ಶನಿವಾರ, ನವೆಂಬರ್ 26, 2022

ಪ್ರೇಮ (ಲೇಖನ) - ಅಂಜನ್ ಎನ್, ದೊಡ್ಡಬಳ್ಳಾಪುರ.

ಪ್ರೇಮ ಹಾಗಾದರೆ ಪ್ರೇಮ ಎಂದರೇನು?
ಪ್ರೇಮವನ್ನು ಸಹಜವಾಗಿ ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ ಆಗಂತ ನಿಜವಾದ ಮಹತ್ವ ಮತ್ತು ಸ್ವರೂಪ ವಿರಳ ವಿಸ್ತಾರತೆ ಮತ್ತು ಸರಳ ಮಾತುಗಳಲ್ಲಿ ಪ್ರೇಮವನ್ನು ವರ್ಣಿಸುವುದಕ್ಕೆ ಯಾರಿಂದಲೂ ಸಾಧ್ಯವೇ ಇಲ್ಲ ಹಾಗಾದರೆ ಕಾಡುವ ಯಕ್ಷ ಪ್ರಶ್ನೆ ಒಂದೇ ಪ್ರೇಮ ಎಂದರೇನು?
ಪ್ರೇಮವೊಂದು ಯಾವುದೇ ಒಬ್ಬ ವ್ಯಕ್ತಿಯ ಮನಸಿನಲ್ಲಿ ಶುದ್ಧ ಮತ್ತು ಸ್ವಚ್ಛವಾದ ಹಾಗೂ ನವಿರಾದ ಭಾವನೆ ಅಥವಾ ಆ ವ್ಯಕ್ತಿ ವ್ಯಕ್ತ ಪಡಿಸುವ ಸಂವೇದನೆಗೆ ಪ್ರೇಮ ಎನ್ನುವರು

ಪ್ರೇಮ ಮನುಷ್ಯನ ಸ್ವಾಭಾವಿಕ ಗುಣ:-
ಯಾವುದೇ ಒಬ್ಬ ವ್ಯಕ್ತಿಯಲ್ಲಿ ಕಾಣುವ ಏಕೈಕ ಸ್ವಾಭಾವಿಕ ಗುಣ ಎಂದರೆ ಅದು ಪ್ರೇಮ ಏಕೆಂದರೆ ಮನುಷ್ಯ ಪ್ರೇಮದಿಂದ ಎಲ್ಲರನ್ನ ತನ್ನ ಬಳಿಗೆ ಆಕರ್ಷಿಸುವ ಗುಣ ಮನುಷ್ಯ ತನ್ನಲ್ಲಿ ಹೊಂದಿರುತ್ತಾನೆ ಎಲ್ಲೆಲ್ಲಿ ಪ್ರೇಮವಿರುತ್ತದೆಯೋ ಅಲ್ಲೆಲ್ಲ ಮನುಷ್ಯನ ಜೀವನ ಪ್ರೇಮ ಇದ್ದೇ ಇರುತ್ತದೆ ಇದನ್ನ ನಾವು ಗಮನಿಸಿದಾಗ ಒಂದು ಅಂಶ ನಮ್ಮನ್ನು ಕಾಡುವಂತೆ ಮಾಡುತ್ತದೆ ಆ ಒಂದು ಅಂಶವೆಂದರೆ ಒಂದು ವೇಳೆ ಮನುಷ್ಯನ ಸ್ವಾಭಾವಿಕ ಗುಣದಲ್ಲಿ ಪ್ರೇಮವೇ ಇಲ್ಲದೇ ಹೋದರೆ ಬದುಕಲು ಮಾನವರಿಗೆ ಯಾವ ಆಕರ್ಷಣೆಯೂ ಇರುತ್ತಿರಲಿಲ್ಲ ಆಗಾಗಿ ಪ್ರೇಮವೆಂಬುದು ಇಂದಿಗೂ ಸಹ ಮನುಷ್ಯನ ಜೀವನದ ಸ್ವಾಭಾವಿಕ ಗುಣ


ಅತಿಯಾದ ಪ್ರೇಮವು ಸಹ ಪ್ರೇಮವಾದರೆ ಪ್ರೇಮವು ಬೀರುವ ಪರಿಣಾಮ:-
ಪ್ರೇಮ ಎಂಬುದು ಎಲ್ಲರಿಗೂ ಒಂದು ಸಾಧಾರಣವಾದ ಖಡ್ಗ ಇದು ಸಾಮಾನ್ಯವಾಗಿ ಒಂದು ಸಂಬಂಧವನ್ನು ಅದರ ನಿರ್ಧಾರದ ಮೇಲೆ ಎರಡು ಭಾಗವಾಗಿ ವಿಂಗಡಿಸಲೂ ಬಹುದು ಅಥವಾ ವಿಂಗಡಿಸಲೂ ಇರದೆಬಹುದು ಇದಕ್ಕೆ ಮತ್ತೊಂದು ಸ್ವಸ್ಟವಾದ ಉದಾಹರಣೆ ಎಂದರೆ ಒಂದು ತಕ್ಕಡಿ ಅದರ ಎರೆಡು ಭಾಗಗಳಲ್ಲಿ ಮುತ್ತು ರತ್ನಗಳನ್ನು ಸಮಾನವಾಗಿ ತೂಗುತ್ತದೆ ಕೆಲವೊಂದು ಬಾರಿ ಇದರಲ್ಲಿಯೂ ಸಹ ಮೋಸ ವಂಚನೆ ದ್ರೋಹಗಳು ಒಮ್ಮೊಮ್ಮೆ ಆಗುವುದುಂಟು ನಾವು ಗಮನಿಸಬೇಕಾದ ಮತ್ತೊಂದು ವಿಚಾರ ಎಂದರೆ ಬಡವ ಬಲ್ಲಿದ ಎಂಬ ಬೇಧ ಭಾವವಿಲ್ಲ ಇದರ ದೃಷ್ಠಿಯಲ್ಲಿ ಎಲ್ಲರೂ ಸಮಾನರೇ ಎಂಬ ಸೂಕ್ಷ್ಮ ಅಂಶವನ್ನು ನಾವು ಕಂಡುಕೊಳ್ಳಬೇಕಿದೆ.

- ಅಂಜನ್ ಎನ್, ದೊಡ್ಡಬಳ್ಳಾಪುರ.


ನಿವೇದನೆ (ಕವನ) - ರಾಘವೇಂದ್ರ ಕುಲಕರ್ಣಿ.

ಋತುವಿಗೂ ಸಾವು ಇರಬಹುದು
ನೆನಪು ಅದಕಾಗಿ ಹೂವ ಪೋಣಿಸಿದೆ
ಹೂವಿಗೂ ಮುನಿಸಿರಬಹುದು
ಅರಳುವದನು ಮರೆತಾಗಿದೆ

ಅವನಿಗೂ ಬೆಸರ ಬರಬಹುದು
ಸುರಿವ ಹನಿಗಳ ಬೆವರ ವಾಸನೆಗೆ
ಅವಳ ಬಿಸಿಯುಸಿರು ತಣ್ಣಗಾಗಲೂ ಬಹುದು
ಚಂದ್ರ ಹುಣ್ಣಿಮೆ ಮರೆತ ಆ ಘಳಿಗೆಗೆ.‌..

ನಾನೇನು ಪ್ರೀತಿಸಲಿ ಇನ್ನೂ
ಶವ ನಗುತಲಿ ಮಸಣ ಬಯಸುವಾಗ
ಒಂದೇ ಆಸೆ ಗೋರಿ ತುಂಬಲಿ 
ಪಾದ ಧೂಳಿಯ ಮಣ್ಣಿಂದಲೆ ಎನ್ನುವಾಗ...
- ರಾಘವೇಂದ್ರ ಕುಲಕರ್ಣಿ.

ಸಾಧನೆ ಉಳಿಯುವುದು (ಕವಿತೆ) - ಮಧುಕೇಶವ್.ಎಂ.

ಸಾಧನೆ ಉಳಿಯುವುದು
ಈ ಜಗದಲಿ ಸಾಧನೆ ಉಳಿಯುವುದು

ನಾನು ಉಳಿಯೋದಿಲ್ಲ!
ನೀನು ಉಳಿಯೋದಿಲ್ಲ!
ಸಾಧಿಸಿದವರಿಗು ಇಲ್ಲಿ ಉಳಿವು ಇಲ್ಲ!

ಸಾಧನೆ ಉಳಿಯುವುದು!

ಕಳೆಯುವೆ ಸಮಯವ ಎಷ್ಣಾ?
ನೀ ನಿನ್ನನೆ ಕೇಳಿಕೊ ಪ್ರಶ್ನಾ?
ನೀ ಸಾಧಿಸು ನಿನ್ನಿಂದಾದಷ್ನಾ!
ನಿನ್ಹಿಂದೆಯೆ ಇರುವನು ಕೃಷ್ಣಾ...

ಸಾಧನೆ ಉಳಿಯುವುದು!

ನಿನ್ನಯ ಜನ್ಮವ ದಂಡಾ!
ನೀನಾಗಿಸ ಬೇಡವೋ ಭಂಡಾ!
ನೀನಾಗೆಲೋ ಕೀರ್ತಿ ಪ್ರಚಂಡಾ!
ಬೆಂಗಾವಲು ಬರುವ ಕೋದಂಡಾ...

ಸಾಧನೆ ಉಳಿಯುವುದು!

ಗೆಲುವಿಗೆ ಪಣವನು ತೊಟ್ಟೂ!
ನೀ ಕೆಡುಕು ತನ ಬುದ್ದಿ ಬಿಟ್ಟೂ!
ನಿನ್ನ ಸಾಧನೆ ಧರಣಿಗೆ ಕೊಟ್ಟೂ!
ಕಡೆ ಕೇಶವ ಪಾದವ ಮುಟ್ಟೂ...

ಸಾಧನೆ ಉಳಿಯುವುದು!
- ಮಧುಕೇಶವ್.ಎಂ.ಗಡೀಹಳ್ಳಿ.

ನಮ್ಮ ನಾಡಿದು ಕನ್ನಡವು (ಕವಿತೆ) - ಹನಮಂತ ಬಿ ಕುರಬರ.

ಕನ್ನಡಿಗರ ಮನೆ ಮಾಳಿಗೆ ಮೇಲೆ
ಹಾರುತಿದೆ ಕನ್ನಡದ ಧ್ವಜ
ನವೆಂಬರ್ ೧ರ ಸಂಭ್ರಮದಲ್ಲಿ
ಅರಿಸಿನ ಕುಂಕುಮ ಬಣ್ಣದ ನಾಡಧ್ವಜ "ಪ"

ಕೋಟಿಕಂಠದೀ ಗಾನಸುಧೆಯಲಿ
ಕೂಡಿ ಹಾಡುವಾ ಕನ್ನಡಿಗರು
ಕನ್ನಡ ಮಾತೆ ಭುವನೇಶ್ವರಿ ದೇವಿಯ
ಉತ್ಸವ ಆಚರಣೆ ಮನೆ ಮನೆಗೂ "೧"

ಹಲವು ನದಿಗಳು ತುಂಬಿ ಹರಿಯುವ
ಸೊಬಗಿನ ನಾಡಿದು ಕನ್ನಡವು
ಗಂಧದ ನಾಡು ಚಿನ್ನದ ಬೀಡು
ನಮ್ಮ ಹೆಮ್ಮೆಯ ನಾಡುಯಿದು(೨)

ಸಂತ ಮಹಾಂತರು ಹುಟ್ಟಿದ ಪವಿತ್ರ
ಪುಣ್ಯದ ನಾಡಿದು ಕನ್ನಡವು
ಕಲೆ ಸಂಸ್ಕೃತಿ ವಾಸ್ತು ಶಿಲ್ಪಕೆ
ಹೆಸರುವಾಸಿ ಈ ಕರ್ನಾಟಕವು"೩"

ಗಡಿನಾಡಿನಲಿ ತಂಟೆಯ ತೆಗೆದರೆ
ಗರ್ಜಿಸಿ ಗುಡುಗುವ ಕನ್ನಡಿಗರು
ಹಲವು ಭಾಷೆಗಳ ಒಲವು ಇದ್ದರೂ
ಮಾತನಾಡುವ ಭಾಷೆಯು ಕನ್ನಡವು
ನಮ್ಮ ನಾಡಿದು ಕನ್ನಡವು "೪"
- ಹನಮಂತ ಬಿ ಕುರಬರ.
ಸಾ:ಬಳ್ಳಿಗೇರಿ.
ತಾ:ಅಥಣಿ.ಜಿ:ಬೆಳಗಾವಿ.
ಮೊ:9632189967

ಅಡವಿಯೊಳಗೊಂದಿನ (ಕವಿತೆ) - ಬಿ.ಹೆಚ್.ತಿಮ್ಮಣ್ಣ.

ದೀಪಾವಳಿಯ ಬಲಿಪಾಡ್ಯದೊಂದಿನ
ಹೋಗಿದ್ದೆವು ಸ್ನೇಹಿತರೆಲ್ಲಾ ಕೂಡಿ ಅಡವಿಗೆ
ಕಂಕುಳಲ್ಲಿ ದಾರ ಬಿಗಿದ ಚೀಲ
ಕೈಯಲ್ಲೊಂದು ನೀರು ತುಂಬಿದ ಪ್ಲಾಸ್ಟಿಕ್ ಬಾಟ್ಲಿ 
ಕಳ್ಳರಂತೆ ಲೂಟಿಗೆಂದು ನುಗ್ಗುತ್ತಿದ್ದೆವು ಸಿಗುವ ದಾರಿಗಿ

ಅಂಟ್ರಿ ಕಂಟ್ರಿ ಮೈಗೆ ತರಚುತ್ತ ಕೈಯಿಂದ ಅದನ್ನೆಲ್ಲಾ ಸರಿಸುತ್ತ
ಕಣ್ಣಾಯಿಸಿದ ಜಾಗವನ್ನು ಕಾಲಿಂದ ಆಕ್ರಮಿಸುತ್ತ
ಒಳಹೊಕ್ಕು ಹರಿಬಿದ್ದೆವು ಸೀತಾಫಲ ಬನದ ಸುತ್ತ

ಗಿಡದೊಟ್ಟಿಗೆ ಗಟ್ಟಿ ಸ್ನೇಹ ಬೆಳೆಸಿದ ಕಾಯಿ 
ಅಂತಿತ್ತೇನೋ ಕಟಕರು ಬಂದರೆಂದು 
ತನ್ನ ರಕ್ಷಣೆಗೆ ಮುಳ್ಳುಕಂಟಿಗೆ ಕಾಯ್ದಿರಿಸಿ 
ಮರೆಯಲ್ಲಿ ಅವಿತಿದ್ದರೂ,
ಬಿಡಲಿಲ್ಲ ನಮ್ಕಣ್ಣು
ಕಣ್ಣು ಬಿತ್ತೆಂದು ಕೈ ಸುಮ್ಮನಿರದೇ,
ಅದರ ಕವಚವನ್ನೆಲ್ಲ ತಳ್ಳುತ್ತಾ
ಗಿಡದಿಂದ ಅದರ ಸ್ನೇಹ ಮುರಿಯುತ್ತಾ 
ಕೈ ಚಾಚಿ ಹರಿಯುತ್ತಾ 
ದೂರ ಮಾಡಿದೆವು ಅದರ ಬಂಧ

ನಮ್ಮ ಖುಷಿಯೊಳಗೆ ನಾವು ತುಂಬಿದರೆ 
ಅದರ ನೋವು ನಮಗೆಲ್ಲಿ ತಿಳಿವುದು 
ಅದು ತನ್ನ ಜೀವನದ ಅರಿವು ಅರಿತಿರುವುದು 
ನಾನು ಬದುಕಿರುವುದೇ ಮತ್ತೊಬ್ಬರಿಗೆ ಆಸರೆಯಾಗಲು
ನನ್ನನ್ನು ಬಳಸಿದವರಿಗೆ ಸಿಗುವುದು ಆರೋಗ್ಯದ ಭಾಗ್ಯ

ನನ್ನಂತೆಯೇ ಆಗುವರು ಕೊನೆಗೆಲ್ಲರೂ ಒಂದಿನ
ಹೋಗುವುದರೊಳಗೆ ಕಿಂಚಿತ್ತಾದರೂ ಮಾಡಿ ಕೈಯಿಂದ ದಾನ
ಜಾರಿ ಹೋಗದಂತೆ ಕಾಯ್ದುಕೊಳ್ಳಿ ನಿಮ್ಮಿಂದ ಮಾನ
ಮುಗಿವಿರಿ ಪ್ರಾಣ ಹೋಗುವಾಗ ದೇವರಿಗೆ ನಮನ

ತನ್ನನ್ನು ತಾನರಿತು ಬಾಳಿತು ಆ ಹಣ್ಣು 
ನಾವರಿತು ಬಾಳಿದರೆ ಜಗ ಬಿಡುವುದು ಕಣ್ಣು 
ಹಮ್ಮಿಲೆ ಮೆರೆದಾಡಿದರೆ ಆದಿತು ಮನಸ್ಸಿಗೆ ಹುಣ್ಣು 
ಕಣ್ಣು ಮುಚ್ಚಿ ಕುಣಿಯೊಳಗೆ ಕುಂತಾಗ ಹಾಕುವರೆಲ್ಲರೂ ಬಂದು ಹಿಡಿಮಣ್ಣು
- ಬಿ.ಹೆಚ್.ತಿಮ್ಮಣ್ಣ


ನಗು ಮುಖದ ಚಿತ್ರಣ (ಕವಿತೆ) - ಮಣಿಕಂಠ ಗೌಡ.

ಕಳೆದಷ್ಟು ದಿನಗಳಲ್ಲಿ ಎಂದೂ ಮರೆಯಲಾಗದ ಅನುಭವ
ಬೇರೆತ ಮನಸುಗಳಲ್ಲಿ ಎಂದೂ ಕಂಡರಿಯದ ಭಾವ
ಬದುಕಿನುದ್ದಕ್ಕೂ ಕಾಡುವ ಕಾತುರದ ಪ್ರಶ್ನೆಗಳು
ಪಯಣದುದ್ದಕ್ಕೂ ಕಾಡುವ ನೆನಪಿನ ಹೆಜ್ಜೆಗಳು
ಇವೆಲ್ಲದರ ನಡುವೆ ಇರುವಷ್ಟು ದಿನ ನಗುಮುಖದ ಚಿತ್ರಣ

ಅವರಿವರ ನೋಡಿ ಕಲಿಯುವ ಬಯಕೆ
ಕಲಿತಷ್ಟು ಏಕೋ ಕಡಿಮೆಯಾಗುತ್ತಿದೆ ಈ ಜೀವಕೆ
ಮುಖವಾಡದಿ ನಾಟಕದ ಈ ಜಗದೊಳು
ನನ್ನದಾವ ಪಾತ್ರವೋ...
ಹಣೆಬರಹವ ಅವನೇ ಬರೆದಿರುವನಂತೆ
ಹಗಲಿರುಳು ಚಿಂತಿಸುವ ಮನಸು ಅದೆಷ್ಟು ಮೂರ್ಖವೋ...
ಇವೆಲ್ಲದರ ನಡುವೆ ಇರುವಷ್ಟು ದಿನ ನಗುಮುಖದ ಚಿತ್ರಣ

ಯಾವುದೋ ನೆಪದಲ್ಲಿ ಬುದ್ದಿ ಹೇಳೋಮಂದಿ ನೂರಾರು
ಚಿಂತಿಸಿದಷ್ಟು ಬಗೆಹರಿಯದ ಸಮಸ್ಯೆಗಳು ಹಲವಾರು
ಈಡೇರದ ಕನಸುಗಳು ಒಂದೊದಾಗಿ ಸತ್ತಿವೆ
ಕೊಂಡೋಯ್ಯಬೇಕಾಗಿದೆ ಯಾವುದಾದರೊಂದು ಸುಡುಗಾಡಿಗೆ
ಎಲ್ಲದಕೂ ಕಂಬನಿಯ ದಾರೆ ಎರೆಯುತ
ಕಣ್ಣೀರ ಬಾವಿ ಬತ್ತಿದೆ
ನಾನ್ಯಾರ ಕೇಳಲಿ ಬಾಯಾರಿದ ಈ ಹೃದಯಕೆ
ಕಂಬನಿಯ ನೀಡಲು ಬಾಡಿಗೆ
ಇವೆಲ್ಲದರ ನಡುವೆ ಇರಲಿ ಇರುವಷ್ಟು ದಿನ ನಗು ಮುಖದ ಚಿತ್ರಣ.

- ಮಣಿಕಂಠ ಗೌಡ
ಉತ್ತರ ಕನ್ನಡ ಜಿಲ್ಲೆ
ಶಿರಸಿ, ಮಂಜುಗುಣಿ
9482079553.

ಮನಸಿನ ಮಾರಾಣಿ (ಕವಿತೆ) - ಬಸವರಾಜ ಎಸ್, ಕೋಟಗೇರಾ.

ಯಾರಿವಳು ಚಂದಿರನ ತಾರೆಯ ಪ್ರತಿಬಿಂಬದ ಪ್ರಗತಿನಂತವಳು ಎನ್ನೆದೆಯ ಗರ್ಭದೊಳು ಆಡಗಿ ಕೂತವಳು ರಂಜಿಸುವ ಕಾಂತಿಯಲಿ ದೊರೆತ ರತ್ನದ ಅವಳಿನಂತವಳು

ನಾಚಿಕೆಯ ನಗುವಲ್ಲಿ ನನ್ನೇ ಮರೆಸಿದವಳು ಸಾವಿರಾರು ಹುಡಿಗಿಯರ ಗುಂಪಲ್ಲಿ ಕನ್ನಡಿಯಂತೆ ಒಳೆದವಳು ಕನಸಿನ ಸಾಮ್ರಾಜ್ಯಕ್ಕೆ ಕೈ ಮಾಡಿ ಕರೆದವಳು ಮನಸಿನ ಮಾ, ರಾಣಿಯವಳು 

ನೆಪ ಒಂದು ಬೇಕಾಗಿದೆ ನಿನ್ನ ನೋಡಲು ಬಚ್ಚಿಟ್ಟು ಕೊಂಡಿರುವ ಪ್ರೀತಿಯ ಭಾವನೆಯನ್ನ ನಿನ್ನ ಮುಂದೆ ಬಿತ್ತರಿಸಲು
- ಬಸವರಾಜ ಎಸ್, ಕೋಟಗೇರಾ.

ಪ್ರೀತಿಗೆ ಮುಪ್ಪಿಲ್ಲ (ಕವಿತೆ) - ಶಿವಾ ಮದಭಾಂವಿ.

ದಾಂಪತ್ಯವು ಛಲವು ಒಲವು ಗೆಲುವಿನಲಿ 
ಜೊತೆಯಲಿ ತೇಲುತಾ ಸಂಪ್ರೀತಿಯಲಿ

ಸಾಗುತಿದೆ ಬಾಳ ನೌಕೆಯಲಿ ಪಯಣ
ಕಷ್ಟಗಳ ಕಾಲಡಿ ತುಳಿದು ನಡೆಸುತಾ ಜೀವನ

ಪ್ರೇಮಮಯ ಮಾತುಗಳಿಗೇನು ಬರವಿಲ್ಲ
ಒಬ್ಬರಿಗೊಬ್ಬರು ಆಗಿಹರು ತಾವೆ ಜಗವೆಲ್ಲ

ಯೌವ್ವನ ಮಾಸಿಹುದು ಮುಪ್ಪು ಆವರಿಸಿಹುದು
ಕೈ ಹಿಡಿದ ಪ್ರೀತಿ ಪ್ರೇಮಕೆ ಕೊನೆಯಿರದು

ಸಾಗತಿದೆ ನಿಜ ಪ್ರೇಮಮಯಿ ಜೀವನದತ್ತ
ಜಗಕೆ ಸಾರುತ ಪ್ರೀತಿಯ ಅರ್ಥ ತಿಳಿಸುತ
- ಶಿವಾ ಮದಭಾಂವಿ, ಗೋಕಾಕ.

ದರ್ಪಣ ಸುಂದರಿ (ಕವಿತೆ) - ಮಧುಮಾಲತಿ ರುದ್ರೇಶ್.

ನೂರು ಭಾವ ಮೇಳೈಸಿದೆ ವದನದಲಿ
 ಚೆಲುವಿಗೆ ದರ್ಪಣವೇ ನಾಚುತಿಹುದು ನೋಡಿಲ್ಲಿ

 ಡಂಕಣ ಜಕಣರ ಮನೋ ಭೂಮಿಕೆಯ ಮದನಿಕೆ
 ಶಿಲ್ಪಿಗಳ ಕೈಯಲ್ಲರಳಿದ ದರ್ಪಣ ಶಿಲಾಬಾಲಿಕೆ 

ಸಾವಿರ ಶಿಲ್ಪಗಳಲಿ ಮನ ಸೆಳೆವ ದರ್ಪಣಸುಂದರಿ
 ಕಲಾರಸಿಕರಿಗೆ ಸ್ಪೂರ್ತಿ ಚಿಲುಮೆ ಕಾವ್ಯ ಮಯೂರಿ

 ನಾಟ್ಯರಾಣಿ ಶಾಂತಲೆಯೇ ಶಿಲೆಯಾಗಿ ನಿಂತಿಹಳು
 ಸುರಲೋಕದಪ್ಸರೆಯೇ ಈ ಅಂದಕೆ ನಾಚುತಿಹಳು

 ಶಿಲೆಯೊಳ್ ಕಲೆಯರಳಿಸಿ ನಿಂದ ಬೇಲೂರ ಬಾಲೆ
 ಶಿಲ್ಪಕಲಾ ಗುಡಿಯೊಳು ಅರಳಿರುವ ಜಾಜಿ ಮಲ್ಲೆ
 - ಮಧುಮಾಲತಿ ರುದ್ರೇಶ್, ಬೇಲೂರು.

ತಲೆಕೆಳಗಾಗಿ ನಿಂತಿರುವ (ಶೀರ್ಷಾಸನ) ಶಿವ. (ಸ್ಥಳ ಪರಿಚಯ) - ಸುವರ್ಣಲಕ್ಷ್ಮಿ ಎಂ.

ಸಾಮಾನ್ಯವಾಗಿ ಶಿವನನ್ನು ಲಿಂಗ ರೂಪಿಯಾಗಿ
ಹಲವೆಡೆ ವಿಗ್ರಹರೂಪಿಯಾಗಿ ಕಾಣುತ್ತೇವೆ.
ಆದರೆ ಆಂಧ್ರಪ್ರದೇಶದ ಭೀಮವರಂ ನಿಂದ 4ಕಿಮೀ ದೂರದಲ್ಲಿರುವ ಯನಮುದುರು ಎಂಬ ಗ್ರಾಮದಲ್ಲಿ ಶೀರ್ಷಾಸನದಲ್ಲಿ ನಿಂತಿರುವ ಶಿವನನ್ನು ದರ್ಶಿಸಬಹುದು. ಆತನ ಪಕ್ಕದಲ್ಲಿ ಮಾತೆ ಪಾರ್ವತಿಯು ಮೂರು ತಿಂಗಳ ಹಸುಗೂಸನ್ನು ಎತ್ತಿಕೊಂಡು ಕುಳಿತಿದ್ದಾಳೆ. 
ಇಲ್ಲಿ ಶಿವ ಹೀಗೇಕೆ ಶೀರ್ಷಾಸನದಲ್ಲಿ ನಿಂತಿದ್ದಾನೆ ಅನ್ನುವುದಕ್ಕೆ ಒಂದು ದಂತಕಥೆಯನ್ನು ಹೇಳುತ್ತಾರೆ ಹಿರಿಯರು.
        ಅಸುರನೊಬ್ಬ ತನ್ನಲ್ಲಿದ್ದ ರಕ್ಕಸ ಶಕ್ತಿಯಿಂದ ಅಟ್ಟಹಾಸವನ್ನು ಮೆರೆಯಲು ಆರಂಭಿಸ್ತಾನೆ. ಅವನಿಂದ ಜನಸಾಮಾನ್ಯರು, ಋಷಿಮುನಿಗಳು, ದೇವಾನುದೇವತೆಗಳು ಆತಂಕದಲ್ಲಿ ಜೀವನ ಸಾಗಿಸುವಂತಾಯಿತು. ಆ ರಕ್ಕಸನ ಸಂಹಾರ ಯಮನಿಂದ ಮಾತ್ರ ಸಾಧ್ಯ ಅನ್ನೋದನ್ನು ಅರಿತ ದೇವಾನುದೇವತೆಗಳು ಯಮನ ಬಳಿಗೆ ಹೋಗ್ತಾರೆ. ರಕ್ಕಸನ ಅಟ್ಟಹಾಸದ ಬಗ್ಗೆ ಹೇಳ್ತಾರೆ.
ರಕ್ಕಸನ ಅಟ್ಟಹಾಸದ ಬಗ್ಗೆ ಅರಿತ ಯಮಧರ್ಮರಾಯ ಆತನನ್ನು ಸಂಹಾರ ಮಾಡಲು ಮುಂದಾಗ್ತಾರೆ. ಆದ್ರೆ ಯಮಧರ್ಮರಾಯ ತಮ್ಮೆಲ್ಲಾ ಶಕ್ತಿಯನ್ನು ಪ್ರಯೋಗಿಸಿದ್ರೂ ಸಹಾ ಅದು ಸಾಧ್ಯವಾಗದಂತಹ ಸ್ಥಿತಿ ಎದುರಾಗುತ್ತೆ. ಅಂತಹ ಸ್ಥಿತಿಯಲ್ಲಿ ಯಮ ಆ ರಕ್ಕಸನನ್ನು ಸಂಹರಿಸಲು ಶಿವನ ಸಹಾಯ ಕೋರಿ ಕೈಲಾಸಕ್ಕೆ ಹೋಗುತ್ತಾನೆ. ಅಲ್ಲಿರುವ ಶಿವದೂತರು ಶಿವನು ಕೈಲಾಸದಲ್ಲಿ ಇಲ್ಲವೆಂದೂ
ತಪಸ್ಸಿಗೆ ಹೋಗಿದ್ದಾರೆಂದೂ ತಿಳಿಸುತ್ತಾರೆ. ಶಿವನನ್ನು ಹುಡುಕುತ್ತಾ ಹೊರಟ ಯಮನಿಗೆ ಈ ಸ್ಥಳದಲ್ಲಿ ಶಿವ ಶೀರ್ಷಾಸನದಲ್ಲಿ ತಪಸ್ಸು ಮಾಡುತ್ತಾ ಕಾಣಿಸುತ್ತಾನೆ. ಪಕ್ಕದಲ್ಲಿ ಮಾತಾ ಪಾರ್ವತಿಯು ಮೂರು ತಿಂಗಳ ಹಸುಗೂಸು ಕಾರ್ತಿಕೇಯನನ್ನು ಎತ್ತಿಕೊಂಡು ಕುಳಿತಿದ್ದಾಳೆ. 
ಯಮ ತನ್ನ ಸಮಸ್ಯೆಯನ್ನು ಶಿವನಿಗೆ ಅರುಹಿ ರಕ್ಕಸ ಸಂಹಾರಕ್ಕೆ ಶಕ್ತಿಯನ್ನು ಬೇಡುತ್ತಾನೆ. ಯಮನ ಯಾವ ಮಾತಿಗೂ ಶಿವ ಪ್ರತಿಕ್ರಿಯೆ ನೀಡುವುದಿಲ್ಲ ಆಗ ಯಮನು ಮಾತೆಯ ಕಡೆಗೆ ದೃಷ್ಟಿ ಹರಿಸುತ್ತಾನೆ ಅದಾಗಲೇ ಶಿವನಿಂದ ಜ್ಞಾನ ಸಂದೇಶ ಪಡೆದಿದ್ದ ಪಾರ್ವತಿಯು ತನ್ನ ಶಕ್ತಿಯನ್ನು ಯಮನಿಗೆ ಧಾರೆ ಎರೆಯುತ್ತಾಳೆ. ಆ ದಂಪತಿಯಿಂದ ಅದ್ಭುತವಾದ ಶಕ್ತಿಯನ್ನು ಪಡೆದಂತಹ ಯಮಧರ್ಮರಾಯ ರಕ್ಕಸನನ್ನು ಸಂಹಾರ ಮಾಡ್ತಾನೆ.
ಅಂದಿನಿಂದ ಈ ಸ್ಥಳದ ಹೆಸರು ಯಮಪುರಿ ಎಂದು ಆಯಿತು ಆದರೆ ಆದು ಜನರ ಬಾಯಲ್ಲಿ 
ಇಂದು "ಯಮನುದುರು" ಆಗಿದೆ.
ಈ ಘಟನೆ ಇಲ್ಲಿ ನಡೆದದ್ದರಿಂದ ಶೀರ್ಷಾಸನದಲ್ಲಿ ಶಿವನಿರುವಂತೆ ವಿಗ್ರಹ ಪ್ರತಿಷ್ಠೆ ಮಾಡಲಾಗಿದೆ ಪಕ್ಕದಲ್ಲಿ ಹಸುಗೂಸಿನ ಸಮೇತ ಪಾರ್ವತಿಯ ವಿಗ್ರಹ ವನ್ನು ಪ್ರತಿಷ್ಟಿಸಲಾಗಿದೆ.
ಯಮ ಇಲ್ಲಿ ಶಕ್ತಿಯನ್ನು ಪಡೆದದ್ದರಿಂದ ಇಲ್ಲಿರುವ ಶಿವನನ್ನು ಶಕ್ತೇಶ್ವರ ಎಂದೂ ಕರೆಯುತ್ತಾರೆ. ಇಲ್ಲಿಗೆ ಭಕ್ತರು ಬಂದು ಬೇಡಿದರೆ ಈ ದಂಪತಿಗಳು ಕರುಣಿಸುತ್ತಾರೆಂದು ಇಲ್ಲಿಗೆ ಬರುವ ಭಕ್ತರು ಹೇಳುತ್ತಾರೆ. 
ಪುರಾಣಗಳ ಪ್ರಕಾರ ಕವಿ ಕಾಳಿದಾಸನು ತನ್ನ "ಕುಮಾರ ಸಂಭವ"  ದಲ್ಲಿ ಯಮನುದುರು ವಿನ 
ಬಗ್ಗೆ ಪ್ರಸ್ತಾಪವಿದೆ. ಭೋಜರಾಜನೂ ಇಲ್ಲಿಗೆ ಭೇಟಿ ನೀಡಿದ್ದನು ಎಂದು ಉಲ್ಲೇಖಗಳಿವೆ. ಈ ದೇಗುಲದ ಬಳಿ ಒಂದು" ಶಕ್ತಿಗುಂಡಂ " ಹೆಸರಿನ ಕೆರೆ ಇದ್ದು ಇಲ್ಲಿ ಗಂಗಾ ನದಿಯು ಗುಪ್ತಗಾಮಿನಿಯಾಗಿ ಹರಿಯುತ್ತಿದ್ದಾಳೆಂದೂ ನ ಹಾಗೂ ಈ ಕೆರೆಗೆ ಎರಡು ಶಕ್ತಿಶಾಲಿ ಸರ್ಪಗಳು ಕಾವಲು  ಇವೆಯೆಂದೂ ನಂಬಿಕೆ ಈ ಕೆರೆಯ ನೀರನ್ನೇ ಈಗಲೂ ಅಭಿಷೇಕಕ್ಕಾಗಿ ಹಾಗೂ ನೈವೇದ್ಯಕ್ಕಾಗಿ  ಬಳಸಲಾಗುತ್ತದೆ. ಒಂದು ವೇಳೆ ಬೇರೆ ನೀರನ್ನು ಬಳಸಿದರೆ ನೈವೇದ್ಯ ಬೇಯುವುದಿಲ್ಲವೆಂದು ಹೇಳುತ್ತಾರೆ  ಇಲ್ಲಿನ ಅರ್ಚಕರು. ಸಮಯ ಅನುಕೂಲಿಸಿದಾಗ ಒಮ್ಮೆ ಈ ವಿಶಿಷ್ಟ  ಕ್ಷೇತ್ರಕ್ಕೆ ಭೇಟಿ ನೀಡಿ ವೈಶಿಷ್ಟ್ಯಪೂರ್ಣ ಶಿವನನ್ನು ದರ್ಶಿಸಿ ಪುನೀತರಾಗೋಣ.

- ಶ್ರೀಮತಿ ಸುವರ್ಣಲಕ್ಷ್ಮಿ ಎಂ. ಶಿಕ್ಷಕರು.


ಮಕ್ಕಳು (ಕವಿತೆ) - ಕಾಡಪ್ಪಾ ಮಾಲಗಾಂವಿ.

ಮಗು ನಿನ್ನ 
ನಗು ಅದುವೆ
ನಗ,ನಾಣ್ಯ ನಮಗೆ

ಮಗು ನೀನು ಅರಳುವ
ಮೊಗ್ಗು ಅದುವೆ
ಸುಗ್ಗಿ ನಮಗೆಲ್ಲ

ಮಗು ನಿನ್ನ ಮುಖ
ಕುಗ್ಗಿಸುವದು ಕಷ್ಟ
ಹಿಗ್ಗಿಸುವದು ಮನ

ಮಗು ನಿನ್ನ ತುಂಟಾಟ
ಬಗ್ಗು ಬಡಿಯುವದು ಸಂಕಟ
ಬುಗ್ಗೆ ಯಂತೆ ಹರಡುವದು ಆನಂದ.

ಮಗು ನಿನ್ನ ತೊದಲನುಡಿ
ಜಗ್ಗುವದು ಮನಸ್ಸು
ನುಗ್ಗುವದು ಸಂತಷದ ಬಾಳು

ಮಗು ನಿನ್ನ ನೋಟ
ಮುಗ್ಗುರಿಸುವದು ಕಷ್ಟ
ತಗ್ಗುವದು ದುಃಖ

ಮಕ್ಕಳೆ ನಮೆಗೆಲ್ಲ ಆಸ್ತಿ,ಪಾಸ್ತಿ.

- ಕಾಡಪ್ಪಾ ಮಾಲಗಾಂವಿ, ಶಿರೋಳ.


ಶನಿವಾರ, ನವೆಂಬರ್ 5, 2022

ನನ್ನದು ಕನ್ನಡ ನಾಡು (ಕವಿತೆ) - ಹನುಮಂತ ದಾಸರ, ಹೊಗರನಾಳ.

ನನ್ನದು ಕನ್ನಡ ನಾಡು ರತ್ನತ್ರಯರ ಬೀಡು
ಕುವೆಂಪು ಬೇಂದ್ರೆಯವರ ನಾಡು ಜ್ಞಾನ ಪೀಠಗಳ ಬೀಡು
ಕವಿ ಸಾಹಿತಿಗಳ ಸ್ವಚ್ಛ ಅಂದದ ನಾಡು.....!

ನನ್ನದು ಕನ್ನಡ ನಾಡು ಸುಂದರ ಕವಿ ಕಲೆಯಾಗರಗಳ ಬೀಡು
ಸಿಹಿ ಸಕ್ಕರೆಯ ನಾಡು ನದಿ ಸರೋವರಗಳ ಬೀಡು
ಪ್ರೀತಿ ಪ್ರೇಮ ಸ್ನೇಹ ಸಂಬಂಧಗಳ ನಾಡು.....!

ನನ್ನದು ಕನ್ನಡ ನಾಡು ಶಾಲ್ಮಲೆಯು ಹರಿಯುವ ನಾಡು
ಕಾವೇರಿ ಶರಾವತಿ ತುಂಗೆಯ ಬೀಡು ವಿಶ್ವವಿದ್ಯಾಲಯಗಳ ನಾಡು
ವಿಶ್ವವಿಖ್ಯಾತಿ ಇತಿಹಾಸಿಕ ಕಟ್ಟಡಗಳ ಬೀಡು......!

ನನ್ನದು ಕನ್ನಡ ನಾಡು ಸಂಗೀತ ಸ್ವರಗಳ ನಾಡು
ವನಸಿರಿಗಳ ಶ್ರೀಗಂಧದ ಬೀಡು ಸಂಹ್ಯಾದ್ರಿ ಪರ್ವತಗಳ ನಾಡು
ಅರಮನೆ ಬೃಂದಾವನಗಳ ಬೀಡು......!

ನನ್ನದು ಕನ್ನಡ ನಾಡು ಪ್ರಮುಖ ರಾಜಮನೆತನಗಳ ಬೀಡು
ರಂಗಮಂದಿರಗಳ ನಾಡು ಕಲೆ ಸಾಂಸ್ಕೃತಿಕ ಸಂಪ್ರದಾಯಗಳ ಬೀಡು, ರಾಜ ರಾಜಕಾರಣಿಗಳ ನಾಡು......!

ನನ್ನದು ಕನ್ನಡ ನಾಡು  ವಚನ ಭಂಡಾರಗಳ ಬೀಡು
ಹಲ್ಮಿಡಿ ಶಾಸನದ ನಾಡು ಸುವರ್ಣ ನಗರಗಳ ಬೀಡು
ಕರುಣಾಮಯಿಗಳ ನಾಡು......!

ನನ್ನದು ಕನ್ನಡ ನಾಡು ಧಾರ್ಮಿಕ ಕ್ಷೇತ್ರಗಳ ನಾಡು
ಬೆಟ್ಟ ಗುಡ್ಡ ಗುಹಾಲಯಗಳ ಬೀಡು ಆಕಾಶಕಾಯಗಳ ಜ್ಞಾನಿ ವಿಜ್ಞಾನಿಗಳ ನಾಡು, ಶಾಖೋತ್ಪನ್ನ ಕೇಂದ್ರಗಳ ಬೀಡು......!

ನನ್ನದು ಕನ್ನಡ ನಾಡು ಸಿರಿ ಸಂಪತ್ತಿನಲಿ ಮೆರೆದ ನಾಡು
ವಜ್ರ ವೈಡೋರ್ಯಗಳ ನಾಡು ಸರ್ವ ಜನಾಂಗದ ಶಾಂತಿಯ ನಾಡು, ವಿಶ್ವದೆಲ್ಲೆಡೆ ಕನ್ನಡದ ಕಂಪನ್ನು ಸಾರಿದ ನಾಡು.....!
- ಹನುಮಂತ ದಾಸರ, ಹೊಗರನಾಳ.

ಮಾತೃಭಾಷೆ (ಕವಿತೆ) - ಬಿ.ಹೆಚ್.ತಿಮ್ಮಣ್ಣ.

ಬೆಳಗುತಿರಲಿ ದೀಪವು ನಿನ್ನ ಅಂಗಳದಲ್ಲಿ
ಬೆಳಕಿನ ಕಿರಣವು ಸೂಸಲಿ ಜಗದೆಲ್ಲೆಡೆಯಲ್ಲಿ
ಅರಳುತಿಹವು ಹೂವುಗಳು ನಿನ್ನ ತನುವ ಬನದಲ್ಲಿ
ಹಾರುತಿರಲಿ ಹಳದಿ ಕೆಂಪು ಬಾವುಟ ಗಗನದೆತ್ತರದಲ್ಲಿ

ನಿನ್ನ ನೆಲವು ಹರಡಿದೆ ಗೋದಾವರಿಂದ ಕಾವೇರಿವರೆಗೆ
ಈ ಮಣ್ಣನು ಉಳಿಸಲು ಹೋರಾಡಿದರು ಕಡೆವರೆಗೆ
ರಣಕಲಿಗಳಾಗಿ ಮೆರೆದು ಮಡಿದರು ನಿನ್ನ ಮಣ್ಣೊಳಗೆ
ಮುಕ್ತಿ ನೀಡುವೆ ತಾಯಿ ಅಳಿದವರ ಜೀವಗಳಿಗೆ

ಹರಿವರು ಮೈತುಂಬಿ ಕಾಳಿ ಶರಾವತಿ
ಜಾರುವರು ಗಗನಚುಕ್ಕಿ ಗೋಕಾಕ ಶಾಂತಿ
ಮರ ಬೆಳೆದು ನಿಂತಾವೆ ಮುಗಿಲೆತ್ತರಕ್ಕೆ ತಲೆಯೆತ್ತಿ
ಕನ್ನಡಿಗರ ಹೃದಯದೊಳಗೆ ನೀ ನೆಲೆಸಿ ಕುಂತಿ

ರಾಷ್ಟ್ರಕೂಟ ಕದಂಬ ಬಾದಾಮಿ ಹೊಯ್ಸಳರು ಆಳಿದರು
ರನ್ನ ಪೊನ್ನ ಪಂಪ ಷಡಕ್ಷರಿ ಆಶ್ರಯದಲ್ಲಿ ನೆಲೆಸಿದರು
ನಾಡಿನ ಹಿರಿಮೆ ಘನತೆ ಗೌರವ ಎತ್ತಿ ಹಿಡಿದರು
ರಾಯರು ಒಡೆಯರು ವೈಭವದಿ ನಾಡನ್ನು ಬೆಳಗಿದರು

ನಾಡನ್ನು ಕಟ್ಟಲು ಬೇಕು ಬಹುದಿನ
ಕೆಡವಲು ಸಾಕು ಅರೇ ಕ್ಷಣ
ವೀರ ಧೀರ ನಾರಿಯರು ಬದುಕಿದರು ಆ ದಿನ
ಕರುನಾಡನ್ನು ಕಟ್ಟಿ ಕೈಯಲ್ಲಿ ಬಿಟ್ಟು ಮರೆಯಾದರು ಈ ಸುದಿನ

ಘಮಿಸುವ ಪರಿಮಳ ಬೀರುವ ಮಣ್ಣಲಿ ಕಂಪು ಚೆಲ್ಲಿದರು
ತಂಪಲಿ ಇಂಪಿನ ಕಂಪನ ಶ್ರಾವ್ಯಕ್ಕೆ ಹಿತವುಂಟು ಮಾಡಿದರು
ಚಿನ್ನದ ನಾಡಲ್ಲಿ ನನ್ನಯ ತವರಲ್ಲಿ ಸೊಬಗಿನ ಸಿರಿಯು ನೀಡಿದರು
ಗಂಧದ ನಾಡಲ್ಲಿ ವರವ ಬೇಡಿಕೊಂಡಂತೆ ಹುಟ್ಟಿದ ನಾವುಗಳೇ ಭಾಗ್ಯವಂತರು.

  - ಬಿ.ಹೆಚ್.ತಿಮ್ಮಣ್ಣ


ಸಾಹಿತ್ಯ ಪತ್ರಿಕೆ (ಕವಿತೆ) - ಕಾಡಪ್ಪಾ ಮಾಲಗಾಂವಿ, ಶಿರೋಳ.

ಸಾಹಿತ್ಯ ಪತ್ರಿಕೆ
ನವ ಬರಹಗಾರರ ವೇದಿಕೆ
ಮತ್ತೆ,ಮತ್ತೆ ಬರಿಯಬೇಕೆನ್ನುವ ಪೀಠಿಕೆ.

ಕಲಿಸುವದು ಹೊಸಬರಿಗೆ ಬರಹ
ವಿಚಾರಿಸುವದು ಅನೇಕ ತರಹ
ಕೊಡುವುದು ಎಲ್ಲರಿಗೂ ಪ್ರೋತ್ಸಾಹ.

ಪ್ರತಿಭೆಗಳಿಗೆ ಹಾಕುವದು ಮನ್ನಣೆ
ರೂಪಿಸುವದು ಅಕ್ಷರಗಳ ಜೋಡಣೆ
ಕೊಡುವದು ನವ,ನವೀನತೆಯರಿಗೆ ಪ್ರೇರಣೆ.

ತೋರಿಸುವುದು ಕಾ,ಗುಣಿತದ ಶಬ್ದ
ಮಾಡುವದು ಅಕ್ಷರಗಳ ಸದ್ದು
ಕವಿ,ಕವಿತ್ರೆಯರಿಗೆ ಅದು ಬದ್ದ.

ಅಕ್ಷರವೆ ಸುಧಾರಣೆಯ ಸೂತ್ರ
ಪದ ಬಂದವೆ ಅಸ್ತ್ರ
ಅಭಿವೃದ್ಧಿಯೆ ಸಾಹಿತ್ಯ ಗಳ ಮಂತ್ರ.

ನಡೆಸುವರು ವರ್ಷಕೊಮ್ಮೆ ಅಕ್ಷರ ಜಾತ್ರೆ
ಬರಹಗಾರರು, ಸಾಹಿತ್ಯಗಳ ಕ್ಯೆಗೊಳ್ಳುವರು ಯಾತ್ರೆ
ಸಕಲ ಕ್ಷೇತ್ರಕ್ಕೆ ಕೊಡುವದು ಜಾಗ್ರತೆ.

- ಕಾಡಪ್ಪಾ ಮಾಲಗಾಂವಿ, ಶಿರೋಳ.

ಅಪ್ಪು ಸ್ಮರಣೆ (ಕವಿತೆ) - ಡಾ. ಸುರೇಶ ನೆಗಳಗುಳಿ.

ದಾನಿಗಳ ಕಂಡಿಹೆವು ಜಗದಲ್ಲಿ ಬಹಳ
ಮೌನದಲಿ ಜನರ ಸುಖ ಬಯಸುವರು ವಿರಳ
ಮನದಲಿಹ ಪರರೊಲವು ಜೀವನವು ಸರಳ
ತನುವ ಸವೆಸಿದ ಪುನೀತರಾಜಗೆ ನಮನ ಬಹುಳ

ಅರಿವಿಗೇ ಬರಲಿಲ್ಲ ಬದುಕಿರುವ ಸಮಯ
ಇರಿಸಿರುವ ಆಂತರ್ಯ ಇತ್ತೆಂದು ತ್ಯಾಗ ಮಯ 
ಬಿರಿದ ಮಲ್ಲಿಗೆ ಹೂವು ವನದಲ್ಲಿ ಇದ್ದಂತೆ
ಹರಿಸಿ ಬಿಟ್ಟಿತು ಜಗದಿ ಗಂಧ ಇನ್ನಿಲ್ಲದಂತೆ

ಯಾರ ಬಳಿಯೂ ಇಲ್ಲ‌ವಿರಸ ಭಾವಗಳು
ತೋರುತಲೆ ಇರುವಂಥ ಮುಗ್ಧ ಹಾಸಗಳು
ನೇರ ನುಡಿ ಸರಳತೆಗೆ ಮುಡಿಪಾದ ದೇಹ
ಸೇರಿಹರು ಅಪ್ಪನೆಡೆ ಸ್ವರ್ಗದಲಿ ಗೇಹ

ಅನುಸರಿಸಿ ನಡೆಯೋಣ ಲೋಹಿತನಾದರ್ಶ
ತನು ಮನದಿ ಇರಿಸುತಲಿ ನಿತ್ಯವೂ ಹರ್ಷ
ಹನಿಸುತಲಿ ಒಲವನ್ನು ಸಕಲರೊಡೆ ನಿತ್ಯ
ಜನಮಾನಸದಿ ಇರಲು ನುಡಿನಮನ ಸತ್ಯ
- ಡಾ. ಸುರೇಶ ನೆಗಳಗುಳಿ.

ಕರುನಾಡಿನ ಮಣ್ಣಲ್ಲಿ ನೆಲೆ ; ಕನ್ನಡದಿಂದ ಬೆಲೆ (ಕವಿತೆ) - ಶಾಂತಾರಾಮ, ಶಿರಸಿ.

ನೆಲೆಯ ಕಲ್ಪಿಸಿಹುದು ಕರುನಾಡಿನ ನೆಲ,
ದಾಹ ತೀರಿಸುತಲಿಹುದು ಕರುನಾಡಿನ ಜಲ,
ಹಸಿವ ನೀಗಿಸಿ ತುಂಬುತಿಹಳು ತೋಳ್ಬಲ,
ಕನ್ನಡದ ಕಂಪು ಪಸರಿಸಿದೆ ಜಗದಗಲ...

ಅಚ್ಚ ಹಸಿರಿನ ಸಿರಿಯ  ಕಂಪು,
ಜನಪದ ಸೊಗಡಿನ ಇಂಪು,
ಕವಿ-ಸಾಹಿತಿ-ಬರಹಗಾರರ  ಸಾಹಿತ್ಯದ ಛಾಪು,
ಹಳೆಯ ನೆನಪು-ಹೊಸದರ ಬಿಳುಪು-ಕನ್ನಡದ ಹೊಸಬಗೆಯ ಹೊಳಪು...

ಧಾರ್ಮಿಕ-ಸಾಂಸ್ಕೃತಿಕ-ಶೈಕ್ಷಣಿಕ ವೈಭವದ ಸೆಲೆ,
ನಾಟ್ಯ-ಸಂಗೀತ,ಕಲೆ-ಶಿಲ್ಪಕಲೆ,
ಯಕ್ಷಗಾನ-ಗಾಯನ-
ಅನ್ನದಾನಗಳಿಗೆ ಕಟ್ಟಲಾಗದು ಬೆಲೆ...

ಅಮ್ಮ ಎಂದು ಮೊದಲು ತೊದಲು ನುಡಿದ ಕನ್ನಡ,
ದೇಹದ ಪ್ರತೀ ಕಣ-ಕಣದಲ್ಲೂ ಕನ್ನಡ,
ಕನ್ನಡಕ್ಕಾಗಿ ಎಲ್ಲರೂ ಒಂದಾಗಿ,
ಕನ್ನಡದ ಮಾತುಗಳು ಹೊರಬರಲಿ ಸುಶ್ರಾವ್ಯ ಹಾಡುಗಳಾಗಿ...
- ಶಾಂತಾರಾಮ, ಶಿರಸಿ. ಉತ್ತರ ಕನ್ನಡ.
7676106237


ಶುಕ್ರವಾರ, ನವೆಂಬರ್ 4, 2022

ಸಂಭವಾಮಿ ಯುಗೇ ಯುಗೇ (ಕವಿತೆ) - ಪ್ರೊ ಗಂಗಾರಾಂ ಚಂಡಾಲ, ಮೈಸೂರು.

ಬಂದೇ ಬರುವರು ಕಷ್ಟ ಕೊಡಲೆಂದು ಅಂದುಕೊಳ್ಳದಿರಿ,
ದೇಶಕ್ಕಾಗಿ ವಿವಾಹವಾಗದೆ ಪ್ರತಿಜ್ಞೆಗೈದವರು.
ಗೀತೆಯಲ್ಲಿ ಹೇಳಿದಂತೆ, ಮತ್ತೊಮ್ಮೆ ಗೀತೆ ಹೇಳಲು ಸಂಭವಾಮಿ ಯುಗೇ ಯುಗೇ.

ಎಲ್ಲಾ ಬೆಳ್ಳಗೆ ಎನ್ನುವ ಭರವಸೆ ನಂಬಬಹುದೇ?
ಡಬಲ್ ಸರ್ಕಾರಗಳು ನೂಕ್ಕುತ್ತಾ, ಸಾಗಿರಬಹುದೇ ದೆಹಲಿ ಕಡೆಗೆ.

ಬದುಕು ದುರ್ಬಲ, ಕಾವ್ಯ ನೀರಸ.
ಪದ್ಮ ಪತ್ರದ ಮೇಲೆ ಕೂತು ನಿಂತು ಧ್ಯಾನಿಸಿ
ಜನರ ಕಷ್ಟ ಪಟಕಿಸುವ ಎಂಟು ವರ್ಷ. ಘೋಷಣೆಗಳು ಏಳು ಬೀಳು, 
ಬಿಡುವು ಉದ್ಯೋಗಕ್ಕೆ
ಅಭಿವೃದ್ಧಿ ಗಡಿಯಾರ ನಿಂತು ಹೋದಂತೆ.

ಭಾರತ ರಚನೋತ್ಸವ ಭೂತ ಭವಿಷ್ಯತ್ ವರ್ತಮಾನದ ಚಿಂತೆ
ಸಂಕಟ ತೆಗೆದುಕೊಳ್ಳುವ ರಾಜ ಹುಟ್ಟುವ ಸಂಭವ ಸಾಧ್ಯವೆ
ಬಿಸಿಲು ಬಾಡಿದೆ ಅಧಿಕಾರಿಗಳು
ವೇದಾಂತ ಓದುತ್ತಾ,
ಶರತ್ ಕಾಲ ಕವಿ ಹೃದಯ ಉಬ್ಬುತಿಹುದು
ಮಲ್ಲೇಶಪುರ ಕೃಪಾಶ್ರಯ ನೋಡಲು ಸಾಲು ಸಾಲು.

ಶರತ್ ಕಾಲ ವಿಪತ್ ಕಾಲ ಯಾವುದು ಅವರನ್ನು ಕೇಳಬೇಕು.
ಶುಭ ಸಮಯ ಉಳ್ಳವರಿಗೆ ಕೋಟಿ ಕೋಟಿ ಟಾಯ್ಲೆಟ್ ನಲ್ಲಿ,
ಹಿಂದಿನ ಸಾಲಿನ ಹುಡುಗರು ರಾಜಕೀಯ ದಾಂಡು ಹಿಡಿದಿಹರು
ಬಾಯಾರಿದ ಬದುಕಿಗೆ ಗಂಗಾ ಜಲ ತರುತ್ತೇವೆಂದರು.

ಸುಖದ ಸುಪ್ಪತ್ತಿಗೆಯಲ್ಲಿ ಮೊದಲ ಬಾರಿಗೆ ಕೂತವರ ದರ್ಪ,
ರಜೋಗುಣದವರು ತಾಮಸಿಗರಾದರು, ಅಧಿಕಾರದ ನೆರಳಿನಲ್ಲಿ.
ಸತ್ಯ ಮೇವ ಜಯತೇ ನಂಬಲಾರದವರು ಪಾರ್ಲಿಮೆಂಟಲಿ.
ದಿವ್ವ ಸಂದೇಶ ದಿವಸ ಬರುತಿದೆ 
ತೆರಿಗೆ ಕೇಳಿ
ಚುನಾವಣಾ ತೊಡಕು ಬಿಡಿಸುವುದು, ಪ್ರಜಾಪ್ರಭುತ್ವ !

ಬಡತನ ಬೆಳೆಸಲು ಬಂದ ಸಂಭವಾಮಿ ಯುಗ ಯುಗೇ.
- ಪ್ರೊ. ಗಂಗಾರಾಂ ಚಂಡಾಲ, ಮೈಸೂರು.




ಆತ್ಮಾನುಬಂಧದ ಸಖಿಯೊಡನೆ ಒಂದು ಸಹೃದಯ ಸಂವಾದ (ಪುಸ್ತಕ ವಿಮರ್ಶೆ) - ಶ್ರೀ ವರುಣ್ ರಾಜ್ ಜಿ.‌

ತನುಶ್ರೀ ಪ್ರಕಾಶನ ಸಂಸ್ಥೆಯ ಹತ್ತನೇ ಪ್ರಕಟಣೆಯಾಗಿ ಶ್ರೀ ರಾಘವೇಂದ್ರ ಡಿ. ತಳವಾರ ಇವರ ಚೊಚ್ಚಲ ಕವನ ಸಂಕಲನ “ಆತ್ಮಾನುಬಂಧದ ಸಖಿ” ಓದುಗರ ಕೈಸೇರಿದೆ. ಇದಕ್ಕಾಗಿ ಪ್ರಕಾಶಕರಿಗೆ ಮತ್ತು ಕೃತಿಕಾರರಿಗೆ ಅಭಿನಂದನೆಗಳು. ಶ್ರೀ ರಾಘವೇಂದ್ರ ತಳವಾರರು ಎಂ.ಎಸ್ಸಿ. ಪದವೀದರರಾಗಿದ್ದು ಪ್ರಸ್ತುತ ಭಾರತೀಯ ಆಡಳಿತ ಸೇವಾ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿದ್ದಾರೆ. ಇವರು ದಾರವಾಹಿ ನಟರು, ‘ಅಕ್ಷರ ದಾಸೋಹ’ ಎಂಬ ಸ್ಪರ್ಧಾತ್ಮಕ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರು ಆಗಿದ್ದು, ಸ್ಪರ್ಧಾತ್ಮಕ ಪರಿಕ್ಷೆಗಳ ಕುರಿತು ಆಸಕ್ತರಿಗೆ ಮಾರ್ಗದರ್ಶನ ಮಾಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ನೋವು – ನಷ್ಟಗಳನ್ನು, ಸುಖ - ಸಂತೋಷಗಳನ್ನು ಅಭಿವ್ಯಕ್ತಿಸುವ ಹಾಗೂ ತಮ್ಮ ಮನಸ್ಸಿನ ಅಂತರಾಳದ ತುಮುಲಗಳಿಗೆ ಬಿಡುಗಡೆ ನೀಡುವ ಮತ್ತು ಆ ಮೂಲಕ ತಾವೂ ಬಿಡುಗಡೆ ಪಡೆಯುವ ಪ್ರಯತ್ನವಾಗಿ ಅವರ “ಆತ್ಮಾನುಬಂಧದ ಸಖಿ” ಕವನ ಸಂಕಲನ ಮೂಡಿ ಬಂದಿದ್ದು ಪ್ರಕಟಣಾ ಪೂರ್ವದಲ್ಲಿಯೇ ತುಮಕೂರಿನ ಪ್ರತಿಷ್ಠಿತ ‘ಗುರುಕುಲ ಕಲಾ ಪ್ರತಿಷ್ಠಾನ’ದ ವತಿಯಿಂದ ‘ಗುರು ಕುಲ ಸಾಹಿತ್ಯ ಕೇಸರಿ’ ಎಂಬ ಪ್ರಶಸ್ತಿಯನ್ನೂ ಈ ಕೃತಿ ದಕ್ಕಿಸಿಕೊಂಡಿದೆ. 

ಕವಿ ರಾಘವೇಂದ್ರ ತಳವಾರರು ಓದು, ವೃತ್ತಿ - ಪ್ರವೃತ್ತಿಗಳಿಗೆ ಸಂಬಂಧಿಸಿ ಸಾಹಿತ್ಯದ ಯಾವುದೇ ನಿಕಟ ವಾತವರಣವು ಲಭ್ಯವಾಗದ, ಯಾವುದೇ ಸಾಹಿತ್ಯಿಕ ಹಿನ್ನೆಲೆ, ಪ್ರಭಾವ - ಪ್ರೇರಣೆಗಳಿಲ್ಲದ, ವಿಜ್ಞಾನದ ಹಿನ್ನೆಲೆಯ ಒಬ್ಬ ಗ್ರಾಮೀಣ ಕವಿ ಪ್ರತಿಭೆ. ತಾನು ಕಂಡ – ಉಂಡ ಅನುಭವ ಮತ್ತು ನೋವುಗಳನ್ನು ತನ್ನದೇ ಭಾಷೆಯಲ್ಲಿ ಯಾವ ಕಾವ್ಯ ನಿಯಮಗಳ ಹಂಗು ಇಲ್ಲದೇ ತನಗೆ ಕಂಡಂತೆ ಕಾಣಿಸಿರುವುದು ಈ ಕೃತಿಯ - ಕೃತಿಕಾರನ ವಿಶೇಷ. 

ಓದುಗರಿಗೆ ಇದು ಕವಿಯ ಚೊಚ್ಚಲ ಕೃತಿ ಎನಿಸುವುದಿಲ್ಲ. ಕವಿ ಕೃತಿಯ ಸುಮಾರು ಮೂರು ಪುಟಗಳಲ್ಲಿ ತಮಗೆ ಮಾರ್ಗದರ್ಶನ ಮಾಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಮನದಾಳದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇದು ಕವಿಯ ವಿನಯವಂತಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಕೃತಿಯ ಮೊದಲಲ್ಲಿ ಓದುಗರ ಭಾವದ ಬೆಸುಗೆಯನ್ನು ಬಯಸುವ ಕವಿಗಳು ತಮ್ಮ ಮಾತನ್ನು ಆರಂಭಿಸುವುದೇ ಬದುಕು ಎಂದರೇನು? ಎಂಬ ಆದಿಮ ಪ್ರಶ್ನೆಯಿಂದ. ಇಲ್ಲಿ ವರ್ತಮಾನದಲ್ಲಿ ಬದುಕುವ, ಬದುಕನ್ನು ಆಸ್ವಾದಿಸುವುದರ ಮತ್ತು ನಮ್ಮ ಹೃದಯಗಳನ್ನು ಪ್ರೀತಿ ವಿಶ್ವಾಸಗಳಿಂದ ತುಂಬಿಕೊಳ್ಳುವುದರ ಅವಶ್ಯಕತೆ ಮತ್ತು ಮಹತ್ವವನ್ನು ಕುರಿತಾಗಿ ರಾಘವೇಂದ್ರ ತಳವಾರರು ಓದುಗರ ಗಮನವನ್ನು ಸೆಳೆಯುತ್ತಾರೆ.

ಕವನದ ಸಾಲುಗಳನ್ನು ಗಮನಿಸುವುದಾದರೆ, ಇವು ಪದ್ಯದಂತೆ ಓದುವವರಿಂದ ಪದ್ಯವಾಗಿಯೂ, ಗದ್ಯದಂತೆ ಓದುವವರಿಂದ ಗದ್ಯವಾಗಿಯೂ ಓದಿಸಿಕೊಳ್ಳುತ್ತವೆ. ಪದ್ಯದಂತೆ ಹಾಡಿದರೂ ಗದ್ಯದಂತೆ ಓದಿದರೂ ಅರ್ಥ ಮತ್ತು ಭಾವದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಕವಿಯು ಕಾವ್ಯ ನಿಯಮಗಳ ಬಂಧವನ್ನು ಮೀರಿ ಕೃತಿ ರಚಿಸಿರುವರು. ಇದು ಈ ಕೃತಿಯ ವಿಶೇಷವೂ ಹೌದು. ಇಲ್ಲಿನ ಕವಿತೆಗಳಲ್ಲಿ ಪ್ರಾಸ ಸಹಜವಾಗಿ ಮೂಡಿ ಬಂದಿದ್ದು, ಪ್ರಾಸ ತರಲೇಬೇಕೆಂಬ ಒತ್ತಡಕ್ಕೆ ಕವಿ ಎಲ್ಲಿಯೂ ಸಿಲುಕಿಕೊಳ್ಳುವುದಿಲ್ಲ.

ಇಲ್ಲಿನ ಕವನಗಳನ್ನು ಅಪ್ಪನ ಮೌಲ್ಯ – ಅಮ್ಮನ ವಾತ್ಸಲ್ಯ, ಹುಸಿಮನಸ್ಸು - ಸಿಹಿಗನಸು, ಅನುರಾಗ – ಅನುಭವ, ಬದುಕು - ಬವಣೆ- ಭರವಸೆ, ಸಮಾಜ - ಸುವಿಚಾರ, ಭಾವದುಸಿರ ಭಾವಬರಹ ಎಂಬ ಆರು ಉಪ ಶೀರ್ಷಿಕೆಗಳ ಅಡಿಯಲ್ಲಿ ವಿಂಗಡಿಸಿ, ಪ್ರತಿ ವಿಭಾಗದ ಪ್ರಾರಂಭದಲ್ಲಿ ನಿವೇದನಾ ರೂಪದ ಸಂದೇಶವನ್ನು ಕೊಟ್ಟಿರುವುದು ಈ ಕೃತಿಗೆ ಒಂದು ವಿಶೇಷ ಮೆರುಗನ್ನು ನೀಡಿದೆ.

          (ರಾಘವೇಂದ್ರ ಡಿ. ತಳವಾರ)


“ಆತ್ಮಾನುಬಂಧದ ಸಖಿ” ಎಂಬ ಶೀರ್ಷಿಕೆಯು ಯುವ ಕವಿಯೊಬ್ಬನ ಪ್ರೇಮ ಕವಿತೆಗಳ ಸಂಗ್ರಹ ಎಂಬುದಾಗಿ ಅವಳ ಲಜ್ಜೆ, ಎದೆಯ ಸಿಂಹಾಸಿನಿ ರತ್ನಮಂಜರಿ, ಮನದ ಬನದ ಹೂವು, ಮೂಗು ಮುರಿದು ಹೋದಾಕಿ, ಭಾವ ನಾದ, ಅವಳು, ಯಾರವಳು ಮುಂತಾದ ಕವಿತೆಗಳ ಮೂಲಕ ಮೇಲ್ನೋಟಕ್ಕೆ ಕಂಡರೂ ಕೃತಿಯ ಮುಖ ಪುಟವನ್ನು ಹಾಗೂ ಗೆಲ್ಲಬೇಕು ನೀವು ಗೆಲ್ಲಬೇಕು, ನೆನ್ನೆ – ಇಂದು - ನಾಳೆ, ಬಾಳು, ಚೇತನರು, ದೇವರಲ್ಲಿ ನಾನಿಡುವೆ ಅಹವಾಲು, ವರವೊಂದು ಕೊಡು ನನಗೆ, ಗಾಳಿದೀಪ ಮುಂತಾದ ಪದ್ಯಗಳನ್ನು ಗಮನಿಸಿದಾಗ ಕವಿಯ ಒಳ ಮನಸ್ಸಿನಲ್ಲಿರುವ ಸುಪ್ತ - ಗುಪ್ತ ಆಧ್ಯಾತ್ಮಿಕ ಅನುಭಾವದ ಒಂದು ‘ಟಚ್’ ಈ ಕವಿತೆಗಳನ್ನು ಆವರಿಸಿರುವುದು ನಮ್ಮ ಗಮನಕ್ಕೆ ಬರುತ್ತದೆ. ರಾಘವೇಂದ್ರ ತಳವಾರರ ಆಧ್ಯಾತ್ಮಿಕತೆಯನ್ನು ತಮ್ಮ ಮಾತಾ ಪಿತೃಗಳ ಕುರಿತು ಅವರು ರಚಿಸಿರುವ ಕವನಗಳಲ್ಲಿನ ಪ್ರೀತಿ ಮತ್ತು ಭಕ್ತಿಯ ರೂಪದಲ್ಲಿಯೂ ಸುಲಭವಾಗಿ ಗುರುತಿಸುವುದು ಸಾಧ್ಯ.

ಕೃತಿಯ ಉಪ ಶೀರ್ಷಿಕೆ “ಸ್ನೇಹ ಪ್ರೀತಿ ವಾತ್ಸಲ್ಯ ಸಾಧನೆಗಳೊಂದಿಗೆ ಎಲ್ಲರ ಬದುಕಾಗಲಿ ಸಂತೋಷ ಸುಖಿ” ಇದರ ಅರ್ಥ ಮತ್ತು ಮಹತ್ವವನ್ನು ವಿವರಿಸುವ ಅಗತ್ಯವಿಲ್ಲ. ಕವಿಯ ಹೃದಯ ಈ ಉಪಶಿರ್ಷಿಕೆಯ ಮೂಲಕ ತನ್ನಿಂತಾನೇ ಓದುಗರಿಗೆ ಅರ್ಥವಾಗುತ್ತದೆ. ಇದನ್ನು ಮಾನ್ಯ ಡಾ. ರಾಕೇಶ್ ರವರು ಈ ಕೃತಿಯ ಮುನ್ನುಡಿಯಲ್ಲಿ “ಕಾವ್ಯವೆನ್ನುವುದು ಆತ್ಮ ಅನುಭವಿಸುವ ಕನಸು, ಸಖ್ಯತೆ, ಕಾಣ್ಕೆ, ಮಮತೆ ಮುಂತಾದ ಸ್ತ್ರೀ ಸಂವೇದನೆಗಳನ್ನು ‘ಸಖಿ’ಯ ಪ್ರತಿಮಾತ್ಮಕತೆಯಲ್ಲಿ ಕಂಡಿರುವುದು ಕಾವ್ಯ ಪರಿಭಾಷೆಗೆ ಬೆಳದಿಂಗಳ ಹೊಳಪನ್ನೇ ಶೀರ್ಷಿಕೆ ಧಾರೆಯೆರೆದಂತಿದೆ” ಎಂಬುದಾಗಿ ಬಹಳ ಅರ್ಥಗರ್ಭಿತವಾಗಿ ವಿವರಿಸಿದ್ದಾರೆ.

ಪ್ರಸ್ತುತ ಕೃತಿಯ ಆತ್ಮಾಭಿಮಾನಿ, ನಂಬಿಕೆ, ಹೃದಯ ವೈಶಾಲ್ಯತೆ, ನಾನು ನಾನಾಗಿ, ಕನಸೊಂದಿರಬೇಕು, ಮರೆತು ಬಿಡಿ, ಬದುಕು ಬರವಸೆ, ಗೆಲ್ಲಬೇಕೆ ? ನೀವು ಗೆಲ್ಲಬೇಕೆ?, ಸೋತವರು – ಗೆದ್ದವರು, ಗೆಲುವು, ಮತ್ತೊಂದು ಅವಕಾಶ, ಬಾಳ ಸ್ಪೂರ್ತಿ, ಯುವ ಭಾರತ, ಯುವದಿನ ಮುಂತಾದ ಕವನಗಳು ಓದುಗರನ್ನು ಮೋಟಿವೇಟ್ ಮಾಡುವ ಕೆಲಸವನ್ನು ಬಹಳ ಯಶಸ್ವಿಯಾಗಿ ಮಾಡುತ್ತವೆ. 

ಉಳಿದಂತೆ,
 ‘ಅಗ್ನಿಪಥ’ ಕವಿತೆಯ 
“ಸೀತೆ ಒಮ್ಮೆ ಅಗ್ನಿ ಪರೀಕ್ಷೆ ಎದುರಿಸಿದಳು, 
ಈ ತಾಯಿಯ ದಾರಿ ಎಲ್ಲವೂ ಆಗ್ನಿಯೇ” ಎಂಬ ಸಾಲುಗಳಲ್ಲಿ ವ್ಯಕ್ತವಾಗಿರುವ ನೋವು, 

“ಹೃಯದ ವೈಶಾಲ್ಯತೆ” ಎಂಬ ಕವಿತೆಯ
“ನೋಯಿಸಿದವರ ಕ್ಷಮಿಸಿಬಿಡು 
ನೊಂದವರಿಗೆ ಪ್ರೀತಿ ಕೊಡು
ಇದೇ ಮನುಜ ಧರ್ಮದ ತತ್ತ್ವ
ಪ್ರೀತಿಯೇ ಎಲ್ಲ ಸಂಬಂಧಗಳ ಸತ್ವ” ಎಂಬ ಸಾಲುಗಳಲ್ಲಿರುವ ಕವಿಯ ಹೃದಯ ವೈಶಾಲ್ಯತೆ,

“ಮರೆತು ಬಿಡು” ಎಂಬ ಕವಿತೆಯ 
“ಮರೆಯುವುದು ಹೇಗೆಂದು ಹೇಳಿಕೊಡಿ. . . . . . . . 
ನನ್ನೊಳಗಿನ;
ಋಣಾತ್ಮಕತೆಯ ಮರೆತು 
ಧನಾತ್ಮಕತೆಯೆಡೆಗೆ ನಡೆವಂತೆ
ದ್ವೇಷ ಅಸೂಯೆಗಳ ಮರೆತು
ಪ್ರೇಮದ ಪ್ರತಿರೂಪ ನಾನಾಗುವಂತೆ” ಎಂಬ ಸಾಲುಗಳಲ್ಲಿರುವ ಆತ್ಮ ವಿಮರ್ಶೆ,
“ನಾನು ನಾನಾಗಿ” ಎಂಬ ಕವಿತೆಯ 
“ನಾನು ಹಾಲು ಆಗದಿದ್ದರೇನಂತೆ,
ಸುಣ್ಣದ ನೀರಾಗಿ ಬಳಸಿದವರ ಮನೆಯ ಬೆಳಕಾಗುವೆ”, 
“ನಾನು ವಿಶೇಷ ಆಗದಿದ್ದರೇನಂತೆ,
 ಪ್ರತಿದಿನವೂ ವಿಕಾಸವಾಗುವೆ”, 
“ನಾನು ಪ್ರಸಿದ್ದಿ ಆಗದಿದ್ದರೇನಂತೆ ಜ್ಞಾನ ಸಮೃದ್ಧನಾಗುವೆ” ಎಂಬು ಸಾಲುಗಳಲ್ಲಿನ ಕವಿಯ ವಿಧೇಯತೆ,

“ವಿಮರ್ಶಕಿ” ಕವಿತೆಯ 
“ಮುನ್ನುಡಿಯನ್ನು ಮಾತ್ರ ಓದಿ,
 ಮುನ್ನಡೆಯದೇ
 ನನ್ನ ಬಾಳನ್ನು ವಿಮರ್ಶಿಸಿದ ನಿನ್ನ ಪರಿ ಸರಿಯೇ?” ಎಂಬ ಸಾಲುಗಳಲ್ಲಿನ ನೋವು ತುಂಬಿದ ಪ್ರಶ್ನೆ,  ಇವು ಓದುಗರನ್ನು ಮತ್ತೆ ಮತ್ತೆ ಕಾಡದೇ ಇರಲಾರವು.

ಈ ಕೃತಿಯು ಒಬ್ಬ ಪ್ರೇಮಿಯನ್ನು, ಪ್ರೇಮಿಯ ವಿರಹವನ್ನು, ಸಂತನೊಬ್ಬನ ವಿಶ್ವಪ್ರೇಮವನ್ನು, ಒಬ್ಬ ವೈರಾಗಿಯನ್ನು, ಒಬ್ಬ ಮೋಟಿವೇಷನಲ್ ಮಾತುಗಾರನನ್ನು, ಒಬ್ಬ ವಿದೇಯ ವಿದ್ಯಾರ್ಥಿಯನ್ನು, ಬಹುಮುಖೀ ವ್ಯಕ್ತಿತ್ವದ ಕವಿಯನ್ನು, ಮಾತೃ ಪ್ರೇಮಿಯನ್ನು, ಕಾಯಕ ನಿಷ್ಠ ಪ್ರಜೆಯನ್ನು ಓದುಗರ ಮುಂದೆ ಅನಾವರಣ ಮಾಡುತ್ತಾ ಸಾಗುತ್ತದೆ. ಇದು ಕವಿಯ ಬಹುಮುಖಿ ವ್ಯಕ್ತಿತ್ವದ ಅನಾವರಣವೂ ಹೌದು.

ಇಷ್ಟೆಲ್ಲ ವಿಶಿಷ್ಟತೆಗಳನ್ನು ಹೊಂದಿದಾಗ್ಯೂ ಎಲ್ಲ ಚೊಚ್ಚಲ ಕೃತಿಗಳಲ್ಲಿ, ಪ್ರಾಥಮಿಕ ಬರಹಗಳಲ್ಲಿ  ಮತ್ತು ಬರಹಗಾರರಲ್ಲಿ ಇರಬಹುದಾದ ಸಾಮಾನ್ಯ ಮಿತಿ ಹಾಗೂ ಲೋಪಗಳಿಂದ ಈ ಕೃತಿ ಸಂಪೂರ್ಣವಾಗಿ ಮುಕ್ತವಾಗಿದೆ ಎಂದು ಹೇಳಲು ಬರುವುದಿಲ್ಲ. ಈ ಕೃತಿ ಸಮಕಾಲೀನ ವಿದ್ಯಮಾನಗಳ ಕುರಿತು, ಸಾಮಾಜಿಕ ಸಂವೇದನೆಗಳ ಕುರಿತು ಸಂಪೂರ್ಣವಾಗಿ ಮೌನ ವಹಿಸಿದೆ. ಅನುಭವ ಮತ್ತು ಅನುಭಾವಗಳ ಮತ್ತು ಭಾಷಾ ಪ್ರೌಡಿಮೆ, ವಿಷಯ ಪ್ರಭುದ್ಧತೆಗಳ ಗೈರು ಹಾಜರಿ ಕೃತಿಯ ಕೆಲವು ಕವನಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಇದನ್ನು ಸರಿದೂಗಿಸುವ ಅಥವಾ ಸಮರ್ಥಿಸಿಕೊಳ್ಳುವ ಜವಾಬ್ದಾರಿ ರಾಘವೇಂದ್ರ ತಳವಾರರ ಮೇಲಿದೆ.

ಕವಿ ಶ್ರೀ ರಾಘವೇಂದ್ರ ತಳವಾರರ ಸಾಹಿತ್ಯಿಕ ಮತ್ತು ವೈಯಕ್ತಿಯ ಜೀವನಗಳೆರಡು ಸಮೃದ್ಧವಾಗಲಿ, ಅವರ ಸಾಹಿತ್ಯ ಕೃಷಿ ನಿರಂತರವಾಗಿರಲಿ ಮತ್ತು ಅವರ ಎಲ್ಲಾ ಆಸೆ ಆಕಾಂಕ್ಷೆಗಳು ನೆರವೇರಲಿ ಎಂದು ಆಶಿಸುತ್ತಾ ಓದುಗ ಸಹೃದಯ ಬಾಂಧವರು ಕೃತಿಯನ್ನು ಕೊಂಡು – ಓದಿ ಕೃತಿಕಾರರನ್ನು ಪ್ರೋತ್ಸಾಹಿಸುಬೇಕೆಂದು ಕೋರುವೆ. ನಮಸ್ಕಾರಗಳು.  (ಪ್ರತಿಗಳಿಗಾಗಿ ಸಂಪರ್ಕಿಸಿ : ೮೧೦೫೨೪೨೭೩೨)

- ಶ್ರೀ ವರುಣ್ ರಾಜ್ ಜಿ.
ವಿಚಾರ ಮಂಟಪ ಸಾಹಿತ್ಯ ಬಳಗ.
# ೯೪೪೮೨೪೧೪೫೦

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...