ಬುಧವಾರ, ಜೂನ್ 30, 2021

ಬಾಳಪುಟ (ಕವಿತೆ) - ವಿಜಯಲಕ್ಷ್ಮಿ ಡೋಣಿ.

ಬಾಳಪುಟ(ಕವಿತೆ)

ನಾವೆಷ್ಟೆ ಚಿಂತಿಸಿದರೂ
ನಾವೆಂದೂ 
ಬಾಳಪುಟವ ತಿರುಗಿಸದೆ 
ಮುಚ್ಚಿಡಲಾರೆವು!
ಪ್ರತಿ ಅಧ್ಯಾಯದ 
ಅಧ್ಯಯನ
ಅಂತಿಮವಾಗುವಲ್ಲಿ
ಮುಖಪುಟದಲಿನ
ಅಗಾಧ ಅಸಂಖ್ಯ
ಪ್ರಶ್ನೆಗಳಿಗೆ ಉತ್ತರವ 
ಹುಡುಕುವಲ್ಲಿ
ಬಾಳಿನ ಅಂತಿಮಪುಟದ
ಮಗುಚುವಿಕೆ 
ಅಂತ್ಯವಾಗಿರುವುದು!
-ವಿಜಯಲಕ್ಷ್ಮಿ ಡೋಣಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ವಾಟ್ಸಪ್ ಮಾತ್ರ )

ವೈದ್ಯೋ ನಾರಾಯಣೋ ಹರಿಃ (ಕವಿತೆ) - ಮೊಹಮ್ಮದ್ ಹುಮಾಯೂನ್ ಎನ್.

ವೈದ್ಯೋ ನಾರಾಯಣೋ ಹರಿ

ಇದ್ದಾನೆಂದರೆ ವೈದ್ಯರು ಊರಿನಲ್ಲಿ
ನೆಮದ್ದಿಯ ಛಾಯೆ ಮೂಡುವುದು ಪ್ರತಿ ಸೂರಿನಲ್ಲಿ
ಹೊಂದಿರುವರು ಕೈಗಳಲ್ಲಿ ಚಿಕಿತ್ಸೆಯ ಗುಣ
ತೀರಿಸಲಾದೀತೇ ಇವರ ಋಣ

ರೋಗ-ರುಜಿನ ಮಾಯಾ ಇವರ ಸ್ಪರ್ಶದಿಂದ
ಮನಸು ಕುಣಿದು- ಕುಪ್ಪಳಿಸುವುದು ಹರ್ಷದಿಂದ
ಕೃತಜ್ಞತೆ ಸಲ್ಲಿಸುವ ಇವರಿಗೆ ಬೇಗ ಬರ್ರಿ
ಇವರೇ ವೈದ್ಯೋ ನಾರಾಯಣೋ ಹರಿ

ವೈದ್ಯರು ನಮ್ಮ ಜೀವದ ಉಸಿರು
ಚಿರಕಾಲ ಚಿಗುರಲಿ ಮನದಲಿ ಹಸಿರು
ಧನ್ಯತೆಯಿಂದ ಇವರ ಸೇವೆಯ
ಸ್ಮರಿಸೋಣ
ಜಗದಗಲಕ್ಕೂ ಇವರ ಕೀರ್ತಿಯಪತಾಕೆ ಹಾರಿಸೋಣ

ವೈದ್ಯೋ ನಾರಾಯಣೋ ಹರಿ:
..
ಮೊಹಮ್ಮದ್ ಹುಮಾಯೂನ್ ಎನ್
ಮೈಸೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ವಾಟ್ಸಪ್ ಮಾತ್ರ )

ಫಲಿತಾಂಶ ಪ್ರಕಟ : ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.

ಸ್ಪರ್ಧೆಯ ವಿವರ : "ದಿನಾಂಕ : 15:06:2021 ರಿಂದ ದಿನಾಂಕ : 30:06:2021 ರ ವರೆಗೆ ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ಬ್ಲಾಗ್ ನಲ್ಲಿ ಅತಿ ಹೆಚ್ಚು ವಿಕ್ಷಕರನ್ನು (views) ಪಡೆದ ಒಬ್ಬ ರಿಗೆ ವಾರದ ಉತ್ತಮ ಬರಹಗಾರ/ಬರಹಗಾರ್ತಿ ಎಂದು ಗೌರವಿಸಿ ಪ್ರಮಾಣ ಪತ್ರ ನೀಡಲಾಗುವುದು" ಎಂದು ಈ ಹಿಂದೆ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು ಅದಕ್ಕೆ ಸಂಭಂಧಿಸಿದಂತೆ ಅತಿ ಹೆಚ್ಚು ವೀಕ್ಷಕರನ್ನು‌ ಪಡೆದಿರುವ ಬರಹಗಾರರನ್ನು ಈ ದಿನದ ಗೌರವಕ್ಕೆ ಆಯ್ಕೆ ಮಾಡಲಾಗಿದೆ...

ಶ್ರೀ ಅಂಜನ್ ಕುಮಾರ್ ಪಿ ಆರ್ ತುಮಕೂರು ಇವರು ಬರೆದ 'ತವರೂರ ಒಡವೆ' ಕವಿತೆ
ನಮ್ಮ ವಿಚಾರ ಮಂಟಪ  ಜಾಲ ಪತ್ರಿಕೆಯ ಜಾಲತಾಣ ದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಪಡೆದಿದ್ದು ಇವರನ್ನು ಈ ವಾರದ ಅತಿ ಹೆಚ್ಚು ವೀಕ್ಷಕರನ್ನು ಪಡೆದ ಬರಹಗಾರರು ಎಂದು ಗುರುತಿಸಿ ಗೌರವಿಸಿ ಅಭಿನಂದನಾ ಪತ್ರವನ್ನು ನೀಡಲಾಗಿದೆ. 

ಶ್ರೀ ಅಂಜನ್ ಕುಮಾರ್ ಪಿ ಆರ್  ಇವರಿಗೆ ವಿಚಾರ ಮಂಟಪ ಬಳಗದ ಸಮಸ್ತ ಓದುಗರ, ಬರಹಗಾರರ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಹಾಗೂ  ಶುಭಹಾರೈಕೆಗಳು. 💐💐💐💐💐

ಇನ್ನು ಮುಂದೆ ಪ್ರತಿ ಹದಿನೈದು ದಿನಕ್ಕೊಮ್ಮೆ ಇದೇ ರೀತಿ ಅತಿ ಹೆಚ್ಚು ವೀಕ್ಷಕರನ್ನು‌ ಪಡೆಯುವ ಬರಹಗಾರರನ್ನು ಗೌರವಿಸಿ ಪ್ರಮಾಣ ಪತ್ರ ನೀಡಲಾಗುವುದು.


ನಿಮ್ಮ ಬರಹ ಗಳ  ಪ್ರಕಟಣೆಗಾಗಿ ಸಂಪರ್ಕಿಸಿ :
944824140
ಸಂಪಾದಕರು
ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.

ಉಪೇಕ್ಷೆ (ಕರೋನಾ ಜಾಗೃತಿ ಕತೆ) - ಸಂಗೀತ ಶಿಲ್ಪ

"ಕರುನಾಡು ಸಾಹಿತ್ಯ ಪರಿಷತ್ತು ಹಾಗು ಶ್ರೀ ಟ್ರಸ್ಟ್ - ಬೆಂಗಳೂರು ಇವರ ಜಂಟಿ ಸಹಯೋಗದ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ‌ ಪಡೆದಿರುವ ಕತೆ" 
                  "ಕೋವಿಡ್-೧೯ ನಿಯಂತ್ರಣ ಹಾಗೂ ವ್ಯಾಕ್ಸಿನ್ ಕುರಿತು ಜಾಗೃತಿ"
ಉಪೇಕ್ಷೆ
ರಾಮು ಮತ್ತು ನವೀನರು ಒಂದೇ ಊರಿನಿಂದ ಪಟ್ಟಣಕ್ಕೆ ಬಂದ ಯುವಕರು. ತಮ್ಮ ತಮ್ಮ ಹೆಂಡರು-ಮಕ್ಕಳನ್ನು ಹಳ್ಳಿಯಲ್ಲೇ ಬಿಟ್ಟು ದುಡಿಯುವ ಸಲುವಾಗಿ  ಪಟ್ಟಣ ಸೇರಿದ್ದರು. ರಾಮುವಿಗೆ  ಮೂರು ತಿಂಗಳ ಮಗುವಿದ್ದು,ಅಲ್ಪ- ಸ್ವಲ್ಪ ಹಣ ಉಳಿಸಿಕೊಂಡೇ ಮಗುವಿನ ಮುಖ ನೋಡುವುದಾಗಿ ಪಣ ತೊಟ್ಟು ಕೂತಿದ್ದನು. ನವೀನನಿಗೆ ಇಬ್ಬರು ಮಕ್ಕಳಿದ್ದು, ಎರಡು-ಮೂರೂ ತಿಂಗಳಿಗೊಮ್ಮೆ ಅವರನ್ನು ನೋಡಲು ಹೋಗುತ್ತಿದ್ದನು. ಹೀಗಿರುವಾಗ ಕರೋನ ಎಂಬ ಅಲೆಯು ಇವರಿಬ್ಬರ ಜೀವನವನ್ನೂ ಅಲ್ಲೋಲಕಲ್ಲೋಲ ಮಾಡಿತು. ದುಡಿಯಲು ಮನಸ್ಸಿದ್ದರೂ ಕೆಲಸವಿಲ್ಲದ ಕಾರಣ ಊರಿಗೆ ಮರಳಲು ಸಿದ್ದರಾದರು.
ನವೀನನು ಸಾಮಾನುಗಳನ್ನು ಮೂಟೆಗೆ ತುಂಬುತ್ತಿದ್ದರೆ, ಇತ್ತ ರಾಮನು ಅಡುಗೆ ತಯಾರಿಯಲ್ಲಿದ್ದನು. ಅಷ್ಟರಲ್ಲಿಏನೋ ಕೇಳಿಸಿಕೊಂಡವನಂತೆ ರಾಮು ಅಡುಗೆ ಕೊಣೆಯಿಂದ ಹೊರಬಂದು ಟಿವಿಯನ್ನು ತದೇಕ ಚಿತ್ತದಿಂದ ನೋಡಲಾರಂಭಿಸಿದನು.
"ಇನ್ನು ಮುಂದೆ ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ  ವ್ಯಾಕ್ಸೀನ್ ಹಾಕಲಾಗುವುದು. ವ್ಯಾಕ್ಸೀನ್ ಹಾಕಿಸಿಕೊಳ್ಳಿ ಕರೋನಾ ಭಯದಿಂದ ಮುಕ್ತರಾಗಿ. ಆದರೆ ಒಂದು ಮುಖ್ಯ ಸೂಚನೆ: ವಾಕ್ಸಿನ್ ಹಾಕಿಸಿಕೊಂಡರೂ ಮಾಸ್ಕ್ ಹಾಗು ಸ್ಯಾನಿಟೈಸರ್ ಬಳಕೆಯನ್ನು ಮರೆಯದಿರಿ ".
ರಾಮನು ನವೀನನ ಕಡೆ ತಿರುಗಿ,"ಅಲ್ಲಾ ನವೀನ, ವ್ಯಾಕ್ಸೀನ್ ಹಾಕಿಸ್ಕೊಂಡ್ರು ಮಾಸ್ಕ್ ಹಾಕ್ಕೋಬೇಕಂತೆ, ಮತ್ತೆ ಕೈಗೆ ಅದೇನೋ ಬಳಕೋಬೇಕಂತೆ, ಇಷ್ಟ್ ಮಾತ್ರಕ್ಕೆ ಔಷಧಿ ಯಾಕ್  ಬೇಕೋ?" ಎಂದನು.
 ನವೀನನು ಉತ್ತರಿಸುತ್ತಾ, "ಅದ್ಯಾಕೋ ಹಾಗಂತಿ? ನಾನು ದುಡ್ಡು ಕೊಟ್ಟು ಹಾಕುಸ್ಕೊಂಡಿಲ್ವ. ಉಚಿತವಾಗಿ ಹಾಕ್ತಿರ್ಬೇಕಾದ್ರೆ ಹಾಕಿಸ್ಕೊಳಕ್ಕೆ ನಿಂಗೇನೋ?"
"ಬಿಡೋಲೆ ಕಂಡಿವ್ನಿ,ಎರಡು ಸಲ ವ್ಯಾಕ್ಸೀನ್ ಹಾಕಿಸ್ಕೊಂಡಾಗಲೂ ಮೂರೂ-ನಾಲ್ಕು ದಿನ ಜ್ವರದಿಂದ ಮಲಗಿದ್ದಿ, ಕೈ ನೋವಂತ ಒದ್ದಾಡಿದ್ದಿ, ಕೆಲಸಕ್ಕೂ ಬರದೇ ಚಕ್ಕರ್ ಹಾಕಿ ತಿಂಗಳ ಕೊನೆಯಲ್ಲಿ ನನ್ನಿಂದ ಸಾಲ ಪಡೆದಿ, ನನಗೆ ಹೇಳಕ್ಕೆ ಬರ್ತೀಯ.ಬಂದೀವಿ ದುಡ್ಡುಉಳುಸ್ಕೊಂಡು ಹೋಗೊದ್ಬಿಟ್ಟು, ಇವೆಲ್ಲಾ ಯಾಕ್ ಬೇಕು? ಈಗ ನಾನು  ಹಾಕ್ಸ್ಕೊಂಡಿಲ್ಲ, ನೀನು ಹಾಕ್ಸ್ಕೊಂಡಿ, ಏನ್ ವ್ಯತ್ಯಾಸ ಆತಪ್ಪ? ಇಬ್ಬರೂ ಚಂದ್ ಇದ್ದೀವಿ. ಹೊರಗ್ ಹೋಗ್ಬೇಕಾದ್ರೆ ಮಾಸ್ಕ್ ಹಾಕ್ತೀವಿ. ಇನ್ನೇನ್ ಬೇಕು? ಬೇಕಾದವರು ತಗೊಳ್ಳಿ. ಕರೋನಾ ತಂತಾನೇ ಕಡಿಮೆ ಆಗ್ತದ" ಎಂದನು.
"ಎಲ್ರು ನಿನ್ ಹಾಗೆ ಯೋಚಿಸಿದ್ರೆ  ಹಾಕಿಸ್ಕೊಳ್ಳೋರ್ಯಾರು? ದೊಡ್ಡವರು, ಹೆಂಡತಿ- ಮಕ್ಳು ಇದಾರ ಊರಾಗ, ಒಸಿ ಹುಷಾರಾಗಿರ್ಬೇಕು. ಅದೂ ಬೇರೆ ಗೆಳೆಯರ ಜೊತೆ ಇರುವಾಗ ಮಾಸ್ಕ್ ಎಲ್ಲಿ ಹಾಕೊತ್ತೀವೋ? ಯಾರಿಗೆ ಏನ್ ಕಾಯಿಲೆ ಇರುತ್ತೋ ಏನೋ? ನಮ್ ಕೆಲಸ ನಾವ್ ಮಾಡುವ, ಮುಂದೆ ನಮ್ ಹಣೆಬರಹ." ಎನ್ನುತ್ತಾ ನವೀನನು ತನ್ನ ಕೆಲಸವನ್ನು ಮುಂದುವರಿಸಿದನು.
" ನಮ್ಮವರು ತಮ್ಮವರು ಅಂತ ಇರ್ಬೇಕು. ಕಾಯಿಲೆ ಬರುತ್ತೆ ಅಂತ ಸ್ನೇಹಿತರ ಕೂಡ ಇರೋವಾಗ  ಮೂತಿ ಕಟ್ಕೊಂಡಿರಕ್ಕಾಗುತ್ತಾ?" ಎಂದು ಗೊಣಗುತ್ತಾ ರಾಮನು ಅಡುಗೆ ಮನೆ ಸೇರಿದನು.
ಇಬ್ಬರೂ ಅಂದು ಸಂಜೆಯೇ ಹೊರಡಲು ಸಿದ್ದರಾದರು. ವಾಹನಗಳು ಸಿಗದೇ ಕೆಲವು ಗಂಟೆಗಳ ಕಾಲ  ಪರದಾಡಿದರೂ, ಹೇಗೋ ಹಾಗೆ ಇಬ್ಬರೂ ಊರನ್ನು ಮುಟ್ಟಿದರು. ನವೀನನು ಮನೆಗೆ ಬಂದೊಡನೆಯೇ ತಂದಿದ್ದ ಸಾಮಾನುಗಳ ಮೂಟೆಯನ್ನು ದನದ ಕೊಟ್ಟಿಗೆಯಲ್ಲಿಟ್ಟು, ಮಾಸ್ಕ್ ತೆಗೆದು, ಬಟ್ಟೆಗಳನ್ನು ಒಗೆಯಲು ಹಾಕಿ, ಸ್ನಾನ ಮಾಡಿದ ಮೇಲೆಯೇ ಎಲ್ಲರನ್ನು ವಿಚಾರಿಸಿದನು.
ಇತ್ತ ರಾಮನು ಮನೆಗೆ ಬಂದವನೇ ತಂದಿದ್ದ ಸಾಮಾನುಗಳ ಮೂಟೆಯನ್ನು ಮೂಲೆಗೆ ಹಾಕಿ, ಮಾಸ್ಕ್ ತೆಗೆದು, ಕೈ ಕಾಲು ಮುಖ ತೊಳೆದು, ಹೆಂಡತಿಯ ಆರೋಗ್ಯವನ್ನು ವಿಚಾರಿಸಿ, ಮಗುವನ್ನು ಮನಸಾರೆ ಎತ್ತಿ ಮುದ್ದಾಡಿದನು.
ಹೀಗೆಯೇ ದಿನಗಳು ಉರುಳಿ ವಾರವಾಯಿತು. ರಾಮುವಿನ ಹೆಂಡತಿ ಕಮಲಳಿಗೆ ಜ್ವರ ಕಾಣಿಸಿಕೊಂಡಿತು. ಬಾಣಂತಿಯಾದ್ದರಿಂದ ದೃಷ್ಟಿಯಾಗಿರಬಹುದೆಂದು ಸುಮ್ಮನಾದರು. ಎರಡು- ಮೂರು ದಿನಗಳಲ್ಲಿ ಜ್ವರ ಕೆಮ್ಮು ಜಾಸ್ತಿಯಾದ್ದದ್ದರಿಂದ ಮಗುವನ್ನೂ ಕರೆದುಕೊಂಡು ಆಸ್ಪತ್ರೆಗೆ ತೆರಳಿದರು.
 ಕಮಲಳಿಗೆ ಕರೋನಾದ ಲಕ್ಷಣಗಳು ಇದ್ದದ್ದರಿಂದ  ಮೂವರಿಗೂ ಪರೀಕ್ಷೆ ನಡೆಸಿದರು. ಆಸ್ಪತ್ರೆಯ ಸಿಬ್ಬಂದಿಯು ಕಮಲಾಳನ್ನು ಮಾತ್ರ ಆಸ್ಪತ್ರೆಯಲ್ಲಿ ಇರಿಸಿಕೊಂಡು, ರಾಮನನ್ನು ಮನೆಗೆ ಹೋಗಲು ಹೇಳಿ, ಯಾರೊಂದಿಗೂ ಸಂಪರ್ಕಕ್ಕೆ ಬರಬಾರದೆಂದು ಸೂಚಿಸಿದರು.
ಈ ಬಾರಿ ರಾಮನು ಹಾಗು ತನ್ನ ಕುಟುಂಬದವರು ಡಾಕ್ಟರ್ ನ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದರು. ಯಾರೊಂದಿಗೂ ಭೇಟಿಯಾಗದೆ ಮನೆಯಲ್ಲೇ ಉಳಿದುಕೊಂಡು ಡಾಕ್ಟರ್ ಸೂಚಿಸಿದಂತೆ ಬಿಸಿನೀರಿನ ಹಬೆಯನ್ನು ತೆಗೆದುಕೊಂಡರು ಹಾಗು ಬಿಸಿನೀರು, ಬಿಸಿ ಆಹಾರ, ಹಣ್ಣುಗಳನ್ನು ಸೇವಿಸಿದರು. ಡಾಕ್ಟರ್ ಮಾಡಿದ ಪರೀಕ್ಷೆಯಲ್ಲಿ ರಾಮನಿಗೆ ಹಾಗು ಕಮಲಳಿಗೆ ಮಾತ್ರ ಕರೋನಾ ಇದ್ದು, ಅದೃಷ್ಟವಶಾತ್ ಮಗುವು ಆರೋಗ್ಯದಿಂದಿತ್ತು. ರಾಮನು ತನ್ನ ಸಂಪರ್ಕಕ್ಕೆ ಬಂದಿದ್ದವರಿಗೆಲ್ಲಾ ವಿಷಯ ತಿಳಿಸಿ  ತಮ್ಮ ತಮ್ಮ ಮನೆಯಲ್ಲೇ ಉಳಿದು ಆರೈಕೆ ಮಾಡಿಕೊಳ್ಳುವಂತೆ ನಿವೇದಿಸಿಕೊಂಡನು.
ಸ್ವಲ್ಪ ದಿನಗಳಲ್ಲೇ ಕಮಲಾಳು ಚೇತರಿಸಿಕೊಂಡು ಮನೆಗೆ ಬಂದಳು. ಮುಖಕ್ಕೆ ಮಾಸ್ಕ್ ಧರಿಸಿ, ಸ್ವಚ್ಛತೆಯನ್ನುಕಾಪಾಡಿಕೊಳ್ಳುತ್ತಾ ಮಗುವಿಗೆ ಹಾಲು ಕೊಡಬಹುದಾಗಿ ಡಾಕ್ಟರ್ ಹೇಳಿದ್ದರು.
 ವ್ಯಾಕ್ಸಿನ್ ಹಾಕಿಸಿಕೊಳ್ಳದೆ, ಮಾಸ್ಕ್ ಇಲ್ಲದೆ ಸ್ನೇಹಿತರೊಂದಿಗೆ ಬೆರೆತದ್ದು ಹಾಗೂ ಊರಿನಿಂದ ಬಂದವನು ಕೆಲವು ದಿನಗಳು ಮನೆಯಲ್ಲೇ ಪ್ರತ್ಯೇಕವಾಗಿ ಉಳಿಯದೆ, ತಕ್ಷಣ ಮನೆಯವರೊಂದಿಗೆ ಬೆರೆತದ್ದು, ತನ್ನ ತಪ್ಪುಗಳೆಂದು ಡಾಕ್ಟರ್  ಹೇಳಿದ ಮೇಲೆಯೇ ರಾಮುವಿಗೆ ಅರಿವಾಯಿತು. ತನ್ನ ಉಪೇಕ್ಷೆಯ ಫಲವಾಗಿ ಮಗುವು ತಾಯಿಯ ಹಾಲಿಲ್ಲದೆ ಬಹುಕಾಲ ಹಾತೊರೆಯಬೇಕಾಯಿತೆಂದು  ನೊಂದುಕೊಂಡನು.
ಇತ್ತ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ನವೀನನು ಮುಂಜಾಗ್ರತ್ತಾ ಕ್ರಮಗಳನ್ನು ಪಾಲಿಸಿದ್ದರಿಂದ ಅವನ ಕುಟುಂಬವು ಆರೋಗ್ಯವಾಗಿತ್ತು. ಹೊಲ- ಗದ್ದೆ ಹಾಗು ಹಸು-ಕರುಗಳನ್ನು ನೋಡಿಕೊಳ್ಳುತ್ತಾ ಮನೆಯವರೊಂದಿಗೆ ಖುಷಿಯಿಂದಿದ್ದನು.
                                                                                                                  ಸಂಗೀತ ಕೌಶಿಕ್ 
                                                  ಬೆಂಗಳೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ)

ಮೂಡನಂಬಿಕೆಯಲ್ಲಿನ ವೈಜ್ಞಾನಿಕತೆ (ಲೇಖನ) - ದಾನೇಶ್ವರಿ ಬಸವರಾಜ ಶಿಗ್ಗಾವ.

ಮೂಢನಂಬಿಕೆಯಲ್ಲಿನ ವೈಜ್ಞಾನಿಕತೆ



ಭಾರತವು ಅಪಾರವಾದ ವೈದ್ಯಕೀಯ ಗುಣಗಳಿರುವ ಸಸ್ಯ ಮೂಲ ಗಳಿಂದ ಕೂಡಿದ ದೇಶ. ವಿವಿಧತೆ ಇರುವ ಈ ದೇಶದಲ್ಲಿ ಅಪಾರವಾದ ವೈದ್ಯಕೀಯ ಗಿಡ ಸಂಪನ್ಮೂಲಗಳ ಸಂಪತ್ತು ಇದೆ. ನನ್ನ ಮನೆಯ ಉದಾಹರಣೆಯ ಮೂಲಕ ಅದು ಹೇಗೆ ನಮ್ಮಿಂದ ನಾಶವಾಗುತ್ತಿದೆ ಹಾಗೂ ನಮ್ಮ ಮುಂದಿನ ಜನಾಂಗಕ್ಕೆ ಇದಕ್ಕೆ ಉಪಯೋಗ ಬರುತ್ತಿಲ್ಲ ಎಂಬುವುದನ್ನು ನನ್ನ ಒಂದು ಚಿಕ್ಕ ಜೀವನದ ಘಟನೆಯಿಂದ ಹೇಳಬಯಸುತ್ತೇನೆ. ನಮ್ಮ ತಾಯಿ ಪ್ರತಿದಿನ ನಾಲ್ಕು ಗಂಟೆಗೆ ಎದ್ದು ಸ್ನಾನ ಮಾಡಿ ಅರಳಿ ಮರದ ಪೂಜೆ ಮಾಡುತ್ತಿದ್ದರು. ನಾನು ಕೇಳಿದೆ ನಾಲ್ಕು ಗಂಟೆಗೆ ಎದ್ದು ಯಾಕೆ ಅರಳಿ ಮರದ ಪೂಜೆ ಮಾಡಬೇಕೆಂದು. ಅದಕ್ಕಾಗಿ ಅವರು ಹೇಳಿದರು ಗೃಹಲಕ್ಷ್ಮಿ ಸಮಯದಲ್ಲಿ ಅರಳಿಮರ ಪೂಜೆ ಮಾಡುವುದರಿಂದ, ನಮ್ಮ ಮನೆಗೆ ಬರುತ್ತಾಳೆ ಎಂದು. ನಮ್ಮ ಅಜ್ಜಿ ಪ್ರತಿದಿನ ಮುಂಜಾನೆ ತುಳಸಿ ಕಟ್ಟೆಯ ಪೂಜಿಸಿ ಪ್ರತಿದಿನ ತುಳಸಿಯನ್ನು ನೀರಿನಲ್ಲಿ ಹಾಕಿರುತ್ತಿದ್ದರು. ನಾನು ಹೋಗಿ ಅವರನ್ನು ಕೇಳಿದೆ ಏತಕ್ಕೆ ತುಳಸಿ ಎಲೆಯನ್ನು ನೀರಿನಲ್ಲಿ ಹಾಕಿ ಇಡಬೇಕೆಂದು. ಅದಕ್ಕೆ ಅವರು ಹೇಳಿದರು ನಮ್ಮ ಮನೆಗೆ ಯಾವುದೇ ಮಾಟ ಮಂತ್ರ ಮಾಡಿಸಿದರು ಅದು ನಮಗೆ ಹತ್ತಿ ಬರುವುದಿಲ್ಲವೆಂದು. ಅದಕ್ಕಾಗಿ ತುಳಸಿ ಎಲೆಯನ್ನು ನೀರಿನಲ್ಲಿ ಹಾಕಿ ಇಡಬೇಕೆಂದು. ಒಂದು ದಿನ ನಾನು ಹೊಲಕ್ಕೆ ಹೋದಾಗ ಹೊಲದ ಒಡ್ಡಿನಲ್ಲಿರುವ ಹುಣಸೆ ಗಿಡದ ಪಕ್ಕ ಕುಳಿತೆ ಆಗ ನಮ್ಮ ಚಿಕ್ಕಪ್ಪ ಹೇಳಿದರು. ತುಳಸಿ ಗಿಡದ ಹತ್ತಿರ ಹೋಗಬೇಡ ಮಗುವೆ ಅದರಲ್ಲಿ ದೆವ್ವ ಗಳು ಇರುತ್ತವೆ ಎಂದು, ನಾನು ಭಯಪಟ್ಟು ಅಂದಿನಿಂದ ಹುಣಸೆ ಗಿಡದ ಪಕ್ಕ ಹೋಗಲೇ ಇಲ್ಲ, ಹೀಗೆ ಒಂದು ದಿನ ನನಗೆ ಚೇಳು ಕುಟುಕಿತು ಆ ಸಮಯದಲ್ಲಿ ನಮ್ಮ ತಾತ ನಮ್ಮ ಚಿಕ್ಕಮ್ಮನಿಗೆ ಹೇಳಿದರು. ಮೊದಲು ಅವಳಿಗೆ ಗೋಡೆಗೆ ಹಚ್ಚುವುದನ್ನು ಹಾಗೂ ಹುಗ್ಗಿಗೆ ಹಾಕುವುದನ್ನು ಕಲಿಸಿ ಹಚ್ಚು ಎಂದು. ಅದು ಬೇಗ ನನಗೆ ಅರ್ಥವಾಗಲಿಲ್ಲ ತದನಂತರ ನಮ್ಮ ಚಿಕ್ಕಮ್ಮ ನನಗೆ ಸುಮ್ನ ಹಾಗೂ ಬೆಲ್ಲವನ್ನು ಕಲಿಸಿ ಹಚ್ಚಿದರು. ಆಗ ನಾನು ತಾತನನ್ನು ಕೇಳಿದೆ ಅದರ ಹೆಸರು ಹೇಳುವ ಬದಲು ಹೀಗೇಕೆ ಒಗಟಾಗಿ ಹೇಳಿದರೆ. ಅದಕ್ಕೆ ಅವರು ಹೇಳಿದರು ಇಲ್ಲ ಆದರೆ ಹೆಸರು ಹೇಳಿದರೆ ಅದು ಪರಿಣಾಮ ಬೀರುವುದಿಲ್ಲ ಎಂದು. ನಾನು ಹೇಗೆ ಶಾಲೆಯಲ್ಲಿ ಓದುತ್ತಿರುವಾಗ ಭಾರತದಲ್ಲಿ ಜನರು ಅಪಾರವಾದ ಮೂಢನಂಬಿಕೆಯಿಂದ ಒಳಗೊಂಡಿದ್ದಾರೆ ಎಂದು ಇತ್ತು. ಆಗ ನನಗೂ ಮನಸ್ಸಿನಲ್ಲಿ ಅನಿಸಿತ್ತು ನಮ್ಮ ಮನೆಯಲ್ಲಿಯೂ ಅಪಾರವಾದ ಮೂಢನಂಬಿಕೆಯನ್ನು ಒಳಗೊಂಡಿದ್ದಾರೆ ಎಂದು. ನಾನು ಇದರ ಮೂಲವನ್ನು ತಿಳಿಯಲೇಬೇಕು ಎಂಬ ಹಂಬಲದಿಂದ ನನ್ನ ಸತ್ಯಾನ್ವೇಷಣೆ ಯನ್ನು ಪ್ರಾರಂಭಿಸಿದೆ. ಆಗಲೇ ನಾ ತಿಳಿದಿದ್ದು ತಪ್ಪು ಎಂದು ನನಗನಿಸಿತು. ಇದು ಮೂಢನಂಬಿಕೆಯಲ್ಲ ಒಂದು ಮನದಾಳದ ನಂಬಿಕೆ. ಅರಳೆ ಮರವು ಅಪಾರವಾದ ಆಮ್ಲಜನಕವನ್ನು ನೀಡುತ್ತದೆ. ಮಡಿಯಾಗಿ ಶುದ್ದಿ ಆಗಿ 4:00 ಸಮಯದಲ್ಲಿ ಅರಳಿಮರ ದವರಿಗೂ ಹೋದರೆ ನಮ್ಮ ದೇಹಕ್ಕೆ ವ್ಯಾಯಾಮ ಹಾಗೂ ಉತ್ತಮವಾದ ಆಮ್ಲಜನಕವನ್ನು ತೆಗೆದುಕೊಂಡತ್ತಾಗುತ್ತದೆ. ತುಳಸಿಯಲ್ಲಿ ಔಷಧೀಯ ಗುಣವಿದೆ ಅದನ್ನು ನೀರಿಗೆ ಹಾಕುವುದರಿಂದ ಸೂಕ್ಷ್ಮ ಕೀಟಗಳನ್ನು ನಾಶಪಡಿಸುವ ಶಕ್ತಿ ಇದೆ. ಹುಣಸೆ ಮರ ಆಮ್ಲಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವುದಿಲ್ಲ. ಅದು ಕಾರ್ಬನ್ ಡೈಆಕ್ಸೈಡ್ ಅನ್ನು ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಆ ಗಿಡದ ಹತ್ತಿರ ಹೋಗಬಾರದು ಎಂಬ ನಂಬಿಕೆ. ಜನರು ಹಾಗೆ ಸುಣ್ಣ ಮತ್ತು ಬೆಲ್ಲವನ್ನು ಹಚ್ಚಿ ಎಂದರೇನು ಅದರ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಅದರ ಬದಲಾಗಿ ಈ ರೀತಿಯಾಗಿ ಹೇಳಿದರೆ ಅವರು ಅದನ್ನು ಬೇಗ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ನಾವು ಹೇಗೆ ಹೇಳುತ್ತೇವೆ ಎಂಬುದು ಮುಖ್ಯವಲ್ಲ. ನಾವು ಹೇಳಿದ್ದನ್ನು ಜನರು ಯಾವ ಮಟ್ಟಿಗೆ ಸ್ವೀಕರಿಸುತ್ತಾರೆ ಎಂಬುದನ್ನರಿತು. ನಮ್ಮ ಹಿರಿಯರು ಪ್ರತಿಯೊಂದಕ್ಕೂ ಅದರದೇ ಆದ ಗೌರವಗಳನ್ನು ನೀಡಿ. ಅವುಗಳಿಗೆ ಒಂದು ನಂಬಿಕೆಯನ್ನು ನೀಡಿಸಿಕೊಂಡು ಬರುತ್ತಿದ್ದಾರೆ. ಇದನ್ನೇ ಇಂದು ನಮ್ಮ ಜನ ಮೂಢನಂಬಿಕೆಯೆಂದು ಕೆಲವೊಂದನ್ನು ಅಲಕ್ಷ ಮಾಡುತ್ತಿದ್ದಾರೆ. ಗುಳಿಗ, ಔಷಧಿ, ಇಂಜೆಕ್ಷನ್, ಇವುಗಳ ಹಿಂದೆ ಬೆನ್ನತ್ತಿ ನಮ್ಮ ಪುರಾತನ ಸಂಸ್ಕೃತಿಗೆ ಮೂಢನಂಬಿಕೆಯೆಂದು ಕೈಬಿಡುತ್ತಿದ್ದಾರೆ. ಹಿರಿಯರು ಮಾಡಿದ ಪ್ರತಿಯೊಂದು ಹಬ್ಬ-ಹರಿದಿನಗಳು ಅದರದೇ ಆದ ಅಪಾರವಾದ ಅರ್ಥವನ್ನು ಒಳಗೊಂಡಿದೆ. ಕಾಲ ಎಷ್ಟೇ ಮುಂದುವರಿದರೂ ಅವರ ಬುದ್ಧಿ ಮಟ್ಟಕ್ಕೆ ನಾವು ಸರಿಸಾಟಿ ಆಗುವುದಿಲ್ಲವೇ ಎನಿಸುತ್ತದೆ. ಒಮ್ಮೊಮ್ಮೆ ನಂಬಿಕೆ ಎಂಬ ಪದಕ್ಕೆ ಅವರದು ಮೂಢನಂಬಿಕೆಯೆಂದು  ಇಂದು ಅದನ್ನೆಲ್ಲ ತಳ್ಳಿಹಾಕಿದ್ದೇವೆ. ಇಂದು ವಿಭಕ್ತಿ ಕುಟುಂಬಗಳಲ್ಲಿ ಯಾವ ಹಬ್ಬ ಆಚರಣೆಗಳಿಗೂ ಸಮಯವಿಲ್ಲ. ಮಕ್ಕಳನ್ನು ನೋಡಿಕೊಳ್ಳಲು ಆಳು ಗಳನ್ನಿಟ್ಟು ಅವರ ಜೀವನಕ್ಕೆ ಅರ್ಥವಿಲ್ಲದಂತೆ ಮಾಡಿದ್ದಾರೆ. ಇಂದಿನ ಆಧುನಿಕ ಜೀವನ ರಿಮೋಟಿನ ಅಂತೆ ಆಗಿದೆ. ಸುಮ್ಮನೆ ಕಾಲದ ಚಕ್ರಕ್ಕೆ ಸಿಲುಕಿ ಓಡುತ್ತಿರುವುದು. ಹಿರಿಯರನ್ನು ಬದುಕಿನ ಅರ್ಥಪೂರ್ಣವಾದ ಅನುಭವದ ಮಾತಿಲ್ಲದ ಮನೆಗಳು. ಸತ್ತವರ ಮನೆಯಂತೆ ಶಂಕೆಯಿಲ್ಲದೆ ಡಂಗುರವ ಬಾರಿಸುವಂತೆ ಕಾಣಿಸುತ್ತದೆ. ಏನು ಓದಿದರೇನು ಪದವಿಗಳನ್ನು ಪಡೆದರೇನು ಬದುಕಿನ ಮೌಲ್ಯಗಳು ಗೊತ್ತಿರದಿದ್ದರೆ. ಅರಿತು ಬಾಳುವ ಜೀವನವಿದ ಒಂದಲ್ಲಾ ಒಂದು ದಿನ ಗೋರಿಗಳಿಗೆ ಹೊರಡುವವರು ನಾವು ಹಿರಿಯರು ಹಾಕಿದ ಬದುಕಿನಲ್ಲಿ ಬಹಳ ಬೇಕೆಂಬುದೇ ನನ್ನ ಆಸೆ ಎಲ್ಲರ ತಪ್ಪು-ಒಪ್ಪುಗಳನ್ನು ತಿದ್ದುವಸ್ಟು
ದೊಡ್ಡವಳಲ್ಲ ನಾನು ಅರಿತು ನಡೆಯುವ ಅರವಿಕೆಯನ್ನು ಪಡೆಯೋಣ ಎಂದು ಬಯಸುವೆ.

✍️✍️✍️
ದಾನೇಶ್ವರಿ ಬಸವರಾಜ ಶಿಗ್ಗಾವಿ
ಜಲ್ಲಾಪುರ ಗ್ರಾಮ
ಸವನೂರು ತಾಲೂಕ
ಹಾವೇರಿ ಜಿಲ್ಲಾ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ )

ಡಾ ಬಸವರಾಜ ಕ್ಯಾವಟರ (ಪರಿಚಯ ಲೇಖನ) - ಶ್ರೀ ಶಿವನಗೌಡ ಪೋಲಿಸ್ ಪಾಟೀಲ


ರೋಗಿಗಳ ಪಾಲಿನ ಆಶಾ ಕಿರಣ ಡಾ// ಬಸವರಾಜ ಕ್ಯಾವಟರ.
ವೈದ್ಯೋ ಹರಿನಾರಾಯಣ ಎಂಬಂತೆ ತಂದೆ ತಾಯಿಗಳು ನಮಗೆ ಜನ್ಮವನ್ನು ನೀಡಿದರೆ ದೇವರು ಜೀವನಪೂರ್ತಿ ನಮ್ಮ ಜೀವನಕ್ಕೆ ಬೇಕಾಗಿರುವ ಎಲ್ಲಾ ಸೌಲಭ್ಯವನ್ನು ಒದಲಿಸುತ್ತಾನೆ.ಜೀವನ ನಿರ್ವಹಣೆಯಲ್ಲಿ ದೇಹ ಮತ್ತು ಮನಸ್ಸಿಗೆ ಏನಾದರೂ ತೊಂದರೆಯಾದರೆ ಜನ್ಮ ನೀಡಿದ ತಂದೆ ತಾಯಿಗಳಿಂದ ಆ ದೇವರು ಕೂಡ ನಮ್ಮನ್ನು ಬದುಕಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಇರವಾಗ  ನಮಗೆ ಮರುಜನ್ಮ ನೀಡುವವರು ವೈದ್ಯರು ಆದ್ದರಿಂದ ವೈದ್ಯೋ ಹರಿನಾರಾಯಣ ಏನ್ನುತ್ತಾರೆ. ಇಂತಹ ಹಲವಾರು ದೇವರ ಸ್ವರೂಪಿಗಳು ಆಗಿರುವಂತ ವೈದ್ಯರಲ್ಲಿ ಡಾ. ಬಸವರಾಜ್ ಕ್ಯಾವಟರ  ಕೂಡ ಒಬ್ಬರಾಗಿದ್ದಾರೆ.

 ಕಿರಿಯ ವಯಸ್ಸಿನಲ್ಲೇ ವೈದ್ಯಕೀಯ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾದನೆ ಮಾಡಿದ್ದಲ್ಲದೆ ಸಮಾಜಮುಖಿಯಾಗಿ ಶ್ರಮಿಸುತ್ತಿರುವ ಕುಷ್ಟಗಿ ತಾಲೂಕಿನ ನವಲಹಳ್ಳಿ ಗ್ರಾಮದ ಯುವಕ, ವಿಶೇಷ ಶಸ್ತ್ರ ಚಿಕಿತ್ಸಾ ತಜ್ಞವೈದ್ಯ ಡಾ ಬಸವರಾಜ ಕ್ಯಾವಟರ್ ಅವರು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ.
 ಕುಷ್ಟಗಿ ಪಟ್ಟಣದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ,ಪ್ರೌಡ ಶಿಕ್ಷಣ ಪಡೆದು ಬಳಿಕ ಆಸಕ್ತ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮುಂದುವರಿಸಿದ ಡಾ// ಬಸವರಾಜ ಬೆಳಗಾವಿ ಜೆಎನ್ಎಂಸಿ ಕಾಲೇಜಿನಲ್ಲಿ ಎಂಬಿವಿಎಸ್ ಪದವಿ 2001 ರಲ್ಲಿ, ಮಂಗಳೂರಿನ ಮಣಿಪಾಲ್ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ  ಎಂಎಸ್(ಆರ್ಥೋಪಿಡಿಕ್ಸ್) 2005 ರಲ್ಲಿ ಉನ್ನತ ಪದವಿ ಪಡೆದರು .ಇದೇ ಕ್ಷೇತ್ರದಲ್ಲಿ ವಿಶೇಷ ಅಧ್ಯಯನ ತರಬೇತಿಗಾಗಿ ನ್ಯೂಯಾರ್ಕ್, ಜರ್ಮನ್‌ ದೇಶಗಳಲ್ಲಿ ಕೆಲ ವರ್ಷಗಳ ಕಾಲ ನೆಲಿಸಿ ಪೂರ್ಣ ಪ್ರಮಾಣದ ವಿಶೇಷ ವೈದ್ಯತಜ್ಞರಾಗಿ ರೂಪಗೊಂಡು ಭಾರತ ದೇಶಕ್ಕೆ ಮರಳಿದರು.ದೇಶದ ಹಲವು ಮಲ್ಟಿಸ್ಪೇಷಲಿಟಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗೆ ಆಹ್ವಾನ ಬಂದರೂ ತಾಯ್ನಾಡು ಕರ್ನಾಟಕದಿಂದ ದೂರುಳಿಯದೇ ಬೆಂಗಳೂರಿನಲ್ಲಿ ಸೇವೆ ಪ್ರಾರಂಬಿಸಿದರು.ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಾದ ಸಾಗರ ಹಾಸ್ಪಿಟಲ್‌ನಲ್ಲಿ ಆರ್ಥೋಪಿಡಿಕ್ಸ್ ವಿಭಾಗದಲ್ಲಿ ವಿಶೇಷ ತಜ್ಞವೈದ್ಯರಾಗಿ ಸೇವೆ.ರಾಜುಗಾಂಧೀ ಮೆಡಿಕಲ್ಸಾಯನ್ಸ್ ನಲ್ಲಿ ಸೇವೆ.ಮುಂಬೈ ಮಲ್ಟಿಸ್ಪೇಷಲಿಟಿ ಆಸ್ಪತ್ರೆಯಲ್ಲಿ ವಿಶೇಷ ಆಹ್ವಾನಿತ ವೈದ್ಯರಾಗಿ ಸೇವೆ ಹಾಗೂ ಅಮೇರಿಕಾ,ಯುಕೆ,ದುಬೈ(ಯುನೈಟೆಡ್ ಅರಬ್ ಎಮಿರೇಟ್ಸ್) ದೇಶಗಳಲ್ಲಿ ವಿಶೇಷ ಆರ್ಥೋಪಿಡಿಕ್ಸ್ ಶಸ್ತ್ರಚಿಕಿತ್ಸ್ರೆಗೆ ಆಹ್ವಾನದ ಮೇರೆಗೆ ತೆರಳುತ್ತಾರೆ. ಈ ಎಲ್ಲಾ ಸೇವೆಗಳ ಜೊತೆ ತಾಯ್ನಾಡಿನ ಅದು ಅವರ ಹುಟ್ಟೂರಾದ ನವಲಹಳ್ಳಿ .ಕುಷ್ಟಗಿ ತಾಲೂಕು ಕೊಪ್ಪಳದ ಸಂಪರ್ಕ ಕಳೆದು ಕೊಂಡಿಲ್ಲಾ.ಈ ಭಾಗದ ಜನರಿಗೆ ತಮ್ಮಿಂದಾದ ಸೇವೆಯನ್ನು ಬೆಂಗಳೂರಿನಂತಹ ನಗರದಲ್ಲಿ ಹಲವಾರು ವ್ಯಕ್ತಿಗಳಿಗೆ ಉಚಿತ ಆರೋಗ್ಯ ಸೇವೆ ನೀಡಿರುವದು.ಇವರಿಗಿರುವ ಹುಟ್ಟುನ ಬಗ್ಗೆ ಇರುವ ಕಾಳಜಿ ತೊರಿಸುತ್ತದೆ.ಇವರ ಕಾಳಜಿ ಎಷ್ಟಿದೇ ಅಂದರೆ ಲಕ್ಷಾನು‌- ಲಕ್ಷ ಹಣ ಖರ್ಚು ಮಾಡಿದರು ಗುಣಮುಖವಾದ ಕಾಯಿಲೆಯನ್ನು ಗುಣಪಡಿಸಿದ್ದಾರೆ ಇದರಲ್ಲಿ ಕಡುಬಡವರಿದ್ದವರಿಗೆ ಆಸ್ಪತ್ರೆಯ ವೆಚ್ಚದ ಜೊತೆ ಅವರ ಪ್ರವಾಸ ವೆಚ್ಚವನ್ನು ಅವರೆ ಕೊಟ್ಟು ಕಳುಯಿಸಿದ ಉದಾಹರಣೆ ಇದೆ.ಕೊಪ್ಪಳದ ಜನತೆಗೆ ಪ್ರಯಾಣದ ತೊಂದರೆಯಾಗಬಾರದೆಂಬ ಕಾಳಜಿಯಿಂದ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಆಹ್ವಾನದ ಮೇರೆಗೆ ಕೆಲ ವರ್ಷಗಳ‌ ಕಾಲ ನಗರದಲ್ಲಿ ಇರುವ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆರ್ಯುವೇದ ಆಸ್ಪತ್ರೆಗೆ ತಿಂಗಳಿಗೆ ಎರಡೂ ಬಾರಿ ಬೇಟಿ ಮಾಡಿ.ಈ ಭಾಗದ ಜನರಿಗೆ ವೈದ್ಯಕೀಯ ತಪಾಸಣೆ ಮಾಡಿ ರೋಗವನ್ನು ಗುಣಪಡಿಸು ಸೇವೆ ಮಾಡಿದ್ದಾರೆ. ಈ ಸೇವೆ ಮುಂದುವರೆಸಲು ತಮ್ಮ ಅಭಿಲಾಸೆಯನ್ನು ಅಭಿನವಶ್ರೀ ಜೊತೆ  ಚರ್ಚಿಸಿ, ಅಭಿನವಶ್ರೀಗಳವರ  ಆರ್ಶಿವಾದದೊಂದಿಗೆ ಕೊಪ್ಪಳ ನಗರದಲ್ಲಿ ಅಂತರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ  ಕೆ ಎಸ್ ಆಸ್ಪತ್ರೆಯನ್ನು ಪ್ರಾರಂಬಿಸಿದ್ದಾರೆ.
ಜೀವನದಲ್ಲಿ ಎಂತಹ ಕಷ್ಟ ಬಂದರು ಎದುರಿಸುವ ಕಲೆಯನ್ನು ಹೊಂದಿರು ಡಾ// ಬಸವರಾಜ ಕಷ್ಟಗಳ ಮದ್ಯ ಕಷ್ಟದಲ್ಲಿ ಇರುವ ವ್ಯಕ್ತಿಗಳಿಗೆ ಸಹಾಯ ಮಾಡುವದನ್ನು ಮಾತ್ರ ಮರೆತಿಲ್ಲಾ. ರಸ್ತೆ ಅಪಘಾತದಲ್ಲಿ ನನಗಾದ ತೊಂದರೆಯಿಂದ ನನ್ನ ಜೀವನ ಮುಗಿದೇ ಹೋಯಿತು ಎನ್ನುವಾಗ ಶಸ್ತ್ರಚಿಕಿತ್ಸೆ ಹಾಗೂ ಆತ್ಮವಿಶ್ವಾಸದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿದ್ದಾರೆ.ನನ್ನಜನ್ಮದಾರ ಪಾತ್ರ ನನ್ನ‌ ಮೇಲೆ ಎಷ್ಟಿದೆಯೋ ಅಷ್ಟೇ ಪಾತ್ರ ಅಭಿನವಶ್ರೀಗಳ ಜೊತೆ ಡಾ// ಬಸವರಾಜ ಅವರದ್ದು ಇದೆ ನನಗೆ ಮರು ಜನ್ಮ‌ ನೀಡಿದರವರು ಇವರುಗಳೆ. 
      ನನ್ನಂತಹ ಸಾವಿರಾರೂ ವ್ಯಕ್ತಿಗಳ ಬದುಕಿಗೆ ಆಶಾ ಕಿರಣವಾಗಿದ್ದಾರೆ.ಅತಿ ಚಿಕ್ಕ ವಯಸ್ಸಿನಲ್ಲಿ ಆರ್ಥೋಪಿಡಿಕ್ಸ್ ವಿಭಾಗದಲ್ಲಿ ಅಪಾರ ಜ್ಞಾನ ಸಂಪಾದನೆ ಮಾಡಿರುವ ಇವರು 20 ಸಾವಿರಕ್ಕೂ ಹೆಚ್ಚು ಕೀಲು,ಚಪ್ಪೆ ಶಸ್ತ್ರಚಿಕಿತ್ಸೆಗಳ ಮೂಲಕ ರೋಗಿಗಳನ್ನು  ಗುಣಮುಖ ಮಾಡಿದ್ದಾರೆ.15 ಸಾವಿರಕ್ಕೂ ಹೆಚ್ಚು ಜನರಿಗೆ  ಕೀಲು ,ಚಪ್ಪೆಗಳ ಸಮಸ್ಯೆಯಿಂದ ಅತಂತ್ರ ಬದುಕು ಹೊಂದಿ ತೊಂದರೆಯಲ್ಲಿರುವ ರೋಗಿಗಳಿಗೆ  ರಿಪ್ಲೇಸಮೆಂಟ್ ಶಸ್ತ್ರಚಿಕಿತ್ಸೆ ನೀಡಿ ಹೊಸ ಬದುಕು ನೀಡಿದ್ದಾರೆ.
ಅಲ್ಲದೇ ವಿದೇಶಿಗಳರು ಸೇರಿ ದೇಶದ ಮಠಾಧೀಶರು,ಚಲನಚಿತ್ರ ನಟರು,ರಾಜಕಾರಣಿಗಳು, ಗಣ್ಯರು ಚಿಕಿತ್ಸೆ ಪಡೆದಿರುವದು ವಿಶೇಷವಾಗಿದೆ.


ಆಸ್ಪತ್ರೆಯ ಪ್ರಾರಂಬವಾದ ಸ್ವಲ್ಪದರಲ್ಲೇ 200 ಹೆಚ್ಚು ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿರುವದು ಅವರ ನೈಪುಣ್ಯತೆಯನ್ನು ತೊರಿಸುತ್ತದೆ.ಮೊನ್ನೆ ತಾನೆ ಅತೀ ಕಠಿಣ ಪರಿಸ್ಥಿತಿಯಲ್ಲಿ ಇದ್ದ ತಾವರಗೇರಾದ ವ್ಯಕ್ತಿಯೊರ್ವನಿಗೆ ಎತ್ತು ಕುತ್ತಿಗೆ ಭಾಗದಲ್ಲಿ ತಿರ್ವವಾಗಿ ತಿವಿದಿರುದ್ದರಿಂದ ಪೂರ್ಣಪ್ರಮಾಣದ ಪ್ರಜ್ಞೆಯನ್ನು ತಪ್ಪಿದ ವ್ಯಕ್ತಿ ಪಾರ್ಶ್ವವಾಯು ಅವರಿಗೆ ಜೀವದುದ್ದಕ್ಕು ಆವರಿಸಿರುವ ಹಂತದಲ್ಲಿರುವ ವ್ಯಕ್ತಿಗೆ ನಾಲ್ಕ ಗಂಟೆಗಳ ಕಾಲ ಕಾ ಶಸ್ತ್ರಚಿಕಿತ್ಸೆ ಮೂಲಕ  ರೋಗಿಗೆ ಪುರ್ನಜನ್ಮ ನೀಡಿದ್ದಾರೆ.ವಿಶೇಷವೆಂದರೆ ಈ ವ್ಯಕ್ತಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಬೆಂಗಳೂರು ,ಹುಬ್ಬಳ್ಳಿ ನಗರಕ್ಕು ತಲುಪಲು ಬಹಾಳ ಸಮಯವಾಗುತ್ತಿತ್ತು.ಇದರಿಂದ ರೋಗಿ ಜೀವಪೂರ್ಣ ಪೂರ್ಣಪ್ರಮಾಣ ಅಂಗವಿಕಲತೆಗೆ ಒಳಗಾಗಬೇಕಿತ್ತು.ಇದನ್ನು ಕೆ ಎಸ್ ಆಸ್ಪತ್ರೆ ಹಾಗೂ ಡಾ// ಬಸವರಾಜ ಮಾಡಿದ್ದಾರೆ.
ಸಾಮಜಿಕ ಚಿಂತನೆ,ಕಳಕಳಿಯ ಮನಸ್ಸು ಹೊಂದಿರುವ ಡಾ// ಬಸವರಾಜ ಅವರು ದೇಶ- ವಿದೇಶದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರಗಳ ಮೂಲಕ ರೋಗಿಗಳನ್ನು ಗುಣಮುಖಮಾಡಿದ್ದಾರೆ.ಈ ಸೇವೆ ಮುಂದುವರಿಯಲಿ ಅವರ ತಾಯ್ನಾಡಿನ‌ ಪ್ರೀತಿ ಇದೆ ರೀತಿ ಮುಂದುವರಿಯಲಿ.ಶ್ರೀಮಂತರಿ ಮಾತ್ರ ಆರೋಗ್ಯ ಭಾಗ್ಯ ಎಂಬಂತಿದ್ದ ಕಾಲದಲ್ಲಿ ಸಾಮನ್ಯರಿಗೂ ಉಚಿತ ಚಿಕತ್ಸೆ ನೀಡುವ ಮೂಲಕ ಹೊಸ ಶಕೆ ಪ್ರಾರಂಬಿಸಿದ್ದಾರೆ.ಇದು ಮುಂದುವರಿಯಲಿ ಕೊಪ್ಪಳ ಜಿಲ್ಲೆ ಸೇರಿದಂತೆ ಎಲ್ಲಾ ರೋಗಿಗಳಿಗೆ ಆರೋಗ್ಯ ಸಿಗುವಂತಾಗಲಿ...

ಶ್ರೀ ಶಿವನಗೌಡ ಪೋಲಿಸ್ ಪಾಟೀಲ 
ಉಪನ್ಯಾಸಕರು ಹಾಗೂ
ಹವ್ಯಾಸಿ ಬರಹಗಾರರು ಕೊಪ್ಪಳ
9845646370.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448241450 ವಾಟ್ಸಪ್ ಮಾತ್ರ )

ಮಂಗಳವಾರ, ಜೂನ್ 29, 2021

ವೈರಸ್ ಮೇಲಿನ ವಿಜಯ (ಕರೋನಾ ಜಾಗೃತಿ ಕತೆ) - ಲಕ್ಷ್ಮೀ ಯಶಸ್ವಿನಿ.

 

ವೈರಸ್‌ ಮೇಲಿನ ವಿಜಯ

ಕರುನಾಡು ಕಥಾ ಸ್ಪರ್ಧೆ ೨೦೨೧ ರಲ್ಲಿ ದ್ವಿತೀಯ ಬಹುಮಾನ ‌ಪಡೆದ ಕತೆ.

ಮಂಗಳ ಪುರ ಅಂತ ಒಂದು ಊರು. ಆ ಊರಲ್ಲಿ ಸು ೧೫೦ ಮನೆ. ಅದರಲ್ಲಿ ಕೂಲಿ ನಾಲಿ ಮಾಡುವ ಗಂಡು ಹೆಣ್ಣುಗಳು, ವಯಸ್ಸಾಗಿರುವ ಮುದುಕರು, ಶಾಲೆಗೆ ಹೋಗುವ ಮಕ್ಕಳು, ಹೀಗೆ ಹಲವು ಜನ ಮಂಗಳಪುರದಲ್ಲಿದ್ದರು. ಅದೇ ಊರಿನಲ್ಲಿ ಆಶಾ ರಾಣಿ ಎಂಬ ಒಬ್ಬ ಅಂಗನವಾಡಿ ಮೇಡಂ ಹಾಗೂ ಅವರ ಒಬ್ಬಳೇ ಮಗಳು ಚಾಂದಿನಿ ವಾಸವಾಗಿದ್ದರು. ಊರಿನವರ ಮಕ್ಕಳು ಹಲವಾರು ಜನ ಚನ್ನಾಗಿ ಓದಿಕೊಂಡು ಪಟ್ಟಣದಲ್ಲಿ ಕೆಲಸದಲ್ಲಿದ್ದರು. ಊರಿನಲ್ಲಿ ಉಳಿದುಕೊಂಡಿರುವವರಲ್ಲಿ  ತಕ್ಕ ಮಟ್ಟಿಗೆ  ಓದಿರುವವಳು ಆಶಾರಾಣಿ ಮಾತ್ರ. ಆವತ್ತು ಒಂದು ದಿನ ಕತ್ತಲ ರಾತ್ರಿ, ಧನ ಕರುಗಳೆಲ್ಲಾ ಕೊಟ್ಟಿಗೆಯಲ್ಲಿ ಮೆಲುಕು ಹಾಕುತ್ತಿದ್ದರೆ, ಮನೆಯ ಮಂದಿಯೆಲ್ಲಾ ಕೂಲಿ ಮಾಡಿ ಧಣಿದು ಬಂದು ಮಲಗಲು ರೆಡಿ ಆಗುತ್ತಿದ್ದರು. ಇನ್ನ ಕೆಲವರು ಮನೆ ಹೊರಗೆ ಕೂತು ಹರಟೆಹೊಡೆಯುತ್ತಿದ್ದರೆ ಆಶಾ ರಾಣಿ ಹಾಗೂ ಮಗಳು ದಾರವಾಹಿ ನೋಡುತ್ತಾ ಹಾಗೆ ಚಾನಲ್‌ ಬದಲಿಸಿದ್ದೇ ತಡ! ಸೂಟ್‌ ಬೂಟ್‌ ಹಾಕಿಕೊಂಡಿದ್ದ ಆಂಕರ್‌ ಒಬ್ಬ ಬಾಯಿ ಬಡಿದುಕೊಳ್ಳುತ್ತಿದ್ದ.ಬ್ರೇಕಿಂಗ್‌ ನ್ಯೂಸ್‌  ʼಭಾರತಕ್ಕೂ ಬಂತು ಮಹಾಮಾರಿ ಕರೋನಾ. ಸಾಯುವರೇ ಲಕ್ಷ ಲಕ್ಷ ಜನ ?ʼ ಕೇಳುತ್ತಿದ್ದಂತೆ ಆಶಾರಾಣಿಯ ಎದೆ ದಸಕ್ಕೆಂದಿತು. ಇನ್ನು ನಮ್ಮ ಕತೆ ಮುಗಿದಂತೆ, ಬರಹ್ಮಯ್ಯನವರು ಹೇಳಿದ ಕಲಿಯುಗದ ಅಂತ್ಯ ಬಂದೇ ಬಿಟ್ಟಿತು ಎಂದು ಚಿಂತಿಸಲು ಪ್ರಾರಂಭಿಸಿದಳು. ಟಿ ವಿ ಆಂಕರ್‌ ನ ಕಿರುಚಾಟ ಹಾಗೇ ಮುಂದುವರೆದಿತ್ತು. ಆಶಾರಾಣಿಗೆ ಭಯದಿಂದ ಅಲ್ಲೇ ಪ್ರಾಣ ಹೋಗಿ ಬಿಡುವಷ್ಟರಲ್ಲಿಯೇ ದೇವರ ದಯೆ ಯೋ ಅಥವಾ ಆಂಕರ್‌ ಧಣಿದಿದ್ದನೋ ಅಂತೂ  ಬಂತು ಒಂದು ಸಣ್ಣ ಬ್ರೇಕ್‌ . ʼʼನಿಮ್ಮ ಟಾಯ್ಲೆಟ್‌ ಶುಭ್ರವಾಗಿದೆಯೇ ?! ಎನ್ನುತ್ತಾ. ಅಷ್ಟರಲ್ಲಿ ಆಶಾರಾಣಿ ಟಿ ವಿ ಆಫ್‌ ಮಾಡಿ ಮಗಳಿಗೆ ಮಲಗಲು ಸೂಚಿಸಿದಳು. ತಾನೂ ಮಲಗಿದಂತೆ ನಟಿಸಿದಳಾದರೂ ರಾತ್ರಿಯೆಲ್ಲ ಅವಳಿಗೆ ನಿದ್ರೆಯೇ ಬಂದಿರಲಿಲ್ಲ.  

ಬೆಳ್ಳಿಗ್ಗೆ ಎದ್ದು ನೋಡುತ್ತಾಳೆ  ಊರಿನಲ್ಲೆಲ್ಲಾ ಅದೇ ಕರೋನಾ ಸುದ್ಧಿ, ಎಲ್ಲೆಲ್ಲೂ ಭಯ, ಆತಂಕ, ಕೂಲಿಗೆ ಹೋಗುವವರಿಗಂತೂ ಮನಸ್ಸೇ ಇಲ್ಲ, ಶಾಲಾ ಕಾಲೇಜುಗಳಿಗೆ ೧೫ ದಿನದ ರಜೆ ಬೇರೆ ಘೋಷಣೆ ಆಗಿದೆ. ಮಗಳನ್ನು ಜೊಪಾನವಾಗಿ ಮನೆಯಲ್ಲಿಯೇ ಇರುವಂತೆ ಹೇಳಿ ಅಂಗನವಾಡಿಗೆ ಬಂದಳು ಆಶಾ. ೨-೩ ಕೆಲಸಗಳನ್ನು ಈದಿನ ಮುಗಿಸಬೇಕು ಎಂದುಕೊಂಡು ಬಂದಿದ್ದಳಾದರೂ ಮನಸಲ್ಲೆಲ್ಲಾ  ಕರೋನಾದೇ ಚಿಂತೆಯಾಗಿ ಯಾವ ಕೆಲಸವನ್ನು ಮಾಡಲಾಗಲಿಲ್ಲ. ತನಗೆ ತಿಳಿದಿದ್ದ ಅಲ್ಪ ಸ್ವಲ್ಪ ಜ್ಞಾನದಿಂದ ಅಂತರ್ಜಾಲದಲ್ಲಿ ಕರೋನಾದ ಕುರಿತು ಹೆಚ್ಚಿನ ಮಾಹಿತಿಯನ್ನು ಹುಡುಕಿದಳು. ಅಲ್ಲಿ ಅವಳಿಗೆ ಪೂರ್ತಿ ಮಾಹಿತಿ ಸಿಗಲಿಲ್ಲವಾದರೂ ಹೊರಗೆ ಹೋಗುವಾಗ ಸದಾ ಮಾಸ್ಕ ಧರಿಸುವ ಇತರರೊಂದಿಗೆ ೩-೪ ಅಡಿಗಳಷ್ಟು ದೈಹಿಕ ಅಂತರ ಕಾಯ್ದುಕೊಳ್ಳುವ ಹಾಗೂ ಕೈ ಕಾಲು ಮೂಗು ಬಾಯಿಗಳನ್ನು ಆಗಾಗ ಸ್ವಚ್ಛ ಗೊಳಿಸಿಕೊಳ್ಳುತ್ತಾ ಮನೆಯಲ್ಲಿಯೇ ಉಳಿಯುವುದರಿಂದ ಹಾಗೂ ಬಿಸಿ ಬಿಸಿ ಆಹಾರ ಬಿಸಿ ನೀರು ಸೇವನೆಯಿಂದ ಖಂಡಿತಾವಾಗಿ ಕರೋನಾ ಬರದಂತೆ ಮಾಡಬಹುದು ಎಂದು ಹಾಗೇ ಇಂತಹಾ ಖಾಯಿಲೆಗಳು ಇದು ಮೊದಲಲ್ಲದೇ ಅನೇಕ ಭಾರಿ ಬಂದು ಹೋಗಿವೆ ಎಂಬುದನ್ನು ಆಶಾರಾಣಿ ಅರಿತುಕೊಂಡಳು. ಈ ವಿಷಯವನ್ನು ಊರವರಿಗೆಲ್ಲಾ ತಿಳಿಸಿ ಅವರನ್ನು ಕರೋನಾದಿಂದ ಅದಕ್ಕೂ ಮುಖ್ಯವಾಗಿ ಕರೋನಾದ ಆತಂಕ ಹಾಗೂ ಭಯಗಳಿಂದ ಮುಕ್ತರನ್ನಾಗಿಸಬೇಕೆಂದು ನಿರ್ಧರಿಸಿ ಮನೆಯ ಕಡೆ ಹೊರಟಳು.

ಮನೆಗೆ ಬಂದು ನೋಡುವಷ್ಟರಲ್ಲಿಯೇ ಮಗಳು ಯಾವುದೋ ನ್ಯೋಸ್‌ ಚಾನಲ್‌ ಹಾಕಿಕೊಂಡು ಕುಳಿತಿದ್ದಳು. ಮತ್ತೆ ಇನ್ನ ಯಾರೋ ಒಬ್ಬ ಆಂಕರ್‌ ಈವತ್ತು ʼʼಕೋವಿಡ್‌ ರಣ ತಾಂಡವʼʼ ೧೦೦ ಜನಕ್ಕೆ ಸೋಂಕು ೩ ಜನರನ್ನು ಬಲಿ ಪಡೆದ ಕರೋನಾʼʼ ಎಂದು ನ್ಯೋಸ್‌ ಬ್ರೇಕ್‌ ಮಾಡುತ್ತಿದ್ದ. ಆಶಾ ಟಿವಿ ಆಫ್‌  ಮಾಡಿ ಹೊರಗೆ ಬಂದಳು ಎಲ್ಲರ ಮನೆಯಲ್ಲೂ ಅದೇ ಬ್ರೇಕಿಂಗ್‌ ನ್ಯೂಸ್‌ . ʼʼಸರ್ಕಾರ ೧೫ ದಿನಗಳ ಲಾಕ್‌ ಡೌನ್‌ ಘೋಷಣೆ ಮಾಡಿದೆ ,ಲಾಕ್‌ ಡೌನ್‌ ಸಮಯದಲ್ಲಿ ಏನು ಇರುತ್ತೆ ಏನು ಇರುವುದಿಲ್ಲ !ʼʼ ಎಂದು ಆಂಕರ್‌ ಹೇಳುತ್ತಿದ್ದರೆ, ಮನೆಯ ಮುದುಕಿಯರು ʼʼನಾವು ಇರ್ತೀವೋ ಇಲ್ವೋ , ಶಿವನೇ ಬಲ್ಲ. ಎಂದು ಮಾತನಾಡಿಕೊಳ್ಳುತ್ತಿದ್ದರು. ಆಶಾ ಊರವರನ್ನೆಲ್ಲಾ ಕರೆದು ತಾನು ತಿಳಿದುಕೊಂಡ ಕೋವಿಡ್‌ ನಿಯಂತ್ರಣ ಮಾಡುವ ಕ್ರಮಗಳ ಕುರಿತು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದಳು. ಆಶಾಳ ಉದಾರಗುಣ ಹಾಗೂ ಬುದ್ಧಿವಂತಿಕೆ ತಿಳಿದಿದ್ದ ಊರಿನವರು ಅವಳ ಮಾತನ್ನು ನಂಬಿದರಲ್ಲದೇ ಅವಳು ಹೇಳಿದ ಎಲ್ಲಾ ಕ್ರಮಗಳನ್ನು ಪಾಲಿಸಲು ಪ್ರಾರಂಭಿಸಿದರು ಅದಕ್ಕೂ ಮುಖ್ಯವಾಗಿ ನ್ಯೋಸ್‌ ಚಾನಲ್‌ ಗಳನ್ನು ನೊಡುವುದು ಬಿಟ್ಟರು. ೨ ದಿನಗಳಲ್ಲಿಯೇ ಪೇಟೆಯಲ್ಲಿ ಕೆಲಸದಲ್ಲಿದ ಮಕ್ಕಳೆಲ್ಲಾ ಲಾಕ್‌ ಡೌನ್‌ ಕಾರಣದಿಂದ ಊರಿಗೆ ಮರಳುವುದಕ್ಕೆ ಪ್ರಾರಂಭಿಸಿದರು. ಊರಿನವರಿಗೆಲ್ಲಾ ತಮ್ಮ ಮಕ್ಕಳು ಇಷ್ಟು ದಿನಗಳ ನಂತರ ಈ ಕರೋನಾ ದಯೇ ಇಂದ ಒಂದಷ್ಟು ದಿನ ನಮ್ಮೊಂದಿಗೆ ಇರಲು ಬರುತ್ತಿರುವರಲ್ಲ ಎಂದು ಸಂತೋಷಪಡುತ್ತಿದ್ದರೆ, ಆಶಾರಾಣಿಗೆ ಇವರ ಜೊತೆ ಜೊತೆಯಲ್ಲಿಯೇ ಕರೋನಾ ಕೂಡಾ ಊರಿಗೆ ಬರುವುದೇನೋ ಎಂಬ ಚಿಂತೆ ಕಾಡುತ್ತಿತ್ತು. ಪೇಟೆಯ ಯುವಕರು ಊರಿಗೆ ಬಂದ ಮೇಲೆ ಆಶಾ ಹೇಳಿದ ಸುರಕ್ಷತಾ ಕ್ರಮಗಳನ್ನು ಊರಿನವರು ಪಾಲಿಸುವುದನ್ನು ನಿಲ್ಲಿಸಿದರು. ಪೇಟೆಯಿಂದ ಬಂದ ಯುವಕರು ಆಶಾಳ ಮಾತುಗಳನ್ನು ʼಇವಳೇನು ದೊಡ್ಡ ಡಾಕ್ಟರಾ ?, ನಮಗೆ ಬುದ್ಧಿ ಹೇಳೋಕೆ ಬರ್ತಾಳೆ. ಎಂದು ನಿರ್ಲಕ್ಷಿಸ ತೊಡಗಿದರು.

೨-೩ ದಿನಗಳಲ್ಲಿ ಆ ಊರಿನ ಒಬ್ಬ ಯುವಕನಿಗೆ ತೀವ್ರವಾದ ಜ್ವರ ಕಾಣಿಸಿಕೊಂಡು ಆಸ್ಪತ್ರೆಯ ಪರೀಕ್ಷೆಯಲ್ಲಿ ಅವನಿಗೆ ಕರೋನಾ ಸೋಂಕು ಬಂದಿರುವುದು ದೃಡಪಟ್ಟಿತ್ತು. ಆಶಾ ತಾನೂ ಕರೋನಾದಿಂದ ನಮ್ಮ ಊರನ್ನು ರಕ್ಷಿಸಬೇಕೆಂದುಕೊಂಡೆ ಆದರೆ ಅದು ಸಾಧ್ಯವಾಗಲಿಲ್ಲ ಎಂದು ಬಹಳ ನೊಂದುಕೊಂಡಳು. ಆ ಯುವಕನ ಜೊತೆಗೆ ಅವನ ಸಂಪರ್ಕದಲ್ಲಿದ್ದ  ಮತ್ತೂ ೫-೬ ಮಂದಿಗೆ ಸೋಂಕು ದೃಡಪಟ್ಟಿತ್ತು. ಯುವಕರು ಚೇತರಿಸಿಕೊಂಡರಾದರೂ ವಯಸ್ಸಾದ ಇಬ್ಬರು ಮುದುಕಿಯರು ಕರೋನಾಗೆ ಬಲಿ ಆಗಬೇಕಾಯಿತು. ಸತ್ತವರನ್ನು ಕೊನೆ ಸಲ ನೋಡುವುದಕ್ಕೂ ಸಹಾ ಸಾಧ್ಯವಾಗದೇ ಊರಿನವರೆಲ್ಲಾ ಬಹುವಾಗಿ ನೊಂದುಕೊಂಡರು. ಆಶಾಳ ಮಾತನ್ನು ಕೇಳದೇ ಇದ್ದ ಪಶ್ಚಾತಾಪ ಸಹಾ ಅವರನ್ನು ಕಾಡುತ್ತಿತ್ತು. ಆದದ್ಧ ಆಗಿ ಹೊಗಿದೆ ಇನ್ನಾದರೂ ನಾವು ನಮ್ಮ ಊರನ್ನು ಕರೋನಾದಿಂದ ಕಾಪಾಡಿಕೊಳ್ಳಬೇಕು ಹಾಗೂ ನಮ್ಮ ಸುತ್ತ ಮತ್ತಲ ಹಳಿಗಳಲ್ಲಿಯೂ ಕರೋನಾ ಕುರಿತು ಜಾಗೃತಿ ಉಂಟು ಮಾಡಬೇಕೆಂದು ಆಶಾ ಊರವರಿಗೆ ಧೈರ್ಯ ಹೇಳಿದಳು.  ಅದೇ ಊರಿನ ಯುವಕರ ತಂಡ ಕಟ್ಟಿಕೊಂಡು ಮನೆ ಮನೆಗೆ ತೆರಳಿ ಕರೋನಾ ಮುಂಜಾಗ್ರತೆಗ ಬಗ್ಗೆ ಜಾಗೃತಿ ಮೂಡಿಸುವ, ಒಂದು ವೇಳೆ ರೋಗ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವ ಬಗ್ಗೆ ಆ ಜನರಿಗೆ ಮನವರಿಕೆ ಮಾಡತೊಡಗಿದರು. ಅಷ್ಟೇ ಅಲ್ಲದೇ ನಿಮ್ಮೊಂದಿಗೆ ನಾವಿದ್ದೇವೆ, ಭಯ ಪಡಬೇಡಿ. ಎಂದು ಈ ಯುವಕರ ತಂಡ ಎಲ್ಲರಿಗೂ ದೈರ್ಯ ಹೇಳಿ ಅವರ ಮನ ಪರಿವರ್ತನೆ ಮಾಡಲು ಪ್ರಾರಂಭಿಸಿದರು.

ಆಶಾರಾಣಿ ಲಾಕ್‌ ಡೌನ್‌ ಕಾರಣದಿಂದ ಕೆಲಸಗಳು ಇಲ್ಲದೇ ಊಟಕ್ಕೂ ಸಹಾ ಕಷ್ಟ ಪಡುತ್ತಿದ್ದವರನ್ನು ಅವರು ಮನೆಗಳ ಬಳಿ ಹೋದಾಗ ಗಮನಿಸುತ್ತಿದ್ದಳು. ಇದಕ್ಕಾಗಿ ತಮಗೆ ತಿಳಿದ ಕೆಲವು ಧನಿಕರ ಸಂಘ ಸಂಸ್ಥೆಗಳ ಸಹಾಯ ಪಡೆದು ಬಡವರಿಗಾಗಿ ಆಗಾರದ ಕಿಟ್‌ ಗಳನ್ನು ವಿತರಿಸುವ ಕೆಲಸವನ್ನು ಸಹಾ ಆಶಾಳ ನೇತೃತ್ವದ ಈ ತಂಡ ಮಾಡಿತು. ಹೀಗೆ ಭಯ ಆತಂಕಗಳಿಂಗಳಿಂದ ಮುಕ್ತವಾಗಿ ರಾಮಾಯಣ ಮಹಾಭಾರತ ದಾರವಾಹಿಗಳನ್ನು ನೊಡುತ್ತಾ, ಅಜ್ಜಿಯರು ಮಕ್ಕಳಿಗೆ ಕಥೆಗಳನ್ನು ಹೇಳುತ್ತಾ , ಮನೆಯಲ್ಲಿ ಆಟ ಆಡುತ್ತಾ, ಊರಿಂದ ಬಂದಿದ್ದ ಮಕ್ಕಳಿಗೆ ಒಳ್ಳೆಯ ಅಡುಗೆಗಳನ್ನು ಮಾಡಿಕೊಡುತ್ತಾ ಊರಿನವರೆಲ್ಲಾ ಕಾಲ  ಕಳೆದರು. ಯಾರೂ ಸಹಾ ಕೋವಿಡ್‌ ಮುಂಜಾಗ್ರತಾ ಕ್ರಮಗಳನ್ನು ಮರೆಯಲಿಲ್ಲ ಹಾಗೂ ಮನೆಯಿಂದ ಅನಾವಶ್ಯಕವಾಗಿ ಹೊರಗೆ ಹೋಗುತ್ತಿರಲಿಲ್ಲ.

ಹೀಗೆ ಕೊವಿಡ್‌ ಎಲ್ಲಾ ಕಡೆ ಕಡಿಮೆ ಆಗುತ್ತಾ ಬರುವ ವೇಳೆಗಾಗಲೇ ಕೋವಿಡ್‌ ನಿಯಂತ್ರಕ ಲಸಿಕೆ ಬಂದಿದೆ ಎಂಬುದನ್ನು ತಿಳಿದು ಆಶಾ ಅತ್ಯಂತ ಸಂತೋಷ ಪಟ್ಟಳು. ತಮ್ಮ ಊರಿನ ಹಾಗೂ ನೆರೆಹೊರೆಯ ಊರುಗಳವರಿಗೆಲ್ಲಾ ತಪ್ಪದೇ ಲಸಿಕೆ ಹಾಕಿಸಬೇಕೆಂದು ನಿರ್ಧರಿಸಿದಳು. ಆದರೆ ಮಾಧ್ಯಮಗಳಲ್ಲಿ ಹಾಗೂ ಜನರ ಭಾಯಲ್ಲಿ ಲಸಿಕೆ ಹಾಕಿಸಿಕೊಂಡು ಆ ಊರಲ್ಲಿ ಇವರು ಸತ್ತರು ಈ ಊರಲ್ಲಿ ಅವರು ಸತ್ತರು ಎಂಬ ವದಂತಿಗಳು ಹರಿದಾಡ ತೊಡಗಿದ್ದವು. ಇದನ್ನು ಕೇಳಿ ಆಶಾಳಿಗೂ ಸಹಾ ಭಯವಾಗಿದಲ್ಲದೇ ನಾವ್ಯಾರೂ ಈ ಲಸಿಕೆ ಪಡೆಯಬಾರದು ಎಂದುಕೊಳ್ಳುತ್ತಿದ್ದಾಗಲೇ, ಪ್ರಪಂಚದ ಹಲವು ದೇಶಗಳಲ್ಲಿ ಇದೇ ಮಾದರಿಯ ಲಸಿಕೆ ಕಂಡು ಹಿಡಿಯಲಾಗಿದ್ದು ಲಕ್ಷಾಂತರ ಮಂದಿ ಲಸಿಕೆ ಪಡೆಯುತ್ತಿರುವುದು ಹಾಗೂ ರೋಗಮುಕ್ತವಾಗುತ್ತಿರುವುದನ್ನು ಹಾಗೇ ವಿಶ್ವ ಆರೋಗ್ಯ ಸಂಸ್ಥೆಯೇ ಈ ಲಸಿಕೆಗಳನ್ನು ಶಿಪ್ಪಾರಸ್ಸು ಮಾಡಿರುವರು ಎಂಬುದನ್ನು ತಿಳಿದುಕೊಂಡಳು.  ಇನ್ನು ಊರಿನಲ್ಲಿ ಹರಿದಾಡುತ್ತಿದ ವದಂತಿಗಳ ಬಗ್ಗೆ ವಿಚಾರಣೆ ಮಾಡಲಾಗಿ ಅವೆಲ್ಲವೂ ಸತ್ಯಕ್ಕೆ ದೂರವಾದವು ಎಂಬುದು ಆಶಾಳಿಗೆ ತಿಳಿಯಿತು. ತಾನೂ ಈ ಹಿಂದೆ ಹಲವು ಶಿಶುಗಳಿಗೆ ವ್ಯಾಕ್ಸಿನ್‌ ಮಾಡಿಸಿದವಳಾಗಿದ್ದು ತೋಳಿಗೆ ಚುಚ್ಚು ಮದ್ದು ನೀಡಿದಾಗ ಆ ಭಾಗದಲ್ಲಿ ೨-೩ ದಿನ ನೊವು ಕಾಣಿಸಿಕೊಳ್ಳುವುದು ಹಾಗೂ ಜ್ವರ ಬರುವುದು ಸಾಮಾನ್ಯ ಎಂಬುದು ಆಶಾಳಿಗೆ ಈಗಾಗಲೇ ತಿಳಿದಿತ್ತು. ಅದಕ್ಕೂ ಮೀರಿ ಸಾವು ಸಂಭವಿಸಿದಲ್ಲಿ ಅದು ಬೇರೆ ಯಾವುದೋ ಕಾರಣದಿಂದ ಆಗಿರುತ್ತದೆ ಅಷ್ಟೇ ಹೊರತು ಅದಕ್ಕೆ ಕೋವಿಡ್‌ ವ್ಯಾಕ್ಸಿನ್‌ ಕಾರಣವಾಗಿರುವುದಿಲ್ಲ ಎಂಬುದನ್ನು ದೃಡಪಡಿಸಿಕೊಂಡ ನಂತರ ಆಶಾ ತನ್ನ ತಂಡದೊಂದಿಗೆ ವ್ಯಾಕ್ಸಿನ್‌ ಕುರಿತ ಜಾಗೃತಿಗೆ ಮುಂದಾದಳು. ಅಷ್ಟರಲ್ಲಿ ಕೋವಿಡ್‌ ೨ ನೇ ಅಲೆ ಸದ್ದು ಮಾಡಲು ಪ್ರಾರಂಭವಾಗಿ, ಕೋವಿಡ್‌ ವ್ಯಾಕ್ಸಿನ್‌ ತೆಗೆದುಕೊಳ್ಳದಿದ್ದಲ್ಲಿ ನಮಗೆ ಈ ಕರೋನಾದಿಂದ ಮುಕ್ತಿ ಇಲ್ಲ ಎಂಬುದನ್ನು ಆಶಾ ಮತ್ತಷ್ಟು ಪ್ರಚಾರ ಮಾಡಿದಳು ಹಾಗೂ ಎಲ್ಲರಿಗೂ ಸೂಕ್ತ ಮಾರ್ಗದರ್ಶನ ನೀಡಿ ಅವರೆಲ್ಲಾ ವ್ಯಾಕ್ಸಿನ್‌ ಪಡೆದುಕೊಳ್ಳುವಂತೆ ಮಾಡಿ, ಜನರನ್ನು ಕೋವಿಡ್‌ ವೈರಸ್‌ ನಿಂದ ಪಾರು ಮಾಡಿ ದೇಶಕ್ಕೆ ಮಾದರಿ ಎನಿಸಿಕೊಂಡಳು.

 

ಕೋವಿಡ್‌ ನಿಯಂತ್ರಣಕ್ಕಾಗಿ ಶರ್ಮಿಸುತ್ತಿರುವ ಆಶಾಳಂತಹ ಸಾವಿರಾರು ಜನ ಕೋವಿಡ್‌ ವಾರಿಯರ್ಸ್‌ ಗೆ ಈ ಕಥೆ ಅರ್ಪಣೆ.

 

ಕಥೆಯ ನೀತಿ.

೧) ಕೋವಿಡ್‌ ಕುರಿತಾದ ಮುಂಜಾಗ್ರತಾ ಕ್ರಮಗಳನ್ನು ಸರಿಯಾಗಿ ಪಾಲಿಸುವುದರಿಂದ ಕರೋನಾವನ್ನು ತಡೆಗಟ್ಟಬಹುದು.

೨) ಕರೋನಾ ಕುರಿತು ಭಯ ಪಡಬಾರದು ಆದರೆ ಎಚ್ಚರಿಕೆ ಇರಬೇಕು.

೩) ಎಲ್ಲರೂ ತಪ್ಪದೇ ಕರೋನಾ ವ್ಯಾಕ್ಸಿನ್‌ ಹಾಕಿಸಿಕೊಳ್ಳಬೇಕು, ವ್ಯಾಕ್ಸಿನ್‌ ಇಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ.

 

-       ಲಕ್ಷ್ಮೀ ಯಶಸ್ವಿನಿ ಸಿ ಎಸ್‌  D/O

  ಸಿ ಆರ್‌ ಶ್ರೀನಿವಾಸನ್‌

ದ್ವಿತಿಯ ಪಿಯುಸಿ

ನ್ಯೂಟನ್‌ ಇಂಟಿಗ್ರೇಟೆಡ್‌ ಪಿ ಯು ಕಾಲೇಜ್‌

ಚಿಕ್ಕಬಳ್ಳಾಪುರ.

PH : 9019946886.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ )

ನೀ ಮಾಯೆಯೋ, ನೀ ಛಾಯೆಯೋ !(ಕವಿತೆ) - ಶ್ರೀಮತಿ ಆಶಾ ಮುನಿರಾಜ್.

ನೀ ಮಾಯೆಯೋ,
                      ನೀ ಛಾಯೆಯೋ


ಕಣ್ಣಿಗೆ ಕಾಣದೆ ಭಯದ ಬೆನ್ನತ್ತಿ
ಅಟ್ಟಹಾಸದಿ ವಿಜೃಂಭಿಸುತ್ತಿಹ  ಮಾಯೆಯೋ
ಯುಗದ ಪರಿವರ್ತನೆಗೆ ಬಂದ   
ಜಗದ ಹಣೆಬರಹವ ಕಸಿದ ಛಾಯೆಯೋ

ಸೃಷ್ಟಿಯ ಸ್ಥಿತಿ ಗತಿಯನ್ನೇ ಎದುರಿಸಿ
ಸವಾಲಾದ ನೀ ದೈತ್ಯ ಮಾಯೆಯೋ
ಬದುಕಿನ ಪದತಾಳಗತಿಯ
ಅಲುಗಿಸಿದ  ಬವಣೆಗಳ ಛಾಯೆಯೋ

ಉಳ್ಳವರು ಬೆಚ್ಚಗಿನ ಮಹಡಿಯಲಿರಲು
ಅವರ ಆವರಿಸಿದ ಭಯದ ಮಾಯೆಯೋ
ಬಡವರ ತುತ್ತು ಅನ್ನಕ್ಕೂ ಹೊಂಚಾಕಿ
ಬೆಂಬಿಡದೆ ಕಾಡುತಿಹ ಕ್ರೂರ ಛಾಯೆಯೋ

ಸಂಸ್ಕೃತಿ-ಭಾಂದವ್ಯಗಳಿಗೆ ಮರುವುಟ್ಟು
ಕಲ್ಪಿಸಿದ ಮೃಗಜಲದ ಮಾಯೆಯೋ
ನಿನ್ನಿಂದ ಮಣ್ಣಲ್ಲಿ ಮಣ್ಣಾದವರಿಗೆ
ಮಣ್ಣಾಕಲು ಬಾರದ  ಸ್ವಾರ್ಥದ ಛಾಯೆಯೋ

ನೀ ಮಾಯೆಯಾದರೆ ನಿನ್ನ  ಆರ್ಭಟಕ್ಕೆ
ಅಂತ್ಯವಾಡಿ ನಮ್ಮ ಶಕ್ತಿ ತೋರುವೆವು
ನೀ ಛಾಯೆಯಾದರೆ ನಿನಗೆ ವಿಲ್ಯೆಯವನ್ನಿಟ್ಟು  
ಜ್ಞಾನಜ್ಯೋತಿ ಬೆಳಗಿಸಿ  ಮುಕ್ತಿನೀಡುವೆವು


(ಪ್ರಸ್ತುತ ಕವನದಲ್ಲಿ ವಿಶ್ವಕ್ಕೆ ವಿನಾಶಕಾರಿಯಾಗಿ ಪರಿಣಮಿಸಿ, ಅಗೋಚರವಾಗಿ, ಮನುಕುಲದ ಭಯದ ಬೆನ್ನೇರಿ, ಅಟ್ಟಹಾಸದಿಂದ ಮೆರೆದು, ಉಗ್ರರೂಪ ತಾಳಿ ಅಪಾರ ಕಷ್ಟ ನಷ್ಟಗಳಿಗೆ ನಮ್ಮನು ಗುರಿಮಾಡಿರುವ ಕರೋನದ ನೈಜ್ಯಸ್ಥಿತಿಯನ್ನು ಚಿತ್ರಿಸಲಾಗಿದೆ. ಹಾಗೂ ಅದರ ಆರ್ಭಟದಿಂದ ನಮಗೆ ಮುಕ್ತಿ ದೊರೆಯುವುದು ಎಂಬ  ಭರವಸೆಯನ್ನು ಇಲ್ಲಿ ಅಭಿವ್ಯಕ್ತಿಸಲಾಗಿದೆ.) 

ರಚನೆ : ಶ್ರೀಮತಿ ಆಶಾಮುನಿರಾಜ್
ಕನ್ನಡ ಶಿಕ್ಷಕಿ
೭೨೦೪೭೭೨೬೩೧
ವಿಳಾಸ: ಕೃಷ್ಣರಾಜಪುರ, ಬೆಂಗಳೂರು-೩೬.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ವಾಟ್ಸಪ್ ಮಾತ್ರ )

ಹಕ್ಕಿ ಮತ್ತು ಮರಿ (ಸಣ್ಣ ಕತೆ) - ರಾಕೇಶ್ ವಿ ಪತ್ತಾರ.


ಹಕ್ಕಿ ಮತ್ತು ಮರಿ 

ಒಂದೂರಲ್ಲಿ ಹಕ್ಕಿಯೊಂದು ತನ್ನ ಸುಂದರವಾದ ಗೂಡಿನೊಳಗೆ ವಾಸವಾಗಿತ್ತು. ಆ ಹಕ್ಕಿಯು ತನ್ನ ಗೂಡನ್ನು ಯಾರ ಕೈಗೂ ಸಿಗಲಾರದಷ್ಟು ಒಂದು ಮನೆಯ ಮಹಡಿ ಮೇಲೆ ಕಟ್ಟಿತ್ತು. ಹಕ್ಕಿಗೆ ಮೂರು ಮರಿಗಳಿದ್ದವು ಆದರೆ ಆ ಹಕ್ಕಿಗೆ ತನ್ನ ಮೊದಲೆರಡು ಮರಿಗಳೆಂದರೆ ತುಂಬಾನೇ ಇಷ್ಟವೋ ಇಷ್ಟ ಆದರೆ ಮೂರನೆಯ ಮರಿಗೆ ಅಷ್ಟೊಂದು ಇಷ್ಟಪಡುತ್ತಿರಲಿಲ್ಲ. ಹಕ್ಕಿಯು ಆಹಾರ ಹುಡುಕಿಕೊಂಡು ತನ್ನ ಮೊದಲೆರಡು ಮರಿಗಳಿಗೆ ಆಹಾರವನ್ನು ಹೆಚ್ಚು ಕೊಡುತ್ತಿತ್ತು ಆದರೆ ಆ  ಮೂರನೆಯ ಮರಿಗೆ ಸ್ವಲ್ಪ ಕೊಡುತ್ತಿತ್ತು ಹಾಗೆ ಅದರ ಬಗ್ಗೆ ಅಷ್ಟೊಂದು ಕಾಳಜಿ ತೋರಿಸುತ್ತಿರಲಿಲ್ಲ. ಒಂದು ದಿವಸ ಆ  ಹಕ್ಕಿಯು ಮೂರನೇ ಮರಿಗೆ , "ನಿನಗೆ ಬೇರೆ ಕಡೆ ವಾಸಿಸಲು ಸ್ಥಳವನ್ನು ಹುಡುಕಿರುವೆ, ಆದಷ್ಟು ನಾಳೆಯೇ ನಿನ್ನನ್ನು ಆ  ಸ್ಥಳಕ್ಕೆ ಬಿಟ್ಟು ಬರುವೆ " ಎಂದು ಹೇಳಿತು. ಇದನ್ನು ಕೇಳಿದ ಆ ಮೂರನೆಯ ಮರಿಗೆ ಸಿಡಿಲು ಬಡಿದಂತಾಯಿತು ಮತ್ತು ಆ ಮೂರನೆಯ ಮರಿಯು ಮನನೊಂದು ತನ್ನ ಮನಸ್ಸಿನಲ್ಲಿಯೇ," ನಾನು ಹುಟ್ಟಿದ್ದು ದುರಾದೃಷ್ಟ, ನನ್ನಿಂದ ಈ ಗೂಡಿನ ಮರಿಗಳಿಗೆ ಮತ್ತು ಹಕ್ಕಿಗೆ ತುಂಬಾ ತೊಂದರೆಯಾಗುತ್ತಿದೆ" ಅಂಥ ಹೇಳಿಕೊಂಡಿತು.ನಂತರ ಆ ಮನನೊಂದ ಮರಿಯು ತಟ್ಟನೆ ಆ ಗೂಡಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿತು.
-ಈ ಕಥೆಯನ್ನು ಕೇಳಿದ ನಂತರ ಓದುಗರಲ್ಲಿ ಒಂದು ಪ್ರಶ್ನೆ ಮೂಡಿರಬಹುದು ಅದೇನೆಂದರೆ ಹಕ್ಕಿಯು ಮೂರನೆಯ ಮರಿಗೆ ಯಾಕೆ ಪ್ರೀತಿ, ಮಮತೆಯನ್ನು ತೋರುತ್ತಿರಲಿಲ್ಲ? ಯಾಕೆಂದರೆ ಆ  ಮೂರನೆಯ ಮರಿಯು ಆ ಹಕ್ಕಿಯ ಸ್ವಂತ ಮರಿಯಾಗಿರುವುದಿಲ್ಲ ಮತ್ತು ಒಮ್ಮೆ ಆ  ಹಕ್ಕಿಯು ಸಂಚರಿಸುತ್ತಿರುವಾಗ ಕೆಳಗೆ ಒಂದು ಹಕ್ಕಿ ಮರಿಯು ಗಾಯಗೊಂಡು ಬಿದ್ದಿತ್ತಂತೆ ,ಅದನ್ನು ನೋಡಿದ ಈ ಹಕ್ಕಿಯು ಕನಿಕರದಿಂದ ಈ ಮರಿಯನ್ನು ಎತ್ತಿಕೊಂಡು ತನ್ನ ಗೂಡಿಗೆ ತಂದು ಬಿಟ್ಟಿತ್ತು.ಆ  ಗಾಯಗೊಂಡ ಮರಿಯೇ ಮೂರನೆಯ ಮರಿ. ಮಕ್ಕಳಿಗೆ ತಾಯಿ ಹೇಗೆ ಆಶ್ರಯ ಕೊಟ್ಟು ಸಲಹುತ್ತಾಳೋ,ಹಾಗೆ ಹಕ್ಕಿಗಳಿಗೆ ಗೂಡು ಆಶ್ರಯ ಕೊಟ್ಟು ಸಲಹುತ್ತದೆ.

: - ರಾಕೇಶ. ವಿ. ಪತ್ತಾರ, ಐಕೂರ. 10ನೇ ತರಗತಿ, ಆದರ್ಶ ವಿದ್ಯಾಲಯ ಶಹಾಪುರ, ಯಾದಗಿರಿ ಜಿಲ್ಲೆ.*


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮುಗಿಲ ಹಕ್ಕು ಕೊಡಿ ನಮಗೆ........(ಎನ್ ಎಲ್ ಚನ್ನೇಗೌಡರ ಪರಿಚಯ ಲೇಖನ) - ಶ್ರೀಮತಿ ಗಿರಿಜಾ ಮಾಲಿ ಪಾಟೀಲ.


*“ಮುಗಿಲ ಹಕ್ಕು ಕೊಡಿ ನಮಗೆ ಹಾರಾಡುತ್ತೇವೆ ಗುಡಿ, ಚರ್ಚ್, ಮಸೀದಿಗಳ ಹಂಗಿಲ್ಲದಂತೆ, ಜಲ, ನೆಲ, ಭಾಷೆ ಬೇಗೆಗಳ ಸದ್ಧಿಲ್ಲದಂತೆ”-ಇನ್.ಎಲ್.ಚನ್ನೇಗೌಡ.*


                                     ಹಾಸನ ಜಿಲ್ಲೆಯ ಹಿರಿಯ ಸಾಹಿತಿಗಳಾದ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಮಹಾನ್ ಮುತ್ಸದ್ದಿ , ಹಾಗೂ ಸಾಹಿತ್ಯದ ಮೇರು ವ್ಯಕ್ತಿತ್ವ ಎನ್.ಎಲ್.ಚನ್ನೇಗೌಡ ಅವರು ಹಾಸನ ಜಿಲ್ಲೆಯಲ್ಲಿ ‘ಮನೆ ಮನೆ ಕವಿಗೋಷ್ಟಿ’ಯ ಮೂಲಕ ಮನೆ ಮಾತದವರು. ಇವರ ಕನ್ನಡ ಸಾಹಿತ್ಯದ ಸೇವೆ ಅಮೋಘ ಮತ್ತು ಅನನ್ಯವಾಗಿದೆ. ಒಬ್ಬ ಸಾಹಿತಿ ಮತ್ತು ಸಂಘಟನಕಾರನಲ್ಲಿರಬೇಕಾದ ನೈತಿಕ ಮೌಲ್ಯ ಮತ್ತು ಕೆಚ್ಚೆದೆಯ ದ್ಯೋತಕವಾಗಿದ್ದಾರೆ. ಇವರನ್ನು ನೋಡಿದಾಗ ನನಗೆ ಆನಂದವಾಗುವುದು ಇವರು ತಮ್ಮ ಇಳಿ ವಯಸ್ಸಿನಲ್ಲೂ ಕುಂದದೆ ನಾಡು ನುಡಿಯ ಸೇವೆಯಲ್ಲಿ ತೊಡಗಿರುವುದು ಹಾಗೂ ಸಾಹಿತ್ಯವನ್ನೂ ಬರೆದು ಕೃತಿ ಪ್ರಕಟಿಸುತ್ತಿರುವುದಕ್ಕೆ. ಇವರ ಉತ್ಸಾಹ ಮೆಚ್ಚಲೇ ಬೇಕಾದ್ದು.
ಇವರ ಈ ಕವನ ಸಂಕಲನದ ಪ್ರಾರಂಭದಲ್ಲಿಯೆ “ಹಾಲ್ದಿಂಗಳ ಉಯ್ಯಾಲೆಯಲ್ಲಿ ಮೊರೆವ ಸಾಗರದ ಅಲೆಗಳಂತೆ ಅಮವಾಸ್ಯೆಯಲಿ ಕಿಲಕಿಲನೆ ನಗುವ ನೀಲಾಕಾಶದ ನಕ್ಷತ್ರಗಳಂತೆ ನನ್ನ ಕವನ” ಎನ್ನುತ್ತಲೇ ಆರಂಭಿಸುತ್ತಾರೆ. ಇವರ ಈ ಮಾತಿಗೆ ಪುಷ್ಟಿ ಕೊಡುವಂತೆ ಇವರ ‘ಪರದೇಶಿ’ ಎನ್ನುವ ಕವನ ಅಧ್ಬುತವಾಗಿ ಮೂಡಿ ಬಂದಿದೆ. ಇದರಲ್ಲಿ “ನನ್ನವ್ವ ಊದುತ್ತಿದ್ದಾಳೆ ಒಲೆ ಉರಿಯುವಂತಿಲ್ಲ, ಉಸಿರುಗಟ್ಟಿದೆ ನನ್ನವ್ವನ ಎದೆ ಕೊಳವೆ, ಹಿಟ್ಟು ಬೇಯುವಂತಿಲ್ಲ ಗಂಜಿ ಕುದಿಯುವಂತಿಲ್ಲ. ನನ್ನವ್ವನ ಎದೆ ಬೆಂಕಿ ಆರುವಂತಿಲ್ಲ. ಎನ್ನುತ್ತಾ ತಮ್ಮ ತಾಯಿ ತಂದೆಯರನ್ನು ನೆನಪಿಸಿಕೊಳ್ಳುತ್ತಲೆ ಸಂಸರಾದ ನೊಗ ಹೊತ್ತ ಹೆತ್ತವರ ಬದುಕಿನ ಸಂಕಷ್ಟದ ಸ್ಥಿತಿಯ ಅನವಾರಣ ಮಾಡುತ್ತಾರೆ. ಮುಂದುವರೆದು ‘ಅಪ್ಪ ಗಾಣದ ಎತ್ತು ಅವ್ವ ಎಣ್ಣೆ ಬಸಿದ ಹಿಂಡಿ, ಬೆಳೆ ಬಲು ಹುಲುಸು, ಭೂಮಿ ತೂಕದ ಹೆಣ್ಣು ಈಗ ಹಣ್ಣಾಗಿದ್ದಾಳೆ ಅಪ್ಪ ಮಣ್ಣಾಗಿದ್ದಾನೆ ನನಗೀಗ ಆಕಾಶವೆಲ್ಲಾ ದಾರಿ’ ಎನ್ನುವ ಸಾಲುಗಳಂತೂ ಮನ ಮಿಡಿಯುತ್ತವೆ. 
ತಾಯಿಯ ಬದುಕಿನ ಕುರಿತು ಇವರಿಗೆ ಒಂದು ರೀತಿಯ ಅಘಮ್ಯ ಪ್ರೀತಿ ಹಾಗೂ ಗೌರವ “ಉಟ್ಟು ಹರಿದ ಸೀರೆಗಳನ್ನು ನನ್ನವ್ವ ಎಸೆದ ನೆನಪಿಲ್ಲ ನಮ್ಮೂರ ಹೊಳೆಯಲ್ಲಿ ತೊಳೆದು ಒಣಗಿಸಿ ಚಂದದ ಕೌದಿ ಹೊಲೆದಿದ್ದಾಳೆ” ನಮ್ಮ ಹಿರಿಯರ ಬದುಕಿನ ಸಂಸ್ಕøತಿಯನ್ನೇ ಪ್ರತಿಬಿಂಬಿಸುವ ಈ ಕವಿತೆ ತಾಯಿಯ ಅಪ್ರತಿಮ ತ್ಯಾಗದ ಅನಾವರಣ ಮಾಡಿದೆ. 
ಇವರ ಭೂರಮೆ, ನನ್ನ ಪಟ, ಕುರಿಮಂದೆ, ಹಾರೈಕೆ, ಪ್ರಶಸ್ತಿಗಳು ಬಿಕರಿಗಿವೆ, ಯುಗಾದಿ, ಅಳುಬಂದರತ್ತು ಬಿಡು, ಗೂಡು ಬಿಟ್ಟ ಹಕ್ಕಿ, ಕನಸುಗಳ ಮಾರಿಕೊಂಡವರು, ಬಡವರ ಹೆಣ್ಣು ಹಿಡಿದವರಿಗೆ ಹೆಂಡತಿ, ಪಟ್ಟಕ್ಕೇರದವರು ಇವು ತುಂಬಾ ಉತ್ತಮವಾಗಿ ಮೂಡಿಬಂದ ಕವಿತೆಗಳಾಗಿವೆ.
ನಿಜ ಬದುಕಿನಲ್ಲೂ ನೇರ ಹಾಗೂ ನಿಷ್ಟುರವಾದಿಯಾದ ಇವರು ‘ನೆಲೆ ಇಲ್ಲದವರು’ ಕವಿತೆಯಲ್ಲಿ “ಆಶೆಯ ಹಯನಕೆ ಜೀನನು ಕಟ್ಟಿ ನಿಲ್ಲಿಸಿದವರುಂಟೆ ಬದುಕಲ್ಲಿ ಕಾವಿಯ ತೊಟ್ಟರು ಕಾಮಿನಿ ಒಳಗಿರೆ ಈ ಕರ್ಮದ ಕಾಯಕೆ, ಶುಚಿ ಉಂಟೇನು ಮಠದಲ್ಲಿ” ಎಂದು ಸಮಾಜಿಕ ವಿಡಂಬನೆಗೆ ನಿಲ್ಲುತ್ತಾರೆ. ವಿಭಿನ್ನ ಆಯಾಮಗಳಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿದ ಇವರು ಬಹುಮುಖ ಪ್ರತಿಭಾನ್ವಿತರೂ ಹೌದು. 
ಅದರಲ್ಲೂ ಇವರ ಈ ಸಂಕಲನದಲ್ಲಿ ಬರುವ ‘ಮುಗಿಲ ಹಕ್ಕು ಕೊಡಿ ನಮಗೆ ನಾವು ಹರಿದಾಡುತ್ತೇವೆ. ನೆಲ ಮುಗಿಲ ಗಡಿಯಾಚೆ ಹೆಮ್ಮೋಡದಂತೆ, ಗುಡಿ ಚರ್ಚು ಮಸೀದಿಗಳ ಹಂಗಿಲ್ಲದಂತೆ, ಜಲ,ನೆಲ,ಭಾಷೆ ಬೇಗೆಗಳ ಸದ್ದಿಲ್ಲದಂತೆ.” ಎನ್ನುವ ಇವರ ಕವಿತೆ ತುಂಬಾ ಅಧ್ಬುತವಾಗಿ ಮೂಡಿ ಬಂದಿದೆ. ಹಾಗೆಯೆ ಇವರ ಅನಾಥ ಶಿಶುವಿನ ಅರ್ಥನಾದ ಎನ್ನುವ ಕವಿತೆಯಂತೂ ಎಂತವರನ್ನೂ ತಟ್ಟಿ ಮಾತನಾಡಿಸುತ್ತದೆ. “ನಾನು ಯಾರೋ ಮಾಡಿ ಎಸೆದ ಮಣ್ಣಿನ ಹಣತೆ ತೊಟ್ಟಿಯಿಂದ ತಂದು ತೊಟ್ಟಿಲು ಕಟ್ಟಿದ್ಧಾಳೆ ನನ್ನವ್ವ, ನನ್ನಪ್ಪ ಹಣತೆಗೆ ಹಾಕಿದ್ದು ಯಾರೋ ಗಾಣದಿಂದ ಹಿಂಡಿ ತೆಗೆದ ಎಣ್ಣೆ ಅವ್ವ ಮತ್ಯರೋ ಬೆಳೆದ ಹತ್ತಿ ಹಿಂಜಿ ಬತ್ತಿ ಹೊಸೆದು ಹಣತೆ ಹಚ್ಚಿದ್ದಳೆ. ಅಗಾದವಾದ ಅಂತಶಕ್ತಿಯುಳ್ಳ ಇವರ ಪ್ರತಿ ಕವಿತೆಯು ನೊಂದವರ ಬದುಕಿನ ಕಳಕಳಿಗೆ ತೊಡಗುತ್ತವೆ. ಅದರಲ್ಲೂ ಇವರ ‘ಊರು ಭಂಗ’ ಎನ್ನುವ ಕವಿತೆಯಲ್ಲಿನ ಸಮಾಜಿಕ ಬಂಡಾಯದ ಧ್ವನಿ ಮೆಚ್ಚುವಂತಹದ್ದು “ಹೆಣ್ಣು ಬಳಿಸಿ ಬಿಟ್ಟ ವಿಟರಿದ್ದಾರೆ, ಹೊನ್ನು ವೈಡೂರ್ಯ ಬಾಚಿದ ಕಳ್ಳರಿದ್ದಾರೆ. ಹೆಗ್ಗಣಗಳಂತೆ ಮಣ್ಣ ಬಗೆವವರಿದ್ದಾರೆ. ಎಲ್ಲವನು ಅನುಭವಿಸಿ ಹಾಳಾದ ಅರಸರಿದ್ದಾರೆ.”
ಅಪೂರ್ವವಾದ ಸಾಮಾಜಿಕ ಕಳಕಳಿಯುಳ್ಳ ಎನ್,ಎಲ್,ಸಿ ಯವರು ಹೆಚ್ಚಾಗಿ ಬರೆದ್ದದ್ದು ಸಮಾಜವನ್ನು ತಿದ್ದುವಂತಹ ವಿಷಯವಸ್ತುಗಳನ್ನು ಬಳಸಿಕೊಂಡಿದ್ದಾರೆ. ಹಾಗೆಯೆ ಇವರ ಸಾಹಿತ್ಯದಲ್ಲಿನ ಸೃಜನಶೀಲತೆ ಮತ್ತು ಕಾವ್ಯಕ್ಕಿರಬೇಕಾದ ವ್ಯಂಗ್ಯಾರ್ಥದ ಮೋಡಿ ಸಹೃದಯನನ್ನು ಸೆರೆ ಹಿಡಿಯುತ್ತದೆ. ಕಾವ್ಯ ಸೌದ ಎನ್ನುವ ಇವರ ಕವಿತೆಯಲ್ಲಿನ ಕಾವ್ಯ ಕಟ್ಟುವಾಗಿನ ವ್ಯಕ್ತಿಯ ತಾಳ್ಮೆ ಮತ್ತು ಕೌಶ್ಯದ ಕುರಿತು ಇಲ್ಲಿ ತುಂಬಾ ಸೊಗಸಾಗಿ ವರ್ಣಿಸಿದ್ದಾರೆ. “ಬಿರುಕು ಬಿಟ್ಟಿದೆ ಸೌದ ಸೋರಿಕೆ ಅಲ್ಲಲ್ಲಿ” ಹಾಗೆ ಮುಂದುವರೆದು ಮುಂದಿನ ಪ್ಯಾರದಲ್ಲಿ “ಹಳೆ ಬೇರುಗಳ ರಸ ಹೀರಿ ಹೊಸದೊಂದು ಬಳ್ಳಿ ಚಿಗುರಬೇಕು,  ತುರ್ತಾಗಿ ಮುಗಿಸಬೇಕೆಂಬ ತುರ್ತು ಒಳಗುದಿಯ ಆತುರ ಮರೆಯಬೇಕು.” ಎನ್ನುವಲ್ಲಿ ಇತ್ತೀಚೆಗೆ ಯುವ ಪ್ರತಿಭೆಗಳು ಲೇಖಕರೆನ್ನಿಸಿಕೊಳ್ಳುವ ಆತುರದಲ್ಲಿ ಬರೆದು ಅದನ್ನು ಮರುಪರಿಶೀಲಗೆ ಒಳಪಡಿಸದೇ ಇರುವುದರ ಕುರಿತು ಉತ್ತಮ ಸಂದೇಶ ನೀಡಿದ್ದಾರೆ. ಹಾಗೆ ಪ್ರಶಸ್ತಿಗಳು ಬಿಕರಿಗಿವೆ ಎನ್ನುವಲ್ಲಿಯೂ “ಹೊಸಬರಿಗೆ ಹಣಕೊಟ್ಟು ಹಲ್ಕಿರಿದು ಗೌ.ಡಾ. ಪ್ರಶಸ್ತಿಗಳ ಪಡೆವ ತುರ್ತು ಸಾಧನೆ ಸೊನ್ನೆ ಇಲ್ಲಿ ಬರೀ ಕಣ್ಸನ್ನೆ. ಹೆಸರು ಉಳಿಯಬೇಕು, ಉಸಿರಿಲ್ಲಿ ಕಾಯಕೊರಡು, ಗೊತ್ತು ಕೊಟ್ಟವನಿಗೂ ಇದು ಪಾರ್ಥೀವ ಶರೀರ.” ಇದು ನಿಜಕ್ಕೂ ಪ್ರಚಲಿತದಲ್ಲಿ ನಡೆಯುತ್ತಿರುವ ಸತ್ಯ ಸಂಗತಿಯೂ ಆಗಿದೆ. 
ಚುಕ್ತವಾಗದ ಲೆಕ್ಕ ಎನ್ನುವ ಕವಿತೆಯಲ್ಲಿ ರೈತರ ಇಡೀ ಬದುಕನ್ನು ತುಂಬಾ ಮಾರ್ಮಿಕವಾಗಿ ತಮ್ಮ ತಂದೆಯನ್ನು ನೆನೆಯುತ್ತಲೇ ಕಟ್ಟಿಕೊಟ್ಟು ಬಿಡುತ್ತಾರೆ. “ಅಪ್ಪನ ಹಣೆಯಲ್ಲಿ ಸೊಕ್ಕಿಲ್ಲದ ಸುಕ್ಕು ಗೆರೆಗಳು ನೂರು ಮೂಳೆಗಳ ಎಣಿಸಿ ಗುಣಿಸಬಹುದಾದ ಕಾಯ” ಹಾಗೆಯೆ ವಾಸ್ತು ಹುಡುಕುತ್ತಿದ್ದಾರೆ ವಸ್ತು ಸ್ಥಿತಿ ಮರೆತು. ವಾಸ್ತವ ಅರಿಯದವರು. ಅರಮನೆಯಲ್ಲಿ ಕುಳಿತು ಋಣ ಭಾರ ತಿಳಿಸಲಾರದೆ ನನ್ನಪ್ಪ ಪಂಚಭೂತಗಳಲ್ಲಿ ಲೀನ. ನನ್ನವ್ವನ ಕನಸೂ ಕೂಡ.” 
ಸ್ತ್ರೀ ಪರವಾದ ಧ್ವನಿ ಎತ್ತುವ ಇವರ ಸ್ತ್ರೀ ಸಂವೇದನೆಗಳ ಪರವಾದ ವಾದ ಪ್ರಶಂಸನೀಯವಾದದ್ದು ಇಸ್ಲಾಂ ಸಂಸ್ಕಂತಿಯಲ್ಲಿರುವ ತಲಾಖ ಪದ್ದತಿಯನ್ನು ಖಂಡಿಸಿ ಬರೆಯುತ್ತಾ ಇವರು “ವಾಟೆ ಎಸೆದವರ ಸುಳಿವಿಲ್ಲ ಎಸೆದ ವಾಟೆಯೊಳಗಿನ ಬೀಜ ಮೊಳೆಯುತ್ತಿದೆ. ಈಗ ಈ ಒಡಲ ಕುಡಿಗೆ ಅಪ್ಪ ಯಾರು?” ಎನ್ನುವ ಧ್ವನಿ ಎಂತವರನ್ನೂ ಕಣ್ಣೀರಾಗಿಸದೆ ಬಿಡದು. 
ಇವರ ಕಾವ್ಯ ಮೋಡಿಗೂ ಸಾಕ್ಷಿ ಎನ್ನುವಂತೆ “ಹೊತ್ತು ಕಾಣದ್ಹೊತ್ತಲ್ಲಿ ಒತ್ತರಿಸಿದ ಕನಸುಗಳು ಹೊತ್ತೇರಿ ಬಂದಾಗ ಬಟಾ ಬಯಲು.” ‘ಭಾವ ಲೋಕದ ಕನಸು’ ಎನ್ನುವ ಇವರ ಇನ್ನೊಂದು ಕವಿತೆಯಲ್ಲಿ “ಭಾವ ಲೋಕದ ಕನಸು ಅರಳುವುದು ಹೀಗೆ ಅವರವರ ಮನಸ್ಸು ಹುತ್ತ ಕಟ್ಟಿದಂತೆ.” ಎಂದು ಅಧ್ಬುತ ಸಾಲನ್ನೆಣೆಯುತ್ತಾರೆ. ಇವರ ಪದಸಂಪತ್ತು ಮತ್ತು ಕಾವ್ಯ ಕಟ್ಟುವಲ್ಲಿನ ಕವಿಯ ಭಾವತೀವ್ರತೆ ಈ ಸಂಕಲನ ದುತ್ತಿದ್ದಂತೆ ತಟ್ಟನೆ ಗೋಚರಿಸಿ ಬಿಡುತ್ತದೆ’. ಅದರಲ್ಲೂ ಎನ್.ಎಲ್.ಸಿ ಅವರು ಪ್ರಾಸ, ವರ್ಣನೆ, ಕಾವ್ಯ ವಿಜೃಂಭನೆಯ ಗೋಜಿಗೆ ಹೋಗದೆ ಭಾವ ತೀವ್ರತೆಯನ್ನು ಯತಾವತ್ತಾಗಿ ಹಿಡಿದಿಟ್ಟಿರುವುದು ಗಮನಾರ್ಹ ಹಾಗೂ ಅವರ ಸತ್ವಯುತ ಸಾಹಿತ್ಯಕ್ಕೆ ಇದೇ ರಹದಾರಿಯೂ ಆಗಿದೆ. ಇತ್ತೀಚಿಗೆ ಇಡೀ ಜಗತ್ತನ್ನೆ ಬೆಚ್ಚಿ ಬೀಳಿಸಿದ ಕರೋನಾ ಕುರಿತು ಕಾವ್ಯ ಬರೆಯುತ್ತ “ಕಳೆಗಳೆಲ್ಲಾ ಕೊಳಾಗುತ್ತಿಲ್ಲ. ಬಿದಿರೆಲ್ಲಾ ಮೇದರೆಣೆವ ಬುಟ್ಟಿ ಬೊಂಬೆ ಬೀಸಣಿಕೆಯಾಗುತ್ತಿಲ್ಲ. ತಟ್ಟಿಲಾಗುತ್ತಿಲ್ಲ ಚಟ್ಟದ ಬಡಿಗೆಯಾಗುತ್ತಿವೆ ಯಾರೋ ಹಚ್ಚಿದ ಬೆಂಕಿಗೆ ಕೆಂಡವಾಗುತ್ತಿಲ್ಲ ಉರಿದು ಬೆಳಕು ನೀಡುತ್ತಿಲ್ಲ ಬೂದಿಯಾದರೂ ವಿಭೂತಿಯಾಗುತ್ತಿಲ್ಲ.” ಎನ್ನುವ ಸಾಲುಗಳು ಕರೋನಾದಿಂದುಂಟಾದ ಪ್ರಕ್ಷುಬ್ಧ ಸ್ಥಿತಿಯನ್ನು ಕಟ್ಟಿ ಕೊಡುವಲ್ಲಿ ಸಫಲವಾಗಿದೆ.
ಪೌರಾಣಿಕ ಪಾತ್ರಗಳ ಕುರಿತು ಸಾಕಷ್ಟು ಒಲವಿರುವ ಇವರು ಹೆಚ್ಚಾಗಿ ಉಪಮೆಗೆ ಬಳಸಿಕೊಂಡಿದ್ದು ಸಂಕಲನಕ್ಕೆ ಮೆರಗು ತಂದಿದೆ. ತಮ್ಮ ನಿಜ ಬದುಕಿನಲ್ಲೂ ಸತ್ಯ ಪ್ರಮಾಣಿಕತೆ, ನ್ಯಾಯ, ನಿಷ್ಟೆಗೆ ಬದ್ದರಾಗಿದ್ದಾರೆ. ಅದರಲ್ಲೂ ವಾಸ್ತವವಾದಿಯಾದ ಇವರ ‘ರಂಗ ಮಂಚ’ ಎನ್ನುವ ಕವಿತೆಯು ವಾಚ್ಯರ್ಥಕ್ಕೆ ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ. “ಇಡಿ ರಾತ್ರಿ ಬಣ್ಣ ಹಚ್ಚಿ ಕುಣಿದವನಿಗೆ ಬೆಳಗಾದರೆ ಬಣ್ಣ ಅಳಿಸುವ ತುರ್ತು ಕತ್ತಲೆಯಲ್ಲಿ ನಟ ಬಳಿದುಕೊಂಡ ಬಣ್ಣ ನೂರೆಂಟು ನೋವಿನ ಸುಕ್ಕುಗಳನ್ನು ಮುಚ್ಚುವ ಸಾಕ್ಷಿಕಲ್ಲು.” 
ಸಂಕಲನದ ಕೊನೆಯಲ್ಲಿ ಬರುವ ಕೆಲವು ವಚನಗಳು ಕೂಡ ತುಂಬಾ ಅರ್ಥಗರ್ಭಿತವಾಗಿ ಮೂಡಿ ಬಂದಿವೆ. “ಒಂಬತ್ತು ತೂತಿನ ಹುತ್ತ ನುಸುಳಿದರೆ ಆರು ತಲೆಯ ಹಾವು ಆಡಿಸಬೇಕು ಮೂರು ಪುಂಗಿಗಳ ಊದಿ ಹಾವು ಹಾಡಿದರೆ ಹಾಡು ಆಡದಿದ್ದರೆ ಪಾಡು ತ್ರಿಕರ್ಣ ಶುದ್ಧಿಯಲಿ ಹಾವ ಆಡಿಸು ಬುದ್ದಿ ಕೊಡೋ ಶ್ರೀ ಚೆನ್ನಕೇಶವ.” ಎನ್ನುವ ವಚನ ನಮ್ಮ ಅರಿಷಡ್ವರ್ಗಗಳ ನಿಯಂತ್ರಣದಿಂದ ಬದುಕನ್ನು ನಡೆಸುವ ಕುರಿತಾಗಿದೆ.
ಅಂತಮವಾಗಿ ಹೇಳುವುದಾದರೆ ಹೀಗೆ ಉತ್ತಮ ಕವಿತೆಯ ಸಾಲುಗನ್ನು ಒಳಗೊಂಡ ಈ ಕವನ ಸಂಕಲನ ಸಮಾಜ ಮುಖಿಯಾಗಿದ್ದು ಉತ್ತಮ ಸಂದೇಶಗಳನ್ನು ಸಾರುತ್ತಿದೆ. ಜನಮಾನಸದಲ್ಲಿ ಪುಟ್ಟ ಹಣತೆಯಾಗಿ ಪ್ರಜ್ವಲಿಸಲಿ ಎನ್ನುವ ಶುಭ ಹಾರೈಕೆಯೊಂದಿಗೆ ಹಾಗೂ ನಾನು ಇಷ್ಟು ಹೊತ್ತು ಕವನ ಸಂಕಲನ ಓದುವ ತವಕದಲ್ಲಿ ಹಿಡಿದಿಟ್ಟುಕೊಂಡ ಮನದ ಮಾತೊಂದನ್ನು ಹೇಳಿಯೇ ಬಿಡುತ್ತೇನೆ, ಈಗ ತಾನೆ ಸಾಹಿತ್ಯ ಲೋಕಕ್ಕೆ ಹೆಜ್ಜೆ ಇಡುತ್ತಿರುವ ನಾನು ಎನ್.ಎಲ್.ಸಿ ಅಂತಹ ಹಿರಿಯ ಸಾಹಿತಿಗಳ ಭಾವದಳಕ್ಕಿಳಿದು ವಿಶ್ಲೇಷಿಸುವಲ್ಲಿ ಸೋತಿದ್ದೇನೇನೋ ಎನ್ನುವ ಅಳಕು ಇದೆ. ತಪ್ಪುಗಳಿದ್ದರೆ ಈ ಕಿರಿಯ ಲೇಖಕಿಯನ್ನು ಮನ್ನಿಸಿ ಎಂದು ಹೇಳುತ್ತಾ ಎನ್.ಎಲ್.ಸಿ ಅವರ ಸಾಹಿತ್ಯ ಹೀಗೆ ನಿರಂತರವಾಗಿ ಸಾಗಲಿ ಎಂದು ಆಶಿಸುತ್ತಾ.

ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ:9448713659)

ಕಂದನ ಕನಲು (ಶಿಶುಗೀತೆ) - ಕಮಲಮ್ಮ.

ಒಂದು ಶಿಶುಗೀತೆ
* ಕಂದನ ಕನಲು*


ಅಮ್ಮ ಕೊಟ್ಟಳು ಉಪ್ಪಿಟ್ಟು
ನಂಗೆ ತಿನ್ನಲು ಬೇಕಿತ್ತು ನಿಪ್ಪಟ್ಟು
ನಾನಿರೋದೇ ಈಟೇ ಈಟು
ಡಬ್ಬ ಕ್ಯೆಗೆ ಸಿಗೋದೇ ದೌಟು!

ಅಪ್ಪ ತಂದಿತ್ತು ಚಾಕಲೇಟು
ಅಮ್ಮ ಕೊಡಲ್ಲಾ ತೆಗೆದಿಟ್ಟು
ನನ್ಹಲ್ಲು ಹುಳ್ಕ ಎಂದ್ಬಿಟ್ಟು
ನೆಗೆದೆ ಕೆಂಪನೆ ಸ್ಟೂಲ್ ಹತ್ಬಿಟ್ಟು

ಮುರ್ದ ಸ್ಟೂಲ್ ಧಡಾರ್ ಅಂತು
ಪ್ಲಾಸ್ಟಿಕ್ ತುಂಡು ಚೆಲ್ಲೋಯ್ತು
ಪಾತ್ರೆಯೊಳಗ್ನ ಹಾಲು ಉರುಳಿತ್ತು
ಕಾಮಿ ಬಂತು ಪೂರಾ ನೆಕ್ಯಂತು

ಅಮ್ಮ ಅಡಿಗೆ ಮನೀಗ್ಬಂತು
ಕಾಮಿ ಮ್ಯಾವ್ ಮ್ಯಾವ್ ಅಂತಿತ್ತು
ಅಮ್ಮನ ಕಣ್ಣು ಕೆಂಪಾಯ್ತು
ಕೋಲಿಂದ ಕಾಮಿಗೆ ಹೊಡೀತು!

ಅಪ್ಪ ನನ್ಹತ್ರ ನನ್ಹತ್ರ ಬಂದ್ಕೂತು
ಉಂಡಿ ನಿಪ್ಪಟ್ಟು ಬಾಯ್ಗೆ ತುರುಕಿತ್ತು
ಚಾಕಲೇಟ್ ಬಾರ್ ಜೇಬಿಗೆ ಇಟ್ಟಿತ್ತು
ಅಮ್ಮನ ಕೋಪ ಕೆರಳಿತ್ತು!

ಅಮ್ಮ ಮೊಬೈಲ್ ಕೊಟ್ಟಿತ್ತು
ಗೇಮ್ ಆಡೋದ್ನ ನೋಡ್ಬಿಡ್ತು
ಮೂಲೆಬೆತ್ತ ತಂದು ಬಾರಿಸ್ತು!
ಕ್ಲಾಸಷ್ಟೇ ನೋಡೋ ಮನಸಾಯ್ತು!
ಕಮಲಮ್ಮ ಬೆಂಗಳೂರು
೫೭೦/೨೫ ಮೊದಲನೇ ಹಂತ
ಎರಡನೆ ಅಡ್ಡರಸ್ತೆ 
ಶಿವಕುಮಾರಸ್ವಾಮಿ ನಗರ
ದಾವಣಗೆರೆ ೫೭೭೦೦೫.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ವಾಟ್ಸಪ್ ಮಾತ್ರ )

ಚಿಂತೆ ಚಿತೆಗೆ ದಾರಿ (ಕವಿತೆ) - ಜಿ ಟಿ ಆರ್ ದುರ್ಗಾ ಬಂಗಾರಪೇಟೆ.

ಚಿಂತೆ ಚಿತೆಗೆ ದಾರಿ

ಚಿಂತೆಯಿಂದ ಚಿತೆ ಏರಬೇಡ
ಕೋಪ ದ್ವೇಷ ಚೆಟ್ಟ ಕಟ್ಟಬೇಡ
ಶಾಂತಿಯಿಂದ ಬಾಳಲೆಬೇಕಣ್ಣ 
ಈ ಜೀವನವನ್ನು ಹೂವಂತೆ ಕಾಣಣ್ಣ

ದಿನವು ಟೆಂಕ್ಷನ್ ಮಾಡ್ಕೋ ಬೇಡಿ
ಜೀವನ ಹಾಳು ಮಾಡ್ಕೊಬೇಡಿ
ಕೆಲವೇ ದಿನಗಳು ಜೀವನ ನೋಡಿ
ಬೇಕಾಗಿ ಜೀವವ ಕಳಕೊಳ್ಳಬೇಡಿ

ಸಿಡಿಕು ಮುಸಿನು ಕೋಪಗಳೆಲ್ಲ ಬೇಡ....
ಕ್ಷಣಕ್ಷಣಕ್ಕೂ ಉದ್ವೇಗ ಮನಸ್ಸಿಗೆ ಬೇಡ
ನೂರು ನೋವುಗಳಿರಲಿ ಶಾಂತಿ ತುಂಬಿರಲಿ
ನೂರಾರು ಚಿಂತೆ ಬೇಡ ಸಮಾಧಾನವಿರಲಿ

ಯಾವುದು ಕ್ಷಣದಲಿ ಹೋಗುವುದಿಲ್ಲ
ಜೀವನದಲ್ಲಿ ಎಲ್ಲವನ್ನು ಅನುಭವಿಸಬೇಕಲ್ಲ
ಹೆಂಡತಿ ಬೇಕು ಮಕ್ಕಳು ಬೇಕು ಆಸರೆಗೆ
ಎಲ್ಲರ ಜೊತೆಯಲಿ ಹರುಷವಿರಲಿ ಜೊತೆಜೊತೆಗೆ

ಆರೋಗ್ಯ ನಮ್ಮ ದೇಹಕ್ಕೆ ಭಾಗ್ಯ ಅಲ್ಲವೇ
ದುಡಿದು ತಿನ್ನುವನಿಗೆ ರೋಗ ಬರುವುದಿಲ್ಲವೇ
ಎಲ್ಲವು ಸಹಿಸಬೇಕು ಎಲ್ಲರೂ ಕೂಡಿರಬೇಕು
ಕಷ್ಟ ಸುಖವು ಬಂದೆಬರುವುದು ತಡೆಯಬೇಕು

ದೈನಂದಿನ ಶ್ರಮಿಸಿದವನಿಗೆ ಆರೋಗ್ಯವು
ಸೋಮಾರಿತನ ಇದ್ದವನಿಗೆ ಬರುವುದು ರೋಗವು
ದುಡಿದು ತಿನ್ನವನಿಗೆ ನೋವಿನ ಅರಿವು ಉಂಟು
ತಾಳ್ಮೆಯೆ ಜೀವನಕ್ಕೆ ಔಷಧಿ ಮನುಜನ ನಂಟು

ಆರೋಗ್ಯ ಬಹಳ ಅತ್ಯಮೂಲ್ಯವಾದದ್ದು
ಯೋಚೆನೆ ಕೈಯಿಗೆ ಜೀವ ಕೊಡಬೇಡಿ
ಮನೆಯಲ್ಲಿ ನೂರೆಂಟು ಕಷ್ಟಗಳಿದ್ದರು ಇರಲಿ
ಶಾಂತಿ ನೆಮ್ಮದಿಗೆ ಹೆಚ್ಚು ಆದ್ಯತೆ ಇರಲಿ
ಜಿ ಟಿ ಆರ್ ದುರ್ಗ
ಬಂಗಾರಪೇಟೆ

ಶಾಲೆ ತೆರೆಯುವ ಬಯಕೆ (ಕವಿತೆ) - ಆನಂದಜಲ.

*ಶಾಲೆಯ ತೆರೆಯುವ ಬಯಕೆ*

ಬಿಕೋ ಎನುತಿವೆ ನಮ್ಮ ಶಾಲಾ ಅಂಗಳಗಳು
ಭಣಭಣಗುಡುತಿವೆ ಮಕ್ಕಳಿಲ್ಲದ ಕೊಠಡಿಗಳು
ಉರುಳಿಹೋದವು ಎರಡು ವರುಷಗಳು
ಶಾಲೆಯ ಬಾಗಿಲ ತೆರೆಯದ ಬಾಳು||

ಮಾಸಿದ ಗೋಡೆಯ ನಿಶ್ಶಬ್ಧದ ಅಲೆಯು
ಹಾಸಿದೆ ಅಲ್ಲೆಲ್ಲಾ ಜೇಡರ ಬಲೆಯು
ಕೈತೋಟ ಗಿಡದಿ ಹೂಗಳು ಅಳುತಿವೆ
ಮಕ್ಕಳ ಕಿಲಕಿಲ ನಗುವಿಲ್ಲದೆ ಕೊರಗಿವೆ||

ಎರಡನೆ ಅಲೆ ಕೊರೋನಾ ಕಾರುಬಾರು
ಬಯಭೀತಿಯಲಿ ನಮ್ಮ ಪೋಷಕರು
ಪರೀಕ್ಷೆ ನಡೆಸಲು ಎಡರುತೊಡರು
ಆಗಲೇ ಮೂರನೆ ಅಲೆಯ ಗೊಂದಲ ಶುರು||

 ಗುರುಗಳು ಕಾದಿಹರು ಕಲಿಸಲು
ಪ್ರೀತಿಯ ಮಕ್ಕಳ ಎದುರುಗೊಳ್ಳಲು
ಪರ್ಯಾಯಯೋಜನೆ ಸಿದ್ಧತೆಗೊಳ್ಳಲು
ಇಲಾಖೆ ಕಾದಿದೆ ಶಾಲೆಯ ತೆರೆಯಲು||

       ಆನಂದಜಲ,ಶಿಕ್ಷಕಿ.
           ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ತುರುವೇಕೆರೆ.

(ನಿಮ್ಮ ಬರಹಗಳ ಪ್ರಕಟಣೆಗೆ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗಜಲ್ - ಆರ್ ಶೈಲಜಾ ಬಾಬು

ಗಜಲ್ 

ಪದೆ ಪದೇ ನೆನಪಾಗುತ ಸಾಗಿದೆ ಈ 
ಬದುಕು ಒಮ್ಮೆ ಬಂದು ಬಿಡು ಗೆಳೆಯ 
ಪ್ರೀತಿಯೊಲವ ಅಕ್ಷಯ ಪಾತ್ರೆ ಹಿಡಿದು 
ಕಾಡಿರುವೆ ನೀ ಬಂದು ಬಿಡು ಗೆಳೆಯ 

ನಿನ್ನೆದೆ ಬಾನಿನಂಗಳವು ನಿಲುಕದಾಗಿದೆ 
ಇಲ್ಲಿ ಮೋಡಕವಿದ ಕತ್ತಲು 
ಕವಿದ ಕಾರ್ಮೋಡದಲಿ ಬೀಜ ಮೊಳೆಹಿಸೆ 
ಭುವಿಗೆ ಬಂದು ಬಿಡು ಗೆಳೆಯ 

ಉಕ್ಕಿ ಹರಿಯುವ ಅಕ್ಷಯ ಪಾತ್ರೇಯಲಿ 
ಒಲವಿನಮೃತ ತುಂಬಿ ಹೆಪ್ಪುಗಟ್ಟುತ 
ಭಗ್ನವಾಗಿದೆ ಬದುಕು ಬವಣೆಯ ದಾರಿ 
ದೂರ ಕ್ರಮಿಸಿ ಬಂದು ಬಿಡು ಗೆಳೆಯ 

ಕನಿಕರವಿರದ ಕಾವಿನಲಿ ಕನಲಿ ನರಳಿ 
ಮಸಣ ಮರುಗುತಿದೆ ತಾನೆ 
ಸುಂಕ ಸುಲಿಗೆ ನೆರೆಹೊರೆಯು ; ಆತ್ಮ 
ರಕ್ಷೆಗೆ ಬೇಡಿ  ಬಂದು ಬಿಡು ಗೆಳೆಯ 

ನನಗಾಗಿ ತೋಡಿದ ಹಗಲ ಬಾವಿಯ 
ಮಣ್ಣು ಕಾಣದಾಗಿದೆ ಇರುಳಿಗೆ 
ಬಂಧನಗಳ ಬಳಲಿಕೆಗೆ ಹೆಣ್ಣು ಜನ್ಮದ 
ಮಿತ್ರನಾಗಿ ಬಂದು ಬಿಡು ಗೆಳೆಯ 
ಆರ್ ಶೈಲಜಾ ಬಾಬು ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಚಿತ್ರದುರ್ಗ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659)

ವಿಶೇಷ ಸೂಚನೆ : ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.

ಎಲ್ಲಾ ಓದುಗರಿಗೆ ಪ್ರೀತಿಯ ನಮಸ್ಕಾರಗಳು...

ದಿನಾಂಕ ೨೮/೦೬/೨೦೨೧ ರಂದು ನಮ್ಮ ಪತ್ರಿಕೆಯಲ್ಲಿ  ಪ್ರಕಟಿಸಲಾಗಿರುವ ವಿಚಾರಗಳಿಗೆ ಸಂಭಂಧಿಸಿ ತಮಗೆ ವೈಯಕ್ತಿಕವಾಗಿ ಹಾಗೂ ವಾಟ್ಸಪ್ ಗುಂಪುಗಳಿಗೆ ಕಳುಹಿಸಿರುವ ಕೊಂಡಿ(Link)  ನಲ್ಲಿ ಸ್ವಲ್ಪ ವ್ಯತ್ಯಾಸವಾದ ಕಾರಣ ಆ ಲಿಂಕ್ ಮೂಲಕ ನಮ್ಮ ಬ್ಲಾಗ್ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ... ಈ ಬಗ್ಗೆ ಹಲವರು ಕರೆ ಮಾಡಿ ವಿಚಾರಿಸಿರುವಿರಿ, ಈಗ ಸಮಸ್ಯೆ ನಿವಾರಣೆ ಆಗಿದೆ. ಆದರೆ ಆ ಲಿಂಕ್ ಮೂಲಕ ಬ್ಲಾಗ್ ಪ್ರವೇಶ ಸಾಧ್ಯವಿಲ್ಲ... ಆದಕಾರಣ ತಾವು www.vicharamantapasahityapatrike.blogspot.com  ಈ ಕೊಂಡಿಯನ್ನು ಉಪಯೋಗಿಸಿಕೊಂಡು ೨೮ ನೇ ತಾರೀಖಿನ ಪೊಸ್ಟ್ಗಳು ಸೇರಿದಂತೆ ನಮ್ಮ ಪತ್ರಿಕೆಯ ಎಲ್ಲಾ  ಪೋಸ್ಟಗಳನ್ನ ವೀಕ್ಷಿಸಲು ಸಾಧ್ಯವಾಗುವುದು.
 ಇನ್ನು ಮುಂದೆ ಗ್ರೂಪ್ಗಳಿಗೆ ಹಾಗೂ ವೈಯಕ್ತಿಕವಾಗಿ ಕಳುಹಿಸಲಾಗುವ ಪೊಸ್ಟ್ ಗಳಿಗೆ ಸಂಭಂಧಿಸಿದ ಲಿಂಕ್ ನಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ತಾವು ಎಂದಿನಂತೆ ಸಹಕರಿಸಬೇಕಾಗಿ ತಮ್ಮಲ್ಲಿ ವಿನಂತಿ.

ಇಂತಿ 
ಸಂಪಾದಕರು
ವಿ ಮ ಸಾ ಪತ್ರಿಕೆ.

ಸೋಮವಾರ, ಜೂನ್ 28, 2021

ಕರೋನಾ ಬಂದ್ರೆ ಡೇಂಜರಪ್ಪೊ (ಕರೋನಾ ಜಾಗೃತಿ ಕವಿತೆ) - ಶ್ರೀ ಕೆ ಎನ್ ಅಕ್ರಂಪಾಷ.

*ಕೊರೋನಾ ಬಂದ್ರೆ ಡೇಂಜರಪ್ಪೊ*


ಕೊರೋನಾ ಬಂದ್ರೆ ಡೇಂಜರಪ್ಪೊ
ಹುಷಾರಾಗಿರಪ್ಪೊ....
ಮಾಸ್ಕ್ ಇಲ್ಲದೆ ಹೊರಗಡೆ ಹೋದ್ರೆ ..
ಕೊರೋನಾ.. ಬರ್ತೈತಪ್ಪೊ..!!

ಕೊರೋನಾ.. ಓ.. ಕೊರೋನಾ.. 
ಕೊರೋನಾ.. ಓ.. ಕೊರೋನಾ!! 

ಕೊರೋನಾ ತಾಗಿದರೆ..
ಬದುಕೆ ಗೋವಿಂದ....

ಮಾಸ್ಕೂ ಹಾಕ್ಕೋ ಮಾಸ್ಕೂ
ಕೊರೋನಾದಿಂದಿಲ್ಲ ರಿಸ್ಕು..
ಅಂತರ ಪಾಲಿಸದಿದ್ರೆ..
ನಿನ್ನ ಜೀವನವೇ ಡಮ್ ಡಮ್ಮು!! 

ಹಾಕ್ಸೋಳ್ಳಿ ಹಾಕ್ಸೋಳ್ಳಿ
ಲಸಿಕೆ ಹಾಕಿಸಿಕೊಳ್ಳಿ
ಕೊರೋನಾದಿಂದ ತಪ್ಪಿಸಿಕೊಂಡು 
ನಿಮ್ಮ ಜೀವ ಉಳಿಸಿಕೊಳ್ಳಿ!!

ತಗೊಳ್ಳಿ ತಗೊಳ್ಳಿ 
ಬಿಸಿಬಿಸಿ ಆವಿಯನ್ನು..
ಮನೆಯಿಂದ ಹೊರಬರದೆ
ನಿಮ್ಮ ಪ್ರಾಣ ಉಳಿಸಿಕೊಳ್ಳಿ!!


ಕೊರೋನಾ ಬಂದ್ರೆ ಡೇಂಜರಪ್ಪೊ
ಹುಷಾರಾಗಿರಪ್ಪೊ....
ಎಚ್ಚರ ತಪ್ಪಿ ನಡೆದುಕೊಂಡರೆ
ಜೀವಾನೇ ಹೋಗ್ತೈತಪ್ಪೊ!! 

ಕೊರೋನಾ.. ಓ.. ಕೊರೋನಾ.. 
ಕೊರೋನಾ.. ಓ.. ಕೊರೋನಾ!! 

ಕೊರೋನಾ ತಾಗಿದರೆ..
ಬದುಕೆ ಗೋವಿಂದ....

ಮಾಸ್ಕು, ಸ್ಯಾನಿಟೈಜರ್ 
ಮರೆಯದೆ ಉಪಯೋಗಿಸಿ ನೀವು 
ನಿಯಮ ಪಾಲಿಸದಿದ್ರೆ
ಹುಡುಕೊಂಡು ಬರುತ್ತೆ ಸಾವು!!

ಕೊರೋನಾ ...ಕೊರೋನಾ..
ನಿಮ್ಮ ಹತ್ರ ಬಂದ್ರೆ 
ಖಂಡಿತ ಜನರಿಗೆ ಕಾದಿದೆ 
ನಿಮ್ಗೆ ಘೋರ ತೊಂದ್ರೆ!!

🌸🌸🌸🌸🌸

     *: ಕೆ ಎನ್ ಅಕ್ರಂಪಾಷ* 
ಯುವಸಾಹಿತಿ /ಶಿಕ್ಷಕರು
          ಚಿಂತಾಮಣಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ಸಂಪಾದಕರು ವಿ ಮ ಸಾ ಪತ್ರಿಕೆ)

ಸರ್ಕಾರಿ ಶಾಲೆ ಉಳಿಸಿ (ಲೇಖನ ಬರಹ) - ಸಚಿನ್ ಚವಾನ್.

ಅಧಿಕಾರಿಗಳ ವಾಹಿವಾಟು, ಸರಕಾರಿ ಶಾಲೆಗಳಿಗೆ ತಟ್ಟಿದ ಏಟು.

ಸರಕಾರಿ ಶಾಲೆಗಳ ಮೇಲೆ ಇವತ್ತು ಬಹಳಷ್ಟು ದುಷ್ಪ್ರಭಾವ  ಬೀರುತ್ತಿದೆ ನಗರ ಪ್ರದೇಶದ ಶಾಲೆಗಳಲ್ಲಿ ಮೊದಲು ವಿದ್ಯಾರ್ಥಿ ಗೌರವ ಶಿಕ್ಷಕರಿಗೆ ನೀಡುತ್ತಿದ್ದರು ಈಗ ನೋಡಿದರೂ ನೋಡದಂತೆ ಹೋಗುತ್ತಾರೆ ವಿದ್ಯಾರ್ಥಿಗಳು ಅದೇ ರೀತಿ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಕೊಡುವ ಗೌರವ ಮೊದಲು ಕೊಟ್ಟಂತೆ ಈಗ ಕೂಡ ಕೊಡುತ್ತಿದ್ದಾರೆ ಇನ್ನು ಕೂಡ ಹಳ್ಳಿಯಲ್ಲಿ ಮಾತ್ರ ಸಂಸ್ಕೃತಿಯೆಂಬುದು ಉಳಿದುಕೊಂಡಿದೆ. 
 ಗ್ರಾಮೀಣ ಪ್ರದೇಶದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮೊದಲು ವಿದ್ಯಾರ್ಥಿಗಳು ನೂರಾರು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು ಈಗ ಕೇವಲ 10ರಿಂದ 20 ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಬರುತ್ತಿದ್ದಾರೆ ಇದಕ್ಕೆ ಕಾರಣ ಆ ಶಾಲೆಯ ಕೊಠಡಿ ವ್ಯವಸ್ಥೆ ಶಾಲೆಯ ಮೂಲಭೂತ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಸರಿಯಾಗಿ ದೊರಕುತ್ತಿಲ್ಲ ಮೊದಲಿಗೆ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳು ಕಟ್ಟುನಿಟ್ಟಾಗಿ ದೊರೆಯುತ್ತಿತ್ತು ಆದರೆ ಬರುತ್ತಾ ಬರುತ್ತಾ ಈಗ ಮಾತ್ರ ಸೌಲಭ್ಯಗಳು  ದೊರೆಯುವುದು ಕಡಿಮೆಯಾಗಿದೆ.
 ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಬರುವ ಸೌಕರ್ಯಗಳು ವಿದ್ಯಾರ್ಥಿಗಳಿಗೆ ಬರುವ ಸೌಕರ್ಯಗಳು  ದಿನೇ ದಿನೇ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಅಧಿಕಾರಿಗಳು ಏಕೆಂದರೆ ಶಾಲೆಗೆ ಬರುವ ಶೇಕಡಾ 30ರಷ್ಟು ಸೌಕರ್ಯಗಳನ್ನು ಮಾತ್ರ ಶಾಲೆಗೆ ನೀಡುತ್ತಿದ್ದಾರೆ.ಶೇಕಡಾ 70ರಷ್ಟು ಸೌಕರ್ಯಗಳನ್ನು  ಐಷಾರಾಮಿ ಆಗಿರಲು ಅಧಿಕಾರಿಗಳು ಬಳಸಿಕೊಳ್ಳುತ್ತಿದ್ದಾರೆ. ಶಿಕ್ಷಕರು ಕೇಳಿದರೆ ಸರ್ಕಾರದಿಂದ  ಇನ್ನೂ ಹಣ ಮಂಜೂರು ಆಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ.  ಈ ರೀತಿ ಅಧಿಕಾರಿಗಳು ಹೇಳುವುದರಿಂದ ಆ ಶಿಕ್ಷಕರು ಸುಮ್ಮನೆ ಕುಳಿತಿದ್ದಾರೆ. ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಇದರಿಂದ ಬಡ ಮಕ್ಕಳು ಶಾಲೆಗೆ ಬರುವುದನ್ನು ಬಿಡುತ್ತಿದ್ದಾರೆ. ಅವರಿಗೆ ಯಾವುದೇ ಸೌಕರ್ಯ ಸರ್ಕಾರದಿಂದ ದೊರೆಯುತ್ತಿಲ್ಲ ಎಂದು ತಿಳಿದುಕೊಂಡು ಅವರು ಮನೆಯಲ್ಲಿ ತಂದೆ-ತಾಯಿಯ ಮಾಡುವ ಕೆಲಸವನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.  ಅದೇ ರೀತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರು ಕನ್ನಡ ಮಾತನಾಡುವ ಶಿಕ್ಷಕರು ಕಡಿಮೆಯಾಗುತ್ತಿದ್ದಾರೆ  ತಮಿಳು,ಉರ್ದು, ಮಲೆಯಾಳಂ,  ಭಾಷೆ ಮಾತನಾಡುವ ಶಿಕ್ಷಕರು ನೇಮಕ ಆಗುತ್ತಿದ್ದಾರೆ.    ಶಿಕ್ಷಕರು ಬೋಧನೆ ತಮಿಳು ಮಲಯಾಳಂ ನಲ್ಲಿ  ಹೇಳುವುದರಿಂದ ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡಿಮೆಯಾಗುತ್ತಿದೆ.  ಇದರಿಂದ ಮಧ್ಯಮ ವರ್ಗದ ಶ್ರೀಮಂತರು ಬೇರೆ ಬೇರೆ ಶಾಲೆಗಳಿಗೆ ಮಕ್ಕಳಿಗೆ ಓದಲು ಕಳಿಸುತ್ತಿದ್ದಾರೆ ಹಳ್ಳಿಗಳಿಂದ.   ಆದ್ದರಿಂದ ಪ್ರತಿಯೊಂದು ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾತನಾಡುವ ಶಿಕ್ಷಕರು ಇರಲೇಬೇಕು. ಇದ್ದರೆ ಮಾತ್ರ ನಮ್ಮ ನಿಮ್ಮ ಮಕ್ಕಳು ಮಾತ್ರ ಭವಿಷ್ಯ ಅವರ ಕೈಯಲ್ಲಿದೆ ಆದಕಾರಣ ಎಲ್ಲರೂ ಕನ್ನಡ ಭಾಷೆಗೆ ಗೌರವ ನೀಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಕೂಡ ಆಗಿದೆ ನಮ್ಮ ಭಾಷೆಯ ನಮ್ಮ ದೇಶಕ್ಕೆ ಮಾದರಿ ಭಾಷೆ ಅದು ಕನ್ನಡಭಾಷೆಯು ಬೇರೆ ದೇಶಗಳಲ್ಲಿ ಹರಿಸುವುದು ನಮ್ಮ-ನಿಮ್ಮೆಲ್ಲರ ಕರ್ತವ್ಯವಾಗಿದೆ. 
 ಉದಾಹರಣೆಗೆ;
 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದ ಮೂಲಕ ಜನರಿಗೆ ತಲುಪಿಸುವ ಕೆಲಸ ಸಿನಿಮಾರಂಗ ಕೂಡ ಮಾಡಿದೆ.
  
  ಸಚಿನ್ ಚವಾನ್
ಬಿ ಎಲ್ ಡಿ ಇ ಸಂಸ್ಥೆಯ
 ಎಸ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ಸಂಪಾದಕರು ವಿ ಮ ಸಾ ಪತ್ರಿಕೆ )

ಕನಕ ಗೀತೆ (ಕವಿತೆ) - ಅಂಬರೀಶ್ ನಾಯ್ಕೋಡಿ

ಕನಕ ಗೀತೆ.

ಕಾಗಿನೆಲೆಯಲ್ಲಿ ಜನಿಸಿದ ಪುಣ್ಯಾತ್ಮ,
ಕೀರ್ತನೆಗಳ ಮೂಲಕ ಜಗವ ಉದ್ಧರಿಸಿದ ಮಹಾತ್ಮ, 
ಕನಕ ಎಂದು ಹೆಸರಾಯಿತು ಇವರ ಆತ್ಮ,
ಮೇಲೆ ಕುಳಿತು ನೋಡುತ್ತಿದ್ದ ಪರಮಾತ್ಮ,

ಕನಕನ ಕಿಂಡಿಯಲ್ಲಿ ಕುಳಿತು ಮಾಡಿದರು ಧ್ಯಾನವ,
ಇದನ್ನು ಕಂಡು ಜನರು ನೀಡಿದರೂ ಗೌರವ,
ಪರಮಾತ್ಮನ ಕುರಿತು ಮಾಡಿದರು ಸ್ಮರಣೆ,
ಶಿವನು ಓಗೊಟ್ಟು ಬಂದನು ಅವನಿಗೆ ಎಂತಹ ಕರುಣೆ.

ಆಸೆಗಳಿಲ್ಲದ ಸಂತ,
ಜಗದ ಎದುರು ನಿಂತ ಜೀವಂತ,
ಜಗಕ್ಕೆ ಹೇಳಿದನು ಸಂಸ್ಕಾರ,
ಕೀರ್ತನೆಗಳ ಸರದಾರ,
ಇವರೇ ನಮ್ಮ ಕನಕದಾಸರ....! 

      - ಅಂಬರೀಶ್ ನಾಯ್ಕೋಡಿ...

ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ ವಿಜಯಪುರ..

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ಸಂಪಾದಕರು ವಿ ಮ ಸಾ ಪತ್ರಿಕೆ )

ಕೋವಿಡ್ ನಿಯಂತ್ರಣ (ಕರೋನಾ ಜಾಗೃತಿ ಕತೆ) - ಪಿ ಎಂ ಕೋಕಿಲ ಜಗದೀಶ್.

    ಕರುನಾಡು ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಟ್ರಸ್ಟ್ - ಬೆಂಗಳೂರು ಇವರ ಜಂಟಿ ಸಹಯೋಗದ ಕಥಾ ಸ್ಪರ್ಧೆಗೆ ಬರೆದ ಕತೆ.

ಕೋವಿಡ್ ನಿಯಂತ್ರಣ.

            ಕಥೆಯ  ಸ್ಪರ್ಧಾತ್ಮಕ ವಿಷಯ : ಕೋವಿಡ್ 19 ನಿಯಂತ್ರಣ ಹಾಗು ವ್ಯಾಕ್ಸಿನ್ ಜಾಗೃತಿ,,
ಒಂದು ಊರಿನಲ್ಲಿ ರಾಮಣ್ಣ ಮತ್ತು ಭೀಮಣ್ಣ ಎಂಬುವರು ಆಪ್ತಗೆಳೆಯರು ಇರುತ್ತಾರೆ. ರಾಮಣ್ಣನದು ದೊಡ್ಡ ಕುಟುಂಬ. ಮಕ್ಕಳು ಮೊಮ್ಮಕ್ಕಳು ಸೊಸೆಯಂದಿರು ತುಂಬು ಸಂಸಾರದೊಂದಿಗೆ ಸುಖ ಸಂತೋಷವಾಗಿ ಸಮಯವನ್ನು ಕಳೆಯುತ್ತಿರುತ್ತಾನೆ. ಹಾಗೆಯೇ ಭೀಮಣ್ಣನ ಕುಟುಂಬದಲ್ಲಿ ಗಂಡ-ಹೆಂಡತಿ ಇಬ್ಬರೇ ಮಕ್ಕಳು ಮಾತ್ರ ಪಟ್ಟಣದಲ್ಲಿ ವಾಸವಾಗಿರುತ್ತಾರೆ. ಒಂದು ದಿನ ರಾಮಣ್ಣನಿಗೆ ವಿಪರೀತ ಜ್ವರ,ಭೇದಿ , ಕೆಮ್ಮು ತಲೆನೋವು , ಸುಸ್ತು ಆಗಿ ಎರಡು ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದನು.ಈ ಪರಿಸ್ಥಿತಿಯನ್ನು ನೋಡಿದ ಭೀಮಣ್ಣ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ರಾಮಣ್ಣನ ದೈಹಿಕ ಸ್ಥಿತಿಯನ್ನು ನೋಡಿ ಅಲ್ಲೇ ದಾಖಲಿಸಿಕೊಂಡು ವಿವಿಧಪರೀಕ್ಷೆ ಮಾಡಿಸಿ ನಂತರ ಗಂಟಲು ಪರೀಕ್ಷೆ ಮಾಡುತ್ತಾರೆ. ಆಗ ಅವನಿಗೆ ಕರೋನ ಪಾಸಿಟೀವ್ ಆಗಿದೆ ಎಂದು ಗೊತ್ತಾಗುತ್ತದೆ. ಆಗ  ರಾಮಣ್ಣನು ಅಯ್ಯೋ ನನ್ನ ಸತ್ತೆ ,ಇನ್ನು ನಾನು ಬದುಕಿಲ್ಲ ನಾನು ನಮ್ಮೂರ ನಾಗೆ ಸಾಯ್ತಿನಿ ಇಲ್ಲೇ ನನಗೊಂದು ಯಂತ್ರ ಕಟ್ಟಿಸಿ , ಜೀವ ಹಿಡಿಕ್ಕೊಂಡು ಊರಿಗೆ ಹೋಯ್ತಿನಿ ಎಂದು ಮುಗ್ಧ ಮನಸ್ಸಿನಿಂದ ದುಃಖಿಸುತ್ತಾನೆ ಆಗ ಭೀಮಣ್ಣನು  ಅಯ್ಯೋ ಇದು ಅಂಟುರೋಗನಂತೆ , ನನಗೂ ಬಂದುಬಿಟ್ಟೈತೆ ಎಂದು ಹೇಳುತ್ತಾನೆ ಅಲ್ಲಿಗೆ ಬಂದ ವೈದ್ಯರು ಇಬ್ಬರಿಗೂ ಸಾಂತ್ವನದ  ಮಾತುಗಳನ್ನು ಹೇಳುತ್ತಾರೆ. ಧೈರ್ಯದೊಂದಿಗೆ ಆತ್ಮವಿಶ್ವಾಸದಿಂದ ಈ ರೋಗವನ್ನು ತಡೆಗಟ್ಟಬಹುದು ಎಂದು ತಿಳುವಳಿಯನ್ನು ಹೇಳುತ್ತಾರೆ .  ಕರೋನ ತಡೆಗಟ್ಟುವಂತಹ ಕ್ರಮಗಳು ಯಾವುವೆಂದರೆ -
1. ಸೋಂಕಿತ ರೋಗಿಗಳನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುವುದು. 2.ನಮ್ಮ ಕೈಗಳನ್ನು ಸೋಪು ಅಥವಾ ಸಾನಿಟೈಸರ್  ನಿಂದ ಪದೇಪದೇ ಚೆನ್ನಾಗಿ ತೊಳೆದುಕೊಳ್ಳಬೇಕು. 3.ಮೂರರಿಂದ ಆರು ಅಡಿ ದೂರ ಇದ್ದು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. 4.ಮುಖಗವಸು ನಮ್ಮನ್ನು ರಕ್ಷಿಸುವುದಕ್ಕಿಂತಲೂ  ಬೇರೆಯವರಿಗೆ ನಮ್ಮಿಂದ ಸೋಂಕು ಹರಡದಂತೆ ತಡೆಯುತ್ತದೆ.
5.ಹಣ್ಣು-ಹಂಪಲು,  ಮೊಳಕೆ ಕಟ್ಟಿದ ಕಾಳುಗಳು , ಪೌಷ್ಟಿಕ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಬೇಕು.
6 ಹಸ್ತಲಾಘವ ಮಾಡುವುದರ ಬದಲಾಗಿ  ನಮಸ್ಕರಿಸುವುದು ಉತ್ತಮ.
7. ನಮ್ಮ ಕೈಯಿಂದ  ಮುಖವನ್ನು ಮುಟ್ಟುವುದನ್ನು ಆದಷ್ಟು ತಡೆಯುವುದು ಒಳ್ಳೆಯದು.
8. ನಮ್ಮ ಸುತ್ತ ಮುತ್ತ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. 
9.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರವಾಸಗಳನ್ನು ಕೈಗೊಳ್ಳಬಾರದು.
10.ಸೋಂಕಿತ ರೋಗಿಗಳಿಗೆ ಆತ್ಮಸ್ಥೈರ್ಯ , ನಂಬಿಕೆ  ವಿಶ್ವಾಸವನ್ನು ಉಂಟುಮಾಡುವುದು.
 ಈ ರೀತಿಯಾಗಿ ವೈದ್ಯರು ರಾಮಣ್ಣ  ಮತ್ತು ಭೀಮಣ್ಣನಿಗೆ ಕರೋನ ಬಗ್ಗೆ ಎಚ್ಚರಿಕೆ ಇರಲಿ ಭಯಬೇಡ , ಪ್ರಪಂಚವನ್ನು ಪ್ರಕೃತಿ ಪ್ರಶ್ನೆ ಮಾಡುತ್ತಿದೆ ಎಂದು ತಿಳಿಸಿದರು. ಆಸ್ಪತ್ರೆಗೆ ಬಂದಿದ್ದ ಹಿರಿಯ ನಾಗರಿಕರೊಬ್ಬರು ವೈದ್ಯರನ್ನು ಕುರಿತು ಕೇವಲ ರೋಗಿಗಳಿಂದ ಮಾತ್ರ ತಡೆಗಟ್ಟಲು ಸಾಧ್ಯವೆ? ಡಾಕ್ಟರ್ ಎಂದು ಕೇಳಿದರು. ವೈದ್ಯರು  ಸಮಾಜದಲ್ಲಿನ ಜನರು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಪ್ರತಿಯೊಬ್ಬರು ಆರೋಗ್ಯವೇ ಭಾಗ್ಯ ಎಂಬುದು ತಿಳಿಯಬೇಕು. ಪ್ರತಿದಿನ ವ್ಯಾಯಾಮಗಳನ್ನು ಮಾಡಬೇಕು , ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಪರಿಸರದ ಬಗ್ಗೆ ಅರಿವು ಮೂಡಿಸಿದರು. ಆಗ ಭೀಮಣ್ಣನು  ಲಸಿಕೆ ಎಂದರೇನು?  ಡಾಕ್ಟರ್. ಅದರಿಂದ ಏನು ಉಪಯೋಗ ಎಂದು ಕೇಳಿದನು. ಆಗ ವೈದ್ಯರು ಯಾವುದೇ ಒಂದು ರೋಗಕ್ಕೆ ಪ್ರತಿರೋಧಕ ಶಕ್ತಿಯನ್ನು ಉತ್ಪಾದಿಸುವ ಪ್ರತಿಜನಕ ವಸ್ತುವನ್ನು ನೀಡುವ ಪ್ರಕ್ರಿಯೆಗೆ ವ್ಯಾಕ್ಸಿನೇಷನ್ ಎನ್ನುತ್ತೇವೆ. ಈ ಲಸಿಕೆಗಳು ಅನೇಕ ರೋಗ ಕಾರ್ಯಕ್ಕೂ ಉಂಟುಮಾಡುವಂತಹ ಸೋಂಕುಗಳಿಂದ ಆಗುವ ದುಷ್ಪರಿಣಾಮವನ್ನು ಸುಧಾರಿಸುತ್ತದೆ. ಇದನ್ನು ಹಾಕುವುದರಿಂದ ರೋಗವನ್ನು  ತಡೆಗಟ್ಟಬಹುದಾದ ಅತಿ ಕಡಿಮೆ ವೆಚ್ಚದ ಹಾಗೂ ಪರಿಣಾಮಕಾರಿ ವಿಧಾನವಾಗಿದೆ. ಲಸಿಕೆಯನ್ನು ಬಾಯಿಯ ಮೂಲಕ ಹಾಗೂ ಚುಚ್ಚುಮದ್ದಿನ ರೂಪದಲ್ಲಿ ನೀಡಬಹುದು ಕರೋನಾ ರೋಗಕ್ಕೆ  ಸಂಬಂಧಿಸಿದಂತೆ  ಕೋವಿಶೀಲ್ಡ  ಮತ್ತು ಕೋವಾಕ್ಸಿನ್ ಲಸಿಕೆಗಳನ್ನು ಸರ್ಕಾರ ಉಚಿತವಾಗಿ ಎಲ್ಲಾ ಜನರಿಗೆ ಕೊಡುವ ಸೌಲಭ್ಯವನ್ನು ಒದಗಿಸಿದೆ ಹಾಗೂ ಎಲ್ಲರೂ ಈ ಮಹಾಮಾರಿ ತಡೆಗಟ್ಟಲು ಲಸಿಕೆ  ಪಡೆಯೋಣ ಎಂದು ವಿವರಿಸಿದರು. ಆಗ ಈ  ವಿಚಾರವನ್ನು ಕೇಳಿ ನೆಮ್ಮದಿಯಿಂದ  ರಾಮಣ್ಣ ಮತ್ತು ಭೀಮಣ್ಣ ಕೆಲವು ದಿನಗಳವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ತಮ್ಮ ಹಳ್ಳಿಗೆ ಸಂತೋಷವಾಗಿ ಹಿಂದಿರುಗಿದರು. ಮನೆ-ಮನಗಳ ಬಂಧನ ಮರೆತವರಿಗೆ ಮನೆ ಬಿಟ್ಟು ಹೊರ ಬರದಂತೆ ಮಾಡಿದೆ ಕರೋನಾ , ಗುಡಿ ಚರ್ಚುಗಳ ಮಸೀದಿಗಳ ಬಾಗಿಲು ಹಾಕಿಸಿ ವೈದ್ಯ ಆರಕ್ಷಕ ಪೌರಕಾರ್ಮಿಕರನ್ನು ದೇವರು ಮಾಡಿದೆ ಕರೋನ.
 

ಪಿ. ಎಂ.ಕೋಕಿಲ ಜಗದೀಶ್
ಫೋನ್ ನಂ : 9035356601
ತುಮಕೂರು.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ಸಂಪಾದಕರು ವಿ ಮ ಸಾ ಪತ್ರಿಕೆ)

ಗಜಲ್ - ಶ್ರೀಮತಿ ಗಿರಿಜಾ ಮಾಲಿ ಪಾಟೀಲ

*ಗಜಲ್*
ಉಸಿರಿನೇರಿಳಿತದಲಿ ನಿನ್ನೆಸರ ಹೇಳುತಲಿ ನಿನಗಾಗಿ ಕಾದಿರುವೆ ನೀ ಬಾರೆಯಾ
ಮೌನ ಧ್ಯಾನದ ಈ ವಿರಹ ವೇದನೆಯಲಿ ನಿನಗಾಗಿ ಕಾದಿರುವೆ ನೀ ಬಾರೆಯಾ

ಊರ್ವಿಯ ಸಹನೆಯೊಳು ಉರ್ಮಿಳೆಯು ಕಾದಿಹಳು ನಿನ್ನದೇ ಧ್ಯಾನದೊಳು ಘೋರ ತಪವು
ಕಾತರಿಸಿ ಕಳವಳಿಸಿ ನಿನ್ನದೇ ನೆಪಿನಲಿ ನಿನಗಾಗಿ ಕಾದಿರುವೆ ನೀ ಬಾರೆಯಾ

ಬಾಳ ಕಗ್ಗತ್ತಲ ಕರಾಳ ಕಾನದಿ ಕರ ಹಿಡಿದ ರಾಘವನು ಜಾನಕಿಗೆ ಜೊತೆಯಾದನು
ಯಾವ ಜನ್ಮದ ಪಾಪಕೀ ಶೀಕ್ಷೆ ಏಕಾಂತದಲಿ ನಿನಗಾಗಿ ಕಾದಿರುವೆ ನೀ ಬಾರೆಯಾ

ಮನದ ವ್ಯಾಕುಲತೆ ಅರಿಯವುದಿರಲಿ ರಾಮ ನನ್ನತ್ತ ಕಣ್ಣೂ ಹಾಯಿಸಲಿಲ್ಲ
ರಘುಕುಲ ತಿಲಕ ನೀಡಿದ ನೋವಿನಲಿ ಬೇಯುತಲಿ ನಿನಗಾಗಿ ಕಾದಿರುವೆ ನೀ ಬಾರೆಯಾ

ಸ್ತ್ರೀ ಸಂವೇದನೆಗೆ ಜಾಗವಿದ್ದಂತಿಲ್ಲ ಭಾವನಲಿ ಸೀತೆಯನ್ನೂ ಓರೆಗಚ್ಚಿದವ 
ವಿಪ್ರಲಂಭದ ಅನುಭವದ ಅನುಭಾವದಲಿ ನಿನಗಾಗಿ ಕಾದಿರುವೆ ನೀ ಬಾರೆಯ

ಅಂತರಾಳದಲಿ ಅಂತರ್ಪಿಶಾಚಿಯಂತೆ ಖಿನ್ನ ಮನಸ್ಕಳಾಗಿ ಮಲಗಿರುವೆ 
ನಿದ್ರಾ ಉರ್ಮಿಳಾ ಎಂಬ ಲೋಕ ನಿಂದನೆಯಲಿ ನಿನಗಾಗಿ ಕಾದಿರುವೆ ನೀ ಬಾರೆಯ

ನಿನ್ನನೆ ಪರಿತಪಿಸೊ 'ಆರಾಧ್ಯೆ'ಯ ತಪಸ್ಸಿಗೆ ದೇವತೆಗಳೂ ಮೌನವಾಗಿದ್ದಾರೆ
ಲಾವಣ್ಯ ಲಯವಾಗುತಿದೆ ಕಾಲದ ಉರುಳಿನಲಿ ನಿನಗಾಗಿ ಕಾದಿರುವೆ ನೀ ಬಾರೆಯ   


*ಶ್ರೀಮತಿ ಗಿರಿಜಾ ಮಾಲಿ ಪಾಟೀಲ* ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ಸಂಪಾದಕರು ವಿ‌ ಮ ಸಾ ಪತ್ರಿಕೆ )

ವನಸಿರಿ (ಕವಿತೆ) - ಆನಂದಜಲ.

*ಗೀತೆಯ ಶೀರ್ಷಿಕೆ:-ವನಸಿರಿ*

ಪುಟ್ಟ ಪುಟಾಣಿ ಮಕ್ಕಳೇ
ಬನ್ನಿರಿ ಸಂಚಾರ ಮಾಡೋಣ
ವನವನ್ನೆಲ್ಲಾ ಒಮ್ಮೆ ಸುತ್ತೋಣ
ನಮ್ಮ ಪರಿಸರವ ಅರಿಯೋಣ||

ಕಾಡೆಲ್ಲಾ ಒಮ್ಮೆ ಸುತ್ತುವಾ
ಬೆಟ್ಟ ಗುಡ್ಡಗಳ ಏರುವಾ
ನದಿ ತೊರೆಗಳ ನೋಡುವಾ
ಕಣ್ಮನ ತಣಿಸಿಕೊಳ್ಳುವಾ||

ಅಗೋ ನೋಡು ಎತ್ತರದ ಮರಗಳು
ಅಲ್ಲೆಲ್ಲಾ ಹಬ್ಬಿವೆ ಗಿಡಬಳ್ಳಿಗಳು
ಮರದಲ್ಲೆಲ್ಲಾ ತುಂಬಿವೆ ಹೂಹಣ್ಣುಗಳು
ಸ್ವಚಂದದಿ ವಿಹರಿಸಿವೆ ಕಾಡುಪ್ರಾಣಿಗಳು
ಕಾಡು ಬೆಳೆಸುವವರೆ ಭಾಗ್ಯಶಾಲಿಗಳು||

ಕಾಡಿದ್ದರೆ ಈ ನಾಡದು ಚೆನ್ನ
ನೀಡಿದೆ ಉಸಿರಿಗೆ ಶುದ್ಧಗಾಳಿಯನ್ನ
ವಿಧವಿಧ ಔಷಧ ಸಸ್ಯಗಳನ್ನ
ಸೆಳೆದು ಮೋಡವ, ಸುರಿಸಿದೆ ಮಳೆಯನ್ನ
ಎಲ್ಲೆಡೆಯಲ್ಲೂ ತಂದಿದೆ ತಂಪನ್ನ||

ಒಣಮರದಿಂದ ಕಟ್ಟಿಗೆ ಸಿಗುವುದು
ತರತರದ ಪೀಠೋಪಕರಣ ಮಾಡಬಹುದು
ಹಸಿಮರವ ಕಡಿಯದಿರೋಣ
ಹಸಿರ ಸಿರಿಯನು ಉಳಿಸೋಣ||

ಕಾಡಿದ್ದರೆ ಬರದು ನಾಡಿಗೆ ವಿಪತ್ತು
ಪ್ರಕೃತಿಯೇ ನಮ್ಮಯ ಸಂಪತ್ತು
ಬನ್ನಿರಿ ಬೆಳೆಸೋಣ ವನಸಿರಿ
ಚಂದದಿ ಬಾಳಲು ಇದೆ ಐಸಿರಿ||

  *ಆನಂದಜಲ* ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ  ತುರುವೇಕೆರೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ಸಂಪಾದಕರು ವಿ ಮ ಸಾ ಪತ್ರಿಕೆ)

ಟಂಕಾ ಬರೆಯಿರಿ ಪಂಕ ಕಟ್ಟಿಕೊಂಡು (ಲೇಖನ ಬರಹ) - ಶ್ರೀಮತಿ ಗಿರಿಜಾ ಮಾಲಿ ಪಾಟೀಲ.

*ಟಂಕಾ ಬರೆಯಿರಿ ಪಂಕ ಕಟ್ಟಿಕೊಂಡು*

*********

   ಹೀಗೆ ಈಗೀಗ ಕನ್ನಡ ಸಾಹಿತ್ಯದಲ್ಲಿ ಜಾಯಾಮಾನಕ್ಕೆ ತಕ್ಕಂತೆ ಹೊಸ ಹೊಸ ಸಾಹಿತ್ಯ ಪ್ರಕಾರಗಳು ಹುಟ್ಟಿಕೊಂಡಿವೆ. ಅಂತಹ ಸಾಹಿತ್ಯ ಪ್ರಕಾರಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾದ ಸಂಗತಿಯಾಗಿದೆ. ಟಂಕಾ ಸಾಹಿತ್ಯ ಪ್ರಕಾರವನ್ನು ಪರ್ಶಿಯನ್ ಮೂಲವೆಂದು ಪರಿಗಣಿಸಲಾಗಿದ್ದು ಇದು ಇತ್ತೀಚೆಗೆ ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಪ್ರಚಾರ ಪಡೆದ ಸಾಹಿತ್ಯ ಪ್ರಕಾರವಾಗಿದೆ.  ಇದು ಸುಮಾರು ಏಳನೇ ಶತಮಾನದಷ್ಟು ಹಿಂದಿನದಾಗಿದ್ದು. ಇದರ ಸಂಕ್ಷಿಪ್ತ ರೂಪವಾಗಿ ಹಾಯ್ಕು ಹುಟ್ಟಿಕೊಂಡಿತು. ಟಂಕಾದಲ್ಲಿ ಕಾವ್ಯದ ವೈಭವ ಕಲಾಮಯತೆ ಕಡಿಮೆ ಇದ್ದು. ಇದು ಹೆಚ್ಚಗಿ ನೀರವತೆಗೆ ಒಗ್ಗುವಂತಹ ಸಾಹಿತ್ಯ. ನೀರವತೆಯ ಮೌನ ಇದರಲ್ಲಿದ್ದರೆ ಇದರ ಸೊಬಗು ಹೆಚ್ಚು ಆದರೆ ಇತ್ತಿಚೆಗೆ ಇದನ್ನು ಹೆಚ್ಚಾಗಿ ಎಲ್ಲಾ ವಿಷಯಗಳ ಪ್ರಸ್ತಾವನೆಗೆ ಬಳಸುತ್ತಾರೆ. ಕಾವ್ಯದ ಸೊಬಗಿಂತ ಗದ್ಯದ ನೀರವತೆ ಹೆಚ್ಚಾಗಿದ್ದರೆ ಅದು ಟಂಕಾ. ಇದು ಐದು ಸಾಲುಗಳನ್ನು ಒಳಗೊಂಡಿದ್ದು, 1 ಮತ್ತು 3 ನೇ ಸಾಲುಗಳು ಐದೈದು ಅಕ್ಷರಗಳನ್ನು ಹೊಂದಿರುತ್ತವೆ. 2 4 5 ನೇ ಸಾಲುಗಳು ಏಳೇಳು ಅಕ್ಷರಗಳನ್ನು ಹೊಂದಿರಬೇಕು.  ಒಟ್ಟು 31 ಅಕ್ಷರಗಳನ್ನು ಹೊಂದಿರುವ ಸಾಹಿತ್ಯದ ಗುಚ್ಚ. ಈಗೀಗ ಇದು ತನ್ನ ಗಾಂಬೀರ್ಯತೆಯನ್ನು ಕಳಚಿಕೊಂಡು ಎಲ್ಲಾ ಭಾವಾವೇಶಗಳಿಗೆ ಹೊಂದಾಣಿಕೆ ಆಗುತ್ತದೆ. ಇಲ್ಲಿ ನನ್ನ ಕೆಲವು ಟಂಕಾಗಳನ್ನು ಉದಾಹರಣೆಯಾಗಿ ಬಳಸುತ್ತಿದ್ದೇನೆ. 

ಟಂಕಾ-೧

ಒಲವಾಗಿದೆ,
ಅವನ ದನಿ ಕೇಳಿ
ಮನದಲ್ಲೆಲ್ಲಾ
ಮಳೆ ಬರುವ ಮುಂಚೆ
ಮಿಂಚು ಸಂಚಾರ

ಟಂಕಾ-೨

ಕದಿಯದಿರು
ಸಿಹಿಗನಸ ನಿದ್ರೆ
ಕೇಳು ಕೊಡುವೆ,
ನಾನಿರುವುದೇ ನಿನ್ನ
ವಿರಹ ತಣಿಸಲು

ಟಂಕಾ-೩

ಸೃಷ್ಟಿಯ ಕುಂಚ
ಬರಯುತಿದೆ ಚಿತ್ರ 
ಅಳಿಸಿದರೂ
ಬೇಸರವಿಲ್ಲದೆಯೇ
ಮತ್ತೆ ಮತ್ತೆ ನಗುತಾ

ಟಂಕಾ -೪

ಅವನೊಲುಮೆ
ಕಡಲ ಅಲೆಯಂತೆ
ಮಾಯಾವಿ ತೊರೆ
ಮಾಯವಾಗುವುದು ನಾ
ಬಿಗಿದಪ್ಪೋ ಮೊದಲೆ.

     ಹೀಗೆ ಟಂಕಾ ಸಾಹಿತ್ಯ ಪ್ರಕಾರವು ತನ್ನದೇ ಆದ ವಿಶಿಷ್ಟತೆಯನ್ನು ಪಡೆದಿದ್ದು. ರಭಸದಿ ಮಳೆ ಸುರಿದು ಸ್ತಬ್ದವಾದಗಿನ ಭಾವವನ್ನು ಹೊರಸೂಸುತ್ತದೆ. ನೀರವತೆ ಇದರ ಪ್ರಮುಖ ಲಕ್ಷಣವೆಂದು ಪರಿಗಣಿಸಿದರೂ ಇತ್ತೀಚೆಗೆ ಇದು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಬೇಕಾದ ಬಾವವನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತಿದೆ.


✍️  *ಗಿರಿಜಾ ಮಾಲಿ ಪಾಟೀಲ*
 ಜಿಲ್ಲಾಧ್ಯಕ್ಷರು
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ವಿಜಯಪುರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ಸಂಪಾದಕರು ವಿ ಮ ಸಾ ಪತ್ರಿಕೆ )

'ರುಬಾಯಿಗಳು' ಮತ್ತು ಡಿ ವಿ ಜಿ (ಕಾರ್ಯಕ್ರಮದ ವರದಿ) - ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ.

*' *ಪರ್ಷಿಯನ್ ಜನಮಾನಸದಲ್ಲಿ ನೆಲೆಯೂರಿದ ರುಬಾಯಿಗಳನ್ನು  ಕನ್ನಡಕ್ಕೆ ರುಚಿಸುವಂತೆ ಮಾಡಿದ ಮಾಣಿಕ್ಯ  ಡಿ.ವಿ.ಜಿ'*

ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಚಿತ್ರದುರ್ಗ ಮತ್ತು ರಾಜ್ಯ ಘಟಕದ ಸಹಯೋಗದಲ್ಲಿ ರಾಜ್ಯ ಮಟ್ಟದ 'ರುಬಾಯಿ ಸ್ವ ರಚನೆ ಹಾಗೂ ವಾಚನ ಕವಿಗೋಷ್ಠಿ ' ಕಾರ್ಯಕ್ರಮವನ್ನು ದಿನಾಂಕ 27.06.2021 ರ ಭಾನುವಾರ ಗೋಧೂಳಿ ಸಮಯ 05 ಗಂಟೆಗೆ ಆನ್ಲೈನ್ ಮೂಲಕ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಯಾವುದೇ ರೀತಿಯ ತೊಂದರೆಯಿಲ್ಲದೆ ನಡೆಯಲು  ಶ್ರೀಮತಿ ಪುಷ್ಪಲತ ಅವರು ಶಾರದೆಯನ್ನು ಕುರಿತ  ಹಾಡನ್ನು ಹಾಡುವುದರ ಮೂಲಕ  ಪ್ರಾರ್ಥನೆಯನ್ನು ಮಾಡಿದರು. ಚಿತ್ರದುರ್ಗ ಜಿಲ್ಲಾ  ಘಟಕದ ಹೊಸದುರ್ಗ ತಾಲ್ಲೂಕಿನ ಅಧ್ಯಕ್ಷರಾದ ಶ್ರೀ ಮುರಳಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯಾತಿ ಗಣ್ಯರು ಹಾಗು ಕವಿ ಮನಗಳನ್ನು ಸ್ವಾಗತಿಸಿದರು.  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಜಯಪುರದ ಹಿರಿಯ ಸಾಹಿತಿಗಳಾದ ಶ್ರೀಮತಿ ಪ್ರಭಾವತಿ ದೇಸಾಯಿ ಅವರು ಮಾತನಾಡಿ,
'ನಮ್ಮದಲ್ಲದ ಮಗು ನಮ್ಮದೆಂದು ಹೇಳಲು ಸಾಧ್ಯವೆ?.' ಪ್ರಸ್ತುತ ದಿನಗಳಲ್ಲಿ  ತಮ್ಮದಲ್ಲದ ಸಾಹಿತ್ಯವನ್ನು ನಕಲು ಮಾಡಿ, ಅದರಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿ  ನಮ್ಮದೇ ಸಾಹಿತ್ಯ ರಚನೆಯೆಂದು ನಾಮಫಲಕ ಹಾಕುವುದು ಸಾಹಿತ್ಯ ವಲಯದಲ್ಲಿ ತುಂಬಾ ಕಳವಳ ಕಾರಿ ಸಂಗತಿಯಾಗಿದೆ. ಕಾವ್ಯ ಹೃದಯದಿಂದ, ಹೂವು ಅರಳುವಂತೆ ಮಾಡಬೇಕು, ಆಗ ಮಾತ್ರ ಕಾವ್ಯ ಜೀವಂತವಾಗಿ ಉಳಿಯುತ್ತದೆ. ಒತ್ತಾಯ ಪೂರ್ವಕವಾದ ಕಾವ್ಯ ರಚನೆ ದೀರ್ಘ ಕಾಲ ತನ್ನ ತನವನ್ನು ಉಳಿಸಿ ಕೊಳ್ಳುವುದಿಲ್ಲ.   ಇಂದು ಕಾವ್ಯ ತನ್ನ ವ್ಯಾಪ್ತಿಯು ವಿಶಾಲವಾದುದು. ಇಂತಹ ವಿಶಾಲ ಕ್ಷೇತ್ರದಲ್ಲಿ ಪರದೇಶದಿಂದ ಬಂದ ಗಜಲ್, ಶಾಯಿರಿ,ಟಂಕ ,ಹೈಕೋ , ರುಬಾಯಿಗಳು ಪ್ರಮುಖವಾದುವು. ಇರಾನ್ ದೇಶದಲ್ಲಿ ತನ್ನದೆಯಾದ ಛಾಪನ್ನು ಪಾರ್ಸಿ ಭಾಷೆಯಲ್ಲಿ ಮೂಡಿಸಿದೆ.  ಇದರ ರೂವಾರಿ ಉಮರ್ ಖಯಾಮ್.  ಇದು ನಾಲ್ಕು ಸಾಲಿನ ಕಾವ್ಯ ಪ್ರಕಾರ. ಇದನ್ನು ಅಹಮದ್ ಹೈದರಾಬಾದ್ ಅವರು ಉರ್ದು ಭಾಷೆಯಲ್ಲಿ   ರುಬಾಯಿಗಳನ್ನು ರಚಿಸಿದ್ದಾರೆ.  ಕನ್ನಡಕ್ಕೆ  ರುಬಾಯಿ ರಚನೆಯಲ್ಲಿ ಡಿ ವಿ ಜಿ ಯವರು ಮೊದಲಿಗರು . ಉಮರ್ ಖಯಮ್ ರವರ  ರುಬಾಯಿಗಳನ್ನು  'ಉಮರನ ವಸಗೆ ' ಶೀರ್ಷಿಕೆಯಲ್ಲಿ  ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ  ರುಬಾಯಿ ರಚನೆಯ ಮೊದಲಿಗರು. ಹೀಗೆ ರುಬಾಯಿಗಳ ರಚನೆ ಇಂಗ್ಲಿಷ್, ಹಿಂದಿ, ಉರ್ದು ಭಾಷೆಗಳಲ್ಲೂ ಮೂಡಿಸಿದೆ ಎಂದರು.
ಕಾವ್ಯ ಕಾಲ್ಪನಿಕ ಶಕ್ತಿಯೊಂದಿಗೆ, ಆಂತರ್ಯ ಹಾಗೂ ಬಾಹ್ಯ ಪ್ರಪಂಚಕ್ಕೆ ಅಮೋಘವಾದ ಕಾಣಿಕೆಯನ್ನು ನೀಡುತ್ತದೆ. ಇದು ಸೃಜನಶೀಲವಾಗಿದ್ದು,ಹೃದಯಾನಂದವನ್ನು ಉಂಟು ಮಾಡುತ್ತದೆ . ಈ ರುಬಾಯಿ ಕಾರ್ಯಕ್ರಮದ ಚೌಕಟ್ಟನ್ನು ತಮ್ಮ ಆಶಯ ನುಡಿಯಲ್ಲಿ ಚಿತ್ರದುರ್ಗ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀಮತಿ  ಶೈಲಜಾ ಬಾಬು ರವರು ನುಡಿದರು. ಬೆಳಗಾವಿ ಜಿಲ್ಲೆಯ ಅಧ್ಯಕ್ಷರಾದ ಶ್ರೀಮತಿ ಆಶಾ.ಎಸ್.ಯಮಕನಮರಡಿಯವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ,
ರುಬಾಯಿ ರಚನೆಯ ಇತಿಹಾಸ ಸಾವಿರಾರು ವರ್ಷಗಳದು. ಆದರೆ ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಾಮುಖ್ಯತೆ ಉಂಟು ಮಾಡುತ್ತಿದೆ .ಕೊರೊನ  ಸಂಕಷ್ಟದ ಕಾಲದಲ್ಲಿ ತಾಂತ್ರಿಕವಾಗಿ ಅನೇಕ ವೇದಿಕೆಗಳ ಮೂಲಕ  ರುಬಾಯಿಗಳು ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಇದು ಪ್ರಾರಂಭದಲ್ಲಿ ಆಧ್ಯಾತ್ಮಿಕ ಮತ್ತು ತಾತ್ವಿಕ ನೆಲೆಯಲ್ಲಿ ತನ್ನ ರಚನೆ ಇರುತ್ತಿತ್ತು. ಆದರೆ ಪ್ರಸ್ತುತ ವಾಸ್ತವ, ಸಾಮಾಜಿಕ ಮುಂತಾದ ವಿಷಯ ವಸ್ತುಗಳು ರುಬಾಯಿ ರಚನೆ ಪ್ರಚಲಿತಲಿದೆ.ಇದು ಇತ್ತೀಚೆಗೆ ತನ್ನ ಪ್ರಾಮುಖ್ಯತೆ ಹೆಚ್ಚಿಸಿಕೊಳ್ಳಲು ಕಾರಣ  ನಾಲ್ಕು ಸಾಲಿನ ಪದ್ಯವಾಗಿರುವುದರಿಂದ.ರುಬಿ ಎಂದರೆ ಪರ್ಷಿಯನ್ ಭಾಷೆಯಲ್ಲಿ  ನಾಲ್ಕು ಎಂದು.  ಈ ನಾಲ್ಕು ಸಾಲಿನ ರುಬಾಯಿ ಕವನವು 'ಚೌಪದಿಯಲ್ಲಿದ್ದರು ಚೌಪದಿಯಲ್ಲ, ಕೊಡ ನೀರನ್ನು  ಹಿಡಿಯುವ ಹಿಡಿ ನೀರು'. ಇದು ಛಂದೋ ಬದ್ದವಾಗಿ ರಚನೆಯಾಗುವ ಶಾಸ್ತ್ರ ಬದ್ಧವಾದ  ಚೌಕಟ್ಟಿನ್ನು ಹೊಂದಿರುವ ನಾಲ್ಕು ಸಾಲಿನ ಶಬ್ದವೇ ರುಬಾಯಿ. 'ವಾಕ್ಯ ರಸಾತ್ಮಕಂ ಕಾವ್ಯಂ' ಎನ್ನುವಂತೆ ಕಾವ್ಯ ಕವಿಯ ಮಾತಿನಿಂದ ಮನಸ್ಸು ಅರಳುವಂತೆ ಇರಬೇಕು. ಬೌದ್ಧಿಕ, ಹಾಗು ಸಾಮಾಜಿಕ ಜ್ಞಾನವನ್ನು ವೃದ್ಧಿಸಿಕೊಳ್ಳುವಂತೆ ಇರಬೇಕು.  ಇದು ಪಂಪನ ಮಾತಿನಂತೆ ' ಕಿರಿದರೊಳ್ ಹಿರಿದರ್ಥಂ ಪೇಳ್ವರೊಳ್' ರುಬಾಯಿ ನಾಲ್ಕು ಸಾಲಿನಲ್ಲಿ ಸರಳ ರಚನೆಯಾಗಿದ್ದರು , ಆಂತರ್ಯದಲ್ಲಿ ಹಾಗೂ ಬಾಹ್ಯದಲ್ಲಿ ವಿಶಾಲ ಅರ್ಥ ಬರುವಂತೆ ರಚನೆಯಿರ ಬೇಕು.  ಡಿ ವಿ ಜಿ ಯವರು ಉಮರ್ ನ 86 ರುಬಾಯಿಗಳನ್ನು ಕನ್ನಡ ಕ್ಕೆ ಉಮರನ ವಸಗೆ ಎಂಬ ಶೀರ್ಷಿಕೆ ಯಲ್ಲಿ ರಚಿಸಿದ್ದಾರೆ.  ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಹಾಗೂ ರಾಯಚೂರಿನ ಖ್ಯಾತ ರುಬಾಯಿ ರಚನೆಕಾರರಾದ ಬ್ಯಾಳಿ ಅವರು  ರಚಿಸಿದ ರುಬಾಯಿಯನ್ನು ಉದಾಹರಣೆಗೆ ವಾಚನ ಮಾಡಿ ಅದರ ರಚನೆಯ ಲಕ್ಷಣ,  ಮಹತ್ವವನ್ನು ತಿಳಿಸಿ, ಅನೇಕ ರುಬಾಯಿಗಳನ್ನು ವಾಚಿಸಿ, ರುಬಾಯಿಗಳ ರಚನೆಯ ಉಪನ್ಯಾಸ ಕಾರ್ಯಕ್ರಮದಲ್ಲಿ  ಎಳೆ ಎಳೆಯಾಗಿ ರುಬಾಯಿ ರಚನೆಯ ಚೌಕಟ್ಟನ್ನು ತಮ್ಮ  ನುಡಿಯ ಮೂಲಕ ಉಣ ಬಡಿಸಿದರು. ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ರಾಜ್ಯ ಸಂಚಾಲಕರೂ ಆದ ಆಶಾ.ಎಸ್.ಯಮಕನಮರಡಿಯವರು ತುಂಬಾ ಕ್ರಿಯಾಶೀಲ ಸಂಘಟಕರು, ಉತ್ತಮ ಸಾಹಿತಿಗಳು ಆಗಿದ್ದಾರೆ.
ಈ ಸುಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಮತಿ ಭಾಗ್ಯ ಗಿರೀಶ್, ಶ್ರೀಮತಿ  ಮೀರಾ ನಾಡಿಗ್, ಶ್ರೀಮತಿ ವನಜಾ ಸುರೇಶ್, ಶ್ರೀಮತಿ ಸುಜಾತ ಪ್ರಾಣೇಶ್, ಶ್ರೀಮತಿ ಸತ್ಯಪ್ರಭ  ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆಯ ಅತಿಥಿಗಳು   ಕಾರ್ಯಕ್ರಮದ ಆಯೋಜನೆ ತುಂಬಾ ಪ್ರಶಂಸನೀಯವಾಗಿದೆ, ಅದರಲ್ಲೂ ರಾಜ್ಯ ಮಟ್ಟದ ರುಬಾಯಿ ರಚನೆ ಮತ್ತು ವಾಚನ ಕವಿಗೋಷ್ಠಿ ಬಹಳ ವಿಶೇಷವಾದುದು ಎಂದು ತಮ್ಮ ಅತಿಥಿನುಡಿಯಲ್ಲಿ ತಿಳಿಸಿದರು.
ಈ ಸುಂದರ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರ ಉಪಸ್ಥಿತರಿದ್ದರು‌ ಭಾಗವಹಿಸಿದ್ದ ಶ್ರೀಮತಿ ಭಾಗ್ಯ ಗಿರೀಶ್,  ಶ್ರೀಮತಿ  ಮೀರಾ ನಾಡಿಗ್ , ಶ್ರೀಮತಿ ವನಜಾ ಸುರೇಶ್,  ಶ್ರೀಮತಿ ಸುಜಾತ ಪ್ರಾಣೇಶ್,  ಶ್ರೀಮತಿ ಸತ್ಯಪ್ರಭ  ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆಯ ಅತಿಥಿಗಳು   ಕಾರ್ಯಕ್ರಮದ ಆಯೋಜನೆ ತುಂಬಾ ಪ್ರಶಂಸನೀಯವಾಗಿದೆ,ಅದರಲ್ಲೂ ರಾಜ್ಯ ಮಟ್ಟದ ರುಬಾಯಿ ರಚನೆ ಮತ್ತು ವಾಚನ ಕವಿಗೋಷ್ಠಿ ಬಹಳ ವಿಶೇಷವಾದುದು ಎಂದು ತಮ್ಮ ಅತಿಥಿನುಡಿಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಹಳ ಸೊಗಸಾಗಿ ರುಬಾಯಿಗಳನ್ನು ರಚಿಸಿ ಕವಿಮನಗಳು ಮನ ಮುಟ್ಟುವಂತೆ ವಾಚನ ಮಾಡಿದರು. ರುಬಾಯಿಗಳನ್ನು ಅರಬ್ ಭಾಷೆಯಲ್ಲಿ ಅಬ್ದುಲ್ ಅಸನ್ ರೂಡ್ಕಿ ರಚನೆ ಮಾಡಿದರು ಎಂಬ ಮಾತು ಇದೆ ಆದರೆ ಇದನ್ನು ಬಹಳ ವ್ಯಾಪಕವಾಗುವಂತೆ ಮಾಡಿದ ವ್ಯಕ್ತಿತ್ವ ಖ್ಯಾತ ಕವಿ ಉಮರ್ ಖಾಯಂ. ಈತ ಪ್ರೀತಿ, ಪ್ರೇಮ,ನಿರಾಸೆ ಮೊದಲಾದ ವಿಶೇಷತೆಯುಳ್ಳ ಅಂಶಗಳಲ್ಲಿ ರಚನೆಯನ್ನು ಮಾಡಿದ್ದಾರೆ. ಇಂದು ಇವರ ರುಬಾಯಿಗಳು ಜನಮಾನಸದಲ್ಲಿ ನೆಲೆನಿಂತಿದ್ದು, ಅದು ಬಿಂದುವಿನಲ್ಲಿ ಸಿಂಧುತುಂಬುವಂತೆ ಇದೆ. ಎಂದು ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಭಾಗವಹಿಸಿದ ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ಬಾಗಲಕೋಟೆಯ ಅಧ್ಯಕ್ಷರಾದ ಅತ್ಯುತ್ತಮ ವಾಗ್ಮಗಳು ಹಾಗೂ ಸಾಹಿತಿಗಳೂ ಆದ ಶ್ರೀಮತಿ  ಜಯಶ್ರೀ ಭಂಡಾರಿ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿದರು. ಹಾಗೆಯೆ ಕಾರ್ಯಕ್ರಮದ ತೀರ್ಪುಗಾರರಾಗಿ ಗುರುತರವಾದ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಬಹಳ ಸೊಗಸಾಗಿ ರುಬಾಯಿಗಳನ್ನು ರಚಿಸಿ ಕವಿಮನಗಳು ಮನ ಮುಟ್ಟುವಂತೆ ವಾಚನ ಮಾಡಿದರು. ರುಬಾಯಿಗಳನ್ನು ಅರಬ್ ಭಾಷೆಯಲ್ಲಿ ಅಬ್ದುಲ್ ಅಸನ್ ರೂಡ್ಕಿ ರಚನೆ ಮಾಡಿದರು ಎಂಬ ಮಾತು ಇದೆ ಆದರೆ ಇದನ್ನು ಬಹಳ ವ್ಯಾಪಕವಾಗುವಂತೆ ಮಾಡಿದ ವ್ಯಕ್ತಿತ್ವ ಖ್ಯಾತ ಕವಿ ಉಮರ್ ಖಾಯಂ. ಈತ ಪ್ರೀತಿ, ಪ್ರೇಮ, ನಿರಾಸೆ ಮೊದಲಾದ ವಿಶೇಷತೆಯುಳ್ಳ ಅಂಶಗಳಲ್ಲಿ ರಚನೆಯನ್ನು ಮಾಡಿದ್ದಾರೆ. ಇಂದು ಇವರ ರುಬಾಯಿಗಳು ಜನಮಾನಸದಲ್ಲಿ ನೆಲೆನಿಂತಿದ್ದು, ಅದು ಬಿಂದುವಿನಲ್ಲಿ ಸಿಂಧು ತುಂಬುವಂತೆ ಇದೆ. ಎಂದು ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಭಾಗವಹಿಸಿದ ಭಂಡಾರಿಯವರು ತಮ್ಮ ನುಡಿಯಲ್ಲಿ ತಿಳಿಸಿದರು. ಇಡೀ ಕಾರ್ಯಕ್ರಮವು ಚಿತ್ರದುರ್ಗ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಭಾಗ್ಯ ಗಿರೀಶ್ ಅವರ ಅತ್ಯುತ್ತಮ ನಿರ್ವಹಣೆಯ ನಿರೂಪಣೆಯಲ್ಲಿ ಮೂಡಿ ಬಂತು. ವಂದನಾರ್ಪಣೆಯನ್ನು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಗೌರವ ಸದಸ್ಯರಾದ ರಾಯಚೂರಿನ ನನ್ನೂರೆಯವರು ನೆರವೇರಿಸಿದರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ)

ಭಾನುವಾರ, ಜೂನ್ 27, 2021

ಅನುಭವವವೇ ಜೀವನ ಸಾರ (ಕರೋನಾ ಜಾಗೃತಿ ಕತೆ) - ಶ್ರೀಮತಿ ಜೋಶಿ ನಿಸರಾಣಿ.

     ಕರುನಾಡು ಕಥಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿರುವ ಕತೆ

 ಅನುಭವವೇ  ಜೀವನ ಸಾರ.


ಅಮ್ಮ! ನಮ್ಮೂರ ಲಕ್ಷ್ಮಣನ ಮಗ  ಮಧುಕೇಶ್ ರಾತ್ರಿ ಇದ್ದಕ್ಕಿದ್ದಂಗೆ  ಹ್ಯಾಂಗೆ ಹ್ಯಾಂಗೊ ಆಡತಿದ್ದನಂತೆ.. ಉಸುರು ತಗ್ಯಕ್ಕೆ ಆಗದೇ ಒದ್ದಾಡತ  ಇದ್ನಂತೆ... ಕಡಿಗೆ  ಅದೇನೋ ಆಂಬುಲೆನ್ಸ್ ಅಂತಾರಲ್ಲ ಅದು ಬಂದು  ಆಸ್ಪತ್ರೆ ಗೆ ಕರಕೊಂಡು ಹೋಯ್ತು... ಅಂತ ಮನೆ ಕೆಲಸದ ಸಾವಿತ್ರಿ ಬಂದು ಹೇಳಿದಾಗ  ಹಾಂಗಾರೆ ಅವನಿಗೆ ಕರೋನನೇ  ತಗ!! ಹೇಳಿದರ  ಕೇಳಬೇಕಲ್ಲ... ಎಲ್ಲಾ ಕಡೆ ಗ್ಯಾಂಗ್  ಕಟ್ಟಿಕಂಡ್ ಕ್ರಿಕೆಟ್ ಆಟ  ಅದೂ ಇದೂ  ಅಂತ  ಓಡಾಡಿದರೆ ರೋಗ  ಬರದೇ ಮತ್ತೆಂತ  ಆಗುತ್ತೆ... ಜಾಸ್ತಿನೇ  ಆಗಿದೆ ಅಂತಿಯಲ್ಲ.. ಅಲ್ಲೇ ಸಾವಿತ್ರಿ.!ಎಲ್ಲರೂ ಚೆನ್ನಾಗಿಯೇ ಇರಲಿ ಅಂತ ನಾವು  ಆಸೆ ಪಡ್ತೀವಿ. ಆದರೆ ಈ ಮಕ್ಕಳು .ಹಿರಿಯರು ಹೇಳಿದ ಮಾತು  ಕೇಳೋದು ಅಷ್ಟರಲ್ಲೇ  ಐತಿ... ಯಾಕೇನೋ! ಅವ ಅಂತ  ಅಲ್ಲಾ   ಈಗಿನ ಹುಡುಗರಿಗೆ  ಮೌಲ್ಯ ಅನ್ನೋದು ಗೊತ್ತೇ  ಇಲ್ಲ ಬಿಡು.
   ನನ್ನ ಕೈಯ್ಯಲ್ಲೇ  ಓದಿ ಬೆಳೆದ ಹುಡುಗ ಅವನು.. ಮೊನ್ನೆ ದಿನ  ಈ  ಕರೋನ ರೋಗದ ಬಗ್ಗೆ ಜಾಗ್ರತೆ ಆಗಿರಿ ಅಂತ  ಹೇಳೋದಕ್ಕೆ ಹೋದರೆ ಎಲ್ಲ ಮಕ್ಕಳನ್ನು ಕಟ್ಟಿಕೊಂಡು ಕ್ರಿಕೆಟ್ ಆಡತಾ ಇದ್ದವ  ಏನಂದ ಗೊತ್ತ? ಮೇಡಂ   ಸುಮ್ಮನೆ ಇರಿ.. ಇದೆಲ್ಲ ನಮ್ಮನ್ನ ಏನೂ ಮಾಡೋದಿಲ್ಲ.. ಎಲ್ಲಾ ಬರೀ ಭೋಗಸ್... ಈ ರೋಗವೆ ಇಲ್ಲ...ಜ್ವರ ಕೆಮ್ಮು ನೆಗಡಿ  ಹೊಲದಲ್ಲಿ ಕೆಲಸ ಮಾಡುವವರಿಗೆ ವಾತಾವರಣ  ಚೇಂಜ್ ಆದಾಗ ಬಂದೇ ಬರುತ್ತೆ... ನಾವು ದುಡಿಮೆ ಮಾಡುವಾಗ ಈ ಮಾಸ್ಕು ಗಿಸ್ಕು ಎಲ್ಲ  ಹಾಕಿ ಕೊಳ್ಳಲು ಆಗುವುದಿಲ್ಲ ಮೇಡಂ... ಹಾಗೆ  ವಾಕ್ಸಿನ್ ಕೂಡ ದಂಡ... ಅದೂ ಬೇರೆ ಅಡ್ಡ ಪರಿಣಾಮ ಇದೆಯಂತೆ ನಮ್ಮವರುಗೆಲ್ಲ  ನಾನು  ಹಾಕಿಸ್ಕೊಬೇಡಿ ಅಂತಾನೆ  ಅನ್ನೋದು   ಅಂತೆಲ್ಲ  ಹೇಳಿದಾಗ ನನ್ನ  ಕೈಲಿ ಏನು ಸಮಾಜಯಿಸಿ ಹೇಳಲು ಸಾಧ್ಯವೋ ಅದನ್ನೆಲ್ಲ ಹೇಳಿ ಬಂದು 5   -6  ದಿನಗಳೂ  ಆಗಿಲ್ಲ  ನೋಡು. ಈಗ   ಅವನಿಗೆ ಹುಷಾರಿಲ್ಲದೆ ಆಸ್ಪತ್ರೆ ಸೇರುವ ಹಾಗೆ  ಆಯ್ತಲ್ಲ.
ಪಾಪ!!  ಎಷ್ಟು  ಒದ್ದಾಡುತ್ತಾ ಇದ್ದಾನೋ.!. ಬೆಡ್ ಸಿಕ್ಕಿತೋ ಇಲ್ಲವೋ!  ಉಸಿರಾಟದ ತೊಂದರೆ ಎಂದರೆ ಆಕ್ಸಿಜನ್ ವ್ಯವಸ್ಥೆ ಆಯತೋ ಇಲ್ಲವೋ!!  ಯೋಚನೆ ಮಾಡುತ್ತಾ ಇರುವಾಗ ಒಲೆ ಮೇಲೆ ಇಟ್ಟ ಅನ್ನ ಸೀದಾಗಲೇ  ಮತ್ತೆ ವಾಸ್ತವಕ್ಕೆ ಬಂದಿದ್ದು
ಹೀಗೆ 18 - 20  ದಿನದಲ್ಲಿ   ಅರೋಗ್ಯ  ಸುಧಾರಿಸಿ ನಾಳೆ ಕರೆದುಕೊಂಡು ಬರುತ್ತಾರೆ ಎಂಬ ಮಾಹಿತಿ ಸಿಕ್ಕಾಗ ಮನಸ್ಸಿಗೆ ಏನೋ  ನಿರಾಳ ಭಾವ !!   ಅವರೇನೇ ಅಂದರೂ, ಮಾಡಿದರೂ ನಮ್ಮೂರ ಮಕ್ಕಳೇ ಅಲ್ಲವೇ?
ಒಂದಿಷ್ಟು  ಹಣ್ಣು ತೆಗೆದುಕೊಂಡು ನೋಡಲು ಹೋದಾಗ ನನ್ನ ಕಣ್ಣು ನಾನೇ ನಂಬದಾದೆ.. ಹೌದು! ಅವನ ಸುತ್ತ  ಎಲ್ಲ ಗೆಳೆಯಾರೂ ಮಾಸ್ಕ್ ಧರಿಸಿ ಕೈಗವಸು ಹಾಕಿಕೊಂಡು ಸಾಮಾಜಿಕ ಅಂತರ ದೊಂದಿಗೆ ನಿಂತಿದ್ದರು.. ಸ್ಯಾನಿಟೈಜರ್  ಪರಿಮಳ ಸೂಸುತ್ತಿತ್ತು.....
ಮಧುಕೇಶ ನನ್ನ ಕಂಡ  ಕೂಡಲೇ  ಎದ್ದು ಬಂದು ಕೈ ಮುಗಿದು ಹೇಳಿದ.ಕ್ಷಮಿಸಿ  ಮೇಡಂ, ನನ್ನ ಅಹಂಕಾರ ಉಡುಗಿ ಹೋಯ್ತು .. ನಾನು ಸಾವು ಗೆದ್ದ ವೀರ ನಾಗಿ ನಿಮ್ಮ ಮುಂದೆ ನಿಂತಿದ್ದೇ  ದೊಡ್ಡ ವಿಷಯ... ನಿಮ್ಮ ಮಾತು ಕೇಳದೇ ಉಢಾಫೆ  ಮಾಡಿದ್ದೇ  ಇಷ್ಟಕ್ಕೆಲ್ಲ ಕಾರಣ  ಆಯ್ತು ....ಇದೊಂದು ಮಾರಕ ರೋಗ.. ಆದರೆ  ಎಚ್ಚರಿಕೆಯಿಂದ ಇದ್ದರೇ ಏನೂ ಆಗುವುದಿಲ್ಲ ಎನ್ನುವುದು ಗೊತ್ತಾಯಿತು
... ಅದಕ್ಕೆ ನಾವು ಗೆಳೆಯರೆಲ್ಲ ಸೇರಿ ಒಂದು ತೀರ್ಮಾನಕ್ಕೆ ಬಂದಿದ್ದೀವಿ.. ನಿಮ್ಮ ಜೊತೆ ಫಲಾಪೇಕ್ಷೆ  ಇಲ್ಲದೇ ಕೊರೋನ ವಾರಿಯರ್ಸ್ ಆಗಿ  ನಮ್ಮ ಊರಿನ ಪ್ರತಿಯೊಂದು ಮನೆಯನ್ನು ಹತ್ತಿ ಇಳಿದು ಅದರ ಬಗ್ಗೆ ಜಾಗ್ರತೆ ಮೂಡಿತ್ತೇವೆ...ಬೀದಿ  ನಾಟಕ ಮಾಡುತ್ತೇವೆ.. ಹಾಗೇನೇ  ನಮ್ಮೂರ ಸುತ್ತ ಮುತ್ತ ಸ್ವಚ್ಛತೆಯನ್ನು ನಾವೇ ಮಾಡುತ್ತೇವೆ... ಮತ್ತು  ನಮ್ಮ ದುಡಿಮೆಯ ಸ್ವಲ್ಪ ಹಣವನ್ನು ಹಾಕಿ  ಬಡವರಿಗೆ ಮಾಸ್ಕ್ ವಿತರಣೆ ಮಾಡುತ್ತೇವೆ...ಮತ್ತು ಕರೋನ ಬರದಂತೆ ತಡೆಯುವುದು ಹೇಗೆ... ಅಕಸ್ಮಾತ್ ಬಂದರೆ ಹೇಗೆ ಇರಬೇಕು ಎಂಬುದನ್ನು  ಪ್ರಿಂಟ್ ಹಾಕಿಸಿ ಪ್ರತೀ ಮನೆಯ ಬಾಗಿಲಿನ ಮೇಲೆ ಆಂಟಿಸುತ್ತೇವೆ... ಹಾಗೂ ಎಲ್ಲಾ ಮನೆಯ  ಅಜ್ಜ ಅಜ್ಜಿ  ಹಾಗೂ ಎಲ್ಲರಿಗೂ ವ್ಯಾಕ್ಸಿನ ಹಾಕಿಸಲು ಹೋಗಿ ಬರುವ ವಾಹನದ  ವ್ಯವಸ್ಥೆ ಹಾಗೂ ಪಾಸಿಟಿವ್ ಬಂದವರಿಗೆ  ಧೈರ್ಯ ತುಂಬುವ ಮತ್ತು ಅವರನ್ನು ಕ್ವಾರಂಟೈನ್ ಕೇಂದ್ರಕೆ ಬಿಡುವ ವ್ಯವಸ್ಥೆ ಕೂಡ ಮಾಡಲು ಯೋಚಿಸಿದ್ದೇವೆ   ಇದಕ್ಕೆ ನಿಮ್ಮ ಸಲಹೆ  ಮಾರ್ಗದರ್ಶನ ಸದಾ ನಮಗೆ ಬೇಕು  ಎಂದಾಗ. ನಾನು ಕಾಣುತ್ತಿರುವುದು ಕನಸೋ ನನಸೋ ತಿಳಿಯದಾಯ್ತು...
ಏನೇ ಆದರೂ ಊರಿನ ಈ ಗುಂಪು ಕೆಲಸಕ್ಕೆ ನಿಲ್ಲುವ ಹಾಗೆ ಆಯ್ತಲ್ಲ... ಕರೋನ ಒಂದು ದೊಡ್ಡ ಪಾಠ ಕಲಿಸಿ  ಈ ಮಕ್ಕಳಿಗೆ ಒಳ್ಳೆಯತನ ಬಂತಲ್ಲ... ದೇವರಿಗೆ ಮನಸ್ಸಿನಲ್ಲಿಯೇ ವಂದಿಸಿ  ಅವರಿಗೆ ಸದಾ ನಾನು ನಿಮ್ಮ ಜೊತೆ ಇರುತ್ತೇನೆ.. ಇರುವಷ್ಟು ದಿನ ಒಳ್ಳೆಯದು ಕೆಲಸ ಮಾಡೋಣ.. ಉಸಿರು ನಶ್ವರ  ಹೆಸರು ಶಾಶ್ವತ  ಎಂದು ತಿಳಿ ಹೇಳಿ ಮನೆಗೆ ಬಂದಾಗ ಏನೋ  ಒಂದು ತರ ಸಂತೋಷ......


 -   ಶ್ರೀಮತಿ ಶ್ರೀಮತಿ  ಜೋಶಿ ಶಿಕ್ಷಕಿ
   ನಿಸರಾಣಿ  ಸೊರಬ ಶಿವಮೊಗ್ಗ  577434.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ಸಂಪಾದಕರು ವಿ ಮ ಸಾ ಪತ್ರಿಕೆ)

 

ಕಲಿತು ಮುಗಿಯದು (ಕರೋನಾ ಜಾಗೃತಿ ಕತೆ) - ಅಖಿಲಾ ಶೆಟ್ಟಿ ಪುತ್ತೂರು.

ಕಥೆ:-ಕಲಿತು ಮುಗಿಯದು

 ತಂದೆ-ತಾಯಿಯ ಮಮಕಾರ, ಸುಖದ ಸುಪ್ಪತ್ತಿಗೆಯಲ್ಲೇ ಮಿಂದೇಳುತ್ತಿದ್ದ   ರೇಣುಕಾಳು ಅತೀ ಅಹಂಕಾರಿ ಮನೋಭಾವದವಳು. ಶ್ರೀಮಂತಿಕೆಯ ಅಹಂಕಾರದಿಂದ ತನ್ನ ಭೋಗಭಾಗ್ಯಗಳೆದುರು ಎಲ್ಲರೂ ಹುಳು ಕಡ್ಡಿಗೆ  ಸಮಾನರೆಂಬ ಕೇವಲವಾದ ಮನಸ್ಥಿತಿ  ಆಕೆಯದ್ದು.ತಂದೆ ನಾರಾಯಣರಾಯರು ಹಾಗೂ ತಾಯಿ ವಾರಿಜಾಕ್ಷಿ ಇತರರ ಕಷ್ಟಕ್ಕೆ ಕಂಬನಿ ಮಿಡಿದಾಗ,ಕಷ್ಟಕ್ಕೆ ಹೆಗಲು ಕೊಟ್ಟಾಗ ರೇಣುಕಾಳು ಅತೀಯಾಗಿ ಸಿಡಿದೇಳುತ್ತಿದ್ದಳು.ಇಂಜಿನಿಯರಿಂಗ್ ಕಲಿಯಲಿಚ್ಛಿಸಿ ದೂರದ ಬೆಂಗಳೂರಿಗೆ ಪಯಣಿಸಿದ ನಂತರ  ಪೇಟೆ ತಿರುಗಾಟದಲ್ಲೇ ಸಮಯ ಕಳೆದ ರೇಣುಕಾ ಸ್ವಾರ್ಥ ಚಿಂತನೆ,ಸ್ವಾರ್ಥ ಜೀವನವನ್ನೇ ತನ್ನ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದಳು.
         ಜಗತ್ತನ್ನೇ  ತಲ್ಲಣಗೊಳಿಸಿದ ಕೊರೊನಾವೆಂಬ ವೈರಸ್ ತನ್ನ ತಾಂಡವ ನರ್ತನವನ್ನು ಆರಂಭಿಸಿದೆ.ಹೆಮ್ಮಾರಿಯ ಹೊಡೆತಕ್ಕೆ ಸಿಕ್ಕಿ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಕೃತಕ ಆಮ್ಲಜನಕದ ಸಹಾಯ  ಪಡೆಯುವ ನೋವಿನ ಪರಿಸ್ಥಿತಿಗಳು ಒಂದೆಡೆಯಾದರೆ  ರೋಗಿಯ ಚಿಕಿತ್ಸೆಗಾಗಿ ಆಸ್ಪತ್ರೆಗಳ ಹುಡುಕಾಟದಲ್ಲಿ ಪರದಾಡುತ್ತಿರುವ
 ಕುಟುಂಬಗಳ ರೋಧನ ಹೇಳತೀರದ್ದು. ಇವೆಲ್ಲದರ ನಡುವೆ ಕೊರೊನಾದ ಅಟ್ಟಹಾಸವನ್ನು  ನಿಯಂತ್ರಿಸಲು ಘೋಷಿಸಿದ ಲಾಕ್ಡೌನ್  ಲಂಗು ಲಗಾಮಿಲ್ಲದೆ ಬೆಂಗಳೂರು ಪೇಟೆ ಸುತ್ತಾಡಲು  ಬಯಸುತ್ತಿದ್ದ ರೇಣುಕಾಳಿಗೆ ಶಿಕ್ಷೆಯಾಗಿ ಪರಿಣಮಿಸುತ್ತಿತ್ತು .ಹೆತ್ತವರ ಸಲಹೆ ಸೂಚನೆಗಳಿಗೆ ರೇಣುಕಾಳಲ್ಲಿ ಎದುರುತ್ತರವಲ್ಲದೇ ಗೌರವ ಭಾವನೆಯೇ ಇರಲಿಲ್ಲ.ತನ್ನ ಬಳಿ ಯಾವ ರೋಗವು ಬರಲಾರದೆಂಬ ಮೂಢನಂಬಿಕೆ  ಆಕೆಯದ್ದು.ತಮ್ಮ ಮಗಳ ಆಸಡ್ಡೆಯ ವರ್ತನೆಯಿಂದ ನಿತ್ಯವೂ ಭಯದ ವಾತಾವರಣದಲ್ಲೇ ಸಮಯ ಕಳೆಯುತ್ತಿದ್ದರು.ಕರುಳ ಸಂಕಟ ತಡೆಯಲಾರದೆ ವಾರಿಜಾಕ್ಷಿ ದಿನಕ್ಕೆ ಮೂರು ಸಲ ಕರೆ ಮಾಡುತಿದ್ದರು.ತಾಯಿಯ ಜಾಗರೂಕತೆಯ ಮಾತುಗಳು ರೇಣುಕಾಳಿಗೆ ಅತಿರೇಕವಾಗಿ ಕಂಡು ಕೆಲವೊಮ್ಮೆ ಕರೆಗಳನ್ನು ಸ್ವೀಕರಿಸದೆಯೇ ಕುಳಿತುಬಿಡುತ್ತಿದ್ದಳು.
       ಇತ್ತ ನಾರಾಯಣರಾಯರು ಹಾಗೂ ವಾರಿಜಾಕ್ಷಿ ಇಂತಹ ಸಂದಿಘ್ನ ಪರಿಸ್ಥಿತಿಯಲ್ಲಿ ಜನರ ಕಷ್ಟಕ್ಕೆ ಕೈಲಾಗುವ ಸಹಾಯಕ್ಕೆ ಎದುರು ನಿಂತರು.ಹಳ್ಳಿ ಜೀವನ ನಡೆಸುತ್ತಿರುವ ಅದೆಷ್ಟೋ ಬೆಚ್ಚನೆಯ ಸೂರಿನಡಿ ಕೂಲಿನಾಲಿಯಿಲ್ಲದೆ ಯಾತನೆಯನ್ನನುಭವಿಸುತ್ತಿರುವ ಮುಗ್ಧ ಜನರಿಗೆ  ಕೊರೊನಾ ವೈರಸ್ ಬಗ್ಗೆ ಮಾಹಿತಿ,ಮಾಸ್ಕ್ ,ಸ್ಯಾನಿಟೈಸರ್,ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಕಟ್ಟು ನಿಟ್ಟಿನ ಕ್ರಮದ ಬಗ್ಗೆ ತಿಳಿಯಪಡಿಸಿ  ಅವರ ನಿತ್ಯ ಜೀವನಕ್ಕೆ  ಬೇಕಾಗುವ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಾ  ಹಳ್ಳಿಯಲ್ಲಿರುವ  ಯುವಕರನ್ನು ಒಗ್ಗೂಡಿಸಿ ಸರ್ಕಾರದಿಂದ ಮುಂಜಾಗೃತಾ ಕ್ರಮವಾಗಿ ದೊರಕುವ  ವ್ಯಾಕ್ಸಿನ್ ಬಗ್ಗೆ ಜನರಲ್ಲಿ  ಜಾಗೃತಿ ಮೂಡಿಸುವ  ಅಭಿಯಾನಕ್ಕೆ ಪ್ರೇರೇಪಿಸುತ್ತಿದ್ದರು. 
         ಒಂದು ಮಧ್ಯಾಹ್ನ ನಾರಾಯಣರಾಯರಿಗೆ ಮಗಳು ರೇಣುಕಾಳ ಕರೆ.ಯಾವಾಗಲೂ ಹೆತ್ತವರ ಕುಶಲೋಪರಿ ವಿಚಾರಿಸಲೂ ಕರೆ ಮಾಡದ ಮಗಳು ಇಂದೇಕೆ ಕರೆ ಮಾಡಿದಳೆಂಬ  ಕಳವಳ ಉಂಟಾಗಿ ವೇಗವಾಗಿ ಮೊಬೈಲನ್ನು ಕೈಗೆತ್ತಿಕೊಂಡರು.ಉದ್ವೇಗದಿಂದಲೇ ಮಾತನ್ನಾರಂಭಿಸಿದ ರೇಣುಕಾಳ ಮಾತಿನ ದಾಟಿ ನೋಡಿ ನಾರಾಯಣರಾಯರಿಗೆ  ಭಯವುಂಟಾಯಿತು.ಮಾಸ್ಕ್ ಧರಿಸದೆ  ಪೇಟೆ ತಿರುಗಲು ಹೊರಟಿದ್ದಕ್ಕೆ  ಪೊಲೀಸ್ ದಂಡ ವಿಧಿಸಿದ ಬಗ್ಗೆ ಸಿಟ್ಟು ನೆತ್ತಿಗೇರಿಸಿಕೊಂಡು ಆಕ್ರೋಶದ ಕೂಗನ್ನೇ ವ್ಯಕ್ತಪಡಿಸಿ ತಂದೆಯ ಮಾತಿಗೆ ಅವಕಾಶವೇ ಕೊಡಲಿಲ್ಲ.ಇವೆಲ್ಲವನ್ನು ಆಲಿಸಿದ ಆನಂದರಾಯರು "ಮಾಸ್ಕ್ ನಿನ್ನೊಬ್ಬಳ ಒಳಿತಿಗಷ್ಟೇ ಅಲ್ಲ. ಸಮಾಜದ ಒಳಿತಿಗೂ ನಮ್ಮ  ಪಾಲಿದೆ.ಮಾಸ್ಕ್ ಧರಿಸುವುದರಿಂದ ಕಳೆದುಕೊಳ್ಳುವುದೇನಿಲ್ಲ. ಮಾಸ್ಕ್ ಧರಿಸದೆ  ಪಯಣಿಸುವುದರಿಂದ ಕಳೆದುಕೊಳ್ಳುವ ವಿಷಯ ಅನೇಕ  ಮಗಾ..ಮಡದಿ ಮಕ್ಕಳ ಕುಶಲೋಪರಿ ವಿಚಾರಿಸಲೂ ಸಮಯವಿಲ್ಲದೆ ಕರ್ತವ್ಯದ ಕರೆಗೆ ಹಾಜರಾಗಿ  ಸಮಾಜದ ಹಿತರಕ್ಷಣೆಗಾಗಿ ಜೀವನ ಸವೆಸುವ ಕೊರೊನಾ ವಾರಿಯರ್ಸ್ ಬಗ್ಗೆ ಒಂದೊಮ್ಮೆ ಯೋಚಿಸಿ ನೋಡು ಮಗಾ "ಎಂದರು. ಅಪ್ಪನ ಮಾತುಗಳನ್ನು ಕೇಳುತ್ತಾ ರೇಣುಕಾಳಿಗೆ ಆವರಿಸಿದ್ದ ಅಹಂಕಾರದ ಪರದೆ ಕಳಚಿ ಬಿತ್ತು.ಕೊರೊನಾ ವಾರಿಯರ್ಸ್ ಬಗ್ಗೆ  ನೆನೆದು ಕಂಬನಿ ಮಿಡಿದಳು.
        ನಂತರದ ಏಳು ದಿನಗಳಲ್ಲಿ ರೇಣುಕಾಳಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡು ಪರೀಕ್ಷೆಗೆ ಒಳಗಾದಾಗ ಕೊರೊನಾ ಪಾಸಿಟಿವ್ ಬಂತು.ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಪಡೆಯುತ್ತಿದ್ದ ರೇಣುಕಾಳು ದಿನ ಕಳೆದಂತೆ ಚೇತರಿಸಿಕೊಂಡಳು.ತನ್ನ  ಸಿರಿವಂತಿಕೆ ಏನಿದ್ದರೂ ದೇವರ ಆಟದೆದುರು  ಶೂನ್ಯ,ಬದುಕಿರುವಷ್ಟು ದಿನ ನಾವು ಮಾಡುವ ಕೆಲಸ ಕಾರ್ಯಗಳಷ್ಟೇ ಶಾಶ್ವತವೆಂದು ಅರ್ಥೈಸಿಕೊಂಡು  ತಾನು ಪರಿಸ್ಥಿತಿಗಳ ಎದುರು ನಡೆದುಕೊಂಡ ವರ್ತನೆಯನ್ನು ಸ್ಮರಿಸಿಕೊಂಡು ಮನನೊಂದಳು.ವೈದ್ಯರುಗಳ ಅವಿರತ ಶ್ರಮದಿಂದ ಕೊನೆಗೂ ಕೊರೊನಾದ ವಿರುದ್ಧ ಗೆದ್ದ ರೇಣುಕಾಳು ನಂತರದ ದಿನಗಳಲ್ಲಿ ಸಮಾಜಕ್ಕೆ  ಮುನ್ನೆಚ್ಚರಿಕೆ  ಕ್ರಮಗಳನ್ನು ತಿಳಿಸಿ, ಹೆತ್ತವರೊಂದಿಗೆ ಕೈಜೋಡಿಸಿ ಶ್ರೀಸಾಮಾನ್ಯರ  ಅವಶ್ಯಕತೆಗಳನ್ನು ಪೂರೈಸುತ್ತಾ ಹಾಗೂ ಕೊರೊನಾ ಬಾಧಿಸಿದ ಜನರಿಗೆ  ತನ್ನ ಅನುಭವಗಳನ್ನು ಹಂಚಿ ಧೈರ್ಯ ತುಂಬುವ ಕೆಲಸಕ್ಕೆ ಮುಂದಾದಳು.


✍️ ಅಖಿಲಾ ಶೆಟ್ಟಿ
ಪುತ್ತೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ಸಂಪಾದಕರು ವಿ ಮ ಸಾ ಪತ್ರಿಕೆ )

ಭಯಬೇಡ..! (ಕರೋನಾ ಜಾಗೃತಿ ಕತೆ) - ನಿಧಿ ಬಿ ನಾಯ್ಕ್

ಕರುನಾಡು ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಟ್ರಸ್ಟ್ – ಬೆಂಗಳೂರು ಇವರ ಜಂಟಿ ಸಹಯೋಗದ ಕಥಾ ಸ್ಪರ್ಧೆಗಾಗಿ*
*ವಿಷಯ :ಕೋವಿಡ್ – ೧೯ ನಿಯಂತ್ರಣ ಹಾಗೂ ವ್ಯಾಕ್ಸಿನ್ ಕುರಿತ ಜಾಗೃತಿ”*
*ಶೀರ್ಷಿಕೆ : ಭಯಬೇಡ!* 


ಕಾಡಿನ ಎಲ್ಲಾ ಪ್ರಾಣಿ ಪಕ್ಷಿಗಳಿಗೆ ತುರ್ತು ಸಭೆಯ ಸೂಚನೆ ಬಂದಿತ್ತು. ಪ್ರಕಟಣೆಯಲ್ಲಿ ಸಂಜೆ ಸರಿಯಾಗಿ ೬ ಗಂಟೆಗೆ ಆಲದ ಮರದ ಕೆಳಗಡೆ ಎಲ್ಲಾ ಪ್ರಾಣಿ-ಪಕ್ಷಿಗಳಿಗೆ ಒಟ್ಟಾಗುವ ಸೂಚನೆ ಇತ್ತು. ಆಗ ಆನೆ “ ಏನಪ್ಪಾ ಮಂಗ ಏನು ಇವತ್ತು ಇಷ್ಟು ಅವಸರದಲ್ಲಿ ಸಭೆಯನ್ನು ಕರೆದಿದ್ದಾರೆ.  ಏನು ವಿಷಯ? “  ಎಂದು ಕೇಳಿದನು. ಆಗ ಮಂಗ “ಆನೆಯಪ್ಪ ನಾವು ಸಭೆಗೆ ಹೋಗೋಣ ಅಲ್ಲೆ  ಎಲ್ಲಾ ವಿಷಯ ಗೊತ್ತಾಗುತ್ತೆ ಬಿಡು, ನಡೆಯಿರಿ ಸಭೆಯ ಸಮಯ ಆಗಿದೆ.”  ಎಂದು ಹೇಳಿ ಅಲ್ಲಿಂದ ಎಲ್ಲರೂ ಸಭೆಗೆ ನಡೆದರು. ಸಭೆ ಸೇರಿತು ಹುಲಿ ರಾಜನು ಸಭೆಯನ್ನು ಆರಂಭಿಸಿದನು. “ ಎಲ್ಲರಿಗೂ ಸ್ವಾಗತ ಕೋರಿ ಈ ಸಭೆ ಸೇರುವ ಉದ್ದೇಶ ಭೂಮಿ ಮೇಲೆ ಯಾವುದೇ ಒಂದು ವೈರಾಣು ಆಕ್ರಮಣ ಮಾಡಿದೆ ಅಂತೆ, ಆದರೆ ನಮಗೇನು ಈ ವೈರಾಣುವಿನಿಂದ ತೊಂದರೆ ಇಲ್ಲ ಆದರೆ ಮನುಷ್ಯಜಾತಿ ಸಂಕಷ್ಟದಲ್ಲಿದೆ ಅಂತೆ. ನಿಮಗೆ ಯಾರಿಗೂ ಈ ವೈರಾಣು ಬಗ್ಗೆ ಗೊತ್ತಿದ್ದರೆ ಹೇಳಿ” ಎಂದನು. ಆಗ ಗಿಳಿ ರಾಯನು” ಮಹಾರಾಜ ಆ ವೈರಾಣು ಹೆಸರು ‘ಕರೋನಾ’ ಅಂತೆ, ಹೀಗೆ ಹಾರುತ್ತ ಹೋಗಬೇಕಾದರೆ ಕೇಳಿದೆ”. ಇದನ್ನು ಕೇಳಿದ ಕೋಳಿ “ ಮಹಾರಾಜ  ಈ ಕರೋನಾ ಕಣ್ಣಿಗೆ ಕಾಣುವುದಿಲ್ಲ ಮನುಷ್ಯನ ದೇಹದಲ್ಲಿ ಪ್ರವೇಶಿಸಿ ಅವರ ಶ್ವಾಸನಾಳ ಗಳನ್ನು ಹಾನಿ ಉಂಟುಮಾಡುತ್ತದೆ “ಎಂದು ಹೇಳಿದನು. “ಇದನ್ನು ಹೇಗೆ ನಿಯಂತ್ರಣ ಮಾಡಬಹುದು” ಎಂದು ಆನೆ ಕೇಳಿತು. ಆಗ ಹೆಬ್ಬಾವು” ಈ ಒಂದು ಸೋಂಕಿಗೆ ಮುಂಜಾಗ್ರತೆಯೇ ಮಹಾ  ಮದ್ದು ನಾನು ಅರಣ್ಯ ಬಿಟ್ಟು ಹೊರಗೆ ಹೋಗಿದ್ದೆ ಆಗ ನೋಡಿದೆ ಜನರು ಸೋಂಕಿನಿಂದ ಭಯಬೀತರಾಗಿದಾರೆ ಆದರೆ ಈ ಸೋಂಕಿನ ವಿರುದ್ಧ ಜನರು ಆತ್ಮಬಲದಿಂದ ಹೋರಾಡಿ ಗೆಲ್ಲುವ ಅವಶ್ಯಕತೆ ಇದೆ. ವ್ಯಕ್ತಿಯಿಂದ ವ್ಯಕ್ತಿ ಕನಿಷ್ಠ ೬ ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಮುಖವಾಡ ಧರಿಸಬೇಕು  ಸಾಬೂನಿನಿಂದ ಪದೇ ಪದೇ ಕೈಯನ್ನು ತೊಳೆಯಬೇಕು. ಆದಷ್ಟು ಮನೆಯ ಹೊರಗೆ ಹೋಗಬಾರದು ತೀರಾ  ಅವಶ್ಯಕತೆ ಇದ್ದರೆ ಮಾತ್ರ ಹೊರಗಡೆ ಹೋಗಬೇಕು” ಎಂದನು. ಇದನ್ನು ಕೇಳಿದ ಮೊಲ  ಹೇಳಿತು “ತೋಟದಲ್ಲಿ ಗಜ್ಜರಿ ತಿನ್ನಬೇಕಾದರೆ ನಾನು ನೋಡಿದೆ, ಜನರು ಸೋಂಕಿತರನ್ನು ದೂರದಿಂದ ದೂರುಗುಟ್ಟಿ  ನೋಡುತ್ತಾರೆ.” ಆಗ ಆಮೆ ಹೇಳಿತು “ ಜನರು ಸೋಂಕಿತರಿಗೆ ಕೈಲಾದ ಸಹಾಯ ಮಾಡಬೇಕು ಅವರಿಗೆ ಸಮೀಪದ ಆಸ್ಪತ್ರೆಗೆ, ಸಂಬಂಧಪಟ್ಟ ವಾರಿಯರ್ಸ್ಗಳಿಗೆ   ವಿಷಯ ಮುಟ್ಟಿಸುವುದು ಅವರ ಕರ್ತವ್ಯ” ಎಂದು ಹೇಳಿತು. ಇದನ್ನು ಕೇಳಿದ ಜಿಂಕೆ” ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಒಂದಷ್ಟು ಮಾನವೀಯತೆಯೂ ತೋರಿಸಬೇಕು ಎಂದಿತು. ಆಗ ಕರಡಿ” ಈ ಸೋಂಕಿನ ವಿರುದ್ಧ ಜನರು ಒಟ್ಟಾಗಿ ಹೋರಾಡುವುದು ಅವಶ್ಯಕತೆ ಇದೆ ಮತ್ತು ಸೋಂಕಿತರು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು”. “ಅಯ್ಯೋ! ಹಾಗಾದರೆ ಈ  ಒಂದು  ಸೋಂಕಿಗೆ ಯಾವುದೇ ಔಷಧಿ ಇಲ್ಲವೇ” ಎಂದು ಕಾಗೆ ಕೇಳಿತು. ಆಗ ಹುಲಿ ರಾಜನು ಎದ್ದು “ಈ ಸೋಂಕಿಗೆ ಮನುಷ್ಯರು  ಲಸಿಕೆಯನ್ನು ಕಂಡುಹಿಡಿದಿದ್ದಾರೆ. ಆದರೆ ಜನರಲ್ಲಿ ಲಸಿಕೆ ಬಗ್ಗೆ ಅರಿವನ್ನು ಮೂಡಿಸುವುದು ಅವಶ್ಯಕತೆ ಇದೆ. ಈ ಲಸಿಕೆಯನ್ನು ಪಡೆಯುವುದರ ಮೂಲಕ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಇದರಿಂದ ಅವರಲ್ಲಿ ರೋಗದ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ. ಈ ಒಂದು ಲಸಿಕೆಯು ಮನುಷ್ಯರಿಗೆ ಸಂಜೀವನಿಯಾಗಿದೆ ಪ್ರತಿಯೊಬ್ಬರೂ ಕೂಡ ಭಯ ಇಲ್ಲದೆ ಲಸಿಕೆಯನ್ನು ಪಡೆಯಬಹುದು. ಗೆಳೆಯರೇ ಬನ್ನಿ, ಈ ಒಂದು ಕಾಯಿಲೆಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ನಾವು ಜನರಿಗೆ ತಿಳಿಸೋಣ ಕರೋನಾ  ಬಗ್ಗೆ  ಧೈರ್ಯಗೆಡಬೇಡಿ ಬದಲಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ ಈ ಮಾರಕ ರೋಗದ ವಿರುದ್ಧ ಹೋರಾಡಿ ಈ ಮಹಾಮಾರಿಯನ್ನು ಹೊಡೆದೋಡಿಸಿ ತಪ್ಪದೇ ಮಾಸ್ಕ್ ಧರಿಸಿ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಿ ಸ್ವಚ್ಛತೆಯ ಕಡೆಗೆ ಆದಷ್ಟು ಗಮನಹರಿಸಿ ಅವಶ್ಯಕತೆ ಇದ್ದಾಗ ಮಾತ್ರ ಮನೆಯಿಂದ ಹೊರಗೆ ಹೋಗಿ ಮತ್ತು ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ ಎಂದು ಸಾರೋಣ”. ಎಂದು ಹುಲಿ ರಾಜನು ಎಲ್ಲಾ ಪ್ರಾಣಿ-ಪಕ್ಷಿಗಳಿಗೆ ಮನವಿ ಮಾಡಿಕೊಂಡನು.
    
                                     
ಹೆಸರು : ಕು. ನಿಧಿ.ಬಿ ನಾಯ್ಕ್
ಊರು : ದಾಂಡೇಲಿ ( ಉ.ಕ )
ತರಗತಿ : ೭ ನೇ
ಶಾಲೆ : ಕೆನರಾ ವೆಲ್ಫೇರ್ ಟ್ರಸ್ಟ್ ಆಂಗ್ಲಮಾಧ್ಯಮ ಹಿರಿಯ ಪ್ರಾರ್ಥಮಿಕ ಶಾಲೆ ದಾಂಡೇಲಿ ( ಉ. ಕ ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ)

ಶನಿವಾರ, ಜೂನ್ 26, 2021

ಸಾಗಾಕಮ್ಮ (ಜಾನಪದ ಶೈಲಿಯ ಕಿರು ನಾಟಕ) - ಅಂಜನ್ ಕುಮಾರ್ ಪಿ ಆರ್.

ಕರುನಾಡು ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಟ್ರಸ್ಟ್ --
ಬೆಂಗಳೂರು ಇವರ ಸಹಯೋಗದ ಕಥಾ ಸ್ವರ್ಧೆ...!""

ಕಥೆ :- ಸಾಗಕಮ್ಮ...!
              ಕೊರೋನ ಜಾಗೃತಿ ಮೂಡಿಸುವ ಕಿರು 
ಕಥೆ ಜಾನಪದ ಶೈಲಿ...!

ಕರುನಾಡು ಕಥಾ ಸ್ಪರ್ದೆಯಲ್ಲಿ ಸಮಾಧಾನಕರ ಸ್ಥಾನ ಪಡೆದಿರುವ ಕತೆ 

ರಚನೆ :- ಕವಿ ಕಾವ್ಯ ಕಲ್ಪನೆ ಅಂಜನ್
                 ಹೆಸರಲ್ಲೇನಿದೆ ..!?
ವಡ್ಡರ ಸಿದ್ದರಾಮ ಅಂಕಿತ ನಾಮ..!



 (ನುಡಿ..:- ಈ ದಿನ ನೀವೇ ನೋಡಿ ತಿಳಿದಂತೆ  ಮಹಾಮಾರಿ ಕೊರೋನ ದ ಬೆಂಕಿ ಹೊತ್ತಿ ಉರಿಯುತ್ತಿರುವ ಘಟನೆ ಪ್ರತಿದಿನ ಕಾಣುತ್ತಿದ್ದೇವೆ ,ಹಾಗೆ ಈ ಕತೆಯಲ್ಲಿ ಒಂದು ಹಳ್ಳಿಯ ಜನರು ಸಾಯುತ್ತಿದ್ದಾರೆ ! ಕೊರೋನ ಹರಡಿ. ಆದಕ್ಕೆ  ಊರ ಮಂದಿ  ಅವರ ಮೂಡನಂಬಿಕೆ  ನಂಬಿ  ಮಾರಿಯನ್ನು ಶಾಂತಿ ಮಾಡಲು ಸಾಮಾಜಿಕ ಅಂತರ ಇಲ್ಲದೆ ನೆರೆದಿದ್ದಾರೆ ಮತ್ತು ಅದೇ ಹಳ್ಳಿಯ ಸೊಸೈಟಿ ಯ ಬಳಿ ಗುಂಪು ಇರುತ್ತಾರೆ ಅವರಿಗೆ ಯಾವ ರೀತಿ ಊರಿನ ಅವಿದ್ಯಾವಂತರು ಹೇಗೆ ವಿದ್ಯಾವಂತರಿಗೆ ಬುದ್ದಿ ಹೇಳುತ್ತಾರೆ ಎಂದು ನೋಡೋಣ ಬನ್ನಿ...! ..)

 
                 ಹಳ್ಳಿಯ ಕೆಲ ಹಿರಿಯರು  ಊರಾಹೊಳಗೆ 
ಹಳ್ಳಿಕಟ್ಟೆ ಮೇಲೆ ಕುಳಿತು ಈ ರೀತಿ ಅರಚುತಿದ್ದರೆ  _ ಲೇ ಮಿಂಡ್ರೀ ವಸಿ ದೂರ ಕುಂದ್ರು ಲೇ ಇಗ್ಲೆ ಮಂದಿ ಯಲ್ಲ ಎದೆ ಮ್ಯಾಗ ಮಣ್ಣ ಆಕೊಂಡ ಹೊರೋರು , ಮಣ್ಣ ಆಕೋರು ಇಲ್ಲದಾಯಂಗ ವತ್ತರಕ್ಕ ಹೋಗಕತ್ತವ್ ರೆ 
ನಮಗೂ ಆ ಕಿತ್ತೋದ್ದ ಕೋರೋಣ ಬರ್ಲಿ ಅಂತೀರಾ ..!? ಎಂದ ರಾಮಣ್ಣ  ಮತ್ತೊಬ್ಬ ರಚ್ಚಿಗ್ ಎದ್ದು ಟವಲ್ ಕೊಡವಿ,"" ಎನ್ರಲ ನನ್  ಸ್ವೊತಿ ಮಕ್ಳ ನಿಮ್ಗೆ ಎನ್ ಅಂದ್ರು ಅದು ಇದೀಯ ..!?. ಆ ನನ್ ವಾಲೆ ಸೆಲೆ ಎದ್ದು ಹೋಗ್ರಲ್ಲ ಕ್ಯಮೆ ನೋಡ್ರಿ ..! ನಮ್ಮ ಹಳ್ಳಿಯಾಗ ಕೋರೋಣ ಗೊರೋಣ ..! ಅಂತ ಊರ ಜನಕ್ಕೆ ಮಂಡೆ ಬಿಸಿ ಮಾಡ್ತಾ ಇದ್ದೀರಾ ..! ಎಂದು ಕಿರುಚಿ ಕೆಮ್ಮಿ ಮೋಟು ಬೀಡಿ ಹಿಡಿದು ನಿಂತ.

ಊರ ಬೀದಿಯಲ್ಲಿ ಒಬ್ಬ  ಉಸಿರು ಕಟ್ಟಿ ಕೆಮ್ಮುತ್ತ ಉಗಿಯಿತ್ತ ವಾಂತಿ ಮಾಡಿಕೊಂಡು ಬರ್ತಾ ಇದ್ದ ಇದನ್ನು ನೋಡಿದ ಜನ ಎಲ್ಲ ದೂರ ಹೋಗ್ಬಿಟ್  ನಾವು ಊರು ಬಿಟ್ಟು ಹೋಗೋಣ ಎಂದು ಸಣ್ಣ ಸಣ್ಣ ದ್ವನಿಯಲ್ಲಿ ದಿಟ್ಟವಾಗಿ ಮಾತಾಡುತ್ತಿದ್ದರು...

ಇನ್ನು ಕೆಲವರು ಮಾರಿ ಅವ್ವ ಕೋಪ ಮಾಡಿಕೊಂಡು ಇದಾಳೆ ಅದಕ್ಕ ಹಿಂಗೆ ಉರಾಗೆ ಮಂದಿ ಕೊರಗಿ ಹೊರಗಿ ಹೋಗ್ತಾ ಇದ್ದರೆ ಎಂದು ವಯಸ್ಸು ಆದ ಮುದುಕಿಯರು ನುಡಿದರು ..

ಹಾಗೆ ಅಮ್ಮನ  ಪೂಜೆಗೆ ಸಿದ್ಧವಾದ ಜನರು

ಜೇಡಿ ಮಣ್ಣು
ದಪ್ಪ ಕೆಂಪು ಕಣ್ಣು
ಅರಿಶಿಣ ಕುಂಕುಮ
ಕರಪೂರ ಕಡ್ಡಿ ಹೋಮ

ಕೋಳಿ ಕುರಿ 
ರಕ್ತ ಬಲಿ
ಬಂದ ಹೊಸ ನಾರಿ
ಬಿಟ್ಟಳು ಶಾಲಿ 

ಸಾಗಾಕುವ 
ಮಾರ ಅವ್ವ ನ
ಊರ ಕಾಯುವ
ದೇವಿಗೆ ನಮ್ಮ ನಮನ

ಹೀಗೆ ಒಂದಾಗಿ ಸೇರಿ ಮಾರಿ ಮಾಡಿ ರಕ್ತ ಬಲಿ ಕೊಟ್ಟರು
ಸಾಮ ರಸ , ಸಾರಾಯಿ , ಹೆಂಡ  ಕುಡಿದು ತೆಲಾಡಿ ಕುಣಿಯುತ್ತಿದ್ದರು ಆಗ ಒಬ್ಬ ವಯಸ್ಸು ಆದ ಮುದುಕ ಕೆಮ್ಮುತ್ತಾ ವಾಂತಿ . ಬೇದಿಕಿಂದ ಉಸಿರು ಗಟ್ಟಿ ಸತ್ತ ..ಸಾಯುವಾಗ ನರಲಾಡಿ  ಕೊರಗಿ ಆಯೋ ಅವ್ವ ಅವ್ವ ಅವ್ವ ಎಂದು ಎದೆ ಹಿಡಿದು ಕೊನೆಯಲ್ಲಿ ಉಸಿರು ನಿಂತು ಸದ್ದು ಇಲ್ಲದೆ ಆಯ್ತು. ಆಗ ಗಾಬರಿಗೊಂಡ ಊರ ಮಂದಿ ಅಂತರ ಕಾಪಾಡಿ ಕೊಂಡು ಬಂದರು ಹಾಗೆ ಊರಿನ ಕೆಲವು ಜನರು ವೈದ್ಯರನ್ನು ಸಂಪರ್ಕಿಸಿ ಕರೆತಂದು ಊರಿನ ಎಲ್ಲ ಜನರಿಗೂ ವ್ಯಕ್ಷಿನ್  ( ಲಸಿಕೆ) ಹ್ಯಾಕಿದರು ಆದ್ರೆ ಇದರಿಂದ ವಯಸ್ಸು ಆದ ಮುದುಕ ಮುದುಕಿಯರು ಸತ್ತರು ಮತ್ತು ನೋವುಗಳಿಂದ ನರಳಿ ಗೋಳಾಡಿದರು .. ಇದರಿಂದ ಇನ್ನೂ ಹೆಚ್ಚಿನ ಭಯ ಆತಂಕ ಉಂಟಾಗಿ .. "ಈ ಡಾಕ್ಟರ್ ಸುಳೆ ಮಕ್ಳು ಅವರ ಜೊತೆಗೆ ಈ ರಂಡಿ ಮಕ್ಳು ಪಂಚಾಯಿತಿ ಅವರು '" ಕೆರ ಕಳೇಚಿ ಕೊಂಡು ಆಕ್ಬೇಕ್ ಎಂದು ಜನ  ದೊಂಬಿ ಎದ್ದರೂ .! ಮನೆ ಗೆ ಸೂಜಿ ಚಿಕಿತ್ಸೆ ಕೊಡಲು ಬಂದವರಿಗೆ ಚಪ್ಪಲಿ ಸೇವೆ ಪೊರಕೆ ಸೇವೆ ಸಲ್ಲಿಸಿದರು ಬಂದ ಪೊಲೀಸರ ಬಟ್ಟೆ ಕಳಚಿ ಲೈಟ್ ಕಂಬಕ್ಕೆ ಕಟ್ಟಿ ಹೊಡೆದು ಹಟ್ಟಿ ಗೆ ಬಾರದ ಹ್ಯಾಂಗೆ ಮಾಡಿ ಬಿಟ್ಟರು ಈ ಪುರ ದ ಒಳಗೆ ಯಾರು ಸಹ ಬಾರದೆ ಹೋದರು ಯೋಚಿಸಿದ ಕೆಲವು ಮಂದಿ ಅವರು ಓದಿಲ್ಲ ಬರೆದಿಲ್ಲ ಆದ್ರೆ ಸಾಮಾನ್ಯ ಪ್ರಜ್ಞೆ ಅಷ್ಟೆ ಇದೆ ಇವರು ಜಿಲ್ಲಾ ಆಸ್ಪತ್ರೆ ಇಂದ ವೈದ್ಯರನ್ನು ( ನರರನ್ನ) ಕರೆಸಿ ಚಿಕಿತ್ಸೆ ಕೊಡಲು ಹೇಳಿದರು ಊರಿನ ಎಲ್ಲರೂ ಇದಕ್ಕೆ ಒಪ್ಪಿದರು ಎಲ್ಲರೂ ಅಂತರ ಕಾಪಾಡಿ ಕೊಂಡಿ ಬಂದರು  ಹೀಂಗ ಮಾಸ್ಕ್ ಹಾಕಿಕೊಂಡು ಇದ್ದರೂ ಆಗ ನೆನಪಾಯಿತು ಈರಣ್ಣ ಹೇಳಿದರು " ಅಜ್ಜ ನಾವು  ಹಿಂದಿನ ಕಾಲದಲ್ಲಿ  ದನ ಕರ ಗ್ಲೈಗೆ  ಕುಕ್ಕೆ ಹಾಕಿ ಇದ್ದರೆ ಈಗ ನಾವೇ ಬಾಯಿ ಕುಕ್ಕೆ ಹಾಕುವ ಗತಿ ಬಂದಿದೆ ಅಂದ್ರೂ ಅಜ್ಜ ಅವರು"" ಅವ್ನ್ ಅವ್ವನ್ ಯಾವ ಬ್ಲ ಈ ಕಾಯಿಲೆ ಕಂಡು ಹಿಡಿದದ್ದು ಇದು ಹೆಂಗ್ ಬರುತ್ತೆ ಎನ್ ಆಗುತ್ತೆ ಅಂತಾನೆ ಗೊತ್ತಿಲ್ಲ ಅಂದು ಬೈಯುತ್ತಿದ್ದರು .. 

ಮುಂದೆ  ಊರಹೊಳಗೆ ಅಕ್ಕಿ ಕೊಡುವ ಸ್ಥಳದಲ್ಲಿ ಜೇನಿನ ನ ಹ್ಯಾಂಗ ಗುಂಪು ಗಟ್ಟಿ ನಿಂತಿದ್ದರು ಒಬ್ಬರು ಮಾಸ್ಕ್  ಆಕಿಲ್ಲ್ಲ ದುರನು ಇಲ್ಲ ಮೊದಲು ಅಕ್ಕಿ ಕೊಡುವ ಆ ವ್ಯಕ್ತಿ ಹೆ ಆಕಿಲ್ಲಾ ಇದನ್ನು ಕಂಡ ಒಬ್ಬ ಅಜ್ಜ   "ಹೆ ಕೆಪ್ರುದುಳ್ಳೆ ಮಾಸ್ಕ್ ಅಕೋ ಮುದೇವಿ " ಎಂದರು ಅಲ್ಲಿ ನೆರೆದಿದ್ದವರ ಪಕರಿಸಿ ನಕ್ಕರು ಮತ್ತೆ ಅವರು ನಗೋ ನಿಮ್ ಬಾಯಿಗೆ ಮಾಸ್ಕ್ ಆಕದೆ ಇರೋ ನಿಮ್ ಎಲ್ಲರ ಬಾಯಿಗೆ ಎಲೇಮಕ್ಲು ಬ್ಯದೀ  ಆಕ್ಳಿ ಅಂದ್ರು .. ನೋಡಿ ಎಲ್ಲರೂ ಟವಲ್ ಸೀರೆ ಕೈ ಬಟ್ಟೆ ಕಟ್ಟಿ ಕೊಂಡ್ರು ಮತ್ತೆ ಒಬ್ಬ ಕುಡುಕ " ಅವನ್ ಅಜ್ಜಿ ಪಿಂಡ ಅವರ ಅಮ್ಮನ ಕೊನೆಯಲ್ಲಿ ಇದೀಯ ಕೋರೋಣ ಎಂದು ನಡುಗಿ ನುಳಿದಿ ಕೊಂಡು ಬರ್ತಾ ಇದ್ದ ಬಂದ ಪೋಲಿಸ್ ಮಾಮ್ ಲಾಟಿ ಎತ್ತಿ ಹಿಂದಕ್ಕೆ ಕೊಟ್ಟ ತಕ್ಷಣ ಕೂಡಿದ ನಿಷೆ ಇಳಿದು ನೆಟ್ಟಗೆ ಆದ .. 

ಹೀಗೆ ಅಲ್ಲಿ ಇದ್ದ ಅವಿದ್ಯಾವಂತರು ಬುದ್ದಿವಂತರಿಗೆ ಕೊರೊ ನ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡ್ತಾ ಇದ್ದರು ಆದರೆ ಹಳ್ಳಿ ಜನ ಮೂಡನಂಬಿಕೆ ಯ ಮಣ್ಣು ಗೊಂಬೆಗೆ ಮೊರೆ ಹೋಗಿ ಇದ್ದರೂ .. 
ಮುಂದೆ  ಊರನ್ನು ಒಂದು ವಾರ ಲಕಡೌನ್ ಮಾಡಲಾಯ್ತು ಕೊನೆಗೆ ಊರಿನಲ್ಲಿ ಹೆಣಗಳ ಸಂಖ್ಯೆ ಕಮ್ಮಿ ಆಯ್ತು .. 

ಈ ಕತೆ ನೈಜ್ಯ ಇಲ್ಲಿ ಚಿತ್ರಣ ಗೊಂಡಿದೆ ..! 
ದಯವಿಟ್ಟು ಎಲ್ಲರೂ ಲಸಿಕೆ ಹಾಕಿಸಿ ಕೊಳ್ಳಿ 

 "ಘಟ ಇದ್ದರೆ ಮಠ ಕಟ್ಟಬಹುದು...!''

ಮುದ್ರಣದಲ್ಲಿ ತಪ್ಪಾಗಿದ್ದರೆ ಕ್ಷಮಿಸಿ...!
ಧನ್ಯವಾದಗಳು....!


                               ಅಂಜನ್ ಕುಮಾರ್ p r
                                ಪುರ ಹಾಗಲ ವಾಡಿ                                      ಗುಬ್ಬಿ ತಾಲೂಕು ತುಮಕೂರು ಜಿಲ್ಲೆ 
                             ದೂ:- ೭೪೮೩೧೪೬೬೯೭


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...