ಆಗಿದ್ದಾಗ ಮಕ್ಕಳ ಹಾರೈಕೆ ಮಾಡುತ್ತಾ ತನ್ನ ಆರೋಗ್ಯದ ಪರಿವೇ ಇಲ್ಲವಾಗುತ್ತಾಳೆ.
ಸ್ತ್ರೀ ಅವಿನಾಶಿ, ಸಂಜೀವಿನಿ ಹೆಣ್ಣು, ವಿಶಿಷ್ಟ ಶಕ್ತಿಗಳ ಸಂಗಮ, ಮಮತೆ, ಕರುಣೆ, ವಾತ್ಸಲ್ಯ ,ಅಕ್ಕರೆ, ಮತ್ತು ಭೂಮಿ ತೂಕದ ತಾಳ್ಮೆ ಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೆಣ್ಣಿಗೆ ಮಾತ್ರ ಇನ್ನೊಂದು ಜೀವಕ್ಕೆ ಜೀವ ಕೊಡುವಂತ ಶಕ್ತಿ ಇದೆ. ಅಂತ ಹೆಣ್ಣು ಮಗಳನ್ನು ಪುರುಷ ಪ್ರಧಾನ ಸಮಾಜದಲ್ಲಿ ಪುರುಷರು ಎಷ್ಟರ ಮಟ್ಟಿಗೆ ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದೇವೆ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಹೆಣ್ಣು ತನ್ನ ತಾಯಿತನದಲ್ಲಿ 9 ತಿಂಗಳ ತನ್ನ ಒಡಲಿನಲ್ಲಿ ಮಗುವನ್ನು ಇಟ್ಟುಕೊಂಡು, 9 ತಿಂಗಳ ನಂತರ ಮಗುವನ್ನು ಹೊರ ಜಗತ್ತಿಗೆ ಪರಿಚಯಿಸುವ ಸಂದರ್ಭದಲ್ಲಿ ಒಬ್ಬ ಮನುಷ್ಯನ ಬೆನ್ನಿನ ಮೂಳೆ ಮುರಿದರೆ ಎಷ್ಟು ನೋವಾಗುತ್ತದೆಯೋ ಅಷ್ಟು ನೋವನ್ನು ಹೆರಿಗೆ ಸಮಯದಲ್ಲಿ ಸಹಿಸುವಳು ಮತ್ತು ಹೆರಿಗೆ ಸಮಯದಲ್ಲಿ ನೋವುಗಳ ಬರಿಸಾಲಾಗದ ಮಹಿಳೆಯರು ಹಾಗೂ ಗರ್ಭ ಧರಿಸಲು ಸಾಮರ್ಥ್ಯ ಇಲ್ದೇ ಇರೋ ಹೆಣ್ಣು ಮಕ್ಕಳು ಅಂತ ಸಮಯದಲ್ಲಿ ವೈದ್ಯರು ಮಗುವನ್ನು ಶಸ್ತ್ರ ಚಿಕಿತ್ಸೆ ಮಾಡುವ ಮುಖಾಂತರ ಮಗುವನ್ನು ಹೊರ ಜಗತ್ತಿಗೆ ಪರಿಚಯಿಸುತ್ತಾರೆ ಶಸ್ತ್ರ ಚಿಕಿತ್ಸೆಯಿಂದ ಹೆಣ್ಣು ಮಕ್ಕಳು ಜೀವನಪೂರ್ತಿ ನೋವುಗಳೆ ಅನುಭವಿಸಬೇಕಾಗಿರುತ್ತೆ ಶಸ್ತ್ರ ಚಿಕಿತ್ಸೆಯಿಂದ ಹೆಣ್ಣು ಮಕ್ಕಳು ಜೀವನದಲ್ಲಿ ಜೀವ ಇರುವ ಗೊಂಬೆ ತರ ಆಗಿಬಿಡುತ್ತಾರೆ ಆ ಸಂದರ್ಭದಲ್ಲಿ ಕೆಲವೊಂದಿಷ್ಟು ಮಹಿಳೆಯರಿಗೆ
ಆರೋಗ್ಯದಲ್ಲಿ ಏರುಪೇರು ಉಂಟಾಗಿ ಪ್ರಾಣ ಕಳೆದುಕೊಂಡಿರುವ ಹೆಣ್ಣುಗಳು ಅದೆಷ್ಟೋ..? ಮತ್ತು ಹೆಣ್ಣಿಗೆ ಭೂಮಿಗೆ ನದಿಗಳಿಗೆ ಹೋಲಿಸುತ್ತಾರೆ ಹಾಗೂ
" ಹೆಣ್ಣೆಂದರೆ ದೀಪ, ಬೆಂಕಿಯಲ್ಲ ಬೆಳಕು"
ಹೆಣ್ಣು ಯಾವತ್ತಿಗೂ ಬೆಂಕಿ ಅಲ್ಲ ಜಗವನ್ನು ಬೆಳಗುವ ದೀಪದಂತೆ. ಅಂತ ಬೆಳಕಿಗೆ ಎಷ್ಟರಮಟ್ಟಿಗಿನ ಹೆಣ್ಣು ಮಕ್ಕಳ ಬಾಳಿನಲ್ಲಿ ಬೆಳಕಿದೆ!
"ಆರೋಗ್ಯವೇ ಭಾಗ್ಯ ಎಂಬಂತೆ ಎಲ್ಲರಿಗೂ ಆರೋಗ್ಯ ಅವಶ್ಯಕ " ಅದರಲ್ಲೂ ಹೆಣ್ಣು ಮಕ್ಕಳಿಗೆ ತುಂಬಾ ಅವಶ್ಯಕ ಅನ್ಸುತ್ತೆ ಹೆಣ್ಣು ಆರೋಗ್ಯದ ವಿಚಾರದಲ್ಲಿ ಬಂದರೆ ಆದಷ್ಟು ಜಾಗೃತವಾಗಿರಬೇಕು.
ಹೆಣ್ಣಿಗೆ ಮಾತ್ರ ಆರೋಗ್ಯದ ಸಮಸ್ಯೆ ಪದೇಪದೇ ಕಾಡುತ್ತದೆ ಅದರಲ್ಲಿ ಮುಖ್ಯವಾದದ್ದು ಗರ್ಭಿಣಿಯಾಗಿದ್ದಾಗ ಆರೋಗ್ಯ ಸಮಸ್ಯೆಗಳು ತೀರಾ
ಹದಗೆಡುತ್ತದೆ, ಒಂದು ಜೀವಕ್ಕೆ ಜೀವ ಕೊಡುವ ಸಂದರ್ಭದಲ್ಲಿ ಪೌಷ್ಟಿಕ ಆಹಾರ ಮುಖ್ಯವಾಗಿರುತ್ತದೆ. ಶ್ರೀಮಂತ ಹೆಣ್ಣು ಮಕ್ಕಳಿಗೆ ಆಹಾರದ ಕೊರತೆ ಉಂಟಾಗುವುದಿಲ್ಲ, ಆದ್ರೆ ಮಧ್ಯಮ ವರ್ಗದವರು ಮತ್ತು ಬಡವರ ಕುಟುಂಬದಲ್ಲಿ ಸಾಕಷ್ಟು ಪೌಷ್ಟಿಕ ಅಂಶದ ಆಹಾರ ದೊರೆಯದ ಕಾರಣದಿಂದ ಬಹಳಷ್ಟು ಹೆಣ್ಣು ಮಕ್ಕಳು ರಕ್ತಹೀನತೆ ಇಂದ ಬಳಲುತ್ತಾರೆ. ಬಡ ಕುಟುಂಬದ ಹೆಣ್ಣು ಆರೋಗ್ಯದ ಮೇಲೆ ಕಾಳಜಿ ವಹಿಸಲು ಅಸಾಧ್ಯ, ಅವರ ಬಯಕೆಗಳನ್ನು ಈಡೇರಿಸಿಕೊಳ್ಳಲು ಆರ್ಥಿಕವಾಗಿ ಬಲಿಷ್ಠ ವಾಗಿರುವುದಿಲ್ಲ.
ಸರ್ಕಾರದಿಂದ ಬಡವರಿಗಾಗಿ ತಂದಿರುವ ಸಾಕಷ್ಟು ಯೋಜನೆಗಳು ಜಾರಿಗೆ ಬಂದರೂ ಸರಿಯಾದ ಸಮಯಕ್ಕೆ ಮಧ್ಯವರ್ತಿಗಳ ಉಪಟಳದಿಂದ ತಲುಪದೇ ಇರುವುದರಿಂದ ಹೆಣ್ಣು ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ. ಹೆಣ್ಣು ಭಾವನಾತ್ಮಕ ಜೀವಿ ಆಗಿರುವುದರಿಂದ ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳ ತಂದೆ ತಾಯಿಗೆ ಹೊರೆ ಆಗಬಾರದೆಂದು ಆರೋಗ್ಯ ಸಮಸ್ಯೆ ಬಂದಾಗ ಹೆಣ್ಣಿಗೆ ತನ್ನ ಮನೆಯ ಪರಿಸ್ಥಿತಿ ಮಾತ್ರ ಕಣ್ಮುಂದೆ ಇರುತ್ತದೆ.ಎಷ್ಟೇ ನೋವನ್ನು ಅನುಭವಿಸುತ್ತಿದ್ದರೂ ವೈದ್ಯರ ಬಳಿ ತೆರಳಲು ಹಿಂಜರಿಯುತ್ತಾಳೆ ಮತ್ತು ಸಮಯಕ್ಕೆ ಸರಿಯಾದ ರೀತಿ ಆರೋಗ್ಯ ತೋರಿಸಿಕೊಳ್ಳದೇ ಇರುವುದರಿಂದ ಹೆಣ್ಣು ಅನಾರೋಗ್ಯಕ್ಕೆ ತುತ್ತಾಗಿ ಗರ್ಭಕೋಶದ ಕ್ಯಾನ್ಸರ್, ಗರ್ಭ ಚೀಲದ ಗಡ್ಡೆ ರೋಗದಿಂದ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಾರೆ. ಆದರೂ ಹೆಣ್ಣಿನ ತಾಳ್ಮೆ ಎಷ್ಟರ ಮಟ್ಟಿಗೆ ಅಂದರೆ ಕಟ್ಟಿಕೊಂಡ ಗಂಡನಿಗೂ ತಂದೆ ತಾಯಿಯರಿಗೂ ಆರ್ಥಿಕವಾಗಿ ಹೊರೆ ಆಗಬಾರದೆಂದು ತನ್ನ ಪ್ರಾಣವನ್ನು ಪಣಕಿಡುತ್ತಾಳೆ.
ಈ ಸಮಾಜದಲ್ಲಿ ಹೆಣ್ಣು ಹುಟ್ಟಿದ ತಕ್ಷಣ ಉಣ್ಣು ಅಂತಾರೆ ,ಅದೇ ಹೆಣ್ಣು ನಿಸ್ವಾರ್ಥಿ ಪರೋಪಕಾರಿಯಾಗಿ ಇತರರಿಗೋಸ್ಕರ ತನ್ನ ಜೀವನವನ್ನೇ ಮುಡಿಪಾಗಿಡುತ್ತಾಳೆ.
ಮಗು ಇದ್ದಾಗ ಯಾವುದೇ ರೀತಿ ಹೆಣ್ಣಿಗೆ ಚೌಕಟ್ಟು ಇರುವುದಿಲ್ಲ. ಬೆಳಿತಾ ಬೆಳಿತಾ ಅವರ ಚೌಕಟ್ಟುಗಳು ಪ್ರಾರಂಭವಾಗುತ್ತದೆ. ಮಗುವಾಗಿದ್ದಾಗ ತಂದೆ ತಾಯಿಯ ಪೋಷಣೆಯಲ್ಲಿ ಬೆಳೆಯುತ್ತಾಳೆ, ಒಬ್ಬ ಸಹೋದರನಿಗೆ ಸಹೋದರಿಯಾಗಿ ಅಕ್ಕರೆ ಪ್ರೀತಿಯಿಂದ ನಡೆದುಕೊಂಡು ಬರುತ್ತಾಳೆ, 18 ವರ್ಷ ತುಂಬಿದ ನಂತರ ಒಂದು ಗಂಡಿಗೆ ಮಡದಿಯಾಗಿ ಗಂಡಿನ ಕಷ್ಟ ಸುಖಗಳಿಗೆ ಅರ್ಧದಷ್ಟು ಪಾಲು ನನ್ನದೆಂದು ಭಾವಿಸುತ್ತಾಳೆ, ಹೆಣ್ಣು ಮಗುವಾಗಿದ್ದಾಗ ಅನಾರೋಗ್ಯದ ಸಮಸ್ಯೆ ಸಣ್ಣಪುಟ್ಟ ಕಾಯಿಲೆ ಬರಬಹುದು ಅಷ್ಟೇ. 14 ವರ್ಷ ದಾಟಿದ ನಂತರ ಅವಳಿಗೆ ಕಾಡುವ ಆರೋಗ್ಯದ ಸಮಸ್ಯೆ, ತಿಂಗಳಿಗೊಮ್ಮೆ ಬರುವ ಮುಟ್ಟಿನ ಸಮಸ್ಯೆ, ಹೊಟ್ಟೆ ನೋವಿನಿಂದ ನರಳುವ ಸಂದರ್ಭದಲ್ಲಿ ಹೆಣ್ಣಿನ ನೋವು ದೇವರಿಗೆ ಪ್ರೀತಿ ಈ ಸಂದರ್ಭದಲ್ಲಿ ಹೆಣ್ಣು ಆರೋಗ್ಯದಲ್ಲಿ ಕಾಳಜಿ ವಹಿಸಬೇಕಾಗುತ್ತದೆ.ಇಲ್ಲವಾದಲ್ಲಿ ದೊಡ್ಡ ಕಾಯಿಲೆಗಳನ್ನು ಬರುವಂತ ಸಾಧ್ಯತೆ ಇದೆ.ಅದನ್ನೆಲ್ಲ ನೋವುಗಳನ್ನು ಇಟ್ಟುಕೊಂಡು ಹೆಣ್ಣು ಸಮಾಜದಲ್ಲಿ ಎಲ್ಲರೊಡನೆ ಹಸನ್ಮುಖಿಯಾಗಿ ಬಾಳುತ್ತಾಳೆ. ಹೆಣ್ಣು ಯಾವುದೇ ಕ್ಷೇತ್ರದಲ್ಲಿ ಕ್ರೀಡೆ, ಶಿಕ್ಷಣ, ಎಲ್ಲಾ ತರಹದ ಉದ್ಯೋಗಗಳು ,ಚಿತ್ರರಂಗ,ಗಡಿ ಕಾಯುವ ಸೈನಿಕ, ಗಗನಸಖಿ ಮತ್ತು ಕುಟುಂಬ ನಿವಾರಣೆ ಎಲ್ಲವನ್ನೂ ನಿಭಾಯಿಸುವ ಶಕ್ತಿ ಇದೆ,ಆದರೆ ಆರೋಗ್ಯ ವಿಚಾರದಲ್ಲಿ ಅನಾರೋಗ್ಯದಿಂದ ಬಳಲು ಪ್ರಾರಂಭಿಸಿದರೆ ಒಂದು ತಿಂಗಳ ಕಾಲ ಅನಾರೋಗ್ಯದಿಂದ ಬಳಲುತ್ತಾಳೆ.ಈ ಸಂದರ್ಭದಲ್ಲಿ ಹೆಣ್ಣಿಗೆ ಧೈರ್ಯವನ್ನು ತುಂಬುವ ಗಂಡಿನ ಕೆಲಸ ಆಗಬೇಕು ಹಾಗೂ ಆಕೆಯನ್ನು ಆರೋಗ್ಯದ ಸಮಸ್ಯೆ ಬಂದಾಗ ತಾನು ಅನುಭವಿಸುತ್ತಿರುವ ನೋವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡು ಕುಟುಂಬದ ಜೊತೆ ಸದಾ ಹಸನ್ಮುಖಿಯಾಗಿ ನೋವಿನಲ್ಲೂ ಕೂಡ ತನ್ನ ಕೆಲಸದ ಜವಾಬ್ದಾರಿಯನ್ನು ಮರೆಯುವುದಿಲ್ಲ,ಆದರೆ
" ಪುರುಷರು ತಮ್ಮ ಚಟದಿಂದ ಆರೋಗ್ಯ ಕೆಡಿಸಿಕೊಂಡರೆ,
ತಂದೆ ತಾಯಿ ಹಾಗೂ ಗಂಡನ ಚೌಕಟ್ಟಿನಲ್ಲಿ ಬಾಳುತ್ತಿರುವಾ ಮಹಿಳೆ ಯಾವುದೇ ದುಶ್ಚಟಗಳಿಗೆ ಬಲಿಯಾಗಲ್ಲ. ಅಂತಹ ಮಹಿಳೆಯ ಆರೋಗ್ಯದ ಸಮಸ್ಯೆ ಪದೇ ಪದೇ ಆದಿಗೆಡುತ್ತದೆ. ಅದರಲ್ಲಿ ಹೆಣ್ಣಿಗೆ ಬರುವ ಖಾಯಿಲೆ ಅಂದರೆ ರಕ್ತಹೀನತೆ,ಹಾರ್ಟ್ ಅಟಾಕ್, ಸ್ಟ್ರೋಕ್,ಡಯಾಬಿಟಿಸ್,ಮೂತ್ರ ಜನಕಾಂಗದ ಸೊಂಕು, ಬ್ರೆಸ್ಟ್ ಕ್ಯಾನ್ಸರ್, ಅಸ್ಥಿರಂದ್ರತೆ (ಮೂಳೆ ಸಂಬಂಧ ರೋಗ) ಮರುವಿನಕಾಯಿಲೆ,ಅಂಡಾಶಯ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್,ಖಿನ್ನತೆ ಮತ್ತು ಆತಂಕ, ಋತುಬಂಧ,ಪ್ರಸವದ ನಂತರ ಖಿನ್ನತೆ, ಪಿಎಂ ಡಿಡಿ,ಉಭಯ ರೋಗ ನಿರ್ಣಯ,ಪಿಸಿಓಡಿ,ಥೈರಾಯಿಡ್ ನಂತಹ ಕಾಯಿಲೆಗಳು ವಕ್ಕರಿಸುತ್ತವೆ. ಸಮಾಜದಲ್ಲಿ ಕೆಲವೊಂದು ಇಷ್ಟು ಸಾಮಾಜಿಕ ಸಮಸ್ಯೆ ಕೂಡ ಹೆಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಅದರಲ್ಲಿ ಮುಖ್ಯವಾದ ಅಂಶಗಳು ಅಂದರೆ
ಶಾಲಾ ಕಾಲೇಜುಗಳಿಗೆ ಮತ್ತು ತನ್ನ ಇತರೆ ಕೆಲಸಗಳಿಗೆ ಹೋದ ಸಂದರ್ಭದಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲವಾದ ಸ್ಥಳದಲ್ಲಿ ಮುಜುಗರದ ಸ್ವಭಾವದವಳಾಗಿರುವುದರಿಂದ ಹೆಣ್ಣು ಮಗಳು ತನ್ನ ಮೂತ್ರವನ್ನು ಬಹಳಷ್ಟು ಸಮಯ ತಡೆದಿಟ್ಟುಕೊಳ್ಳುವುದರಿಂದ ನಾನಾ ತರಹದ ಕಾಯಿಲೆಗಳು ಹೆಣ್ಣಿಗೆ ಸಂಭವಿಸುತ್ತದೆ. ಇದರಿಂದ ಬಹಳಷ್ಟು ಹೆಣ್ಣು ಮಕ್ಕಳು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಾರೆ. ಹೆಣ್ಣು ಮಕ್ಕಳಿಗೆ ಅನಾರೋಗ್ಯ ಸಮಸ್ಯೆಯಲ್ಲಿ ಇದ್ದಾಗ ಅವರಿಗೆ ಧೈರ್ಯ ತುಂಬುವ ಕೆಲಸ ಇತರರಿಂದ ಆಗಬೇಕು ಹೆಣ್ಣು ಮುಜುಗರದ ಸ್ವಭಾವದವಳು ಆಗಿದ್ದರಿಂದ ತನ್ನ ನೋವನ್ನು ತನ್ನಲ್ಲೇ ಇಟ್ಟುಕೊಂಡು ಯಾರ ಮುಂದೆಯೂ ಹೇಳಲು ಹೋಗುವುದಿಲ್ಲ ಹಾಗಾಗಿ ಬಹಳಷ್ಟು ಹೆಣ್ಣು ಮಕ್ಕಳು ತನ್ನ ಪ್ರಾಣಕ್ಕೆ ತಾವೇ ಆಪತ್ತು ತಂದು ಕೊಳ್ಳುವ ಪರಿಸ್ಥಿತಿಯೂ ಉಂಟು. ಮತ್ತೆ ಹೆಣ್ಣು ಸೌಂದರ್ಯ ಪ್ರಿಯಳು,ಬಡವರ ಹೆಣ್ಣು ಮಕ್ಕಳು ಹತ್ತು ರೂಪಾಯಿ ಪೌಡರ್ ಡಬ್ಬಿಯಲ್ಲಿ ತಮ್ಮ ಸೌಂದರ್ಯವನ್ನು ಹಚ್ಚಿಸಿಕೊಳ್ಳುತ್ತಾರೆ ಆದರೆ ಮಧ್ಯಮ ವರ್ಗ ಶ್ರೀಮಂತರ ಹೆಣ್ಣು ಮಕ್ಕಳು ಪಾರ್ಲರ್ ಮೇಕಪ್ ಕಿಟ್ ಅಂತ ಸಾಮಗ್ರಿಗಳನ್ನು ಬಯಸುತ್ತಾರೆ,ಆದರೆ ಅತಿಯಾದರೆ ಅಮೃತವು ವಿಷದಂತೆ ಯಾವುದು ಕೂಡ ಅತಿ ಆಗಬಾರದು ಇದರಿಂದ ಬಹಳಷ್ಟು ಹೆಣ್ಣು ಮಕ್ಕಳು ಚರ್ಮದ ಕಾಯಿಲೆಗೂ ತುತ್ತಾಗುತ್ತಾರೆ. ಮತ್ತೆ ಹೆಣ್ಣು ಕುರುಕಲು ತಿಂಡಿ ಪ್ರಿಯಳು ಸಂಜೆ ಆದರೆ ಸಾಕು ರಸ್ತೆ ಬದಿಯಲ್ಲಿ ನಿಂತಿರುವ ಪಾನಿಪುರಿ ಅಂಗಡಿಗಳತ್ತ ಕಿವಿ ಕೊಟ್ಟು ಕೇಳಿದರೆ ಸಾಕು ಭಯ್ಯ ಅವರೇ ಒಂದು ಪ್ಲೇಟ್ ಪಾನಿಪುರಿ ಡಾಲು ಇಂಥ ಮಾತುಗಳೇ ಕೇಳಬಹುದು ಮುಸುರೆ ನೀರಿನಂತಿರುವ ಆ ಪಾನಿಪುರಿಯನ್ನು ಬಾಯಿ ಚಪ್ಪರಿಸುತ್ತ ತಿನ್ನುವ ಹೆಣ್ಣು ಮಕ್ಕಳು ಕುರುಕಲು ತಿಂಡಿಗಳು ತಮ್ಮ ಆರೋಗ್ಯಕ್ಕೆ ಮಾರಕವಾಗುತ್ತೆ ಎಂದು ಗೊತ್ತಿದ್ದರೂ ಕೂಡ ಹೆಣ್ಣು ಮಕ್ಕಳ ಬಾಯಿಚಪಲ ಗಂಡು ಮಕ್ಕಳ ಪೀಕಲಾಟ ಅನ್ನಬಹುದು ಮತ್ತೆ ಇನ್ನೊಂದು ವಿಷಯ ಹೇಳಬಹುದಾದರೆ "ಹೆಣ್ಣಿಗೆ ಹಠ ಗಂಡಿಗೆ ಚಟ" ಎರಡು ಮಾತುಗಳು ಹೆಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಅಂಶಗಳು ಅನುವದ್ರಲ್ಲಿ ಎರಡು ಮಾತಿಲ್ಲ ಕೆಲವೊಂದು ಹೆಣ್ಣು ಮಕ್ಕಳು ಎಷ್ಟು ಹಠಮಾರಿ ಅಂದರೆ ಸಣ್ಣಪುಟ್ಟ ವಿಷಯಕ್ಕೂ ತಮ್ಮ ಹಠಮಾರಿ ತನದಿಂದ ದೊಡ್ಡ ರಾಧಾಂತವನ್ನು ಮಾಡಿಕೊಂಡು ಅನ್ನ ನೀರು ಬಿಟ್ಟು ತಮ್ಮ ಆರೋಗ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ .ಗಂಡು ಚಟದಿಂದ ದಾಸನಾಗಿರುವ ಮನೆಗಳಲ್ಲಿ ಅಂತ ಮನೆಗಳು ಆರ್ಥಿಕವಾಗಿ ಹಿಂದುಳಿದು ಮನಶಾಂತಿ ನೆಮ್ಮದಿ ಹಾಳಾಗಿರುತ್ತೆ ಅಂತ ಮನೆಗಳ ಹೆಣ್ಣು ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಅಂತ ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ವಿಚಾರದಲ್ಲಿ ಹಂತ ಹಂತವಾಗಿ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತೆ ಮಹಿಳೆಯರ ಆರೋಗ್ಯದ ಸಮಸ್ಯೆ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತೆ ಮತ್ತು ಸಮಾಜದಲ್ಲಿ ಮೌಡ್ಯತೆ ಎಷ್ಟಿದೆ ಅಂದರೆ ಉದಾಹರಣೆಗೆ ಹೆಣ್ಣಿನ ಮುಟ್ಟಿನ ಸಮಸ್ಯೆ ಅದು ಒಂದು ನೈಸರ್ಗಿಕವಾದ ಕಾರ್ಯವಿಧಾನ ಆ ಸಮಸ್ಯೆಯಲ್ಲಿ ಬಳಲುತ್ತಿದ್ದಾಗ ಹೆಣ್ಣಿಗೆ ಕುಟುಂಬ ಸಮಾಜ ಯಾವುದೇ ರೀತಿ ಅವಳನ್ನು ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ, ಯಾವುದೇ ಶುಭ ಕಾರ್ಯಗಳಲ್ಲಿ ಭಾಗಿಯಾಗಲು ನಿರಾಕರಿಸುತ್ತಾರೆ,ಸಹಜ ಪ್ರಕ್ರಿಯೆಗೂ ಅವಳನ್ನು ದ್ವೇಷಿಸಿ ದೂರವಿಡುವುದು ಎಷ್ಟರಮಟ್ಟಿಗೆ ಸರಿ?ಈ ಸಮಾಜ ಪುರುಷ ಪ್ರಧಾನವಾಗಿದ್ದರಿಂದ ಇಲ್ಲಿ ಪುರುಷನೇ ತಾನೇ ಸಾರ್ವಭೌಮ ಅಂದುಕೊಳ್ಳಬಾರದು ಇಲ್ಲಿ ಹೆಣ್ಣು ಗಂಡು ಇಬ್ಬರೂ ಸಮಾನರು ಎಂದು ಭಾವಿಸಿ ನಡೆದುಕೊಂಡು ಹೋದರೆ ಒಂದು ಸುಂದರವಾದಂತಹ ಸಮಾಜ ಕಟ್ಟಬಹುದು.
ಒಬ್ಬ ವ್ಯಕ್ತಿಯು ಆರೋಗ್ಯವಂತಾಗಿರಲು ಆಹಾರ ಸೇವನೆ ಮುಖ್ಯವಾಗಿರುತ್ತೆ.ಆರೋಗ್ಯಎಂದರೆ"ದೈಹಿಕ ಸ್ವಾಸ್ಥ್ಯ" ಎನ್ನಬಹುದು ಶಾರೀರಿಕವಾಗಿ ಸದೃಢವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಶಕ್ತಿ ಪಡೆದುಕೊಳ್ಳಲು ಆಹಾರ ಮುಖ್ಯ ಎನ್ನಬಹುದು .
ಭಾರತ ದೇಶವು ಅತಿ ಹೆಚ್ಚು ಹಳ್ಳಿಗಳಿಂದ ಕೂಡಿರುವುದರಿಂದ ಹಳ್ಳಿಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸೌಲಭ್ಯಗಳು ದೊರಕುವುದು ಬಹಳಷ್ಟು ಕಡಿಮೆ ಮತ್ತು ಆಸ್ಪತ್ರೆಗಳು ಇಲ್ಲದೆ ಇರೋ ಕಾರಣದಿಂದ ಹಳ್ಳಿಗಳ ಜನರು ನಗರ ಪ್ರದೇಶದ ಆಸ್ಪತ್ರೆಗಳಿಗೆ ಹೋಗಬೇಕಾದರೆ ಸರಿಯಾದ ಸಾರಿಗೆ ಸಂಪರ್ಕ ಇಲ್ಲದಿರುವುದರಿಂದ ಹಳ್ಳಿಗಳ ಜನರಿಗೆ ಸರಿಯಾದ ಸಮಯದಲ್ಲಿ ವೈದ್ಯರು ಮತ್ತು ಚಿಕಿತ್ಸೆ ಸಿಗದೇ ಕಾರಣದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ವಿವಿಧ ದೇಶಗಳ ಹೆಣ್ಣು ಮಕ್ಕಳ ಆಯಸ್ಸಿನ ಪ್ರಮಾಣ ನೋಡೋದ ಆದರೆ 2011 ಜನಗಣತಿ ಪ್ರಕಾರ ಥೈಲಾಂಡ್ 73.2 ,ಅಮೆರಿಕ 79.9,
ಇಂಗ್ಲೆಂಡ್ 80.2 ,ಜಪಾನಿನಲ್ಲಿ 84.4, ಇವೆಲ್ಲ ಜಗತ್ತಿನ ಕೆಲವೊಂದಿಷ್ಟು ದೇಶಗಳ ಹೆಣ್ಣು ಮಕ್ಕಳ ಆಯಸ್ಸಿನ ಪ್ರಮಾಣದ ಸರಾಸರಿ ಅನ್ನಬಹುದು ಇವೆಲ್ಲ ದೇಶಕ್ಕೆ ಹೋಲಿಸಿಕೊಂಡರೆ ಭಾರತ ದೇಶವು ಕಡಿಮೆ ಆಯಸ್ಸಿನ ಪ್ರಮಾಣ ಹೊಂದಿದೆ ಕೇವಲ 63.8 ಮಾತ್ರ ನಾವು ನೋಡಬಹುದು. ಈ ಪ್ರಮಾಣದಲ್ಲಿ ಇರಲು ಕೆಲವೊಂದಿಷ್ಟು ಅಂಶಗಳನ್ನು ನೋಡಬಹುದು ನಮ್ಮ ಭಾರತ ದೇಶದಲ್ಲಿ ಹಳ್ಳಿಗಳು ಮತ್ತು ನಗರಗಳು ಹಾಗೂ ಬೃಹತ್ ನಗರಗಳು ಕೂಡಿದ್ದು ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಹಳ್ಳಿಗಳಲ್ಲಿ ಗಮನಹರಿಸಿದರೆ ಪೌಷ್ಟಿಕಾಂಶಗಳು ಆಹಾರ ದೊರೆಯುವುದಿಲ್ಲ ನಗರ ಪ್ರದೇಶಕ್ಕೆ ಹೋಲಿಸಿದಾದರೆ ಭಿನ್ನವಾಗಿರುತ್ತೆ ಸಾಕಷ್ಟು ಪೌಷ್ಟಿಕಾಂಶದ ಆಹಾರ ದೊರೆತರೂ ಇಲ್ಲಿನ ಜನರು ಸಮಯದಿಂದ ಓಡುತ್ತಿರುತ್ತಾರೆ ಸರಿಯಾದ ಊಟವನ್ನೇ ಮಾಡೋದಿಲ್ಲ ಇದರಿಂದ ಅನಾರೋಗ್ಯಕ್ಕೆ ಪದೇಪದೇ ತುತ್ತಾಗುತ್ತಾರೆ .
ವಿವಾಹ ಅನ್ನುವುದು ಅದು ಒಂದು ಸಾಮಾಜಿಕ ಸಂಸ್ಥೆಯಾಗಿದೆ ಹೆಣ್ಣು ಗಂಡಿನ ಕೆಲವೊಂದಿಷ್ಟು ಬಯಕೆಗಳನ್ನು ಮತ್ತು ವಂಶ ವೃದ್ಧಿಗೊಳಿಸಲು ಇದು ಎಲ್ಲರಿಗೂ ಅವಶ್ಯಕವಾಗಿದ್ದು ಜನರಲ್ಲಿ ಅರಿವು ವಿದ್ಯಾವಂತಿಕೆ ಕೊರತೆಯಿಂದ ನಮ್ಮ ದೇಶದಲ್ಲಿ ಬಾಲ್ಯ ವಿವಾಹ ಆಗುತ್ತೆ ಅಂತ ಹೆಣ್ಣು ಮಕ್ಕಳು ಮನೆ ನಿರ್ವಹಣೆ ಮಾಡಲು ಹಾಗೂ ಗರ್ಭ ಧರಿಸಲು ಅಷ್ಟೊಂದು ಸಾಮರ್ಥ್ಯ ಹೊಂದಿರುವುದಿಲ್ಲ ಆದಕಾರಣ ಭಾರತ ದೇಶದಲ್ಲಿ ಕಡಿಮೆ ಪ್ರಮಾಣದ ತೂಕ ಉಳ್ಳ ಮಕ್ಕಳು ಜನಿಸುವುದರಲ್ಲಿ
33 ರಷ್ಟು ನಮ್ಮ ದೇಶ ಸರಾಸರಿ ಹೊಂದಿದೆ.
ನಮ್ಮ ದೇಶ ಹೆಚ್ಚು ಹಳ್ಳಿಗಳಿಂದ ಕೂಡಿರುವ ದೇಶ ಆಗಿದ್ದು ಕೃಷಿ ಪ್ರಧಾನ ಕುಟುಂಬಗಳೇ ಹೆಚ್ಚು ನಾವು ಕಾಣಬಹುದು ಅಂತ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ದಿನನಿತ್ಯ 12 ತಾಸುಗಳಿಗಿಂತ ಹೆಚ್ಚಿನದಾಗಿ ತಮ್ಮ ಆರೋಗ್ಯದ ಪರಿವೇ ಇಲ್ಲದೆ ಬಡತನ ಭವಣೆಯನ್ನು ನೀಗಿಸಿಕೊಳ್ಳಲು ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗುತ್ತಾರೆ ನಾವುಗಳು ಹಾಗೆ ನಮ್ಮ ಭಾಗದ್ದು ಕೃಷಿ ಸಂಬಂಧಿಸಿದ ಕಾರ್ಯಗಳ ಬಗ್ಗೆ ಗಮನಿಸಿದ್ದೆ ಆದರೆ ನಮ್ಮ ಪ್ರಮುಖ ಬೆಳೆ ಭತ್ತ ಅನ್ನಬಹುದು ಇದು ವರ್ಷಕ್ಕೆ ಎರಡು ಬಾರಿ ಪಸಲು ನೀಡುತ್ತೆ ಇದರ ಕಾರ್ಯ ಚಟುವಟಿಕೆ ನೋಡಿದ್ದರೆ ನಾಟಿ ಮಾಡುವ ಸಮಯದಲ್ಲಿ ಬಹಳಷ್ಟು ಹೆಣ್ಣು ಮಕ್ಕಳು ಮನೆ ಕೆಲಸವನ್ನು ಮುಗಿಸಿ ಬೆಳಗ್ಗೆ 8 ಗಂಟೆಗೆ ಹೊಲದಲ್ಲಿ ಕೆಲಸಕ್ಕೆ ಹೋದರೆ ಮಧ್ಯಾಹ್ನದ ಊಟವನ್ನೇ ಮಾಡಲಾರದೆ ರಾತ್ರಿ 8: ಸುಮಾರಿಗೆ ಮನೆಗೆ ಮರಳುತ್ತಾರೆ ಇಂಥ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಆರೋಗ್ಯವು ಹದಗೆಡುವುದುಂಟು.
ಹೆಣ್ಣು ಮಕ್ಕಳು ಕೆಲಸದ ವಿಚಾರಕ್ಕೆ ಬಂದರೆ ಗಂಡು ಮಕ್ಕಳಿಗೆ ಹೋಲಿಸಿದರೆ ಅತಿ ಹೆಚ್ಚಾಗಿ ಕೆಲಸವನ್ನು ಮಾಡುವರು. ಆಹಾರಕ್ಕೆ ಹೋಲಿಸಿದರೆ ಅತಿ ಕಡಿಮೆ ಪ್ರಮಾಣದಲ್ಲಿ 1000ಕ್ಯಾಲೋರಿಯಷ್ಟು ಮಾತ್ರ ಆಹಾರ ಸೇವನೆ ಮಾಡುತ್ತಾರೆ ಇದರಿಂದ ಬಾಳಷ್ಟು ಹೆಣ್ಣು ಮಕ್ಕಳು ಅನಾರೋಗ್ಯಕ್ಕೂ ತುತ್ತಾಗುವುದುಂಟು ಪೌಷ್ಟಿಕ ಆಹಾರದ ಕೊರತೆಯಿಂದ ಹೆಣ್ಣು ಮಕ್ಕಳಲ್ಲಿ ರಕ್ತ ಹೀನತೆ ಸಮಸ್ಯೆಗಳು ನಾವು ಕಾಣಬಹುದು ಅಂಕಿ ಅಂಶಗಳ ಪ್ರಕಾರ 50 ಶೇಕಡ ರಷ್ಟು ನಗರ ಭಾಗದಲ್ಲಿ ಗ್ರಾಮೀಣ ಭಾಗದಲ್ಲಿ 70% ರಷ್ಟು ಹೆಣ್ಣುಮಕ್ಕಳು ರಕ್ತಹೀನತೆಯಿಂದ ಬಳಲುತ್ತಾರೆ.
ಕೆಲವೊಂದಿಷ್ಟು ಹೆಣ್ಣು ಮಕ್ಕಳ ಆರೋಗ್ಯ ಸಂಬಂಧಿಸಿದ ಹಾಗೆ @ ಪರಿಹಾರಗಳನ್ನು ನೋಡುವುದಾದರೆ ಹೆಣ್ಣು ಮಕ್ಕಳು ಆರೋಗ್ಯದ ವಿಚಾರದಲ್ಲಿ ಆದಷ್ಟು ಜಾಗೃತ ವಹಿಸಬೇಕು .
ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಹೋಗುವುದು ವೈದ್ಯರ ಸಲಹೆಗಳನ್ನು ಪಡೆದುಕೊಳ್ಳುವುದು. ಮತ್ತು ಇದ್ದ ಜಾಗದಲ್ಲಿ 104 ಸಹಾಯವಾಣಿಗೆ ಕರೆ ಮಾಡಿ ಆರೋಗ್ಯದ ಸಲಹೆ ಪಡೆದುಕೊಳ್ಳಬಹುದು . ಪೌಷ್ಟಿಕ ಆಹಾರ ಸೇವನೆಯಲ್ಲಿ ಗಮನಹರಿಸಬೇಕು, ಕುರುಕುಲು ತಿಂಡಿಗಳನ್ನು ಆದಷ್ಟು ಮಿತವಾಗಿ ಸೇವಿಸಬೇಕು .
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಆರೋಗ್ಯಕ್ಕೆ ಸಂಬಂಧಿಸಿದ ಸರಕಾರಿ ಸೌಲಭ್ಯಗಳಾದ ಆಯುಷ್ಮಾನ್ ಭವ ಕಾರ್ಡ್ ಮತ್ತು ಇತ್ಯಾದಿ ಯೋಜನೆಗಳು ಉಂಟು ಸರ್ಕಾರಿ ಆಸ್ಪತ್ರೆ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಗರ್ಭಿಣಿಯರಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳು ಇದೆ ಅದರಲ್ಲಿ ಮಾತೃಪೂರ್ಣ, ಪ್ರಧಾನ ಮಂತ್ರಿ ಮಾತೃ ವಂದನ, ಪೋಷಣೆ ಅಭಿಯಾನ ಯೋಜನೆ ,ಶ್ರೀ ಶಕ್ತಿ ಯೋಜನೆ ,ಭಾಗ್ಯಲಕ್ಷ್ಮಿ ಸುಕನ್ಯ ಸಮೃದ್ಧಿ ಖಾತೆ ಯೋಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನಮಂತ್ರಿ ಸುರಕ್ಷಿತ ಮಾತೃ ಅಭಿಯಾನ ,ತಾಯಿ ಕಾರ್ಡ್ ,ಇವೆಲ್ಲ ಯೋಜನೆಗಳ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಮನುಷ್ಯರಾಗಿ ಹುಟ್ಟಿದ ಮೇಲೆ ಎಲ್ಲರಿಗೂ ಕಷ್ಟಗಳು ಬರುವುದು ಸಹಜ ಇದನ್ನೆಲ್ಲ ಬದಿಗೊತ್ತಿ ಆರೋಗ್ಯ ಅಂತ ಬಂದರೆ ಅತ್ತಕಡೆ ಗಮನಹರಿಸುವುದು ಸೂಕ್ತ.
(ಆಧಾರ ಗ್ರಂಥಗಳು)
1)ಡಾ/ ಹೇಮಾ ಲತಾ ಎಸ್.ಎಂ
ಮಹಿಳಾ ಅಧ್ಯಯನ 1,2,3, ಮತ್ತು4 ಪ್ರಕಾಶಕರು ಡಿ ವಿ ಕೆ ಮೂರ್ತಿ ಮೈಸೂರ್
2)ಡಾ/ ಡಿ. ಮಂಗಳ ಪ್ರಿಯದರ್ಶಿನಿ
ಸ್ತ್ರೀವಾದ ಮತ್ತು ಮಹಿಳಾ ಅಧ್ಯಯನ ಒಂದು ಪ್ರವೇಶಿಕೆ 3)ಡಾ/ ಆರ್ ಇಂದಿರಾ
ಮಹಿಳಾ , ಸಮಾಜ ಮತ್ತು ಸಂಸ್ಕೃತಿ
3) ಡಾ/ ಎಚ್ ಗಿರಿಜಮ್ಮ
"ಬಸಿರು" ಪುಸ್ತಕ ನವ ಕರ್ನಾಟಕ ಪ್ರಕಾಶನ.
- ಚಾಂದ ಪಾಷಾ.kvs,
M. A. ಸಮಾಜ ಶಾಸ್ತ್ರದ ವಿದ್ಯಾರ್ಥಿ, ಸರ್ಕಾರಿ ಮಹಾವಿದ್ಯಾಲಯ ಸಿಂಧನೂರು.
# 8861319186.