ಭಾನುವಾರ, ಡಿಸೆಂಬರ್ 19, 2021

ತರಹೇವಾರಿ ತರಕಾರಿ (ಕವಿತೆ) - ಮಧುಮಾಲತಿ ರುದ್ರೇಶ್ ಬೇಲೂರು.

 ಕೊಳ್ಳ ಬನ್ನಿರಿ ತರಹೇವಾರಿ ತರಕಾರಿ ˌˌˌ
ಸದೃಢ ಬದುಕಿಗೆ ಇದುವೇ ರಹದಾರಿˌˌˌ
🥥🌶️

 ಬೆಂಡೆ ಬದನೆ ಹಾಗಲ ಹಸಿಮೆಣಸು ˌˌˌ
ತರತರ ರುಚಿಯು ಸವಿಯಲೇ ಸೊಗಸು ˌˌˌ
🥕🥕

ಕೋಸು ಆಲೂ ಟೊಮೇಟೊ ತಿನ್ನಿರಿ ಗಜ್ಜರಿˌˌˌ
 ತಾಜಾ ತರಕಾರಿ ವೈಶಿಷ್ಟತೆಗಳ ಸಾರೋಣ ಬನ್ನಿರಿˌˌˌ
🥦🍆

 ಆರೋಗ್ಯದೊಂದಿಗೆ ಆಯುಷ್ಯವೂ ಹೆಚ್ಚಲಿ ˌˌˌ
ಇದರ ಉಪಯೋಗ ಮಕ್ಕಳೂ ಅರಿಯಲಿ ˌˌˌ
🥒🫑

ಪೌಷ್ಟಿಕಾಂಶಗಳ ಕಣಜವೇ ಇವುಗಳುˌˌˌ
 ಬಳಸಿದರೆ ನಿತ್ಯ ಆರೋಗ್ಯಯುತ ಬಾಳುˌˌˌ
🍆🥬
 ಋತುಮಾನಕ್ಕೆ ತಕ್ಕ ವಿಧವಿಧ ಕಾಯಿಪಲ್ಲೆ ˌˌˌ
ಮೂಳೆ ಹಲ್ಲುಗಳ ಗಟ್ಟಿಗೆ ಸಾರವಿದುದಿಲ್ಲೆˌˌ
🥕🍅
 ಬನ್ನಿರಿ ಬಳಸೋಣ ಹರುಷದಿ ತರಕಾರಿ ˌˌˌ
ಆರೋಗ್ಯದ ಬಾಳಿಗೆ ಇದುವೇ ಸಹಕಾರಿ ˌˌ
🧄🧅
ಅರಿಯಬೇಕಿದೆ ಎಲ್ಲರೂ ಸಾವಯವ ಕೃಷಿಯˌˌ
 ಕಾಣ ಬೇಕಿದೆ ಬೆಳೆಗಾರರ ಮೊಗದಲಿ ಖುಷಿಯˌˌ
🍠🥐🌽🥕
 - ಮಧುಮಾಲತಿ ರುದ್ರೇಶ್ ಬೇಲೂರು.
🍏🍎🍌🍊🍇🍓


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಶ್ರೀ ಶಿವಶರಣಗೌಡರ ಚಿಂತನೆಯಲ್ಲಿ ಸುವರ್ಣ ದೇವಾಲಯ (ಲೇಖನ) - ಮಂಜುನಾಥ ಹಿರೇಮಠ.

ಕಾಶಿ ವಿಶ್ವನಾಥ ದೇವಾಲಯ ಅತ್ಯಂತ ಪ್ರಸಿದ್ಧ ದೇವಸ್ಥಾನ. ಈ ದೇವಾಲಯ ಗಂಗಾ ನದಿಯ ಪಶ್ಚಿಮ ದಡದಲ್ಲಿದೆ. ಮತ್ತು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಇದು ಒಂದು.ಇದಕ್ಕೆ ಸುವರ್ಣ ದೇವಾಲಯ ಎಂಬ ಹೆಸರು ಇದೆ ಎಂಬುದನ್ನು ರಾಷ್ಟ್ರ ಮಟ್ಟದ ಧರ್ಮ ದೀಪ್ತಿ ವಿಚಾರ ಸಂಕೀರ್ಣದಲ್ಲಿ ಕಲ್ಪವೃಕ್ಷ ವಿದ್ಯಾ ಸಂಸ್ಥೆಯ ಸಂಸ್ಥಾಪಕರೂ ಮತ್ತು ರಾಜ್ಯ ಮಟ್ಟದ ಬಸವ ಶ್ರೀ ಪ್ರಶಸ್ತಿ ವಿಜೇತರಾದ ಶ್ರೀ ಶಿವಶರಣಗೌಡ ಬಿರಾದಾರ ವಿಶ್ಲೇಷಣೆ ನೀಡಿರುವದನ್ನು ನೋಡುವದಾದರೆ ಭೂಮಿಯ ರಚನೆಯ ಸಮಯದಲ್ಲಿ ಸೂರ್ಯನ ಕಿರಣಗಳು ಕಾಶಿ ಅಂದರೆ ವಾರಾಣಸಿಯ ಮೇಲೆ ಬಿದ್ದವು ಆದ್ದರಿಂದ ಕಾಶಿಯನ್ನು ಆನಂದ ಕಾನನ ಎಂಬ ವಿಶೇಷ ನಾಮವಿದೆ. ಆನಂದ ಕಾನನದ ವೈಭವದ ದೇವಾಲಯವು ಚಿನ್ನದ ಗುಮ್ಮಟವನ್ನು ಹೊಂದಿರುವದರಿಂದ ಕಾಶಿ ವಿಶ್ವನಾಥನ ದೇವಾಲಯಕ್ಕೆ ಸುವರ್ಣ ದೇವಾಲಯ ಎಂಬ ಹೆಸರು ಇರುವದು ಧರ್ಮ ದೀಪ್ತಿಗೆ ಶೋಭೆ.ಶಿವನ ಜ್ಯೋತಿರ್ಲಿಂಗವು ಬಳಲಿ ಬಂದವರನ್ನು ಸಲಹುವ ಕಲ್ಪತರು. ದೇವಾಲಯಕ್ಕೆ ಭೇಟಿ ನೀಡಿ ಪವಿತ್ರ ಗಂಗಾನದಿಯಲ್ಲಿ ಸ್ನಾನಮಾಡುವದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಅಷ್ಟೆ ಅಲ್ಲ ಮಾನವ ಜನ್ಮವೇ ಕೊನೆಯ ಜನ್ಮವೆಂದು ಹಲವರು ಹೇಳುತ್ತಾರೆ ಆದರೆ ಪುಣ್ಯಕಾರ್ಯ ಮಾಡುವವರಿಗೂ ದೇವನು ಪುನರ್ಜನ್ಮ ಕಲ್ಪಿಸುತ್ತಾನೆ ಎಂದು ದಂತಕತೆಗಳು ಉಲ್ಲೇಖಿಸುತ್ತದೆ ಎಂಬುದನ್ನು ಎಸ್. ವ್ಹಿ. ಬಿರಾದಾರ ಇವರು ಧರ್ಮ ದೀಪ್ತಿ ವಿಚಾರ ಸಂಕಿರ್ಣದಲ್ಲಿ ತಿಳಿಸಿರುವದು ಕಾಶಿ ಕ್ಷೇತ್ರದ ವೈಭವಕ್ಕೆ ಮತ್ತಷ್ಟು ಮೆರಗುನೀಡಿದಂತಾಗಿದೆ.
ಶಿವನಿಗೆ ಅತೀ ಪ್ರೀಯವಾದ ವಸ್ತುಗಳೆಂದರೆ ರುದ್ರಾಕ್ಷಿ, ಬಿಲ್ವ, ಪಾರಿಜಾತ ಮತ್ತು ಕಲ್ಪವೃಕ್ಷ. ಅದರಲ್ಲೂ ತ್ರಿಶೂಲ ಹಿಡಿದು ನಿಂತರೆ ಆ ದೇವನ ವರ್ಣನೆಗೆ ಮಿತಿಯೇ ಇಲ್ಲ. ಧರ್ಮದ ಉಳುವಿಗಾಗಿ ಅನೇಕ ಅವತಾರವನೆತ್ತಿದ ಶಿವನಿಗೆ ಅನಂತ ಹೆಸರುಗಳು. ಶುದ್ಧ ಮನಸ್ಸಿನ ಭಾವದ ಜೊತೆಗೆ ದಾನ ಧರ್ಮದ ಹಾದಿಯಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಜೀವನವೆಂಬ ಹಾದಿ ಸಾಗಿದರೆ ಪುಣ್ಯದ ಫಲಗಳು ದೊರೆತು ನಮ್ಮ ಮನದಲ್ಲಿ ಶಿವನು ಬಂದು ನಿಲ್ಲುವನು. ಜಗತ್ತನ್ನು ಸೃಷ್ಟಿಸಿದ ಆ ಶಿವನಿಗೆ ನೂರಾರು ಹೆಸರು ಅದರಲ್ಲಿ ಕಾಶಿ ವಿಶ್ವನಾಥನ ರೂಪವು ಒಂದು ಗರ್ಭ ಗುಡಿಯಲ್ಲಿನ ಜ್ಯೋತಿರ್ಲಿಂಗವು ಕಂದು ಬಣ್ಣದಿಂದ ಕೂಡಿದ್ದು ಇದನ್ನು ಬೆಳ್ಳಿಯಿಂದ ವೇದಿಕೆಯಂತೆ ಮಾಡಿ ಅದರಲ್ಲಿ ಇರಿಸಲಾಗಿದೆ. ಇಂದಿನ ಕಾಶಿ ವೈಭವದ ನೋಟ ಮನಸ್ಸಿಗೆ ನೆಮ್ಮದಿ ನೀಡುವ ದೃಶ್ಯ.
ಕರ್ಮಕ್ಕೆ ಕೊನೆ :
ಮಗುವಿರುವದು ಅದು ಬಾಕಿಯನ್ನು ಮಾಡಿರುವದು ಆದರೆ ಇದು ತಂದೆಗೆ ತಿಳಿಯಲಾರದ ಸಂಗತಿಯೇನಲ್ಲ. ಮಗುವಿಗೆ ತನ್ನ ಬಾಕಿ ತೀರಿಸಲು ಆಗುತ್ತಿಲ್ಲ ಅದಕ್ಕೆ ದುಡಿಯುವ ವಿಧಾನವೂ ತಿಳಿಯದು. ಆದರೆ ಈ ಬಾಕಿಯನ್ನು ಹೇಗೆ ತೀರಿಸಲೆಂದು ಗೋಳಾಡುತ್ತಾ  ಕುಳಿತರೆ ಲಾಭವಿಲ್ಲ ತಂದೆಯ ಪಾದವನ್ನು ಮಗು ಹಿಡಿಯಲೇ ಬೇಕಾಗಿದೆ. ಅದರಂತೆ ಕರ್ಮವೆಂಬ ಬಾಕಿಯಲ್ಲಿ ಚಿಂತಿಸಿದರೆ ಫಲವಿಲ್ಲ, ಎಷ್ಟು ತಪ್ಪು ಮಾಡಿರುವೆ ಎಂದೂ ತಿಳಿದಿಲ್ಲ ಆ ಕರ್ಮ ಎಂಬ ಬಾಕಿಯಿಂದ ಋಣಮುಕ್ತಾರಾಗಬೇಕಾದರೆ ಶಿವನ ಪಾದ ಹಿಡಿಯಬೇಕು. ತಂದೆಯಾಗಿರುವ ಆ ಕಾಶಿ ವಿಶ್ವನಾಥನ ಸನ್ನಿಧಿಗೆ ತೆರಳಿ ದರ್ಶನ ಪಡೆದರೆ ಕರ್ಮಕ್ಕೆ ಕೊನೆ ಎಂದು ಧರ್ಮ ದೀಪ್ತಿಯ ಬೆಳಕು ಚಲ್ಲಿದ ಎಸ್. ವ್ಹಿ.ಬಿರಾದಾರ ಇವರ ಕಾಶಿಯ ವೈಭವದ ಚಿಂತನೆ ನಿಜಕ್ಕೂ ಶ್ಲಾಘನೀಯ   ಅದರಲ್ಲೂ ಸುವರ್ಣ ದೇವಾಲಯದ ಹೊಸದಾದ ಹೆಸರಿನ ವಿಶ್ಲೇಷಣೆ ಆನಂದ ಕಾನನಕ್ಕೆ ಮೆರಗು ನೀಡಿದಂತಾಗಿದೆ.


ಕುರುಡರಿಗೆ ಎಚ್ಚರಿಕೆ "
ಕುರುಡರಿಗೆ ಹಾದಿ ನಡೆಯಲು ಸಾಧ್ಯವಿಲ್ಲ ಕಾರಣ ಹಾದಿಯಲ್ಲಿ ಅನೇಕ ತೊಂದರೆಗಳಿರುತ್ತವೆ. ಆದರೆ ಕೈ ಹಿಡಿದುಕೊಂಡು ಹೋಗುವವರ ಮೇಲೆ ಪೂರ್ಣ ವಿಶ್ವಾಸ ಮಾಡಿದರೆ ಅವರು ಅವನಿಗೆ ಯಾವ ತೊಂದರೆಯಾಗದಂತೆ ಕರೆದುಕೊಂಡು ಹೋಗಿ ಊರನ್ನು ಮುಟ್ಟಿಸುವರು ಇನ್ನೂ ಕೆಲವರು ಕೋಲಿನ ಸಹಾಯದಿಂದ ಹಾದಿ ನಡೆಯಲು ಇಚ್ಚಿಸುತ್ತಾರೆ ಇದರಿಂದಲೂ ಆತಂಕಗಳು ತಪ್ಪಲಾರವು. ಇಲ್ಲಿ ಕುರುಡರೆಂದರೆ ಯಾರು? ಕೈ ಹಿಡಿದು ನಡೆಸುವವರೆಂದರೆ ಯಾರು? ಕೋಲು ಎಂದರೆ ಯಾವುದು?  ಧರ್ಮ, ಸತ್ಯವನ್ನೇ ತಿಳಿಯದವರೇ ಕುರುಡರು. ಇಂತವರು ಪುಣ್ಯ ಕಾರ್ಯ ಮಾಡುವದಿಲ್ಲ. ಧರ್ಮದ ಮೇಲೆ ಪೂರ್ಣ ವಿಶ್ವಾಸ ಮಾಡಿದರೆ ಶಿವನು ಕೈಹಿದು ನಡೆಸುತ್ತಾನೆ. ಕೋಲಿನಂತಿರುವ ಮಾನವರನ್ನು ನಂಬಿ ನಡೆಯಬೇಡಿರಿ. ಆ ಶಿವನ ಮೇಲೆ ಪೂರ್ಣ ನಂಬಿಕೆ ಇಟ್ಟು ನಡೆದರೆ ಜೀವನ ಪಾವನಮಯವಾಗುವದು. ಆದ್ದರಿಂದ ಶಿವನ ಸ್ವರೂಪ ಅನಂತ ಆ ಸ್ವರೂಪಗಳಲ್ಲಿಯೇ ಕಾಶಿ ವಿಶ್ವನಾಥ ಸ್ವರೂಪವು ಒಂದಾಗಿದೆ. ಶಿವನ ಲೀಲೆಗಳಿಗೆ ಮಿತಿಯೇ ಇಲ್ಲ.ಶಿವನಿಗೆ ಶರಣಾಗಿ ಧರ್ಮದ ಹಾದಿ ಕಂಡುಕೊಳ್ಳುವದೇ ನಿಜವಾದ ಜೀವನ. ಇಂದಿನ ಕಾಶಿ ವೈಭವ ಜಗತ್ತಿಗೆ ಮಾದರಿಯಾಗಿದೆ ಎಂಬ ಚಿಂತನೆ ಸುವರ್ಣ ದೇವಾಲಯಕ್ಕೆ ಶೋಭೆ.
- ಮಂಜುನಾಥ ಹಿರೇಮಠ 
ದಂಡಸೋಲಾಪುರ(ಚಾಮನಾಳ)ಯುವ ಸಾಹಿತಿಗಳು ಮತ್ತು ಶಿಕ್ಷಕರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹೆಣ್ಣಿನ ಸೌಂದರ್ಯ (ಕವಿತೆ) - ಸವಿತಾ ಆರ್ ಅಂಗಡಿ. ಮುಧೋಳ

ಸೌಂದರ್ಯ ಸಾಗರ ನೀನು
 ಕಡಲಿನ ರೂಪರಾಶಿ ನೀನು
 ಚೆಲುವಾದ ಕಾಮನಬಿಲ್ಲು ನೀನು
 ಸಾವಿರ ಕಣ್ಣಿನ ನವಿಲು ನೀನು

 ಸೌಂದರ್ಯ ಸಾಗರ ನೀನು
 ಹೊಂಬೆಳಕು ಸೂಸುವ ಮೊಗವ ನೀನು
 ಅಮೃತಶಿಲೆಯ ಬೊಂಬೆ ನೀನು
 ಕೆಸರಲ್ಲಿ ಅರಳಿದ ಕಮಲ ನೀನು

 ಮೋಡದಲ್ಲಿ ಮಿನುಗುವ ನಕ್ಷತ್ರ ನೀನು
 ಮದುಮಾಸಚಂದ್ರಮ ನೀನು
 ಪೂರ್ಣಿಮೆಯ ಬೆಳದಿಂಗಳ ಬಾಲೆ ನೀನು
 ಪೂರ್ಣಚಂದ್ರನ ಇರುಳು ನೀನು
 ಹೆಣ್ಣಿನ ಸೌಂದರ್ಯ ಸಾಗರ ನೀನು
✍️ ಸವಿತಾ ಆರ್ ಅಂಗಡಿ. ಮುಧೋಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗಜಲ್ - ಮಾಜಾನ್ ಮಸ್ಕಿ.

ಬೇಲೂರು ಶಿಲಾಬಾಲಕಿಯರು ಕಂಗೊಳಿಸುತ್ತಿವೆ ನೋಡು ಸಖ 
ತಮ್ಮ ಸುಂದರ ಮೈಮಾಟದ ಮಾಯೆಯಲ್ಲಿ ಸೆಳೆಯುತ್ತಿವೆ ನೋಡು ಸಖ 

ಕಲ್ಲುಗಳ ಕಟೆದು ವಿಧ ವಿಧ ಭಂಗಿಗಳಲ್ಲಿ ರೂಪಗೊಂಡಿವೆ 
ಕಪ್ಪಾದರೂ ಸುಂದರತೆಯಲ್ಲಿ ಸವಾಲಾಗಿ ಸ್ಪರ್ಧಿಸುತ್ತಿವೆ ನೋಡು ಸಖ 

ನೆದರು ಬಟ್ಟಿಗೆ ಕಪ್ಪು ಕಾಡಿಗೆಯನ್ನೇ ಬಳಸುವರು ದೃಷ್ಟಿ ಸರಿಸಲು 
ನನ್ನಯ ಕಪ್ಪು ಬಣ್ಣಕ್ಕೆ ಯಾಕೆ ಅಸಹ್ಯ ಪಡುತ್ತಿರುವೆ ನೋಡು ಸಖ 

ಶಾಂತ ಸರೋವರ ಮನ ನನ್ನದಾಗಿದೆ ತಿರಸ್ಕಾರದ ಕಲ್ಲು ಎಸೆಯಬೇಡ 
ಅಗಾಧ ಪ್ರೇಮಕ್ಕೆ ಅಚ್ಚುಬೆಲ್ಲವಾಗಿ ಜೊತೆ ಆಗುತ್ತಿರುವೆ ನೋಡು ಸಖ 

ಒಪ್ಪಿದ ಪ್ರೀತಿ ಅಪ್ಪಿನಲಿ ಬೆಚ್ಚಗೆ ಇರಲು ಆಸೆ ಪಟ್ಟಿರುವೆ "ಮಾಜಾ" 
ಹೃದಯ ನೊಂದು ಬೆಂದು ಕನಸುಗಳೆಲ್ಲ ಸುಡುತ್ತಿವೆ ನೋಡು ಸಖ 
- ಮಾಜಾನ್ ಮಸ್ಕಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

'ನಿದ್ರೆ'ಯಂಬ ಬಂಗಾರ (ಲೇಖನ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ.

ದಿನದಿಂದ ದಿನಕ್ಕೆ ಬಂಗಾರದ ಬೆಲೆ ಗಗನಕ್ಕೇರುತ್ತಿದೆ. ಅದಕ್ಕೆ ಎಲ್ಲರ ಮನೆಯಲಿ  ಯಜಮಾನರು ಬಂಗಾರ ಕೊಡಿಸಿ ಎಂದು ಕೇಳಿದ ಕೂಡಲೇ.... ಅದನ್ನು ಮರೆಸಲು  ಪ್ರೀತಿಯ ಮಡದಿಗೆ ಚಿನ್ನ, ಬಂಗಾರ, ಎನ್ನುತ್ತಲೇ ಮಾತಿನಲ್ಲಿ ಬಂಗಾರ ಕೊಡಿಸುತ್ತಿದ್ದಾರೆ. ಕಾರಣ ಪ್ರತಿಯೊಬ್ಬರೂ ಇಷ್ಟಪಡುವ ಲೋಹ ಬಂಗಾರ .ಆದರೆ ಅದರ ಬೆಲೆ ಗಗನಕ್ಕೇರಿರುವುದರಿಂದ ಕೊಡಿಸುವ ಬದಲು  ಆ ಮಾತಿನಲ್ಲೇ ಬಂಗಾರ ಕೊಡಿಸುತ್ತಿದ್ದಾರೆ.ಬಂಗಾರದ ಬಳಕೆಯ ಪ್ರಮಾಣ ಹೆಚ್ಚಾಗಿದೆ. ಆದರೆ ಉತ್ಪಾದನೆ ಕಡಿಮೆಯಾದಾಗ ಸಹಜವಾಗಿ ಯಾವುದೇ ವಸ್ತುವಿನ ಬೆಲೆ ಗಗನಕ್ಕೇರುತ್ತದೆ ಅಲ್ಲವೇ..? ಅದೇ ರೀತಿ ಬಂಗಾರದ ಬೆಲೆಯೂ ಗಗನಕ್ಕೇರಿದೆ .ಅಯ್ಯೋ ....ನಿದ್ರೆಯೆಂಬ ಬಂಗಾರ ಅಂತ ಶೀರ್ಷಿಕೆ ಬರೆದು, ಬಂಗಾರದ ಬಗ್ಗೆ ಏಕೆ ಬರೆಯುತ್ತಿರುವೆ ಅನ್ನಿಸುತ್ತಿದೆಯೇ.... ಅದಕ್ಕೆ ಕಾರಣಾನೂ ಇದೆ .ಬಂಗಾರದ ಬೆಲೆ ಹೇಗೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆಯೋ ಹಾಗೆಯೇ ನಿದ್ರೆಯೆಂಬ ಆರೋಗ್ಯದ ಅತಿ ಅಮೂಲ್ಯವಾದ 'ಸ್ಥಿತಿ'ಯೂ ಸಹ ಇಂದು ಪ್ರತಿಯೊಬ್ಬರ ಜೀವನದಲ್ಲಿ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಏಕೆಂದರೆ ಧಾವಂತದ ಬದುಕಿನಲ್ಲಿ ಯಾಂತ್ರಿಕ ಜೀವನ ಸಾಗಿಸುತ್ತಿರುವ ನಮಗೆ ಆರೋಗ್ಯಯುತ ಜೀವನಕ್ಕೆ ನಿದ್ರೆಯೆಂಬುದು ಎಷ್ಟು ಅವಶ್ಯಕ ಎನ್ನುವುದನ್ನೇ ಮರೆಯುತ್ತಿದ್ದೇವೆ.ನಮ್ಮ ದೇಹ  ಒಂದು ಯಂತ್ರವಿದ್ದಂತೆ ದಿನಪೂರ್ತಿಕೆಲಸಮಾಡುವ ನಮ್ಮ ಕಣ್ಣುಗಳು, ಕಾಲುಗಳು, ಕೈಗಳು, ಕಿವಿಗಳು, ನಾಲಿಗೆ, ಮೆದುಳು, ಹೃದಯದ ಬಡಿತ, ತೀವ್ರರಕ್ತ ಸಂಚಾರ, ಉಸಿರಾಡುವ ಶ್ವಾಸಕೋಶ ಹೀಗೆ ಇತರ ಪ್ರಮುಖ ದೇಹದ ಭಾಗಗಳಿಗೆ ವಿಶ್ರಾಂತಿ ಬಹುಮುಖ್ಯವಾಗಿ ಅವಶ್ಯಕತೆ  ಇರುತ್ತವೆ. ಅವುಗಳಿಗೆ ವಿಶ್ರಾಂತಿ ನೀಡದಿದ್ದರೆ ಯಂತ್ರದ ಭಾಗಗಳು ಸವಕಳಿಯಾಗದಂತೆ ದೇಹದ ಅಂಗಾಂಗಗಳಲ್ಲಿಯೂ ನ್ಯೂನ್ಯತೆ ಕಾಣುವ ಸಂದರ್ಭಗಳೇ ಹೆಚ್ಚು. ಆದ್ದರಿಂದ ದಣಿದ ದೇಹಕ್ಕೆ ವಿಶ್ರಾಂತಿಯು ನಿದ್ರೆಯೆಂಬ ಅಮೂಲ್ಯ ಕ್ಷಣವನ್ನು ನೆಮ್ಮದಿಯಿಂದ ಅನುಭವಿಸಿದಾಗ ಮಾತ್ರ ದೊರೆಯುವುದು .
                   ಮನುಷ್ಯನ ನಿಜವಾದ ನೆಮ್ಮದಿ ಇರುವುದು ಅವನ ಸುಖವಾದ ನಿದ್ರೆಯಲ್ಲಿ. ಅದಕ್ಕಾಗಿ ನಿದ್ರೆಯನ್ನು ಬಂಗಾರವೆಂದರೆ ತಪ್ಪಿಲ್ಲ. ಸಂತೃಪ್ತ ನಿದ್ರೆಯಿಂದ ಮಾತ್ರ ಆರೋಗ್ಯದ ಸ್ಥಿರತೆ ಸಾಧ್ಯ. ಸಾಮಾನ್ಯವಾಗಿ ನಿದ್ರೆಯು ನಮ್ಮಿಂದ ದೂರ ಸರಿಯುತ್ತಿರಲು ಕಾರಣ ಹುಡುಕುತ್ತಾ  ಒಮ್ಮೆ ಆಲೋಚಿಸಿದಾಗ, ನಿದ್ರಾಹೀನತೆಗೆ ಕಾರಣವಾದ ಚಿಂತೆ, ಭಯ, ಕೋಪ, ದುಃಖ, ಅವಮಾನದ ನೋವು, ನಾಳೆ ಏನಾಗುವುದೋ ಎಂಬ ಆತಂಕ, ಕೆಟ್ಟ ಆಲೋಚನೆಗಳು ,ದೈಹಿಕ ಹಾಗೂ ಮಾನಸಿಕ ಕಾಯಿಲೆಗಳು, ಕೆಲಸದ ಒತ್ತಡ, ಪ್ರೇಮದ ವ್ಯಾಮೋಹ ,ದುಶ್ಚಟಗಳು, ಮಾನಸಿಕ ತೊಳಲಾಟ ,ನಿದ್ರಿಸುವ ಸಮಯವನ್ನು ಬದಲಿಸುವುದು, ಅತಿಯಾಗಿ ದೂರದರ್ಶನ ವೀಕ್ಷಣೆ, ನಿಯಮಿತವಾಗಿ ಆಹಾರ ಸೇವಿಸದಿರುವುದು, ಅತಿಯಾದ ಮೊಬೈಲ್ ಬಳಕೆ, ಹಣಗಳಿಕೆಯ ಹಂಬಲ ಇತ್ಯಾದಿಯಾಗಿ ನೂರಾರು ಕಾರಣಗಳನ್ನು ಕೊಡಬಹುದು .
           ಹಳ್ಳಿಗಳಲ್ಲಿ ಜನರು ಆಡುಮಾತಿನಲ್ಲಿ  ಕಷ್ಟ ಸುಖ ಅನ್ನೋದು ಹಗಲು ರಾತ್ರಿಗಳಿದ್ದಂತೆ, ಒಂದೇ ನಾಣ್ಯದ ಎರಡು ಮುಖಗಳು. ಹೀಗಾಗಿ ಮಾನವ ಸಹಜ ಜೀವನದಲ್ಲಿ ಬರುವ ಚಿಕ್ಕ ಪುಟ್ಟ ತೊಂದರೆಗಳಿಗೆ ಆತಂಕಕ್ಕೆ ಒಳಗಾಗಿ ಚಿಂತೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಹೇಳುತ್ತಾರೆ.ಕಷ್ಟ  ಕಾಯಿಲೆಗಳು ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತವೆಯೇ? ......ಎಂದು ಧೈರ್ಯದಿಂದ ಮಾತನಾಡುವ ಅವರೇ ನಮಗೆ ಸ್ಫೂರ್ತಿ .ಇದು ವಾಸ್ತವವಾಗಿ ಕಟು ಸತ್ಯವೂ ಸಹ. ಚಿಕ್ಕ ವಿಷಯವನ್ನೇ ದೊಡ್ಡದಾಗಿ ಮಾಡಿಕೊಂಡು ಮನಸ್ಸನ್ನು ಗೊಂದಲದ ಗೂಡಾಗಿಸಿ ಅದರ ಬಗ್ಗೆನೇ ಚಿಂತೆ ಮಾಡುತ್ತ ನಿದ್ರೆಗೆಡುವುದು ಸರಿಯಲ್ಲ .ಆದರೆ ಇಂದು ಅತಿಯಾಗಿ ನಿದ್ರಾಹೀನತೆಗೆ ಒಳಗಾಗುವವರು ವಯಸ್ಕರು, ಅವರ ಚಿಂತೆಯಲ್ಲೇ ಅವರ ಪೋಷಕರು .ಇಂದು ಆಧುನಿಕ ಜಗತ್ತು ಮೊಬೈಲನ್ನೇ ಶಿಕ್ಷಣ ಕೇಂದ್ರವಾಗಿರಿಸಿಕೊಂಡಿದೆ. ಹೀಗಾಗಿ ಪ್ರತಿಯೊಂದು ವಿಷಯವೂ ಗೂಗಲ್ ಸಹಾಯ ಕ್ಕಾಗಿ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿರುವುದು ಸಹಜ ಹಾಗೂ ಅನಿವಾರ್ಯ. ಕೊರೋನಾ ಓಮಿಕ್ರೋಮ್ ನಂತಹ ಸಾಂಕ್ರಾಮಿಕ ಕಾಯಿಲೆಗಳು ತಮ್ಮ ನಾಲಿಗೆಯನ್ನು ಜಗವೆಲೣಾ ವ್ಯಾಪಿಸುತ್ತಿರುವಾಗ, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಲಾಕಡೌನ ಮತ್ತು ಆನ್ಲೈನ್ ಪಾಠಗಳು ಕೂಡ ಅನಿವಾರ್ಯ .ಈ ರೀತಿ ನಿರಂತರವಾಗಿ ವಿದ್ಯಾರ್ಥಿಗಳು ಆನ್ಲೈನ್ ಪಾಠ ವೀಕ್ಷಣೆ, ಆಲಿಸುವಿಕೆಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ನಿದ್ರಾಹೀನತೆ ಉಂಟಾಗುವುದು . ಅದರ ಜೊತೆಗೆ ಇಂದಿನ ಯುವಪೀಳಿಗೆ ಅನವಶ್ಯಕ ಕಾರಣಗಳಿಗಾಗಿ ಮೊಬೈಲನ್ನ ಬಳಸದೇ ಇರುವುದು ವಿಪರ್ಯಾಸ. ಬೆಳಿಗ್ಗೆ ಎದ್ದೊಡನೆ
                      ಕರಾಗ್ರೇ ವಸತೇ ಲಕ್ಷ್ಮೀ 
                      ಕರಮಧ್ಯೆ ಸರಸ್ವತಿ 
                      ಕರಮೂಲೇ ಸ್ಥಿತೇ ಗೌರಿ 
                      ಪ್ರಭಾತೆ ಕರದರ್ಶನಂ ... ಎನ್ನುವ ಶ್ಲೋಕವನ್ನು ಪಠಣ ಮಾಡುತ್ತಾ ....ನಮ್ಮ ಕೈಗಳನ್ನು ನೋಡಿಕೊಂಡು ಕಣ್ಣುಜ್ಜಿಕೊಂಡು ಹೇಳುತ್ತಿದ್ದ ಕಾಲವೆಲ್ಲಿ, ಇಂದು ಎದ್ದೊಡನೆ ಮೊಬೈಲ್ ಉಜ್ಜುತ್ತಾ ಯಾರು ಗುಡ್ ಮಾರ್ನಿಂಗ್ ಹಾಕಿದ್ದಾರೆ, ಯಾರು ಸ್ಟೇಟಸ್ ಹಾಕಿದ್ದಾರೆ, ಫೇಸ್ಬುಕ್ ನಲ್ಲಿ ಯಾರು  ನಮ್ಮ ಕಮೆಂಟ್ಸ್ ನೋಡಿದಾರೆ ,ನಾವು ಹಾಕಿದ ಸ್ಟೇಟಸ್ ನ್ನು ಎಷ್ಟು ಜನ ವೀಕ್ಷಣೆ ಮಾಡಿದ್ದಾರೆ, ಎನ್ನುವುದರಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದೇವೆ .ಅಲ್ಲದೆ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ಹೋರಾಟ, ಮಹಾತ್ಮಾಗಾಂಧಿ ಜಯಂತಿ,ಗಣರಾಜ್ಯೋತ್ಸವ ನಾಡಹಬ್ಬವಾದ ಕನ್ನಡರಾಜ್ಯೋತ್ಸವ  ಇತ್ಯಾದಿ ಸಂದರ್ಭಗಳಲ್ಲಿ ನಾವು ಹೆಚ್ಚಾಗಿ ನಿದ್ದೆಗೆಟ್ಟಾದರೂ ಸರಿಯೇ..... ನಮ್ಮ ಭಾವಚಿತ್ರಗಳಿಗೆ ವಿಭಿನ್ನ ರೀತಿಯ ಮೆರಗನ್ನೂ ಕೊಟ್ಟು ಸ್ಟೇಟಸ್ ಹಾಕಿ ಸಂಭ್ರಮ ಪಡುತ್ತೇವೆ.ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಪಣವಾಗಿಟ್ಟು ಹಗಲಿರಳು  ದೇಶವಾಸಿಗಳಿಗೋಸ್ಕರ  ನಿದ್ದೆಗೆಟ್ಟು ಸ್ವಾತಂತ್ರ್ಯ  ದೊರಕಿಸಿಕೊಟ್ಟ ಸ್ವಾತಂತ್ರಯೋಧರನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವದರ ಬದಲಾಗಿ ನಮ್ಮ ಪರಿಚಯವನ್ನು ಮಾಡಿಕೊಳ್ಳೋದೇ ಹೆಚ್ಚಾಗಿರುತ್ತೆ ಅಂಥ ಕೆಲವು ಸಲ ಅನ್ನಿಸತ್ತೆ. ಆದರೆ ಅದು ಎಷ್ಟರ ಮಟ್ಟಿಗೆ ಸರಿಯೋ ಗೊತ್ತಿಲ್ಲ .ರಾಷ್ಟ್ರೀಯ ಹಬ್ಬಗಳ ಸಂಭ್ರಮಾಚರಣೆಗೋಸ್ಕರ ನಾವು ಈ ರೀತಿ ಮಾಡ್ತೀದಿವೋ ತಿಳಿಯದು.  ಇದರಿಂದಾಗಿ ನಮ್ಮ ಸಂಸ್ಕೃತಿಯಲ್ಲಾದ ಬದಲಾವಣೆ ಸಹಿಸದೆ ಮನೆಯಲ್ಲಿ ಅಜ್ಜ,ಅಜ್ಜಿಯರು ಕಾಲ ಕೆಟ್ಟೋಯ್ತು ....ಈಗಿನ ಮಕ್ಕಳು ನಮ್ ಮಾತೇ ಕೇಳೋಲ್ಲ, ಎಂದು ಗೊಣಗುತ್ತಾ ಓಡಾಡುತ್ತಿರುತ್ತಾರೆ.ಸಾಲ್ಯಾಗ ಈ ಮಕ್ಕಳು ಏನು ಕಲಿತಾವು ಏನಿಲ್ಲೋ,.....  ಒಳ್ಳೆಯದು, ಕೆಟ್ಟದ್ದು ತಿಳಿಸುತ್ತಾರೋ ಇಲ್ಲೋ..ಎಂದು ಶಾಲೆ,  ಶಾಲೆ ಮಾಸ್ತರನು ಬೈತಾ ಓಡಾಡೋದು ತಪ್ಪಿದ್ದಲ್ಲ .ಎಷ್ಟು ಹೊತ್ತು ನಿದ್ದೆ ಮಾಡಿದ್ರೆ ಆರೋಗ್ಯವಾಗಿರ್ತಾರೆ ಅನ್ನುವ ವಿಷಯವಾದರೂ ಈ ಮಕ್ಕಳಿಗೆ ತಿಳಿಸುತ್ತಾರೋ ಇಲ್ಲೋ ಎಂದು ಗೊಣಗಾಡುತ್ತಾ ಗೊಣಗಾಡುತ್ತಾ ಸಹಜವಾಗಿ ಹಿರಿಯರು ತಾವು ಅನುಭವಿಸಿದ ಅನುಭವವನ್ನು ಮಕ್ಕಳಿಗೆ ಬಿತ್ತರಿಸಲು ಪ್ರಯತ್ನಿಸುತ್ತಾರೆ .ಆದರೆ ವಾಸ್ತವವಾಗಿ ಶಾಲೆಯಲ್ಲಿ ಉತ್ತಮ ಸಂಸ್ಕೃತಿಯನ್ನೇ ಅವರು ಪಡೆಯುತ್ತಾರೆ .ಸಹವಾಸದಿಂದ ಮಕ್ಕಳು ತಮ್ಮ ಅಮೂಲ್ಯವಾದ ಸಮಯವನ್ನು,ಮಾಧ್ಯಮವನ್ನು ಬಳಸುವ ರೀತಿ ಬೇರೆಯಾಗಬೇಕು ಅಷ್ಟೆ .ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ನಿದ್ರೆಯೆಂಬ ಅಮೂಲ್ಯ ಸಂಪತ್ತು ಎಷ್ಟು ಅವಶ್ಯಕ ಎಂಬುದರ ಬಗ್ಗೆ ಅರಿವು ಮೂಡಿಸಬೇಕು.ನೀಡಿ ಪ್ರೌಢಾವಸ್ಥೆಯ ಈ ಹಂತದಲ್ಲೇ ಮಕ್ಕಳಿಗೆ ಹೆಚ್ಚು ತಿಳಿಹೇಳಿದರೆ ವಯಸ್ಕರಾದಾಗ ಅವರಿಗೆ ಅತಿಯಾದ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಅರಿವು ಮನನವಾಗಿ ಅದರ ಬಳಕೆಯಲ್ಲಿ ಎಚ್ಚರಿಕೆ ವಹಿಸಬಹುದು. ನೈತಿಕ ಮೌಲ್ಯಗಳ ಕಾರ್ಯಾಗಾರವಾದ ಶಾಲೆಗೆ ಮಕ್ಕಳನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಅದ್ಭುತ ಶಕ್ತಿಯಿದೆ ಇತ್ತೀಚೆಗೆ ವಾಟ್ಸ್ ಆ್ಯಪ್ ನಲ್ಲಿ ಹರಿದಾಡಿದ ಒಂದು ವೀಡಿಯೊದಲ್ಲಿ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳಿಗೆ ,ವರ್ಗ ಕೋಣೆಯನ್ನೇ ಬಸ್ಸಿನ ಮಾದರಿಯನ್ನಾಗಿ ಮಾಡಿ, ವಿದ್ಯಾರ್ಥಿಗಳಿಂದ ಮೂಕಾಭಿನಯದ ಪಾತ್ರವನ್ನು ಮಾಡಿಸಿದ್ದರು. ಒಬ್ಬ ವಿದ್ಯಾರ್ಥಿ ಡ್ರೈವರಿನ ಅಥವಾ ಚಾಲಕನ ಸ್ಥಾನದಲ್ಲಿ, ಮತ್ತೊಬ್ಬ ಕಂಡಕ್ಟರ್ ಅಥವಾ ನಿರ್ವಾಹಕನ ಸ್ಥಾನ ,ಉಳಿದ ವಿದ್ಯಾರ್ಥಿಗಳು ಪ್ರಯಾಣಿಕರ ಪಾತ್ರದಲ್ಲಿ ಕುಳಿತಿದ್ದರು .ಪ್ರತಿ ಊರು ಬಂದಾಗಲೂ ಬಸ್ ನಿಲ್ಲುವಂತಹ ಒಂದು ಧ್ವನಿಯ ಸಂಕೇತ .ಅಲ್ಲಿ ಅಂಗವಿಕಲರು, ಗರ್ಭಿಣಿಯರು ,ವಯೋವೃದ್ಧರು, ಮಹಿಳೆಯರು ಬಸ್ ಒಳಗೆ ಪ್ರವೇಶಿಸುವ ದೃಶ್ಯ. ಅವರು ಬಂದೊಡನೆ ಆರೋಗ್ಯವಂತ ವ್ಯಕ್ತಿ ತಾನು ನಿಂತುಕೊಂಡು ತನ್ನ ಸೀಟನ್ನು ಅವರಿಗೆ ಬಿಟ್ಟುಕೊಡುವಂತಹ ದೃಶ್ಯಾಧಾರಿತ ಮೂಕಾಭಿನಯದ ಪಾತ್ರಗಳು ಎಂಥವರಿಗೂ ಮನಕರಗಿಸುವಂತಿತ್ತು. ಇಂತಹ ಮೌಲ್ಯಗಳಿಂದ ಮಕ್ಕಳು ಉತ್ತಮವಾದದ್ದನ್ನು ಕಲಿತು ಭವಿಷ್ಯದಲ್ಲಿ ಉನ್ನತ ವಿಚಾರಗಳತ್ತ ತಮ್ಮ ಮನಸ್ಸನ್ನು ಕೇಂದ್ರೀಕರಿಸಲು ಸಹಾಯವಾಗುತ್ತದೆ .ನೈತಿಕ ಪಾಠ ಬೋಧನೆಯನ್ನು ವಿಶಿಷ್ಟವಾದ ಅಭಿನಯ ಕಲಿಕೆಯ ಮೂಲಕ ಕಲಿಸಿದ ಸರ್ಕಾರಿ ಶಾಲೆಯ ಆ ಗುರುವೃಂದಕೆ ನನ್ನ ನಮನಗಳು. ಯಾಕಂದ್ರೆ ಎಷ್ಟೋ ಸಂದರ್ಭಗಳಲ್ಲಿ ದಿನ ನಿತ್ಯದ ಪ್ರಯಾಣದಲ್ಲಿ ಗರ್ಭಿಣಿಯರು, ವೃದ್ಧರು,ಅಂಗವಿಕಲರು  ನಿಂತುಕೊಂಡೇ ಪ್ರಯಾಣ ಬೆಳೆಸುತ್ತಿದ್ದರೂ, ಕನಿಕರವಿಲ್ಲದ ಯುವಪೀಳಿಗೆಯನ್ನು ನಿಸ್ಸಾಹಯಕರಾಗಿ ನೋಡುತ್ತಿದ್ದಂತಹ ದೃಶ್ಯ ಸರ್ವೇಸಾಮಾನ್ಯ. ಅಂಥವರಿಗೆ ಇದೊಂದು ಪಾಠ ಮನಮುಟ್ಟುವಂತಿತ್ತು. ಇಂತಹ ಮೌಲ್ಯಗಳಿಂದ ಕೂಡಿದ ನೈತಿಕ ಪಾಠದಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ವರ್ತನೆಗಳು ರೂಢಿಯಾಗುತ್ತವೆ. 
          ಇತ್ತೀಚೆಗೆ ಯುವಪೀಳಿಗೆ ,ವಯಸ್ಕರು, ತಮ್ಮ ಅಮೂಲ್ಯವಾದ ಆರೋಗ್ಯವನ್ನು ನಿದ್ರಾಹೀನತೆಯಿಂದ ಹಾಳು ಮಾಡಿಕೊಳ್ಳುತ್ತಿದ್ದಾರೆ.ಅದರಲ್ಲೂ  ಪ್ರೇಮದ ಬಲೆಗೆ ಬಿದ್ದಂತವರ ಮಾನಸಿಕ ತೊಳಲಾಟ ಎಷ್ಟು ಹೇಳಿದರೂ ಕಡಿಮೆಯೇ? ಪ್ರತಿಕ್ಷಣವೂ ಅವರು ಮೊಬೈಲ್ ನಲ್ಲಿಯೇ ಇರೋಕೆ ಬಯಸುತ್ತಾರೆ.ಏಕೆಂದರೆ ಬೆಳಗಿನ ಶುಭೋದಯದಿಂದ ಹಿಡಿದು, ತಡರಾತ್ರಿಯ ಶುಭರಾತ್ರಿಯ ಮೆಸೇಜ್ ಹೇಳುವವರೆಗೂ ಅವರಿಗೆ ನಿದ್ರೆಯಿಲ್ಲ .ಅನವಶ್ಯಕವಾಗಿ ಮೆಸೇಜ್ ಹಾಕುತ್ತ ಹಾಕುತ್ತ ನಿದ್ರೆಯೆಂಬ ಅಮೂಲ್ಯ ಬಂಗಾರವನ್ನು ತಳ್ಳಿ ತಡರಾತ್ರಿಯವರೆಗೆ ಚಾಟಿಂಗ್ ಮಾಡುತ್ತಾ ಕಾಲ ಕಳೆಯುತ್ತಿರುವ  ಯುವಪೀಳಿಗೆಯು ಅನಾರೋಗ್ಯದ ಸ್ಥಿತಿ ಎದುರಿಸುತ್ತಿದ್ದಾರೆ.ಇದನ್ನು ಗಮನಿಸುತ್ತಿರುವ ಪೋಷಕರು ಹೀಗೇ ಆದರೆ ನಮ್ಮ ಮಕ್ಕಳ ಆರೋಗ್ಯದ ಗತಿಯೇನು ಎಂದು ಆತಂಕಕ್ಕೆ  ಒಳಗಾಗುತ್ತಿದ್ದಾರೆ.ಮೊದಲೆಲ್ಲ ವಧು ಪರೀಕ್ಷೆಯ ಪರಂಪರೆಯ ಸಂಸ್ಕೃತಿಯಿಂದ ಎರಡು ಕುಟುಂಬಗಳ ನಡುವೆ ಬಾಂಧವ್ಯ ಬೆಸೆದು ವಿವಾಹ ಸಂಸ್ಕಾರದ ಸಮಾರಂಭ ನೆರವೇರುತಿತ್ತು. ಆದರೆ ಈಗ ಮೊಬೈಲ್ ಇರುವುದರಿಂದ ವಧುಪರೀಕ್ಷೆ ತನ್ನ ಸ್ಥಾನ ಕಳೆದುಕೊಂಡಿದೆ. ಪರಸ್ಪರ ಅರಿತುಕೊಂಡು ವೈವಾಹಿಕ ಜೀವನಕ್ಕೆ ಕಾಲಿಡುವ ಹೊಸ ಪರಿಸರ ನಿರ್ಮಾಣವಾಗಿದೆ. ಇದು ಉತ್ತಮವೇ... ಯಾವುದೇ ಆಗಲಿ ಹಿತಮಿತವಾಗಿದ್ದರೆ ಅದಕ್ಕೊಂದು ಅರ್ಥವಿರುತ್ತದೆ.ಇಲ್ಲದಿದ್ದರೆ ಮಾನಸಿಕ ತೊಳಲಾಟಕ್ಕೆ ಇದು ಕಾರಣವಾಗುವುದು. ಅನವಶ್ಯಕ ಚರ್ಚೆಗಳಿಂದಾಗಿ ವಿನಾಕಾರಣ ಕೌಟುಂಬಿಕ ಕಲಹಗಳುಂಟಾಗಿ ಎಷ್ಟೋ ವೈವಾಹಿಕ ಶುಭ ಸಂದರ್ಭಗಳು ಮದುವೆಗೆ ಮುನ್ನವೇ ನಿಂತಂತಹ ಉದಾಹರಣೆಗಳು ಸಾಕಷ್ಟಿವೆ.
               ಶಿಸ್ತಿನ ಜೀವನವಿದ್ದಾಗ ನೆಮ್ಮದಿಯ ನಿದ್ರೆ ಸಾಧ್ಯ. ದಿನನಿತ್ಯ ರೈತರು, ನೇಕಾರರು, ಶ್ರಮಿಕರು ,ಇತ್ಯಾದಿಯಾಗಿ ದೇಹ ದಂಡಿಸಿ ಕೆಲಸ ಮಾಡುವ ಕೆಲಸಗಾರರು ಮತ್ತು ಬೌದ್ಧಿಕ ಶ್ರಮವಹಿಸಿ ದುಡಿಯುವ ಕೆಲಸಗಾರರು, ದಿನವಿಡೀ ದುಡಿದು ವಿಶ್ರಾಂತಿಗಾಗಿ ಮಲಗಿದಾಗ, ನಿದ್ರಾದೇವಿ ಹಾಗೆಯೇ ಅವರನ್ನು ಆವರಿಸಿ ನೆಮ್ಮದಿಯ ನಿದ್ರೆ ಮಾಡುತ್ತಿದ್ದರೆ ಪ್ರತಿ ಬೆಳಗು ಅವರಿಗೆ ನವಚೈತನ್ಯ ನೀಡುತ್ತದೆ .ಅದಕ್ಕೆ ತಿಳಿದವರು ಹೇಳೋದು.... ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ರೆ ಎಂದು.ಅದೇ ರೀತಿ ರಾಷ್ಟ್ರದ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದ ನಾಯಕರು ಅವಿರತ ಶ್ರಮದಿಂದ ಶಿಸ್ತಿನ ಜೀವನಕ್ಕನುಗುಣವಾಗಿ ವಿಶ್ರಾಂತಿ ತೆಗೆದುಕೊಂಡಾದ ಮಾತ್ರ ನಿಯಮಿತ ಜೀವನ ನಡೆಸಲು ಸಾಧ್ಯ. ಅಂತಹ ಶಿಸ್ತಿನ ಜೀವನ ಅವರನ್ನು ಹಲವಾರು ಸಾಧನೆಗಳತ್ತ ಎಳೆದೊಯ್ಯುವ ಚೈತನ್ಯ ನೀಡುತ್ತದೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ರಾಷ್ಟ್ರದ ಗೌರವವನ್ನು ಉತ್ತುಂಗಕ್ಕೇರಿಸಿದ ಹಲವಾರು ಸಾಧಕರು .ಅವರು ಕ್ರೀಡಾಪಟು, ರಾಜಕಾರಿಣಿ, ವಿಜ್ಞಾನಿ, ಸಾಹಿತಿ, ಬರಹಗಾರರು, ಕವಿಗಳು, ಶಿಕ್ಷಕರು, ರಂಗಭೂಮಿಕಲಾವಿದರು, ಪತ್ರಿಕೋದ್ಯಮಿಗಳು  ಮುಂತಾದ ಯಾವುದೇ ಕ್ಷೇತ್ರದವರೇ ಆಗಲಿ, ತಮ್ಮ ಕಾರ್ಯಸಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನೆಮ್ಮದಿಯ ಸುಖನಿದ್ರೆಯಿಂದ ಸಾಧನೆಯ ಉತ್ತುಂಗಕ್ಕೇರಿದ್ದು ಶ್ಲಾಘನೀಯ.ಇಂದು ಮೊಬೈಲ್ ಜಗತ್ತನ್ನೇ ಕಿರಿದಾಗಿಸಿದೆ .ವಿಶ್ವದ ನಾನಾ ರಾಷ್ಟ್ರಗಳ ಸಂಪರ್ಕವನ್ನು ಕ್ಷಣಮಾತ್ರದಲ್ಲಿ ಕಲ್ಪಿಸುತ್ತದೆ .ಜಗತ್ತಿನ ಜ್ಞಾನ ಭಂಡಾರವನ್ನೇ ತನ್ನ ಮಡಿಲಲ್ಲಿ ಗೂಗಲ್ ತೋರಿಸುತ್ತಿದೆ.ಜ್ಞಾನಕ್ಕೆ ಬಳಕೆಯಾಗಬೇಕಾದ ಮೊಬೈಲನ್ನು ಅನವಶ್ಯಕ ಚರ್ಚೆಗಳಿಗೆ ಬಳಸಿಕೊಂಡು ನಿರ್ಮಲ ಮನಸ್ಸನ್ನು ಗೊಂದಲದ ಗೂಡಾಗಿ ಮಾಡಿಕೊಂಡು ನಿದ್ರೆಯೆಂಬ ಅಮೂಲ್ಯ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಅರಿವು ನಮಗಿಲ್ಲ.ಸಂಪತ್ತನ್ನು ಸಂಪಾದಿಸಬಹುದು, ಆದರೆ ನಿದ್ರೆಯನ್ನು ಸಂಪಾದಿಸಲು ಸಾಧ್ಯವಿಲ್ಲ. ಅನವಶ್ಯಕ ನಿದ್ರಾಮಾತ್ರೆಗೆ ಬಲಿಯಾಗಿ ಗೋಳಾಡುತ್ತಿರುವ ದೃಶ್ಯಗಳಿಂದು ಸರ್ವೇ ಸಾಮಾನ್ಯ. ವೈದ್ಯರ ಬಳಿ ಬರುವ ಎಷ್ಟೋ ರೋಗಿಗಳು ನನಗೆ ನಿದ್ರೆಯೇ ಬರುತ್ತಿಲ್ಲ, ಏನಾದರೂ ಮಾಡಿ ಡಾಕ್ಟ್ರೆ ಅಂತಾನೇ ಬರುತ್ತಾರೆ. ಅದಕ್ಕಿರುವ ಒಂದೇ ದಾರಿಯೆಂದರೆ ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದು. ದೇಶ ಕಂಡ ಅದ್ಭುತ ವ್ಯಕ್ತಿಗಳ ಜೀವನ ಯಶೋಗಾಥೆಗಳ ಸಾಧನೆಯ ಸಾಕಷ್ಟು ಪುಸ್ತಕಗಳಿವೆ.ಸಾಹಿತ್ಯಿಕ ಕ್ಷೇತ್ರದಲ್ಲಿ ನಮ್ಮ ಕನ್ನಡ ಭಾಷೆ ೮ ಜ್ಞಾನಪೀಠ ಪ್ರಶಸ್ತಿಗಳನ್ನು ಬಾಚಿ ತಬ್ಬಿಕೊಂಡಿದೆ .ತಮ್ಮ ಕಾರ್ಯಸಾಧನೆಯಲ್ಲಿ ಸತತ ಪರಿಶ್ರಮದಲ್ಲಿ ತೊಡಗಿ ಜ್ಞಾನಪೀಠ ಪ್ರಶಸ್ತಿಗೆ ಭಾಜನವಾದ ಕೃತಿಗಳು ನಮಗೆ ಸ್ಫೂರ್ತಿಯಾಗಬೇಕು. ಅತ್ಯುತ್ತಮ ಪುಸ್ತಕಗಳನ್ನು ಓದುವ ಹವ್ಯಾಸ, ನಿಯಮಿತ ವ್ಯಾಯಾಮ ,ಸಹವರ್ತಿಗಳೊಂದಿಗೆ ಮಂದಹಾಸದ ಮಾತುಕತೆ ,ನಮ್ಮ ಮನಸ್ಸನ್ನು ಅನವಶ್ಯಕ ವಿಚಾರಗಳಿಂದ ದೂರ ಮಾಡಿ ಸುಖನಿದ್ರೆಗೆ ತಳ್ಳುತ್ತದೆ.ಕೆಲವು ಕುಟುಂಬಗಳಲ್ಲಿ ಪೋಷಕರೇ ಅತಿ ಹೆಚ್ಚಾಗಿ ಮೊಬೈಲ್  ಬಳಕೆ ಮಾಡುವುದನ್ನು ಗಮನಿಸುತ್ತಿದ್ದಂತಹ ಮಕ್ಕಳು ಅವರನ್ನು ಅನುಕರಣೆ ಮಾಡಿ ತಾವೂ ಸಹ ಮೊಬೈಲ್ ಬಳಕೆ ಮಾಡುತ್ತಾರೆ.ಪೋಷಕರು ಬುದ್ಧಿ ಹೇಳಲು ಹೋದಾಗ ನೀವೇ ಯಾವಾಗ್ಲೂ ಮೊಬೈಲ್ ಉಪಯೋಗಿಸ್ತೀರಾ ನಿಮಗೆ  ತೊಂದ್ರೆ ಆಗಲ್ವಾ .....? ಎಂದು ಕೇಳುವ ಈಗಿನ ಮಕ್ಕಳ ಪ್ರಶ್ನೆಗೆ ಪೋಷಕರಲ್ಲಿ ಉತ್ತರವಿಲ್ಲ. 
                  ಬಂಗಾರವೆಂಬ ಈ ಲೋಹವನ್ನು ಹೆಚ್ಚಾಗಿ ಹೊಂದಿದ್ದರು ಕಷ್ಟ, ಕಡಿಮೆ ಇದ್ದರೆ ಮನಸ್ಸಿಗೆ ಅಶಾಂತಿ.ಏಕೆಂದರೆ ಹೆಚ್ಚಾಗಿ ಖರೀದಿಸಿದ ಈ ಲೋಹಕ್ಕೆ ಲೆಕ್ಕ ಕೊಡಬೇಕಾಗುತ್ತದೆ. ಅದೇ ರೀತಿ ನಿದ್ರೆಯೂ ಸಹ ಹಿತಮಿತವಾಗಿರಬೇಕು ಅತಿಯಾಗಿ ನಿದ್ರೆ ಮಾಡಿದರೆ ಯಾವುದೋ ಕಾಯಿಲೆಗೆ ಪೀಡಿತನಾಗಿದ್ದಾನೆ ಎಂದರ್ಥವಾಗುತ್ತದೆ. ಇಲ್ಲವೇ 'ಸೋಂಬೇರಿ' ಎಂಬ ಹಣೆಪಟ್ಟಿ ಕಟ್ಟುತ್ತಾರೆ.ಅದಕ್ಕಾಗಿ ಬಂಗಾರವೆಂಬ ಈ ಲೋಹ ಎಷ್ಟು ಅಮೂಲ್ಯವೋ ಅಷ್ಟೇ ಅಪಾಯಕಾರಿ. ಅದೇ ರೀತಿ ದಣಿದ ದೇಹಕ್ಕೆ ಎಷ್ಟು ಅವಶ್ಯಕವೋ ಅಷ್ಟು ನಿದ್ರೆ ಮಾತ್ರ ಬೇಕು .ಮಾನವನ ಜೀವನ ನೀರ ಮೇಲಿನ ಗುಳ್ಳೆಯಂತೆ. ಈ ಕ್ಷಣ ಕಂಡದ್ದು ಮರುಕ್ಷಣ ಕಾಣದೆ ಒಡದು ಹೋಗುವಂತಹದ್ದು. ನಾವು ಎಷ್ಟೇ ಗಳಿಸಿದರೂ, ಎಷ್ಟೇ ಶ್ರೀಮಂತರಾಗಿದ್ದರೂ, ಎಷ್ಟೇ ಶಿಸ್ತಿನ ಜೀವನ ನಡೆಸಿದ್ದರೂ, ಸಹ ಕೆಲವು ಸಂದರ್ಭದಲ್ಲಿ ವಿಧಿ ನಮ್ಮ ಜೀವನದ ಜೊತೆ ಆಟವಾಡುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಇತ್ತೀಚೆಗೆ ವಿಶ್ವದ ಜನರ ಮನಸ್ಸನ್ನು ಗೆದ್ದಂತಹ ಶ್ರೇಷ್ಠ ನಟ ನಮ್ಮ ಕನ್ನಡ ನಾಡಿನ ಡಾಕ್ಟರ್ ರಾಜ್ ಕುಮಾರ್ ರವರ ಪುತ್ರನಾದ ಪುನೀತ್ ರಾಜ್ ಕುಮಾರ್ ರವರ ಅಕಾಲಿಕ ಮರಣ ಎಂಥವರ ಹೃದಯವನ್ನು ಕದಡುವಂತಿತ್ತು.ಎಷ್ಟೋ ವಯೋವೃದ್ಧರೂ, ಮಹಿಳೆಯರು,  ಆ ಭಗವಂತ ನಮ್ಮ ಆಯಸ್ಸನ್ನಾದರೂ ಈ ನಟನಿಗೆ ಕೊಡಬಾರದಾಗಿತ್ತಾ? ನಾವಿದ್ದಾದ್ರೂ ಏನು ಸಾಧಿಸುವುದಿದೆ? ಹಣ್ ಣ್ಣಾದ ಈ ಜೀವಗಳು ಭೂಮಿಗೆ ಭಾರ.ಇಂತಹ ಪ್ರತಿಭಾನ್ವಿತ ನಟ, ಪರೋಪಕಾರಿ, ಅನಾಥಾಶ್ರಮಗಳನು, ವೃದ್ಧಾಶ್ರಮಗಳನು  ಸ್ಥಾಪಿಸಿದಂತಹ, ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾದಂತಹ ವ್ಯಕ್ತಿ ನೂರ್ಕಾಲ ಬದುಕಿ ಬಾಳಬೇಕಾಗಿತ್ತು  ಎಂದು ಹಂಬಲಿಸಿ ಅಳುತ್ತಿರುವ ಎಷ್ಟೋ ರೋಧನಕಾರಿ ವಿಡಿಯೋ ಗಳು ಈಗಲೂ ಮನಕಲಕುತ್ತಿವೆ.ಇದ್ದೂ ಇಲ್ಲದಂತಿರುವ ಜನರಿಗಿಂತ ಮರಣದಲ್ಲೂ ಅಮರತ್ವವನ್ನು ಕಂಡಂತಹ ಇಂತಹ ನಟನ ಹಾಗೆ ನಾವು ಉದಾತ್ತ ವಿಚಾರಗಳನ್ನು ಹೊಂದಿ ಶ್ರೇಷ್ಠ ಜೀವನವನ್ನು ನಡೆಸೋಣ.
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಇಲಕಲ್ಲ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹರಕೆ ನಮ್ದು (ಕವಿತೆ) - ತುಳಸಿದಾಸ ಬಿ. ಎಸ್.

ಭೂಮಿ ತಾನು ಸುತ್ತಿದಂತೆ ಬೆಳಗೊ ಸೂರ್ಯನ
ಸ್ವಾಮಿ ಕೇಳು ಕುರಿಯ ಜೊತೆ ಸುತ್ತುತಿರುವೆವು
ತಮವ ಕಳೆದು ಬೆಳಕನೀವ ಸೂರ್ಯನಂತೆಯೇ
ನಮ್ಮ ಬಾಳು ಬೆಳಗೋ ಕುರಿ ನಮಗೆ ದೇವರು

ಬಯಲಿನಲ್ಲೇ ಕುರಿಯ ಜೊತೆ ನಮ್ಮ ನಿದ್ದೆಯು
ಎಲ್ಲಿ ರಾತ್ರಿ ಅಲ್ಲೆ ನಮ್ಮ ವಾಸು ಸ್ಥಾನವು
ಬೆಳಕೆ ಇರದು ರಾತ್ರಿ ಪೂರ್ತಿ ಹುಳದ ಕಾಟವು
ಬೇಡವಣ್ಣ ಇಂತ ಬದುಕು ನಿತ್ಯ ನರಕವು

ಊರು ಬೇರೆ ಯಾರ ಹೊಲ ಒಂದು ತಿಳಿಯದು
ಉಗಿತ ಹೊಡೆತ ತಿಂದು ಕುರಿಗೆ ಕಾವಲಿರುವೆವು
ಕುರಿಯ ಹಿಂಡಿನೊಡನೆ ಸಾಗಿ ಗಟ್ಟಿಗೊಂಡೆವು
ಹುಟ್ಟಿದೂರು ದೂರವಿರಲು ನೊಂದು ಕೊಂಡೆವು

ಊಟ ನೀರು ಅಷ್ಟಕ್ಕಷ್ಟೆ ಮಳೆಗೆ ನೆನೆದೆವು
ಗುಡುಗು ಸಿಡಿಲಿಗಂಜದೇನೆ ಗಂಜಿ ಕುಡಿದೆವು
ಕಾಲ ತುಂಬ ಗೊಬ್ಬೆ ಬಂದ ನೋವ ಸಹಿಸುತ
ಪ್ರೀತಿಯಿಂದ ಕುರಿಗೆ ರಕ್ಷೆ ನೀಡುತಿರುವೆವು

ಹಳ್ಳ ಈಜಿ ಬರದೆ ಕುರಿಯು ಮುಳುಗಿದಾಗಲೂ
ಸಿಡಿಲ ಬಿದ್ದು ಕಾಯ್ದ ಕುರಿಯು ಸತ್ತು ಬೀಳಲು
ಬಿದ್ದ ಪೆಟ್ಡಿನೇಟಿನಿಂದ ಏಳಲಾರೆವು
ಹರಕೆ ನಮ್ದು ಬೀರಪ್ಪ ಕುರಿಯನುಳಿಸೆಯ
    - ತುಳಸಿದಾಸ ಬಿ ಎಸ್ ಶಿಕ್ಷಕರು, ರಾಯಚೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕನಸಲಿ ಬರಬೇಡ ಅವ್ವ ಬೈತಾಳೆ (ಕವಿತೆ) - ನಾಗೇಶ್ ಎಸ್.ಆರ್.ಸಿ.

ತಂಪಾದ ಗಾಳಿ ಬಿಸುತ್ತಿತ್ತು,ಆ ರಾತ್ರಿ ಸಂಜೆಯಲಿ
ನೀ ಸಿಕ್ಕೆ ಮುಸಂಜೆ ವೇಳೆಲಿ
ರಾತ್ರಿಯಿಡಿ ಕನಸಲಿ ಕನವರಿಕೇ ನಿನ್ನ ರೂಪರಾಶಿ
ಅವ್ವ ಕಾಫಿ ತರುವಾಗ ಕೇಳ್ಯಾಳು
ಕನಸಲಿ ಬರಬ್ಯಾಡ ಅವ್ವ ಬೈತಾಳೆ....

ನಗುವ ರೂಪಶಿ
ಕೋಗಿಲೆಯ ಕಂಠಸಿರಿ
ನವಿಲೆಯ ನಾಟ್ಯ ಮಯೂರಿ
ನೀ ನಿಲ್ಲದೆ ನಡೆಯಲ್ಲ ನನ್ನ ಜೀವನದ ದಾರಿ
ತುಸು ಬಾಗಿಲ ಬಳಿ ಇಣುಕಿ ಬರುತ್ತಿಯಾ ಅವ್ವ ಇರುತ್ತಾಳ
ಕನಸಲಿ ಬರಬ್ಯಾಡ ಅವ್ವ ಬೈತಾಳೆ...

ಸಿಕ್ಕಾಗೆಲ್ಲ ಸಿಹಿ ಮುತ್ತ ನೀಡುತಿ
ನನ್ನ ಕಂಡಾಗ ನಗುವಿನ ಹೊಳೆ ಸುರಿಸುತೀ
ಮನಸಿನ್ಯಾಗ ಸೇರಿ ಹೋಗತಿ
ಕನಸಿನ್ಯಾಗ ಬಂದ ಕಾಡತಿ
ಚಾಮುಂಡಿ ಬೆಟ್ಟದ ಎತ್ತರ
ನಿನ್ನ ಮುತ್ತಿನ ಸಿಹಿ
ಹತ್ತಿ ಬಂದೆ ಸಿಕ್ಕಿತ್ತು ಜೇನು ಸಿಹಿ
ದಿನರಾತ್ರಿ ಕನಸಲಿ ಬರತಿ
ಕನಸಲಿ ಬರಬ್ಯಾಡ ಅವ್ವ ಬೈತಾಳೆ.
- ನಾಗೇಶ್ ಎಸ್.ಆರ್.ಸಿ. ಚಂದಾಪುರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಖಾಲಿ ಜೀವನ (ಕವಿತೆ) - ಮೊಹಮ್ಮದ್ ಅಜರುದ್ದೀನ್.

ಖಾಲಿ ಜೀವನ ನನ್ನ ಯೌವ್ವನ  
ಯಾರಿಗೆ ಹೇಳಲಿ ನನ್ನ ನೋವನ್ನ
ಸುಸ್ತಾಗಿ ಹೋಗಿದೆ ನನ್ನ ಜೀವನ  
ಈ ಪ್ರೀತಿ ಎಂಬ ಪಯಣ ||

ಮನಸ್ಸಿನ ಅವಳ ಮೌನ  
ಕೆಡಿಸುತ್ತಿದೆ ನನ್ನ ಜೀವನ
ಬರೆಯುವೆ ಪ್ರತಿದಿನ ಕವನ
ಇದೇ ನನ್ನ ಪ್ರೀತಿಯ ಯೌವ್ವನ ||

ಎಷ್ಟಂತ ನೆನೆಯಲಿ ನಿನ್ನ
ಕಣ್ಮೀರು ಬರುವ ಮುನ್ನ
ಬೇಗ ಹೇಳು ಪ್ರೀತಿಯ ಚಿನ್ನ  
ನಾ ನಿನ್ನ ಮರೆಯುವ ಮುನ್ನ ||  

 ಪ್ರೀತಿಗಾಗಿ ಹೂವಾ ಕೊಟ್ಟೆ  
ಹೂವಿನಲ್ಲಿ ನನ್ನ ಮನಸ್ಸು ಇಟ್ಟೆ
ಆ ಮನಸ್ಸು ನಿನಗಾಗಿ ಬಿಟ್ಟೆ  
ನಿನ್ನ ಹಿಂದೆ ಹೋಗಿ ನಾನು ಕೆಟ್ಟ ||  



- ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ
ಅಕ್ಕಿಹೆಬ್ಬಾಳು ಗ್ರಾಮ
ಕೃಷ್ಣರಾಜಪೇಟೆ ತಾಲ್ಲೂಕು
ಮಂಡ್ಯ ಜಿಲ್ಲೆ-571605.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸೂರ್ಯಾಸ್ತ (ಕವಿತೆ) - ಆಶಾ.ಎಲ್.ಎಸ್, ಶಿವಮೊಗ್ಗ.

ಬಾನಂಗಳದಿ ನೋಡಲು ಮನಮೋಹಕವು
ನೈಸರ್ಗಿಕವಾದ ಸೂರ್ಯಾಸ್ತಮಾನವು
ಭೂಮಿಗೆ ಬೆಳಕ ಚೆಲ್ಲಿ ತನ್ನ ಕಾರ್ಯ ಮುಗಿಸಿ
ಹೊರಟಿಹ ಆ ಭಾಸ್ಕರನು 
ನಿತ್ಯ ಕರ್ಮ ಯೋಗಿ ಈ ರವಿಯು
ಪೃಥ್ವಿಯ ಮತ್ತೊಂದೆಡೆಗೆ ಕಾಯಕ ಮಾಡುವನು
ಬೆಳಕನು ಚೆಲ್ಲುತ ಸಕಲ ಜೀವಿಗಳಿಗೆ ಆಸರೆಯು
ಸೌರವ್ಯೂಹಕೆ ಬೆಳಕು ಚೆಲ್ಲುವನು
ನಿಸರ್ಗಕೆ ಪುಷ್ಠಿ ನೀಡುವನು ಈ ದಿನಕರನು
ಸಕಲ ಜೀವರಾಶಿಗೆ ಅವಶ್ಯವು ನೀನು
ಮೂಡಣದಿ ಆಗಮಿಸಿ ಪಡುವಣದಲಿ ವಿರಮಿಸುವನು
ಕಿರಣಗಳ ಪಸರಿಸುವನು ಸದಾಕಾಲವು
ಭುವಿಗೆ ಈ ಸೂರ್ಯನ ಸೇವೆ ನಿರಂತರವು
ನಿಸ್ವಾರ್ಥ ಸೇವೆಯಲಿ ತೊಡಗಿಹನು
🙏🏻ನಿನಗಿದೋ ಸರ್ವರ ನಮನಗಳು🙏🏻
- ಆಶಾ.ಎಲ್.ಎಸ್, ಶಿವಮೊಗ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಬೇಕು ಸ್ವರಾಜ್ಯ! (ಕವಿತೆ) - ಅರಬಗಟ್ಟೆ ಅಣ್ಣಪ್ಪ.

ಸ್ವಾತಂತ್ರ್ಯವಾಯಿತು! ಬೇಕು ಸ್ವರಾಜ್ಯ
ನಿನ್ನನು ನಾನು ನನ್ನನು ನೀನು
ನನ್ನನೆ ನಾನು ಅರಿಯುವ ರಾಜ್ಯ

ನಿಂತ ಮಣ್ಣದು ಕುಡಿವ ನೀರದು
ಕಾಣುವ ಗಿರಿಯು ಕಾನನ ಕಣಿವೆ
ನನ್ನದೆನ್ನುತ ಪೊರೆಯುವ ರಾಜ್ಯ
ಹಕ್ಕಿಗಿಂತ ಕರ್ತವ್ಯವೇ ಪೂಜ್ಯ

ಡೊಳ್ಳು ನನ್ನದೆ ಶಂಖವು ನನ್ನದೆ
ಜಾಗಟೆ ಘಂಟೆ ಕಹಳೆಯೂ ನನ್ನದೆ
ಶಬ್ದಶಬ್ದದಲು ಓಂಕಾರವೆ ವೇದ್ಯ
ಅದುವೆ ನನ್ನ ಕನಸಿನ ರಾಜ್ಯ

ಕನ್ನಡ ಹಿಂದಿ ತಮಿಳು ಮರಾಠಿ
ಕೊಡವ ಕೊಂಕಣಿ ತುಳು ಮಲೆಯಾಳಿ
ಬಿಡಿ ಬಿಡಿ ಕೂಡಿ ಹಾರವಾಗುತ ಏರಿ
ಸಿರಿನುಡಿ ಘರ್ಜನೆ ಸ್ವರಾಜ್ಯ ಕೇಸರಿ

ಕಾಗದ ದಾಖಲೆ ಖಾನೇಷುಮಾರಿ
ಪತ್ರ ಸಹಿಗಳ ವಿಲೇವಾರಿ
ನನ್ನ ನೆಲಕಿದು ಸಾಕಾಗದು ಕೇಳು
ಜನಮನ ಸ್ವರಾಜ್ಯ ಭಜಿಸುತ ಏಳು

ತಿಂಬರ ಬಡಿದು ಅಂಬರ ಸೆಳೆದು
ದುಡಿವ ಮಕ್ಕಳಿಗೆ ಹರಿಸಿ ಹೊಳೆಯನು
ಧನಮದ ಬಿಸುಟು ಅಜ್ಞಾನವ ಸುಟ್ಟು
ಹೊಳೆವ ಕಂಗಳಲಿ ನನಸಾಗಲಿ ಸ್ವರಾಜ್ಯ

ಆ ಮತ ಈ ಮತ ಲಕ್ಷ ಜಾತಿ
ಮರೆತೆಲ್ಲವನು ಸೇರುತ ಭಾರತಿ
ಮನವೇ ನೆಲವನು ಬೆಸೆಯುವ ರಾಜ್ಯ
ಆಳುತ ಬಾಳುತ ಒಂದಾಗುವ ರಾಜ್ಯ

'ದೇಶ ನನ್ನದೆನ್ನವನೆದೆ ಸುಡುಗಾಡು..'
ಕವಿವಾಣಿಯೇ ನಮಗೆ ಹೆಮ್ಮೆಯ ಕೋಡು
ಸ್ವತಂತ್ರರಾದೆವು! ಬೇಕು ಸ್ವರಾಜ್ಯ
ನಿನ್ನಲಿ ನಾನು ನನ್ನಲಿ ನೀನು
ತನ್ನನೆ ತಾನು ಆಳುವ ರಾಜ್ಯ
   ~ ಅರಬಗಟ್ಟೆ ಅಣ್ಣಪ್ಪ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಶನಿವಾರ, ಡಿಸೆಂಬರ್ 18, 2021

ಕುಡಗುಂಟಿ ಗವಿಸಿದ್ದಪ್ಪ - ಯುವ ಸಾಹಿತಿ ಸಾಧಕರ ಪರಿಚಯ ಸರಣಿ - ೦೧

ಯುವ ಸಾಹಿತಿ ಶ್ರೀ ಕುಡಗುಂಟಿ ಗವಿಸಿದ್ದಪ್ಪ (ಕುಗ) ಅವರ ಕಿರು ಪರಿಚಯ ಅವರದ್ದೇ ಮಾತುಗಳಲ್ಲಿ.
ನೈಜ ನಾಮ: ಗವಿಸಿದ್ದಪ್ಪ 
ಪಿತೃ: ಬಸವರಾಜ ಆಡೂರ
ಮಾತೃ: ಪ್ರೇಮಾವತಿ
ಜನನ: 12/05/1992
ಮನೆ: "ಬಸವಪ್ರೇಮ"
ಜನ್ಮ ಸ್ಥಳ: ಕುಡಗುಂಟಿ
ತಾ: ಯಲಬುರ್ಗಾ  ಜಿ: ಕೊಪ್ಪಳ
ಪೋ: ಚಿಕ್ಕಮ್ಯಾಗೆರಿ
ಕಾವ್ಯನಾಮ: ಯುವಚ0ದ್ರ
ಶಿಕ್ಷಣ: ಬಿ.ಎಸ್ ಸಿ. ಬಿ.ಎಡ್.ಎಂ.ಎಸ್ ಸಿ.
ವೃತ್ತಿ: ಪಿಯು ಸೈನ್ಸ್ ಕಾಲೇಜ್ ಉಪನ್ಯಾಸಕರು.
ಹವ್ಯಾಸ: ಬರವಣಿಗೆ, ಓದು.
ಬರವಣಿಗೆ ಪ್ರಕಾರ: ದೇಶ ಭಾಷೆ ಸಂಸ್ಕೃತಿ, ಪರಿಸರ, ಪ್ರೀತಿ ಪ್ರೇಮ,
 ಭಾವನೆಗಳ ಮಿಲನ, ಆಚರಣೆ ಇತ್ಯಾದಿ.
ಸೇವೆ: ಸಮಾಜಿಕ ನಿಸ್ವಾರ್ಥ ಸೇವೆ ಸಲ್ಲಿಸುವುದು.  ಎಲೆಮರೆ ಕಾಯಿಯಂತಿರುವ ಯುವ ಬರಹಗಾರರನ್ನು ಗುರುತಿಸುವುದು ಮತ್ತು ವೇಧಿಕೆಗೆ ಕರೆತಂದು ಪೋಷಿಸಿ ಬೆಳೆಸುವುದು.  ಸಮಾಜದಲ್ಲಿ ಕನ್ನಡ ಸಾಹಿತ್ಯ ಉಳುವಿಗೆ ಮತ್ತು ಸಮೃದ್ಧಿಗೆ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸುವುದು. ಹೊರನಾಡು, ಗಡಿನಾಡು, ಕರುನಾಡು ಕನ್ನಡಿಗರನ್ನು ಒಟ್ಟುಗೂಡಿಸಿ ಪ್ರತಿದಿನ ಪ್ರತಿ ಕ್ಷಣ ಕನ್ನಡ ಉತ್ಸವ ಆಚರಿಸುವುದು. ಎಲ್ಲರೂ ಸೇರಿ ಕನ್ನಡಮ್ಮನ್ನ ತೇರು ಎಳೆಯುವುದು.  

ವಿಳಾಸ:  ಗವಿಸಿದ್ದಪ್ಪ ಆಡೂರ (ಕುಡಗುಂಟಿ ಗವಿಸಿದ್ದಪ್ಪ)
             ಬಸವಪ್ರೇಮ ನಿಲಯ 
             ಸಮುದಾಯ ಭವನ ಹತ್ತಿರ 
            ದುರ್ಗಾ ದೇವಿ ದೇವಸ್ಥಾನ ಹಿಂದೆ 
             ಕುಡಗುಂಟಿ 
            ತಾ. ಯಲಬುರ್ಗಾ ಜಿ.ಕೊಪ್ಪ ಪಿನ್ 583236  
             ಮೊ. 9380609247
             ವಾಟ್ಸಾಪ್ 9886253134

ಸಾಹಿತ್ಯ ಕೃಷಿಯಲ್ಲಿನ ದುಡಿಮೆ:
1. "ನಿಸರ್ಗದ ಒಡಲು ತಾಯಿಯ ಮಡಿಲು" ಕವನ ಸಂಕಲನ - 2017 ರಲ್ಲಿ ಪ್ರಕಟಣೆ.ಪುಸ್ತಕ ರೂಪದಲ್ಲಿ
2. "ಕನ್ನಡ ನುಡಿಸಿರಿ" ಕವಸಂಕಲನ - 2018 ರಲ್ಲಿ  ಪ್ರಕಟಣೆ ಪಿಡಿಎಫ್ ರೂಪದಲ್ಲಿ
3. "ಬರವಣಿಗೆಗಳ ಪರಿಣಾಮ" ಕವನ ಸಂಕಲನ - 2019 ರಲ್ಲಿ  ಪ್ರಕಟಣೆ.ಪಿಡಿಎಫ್ ರೂಪದಲ್ಲಿ
4."ಮಾನಸಿಕ ಮನಸ್ಥಿತಿಗಳು" ಕವನ ಸಂಕಲನ – 2020 ಪ್ರಕಟಣೆ.ಪಿಡಿಎಫ್ ರೂಪದಲ್ಲಿ
5.   “ಕನ್ನಡ ಕಂಪನ” ಕವನ ಸಂಕಲನ – 2021 ರಲ್ಲಿ ಪ್ರಕಟಣೆ ಪಿಡಿಎಫ್ ನಲ್ಲಿ
6. ‘ಬೇಡವಾಯಿತೆ ಹೆತ್ತವರ ಪ್ರೀತಿ’ ರುಬಾಯಿ ಕವನ ಸಂಕಲನ 2021 ಡಿಸೆಂಬರ್ ರಲ್ಲಿ ಪ್ರಕಟಣೆ ಪಡಿಎಫ್ ನಲ್ಲಿ.

ಪ್ರಕಟಣೆಗೆ ಸಿದ್ದತೆ ಆದ ಕೃತಿಗಳು 
  * ಮೈನಾನ ಮೌನದ ಮಾತುಗಳು(ಕೃತಿ)
  * ವಿಶ್ವಮಾನ್ಯರ ನುಡಿ ಮುತ್ತುಗಳು(ಸಂಗ್ರಹ ಕೃತಿ) -  45 ಸಾವಿರಕ್ಕೂ ಹೆಚ್ಚು ನುಡಿಗಳ ಸಂಗ್ರಹಣೆ.

ಸಿದ್ದಗೊಳ್ಳುವ ಪುಸ್ತಕಗಳು
  * ಮನಸೇಂಬ ಕುದುರೆಯನ್ನೇರಿ (ಕಥೆ)
  * ಜನನಿ ಜನ್ಮ(ವೈಜ್ಞಾನಿಕ ಕೃತಿ)
   
ಕವಿಗೋಷ್ಠಿಯಲ್ಲಿ ಭಾಗಿ: 
   * ತಾಲೂಕು ಮಟ್ಟದ ಕವಿಗೋಷ್ಠಿ -ಮುತ್ತರಗಿ - 2014.
   * ಉತ್ತರ ಕನ್ನಡ ಜಿಲ್ಲಾ ಕವಿಗೋಷ್ಠಿ - ಕುಮಟಾ 2014
   * ಜಿಲ್ಲಾ ಮಟ್ಟದ ಕವಿಗೋಷ್ಠಿ - ಕನ್ನಡ ಸಾಹಿತ್ಯ    
      ಪರಿಷತ್ ಬೆಂಗಳೂರ  -  2015.
   * ಕೊಪ್ಪಳ ಜಿಲ್ಲಾ ಸಾಹಿತ್ಯ ಉತ್ಸವ - 2015.
   * ಬೆಂಗಳೂರ ವಿಶ್ವವಿದ್ಯಾಲಯದಲ್ಲಿ - ಕ್ಯಾ0ಪಸ್ ಕವಿಗೋಷ್ಠಿ ಮತ್ತು ಇತರೆ
           3 ಕವಿಗೋಷ್ಠಿ - 2016 ಮತ್ತು 2017 ರಲ್ಲಿ.
• ಕೊಪ್ಪಳ ಜಿಲ್ಲಾ ಯುವ ಬರಹಗಾರ ಒಕ್ಕೂಟ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನಡೆದ ಕವಿ ಗೋಷ್ಠಿ -2020

ಪ್ರಶಸ್ತಿ ಪತ್ರಗಳು
*ಕಲಿಕಾ ಸಾಧನೆ ಪ್ರಶಂಸಾ ಪತ್ರ - 2003-04
*ಭಾರತ ಸೇವಾದಳ ಪ್ರಶಸ್ತಿ - 2006
*ಸಿರಿಗನ್ನಡ ಪ್ರಶಸ್ತಿ ಪತ್ರ - 2006
*ನವೋದಯ ಕನ್ನಡ ಪರೀಕ್ಷೆ ಪ್ರಶಸ್ತಿ - 2006-07
*ರಾಜ್ಯ ಪ್ರಬಂಧ ಸ್ಪರ್ಧೆ ಪ್ರಶಸ್ತಿ ಪತ್ರ - 2013-14
*ಪರಿಸರ ಸಂರಕ್ಷಣಾ ಉಪನ್ಯಾಸ ಪ್ರಶಸ್ತಿ ಪತ್ರ - 2014
*ಕಾವ್ಯ ಕಮ್ಮಟ ಪ್ರಮಾಣ ಪತ್ರ - 2014-15
*ಜಿಲ್ಲಾ ಮಟ್ಟದ ಹನಿಗವನ ಕಮ್ಮಟ ಅಭಿನಂದನಾ ಪ್ರಶಸ್ತಿ ಪತ್ರ - 2015
*ಅಂಗವಿಕಲರ ಮತ್ತು ಹಿರಿಯನಾಗರಿಕರ ಸೇವಾ ಸಂಸ್ಥೆ ಕವಿಗೋಷ್ಠಿ ಪ್ರಶಸ್ತಿ ಪತ್ರ -2015
*ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಭಿನಂದನಾ ಪತ್ರ - 2015
*ಶಾಲಾ ಗಣರಾಜ್ಯೋತ್ಸವ ನಿಮಿತ್ಯ ವಾಲಿಬಾಲ್ ಸ್ಪರ್ಧೆ - 2007-08
*ಕಾಲೇಜ್ ವಾರ್ಷಿಕ ವಾಲಿಬಾಲ್, ಕ್ಯಾರಂ ಕ್ರೀಡಾಕೂಟ - 2013-14
*'ಮೃಡಗಿರಿ ರತ್ನ’ ರಾಜ್ಯ ಪ್ರಶಸ್ತಿ ಸಾಹಿತ್ಯ ಕ್ಷೇತ್ರ – 2020-2021
* ‘ಸಾಹಿತ್ಯ ಕೇಸರಿ’ ರಾಜ್ಯ ಪ್ರಶಸ್ತಿ ಅಪ್ರಕಟಿತ ಕೃತಿ (ಕನ್ನಡ ಕಂಪನ) ಕವನಸಂಕಲನಕ್ಕೆ – 2021-2022

ಮುಡಿಗೇರಿದ ಗೌರವ
*ಸಕಲಕಲಾ ಸಾಂಸ್ಕೃತಿಕ ಟ್ರಷ್ಟ (ರಿ) ಕೊಪ್ಪಳ ಜಿಲ್ಲಾ ಘಟಕ ಅಧ್ಯಕ್ಷರಾಗಿ ಆಯ್ಕೆ - 2020-21
*ಕೊಪ್ಪಳ ಯುವ ಬರಹಗಾರರ ಒಕ್ಕೂಟ(ರಿ) ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ - 2020-21
*ಸಾಹಿತ್ಯ ಸಾಗರ ಸಂಸ್ಥೆ ಕೊಪ್ಪಳ ಜಿಲ್ಲಾ ಸಂಚಾಲಕರಾಗಿ ಆಯ್ಕೆ – 2020-21
* ಜ್ಞಾನ ದೀವಿಗೆ ಸಾಹಿತ್ಯ ವೇದಿಕೆ ರಾಜ್ಯ ಘಟಕ ಸಂಸ್ಥಾಪಕರು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ – 2021-22

ಹುಡುಕಾಟದ ಮೂಲ:
*ನಿಸರ್ಗದ ಒಡಲು ತಾಯಿಯ ಮಡಿಲು ಪುಸ್ತಕ ದೊರೆಯುವ ಮೂಲ - www.rigipublication.com, Amazon, flipkart, kindle, dailyhunt, snapdeal, shop clues.
*My mail - gavibakud@gmail.com
*ಮೈ Facebook page -
https://www.facebook.com/gavibakud/
*ಮೈ Facebook -
https://www.facebook.com/kavigavi.adoor

"ಮೈ Pratilipi -
Gavisiddappa thinks you'll love Pratilipi https://play.google.com/store/apps/details?id=com.pratilipi.mobile.android&referrer=utm_campaign%3Dreferal%26utm_source%3Dandroid%26utm_medium%3DWHATSAPP%26utm_content%3D5ce618a1ec2c460007f38e5c

ಕೊನೆಯ ಮಾತಿನೊಂದಿಗೆ ವಿನಂತಿ ನಿಮ್ಮ ಸ್ವೀಕಾರಕ್ಕೆ;
"ನಾ ನಿಮ್ಮ ಅಭಿಮಾನಿ"
ಬರಹ ಮತ್ತು ಚೈತನ್ಯ, ಹಲವಾರು ಕೌತುಕಗಳನ್ನ ತುಂಬಿರುವ ಜೀವದೊಳಗಿನ ಜೀವನ ಚಕ್ರ ಭೇದಿಸಿ ತಿಳಿಯುವ ಜೀವ ಶಾಸ್ತ್ರದ ಉಪನ್ಯಾಸಕರಾದ ನಾವು M.Sc.B.Ed. ಪೂರ್ಣ ಗೊಳಿಸಿದರು ಕನ್ನಡದ ಕಟ್ಟಾ ಅಭಿಮಾನಿಗಳು. ಬರಹಗಾರರ ಪ್ರೇಮಿಗಳು, ಕನ್ನಡಾಂಬೆಯ ಸೇವಕರು, ಸಮಾಜದ ಆರಾಧಕರು. ನನ್ನ ಹೆತ್ತ ಕೂಡಿಗೆಗಳ(ತಂದೆ ತಾಯಿಗಳ) ಕಮಲ ಪಾದುಳಕೆ ಹಾಸಿಗೆಯೂ ನಾ. ನಿಮ್ಮೆಲ್ಲರ ಪ್ರೀತಿಯ ಅಭಿಮಾನಿ ನಾ. 

ನಿಮ್ಮನ್ನು ಯಾರಾದ್ರೂ ನೀನಗೆ ಫ್ಯಾನ್ ಯಾರಾದ್ರೂ ಅದರೇನು ಅವನ್ನ ನೋಡು ಹೇಗಿದ್ದಾನೆ, ಎಷ್ಟು ಫ್ಯಾನ್ಸ್ ಇದಾರೆ ಅಂತ ಪ್ರಶ್ನೆ ಮಾಡಿದಾಗ ನಿಮಗೆ ಆತರ ಭಾವನೆ ಉಂಟಾಗಿ ನನಗೂ ಯಾರಾದ್ರೂ ಇದ್ದರೆ ಎಷ್ಟು ಖುಷಿ ಅಲ. ನನಗೂ ಯಾರಾದರೂ ಇರಬಾರದಿತ್ತೇ ಅಂತ ಕೊರಗು ನಿಮ್ಮಲ್ಲಿ ಮನೆ ಮಾಡಿದ್ದರೆ ಅದನ್ನು ಇವತ್ತೇ ಇಲ್ಲಿಗೆ ಇಂದೇ ಮರೆತು ಬಿಡಿ...  ಅಂತ ಸಂದರ್ಭ ಬಂದರೆ, ಯಾರಾದ್ರೂ  ಕೇಳಿದರೆ  ಎದೆ ತಟ್ಟಿ ಗರ್ವದಿಂದ ಹೇಳಿ ನನ್ನ ತೋರಿಸಿ, ನನ್ನ  ಅಭಿಮಾನಿ ಅಲ್ಲಿದಾನೆ ನೋಡು  ಅಂತ ನನ್ನೆಸರು...  ಯಾಕಂದ್ರೆ ನಾ ನಿಮ್ಮ ಅಭಿಮಾನಿ, ನಿಮ್ಮೆಲ್ಲರ ಅಭಿಮಾನಿ. ಕಾರಣ ಗರ್ಭಗುಡಿ ಎನ್ನುವ ಪ್ರತಿಯೊಬ್ಬರ ಮನ ಮನದೊಳಗೂ ಕನ್ನಡಮ್ಮ ನೆಲಸಿದ್ದಾಳೆ. ಕನ್ನಡಕ್ಕೆದಾಸನಾದರೆ  ಅದು ಆ ಗರ್ಭಗುಡಿಗೆ ಅಭಿಮಾನಿಯಾದಂತೆ. ಆ ಗರ್ಭಗುಡಿ ತಾವಲ್ಲದೆ ಮತ್ಯಾವುದು ಹೇಳಿ.  
ನೀವು ಆಡಿಸಿದಂತೆ ಆಡುವುದಷ್ಟೇ ನನಗೆ ಗೊತ್ತು. ನೀವು ಎಂದು ಆಡಿಸುವುದನ್ನ ನಿಲ್ಲಿಸುವಿರೋ ಅಂದೇ ನಾ ಮತ್ತೇ ಮರಳಿ ಬಾರದ ಲೋಕಕ್ಕೆ ಪಯಣ ಬೆಳಸಿ ಬಿಡುತ್ತೇನೆ. ಅಂದರೆ  ನೀವುಗಳೇ ನನ್ನುಸಿರು. 



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ರಾಧಾ ಕೃಷ್ಣ ಪ್ರೇಮೋತ್ಸವ (ಕವಿತೆ) - ಸ್ವಾತಿ ರಾವ್.

ಕೊಳಲ ಕರೆಗೆ ಕಾಯುತ ಕುಳಿತಹಳು ಕೃಷ್ಣೆ
ಕಣ್ಣಂಚಲೆ ಕನಸುಗಳ ಕಟ್ಟುತ್ತಾ,
ಕನವರಿಕೆಯ ಕರೆಯನ್ನು ಕೃಷ್ಣನಿಗೆ ನೀಡುತ್ತಾ
ಕಾಯುವಿಕೆಯ ಖುಷಿಯನ್ನು ಅನುಭವಿಸುತ್ತಾ,

ಕೊನೆಗೂ ಕೊಳಲನೂದುತ ಬರುವನು ಕೃಷ್ಣ
ಬೆಳದಿಂಗಳ ರಾತ್ರಿಯಲಿ 
ನೀರವ ಮೌನದಲಿ
ಪರಿಶುದ್ಧ ಪ್ರೀತಿಯನ್ನು ಜಗಕೆ ಸಾರುವ ತವಕದಲಿ

ಬೃಂದಾವನದ ತುಂಬಾ ಪ್ರೇಮದ ಕಂಪು ಬೀರಿರಲು
ಮಂದಾರದಂತ ಮುಖದಲ್ಲಿ ಮುಗ್ಧತೆಯು ಮಿಂಚುತ್ತಿರಲು
ಮುಕುಂದನು ಮನಸೋತಿಹನು ಮಾನಿನಿಯು
ಮುಗುಳ್ನಗುತ್ತಿರಲು

ತಂಗಾಳಿಯಲ್ಲಿ ತಲ್ಲೀನವಾಗಿ ತನುಮನ ಒಂದಾಗಿ
ಕೃಷ್ಣನು ಕೊಳಲನೂದುವನು ಸೊಗಸಾಗಿ
ನಾರಿಯು ನಾಚಿಹಳು ನೀರಾಗಿ
ನರ್ತಿಸಿದಳು ನವಿರಾಗಿ

ಈ ರಾಧ ಕೃಷ್ಣರ ಪ್ರೇಮೋತ್ಸವ ನಡೆದಿತ್ತು, 
ಸಪ್ತ ಸಾಗರದಾಚೆ ಎಲ್ಲೋ ಕಣ್ಮರೆಯಾಗಿ
ಹುಣ್ಣಿಮೆಯ ಚಂದ್ರನ ಸಾಕ್ಷಿಯಾಗಿ.. 
✍️ ಸ್ವಾತಿ ರಾವ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಪ್ರೀತಿ, ವಿಶ್ವಾಸ, ನಂಬಿಕೆ ನೈಜ ಬದುಕಿನ ಆಧಾರಗಳೇ ? (ಲೇಖನ) - ಪ್ರಕಾಶ ಕೊಪ್ಪದ (ಅಚ್ಚರಿಯ ಪಯಣಿಗ)

"ಅಳುತ್ತಾ ಈ ಜಗತ್ತಿಗೆ ಕಾಲಿಟ್ಟೆ ನೀನು ಹೋಗುವಾಗ ನಿನಗಾಗಿ ಈ ಜಗತ್ತು ಸ್ವಲ್ಪ ಕಣ್ಣೀರು ಹಾಕಲಿ"
                   ಸ್ವಾರ್ಥ ಕತೆಯ ಬದುಕನ್ನು ಬಿಟ್ಟು ನಿಸ್ವಾರ್ಥ ಸೇವೆಯ ಕಡೆಗೆ ನಮ್ಮೆಲ್ಲರ ಗಮನ ದಾಪುಗಾಲು ಹಾಕಲಿ. ಸಮಾಜದ ಮುಖ್ಯವಾಹಿನಿಗಳಲ್ಲಿ ಇರುವ ಮುಖಂಡರು, ಮುತ್ಸದ್ಧಿಗಳು, ನಾಯಕರು, ರಾಜಕೀಯ ಚಿಂತಕರು  ಇತರರಿಗಿಂತಲೂ ತೀರ ವಿಭಿನ್ನವಾದ ಮಾತುಗಳು ಹವ್ಯಾಸ ವರ್ತನೆ ನಮ್ಮನ್ನೆಲ್ಲ ಮೌನದಂತೆ ಇರಲು ಮಾಡಿದ ಮಜಲುಗಳು.

ಪ್ರೀತಿ ಎಂದರೆ ಎರಡು ಮನಸ್ಸುಗಳ ಮಧ್ಯೆ ಸೌಂದರ್ಯ ತವಾಗಿ ಕಾಮದಾಸೆಯ ತೃಪ್ತಿಗಾಗಿ ಹುಟ್ಟುವ ಎರಡಕ್ಷರ ಪದವಲ್ಲ ಅಗಾಧವಾಗಿ ಆಳಕ್ಕಿಳಿದು ಅದರ ಅರ್ಥವನ್ನು ವಿಶಾಲಾರ್ಥದಲ್ಲಿ ಓದಬೇಕು. ನಮ್ಮನ್ನೇ ನಾವು ಮತ್ತೊಬ್ಬರಿಗೆ ಹೋಲಿಸಿ ಅವರಂತೆ ನಾವಿಲ್ಲ ನಮ್ಮಂತೆಯೇ ಅವರಿಲ್ಲ ಎನ್ನುವುದು ನಮ್ಮ ತಪ್ಪನ್ನು ನಾವು ಮುಚ್ಚಿಕೊಳ್ಳಲು ಅನುಸರಿಸಿದ ಮಾರ್ಗವೇ. ಇದು ಸರಿಯಾದುದಲ್ಲ ಜೀವನದ ಮಾರ್ಮಿಕವಾದ ಘಟನೆಗಳನ್ನು ಅತ್ಯಂತ ಕ್ರಿಯಾಶೀಲತೆಯಿಂದ ಕೂಡಿದ ಸಮಾರಂಭಗಳನ್ನು ನಾವು ಕೇಳಿರಬಹುದು ಮತ್ತು ಕಂಡಿರಬಹುದು. ಅವುಗಳಲ್ಲಿ ಇರುವ ಪ್ರೀತಿ ಅಜರಾಮರ.

ತಾಯಿ ತನ್ನ ಮಗುವಿಗೆ ತೋರುವುದು ಮಮತೆ, ಪ್ರೀತಿ, ವಸ್ಥಲ್ಯ, ಕರುಣೆ, ಮತ್ತು ಅವಿನಾಭಾವ ಸಂಬಂಧವನ್ನು ಮಗು ತನ್ನಂತೆಯೇ ಪ್ರಪಂಚವನ್ನು ನೋಡಬಾರದು ಎಂದು ಪರಿಪರಿಯಾಗಿ ಜೀವನದ ಮಜಲುಗಳನ್ನು ಮಗುವಿಗೆ ಕಲಿಸುವುದು ತಾಯಿಯ ನಿಜವಾದ ಪ್ರೀತಿ ಮತ್ತು ಸಹಜ ಧರ್ಮವು ಕೂಡ. ನಾವೆಲ್ಲರೂ ಬಿಂಬಿಸಿ ದಂತೆ ಪ್ರೀತಿಯೆಂಬುದು ಒಂದು ಹುಡುಗ ಮತ್ತು ಹುಡುಗಿಯ ಮಧ್ಯೆ ಇರುವ ಸಂಬಂಧವೇ ಅಲ್ಲ.

"Beautiful and body attraction to the love not but beautiful heart and helping Nature true love"
ಎನುವ ಉಕ್ತಿಯನ್ನು ಉಳಿಸಬಹುದು.

ಪ್ರೀತಿ ಎಂಬುದು ಸರೋವರದ ತಳಭಾಗದಲ್ಲಿ ಅಡಗಿರುವ ಮುತ್ತವೂ ಹೌದು ನಾವು ತಿಳಿದುಕೊಂಡಂತೆ ಒಂದು ಹುಡುಗ ಮತ್ತು ಹುಡುಗಿಯ ಮಧ್ಯೆ ಅದು ಜನಿಸಲಾರದು. ನಾವು ಕಂಡಿದ್ದು ಪ್ರೀತಿಯಲ್ಲ ಸೌಂದರ್ಯವನ್ನು ಅರಗಿಸಿಕೊಳ್ಳಲಾರದ ಆಕರ್ಷಣೆಯ ಭಾವಬಿಂದು. ವಯಸ್ಸಿನ, ಸಮಾನಮನಸ್ಕರ, ಯೌವನದ ಕಾರು-ಬಾರು ಗಳು ಪ್ರೀತಿಯನ್ನು ಮಾರಿ ಬಿಟ್ಟಿವೆ.

ಪ್ರೀತಿಯು ಉಳಿಯುವುದು ಹೇಗೆಂದರೆ ವಿಶ್ವಾಸ ವಾಸ್ತವದ ನೆಲೆಗಟ್ಟಿಗೆ ತುಂಬಾ ದೂರವಾಗಿದೆ. 

"ವಿಶ್ವಾಸದ ಮೇಲೆ ವಿಶ್ವಾಸವನ್ನಿಟ್ಟು ಕಳೆದುಕೊಂಡಿದ್ದು ದುಪ್ಪಟ್ಟು ಎನ್ನುವ ಸ್ಥಿತಿಗೆ ನಮ್ಮಲ್ಲಿ ವಾಸ್ತವವಾಗಿ ಕಂಡುಬರುವುದು ಸಹಜ"

ವಿಶ್ವಾಸ ವೆಂಬುದು ಸಕಲ ರಲ್ಲಿರುವ ನಾವು ದೇವರಿಗೆ ನೀಡುವ ನೈವೇದ್ಯಕ್ಕೂ ಹೋಲಿಸಬಹುದು. ಒಬ್ಬರನ್ನೊಬ್ಬರನ್ನು ಜೋಡಿಸುವ ಕೊಂಡಿಯೂ ಹೌದು. ಒಬ್ಬ ವ್ಯಕ್ತಿ ಒಂದು ಕೆಲಸದಲ್ಲಿ ನಿರಂತರವಾಗಿ ಕಾರ್ಯತಪ್ತನಾದರೆ ಆ ವ್ಯಕ್ತಿಯು ಆ ಕೆಲಸದಲ್ಲಿ ಹೊಂದಿರುವ ಗಾಢವಾದ ವಿಶ್ವಾಸ ನಾನು ಮಾಡುತ್ತೇನೆ ಎಂಬ ಪ್ರತಿಜ್ಞೆ ಅವನನ್ನು ಆ ಕೆಲಸದಲ್ಲಿ ಸದಾ ನಿರಂತರವಾಗಿ ಇರುವಂತೆ ವಿಶ್ವಾಸವು ಅವನನ್ನು ಗಟ್ಟಿಗೊಳಿಸಿದೆ.

ನಾವು ಕೆಲವೊಮ್ಮೆ ಜೀವನದಲ್ಲಿ ಜಿಗುಪ್ಸೆ ಆಗುವುದು ಸಹಜ ಅದು ಕೆಲವರು ನಮ್ಮ ನಂಬಿಕೆಯನ್ನು ಕಳೆದುಕೊಂಡಿರಬಹುದು. ನಾವು ಪ್ರೀತಿಯಲ್ಲಿ ಸೋತಿರಬಹುದು. ಇದೆಲ್ಲಕ್ಕೂ ಮಿಗಿಲಾಗಿ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಒಂದು ಮಾತನ್ನು ಹೆಚ್ಚಿಗೆ ಆಡಿ ಜಗಳ ಮಾಡಿಕೊಂಡಿರುವುದು ಉಂಟು. ಸಕಲರಿಗೂ ಒಪ್ಪುವುದು ಎಲ್ಲರಿಗೂ ಒಪ್ಪುವುದು ಆದರೆ ಅದು ಅವರ ಅನುಭವಕ್ಕೂ ಮತ್ತು ಅವಿನಾಭಾವ ಸಂಬಂಧಕ್ಕೆ ಮೊದಲು ಹತ್ತಿರವಾಗಿರಬೇಕು.

"ವಿಶ್ವಾಸ ಇರದಿದ್ದರೆ ವಿಸ್ಮಯಕಾರಿ ಜಗತ್ತಿನಲ್ಲಿ ಬದುಕುವವರು ಯಾರು ಬದುಕಿದವರೇ ದೇವಮಾನವರು"

ನಮ್ಮನ್ನು ನಾವೇ ನಾನು ಸೋತೆ ನನ್ನ ಕೈಯಲ್ಲಿ ಇದು ಆಗುವುದಿಲ್ಲ. ನನ್ನಲ್ಲಿ ಅಂಗವೈಕಲ್ಯತೆ ಇದೆ. ನನ್ನಲ್ಲಿ ಜ್ಞಾನಾತ್ಮಕ ವಿಕಾಸ ವಾಗುವುದಿಲ್ಲ. ಎಲ್ಲರಂತೆಯು ನನ್ನಲ್ಲಿ ಸೌಂದರ್ಯವೂ ಇಲ್ಲ. ನನ್ನ ಮಾತನ್ನು ಯಾರು ಕೇಳುವ ಇಚ್ಛಾಶಕ್ತಿಯನ್ನು ಹೊಂದಿಲ್ಲ.
ಇಂತಹ ಹತ್ತು ಹಲವಾರು ದುಗುಡ ಪ್ರಶ್ನೆಗಳು ನಮ್ಮನ್ನು ಕಾಡುವುದು. ಇಂತಹ ಮಾತುಗಳನ್ನು ಒಬ್ಬರಿಂದ ಮತ್ತೊಬ್ಬರ ಮುಂದೆ ಹೇಳುವ ಪರಿಯಲ್ಲಿ ಬದಲಾವಣೆ ಮಾಡದೆ ನಮ್ಮನ್ನೇ ನಾವು ಜುಗುಪ್ಸೆಯ ಜೀವನಕ್ಕೆ ಮಾರು ಹೋದಂತೆ ಸರಿ.

ನಮ್ಮನ್ನೇ ನಾವು ಬೆಳೆ ಬೆಳೆಯುವ ಹೊಲಕ್ಕೆ ಹೋಲಿಸಿಕೊಂಡು ನಮ್ಮಲ್ಲಿ ವಿಶ್ವಾಸ ಎಂಬ ಬೀಜವನ್ನು ಬಿತ್ತಿ ಆತ್ಮವಿಶ್ವಾಸವನ್ನೇ ರೆಂಬೆ-ಕೊಂಬೆ ಗಳನ್ನಾಗಿ ಮಾಡಿ ದೊಡ್ಡ ಆಲದ ಮರವಾಗಿ ನಾವು ಬೆಳೆದಾಗ ನಮ್ಮ ನೆರಳು ಬಯಸಿ ಬರುವವರು ಮತ್ತ್ಯಾರು ಅಲ್ಲ ಹಿಂದೆ ನಮ್ಮನ್ನು ಹಂಗಿಸಿ ನಕ್ಕವರೇ.

" ಮನುಕುಲಕ್ಕೆ ಒಪ್ಪುವುದು ವಿಶ್ವಾಸ ಅದಕ್ಕೆ ನೀನು ಒಪ್ಪದಿದ್ದರೆ ನಿನ್ನ ಜೀವನವೇ ಉಪವಾಸ "

ನಿನ್ನಲ್ಲಿ ಆತ್ಮವಿಶ್ವಾಸ ಒಂದಿದ್ದರೆ ಜೀವನದ ನಾನಾ ರಂಗಗಳಲ್ಲಿ ನಿನ್ನನ್ನು ನೀನು ಸದ್ಬಳಕೆಯ ರೀತಿಯಲ್ಲಿ ಬಳಸಿಕೊಂಡು ಸ್ವಲ್ಪ ತಕ್ಕಮಟ್ಟಿಗೆ ಜೀವನದಲ್ಲಿ ಉತ್ಸಾಹ ಕಥೆಯನ್ನು ಪಡೆಯುವುದು ಸ್ವಲ್ಪ ಮಟ್ಟಿಗೆ ನೀನು ಧೃತಿಗೆಡದೆ ಮುನ್ನುಗ್ಗಬೇಕು ಅಷ್ಟೇ.

"ಪ್ರೀತಿಯು ಚಿಗುರು ಒಡೆದಾಗ ವಿಶ್ವಾಸ ಬೇರುಗಳಲ್ಲಿ ಗುಪ್ತ ವಾಗಿರಬೇಕು ನಂಬಿಕೆ ಎಂಬುದು ರೆಂಬೆ ಕೊಂಬೆಗಳಲ್ಲಿ ಹಾರಾಡಬೇಕು."

ಅತಿಯಾದ ಆತ್ಮವಿಶ್ವಾಸವೂ ನಮ್ಮನ್ನು ಸೋಲಿನ ಕಡೆಗೆ ಕೊಂಡೊಯ್ಯುತ್ತದೆ ಎಂಬುದು ನೆನಪಿರಲಿ. ಅದು ಹೇಗೆಂದರೆ ನಾವು ಅನ್ಯ ಮಾರ್ಗದ ಹಾದಿಯನ್ನು ಹಿಡಿದು ನಮಗಿಷ್ಟವಿಲ್ಲ ಆದರೆ ಅದರಲ್ಲಿರುವ ಸ್ವಾರ್ಥತೆಯ ಬದುಕು ನಮ್ಮನ್ನು ಆತ್ಮವಿಶ್ವಾಸದ ಸೋಲಿಗೆ ಕಾರಣೀಭೂತವಾಗಬಹುದು. ಬದುಕಿನ ಸರ್ವೇಸಾಮಾನ್ಯ ಘಟನೆಗಳು ನಮ್ಮ ಮೇಲೆ ಅವು ಬೀರಿದ ಪರಿಣಾಮಗಳನ್ನು ನಾವು ಎಂದಿಗೂ ಮರೆಯಬಾರದು. ಅದು ಶಾಶ್ವತವಾಗಿ ಇರಬಹುದು ಅಥವಾ ಕಲ್ಪನೆಯ ಮುಂಭಾಗದಲ್ಲಿ ನಿಂತು ಸದಾ ನಮ್ಮ ಎದುರಿಗೆ ಬರಬಹುದು. ಅದನ್ನು ನಾವು ಕನಸಿಗೆ ಹೋಲಿಸಿ ಅದರಲ್ಲಿ ಆತ್ಮವಿಶ್ವಾಸ ಮತ್ತು ನಂಬಿಕೆಯನ್ನು ಇಡುವುದು ಮೂರ್ಖತನದ ಕಾರ್ಯವು ಹೌದು.

"ನಂಬುವದರ ಭಾವ ನಂಬಿಕೆ
 ನಿನಗೇಕೆ ಅವರ ಮೇಲೆ ಅವಲಂಬಿಕೆ
ಸನ್ಮಾರ್ಗದಲ್ಲಿ ನಡೆದು ಸದಾ ನೀನಾಗು ಎಲ್ಲರಿಗೂ ಸದ್ಬಳಕೆ"

ಜೀವಕ್ಕೆ ಮತ್ತು ಜೀವ ಮಾನಕ್ಕೂ ಬಹಳ ವ್ಯತ್ಯಾಸ ಹಾಗೆ ವಿಶ್ವಾಸ ಮತ್ತು ಆತ್ಮವಿಶ್ವಾಸಕ್ಕೂ ತೀರ ವಿಭಿನ್ನವಾದ ಅರ್ಥವುಂಟು. ನಾವು ನಮ್ಮ ಮೇಲೆ ನಂಬಿಕೆಯನ್ನಿಟ್ಟು ನೈಜ ಬದುಕಿನ ಆಡಂಬರ ಆಚರಣೆಗಳಿಗೆ ಮೊರೆ ಹೋಗದೆ. ಸ್ವಾರ್ಥದ ಬದುಕಿಗೆ ಬಲಿಪಶು ಯಾಗದೆ. ಇತರರಿಗೆ ಯಾವುದೇ ತೊಂದರೆಯಾಗದಂತೆ ನಮ್ಮ ಬದುಕಿನ ನೆಲೆಗಟ್ಟನ್ನು ನಾವು ನಮ್ಮ ಚೌಕಟ್ಟಿನ ರೂಪರೇಷೆಗಳನ್ನು ಬೆಳೆಸಿಕೊಂಡು ಅದರಲ್ಲಿ ಕಾರ್ಯಮಗ್ನರಾಗಿ ನಮ್ಮಲ್ಲಿರುವ ಪ್ರೀತಿ ವಿಶ್ವಾಸ ಮತ್ತು ನಂಬಿಕೆಗಳನ್ನು ಬಳಸಿಕೊಳ್ಳಬೇಕು.

"ನಯವಂಚಕರ ಮೇಲೆ ನಂಬಿಕೆಯನ್ನಿಟ್ಟು ಕೀಚಕನ ಕೈಯಲ್ಲಿ ಆತ್ಮವಿಶ್ವಾಸವನ್ನು ಕೊಟ್ಟು ಮತ್ತು ಸೌಂದರ್ಯದ ಮೋಡಿಗೆ ಮರುಳಾಗಿ ಕಾಮದಾಸೆಗೆ ಪಟ್ಟು ಪ್ರೀತಿಯನ್ನು ಹರಿಬಿಟ್ಟರೆ ನಮ್ಮಂತ ಶತಮೂರ್ಖರು ಮತ್ತಾರು ಅಲ್ಲ.

ಪ್ರೀತಿ, ವಿಶ್ವಾಸ, ಮತ್ತು ನಂಬಿಕೆ ನಮ್ಮ ಜೀವನದ ಪ್ರತಿಯೊಂದು ಹಂತದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುವ ತ್ರಿ ಸೂತ್ರಗಳು ಎಂದರೆ ತಪ್ಪಾಗಲಾರದು.

"ಮಾಡಿದ ತಪ್ಪನ್ನು ಒಪ್ಪಿಕೊಂಡು ತಕ್ಕಮಟ್ಟಿಗೆ ಶಿಕ್ಷೆಯನ್ನು ಅನುಭವಿಸಿ ತಕ್ಕಡಿಯಲ್ಲಿಟ್ಟು ನಿನ್ನ ತೂಗಿದರೆ ನಿನ್ನ ಪಾಪ ಹೆಚ್ಚಾಗದಿರಲಿ" 

ನಮ್ಮ-ನಿಮ್ಮೆಲ್ಲರ ಈ ಬದುಕು ಶಾಶ್ವತನಾ? ತಮ್ಮ ತಮ್ಮಲ್ಲಿಯೇ ವೈಮನಸ್ಸನ್ನು ಹೊಂದಿರುವ ಎಷ್ಟು ಗುಣಾವಗುಣಗಳು ನಮ್ಮಲ್ಲಿ ಇವೆ. ಇಂದಿಗೂ ವಾಸ್ತವಿಕ ಬದುಕಿಗೆ ತೀರಾ ಸಮೀಪದಲ್ಲಿವೆ.

ನಮ್ಮ ಬದುಕನ್ನು ಹಸನಾಗಿಸುವ ವ್ಯಕ್ತಿಯನ್ನು ಪ್ರೀತಿಸಿ. ಅವರ ಆಸೆಗೂ ಮತ್ತು ನಿಮ್ಮ ಆಸೆಗೂ ಹೋಲುವ ರೀತಿಯಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಕಾರ್ಯಪ್ರವೃತ್ತರಾಗಿ ಅದರಲ್ಲಿ ನಾವು ಜಯಸುತ್ತೇವೆ ಎಂಬ ಬಲವಾದ ನಂಬಿಕೆ ಇರಲಿ.
    -  ಪ್ರಕಾಶ ಕೊಪ್ಪದ (ಅಚ್ಚರಿಯ ಪಯಣಿಗ).

(ಪ್ರಕಾಶ ಯಲ್ಲಪ್ಪ ಕೊಪ್ಪದ
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಂಬಾಗಿ ಗ್ರಾಮ, ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕನಾಗಿ ಸೇವೆ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ರೈತರ ಗೆಳೆತನ (ಸಣ್ಣ ಕತೆ) - ವೈಷ್ಣವಿ ರಾಜಕುಮಾರ ಗೊಡಂಪಲ್ಲೆ.

ಒಂದಾನೊಂದು ಕಾಲದಲ್ಲಿ ಅಮೃತಾಪುರ ಎಂಬ ಊರಿನಲ್ಲಿ ಕಾಮಣ್ಣ ಮತ್ತು ಭೀಮಣ್ಣ ಎಂಬ ರೈತ ಗೆಳೆಯರಿದ್ದರು.ಇವರಿಬ್ಬರೂ ತುಂಬಾ ಒಳ್ಳೆಯ ಆಪ್ತ ಸ್ನೇಹಿತರಿದ್ದರು .ಈ ರೈತರು ಒಬ್ಬರನ್ನೊಬ್ಬರು ಸಹಾಯ ಮಾಡಿ ತಮ್ಮ ತಮ್ಮ ಹೊಲದಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡಿ ಪ್ರತಿ ವರ್ಷ ಒಳ್ಳೆಯ ಫಸಲನ್ನು ತೆಗೆಯುತ್ತಾ ಉತ್ತಮ ರೀತಿಯಲ್ಲಿ ಜೀವನವನ್ನು ನಡೆಸುತ್ತಿದ್ದರು .ಈ ಸ್ನೇಹಿತರ ಹೊಲದಲ್ಲಿ ಪ್ರತಿ ವರ್ಷ ಬೆಳೆಯು  ಸಹ ತುಂಬಾ ಚೆನ್ನಾಗಿ ಬೆಳೆಯುತ್ತಿತ್ತು.ಇದರಿಂದ ಈ ಎರಡು ಮನೆಯವರು ಸಂತೋಷದಿಂದ ಜೀವನ ಸಾಗಿಸುತ್ತಿದ್ದರು.

ಕೆಲವು ವರ್ಷಗಳ ನಂತರ ಈ ಇಬ್ಬರು ಸ್ನೇಹಿತರ ಕೀರ್ತಿ ತಮ್ಮ ತಾಲೂಕಿನಾದ್ಯಂತ ಹರಡಿತು.ಇವರ ಈ ಕಿರ್ತಿಯಿಂದ ಪ್ರಭಾವಿತರಾದ ಆ ಊರಿನ ಮುಖಂಡ ( ಗೌಡ) ಸಂಗಪ್ಪರು ತನ್ನ ಊರಿನ ಕೀರ್ತಿಯನ್ನು ಹೆಚ್ಚಿಸಲು ಮತ್ತು ರೈತರಿಗೆ ಪ್ರೇರಣೆಯನ್ನು ನೀಡಲು ಒಂದು ದಿನ ಊರಿನ ಎಲ್ಲಾ ಜನರನ್ನು ಒಂದು ಕಡೆ ಸೇರಿಸಿದರು.ಮತ್ತು ಅವರನ್ನು ಉದ್ದೇಶಿಸಿ ಮಾತನಾಡಿದರು .ಮಾತನಾಡುವಾಗ ಗ್ರಾಮದ ಕೀರ್ತಿಯನ್ನು ಹೆಚ್ಚಿಸಲು ಗ್ರಾಮದ ಜನರಿಗೆ  ಕಾಮಣ್ಣ ಮತ್ತು ಭಿಮಣ್ಣರಂತೆ ಪ್ರೀತಿ, ವಾತ್ಸಲ್ಯದಿಂದಿರಲು ಹೇಳಿದರು.ಹಾಗೂ ರೈತರನ್ನು ಉದ್ದೇಶಿಸಿ ಮಾತನಾಡುತ್ತಾ ಕಾಮಣ್ಣ ಮತ್ತು ಭೀಮಣ್ಣ ರ ಗೆಳೆತನ ಹಾಗೂ ಅವರ ಪರಿಶ್ರಮದಿಂದ ಗ್ರಾಮಕ್ಕೆ ಸಂದ ಕೀರ್ತಿಯನ್ನು ಸವಿಸ್ತಾರವಾಗಿ ಹೇಳಿದರು.ಇದರಿಂದ ಗ್ರಾಮದ ಎಲ್ಲಾ ಜನರು ಪ್ರಭಾವಿತರಾಗಿ ತಾವು ಕೂಡ ಈ ಸ್ನೇಹಿತರ ಹಾಗೆ ಪ್ರೀತಿ,ವಾತ್ಸಲ್ಯದಿಂದ ಇರಬೇಕೆಂದು ಮತ್ತು ಪರಿಶ್ರಮದಿಂದ ಕೆಲಸ ಮಾಡಲು ಮುಂದಾದರು.ಅದೇ ಸಮಯದಲ್ಲಿ ' ಸಂಗಪ್ಪ ' ರೈತರನ್ನು ಪ್ರೋತ್ಸಾಹಿಸಲು ಅತಿ ಹೆಚ್ಚು ಬೆಳೆ ಬೆಳೆಯುವ ರೈತರಿಗೆ 5 ಲಕ್ಷ ರೂ. ಬಹುಮಾನವನ್ನು ನೀಡಲಾಗುವುದು ಎಂದು ಐದು ಲಕ್ಷದ ಬಹುಮಾನವನ್ನು ಘೋಷಿಸಿದರು.
ಇದರಿಂದ ಪ್ರೇರಿತರಾದ ಗ್ರಾಮದ ಎಲ್ಲಾ ರೈತರು ತಮ್ಮ ತಮ್ಮ ಹೊಲಗಳಲ್ಲಿ ಅಚ್ಚುಕಟ್ಟಾಗಿ ಮತ್ತು ಸುವ್ಯವಸ್ತಿತವಾಗಿ ಕೆಲಸ ಮಾಡಲು ಮುಂದಾದರು.ಈ ರೀತಿ ಕಾಮಣ್ಣ ಮತ್ತು ಭೀಮಣ್ಣ ರ ಗೆಳೆತನದಿಂದ  ಪ್ರೇರಿತಗೊಂಡ್ ಗ್ರಾಮದ ಜನರೆಲ್ಲರೂ ತಮ್ಮ ತಮ್ಮ ಕಾರ್ಯಗಳನ್ನು ಹುಮ್ಮಸಿನಿಂದ ಮಾಡಲು ಪ್ರಾರಂಭಿಸಿದರು. ಗ್ರಾಮದ ಜನರೆಲ್ಲರೂ ವಿಶೇಷವಾಗಿ ರೈತರು 5 ಲಕ್ಷ ರೂ. ಬಹುಮಾನವನ್ನು ಪಡೆಯಲು ತಮ್ಮ ತಮ್ಮ ಹೊಲಗಳಲ್ಲಿ ಉತ್ತಮ ರೀತಿಯಿಂದ ಕೆಲಸ ಮಾಡಲು ಮುಂದಾದರು.

ಇದರಿಂದ ಗ್ರಾಮದಲ್ಲಿ ಎಲ್ಲಾ ರೈತರ ಮಧ್ಯ ಒಂದು ರೀತಿಯ ಸ್ಪರ್ಧೆಯೇ ಏರ್ಪಟ್ಟಿತ್ತು.ಕಾಮಣ್ಣ ಮತ್ತು ಭೀಮಣ್ಣ ರು ಕೂಡ ತಮ್ಮ ತಮ್ಮ ಹೊಲದಲ್ಲಿ ಒಳ್ಳೆಯ ರೀತಿಯಿಂದ ಕೆಲಸ ಮಾಡಲು ಪ್ರಾರಂಭಿಸಿದರು.ಹೀಗೆ ಊರಿನ ಎಲ್ಲಾ ರೈತರು ಕೂಡ ತಮ್ಮ ತಮ್ಮ ಕೆಲಸದಲ್ಲಿ ತೊಡಗಿದರು.4 ತಿಂಗಳ ನಂತರ ಬೆಳೆ ಕಟಾವಿಗೆ ಬಂದಿತ್ತು.ಭೀಮಣ್ಣನ  ಹೊಲದಲ್ಲಿ ಉತ್ತಮವಾದ ಫಸಲು ಬಂದಿತು.ಇದರಿಂದ ಬಲು ಸಂತೋಷಗೊಂಡ ಭಿಮಣ್ಣನು ಊರಿನ ಮುಖಂಡನಿಂದ  ಆ  ಐದು ಲಕ್ಷ ರೂ.ಬಹುಮಾನ ಪಡೆಯುವ ನಿರೀಕ್ಷೆಯಲ್ಲಿದ್ದರು.ಹಾಗೂ ಇವರು ಈ ಬಹುಮಾನವನ್ನು ಪಡೆಯುವ ಎಲ್ಲಾ ಲಕ್ಷಣಗಳು ಕೂಡ ಕಾಣತೊಡಗಿದವು. ಭೀಮಣ್ಣ ನ  ಈ ಇನೊಂದು   ಸಾಧನೆಯನ್ನು ನೋಡಿ ಗ್ರಾಮದ ಎಲ್ಲಾ ಜನರು ಮತ್ತು ರೈತರು ಬಲು ಸಂತಸಗೊಂಡು.ಆದರೆ ತನ್ನ ಬಾಲ್ಯದ ಸ್ನೇಹಿತ ಮತ್ತು ಆಪ್ತ ರೈತನಾದ ಕಮಣ್ಣನಿಗೆ ಯಾವುದೇ ಖುಷಿ ಆಗಲಿಲ್ಲ.ಏಕೆಂದರೆ ಕಾಮಣ್ಣನ ಹೊಲದಲ್ಲಿ  ಭೀಮಣ್ಣ ನಿಗಿಂತಲು ಕಡಿಮೆ ಫಸಲು ಬೆಳೆಯುವ ಲಕ್ಷಣಗಳು ಕಾಣುತ್ತಿದ್ದವು.ಆದ್ದರಿಂದ ಆ ಬಹುಮಾನವನ್ನು ಪಡೆಯುವ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿ ಇದ್ದನು.

ಇದರಿಂದ ವಿಚಲಿತನಾದ ಕಾಮಣ್ಣನು ಅಡ್ಡ ದಾರಿ ಹಿಡಿದು ಪ್ರಥಮ ಸ್ಥಾನಕ್ಕೆ ಬರಲು ಒಂದು ಯೋಜನೆಯನ್ನು ರೂಪಿಸಿದ.ಆ  ಯೋಜನೆಯ ಪ್ರಕಾರ ಹೇಗಾದರೂ ಮಾಡಿ ಆ ಐದು ಲಕ್ಷ ರೂ. ಬಹುಮಾನ ತಾನೇ ಪಡೆಯಬೇಕೆಂದು ಹಂಬಲಿಸುತ್ತ ,ಒಂದು ದಿನ ರಾತ್ರಿ 3 ಗಂಟೆಗೆ ಭೀಮಣ್ಣನ ಹೊಲಕ್ಕೆ ಹೋಗಿ ಕಟಾವಿಗೆ ಬಂದು ನಿಂತಿರುವಂತ ಹ  ಬೆಳೆಗೆ  ಬೆಂಕಿ ಹಚ್ಚಿದನು. ಬೆಳೆಯು  ಬೇಗ  ಸುಡಬೇಕೆಂದು ಹೊಲದ  ನಾಲ್ಕು ದಿಕ್ಕಿನಿಂದಲೂ ಬೆಂಕಿ ಹಚ್ಚಿದ್ದನು . ಆ ಮೇಲೆ  ಬೆಳೆ ಸಂಪೂರ್ಣವಾಗಿ ಸುಡುವ ವರೆಗೂ ಅಲ್ಲೇ ಇದ್ದು ನಂತರ ಮನೆಗೆ ಬಂದನು.ಇತ್ತ ಬಹುಮಾನ ಪಡೆಯುವ ನಿರೀಕ್ಷೆಯಲ್ಲಿದ್ದ ಭೀಮಣ್ಣ ನು ಮುಂಜಾನೆ 7 ಗಂಟೆಗೆ ತನ್ನ ಹೊಲಕ್ಕೆ ಹೋದಾಗ ಕಂಡ ದೃಶ್ಯವು ತುಂಬಾ ಆಘಾತವನ್ನು ಉಂಟು ಮಾಡುವಂತಾಗಿತ್ತು.ಏಕೆಂದರೆ ಕಟಾವಿಗೆ ಬಂದಂತಹ ಬೆಳೆಯೂ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುವುದನ್ನು ನೋಡಿ ಅಲ್ಲೇ ಎದೆ - ಹಣೆ ಬಡಿದು ಅಳತೊಡಗಿದ ನು .

              ಹೊಲದಲ್ಲಿ ತನ್ನ ನೋವನ್ನು  ನೋಡಲು ಆ ದೇವರನ್ನು ಬಿಟ್ಟರೆ ಬೇರೆ ಯಾರೂ ಕೂಡ ಇರಲಿಲ್ಲ.
ಕೆಲವು ಸಮಯದ ನಂತರ ಹೇಗೋ ಸ್ವಲ್ಪ ಸಮಾಧಾನ ಮಾಡಿಕೊಂಡು ಮನೆಗೆ ಬಂದರು.
ಮನೆಯಲ್ಲಿ  ಪುಣ್ಯವತಿಯನ್ನು ನೋಡಿದ ತಕ್ಷಣ ಮತ್ತೆ ಹಣೆ - ಎದೆ ಬಡಿದು ಜೋರಾಗಿ ಅಳಲು ಪ್ರಾರಂಭಿಸಿದರು.ಇದರಿಂದ ಗಾಬರಿಗೊಂಡ ಪತ್ನಿ ಪುಣ್ಯವತಿಯು ,ಏನಾಗಿದೆ? ಯಾಕೆ ಹೀಗೆ ಅಲುತ್ತಿದ್ದಿರಾ? ಎಂದು ಕೇಳಿದಳು. ಆದರೆ ಭೀಮಣ್ಣ ನ ಬಾಯಿಯಿಂದ  ಉತ್ತರವೇ ಬರಲಿಲ್ಲ. ಇನ್ನು ಜೋರಾಗಿ ಅಳತೊಡಗಿದ. ಪುಣ್ಯವತಿ ಹೇಗೋ ಭಿಮಣ್ಣನಿಗೆ ಶಾಂತಮಾಡಿ ವಿಷಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಳು.

ಪುಣ್ಯವತಿ : ಏನಾಗಿದೆ,ಹೀಗೇಕೆ ಅಳುತ್ತಿದ್ದಿರಾ?
ಭೀಮಣ್ಣ : ಏನು ಹೇಳಲಿ ' ಪುಣ್ಯೆ ' ನಾವು ಬಿಸಿಲು ಮಳೆ ಎನ್ನದೆ ಇಡಿ ವರ್ಷ ಕಷ್ಟಪಟ್ಟು ಬೆಳೆದ ಬೇಳೆಯಲ್ಲಾ ಸಂಪೂರ್ಣವಾಗಿ ಸುತ್ತು ಹೋಗಿದೆ.( ಎಂದು ಹೇಳಿ ಮತ್ತೆ ಜೋರಾಗಿ ಅಳಲು ಪ್ರಾರಂಭ ಮಾಡದರು.)
 ಈ ವಿಷಯ ವನ್ನು ತಿಳಿದು ಪುಣ್ಯವತಿಯೂ ಅಳತೊಡಗಿದಳು.ಇವರ ಈ ದುಃಖಕ್ಕೆ ಮಿತಿಯೇ ಏರಲಿಲ್ಲ.ಆದರೆ ಪತಿಯ ನೋವನ್ನು ನೋಡಿ ಅವಳು ಪತಿಯನ್ನು ಸಮಾಧಾನ ಮಾಡಿದಳು. ಹೀಗೆ ಭೀಮಣ್ಣ ನ ಕೈಗೆ ಬಂದ ತುತ್ತು ಬಾಯಿಗೆ ಬರದಂತಯಿತು. ಅವರು ಅದೇ ದುಃಖದಲ್ಲಿ ಹೇಗೋ ಜೀವನವನ್ನು ನಡೆಸುತ್ತಿದ್ದರು.ಹೀಗೆ ಸ್ವಲ್ಪ  ದಿನ ಕಳೆದ ನಂತರ ಸತ್ಯವತಿ ಭೀಮಣ್ಣ ನ ಮನೆಗೆ ಬಂದು ತನ್ನ ಬೇಳೆ ಸುಟ್ಟಿರುವುದು ಬೇರೆ ಯಾರೂ ಅಲ್ಲ ತನ್ನ ಗಂಡ ಕಾಮಣ್ಣನೆ ಎಂದು ಸತ್ಯವನ್ನು ಹೇಳಿದಳು.ಆದರೆ ಭೀಮಣ್ಣ ,ನನ್ನ ಸ್ನೇಹಿತ ನನಗೆ ಮೋಸ ಮಾಡಲು ಸಾಧ್ಯವೇ ಇಲ್ಲಾ ಎಂದು ಹೇಳಿ ಸತ್ಯವತಿಯ ಮಾತಿಗೆ ನಂಬಲಿಲ್ಲ.

        ಕೆಲವು ದಿನದ ನಂತರ ಎಲ್ಲಾ ರೈತರು ತಮ್ಮ ಬೆಳೆಗಳನ್ನು  ಕಟಾವು ಮಾಡಿದರು. ಗ್ರಾಮದಲ್ಲಿ ಕಾಮಣ್ಣ ಅತಿ ಹೆಚ್ಚು ಬೆಲೆ ಬೆಳೆದಿರುವ ವಿಷಯ ಗ್ರಾಮದ ಮುಖಂಡನಿಗೆ ತಿಳಿಯಿತು.ಆಗ ಸಂಗಪ್ಪರೂ ಈ ಮೊದಲೇ ಹೇಳಿದಂತೆ ರೈತ ಕಾಮಣ್ಣ ನಿಗೆ ಬಹುಮಾನವನ್ನು ನೀಡಿ ಗೌರವಿಸಲು ಒಂದು ಕಾರ್ಯಕ್ರಮವನ್ನು ಆಯೋಜಿಸಿದರು.ಈ ಕಾರ್ಯಕ್ರಮದಲ್ಲಿ ಭೀಮಣ್ಣ ಸೇರಿದಂತೆ ಗ್ರಾಮದ ಎಲ್ಲ ರೈತರು ಮತ್ತು ಗ್ರಾಮಸ್ಥರು ಭಾಗವಹಿಸಿದರು.ಈ ಕಾರ್ಯಕ್ರಮದಲ್ಲಿ ಕಾಮಣ್ಣನಿಗೆ ಅದ್ದೂರಿಯಾಗಿ  ಸನ್ಮಾನಿಸಿ ಐದು ಲಕ್ಷ ರೂ.ಬಹುಮಾನವನ್ನು ನೀಡಲಾಯಿತು.
ಕಾಮಣ್ಣ ತನಗೆ ಸಿಕ್ಕ ಬಹುಮಾನ ಮತ್ತು ಸಮ್ಮಾನದಿಂದ ಬಹಳಷ್ಟು ಸಂತೋಷಗೊಂಡ.ಕಾರ್ಯಕ್ರಮ ಮುಗಿದ ನಂತರ ಈ ಖುಷಿಯನ್ನು ತನ್ನ ಪತ್ನಿಯ ಜೊತೆ ಹಂಚಿಕೊಳ್ಳಲು ಮನೆಗೆ ದೌಡಾಯಿಸಿ ,ಮನೆಗೆ ಬಂದು ತನಗೆ ಸಿಕ್ಕ ಬಹುಮಾನದ ಹಣ ವನ್ನೂ ಸತ್ಯವತಿಗೆ ತೋರಿಸಿ ತುಂಬಾ ಖುಷಿಯಲ್ಲಿ ತೆಲಾಡಿದರು .ಆದರೆ ಇದೆಲ್ಲಾ ಸತ್ಯವತಿ ಗೆ ಒಂದು ನಾಟಕ ಅನಿಸಿತು.

      ಇತ್ತ ಭೀಮಣ್ಣ ಮತ್ತು ಪುಣ್ಯವತಿ   ತನ್ನ ಗೆಳೆಯನಿಗೆ  ಬಹುಮಾನ ಸಿಕ್ಕಿದನ್ನು ನೋಡಿ ತುಂಬಾ ಖುಷಿಪಟ್ಟರು. ಕೆಲವು ದಿನ ಕಳೆದ ನಂತರ  ಒಂದು ದಿನ ಭೀಮಣ್ಣ  ತನ್ನ ಮನೆಯ ಹೊರಗಡೆ ಕುಳಿತಿದ್ದರು ಆಗ ಅವರಿಗೆ  ಸತ್ಯವತಿ ಹೇಳಿದ ಆ ಮಾತು ನೆನಪಾಯಿತು ಆದರೆ ಅದೆಲ್ಲ ಸುಳ್ಳು ,ನನ್ನ ಸ್ನೇಹಿತ  ನನಗೆ ಮೋಸ ಮಾಡಲು ಸಾಧ್ಯ ವಿಲ್ಲ ಎಂದು ಮತ್ತೆ ಅದನ್ನು ನಂಬಲಿಲ್ಲ.ಅಷ್ಟರಲ್ಲೇ ಊರಿನ ಸಾಹುಕಾರ ಸಂಗಾಪ್ಪರು ಭೀಮಣ್ಣ ನ ಮನೆಯ ಪಕ್ಕದಿಂದಲೆ ಬೇರೆ ಕಡೆ ಹೋಗುತ್ತಿದ್ದರು. ಭೀಮಣ್ಣ ತುಂಬಾ ಹತಾಶೆಯಿಂದ ಕುಳಿತಿರುವುದನ್ನು ನೋಡಿ ಏನಾಗಿದೆ ಭೀಮಣ್ಣ ಎಂದು ಕೇಳಿದರು.ಆಗ ಭೀಮಣ್ಣ ಸಹುಕಾರರೆ ನನ್ನ ಬೆಳೆಗೆ ಕಾಮಣ್ಣ ಬೆಂಕಿ ಇಟ್ಟಿದ್ದಾನೆ ಅಂತ ಸತ್ಯವತಿ ನನಗೆ ಹೇಳಿದಳು ಆದರೆ ನಂಗೆ ನಂಬಿಕೆ ಆಗುತ್ತಿಲ್ಲ ಅದನ್ನೇ ಎನ್ ಮಾಡ್ಬೇಕು ಅಂತ ಯೋಚನೆ ಮಾಡುತ್ತಾ ಇದ್ದೇನೆ ಎಂದನು. ಆಗ ಸಂಗಪ್ಪ ಭಿಮಣ್ಣಗೆ ಸಮಾಧಾನ ಮಾಡಿ , ನೀನು ಅದೆಲ್ಲಾ ಮರೆತು ಮತ್ತೆ ಹೊಲವನ್ನು  ಉಳುಮೆ ಮಾಡು ಎಂದು ಹೇಳಿ ಹೋದರು.
ಭೀಮಣ್ಣ ಸಾಹುಕಾರರ ಮಾತು ಕೇಳಿ ಮತ್ತೆ ಹೊಲವನ್ನು ಉಳುಮೆ ಮಾಡಲು ಆರಂಭ ಮಾಡಿದನು.ಅವರು ಪಟ್ಟ ಕಷ್ಠದಿಂದಾಗಿ ಹೊಲದಲ್ಲಿ ಬೆಳೆಯು ಕೂಡ ಚೆನ್ನಾಗಿ ಬಂತು.ಅದರಿಂದ ಸಂತೋಷಗೊಂಡ ಭೀಮಣ್ಣ 
 ಇನ್ನು ಹುಮ್ಮಸಿನಿಂದ ಕೆಲಸ ಮಾಡಲು ಪ್ರಾರಂಭ ಮಾಡಿದರು.

       ಕಾಮಣ್ಣ ಮಾಡಿದ ಮೋಸ ಮತ್ತು ಪಾಪದ ಕೆಲಸಕ್ಕೆ ತನ್ನ ಹೆಂಡತಿಯಾದ ಸತ್ಯವತಿ ಗೆ ಕುಷ್ಠರೋಗ ಬಂದಿತ್ತು.ಈ ರೋಗವನ್ನು ವಾಸಿಮಾಡಿಸಲು ಬೇರೆ ಬೇರೆ ಆಸ್ಪತ್ರೆಗಳಿಗೆ ಹೋಗಿ ಸಂಪೂರ್ಣವಾಗಿ ಆ ಐದು ಲಕ್ಷ ರೂ. ಗಳನ್ನು ಹಾಕುತ್ತಾರೆ. ಹೀಗೆ ಕಾಮಣ್ಣನ ಮೋಸದ ಹಣವು ಆಸ್ಪತ್ರೆಯಲ್ಲಿ  ಹಾಕಲಾಯಿತು.
 ಇದೆಲ್ಲ ಮುಗಿದ ನಂತರ ಸತ್ಯವತಿ ಕಾಮಣ್ಣನಿಗೇ ತನ್ನ ಸ್ನೇಹಿತನ ಬಳಿ ಹೋಗಿ ಕ್ಚಮೆ ಕೇಳಲು ಹೇಳಿದಳು. ಆಗ ಕಾಮಣ್ಣ ತಾನು ಮಾಡಿದ ತಪ್ಪಿಗೆ ಭೀಮಣ್ಣ ನ ಮನೆಗೆ ಹೋಗಿ ತನ್ನ ಗೆಳೆಯನ ಕಾಲಿಗೆ ಬಿದ್ದು ಕ್ಷಮೆ ಕೇಳಿದನು.ಭೀಮಣ್ಣ ತನ್ನ ಗೆಳೆಯನಿಗೆ ಕ್ಷಮಿಸುತ್ತಾನೆ.ನಂತರ ಭೀಮಣ್ಣ,ಕಾಮಣ್ಣ,ಸತ್ಯವತಿ,ಮತ್ತು ಪುಣ್ಯವತೀ ಎಲ್ಲರೂ ಕೂಡಿ ಊಟ ಮಾಡಿ ಮತ್ತೆ ಒಂದೇ ಕುಟುಂಬದ ಹಾಗೆ ಜೀವನವನ್ನು ನಡೆಸುತ್ತಾರೆ.ಹೀಗೆ ಭೀಮಣ್ಣ ಮತ್ತು ಕಾಮಣ್ಣ ರು ಅಮೃತಾಪುರದ ಹೆಸರನ್ನು ಅಮೃತದ ಹಾಗೆ ಬೆಳಗಿದರು.
-  ವೈಷ್ಣವಿ ರಾಜಕುಮಾರ ಗೊಡಂಪಲ್ಲೆ. ಕರಕ್ಯಾಳ ಗ್ರಾಮ
ತಾ.ಔರಾದ, ಜಿ.ಬೀದರ್. 

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ) ±

ಕಲ್ಲುತೇರಿನ ಕುಸುರಿ : ಪುಸ್ತಕ ಅವಲೋಕನ – ವರುಣ್‌ರಾಜ್‌ ಜಿ.

                       
ಮಾನ್ಯ ಶ್ರೀ ವೆಂಕಟೇಶ ಬಿ. ಕಮಲಾಪುರ ಇವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಶ್ರೀ ಬಿ.ಅರುಣ್‌ ಕುಮಾರ್, ಶ್ರೀ ಶ್ರೀಶೈಲ ಬಡಿಗೇರ, ಶ್ರೀ ಕ್ಯಾದಿಗಾಳ್‌ ಉದೇದಪ್ಪ, ಹಾಗೂ ಶ್ರೀ ಸಿದ್ಧಲಿಂಗೇಶ ಅಂಕಲಕೋಟಿ ಇವರ ಸಹಸಂಪಾದಕತ್ವದಲ್ಲಿ ಒಡಮೂಡಿರುವ ʼಕಲ್ಲು ತೇರಿನ ಕುಸುರಿʼಎಂಬ ಪ್ರಾತಿನಿಧಿಕ ಕವನ ಸಂಕಲನವನ್ನು ಬಳ್ಳಾರಿ ಜಿಲ್ಲೆಯ ಶ್ರಾವ್ಯ ಪ್ರಕಾಶನ ಪ್ರಕಟಿಸಿದೆ. 

ʼಅಕ್ಷರ ಲೋಕದಲ್ಲಿ ಹೆಕ್ಕಿ ತಂದಿರುವʼ ಈ ಪ್ರಾತಿನಿಧಿಕ ಕವನ ಸಂಕಲನವನ್ನು ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರ ವಿದ್ವತ್ತಿಗೆ ಹಾಗೂ ಸಕಲ ಶ್ರೀಗಳ ಪಾದ ಕಮಲಕ್ಕೆ ಅರ್ಪಿಸಿರುವುದು ವಿಶೇಷ. ಕೃತಿಗೆ ʼನುಡಿ ಹೂಗಳನ್ನುʼ ಸಮರ್ಪಿಸಿರುವ ಮಾನ್ಯ ಡಾ. ಜಿ.ಬಿ. ಕನಕೇಶಮೂರ್ತಿ ಅವರ ವಿದ್ವತ್ ಪೂರ್ಣ ಮುನ್ನುಡಿ ಹಾಗೂ ಶ್ರೀ ಕೆ.ಬಿ. ವೀರೇಶರ ವಿಚಾರ ಪೂರ್ಣ ಬೆನ್ನುಡಿ ಕೃತಿಯ ಮೆರುಗನ್ನು ಹೆಚ್ಚಿಸುವುದರ ಜೊತೆಗೆ ಓದುಗರಿಗೆ ಉತ್ತಮ ಪ್ರವೇಶಿಕೆಯನ್ನು ಒದಗಿಸಿವೆ. ಸು. ೫೦ ಜನ ಕವಿಗಳ ಕವನಗಳನ್ನು ಇಲ್ಲಿ ಸಂಕಲಿಸಲಾಗಿದ್ದು, ಒಟ್ಟು ೧೦೦ ಕವಿತೆಗಳನ್ನು ʼಆಯ್ದುಕೊಂಡು ಹೂಮಾಲೆ ಕಟ್ಟಿ ಕಲ್ಲು ತೇರಿಗೆ ಸಿಂಗರಿಸಲಾಗಿದೆʼ.   

ʼಕಲ್ಲುತೇರಿನ ಕುಸುರಿʼ ಎಂಬ ಶೀರ್ಷಿಕೆಯೇ ಬಹಳಾ ಆಕರ್ಷಕವಾಗಿದೆ. ಹಂಪಿಯ ಪರಿಸರದಲ್ಲಿ ಬೆಳೆದ ಸಂಪಾದಕರು ಅದೇ ಹಂಪಿಯ ವಿಶ್ವ ಪ್ರಸಿದ್ಧ ಕಲ್ಲಿನ ತೇರನ್ನು ತಮ್ಮ ಕೃತಿ ಶೀರ್ಷಿಕೆಯಾಗಿ,  ಮುಖ ಪುಟದ ಚಿತ್ರವಾಗಿ ಬಳಸಿರುವುದು ಸಹಜವೂ ಸುಂದರವೂ ಆಗಿದೆ. ಈ ಪ್ರೀತಿ ಮುಖ ಪುಟಕ್ಕೆ ಸೀಮಿತವಾಗದೇ ಕೃತಿಯ ಒಳ ಪುಟಗಳಲ್ಲಿಯೂ ಸಹಾ ʼಕಲ್ಲು ಕುಸುರಿ ನಗರʼ, ʼಕಲ್ಲುತೇರಿನ ಕುಸುರಿʼ, ʼಕಲ್ಲು ತೇರುʼ, ʼನಾ ಕಂಡ ಹಂಪಿʼ, ʼಹಂಪಿಯ ಮಡಿಲುʼ, ʼಕಲ್ಲು ಕಲ್ಲಿನಲ್ಲೂ ಸಾವಿರ ಸೊಲ್ಲುʼ, ʼಹೂವಾಗಿ ಅರಳಿತು ಕಲ್ಲುʼ, ʼಶಿಲೆ ಕಲೆಯ ಸೊಂಪುʼ ಮುಂತಾದ ಕವಿತೆಗಳಲ್ಲಿ ಒಡಮೂಡಿದೆ. 

ಅಗ್ನಿ ಪುರಾಣದ ಒಂದು ಶ್ಲೋಕ ಕಾವ್ಯಾಭಿವ್ಯಕ್ತಿಯ ಮಹತ್ವವನ್ನು ಮುಂದಿನಂತೆ ವಿವರಿಸುತ್ತದೆ. “ನರತ್ವಂ ದುರ್ಲಭಂ ಲೋಕೇ ವಿದ್ಯಾತತ್ರಸುದುರ್ಲಭಾ/ ಕವಿತ್ವಂ ದುರ್ಲಭಂ ತತ್ರ ಶಕ್ತಿಸ್ತತ್ರಸುದುರ್ಲಭಾ// (ಲೋಕದಲ್ಲಿ ಮನುಷ್ಯನಾಗಿ ಜನಿಸುವುದು ದುರ್ಲಭ ಹೀಗಿರುವಾಗ ವಿದ್ಯೆಯನ್ನು ಸಂಪಾದಿಸುವುದು ಇನ್ನು ದುರ್ಲಭ, ಇದಕ್ಕಿಂತ ಕಠಿಣವಾದ್ದು ಕಾವ್ಯಶಕ್ತಿಯನ್ನು ಪಡೆಯುವುದು. ಇದೆಲ್ಲದಕ್ಕಿಂತ ಕಠಿಣ ಕಾವ್ಯದ ಸಹಜ ಅಭಿವ್ಯಕ್ತಿ) ಇಂತಹಾ ದುಲರ್ಭವಾದ ಕಾವ್ಯಾಭಿವ್ಯಕಿಯ ಶಕ್ತಿಯನ್ನು ಪಡೆದಿರುವ ೫೦ ಕವಿಮನಗಳ ಪ್ರತಿಭೆಯನ್ನು ಒಂದೇ ಕೃತಿಯಲ್ಲಿ ಹಿಡಿದಿಟ್ಟಿರುವ ಹಾಗೂ ಓದುಗರ ಮುಂದೆ ತೆರೆದಿಡುವ ಹೆಗ್ಗಳಿಕೆ ಈ ಕೃತಿಯದ್ದು. 

ಶಕ್ತಿ ಕವಿ  ರನ್ನ “ಕಟ್ಟಿಯಮೇನೋ ಮಾಲೆಗಾರನ ಪೊಸ ಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೇ” ಎಂಬ ತನ್ನ ಮಾತಿನಲ್ಲಿ ಕವಿತಾಭಿವ್ಯಕ್ತಿಯ ಶಕ್ತಿಯನ್ನು ಒಂದು ಸುಂದರವಾದ ಹೂವಿನ ಮಾಲೆಗೆ ಹೋಲಿಸಿ, ಕಾವ್ಯ ಎಷ್ಟೇ ಸುಂದರವಾಗಿದ್ದರೂ ಅದನ್ನು ಮುಡಿಯುವವರಿಲ್ಲದ ಅಂದರೆ ಆಸ್ವಾದಿಸುವವರಿಲ್ಲದ ಪಕ್ಷದಲ್ಲಿ ಆ ಹಾರವು ಅಥವಾ ಕಾವ್ಯವು ಹಾಗೆಯೇ ವ್ಯರ್ಥವಾಗಿ ಬಾಡಿ ಹೋಗುವುದು ಎಂದು ಹೇಳಿರುವುದು ವರ್ತಮಾನದ ಸಂಧರ್ಭಕ್ಕೆ ಸೂಕ್ತವಾಗಿ ಹೊಂದುತ್ತದೆ.

 ನಮ್ಮ ನಡುವೆ ಹಲವಾರು ಜನ ಕವಿಗಳು ಎಲೆಮರೆಯ ಕಾಯಿಗಳಂತೆ ಯಾರ ಕಣ್ಣಿಗೂ ಬೀಳದೇ ಬಹಳ ಅದ್ಬುತವಾದ ಸಾಹಿತ್ಯ ರಚನೆ ಮಾಡುತ್ತಿರುವುದನ್ನು ಕಾಣಬಹುದು. ಈ ಕೃತಿಯಲ್ಲಿ ಇಂತಹ ಕೆಲವು ಎಲೆ ಮರೆಯ ಪ್ರತಿಭೆಗಳ ಕವನಗಳು ಸೇರಿವೆ.   ಇಂತಹ ಕವಿಗಳನ್ನು ಮತ್ತವರ ಕಾವ್ಯವನ್ನು ಜಗತ್ತಿಗೆ ಪರಿಚಯಿಸುವ, ಅವರ ಕಾವ್ಯಕ್ಕೆ ಸಾರ್ಥಕತೆಯನ್ನು ಒದಗಿಸುವ ಕೆಲಸವನ್ನು ಇಲ್ಲಿನ ಸಂಪಾದಕರು ಮಾಡಿರುವರು. ಹಲವಾರು ಜನ ಯುವ ಕವಿಗಳೂ ತಮ್ಮ ಕವಿತೆಗಳನ್ನು ಪ್ರಕಟಿಸಬೇಕೆಂಬ ಉತ್ಕಟವಾದ ವಾಂಚೆಯನ್ನು ಹೊಂದಿರುತ್ತಾರೆ. ಅಂತಹಾ ಯುವ ಬರಹಗಾರರ ಪ್ರತಿಭೆಗೆ ವೇದಿಕೆಯನ್ನು ಒದಗಿಸುವ, ಅವರನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಬಹಳಾ ಮಹತ್ವದ್ದು ಇಂತಹ ಪುಣ್ಯದ ಕೆಲಸವನ್ನು ಕೈಗೊಂಡಿರುವ ಶ್ರೀ ವೆಂಕಟೇಶ ಬಿ ಕಮಲಾಪುರ ಅವರ ಮತ್ತು ಇತರೆ ಸಂಪಾದಕರ ಪ್ರಯತ್ನ ಅಭಿನಂದನಾರ್ಹವಾದದ್ದು.
          (ಮಾನ್ಯ ಶ್ರೀ ವೆಂಕಟೇಶ ಬಿ. ಕಮಲಾಪುರ)

ಕೃತಿಯ ಕವಿತೆಗಳನ್ನು ಗಮನಿಸುವುದಾದರೇ, ಯಶೋಧಾ ಭಟ್ಟರ ʼಕದʼ ಎಂಬ ಕವಿತೆ ಇದು ಮನೆಯೊಳಗೆ ʼಮನೆಯೊಡೆಯನಿದ್ದಾನೋ ಇಲ್ಲವೋʼ ಎಂಬ ವಚನವನ್ನು ನೆನಪಿಸುವಂತಿದೆ. ಇಲ್ಲಿ ʼಮನದ ಒಳಮನೆಯ ಕದವ ತೆರೆಯಬೇಕಿನ್ನು ಗಾಢಾಂಧಃಕಾರದಿ ಬೆಳಕ ತೂರಿಸಲುʼ ಎಂದು ಪ್ರಾರಂಭವಾಗುವ ಈ ಕವಿತೆ ನಮ್ಮ ಮನಸಿನ್ನ ಒಳ ಕದವನ್ನು ತೆರೆಯಬೇಕಾಗಿದೆ, ತೆರೆದು ಅಲ್ಲಿ ತುಂಬಿರುವ ಅಜ್ಞಾನದ ತಮವನ್ನು ಓಡಿಸಿ ಜ್ಞಾನದ ಪ್ರಭೆಯನ್ನು ಒಳಗೆ ಹರಿಸಿ ಆ ಮೂಲಕ ಕಳವಳ, ನರಳುವಿಕೆ, ದುಗುಡ ದುಮ್ಮಾನಗಳನ್ನು ಕಳೆದು ಜೀವನ ಗರಿಬಿಚ್ಚಿ ನವಿಲಿನಂತೆ ಆನಂದದಿಂದ ನಲಿಯುವಂತೆ ಕುಣಿಯಬೇಕು ಎನ್ನುತದೆ. ಕವಿತೆಯ ಮೊದಲ ಸಾಲಿನ ʼಮನದ ಒಳಮನೆಯ ಕದʼ ಎಂಬ ಪ್ರಯೋಗ ಮನಸ್ಸಿನ ಅಗಾಧತೆ ವ್ಯಕ್ತಮಾಡಿದೆ. ಮೇಲ್ನೋಟಕ್ಕೆ ಇದೊಂದು ಸರಳ ಕವಿತೆಯಾಗಿ ಕಂಡರೂ ಆಳವಾದ ಆಧ್ಯಾತ್ಮಿಕ ಸ್ಪರ್ಶ ಇದರಲ್ಲಿದೆ. ಅಂತರಂಗ – ಬಹಿರಂಗ, ಒಳಮನೆ – ಹೊರ ಮನೆ, ಜ್ಞಾನ – ಅಜ್ಞಾನ, ಬೆಳಕು – ಅಂಧಕಾರ, ಕಳವಳ, ನರಳುವಿಕೆ – ಆನಂದ ಮುಂತಾದ ಪದಗಳ ಬಳಕೆ ಈ ಕವಿತೆಗೊಂದು ಆಳವಾದ ಮತ್ತು ವಿಸ್ತಾರವಾದ ನೋಟಕ್ರಮವನ್ನು ಒದಗಿಸಿರುವ ಕವಿತೆ ಒಂದು ಸರಳ ತತ್ತ್ವಪದದ ಲಕ್ಷಣವನ್ನು ಒಳಗೊಂಡದ್ದಾಗಿದೆ. ಇವರದೇ ಮತ್ತೊಂದು ಕವಿತೆ ʼತಿರುವುಗಳುʼ ಇದರಲ್ಲಿ ನಮ್ಮ ಬದುಕಿನ ಪಲ್ಲಟಗಳ ಕುರಿತಾದ ಆತಂಕಗಳನ್ನು ವ್ಯಕ್ತಮಾಡುತ್ತಲೇ, ಅದಕ್ಕೆ ಹೊಂದಿಕೊಂಡೇ ಸತ್ಯ ಮಾರ್ಗದಲ್ಲಿ ನಡೆಯಬೇಕೆಂಬ ಸಂದೇಶ ಅಡಗಿದೆ. ಹಸಿರ ಸಿರಿಯ ಮನೆಯಿಂದ ಬಯಲ ಕಾಂಕ್ರೀಟ್‌ ಕಾಡಿಗೆ, ಇಂತಹಾ ತಿರುವುಗಳ ನಡುವೆಯೇ, ಬಾಳ ಬಂಡಿ ಸಾಗುತ್ತಿರುವ ಮತ್ತು ಸಾಗಬೇಕಾಗಿರುವ ಅನಿವಾರ್ಯತೆಯನ್ನು ಇಂತಹಾ ಅನಿವಾರ್ಯ ಸಂಧರ್ಭದಲ್ಲಿಯೂ ಸತ್ಪಥವನ್ನು ಬಿಡದೆ ನಡೆಯುವ ಛಲವನ್ನು ಈ ಕವಿತೆ ಆಶಿಸುತ್ತದೆ. 

ರವಿ ದಳವಾಯಿಯವರ ʼಬಡವನ ಹಸಿವುʼ ಎಂಬ ಕವಿತೆಯಲ್ಲಿ ಇಂದಿನ ಬಡವ/ಕಾರ್ಮಿಕರು, ಊಟಕ್ಕಾಗಿ ನಗರಗಳಿಗೆ ವಲಸೆ ಬಂದು ಪಡುವ ಕಷ್ಟ, ಬಡತನ, ಹಸಿವು, ಕರೋನಾ ಕಾಲದಲ್ಲಿ ಅವರು ಅನುಭವಿಸಿದ ವೇದನೆ ಇವುಗಳನ್ನು ಬಹಳ ಸರಳ ಪದಗಳ ಮೂಲಕ ಅಷ್ಟೇ ತೀವ್ರವಾಗಿ ಮನಸ್ಸಿಗೆ ನಾಟುವಂತೆ ವಿವರಿಸಲ್ಪಟ್ಟಿದೆ. ಮನೆಯಿಲ್ಲದ ಕಟ್ಟಡ ಕಾರ್ಮಿಕರು, ತಮ್ಮ ಊಟಕ್ಕಾಗಿ ಪರದಾಡುವ ರೈತರು, ಸರಿಯಾದ ಬಟ್ಟೆಯಿಲ್ಲದ ನೇಕಾರರು ಮುಂತಾದವರು ಇಂದಿಗೂ ಇರುವ ನಮ್ಮ ದೇಶದಲ್ಲಿ ಕೋವಿಡ್‌ -೧೯ ವೈರಸ್‌ ನಿಂದ ಭಾದೆಗೊಳಗಾದವರು ಒಂದು ಕಡೆ ಆದರೆ, ಲಾಕ್‌ ಡೌನ್‌ ನ ಕಾರಣದಿಂದ ಕೆಲಸವಿಲ್ಲದೇ, ಸಂಪಾದನೆ ಇಲ್ಲದೆ, ಊಟಕ್ಕಾಗಿ ಕಷ್ಟಪಟ್ಟವರು ಮತ್ತೊಂದು ಕಡೆ. ಇಂತಹ ಕಾರ್ಮಿಕರ ಹಸಿವಿನ ಬವಣೆಯನ್ನು ನಮ್ಮ ಕಣ್ಣ ಮುಂದೆ ತರುತ್ತದೆ ಈ ಕವಿತೆ.

ಶ್ರೀಮತಿ ಅನ್ನಪೂರ್ಣ ಹಿರೇಮಠರ ʼನೀನಿಲ್ಲದ ಹುಣ್ಣಿಮೆʼ ಎಂಬ ಒಂದು ಕವಿತೆ ಜಯಂತ್‌ ಕಾಯ್ಕಿಣಿಯವರ ಈ ಸಂಜೆ ಯಾಕಾಗಿದೆ…. ಎಂಬ ಸುಂದರ ಕವಿತೆಯನ್ನು ನೆನಪಿಸುತ್ತದೆ. ಹುಣ್ಣಿಮೆಯ ರಾತ್ರಿಯ ಸೊಬಗನ್ನು ಈ ಕವಿತೆ ವಿವರಿಸುತ್ತಲೇ ಆ ರಾತ್ರಿಯ ಸುಂದರ ವಾತಾವರಣ ಕವಯತ್ರಿಗೆ ಸೌಂದರ್ಯಾನುಭವವನ್ನು ಕೊಡುವ ಬದಲು ವೇದನೆಯ ರಾತ್ರಿಯಾಗಿ ಪರಿಣಮಿಸಿರುವ ಚಿತ್ರಣ ಇಲ್ಲಿದೆ. ವಾತವರಣ, ಸಂಪತ್ತು ಇತ್ಯಾದಿಗಳು ಎಷ್ಟೇ ಇದ್ದರೂ ಮನಸಿಗೆ ಬೇಕಾದವರ ಸನಿಹ, ಅಪ್ಪುಗೆಗಳಿಲ್ಲದೆ ಹೋದ ಮೇಲೆ ಇವೆಲ್ಲವೂ ವ್ಯರ್ಥವೇ ಎಂಬುದನ್ನು ಕವಿತೆ ಬಹಳ ಚನ್ನಾಗಿ ಧ್ವನಿಸಿದೆ. 

ಬಡಿಗೇರ ಮೌನೇಶರ ʼಮನಸು ನದಿಯಾಗಬೇಕುʼ ಎಂಬ ಒಂದು ಕವಿತೆಯಲ್ಲಿ ಕವಿ ಮನಸ್ಸು ನದಿಯಾಗಬೇಕು, ಆ ಮೂಲಕ ಅನಿಷ್ಟಗಳನ್ನು ಕೊಚ್ಚಿ, ನಾರುತಿರುವ ಕೊಳೆಯನ್ನು ತೊಳೆದು, ಜಡವಾಗಿ ಹಿಂಡುತ್ತಿರುವ ಬೇಡದ ನೆನಪುಗಳ ತೊಳೆದು, ಹೊಸ ಬರವಸೆಗಳ ಹೊತ್ತು ತರುವ, ಬರಡು ಹೃದಯದೊಳಗೆ ಶಾಂತಿ, ಸೌಹಾರ್ದತೆಯ ಹಸಿರು ಚಿಗುರುವಂತೆ ಮಾಡುವ ನದಿಜಲದಂತೆ ಮನಸ್ಸು ನದಿಯಾಗಿ ಹರಿಯಬೇಕುಎಂದು ಕವಿತೆ ಆಶಿಸುತ್ತೆ. ಇವರದೇ ಮತ್ತೊಂದು ಕವಿತೆ ʼಮರಳಿ ಬರಲಾರ ಅಪ್ಪʼ ಇದು ತನ್ನ ಕಂದೆಯೊಂದಿಗೆ ಮಗುವೊಂದು ಕಳೆದುಕೊಳ್ಳಬದುದಾದ ಸುಖವನ್ನು ಭಾವನಾತ್ಮಕತೆಯನ್ನು ವಿತ್ರಿಸುತ್ತಲೇ, ಮರಳಿ ಬರಲಾರದ ತಂದೆಯ ಕುರಿತ ಪ್ರೀತಿ ಮತ್ತು ಆವೇದನಾ ಮಿಶ್ರಿತ ಕೋಪ ವ್ಯಕ್ತಮಾಡುವ ರೀತಿ ಬಹಳ ವಿಶಿಷ್ಟವಾಗಿ ಮೂಡಿಬಂದಿದೆ. 

ಶ್ರೀ ಗುರುನಾಥ ಬೋರಗಿಯವರ ʼಏಕೆʼ ಎಂಬ ಕವನ ಮಾನವನ ಚೇಷ್ಟೆಯ ಬುದ್ದಿಯನ್ನು, ಮಗುವನ್ನು ಚಿವುಟು ತೊಟ್ಟಿಲು ತೂಗುವ ಗುಣವನ್ನು ವಿಡಂಬಿಸುತ್ತಲೇ, ನಾವೇ ಮಾಡಿಕೊಂಡ ಇಕಟ್ಟುಗಳು ನಮನ್ನು ಬಂಧಿಸುವ ರೀತಿಯನ್ನು ಕವಿ ʼಇಳಿದು ಕೊಳೆಯ ರಾಡಿʼ,  ʼಸಸಿಯ ಚಿಗುರನು ಚಿವುಟಿʼ, ಮುಂತಾದ ರೂಪಕಗಳ ಮೂಲಕ ವಿವರಿಸಿದ್ದಾರೆ. ʼಕಂಡುಂಡವರುʼ ಎಂಬ ಕವಿತೆಯಲ್ಲಿ ಕನಸು ಕಾಣುವುದರಲ್ಲಿಯೇ ನಮ್ಮ ಜೀವನವೆಲ್ಲಾ ಕಳೆದುಹೋಗುವ, ಇರುವುದರಲ್ಲಿ ತೃಪ್ತಿ ಪಡದೇ, ಹೊಸದಕ್ಕಾಗಿ ಹಂಬಲಿಸುತ್ತಾ ನಮ್ಮನ್ನು ನಾವು ಅದಕ್ಕೆ ಮಾರಿಕೊಳ್ಳುವ ದಿಕ್ಕೆಟ್ಟು ನಿಲ್ಲುವ ಪರಿಸ್ಥಿತಿಯನ್ನು ಬಹಳ ಅರ್ಥಪೂರ್ಣವಾಗಿ ಕವಿ ವೆಂಕಟೇಶ್‌ ಈಡಿಗರರು ವಿವರಿಸಿದ್ದಾರೆ. 

ಶ್ರೀ ವೆಂಕಟೇಶ್‌ ಬಿ ಕಮಲಾಪುರ ಅವರ ʼಕಾರುಣ್ಯ ಶಿಶು ನೇಗಿಲ ರೈತʼ ಕವಿತೆಯು ಕಾರುಣ್ಯವನ್ನೇ ತನ್ನ ಒಡಲಲ್ಲಿ ತುಂಬಿಕೊಂಡಿರುವ, ಶಿಶುವಿನಂತ ಮುಗ್ಧ ಮನಸ್ಸಿನ ರೈತನ ತ್ಯಾಗವನ್ನು ಅವನ ಕಾಯಕ ನಿಷ್ಠೆಯನ್ನು ವರ್ಣಿಸುತ್ತಾ ರೈತನಿಗೆ ಮನಃಪೂರ್ವಕವಾಗಿ ನಮನಗಳನ್ನು ತಿಳಿಸುವುದು. 
ಆದಿಕಾಲಂದಲೂ ಪಂಪನಿಂದ ರಾಘವಾಂಕ ಮೊದಲವರನ್ನೊಳಗೊಂಡು ಇತ್ತೀಚಿನ ವರೆಗೆ ಕುಲದ ಪ್ರಶ್ನೆ ಕನ್ನಡ ಸಾಹಿತ್ಯದಲ್ಲಿ ಚರ್ಚೆಗೆ ಒಳಗಾಗುತ್ತಲೇ ಬಂದಿದೆ. ಇದೇ ಪ್ರಶ್ನೆ ಕೆ. ಬಿ. ವೀರೇಶರ ʼಮರೆತವರ ಮೆಲು ದನಿʼ ಕವಿತೆಯಲ್ಲಿ ಹೊಸ ರೂಪದೊಂದಿಗೆ ವ್ಯಕ್ತವಾಗಿದೆ. ಗದ್ದೆಯ ಕೆಸರು ಅಂಟಿದ ಬಟ್ಟೆಗಳು, ಗ್ರೀಸ್‌ ಆಯಿಲ್‌ ಅಂಟಿದ ಗ್ಯಾರೇಜ್‌ ಕೆಲಸಗಾರರ ದಿರಿಸು, ತರಕಾರಿ ಮಾರುವ ಹೆಂಗಸಿನ ಸೀರೆ, ಬೇಡಿ ತಿನ್ನುವವರ ಹರಿದ ಬಟ್ಟೆಗಳನ್ನು ಆಯಾ ಸಮುದಾಯದ ಅಥವಾ ವೃತ್ತಿಯವರ ಪ್ರತಿನಿಧಿಗಳಾಗಿಸಿ ಅವರ್ಯಾರಿಗೂ ಇಲ್ಲದ ಕುಲದ ಕೀಳು ಮೇಲುಗಳು ಇವನ್ನು ಉಪಭೋಗಿಸುವ/ ಅವುಗಳಿಂದಲೇ ಜೀವನ ಸಾಗಿಸುವ ನಿನಗೇಕೆ ಎಂದು ಪ್ರಶ್ನಿಸುವುದು ಓದುಗನನ್ನು ಆಕರ್ಷಿಸುವ ಮತ್ತು ಚಿಂತನೆಗೆ ಹಚ್ಚುವ ಕೆಲಸವನ್ನು ಮಾಡುತ್ತದೆ. 

ʼವನವಾಸʼ ಎಂಬ ಶೀರ್ಷಿಕೆಯ ಕಟ್ಟೆ ಎಂ.ಎನ್. ಕೃಷ್ಣಸ್ವಾಮಿಯವರ ಕವಿತೆಯಲ್ಲಿ ಪೌರಾಣಿಕ ಪಾತ್ರಗಳ ಮೂಲಕ ವನವಾಸವನ್ನು, ವನವಾಸದಿಂದ ವಿಕಾಸವಾದ ಪಾಂಡವರ ಬದುಕನ್ನು ಅಹಂಕಾರದಿಂದ ಬೀಗಿ ಮಣ್ಣಾದ ಕೌರವರನ್ನು ಚಿತ್ರಿಸುತ್ತ ನಿರಹಂಕಾರ, ಸತ್ಯ, ಪ್ರೀತಿ ಧರ್ಮಗಳ ಮಹತ್ವವನ್ನು ಈ ಕವಿತೆಯಲ್ಲಿ ವಿವರಿಸಲಾಗಿದೆ. ವಿರೂಪಾಕ್ಷಪ್ಪ ಯು. ಹೊಸಪೇಟೆಯವರ ʼಕುಲಪೂಜೆʼ ಎಂಬ ಮತ್ತೊಂದು ಕವಿತೆ ತಮ್ಮ ತಮ್ಮ ಕಾಯಕದಲ್ಲಿಯೇ ದೇವರನ್ನು, ಪೂಜೆಯನ್ನು, ಕೈಲಾಸವನ್ನು ಕಾಣುವ ಹಲವು ವೈವಿಧ್ಯಮಯ ವೃತ್ತಿಗಳನ್ನು, ಹಾಗೆ ನಮ್ಮ ಕೆಲಸದಲ್ಲಿ ದೇವರನ್ನು ಕಾಣುವುದರ ಮಹತ್ವ ಮತ್ತು ಅದರ ಅವಶ್ಯಕತೆ, ಅನಿವಾರ್ಯತೆಯನ್ನು ವೈಚಾರಿಕವಾಗಿ ಚರ್ಚೆಗೆ ಒಳಪಡಿಸಿದೆ. 

ʼಎಲ್ಲರೂ ಸಮಾನರುʼ ಎಂಬ ಲೊಕೇಶ್‌ ಕಲ್ಕುಣಿಯವರ ಕವಿತೆ ಎಲ್ಲರೂ ಸಮಾನರು ʼಎನ್ನುವ ತತ್ತ್ವಕ್ಕೆ ಶ್ರೀ ಗಂಧವ ಲೇಪಿಸುʼ ಎನ್ನುವ ಮೂಲಕ ಎಲ್ಲರೂ ಸಮಾನರು ಎಂಬುದನ್ನು ಪ್ರತಿಪಾದಿಸುವುದು. ಎ.ಎನ್.ರಮೇಶ್‌ ಗುಬ್ಬಿಯವರ ʼಅಭಿನಂದನೆʼ ಎಂಬ ಕವಿತೆಯಲ್ಲಿ ನಮ್ಮ ಜೀವನದಲ್ಲಿ ನಮಗೆ ಬದುಕು ಕಲಿಸಿದ ಕಷ್ಟಗಳನ್ನು, ಒಳ್ಳೆಯದರ, ಒಳ್ಳೆಯವರ ಮಹತ್ವವನ್ನು ತಿಳಿಸಿದ ಕೆಟ್ಟ, ಕೆಟ್ಟವರನ್ನು ಅಲ್ಲದೆ ಇನ್ನು ಹಲವು ಹಿತ -ಅಹಿತಗಳನ್ನು ನೆನಸಿಕೊಂಡು ಅವುಗಳಿಗೆ ಅಭಿನಂದನೆ ಸಲ್ಲಿಸುವುದು ವಿಶೇಷವೆನಿಸುತ್ತದೆ. ಒಬ್ಬ ಮಾನವನನ್ನ ಪಕ್ವಗೊಳಿಸಲು ಕಷ್ಟ -ಸುಖ, ನೋವು- ನಲಿವು ಇತ್ಯಾದಿಗಳು ಬೇಕೆ ಬೇಕು ಕೆಲವು ನಮಗೆ ಆ ಕ್ಷಣಕ್ಕೆ ಸಂತಸವನ್ನು ನೀಡದೆ ಇದ್ದರೂ ಸಹಾ ಜೀವನದ ಪಾಠವನ್ನಂತು ತಪ್ಪದೇ ಕಲಿಸುತ್ತವೆ. ಈ ಹಿನ್ನೆಲೆಯಲ್ಲಿ ಮಾನವನು ತನಗೆ ಒದಗಿದ ಕಷ್ಟಗಳನ್ನು, ಅಹಿತಕತ ಅನುಭವಗಳನ್ನು ಸಹಾ ಸಮತಾ ದೃಷ್ಠಿಯಿಂದ ಸ್ವೀಕರಿಸಬೇಕೆನ್ನುವ ಆಶಯ ಈ ಕವಿತೆಯಲ್ಲಿ ಅಡಗಿದೆ.  ಇವುಗಳ ಜೊತೆಗೆ ʼಜ್ಞಾನದ ಹಣತೆʼ,  ʼವಿಪರ್ಯಾಸʼ, ʼದೀಪಾವಳಿʼ, ʼಅರಳುವ ಹೂಗಳುʼ ಸೇರಿದಂತೆ ಹಲವಾರು ವಿಚಾರಪೂರ್ಣ, ವೈವಿಧ್ಯಪೂರ್ಣ ಕವಿತೆಗಳನ್ನು ಈ ಕೃತಿ ಒಳಗೊಂಡಿದೆ. ಸಹೃದಯರು ಪುಸ್ತಕವನ್ನು ಕೊಂಡು ಓದಿ ಬರಹಗಾರರನ್ನು ಪ್ರೋತ್ಸಾಹಿಸಬೇಕೆಂದು ಕೋರುವೆ. ನಮಸ್ಕಾರಗಳು.
(ಪುಸ್ತಕದ ಹೆಸರು : ಕಲ್ಲು ತೇರಿನ ಕುಸುರಿ
ಪ್ರಧಾನ ಸಂಪಾದಕರು : ಶ್ರೀ ವೆಂಕಟೇಶ ಬಿ. ಕಮಲಾಪುರ ಪ್ರಕಾಶಕರು : ಶ್ರಾವ್ಯ ಪ್ರಕಾಶನ, ಬಳ್ಳಾರಿ.
 ಪುಟಗಳು : ೧೨೮,  ಬೆಲೆ : ೧೨೫.   ಪ್ರತಿಗಳಿಗಾಗಿ  ಸಂಪರ್ಕಿಸಿ : ೯೪೪೮೩೩೦೫೩೫)

- ವರುಣ್‌ ರಾಜ್‌ ಜಿ.
 ವಿಚಾರ ಮಂಟಪ ಸಾಹಿತ್ಯ ಬಳಗ – ಕರ್ನಾಟಕ. 
 # ೯೪೪೮೨೪೧೪೫೦


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮಂಗಳವಾರ, ಡಿಸೆಂಬರ್ 14, 2021

ಫಲಿತಾಂಶ ಪ್ರಕಟಣೆ (ಹನ್ನೆರಡನೇ ಪಾಕ್ಷಿಕ ಅವಧಿ) - ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.

ಸ್ಪರ್ಧೆಯ ವಿವರ :  "ಪ್ರತಿ ಹದಿನೈದು ದಿನಕ್ಕೊಮ್ಮೆ  ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ಬ್ಲಾಗ್ ನಲ್ಲಿ ಅತಿ ಹೆಚ್ಚು ವಿಕ್ಷಕರನ್ನು (views) ಪಡೆದ ಒಬ್ಬರನ್ನು ವಾರದ ಉತ್ತಮ ಬರಹಗಾರ/ಬರಹಗಾರ್ತಿ ಎಂದು ಗುರುತಿಸಿ  ಗೌರವಿಸಿ ಪ್ರಮಾಣ ಪತ್ರ ನೀಡಲಾಗುವುದು" ಎಂದು ಈ ಹಿಂದೆ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು ಅದಕ್ಕೆ ಸಂಭಂಧಿಸಿದಂತೆ ಅತಿ ಹೆಚ್ಚು ವೀಕ್ಷಕರನ್ನು‌ ಪಡೆದಿರುವ ಬರಹಗಾರರನ್ನು ಈ ದಿನದ ಗೌರವಕ್ಕೆ ಆಯ್ಕೆ ಮಾಡಲಾಗಿದೆ...
 
 ಪ್ರೊ. ಗಂಗಾರಾಂ ಚಂಡಾಲ, ಮೈಸೂರು.

 ಇವರ
 'ಬೆಳದಿಂಗಳ ಬಿಸಿಲು ತೀಕ್ಷ್ಣ'
 ಎಂಬ ಹೆಸರಿನ‌ ಕವಿತೆ ದಿನಾಂಕ : ೦೧.೧೨.೨೦೨೧ ರಿಂದ ೧೪.೧೨.೨೦೨೧  ರ ನಡುವಿನ ೧೨ ನೇ ಪಾಕ್ಷಿಕ ಅವಧಿಯಲ್ಲಿ  ವಿಚಾರ ಮಂಟಪ ಸಾಹಿತ್ಯ ಜಾಲ ಪತ್ರಿಕೆಯ ಜಾಲತಾಣದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಪಡೆದಿದ್ದು ಇವರನ್ನು ಈ ವಾರದ ಅತಿ ಹೆಚ್ಚು ವೀಕ್ಷಕರನ್ನು ಪಡೆದ ಉತ್ತಮ ಬರಹಗಾರರು ಎಂದು ಗುರುತಿಸಿ ಗೌರವಿಸಿ ಅಭಿನಂದನಾ ಪತ್ರವನ್ನು ನೀಡಲಾಗಿದೆ. 

 

ಇವರಿಗೆ ವಿಚಾರ ಮಂಟಪ ಬಳಗದ ಸಮಸ್ತ ಓದುಗರ, ಬರಹಗಾರರ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಹಾಗೂ ಅನಂತ ಧನ್ಯವಾದಗಳು 💐💐💐💐💐


(ನಿಮ್ಮ ಬರಹ ಗಳ  ಪ್ರಕಟಣೆಗಾಗಿ ಸಂಪರ್ಕಿಸಿ :
9448713659 ಸಂಪಾದಕರು ವಿಚಾರ ಮಂಟಪ ಸಾಹಿತ್ಯ ಪತ್ರಿಕೆ, (ವಾಟ್ಸಪ್ ಮಾತ್ರ)).

ಫಲಿತಾಂಶ ಪ್ರಕಟಣೆ (ಹನ್ನೊಂದನೇ ಪಾಕ್ಷಿಕ ಅವಧಿ) - ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.

ಸ್ಪರ್ಧೆಯ ವಿವರ :  "ಪ್ರತಿ ಹದಿನೈದು ದಿನಕ್ಕೊಮ್ಮೆ  ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ಬ್ಲಾಗ್ ನಲ್ಲಿ ಅತಿ ಹೆಚ್ಚು ವಿಕ್ಷಕರನ್ನು (views) ಪಡೆದ ಒಬ್ಬರನ್ನು ವಾರದ ಉತ್ತಮ ಬರಹಗಾರ/ಬರಹಗಾರ್ತಿ ಎಂದು ಗುರುತಿಸಿ  ಗೌರವಿಸಿ ಪ್ರಮಾಣ ಪತ್ರ ನೀಡಲಾಗುವುದು" ಎಂದು ಈ ಹಿಂದೆ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು ಅದಕ್ಕೆ ಸಂಭಂಧಿಸಿದಂತೆ ಅತಿ ಹೆಚ್ಚು ವೀಕ್ಷಕರನ್ನು‌ ಪಡೆದಿರುವ ಬರಹಗಾರರನ್ನು ಈ ದಿನದ ಗೌರವಕ್ಕೆ ಆಯ್ಕೆ ಮಾಡಲಾಗಿದೆ...
 
 ಡಿ. ಶಬ್ರಿನಾ ಮಹಮದ್ ಅಲಿ. ಶಿಕ್ಷಕಿ, ಚಳ್ಳಕೆರೆ.

 ಇವರ 
'ನಾ ಕೇಳದ ಹುಟ್ಟಿಗೇಕೆ ಶಿಕ್ಷೆ' ಎಂಬ ಹೆಸರಿನ‌ ಕವಿತೆ ದಿನಾಂಕ : ೧೫.೧೧.೨೦೨೧ ರಿಂದ ೩೦.೧೧.೨೦೨೧  ರ ನಡುವಿನ ೧೧ ನೇ ಪಾಕ್ಷಿಕ ಅವಧಿಯಲ್ಲಿ  ವಿಚಾರ ಮಂಟಪ ಸಾಹಿತ್ಯ ಜಾಲ ಪತ್ರಿಕೆಯ ಜಾಲತಾಣದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಪಡೆದಿದ್ದು ಇವರನ್ನು ಈ ವಾರದ ಅತಿ ಹೆಚ್ಚು ವೀಕ್ಷಕರನ್ನು ಪಡೆದ ಉತ್ತಮ ಬರಹಗಾರರು ಎಂದು ಗುರುತಿಸಿ ಗೌರವಿಸಿ ಅಭಿನಂದನಾ ಪತ್ರವನ್ನು ನೀಡಲಾಗಿದೆ. 

 

ಇವರಿಗೆ ವಿಚಾರ ಮಂಟಪ ಬಳಗದ ಸಮಸ್ತ ಓದುಗರ, ಬರಹಗಾರರ ಪರವಾಗಿ ತುಂಬು ಹೃದಯದ ಅಭಿನಂದನೆಗಳು 💐💐💐💐💐


(ನಿಮ್ಮ ಬರಹ ಗಳ  ಪ್ರಕಟಣೆಗಾಗಿ ಸಂಪರ್ಕಿಸಿ :
9448713659 ಸಂಪಾದಕರು ವಿಚಾರ ಮಂಟಪ ಸಾಹಿತ್ಯ ಪತ್ರಿಕೆ, (ವಾಟ್ಸಪ್ ಮಾತ್ರ)).

ರತ್ನ (ಕವಿತೆ) - ಮಂಜುನಾಥ ಬಿ ಪಿ.

ಮೊದಲ ಭೇಟಿಯ ಆರಂಭ
ಮೌನದೊಳಗಿನ ಭಾವನೆಗಳಿಗೆ ಅರ್ಥವ ನೀಡಿರಲು

ಮನಸ್ಸಿನೊಳಗಿನ ಕಣ್ಣ ತೆರೆದು
 ನಿನ್ನ ಬಿಂಬವ ಸೆರೆಹಿಡಿದಿರಲು

ಮಾತು ಮುತ್ತಾದ ಕಾಲವದು
ಮತ್ತಿನಲ್ಲಿ ಮಿಂದಿರಲು

ನನ್ನ ಹೃದಯದ ಸಂಚಲನೆ 
ಪ್ರತೀ ಹೆಜ್ಜೆ ನಿನ್ನದಿರಲು

ನನ್ನನೇ ನಾ ಮರೆವೇ ಈ ಜನ್ಮ ನಿನ್ನ
ಗುಂಗಿನೊಳ್ಳು.
- ಮಂಜುನಾಥ ಬಿ. ಪಿ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಓ ಧೀರದಾತಾ ಅಂಬೇಡ್ಕರ (ಕವಿತೆ) - ಸುನೀಲ್ ಬಂಜಾರ.

ಹುಟ್ಟಿದ್ದು  ಹೊಲಗೇರಿ, ಬೆಳೆದ್ದಿದು ಕೊಳೆಗೇರಿ,
ಉಂಡದ್ದು, ಕಂಡದ್ದು ಪೋಣಿಸಿದ ಉಪಕಾರಿ
ನಿನ್ನಂತೆ ಯಾರಿಹರು ಈ ಹೊತ್ತ ಸಾರಿ
ನೀ ಪಟ್ಟ ಕಷ್ಟಗಳ ಬಿಡುಗಡೆಯ ದಾರಿ.

ಹೊರಟೆ ನೀನು ಗುರಿಯನ್ನು ಹುಡುಕುತ್ತ,
ಬಂದು ಅಡರಿಸಿದವು ಕಲ್ಲು ಮುಳ್ಳುಗಳು
ಜಾಡಿಸಿ, ಮೇಲೆದ್ದು  ಮೈಕೋಡವಿ ನಿಂತೇ
ಶಿಕ್ಷಣ, ಸಂಘಟನೆ, ಹೋರಾಟದ ತ್ರಿಶೂತ್ರದಿಂದ.

ಸಾರಿದೇ ನೀನು ಮನುಕುಲದ ಸಂದೇಶ
ಅಲ್ಲಗಳೆದರು ನಿನ್ನ ಜಾತಿಮತೀಯನೆಂದು
ಸತ್ಯದ ದಾರಿಯಲಿ ನಡೆದೇ
ಸತ್ಯವೆ ನಿನ್ನದಾಯಿತು.
ನಿನ್ನಂತೆ ಯಾರಿಹರು ಜಗದೊಡೆಯ.

ಜಾತಿ, ಧರ್ಮಗಳ ಗೋಡೆ ಕೆಡವಿ
ಸಂವಿಧಾನವ ಬರೆಯಲು ಹೊರಟೆ.
ವಾಸ್ತವಿಕ ಪ್ರಜ್ಞೆಯಲಿ ವಿಹರಿಸಿದ ನೀನು
ಸಮುದ್ರದಾಚೆಗಿನ ಬದುಕನ್ನು ನಮಗೆ ಕಟ್ಟಿಕೊಟ್ಟೆ.

ಧರ್ಮದಲ್ಲಿ ದೇವರಾಗಿ, ರಾಜಕೀಯ ಗುರುವಾಗಿ
ನೀ ನಡೆದೇ.
ನಿನ್ನಂತೆ ನಡೆಯುವವವರು ಹುಡುಕಾಡ ಬೇಕಾಗಿದೆ,
ನೀ ಹಾಕಿಕೊಟ್ಟ ಮಾರ್ಗವ ಉಳಿಸಬೇಕಾಗಿದೆ.
ನಮಗೆ ನೀನೇ ಜಗದ ಗುರು.

ನಿಮ್ಮ ಜೀವನ ಚರಿತ್ರೆಯೇ ನಮಗೆ ಪ್ರೇರಣೆ
ನಿಮ್ಮ ಜ್ಞಾನದ ಎಂಜಲುಗಳು ನಾವು
ನಿಮ್ಮ ಗುಣಗಳ ಪಾಲಿಸುವೆಂದು ಪ್ರತಿಜ್ಞೆಯನು
ಮಾಡಿದರೆ ಮಾನವ ಜನ್ಮವೂ ಅದು ನಮಗೆ ಸಾರ್ಥಕವಾದಿತು,
ಏಷ್ಯಾದ ಬೆಳಕೆ.

ಬದುಕನ್ನು ಕಟ್ಟಿಕೊಟ್ಟೆ ನೀ ನಮಗೆ 
ನಿಮ್ಮ ಬದುಕನ್ನು ತೊರೆದು, ಆದರೆ.??
ನಾವು ಮಾಡಿದ್ದೂ ಜಾತಿರಾಜಕಾರ, ಮತಗಳ ಹುನ್ನಾರ, ನಿನ್ನ ಪ್ರತಿಫಲ ಪಡೆದ ಮಂಗಗಳು  ಮಾಡುತ್ತಿರುವುದು ಕೇವಲ ಅನ್ಯರಾಜಕಾರಣ.
ನಿನ್ನಂತೆ ಯಾರಿಹರು
 ಓ ಧೀರದಾತಾ ಅಂಬೇಡ್ಕರ್.

- ಸುನೀಲ್ ಬಂಜಾರ, ಸಂಶೋಧನಾರ್ಥಿ 
ಕ. ವಿ. ವಿ, ಹಂಪಿ.
ಮೊ : 7349177749.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
.

ನನ್ನೇಕೆ ನೋಡಕ್ಕೆ ಬರಲಿಲ್ಲ (ಕವಿತೆ) - ಕೆ. ಬಿ. ಮಧು, ಮಂಡ್ಯ.

ಕಣ್ಣಿನ ಹೋಳಗೆ ಕರಗಿದೆ ಮಂಜು.
ಜುಳುಜುಳು ಹರಿಯುತ್ತಿದೆ.       
 ತಡೆಯಿಲ್ಲದೆ ಹನಿಗಳ ಬಿಂದು ಹೊರಹೊಮ್ಮಿದೆ.
ಯಾಕೆ ಬರಲಿಲ್ಲ ತಡಿಯಾಕೆ.


ಹೃದಯದ ಭಾವ ಅರಿಯದೆ ಹೋದೆ.
ಈ ಹೃದಯವು ಬರಡು ಭೂಮಿಯಾಗಿದೆ.
ನೀ ಇಲ್ಲದೆ ಸದಾ ಕಾತರಿಸುತ್ತಿದೆ.
ಇನ್ನೇಕೆ ಬರಲಿಲ್ಲ ನನ್ನ ನೋಡಕ್ಕೆ.

ಕತ್ತಲು ಕವಿದಿದೆ ಮೋಡವು ಮುಸುಕಿದೆ.
ಹೊಂಗಿರಣ ಬೀಳದೆ ನಾ ಬಾಡಿದೆ.
ಮಕರಂದ ಚೆಲ್ಲದೇ ನಾ ಬೆಂದೆ.
ಏಕೆ ಬರಲಿಲ್ಲ ನನ್ನ ಸವಿಯಕ್ಕೆ.

ಮುಗುಳ ಕೋಪಕ್ಕೆ ನನ್ನೇಕೆ ಬಲಿ ಕೊಟ್ಟೆ.
ಬೆಟ್ಟದಷ್ಟು ಪ್ರೀತಿಯ ಏಕೆ ಬಚ್ಚಿಟ್ಟೆ.
ಬೇಡವಾದೆನಾ ನಿನಗೆ ಈ ಚಿಟ್ಟೆ.
ನೀನೇಕೆ ಬರಲಿಲ್ಲ ನನ್ನ ನೋಡಕ್ಕೆ.

 - ಕೆ. ಬಿ. ಮಧು, ಮಂಡ್ಯ. ತಾಲೂಕ್/ಜಿಲ್ಲೆ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕೆಲಸ - ಕಾಣಬೇಕು ಸಂತಸ (ಕವಿತೆ) - ಶಾಂತಾರಾಮ ಶಿರಸಿ, ಉತ್ತರ ಕನ್ನಡ.

ಕಾಯಕವೇ ಕೈಲಾಸ, 
ಬದುಕುವುದಕ್ಕೆ ಬೇಕು ಒಂದು ಕೆಲಸ, 
ನಾವು ಮಾಡೋ ಒಳ್ಳೆಯ ಕೆಲಸದಲ್ಲಿ ದೇವರ ವಾಸ, 
ಕಾಯಕದಲ್ಲಿ ಕಾಣಬೇಕು ಸಂತಸ... 
ಕೆಲಸ ಮಾಡ್ತಾ-ಮಾಡ್ತಾ ಜೀವನದ ಆಟ ಗೆಲ್ಲೋ ಓ! ಮನ್ಸಾ, 

ನಿನ್ನ ಬದುಕು - ನಿನ್ನ ಹಕ್ಕು, 
ದುಡಿಮೆಯಿಂದ ಮುಂದುಕು,
ಕಂಡಿದ್ದೆಲ್ಲಾ ಬೇಕು-ನೋಡಿದ್ದೆಲ್ಲಾ ಬೇಕು, 
ಬಯಸಿದ್ದೆಲ್ಲಾ ಬೇಕು,
ಕನಸು ಕಾಣುತ್ತಿರಬೇಕು, 
ಆದರೆ ಅವಶ್ಯಕತೆಗೆ ಏನು ಬೇಕೋ ಅಷ್ಟಿದ್ದರೆ  ಸಾಕು, 
ಇತರರ ನೋಡಿ ಅನುಕರಣೆಯ ಹಿಂದೆ ಬಿದ್ದರೆ ಕೊಳಕು-ಆದರೂ ಕೊಳಕನ್ನು ತೊಳೆದು ಬದುಕು, 

ಮಾಡುವ ಕಾಯಕದಲ್ಲಿ ಶ್ರದ್ಧೆಯಿರಲಿ, 
ಕೀಳರಿಮೆ ಮೂಡದಿರಲಿ,
ಸ್ವಾಭಿಮಾನ ತುಂಬಿರಲಿ,
ಕಷ್ಟವಾದರೂ ಇಷ್ಟವಾಗಿರಲಿ,
ದುಡಿಮೆಯಿಂದ ಕಷ್ಟಗಳು ದೂರಾಗಲಿ,
ಚೈತನ್ಯ ತುಂಬಿ ತುಳುಕುತಿರಲಿ, 
ಬದುಕು ನೆಮ್ಮದಿಯಾಗಿರಲಿ... 

ಕೆಲಸಗಳು ಹಲವಾರು, 
ಕೆಲಸಮಾಡುತ್ತಾ ಬದುಕನ್ನು ಸಾಗಿಸುವ ದಾರಿಗಳೂ ನೂರಾರು, 
ಬಗೆ-ಬಗೆಯ ಮಾತುಗಳನ್ನಾಡಿ- ಹೀಯಾಳಿಸುವ ಜನರು, ಅಂತವರ ಮಾತಿಗೆ ಕಿವಿಗೊಡದೇ ಮುನ್ನಗ್ಗುತ್ತಿರು,
ಆದರೂ ಕೊಂಡಾಡಿ ಖುಷಿಪಟ್ಟು ಮಾತಾಡುವವರು ಕೆಲವರು, 
ಏರು-ಏರು ಎಲ್ಲರನು ದಾಟಿ ಮೇಲೆರು, 
ಮೇಲೆರಿದಾಗ ಹತ್ತಿದ ಏಣಿಯನ್ನು ಮರೆಯದಿರು....
- ಶಾಂತಾರಾಮ ಶಿರಸಿ, ಉತ್ತರ ಕನ್ನಡ..
8762110543
7676106237.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನೀನು ಇದ್ದೇನು (ಕವಿತೆ) - ಲಕ್ಷ್ಮೀನಾರಾಯಣ ಕೆ, ವಾಣಿಗರಹಳ್ಳಿ.

ಯಾರ ನೆನಪಿಗೂ ಗುರುತು ಬಾರದೆ
ನೀನು ಇದ್ದೇನು…?
ಇದ್ದೆನೆಂಬುವ ನೆನಪು ಮಾತ್ರವೆ
ಇರುವಿಕೆಯ ಜೀವಂತ ಸತ್ಯ

ಅನಿಶ್ಚಿತತೆಯ ಬರುವಿನ ಸಾಕ್ಷಿ ನಾವು
ತೊಟ್ಟಿಲು ತೂಗಿದಾಗ ಕಿಲಕಿಲವಾಗಿ
ದಾಪುಗಾಲ ಕಲರವ ಮನೆಯ ತುಂಬಿ
ಪುಟಿದೇಳುವ ಬಾಲ್ಯಕಳೆದು ಸಾಗಿದೆ
ಗಟ್ಟಿ ಕಾಯ ಗಂಟಿನೊಳಗೆ ಸಿಕ್ಕಿ
ಅದಕೂ ಇದಕೂ ಜೋತು ಬಿದ್ದು 
ಸಡಗರ ಸಂಭ್ರಮದ ಭ್ರಮೆಯ ಹಬ್ಬ
ಇಲ್ಲವಾಗುವ ಒಂದು ದಿನಕ್ಕೆ 
ಸಾವಿರ ಸೆಣಸಾಟವೇಕೆ…?
ಶೂನ್ಯಕ್ಕೆ ಮಿಡಿಯುವುದು ತಪ್ಪಿಲ್ಲ
ಇನ್ನಿಷ್ಟೇ ಎಲ್ಲಾ… ನೀನು ಇದ್ದೇನು…?

ನಿನ್ನ ಕಾಯ ಇಲ್ಲವಾದರೂ… 
ಹೊಸ ಹುಟ್ಟಿನಂತೆ ಹುಟ್ಟುತ್ತಲಿರು
ನಿನಗಾಗಿ ಹತ್ತಾರು ಕಣ್ಣೀರುಗಳು ಸುರಿಸುವಂತೆ
ಮರುಕಗಳು ನಿನ್ನ ನೆನೆದು ಮೈದಾಳಲಿ ವಿಶ್ವವಿಡಿ
ಯಾರ ನೆನಪಿಗೂ ಬಾರದ ಹಾಗೆ
ನೆನೆಯದಿರೆ ಯಾರೂ… ನೀನು ಇದ್ದೇನು…?
         ‌‌         
       - ಲಕ್ಷ್ಮೀನಾರಾಯಣ ಕೆ, ವಾಣಿಗರಹಳ್ಳಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸುಂದರಿ (ಕವಿತೆ) - ಪುರುಷೋತ್ತಮ ಪೆಮ್ನಳ್ಳಿ.

ಮುಂಜಾನೆ ಇಬ್ಬನಿಯ ತುಂತುರಲಿ
ಕಂಡಳು ನಗುಮೊಗದ ಸುಂದರಿ
ಹೃದಯದಿ ಕಚಗುಳಿಯ ಇಟ್ಟು 
ಮರೆಯಾಗಿ ಹೋದಳು ಮಂದಾರಿ.

ಮನವು ನಿನ್ನಯ ವಶವಾಯಿತು
ಸುತ್ತಲ ಪ್ರಪಂಚವ ಅರಿಯದೇ
ಕಂಗಳಲಿ ನಿನ್ನ ಬಿಂಬವೇ ತುಂಬಿತು
ಬೇರೆನು ನೋಡ ಬಯಸದೇ.

ಸೌಂದರ್ಯದ ಗಣಿಯ ವದನವ
ಕಂಡು ಮನ ಹೇಳಿತು ಗೀತೆಯ
ಸವಿಗಾನದ ಹೊನಲಲಿ ತೇಲುತ
ಮರೆಮಾಚಿತು ಹೃದಯ ಪ್ರೀತಿಯ.

ಇಬ್ಬನಿಯು ಕರಗಿತು ಸೂರ್ಯರಶ್ಮಿಗೆ
ಮನವು ಮರುಗಿತು ಪ್ರೇಮಪಾಶಕೆ
ನೀನಿರಲು ಸೌಂದರ್ಯವೂ ಧರೆಗೆ
ನನ್ನೀ ಮನವು ಕಾದಿಹುದು ನಿನ್ನ ಕರೆಗೆ.
ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ
ದೂ.9632296809.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನನ್ನಾಸೆ ಹೂವು (ಕವಿತೆ) - - ಮೌನಾ.ಎನ್.ವಿಶ್ವಕರ್ಮ.

ಹಳೆ ನೆನಪುಗಳ ಸಂಗಮದಲ್ಲಿ 
ಹೊಸ ಅಲೆಗಳ ಹುಡುಕಾಟ
ಮ್ಮನದ ಸೆಳೆತದ ತವಕದಲ್ಲಿ
ದಿನಾ ಅವಳದೇ ನಡೆದಾಟ…

ಬರಿಯ ಗಾಲಿನ ಹೆಜ್ಜೆ ಗುರುತಿಗೆ
ಬಣ್ಣ ಬಳಿದೇ ಆ ದಿನಾ
ಹೆಜ್ಜೆ ಸಪ್ಪಳ ಕೇಳಲೆಂದೆ
ಗೆಜ್ಜೆ ನೀಡಲು ಹೊರಟೆ ನಾ…..

ಮನದ ದಾರಿಯ ಕಂಡು 
ಕಾಣದು ನನಗೆ ಈ ದಿನಾ 
ಏನು ಹೇಳಲು ಮಾತಿಲ್ಲದಂತೆ 
ಮೂಗನಾಗಿರುವೇ ನಾ ದಿನಾ…….

ಕನಸ್ಸಿನ ರಾಣಿಯ ಕಣ್ಣ ಸೆಳೆತವ 
ಬೀಡುತ್ತಿಲ್ಲ ಒಂದು ದಿನಾ
ನಿದ್ದೆಯಿಲ್ಲದೇ ಎದು ಕುಳಿತಿರುವೆ 
ರಾತ್ರಿಯಿಡಿ ಆ ದಿನಾ…….

ಸೂರ್ಯ ಚಂದ್ರರ ಬೆಳಕಲ್ಲಿ 
ಬರುತ್ತಿಲ್ಲ ಅವಳು ಒಂದು ದಿನಾ
ಕಂಡು ಕಾಣದ ಸ್ಥಿತಿಗೆ 
ಹೊರಟೆ ಬಿಟ್ಟೆ ನಾ………

ಬಣ್ಣ ಬಣ್ಣದಿ ಮೂಡಿಸಿರುವೇ
ಅವಳ ಮುಖವಾ ನಾ
ಅವಳ ಚಿತ್ರವಾ ನೋಡುತ್ತಾ
ನನ್ನೆ ಮರೆತೆ ನಾ……..

- ಮೌನಾ.ಎನ್.ವಿಶ್ವಕರ್ಮ
ಮು||ಕೋಟಗೇರಾ ತಾ||ಜಿ|| ಯಾದಗಿರಿ
ಮೊ ನಂ:-7259479923.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗಜಲ್ - ಮಾಜಾನ್ ಮಸ್ಕಿ.

ನೆನಪುಗಳ ಹೆಜ್ಜೆ ಗುರುತು ಅಳಿಸಿ ಹೋಗಿದೆ 
ಸಿಹಿ ಕನಸುಗಳ ರಾತ್ರಿ ಮಾಸಿ ಹೋಗಿದೆ 

ಎಷ್ಟೋ ವಸಂತಗಳು ಕಳೆದಿವೆ ನೀನಿಲ್ಲದೆ 
ಗಾಯ ಮಾದು ಕಲೆ ಉಳಿಸಿ ಹೋಗಿದೆ 

ಸಂಸಾರ ಯುದ್ಧದಲ್ಲಿ ಇರಿದ ಖಂಜರುಗಳು 
ಸಾವು ಉಸಿರಾಡಿ ಬದುಕಿಸಿ ಹೋಗಿದೆ 

ನಿನ್ನ ಹೆಸರ ಉಸಿರ ಬಸಿರಲಿ ನಿಂತಿದೆ 
ನೋವಿನಲಿ ಹೃದಯ ದಹಿಸಿ ಹೋಗಿದೆ 

ರಕುತದ ಮುಸಲ ಧಾರೆ ಹರಿದಿದೆ *ಮಾಜಾ*
ಒಂಟಿತನ ಸಾಕು ಏಕಾಂತ ಬಯಸಿ ಹೋಗಿದೆ 

- ಮಾಜಾನ್ ಮಸ್ಕಿ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮಳೆಬಿಲ್ಲೆ ಮಳೆಬಿಲ್ಲೆ (ಕವಿತೆ) - ಮಧುಮಾಲತಿ ರುದ್ರೇಶ್ ಬೇಲೂರು.

ಮಳೆಬಿಲ್ಲೆ ಮಳೆಬಿಲ್ಲೆ ತುಸು ನಿಲ್ಲೇ ಅಲ್ಲೇ ˌˌˌ
ನಿನ್ನೀ ಗೆಳತಿಯ ಪಿಸುಮಾತನೊಮ್ಮೆ ಕೇಳಿಸಿಕೊಳ್ಳೆˌˌˌ

 ಸಪ್ತ ವರ್ಣಗಳೆ ಮೈದುಂಬಿದ ಕಾಮನಬಿಲ್ಲೆˌˌˌ
ಬಣ್ಣಗಳ ರಂಗೋಲಿಯೇ ಅಡಗಿದೆ ನಿನ್ನಂದದಲ್ಲೆˌˌˌ

 ಭುವಿಗೂ ಮುಗಿಲಿಗೂ ನೀ ಏಣಿಯಾದೆ ˌˌˌ
ಧರೆಯಿಂದ ಸ್ವರ್ಗಕೆ ನೀ ಸೇತುವೆಯಾದೆˌˌˌ

 ನವಿರಾದ ಪ್ರೇಮಪಲ್ಲವಕೆ ನೀ ಸ್ಪೂರ್ತಿಯಾದೆˌˌˌˌ
ಮನವನರಿತ ಗೆಳತಿಯ ದನಿಗೆ  ಗೀತೆಯಾದೆˌˌˌ

 ಇನಿಯನಾಗಮನಕೆ ಕಾದಿಹ ನಲ್ಲೆಯ ಮೊಗದಿˌˌˌ
 ಸ್ಫುರಿಸಿದೆ ನೀ ಪ್ರೇಮ ಕಳೆಯ ಹರುಷದಿ ˌˌˌˌ

ಮುಗಿಲಲಿ ಅರಳಿದ ಒಲವಿನ ಚಿತ್ತಾರವೇ ನೀನು ˌˌˌ
ಭುವಿಗೂ ತುಸು ಹರಿಸು ನಿನ್ನೊಲವಿನ ರಂಗನು ˌˌˌ

ಯಾವ ಕಲೆಗಾರನ ಕುಂಚದಲ್ಲರಳಿದ ರಂಗವಲ್ಲಿˌˌˌ
 ಮೂಡಿದೆ ನಿನ್ನೆಡೆಗೆ ಹಾರುವಾಸೆ ಮನದಲ್ಲಿˌˌˌ

- ಮಧುಮಾಲತಿ ರುದ್ರೇಶ್, ಬೇಲೂರು. 


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

'ಅವಳ ಪ್ರೇಮದ ಅಲೆಗಳು' ಪುಸ್ತಕ ಅವಲೋಕನ - ಉದಯ ಬಡಿಗೇರ್.

ಪ್ರೀತಿಯ ಸಹೋದರ ರಾಜು ಸೂಲೇನಹಳ್ಳಿಯವರು
ಬರೆದಿರುವ ಎರಡನೇ ಕಾದಂಬರಿ "ಅವಳ ಪ್ರೇಮದ ಅಲೆಗಳು"ಎಂಬ ಶೀರ್ಷಿಕೆಯಲ್ಲಿ ತಿಳಿಸಿರುವ ಹಾಗೆ ಅನೇಕ ಯುವ ಪ್ರೀತಿಸುವ ಮನಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಹೋದರ ಎಸ್ ರಾಜು ಸೂಲೇನಹಳ್ಳಿಯವರು ಬಿ.ಎ, ಬಿ. ಇಡಿ ವ್ಯಾಸಂಗ ಮಾಡಿದ ಇವರು ಪ್ರೌಢಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಾ, ಭವಿಷ್ಯದ ಕನಸಾಗಿರುವ ಇವರು ಬಾಲ್ಯದಲ್ಲಿ ಓದು,ಬರವಣಿಗೆಯಲ್ಲಿ ಹೆಚ್ಚಿನ ಆಸಕ್ತಿ ಉಳ್ಳವರಾಗಿದ್ದಾರೆ. ತಮ್ಮ ಸೃಜನಶೀಲತೆಯನ್ನು ಮೆರೆದು ಪ್ರಥಮವಾಗಿ *"ಒಲವೇ"* ಎಂಬ ಕವನ ಸಂಕಲನವನ್ನು ಸಾಹಿತ್ಯಲೋಕಕ್ಕೆ ತೆರೆತಂದರು, ನಂತರ ಎರಡನೆಯದಾಗಿ  *"ಸ್ಪಂದನಾ"*  ಎಂಬ ಕಾದಂಬರಿಯನ್ನು ಪ್ರಕಟಿಸಿದರು, ಪ್ರಸ್ತುತ *"ಅವಳ ಪ್ರೇಮದ ಅಲೆಗಳು"* ಎಂಬ ಎರಡನೇ ಕಾದಂಬರಿ ಇದಾಗಿದೆ.

ಮಲೆನಾಡಿನಲ್ಲಿನ ಒಂದು ಸುಂದರವಾದ ಪುಟ್ಟಹಳ್ಳಿ ಚೇಳೂರು, ಅಲ್ಲಿ ಮನಮಿಡಿಯುವ ಮೈಕೊರೆಯುವ ಚಳಿ, ಜೊತೆಗೆ ಸುಂದರವಾದ ಪ್ರಕೃತಿ ಸೌಂದರ್ಯವನ್ನು ಆ ಹಳ್ಳಿ ಹೊಂದಿತ್ತು. ಹೀಗಿರುವಾಗ ಆ ಊರಲ್ಲೊಂದು ಅತಿ ರಮ್ಯವಾದ ಪ್ರೇಮಕಥೆಯೊಂದು ಪ್ರಾರಂಭವಾಗುತ್ತಿತ್ತು. ಮಲೆನಾಡಿನ ವೈಭೋಗವನ್ನು ಕಥೆಯಲ್ಲಿ ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ.

ಈ ಕಥೆಯಲ್ಲಿ ಹುಡುಗನ ಹೆಸರು ಪ್ರಜ್ವಲ್, ಈತನು ಒಳ್ಳೆಯ ಮೈಕಟ್ಟಿನ ಗೋಧಿ ಬಣ್ಣದ, ಎತ್ತರದ ನಿಲುವಿನ, ಸ್ವಾಭಿಮಾನದ ಬಡತನದ ಹುಡುಗ. ತಂದೆ-ತಾಯಿ ತುಂಬಾ ಕಷ್ಟದಿಂದ ಬಂದಂತಹ ಕುಟುಂಬವಾಗಿರುವುದರಿಂದ ಮನೆಯಲ್ಲಿನ ತಂದೆ-ತಾಯಿ ಇಬ್ಬರೂ ಅಕ್ಕ-ತಂಗಿಯರ ಜೊತೆಗೆ ಮನೆಯ ಜವಾಬ್ದಾರಿಯನ್ನು ನಡೆಸುತ್ತಿದ್ದನು. ನಂತರ ಹುಡುಗಿಯ ಹೆಸರು ಅರ್ಪಿತಾ, ಹುಡುಗಿಯ ತಂದೆ ತುಂಬಾ ಶ್ರೀಮಂತ ಮನೆಯಲ್ಲಿ ಕೂತು ಆರಾಮಾಗಿ ತಿಂದರೂ ಸಾಲದ ಆಸ್ತಿಯನ್ನ ಮಾಡಿದ್ದರು. ಹೀಗಿರುವಾಗ ಅರ್ಪಿತಾ ಮನೆಯಲ್ಲಿ ಓದಿದರೂ ಓದದಿದ್ದರೂ ನಡೆಯುತ್ತಿತ್ತು, ಇದಿಷ್ಟು ಕಾದಂಬರಿಯಲ್ಲಿ ಬರುವ ಪಾತ್ರಗಳು ಕುಟುಂಬದ ಹಿನ್ನೆಲೆಯನ್ನ ಎಲ್ಲರಿಗೂ  ತಿಳಿಯುವ ಹಾಗೆ ತಿಳಿಸಿಕೊಟ್ಟಿದ್ದಾರೆ.

ಪ್ರಜ್ವಲ್ ನ ತಂದೆ ತುಂಬಾ ಕುಡಿತದ ಚಟಕ್ಕೆ ಬಿದ್ದು ಮನೆಯಲ್ಲಿ ಕುಡಿದು ಬಂದು ಮಕ್ಕಳಿಗೆ ಹೆಂಡತಿಗೆ ಬಹಳ ಕಷ್ಟವನ್ನು ನೀಡುತ್ತಿದ್ದರು, ಹೀಗಿರುವಾಗ ಒಂದು ದಿನ ತುಂಬಾ ಕುಡಿದು ಹಸುಗಳ ಮಧ್ಯ ಬಿದ್ದು ಸತ್ತು ಹೋದರು, ಹೀಗಿರುವಾಗ ಮನೆಯ ಎಲ್ಲ ಜವಾಬ್ದಾರಿಯೂ ಪ್ರಜ್ವಲನ ಮೇಲೆ ಇತ್ತು.
ಅರ್ಪಿತಾ ಕೂಡ ಇವಳದು ಚಿಕ್ಕ ಚೊಕ್ಕ ಕುಟುಂಬ ಅಣ್ಣ- ರಾಜು, ತಂಗಿ-ಸಹನಾ ಅಣ್ಣ ಅರ್ಪಿತಾಳ ಮೇಲೆ ಅತಿ ಹೆಚ್ಚು ಮಮಕಾರ, ಜೊತೆಗೆ ಸ್ವಲ್ಪ ಅನುಮಾನದ ವ್ಯಕ್ತಿ, ತಂಗಿ ಸಹನಾ ಮುಂದೆ ಬರುವ ಅರ್ಪಿತಾಳ ಪ್ರೀತಿಯಲ್ಲಿ ಬಹಳ ಸಹಾಯಕಳಾಗಿ ಕಾರ್ಯನಿರ್ವಹಿಸಿದ್ದಾಳೆ.
                (ರಾಜು ಎಸ್ ಸೂಲೇನಹಳ್ಳಿ) 

ಈ ಕಾದಂಬರಿಯಲ್ಲಿ ಹರ್ಪಿತಾಳು ತುಂಬಾ ಸುಂದರವಾದ ಹುಡುಗಿ ಎಂತಹವರನ್ನು ಕೂಡ ಮರುಳು ಮಾಡುವಂತಹ ಸೌಂದರ್ಯವನ್ನು ಹೊಂದಿದವಳು. ಆದರೆ ಯಾರನ್ನು ಕಣ್ಣೆತ್ತಿ ನೋಡದ ಸಂಪನ್ನ ಸದ್ಗುಣದ ಹೆಣ್ಣು ಅರ್ಪಿತಾ ಆಗಿದ್ದಳು. ಹಾಗೂ ಮಲೆನಾಡಿನ ಸಿರಿಯಲ್ಲಿ ವಾಸಿಸುತ್ತಿದ್ದ ಅರ್ಪಿತಾಳ ಕುಟುಂಬ, ಪ್ರಕೃತಿಯ ಸೌಂದರ್ಯದ ಬಗ್ಗೆ ಎಲ್ಲರ ಮನಕುಲಕುವ ಹಾಗೆ ಎಸ್ ರಾಜು ಅವರು ತಿಳಿಸಿದ್ದಾರೆ.

ಅರ್ಪಿತಾ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿ ಕಾಲೇಜಿಗೆ ಸೇರಿದ್ದಳು. ಹೀಗೆ ಒಂದು ದಿನ ಕಾಲೇಜಿನ ಅಂಗಳದಲ್ಲಿ ಹೋಗುತ್ತಿರುವಾಗ ರಚನಾ ಎಂಬ ಹುಡುಗಿಯೂ ಅರ್ಪಿತಾಳನ್ನು ನೋಡಿ ಮುಗುಳ್ನಗುತ್ತಾಳೆ, ಹೀಗೆ ಮಾತನಾಡಿಸುತ್ತಾ ಇವರಿಬ್ಬರ ನಡುವೆ ತುಂಬಾ ಸ್ನೇಹ ಉಂಟಾಗಿ ರಚನಾ ಮುಂದೆ ಬರುವ ಪ್ರಜ್ವಲ್ ಮತ್ತೆ ಅರ್ಪಿತಾಳ ಪ್ರೀತಿಯಲ್ಲಿ ತುಂಬಾ ಸಹಾಯಕರಾಗಿರುತ್ತಾಳೆ. ಹೀಗೆ ಆರು ತಿಂಗಳ ನಂತರ ಪ್ರಥಮ ಪಿಯುಸಿ ಪರೀಕ್ಷೆ ಬಂದಿದ್ದವು ಪರೀಕ್ಷೆಯ ಶುಲ್ಕವನ್ನು ಕಟ್ಟಲು ಅಂದು ಕೊನೆ ದಿನವಾಗಿತ್ತು, ಅರ್ಪಿತಾ ಮನೆಯಲ್ಲಿ ದುಡ್ಡನ್ನು ಪರ್ಸನಲ್ಲಿ ಇಟ್ಟುಕೊಂಡು ದಾರಿಯಲ್ಲಿ ಹೋಗುತ್ತಾಳೆ ದಾರಿಯಲ್ಲಿ ಪರ್ಸನ್ನು ಬಿಳಿಸಿಕೊಂಡು ಮುಂದೆ ಹೋಗುತ್ತಾಳೆ ಪ್ರಜ್ವಲ್ ಎಂಬ ಹುಡುಗ ಅದನ್ನು ತೆಗೆದುಕೊಂಡು ಮಾನವೀಯತೆಯಿಂದ ವಾಪಸ್ ಕೊಡಲು ಹುಡುಗಿಯ ಹಿಂದೆಯೇ ಬಸ್ ಇಡಿದು ಹೋದನು. ಹಾಗೋ ಈಗೋ ಎನ್ನುವಷ್ಟರಲ್ಲಿ ಹುಡುಗಿಯ ಕೂಡ ಸಿಕ್ಕಳು, ಇದು ನಿಮ್ಮ ಪರ್ಸ ಅಲ್ಲವೇ ತೆಗೆದುಕೊಳ್ಳಿ ಎಂದು ಕೊಟ್ಟಾಗ ಹುಡುಗಿ ಕೋಪಗೊಂಡು ನನ್ನ ಪರ್ಸನ್ನು ಕಳ್ಳತನ ಮಾಡಿ ನನಗೆ ಕೊಡಲು ಬಂದಿರುವೆಯ ಎಂದು ಅಕ್ಕಪಕ್ಕದಲ್ಲಿರುವ ಜನರಿಂದ ಬಾಸುಂಡೆ ಬರುವ ಹಾಗೆ ಹೊಡಿಸಿದಳು. ಹುಡುಗ ಆಚಾರ ಮಾಡಲು ಬಂದರೆ ಅನಚಾರವಾಗಿ ಬಿಟ್ಟಿತ್ತು ಎಂದು ಸಪ್ಪೆ ಮರೆಯಲಿ ಮನೆಗೆ ಬಂದ.

ಒಬ್ಬ ಅಜ್ಜಿಯಿಂದ ಅರ್ಪಿತಾಳಿಗೆ ಪ್ರಜ್ವಲ್ ಪರ್ಸ್ ಕದ್ದಿಲ್ಲವೆಂದು ಗೊತ್ತಾಗುತ್ತದೆ. ಪರ್ಸಿನಿಂದ ಪ್ರಾರಂಭವಾದ ಅವರಿಬ್ಬರ ಪ್ರೀತಿಯನ್ನು ಪ್ರೀತಿಸುವ ಹೃದಯಗಳಿಗೆ ಚೆನ್ನಾಗಿ ತಿಳಿಸಿದ್ದಾರೆ. ಸ್ವಲ್ಪ ದಿನದ ನಂತರ ಅರ್ಪಿತಾಗೆ ಮನಸ್ಸಲ್ಲಿ ಏನೋ ಚಂಚಲತೆ, ಯಾರನ್ನೊ ಹಚ್ಚಿಕೊಂಡದಂತಹ ಭಾವನೆ ಅವಳ ಹೃದಯದ ಗೂಡಿನಲ್ಲಿ ಮನೆಮಾಡಿತ್ತು. ಹುಡುಗ ಬೇರೆ ಯಾರು ಅಲ್ಲ ಪ್ರಜ್ವಲ್. ಅರ್ಪಿತ ತನ್ನ ಪ್ರೀತಿಯನ್ನು ಪ್ರಜ್ವಲನಿಗೆ ತಿಳಿಸಲು ಹಿಂಜರಿತದಿಂದ ರಚನಾ ಇವರಿಬ್ಬರ ಪ್ರೀತಿಯನ್ನು ಒಂದು ಮಾಡಿದಳು. 

ಹೀಗೆ ದಿನೇದಿನೇ ಪ್ರೀತಿ ಹೆಚ್ಚಾಗಿ ಇಬ್ಬರನ್ನು ಒಬ್ಬರು ಬಿಡದಂತೆ ಮನಸ್ಸಿನಲ್ಲಿ ಹಚ್ಚಿಕೊಂಡು ಬಿಡುತ್ತಾರೆ. ಪ್ರಜ್ವಲ್ ಓದಿನಲ್ಲಿ ತುಂಬಾ ಜಾಣ ಬಿ.ಎ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಕಾಲೇಜಿಗೆ ಪ್ರಥಮ ರಾಂಕ್ ಪಡೆದು ಒಳ್ಳೆಯ ಗೌರವ ಪಡೆದುಕೊಂಡಿದ್ದ. ಮುಂದಿನ ಅಭ್ಯಾಸಕ್ಕೆಂದು ಚಿಕ್ಕಮಗಳೂರಿಗೆ ಹೋಗಿ ಅಲ್ಲಿ ಕೂಡ ಉತ್ತಮವಾದ ಹೆಸರು ಮಾಡಿದ್ದನು. ಆದರೆ ಇವರ ಪ್ರೀತಿ ಇಲ್ಲಿ ದೂರ ಹಾಗೆ ಬಿಟ್ಟಿತ್ತು. ಒಬ್ಬರನ್ನೊಬ್ಬರ ಮುಖ ಬೇಟೆ ಇಲ್ಲ, ಮಾತುಕತೆಯೇ ಮೊದಲೇ ಇಲ್ಲ, ಇದರಿಂದ ಪ್ರೀತಿ ಮತ್ತಷ್ಟು ಶಿಖರಕ್ಕೇರಿದಂತಾಗಿತ್ತು. ಪ್ರಜ್ವಲ್ ತನ್ನ ಪ್ರೀತಿಯ ಹುಡುಗಿಗಾಗಿ 3000 ರೂ ಹಣದಿಂದ ಸುಂದರ 'ಸರ'ವನ್ನ ತಂದಿದ್ದ, ಅರ್ಪಿತಾ ಳು ಕೂಡ ತನ್ನ ಪ್ರೀತಿಯ ಹುಡುಗನಿಗಾಗಿ 500 ರೂ ಟೀಶರ್ಟ್ ತಂದಿದ್ದಳು. ಇವರಿಬ್ಬರ ಮೊದಲನೇ ಹುಡುಗರಿಂದ ಮತ್ತಷ್ಟು ಇವರ ಪ್ರೀತಿ ಗಟ್ಟಿಯಾಗಲು ಪ್ರಾರಂಭಿಸಿದ್ದು.

ಹೀಗಿರುವಾಗ ಅರ್ಪಿತಾ ಹುಡುಗ ದೂರ ಇರುವುದು ಕಂಡು ಮನಸ್ಸಿಗೆ ತುಂಬಾ ಹಚ್ಚಿಕೊಂಡು ಊಟ ನೀರಿನ ಕಡೆಗೆ ಗಮನ ಕೊಡದೆ ಅನಾರೋಗ್ಯದಿಂದ ಮಲಗಿರುತ್ತಾಳೆ, ತನ್ನ ತಂದೆ ಇವಳ ವೇದನೆಯನ್ನು ನೋಡದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಟೆಸ್ಟ್ ಮಾಡಿಸಿದಾಗ ಏನು ತಿಳಿಯಲಾಗದು, ನಂತರ ಡಾಕ್ಟರ್ ಸಲಹೆಯಂತೆ (MRI,CT ಸ್ಕ್ಯಾನ್) ಮಾಡಿಸಿದ ನಂತರ ಅರ್ಪಿತಾಳಿಗೆ ಒಂದು ಅನಾಹುತ ಕಾದಿತ್ತು. ಅರ್ಪಿತಾಗೆ *'ಬ್ರೈನ್ ಟ್ಯೂಮರ್'* ಆಗಿರುತ್ತದೆ ಈ ವಿಷಯ ತಿಳಿದ ತಂದೆ ಬಹಳ ಖಿನ್ನತೆಗೆ ಒಳಗಾಗುತ್ತಾರೆ. ಮತ್ತೆ ಈ ವಿಷಯವನ್ನು ತಂದೆ ಯಾರಿಗೂ ಹೇಳಿರುವುದಿಲ್ಲ. ನಂತರ ಪ್ರಜ್ವಲ್ ತನ್ನ ಓದು ಮುಗಿಸಿಕೊಂಡು ಮನೆಗೆ ಬಂದಿರುತ್ತಾನೆ, ಒಂದು ದಿನ ಮನೆಗೆ ಒಂದು ಲೆಟರ್ ಬಂದಿರುತ್ತದೆ. ಅದು ಪ್ರಜ್ವಲನಿಗೆ ಸರ್ಕಾರಿ ಉದ್ಯೋಗದ ಲೆಟರ್ ಆಗಿತ್ತು. ಈ ವಿಷಯ ತಿಳಿದ ಪ್ರಜ್ವಲನ ತಾಯಿ ಅಕ್ಕ ತಂಗಿಯರು ಕೂಡ ಅವನನ್ನ ಅಭಿನಂದಿಸಿದರು.

ಇಷ್ಟು ವರ್ಷ ತಾಯಿಗೆ ಮತ್ತು ಮನೆಯವರಿಗೆಲ್ಲರಿಗೂ ಮುಚ್ಚಿಟ್ಟಾ ವಿಷಯವನ್ನು ಖುಷಿ ಸಂದರ್ಭದಲ್ಲಿ ಪ್ರಜ್ವಲ್ ನು ತಾಯಿಯ ಮುಂದೆ ಬಿಚ್ಚಿಡುತ್ತಾನೆ. ಏನೆಂದರೆ. ನಾನು ಅರ್ಪಿತಾ ಎನ್ನುವಂತಹ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ ಅವಳನ್ನೇ ಮದುವೆಯಾಗಬೇಕೆಂದುಕೊಂಡಿದ್ದೇನೆ ಎಂದಾಗ ತಾಯಿ ಮಹಾದೇವಮ್ಮ ಯೋಚಿಸಿ ಅರ್ಪಿತಾ ಅವರ ಮನೆಗೆ ಹೆಣ್ಣು ಕೇಳಲು ಹೋಗುತ್ತಾಳೆ. ಹೋದಾಗ ಅರ್ಪಿತಾ ತಂದೆ ಪ್ರತ್ಯೇಕವಾಗಿ ಪ್ರಜ್ವಲನ ಜೊತೆ ಮಾತನಾಡಬೇಕಾಗಿ ಒಂದು ಕೋಣೆಗೆ ಕರೆದುಕೊಂಡು ಹೋದರು, ತನ್ನ ಮಗಳಿಗೆ ಬ್ರೈನ್ ಟ್ಯೂಮರ್ ಇರುವುದು ಪ್ರಜ್ವಲ್ ನ ಮುಂದೆ ಬಿಚ್ಚಿದಾಗ ಪ್ರಜ್ವಲ ನ ರೋಧನೆಯನ್ನು ಮನ ಮಣೆಯುವ ಹಾಗೆ ತುಂಬಾ ಸೊಗಸಾಗಿ ತಿಳಿಸಿದ್ದಾರೆ.
ಬ್ರೈನ್ ಟ್ಯೂಮರ್ ಇರುವುದರಿಂದ ಅವಳನ್ನು ಮದುವೆಯಾಗುವುದು ಒಪ್ಪದ ಹುಡುಗಿಯ ತಂದೆ ಮುಂದೆ ಪ್ರಜ್ವಲ್ "ನಾನು ಬದುಕುವುದಾದರೆ ಅರ್ಪಿತ ಜೊತೆ, ಒಂದೇ ದಿನ ಬದುಕಲಿ ನಾನು ಅವಳ ಜೊತೆ"ಎಂಬ ಪ್ರೀತಿಯ ಒಳಗುಟ್ಟನ್ನು ತಂದೆಗೆ ತಿಳಿಸಿ ಶುಭಲಗ್ನ ಪಾಲ್ಗೊಂಡರು.

ನಂತರ ಇಬ್ಬರೂ ಮದುವೆಯು ಕೂಡ ಎಲ್ಲರ ಸಮ್ಮುಖದಲ್ಲಿ ನಡೆಯುತ್ತದೆ. ನನ್ನ ಪ್ರೀತಿಯ ಹುಡುಗಿ ಅರ್ಪಿತಗೆ ಚಿಕಿತ್ಸೆ ನೀಡುವುದರಲ್ಲಿ ನಿರತನಾದನು. ದೇಶವಿದೇಶಗಳಲ್ಲಿ ಅರ್ಪಿತಳನ್ನು ಬ್ರೈನ್ ಟ್ಯೂಮರ್ ನ ವಿಶೇಷ ತಜ್ಞರೊಂದಿಗೆ ತೋರಿಸಿ ಔಟ್ ಆಫ್ ಡೇಂಜರ್ ಆಗಿ ಅರ್ಪಿತಾಳನ್ನು ಕರೆತಂದನು. ಅರ್ಪಿತಾ ಪ್ರಜ್ವಲ್ ಈ ಸಂತೋಷದ ಸುದ್ದಿಯನ್ನು ಒಟ್ಟಿಗೆ ಕೇಳಿಸಿಕೊಂಡು ಸಂಭ್ರಮದಿಂದ ಇನ್ನಷ್ಟು ಗಟ್ಟಿಯಾಗಿ ತಬ್ಬಿಕೊಂಡುರು. ನಂತರ ದಿಗಂತದಲ್ಲಿ ಸೂರ್ಯ ಇವರ ನೋಡಿ ನಗುತ್ತಾ ಮುಳುಗಿದನು.

ಶ್ರೀಯುತ ಎಸ್ ರಾಜು ಸೂಲೇನಹಳ್ಳಿಯವರು ಈ ಸುಂದರ ಕಾದಂಬರಿಯನ್ನು ತುಂಬಾ ಸೊಗಸಾಗಿ ಪ್ರಾರಂಭಿಸಿ ಪ್ರೀತಿಸುವ ಹೃದಯವನ್ನು ಕೊನೆಗೆ ಒಂದುಗೂಡಿಸಿ, ಗೊತ್ತಿಲ್ಲದೆ ಪ್ರೀತಿಸಿದವರು ಕೊನೆಗೊಂದು ದಿನ ಸಾಧಿಸಿ ಒಂದಾಗಬಹುದು ಎಂಬ ಆಶಾಭಾವನೆಯನ್ನು ಮುಂದಿಟ್ಟುಕೊಂಡು ಪ್ರೀತಿಸುವ ಭವಿಷ್ಯದ ಪ್ರೇಮಿಗಳಿಗೆ ಮಾದರಿಯಾಗಿದ್ದಾರೆ.

ಮತ್ತೊಮ್ಮೆ ಪ್ರೀತಿಸುವ ಹೃದಯಗಳಿಗೆ ಮತ್ತೊಂದು ಕಿವಿಮಾತು ಪ್ರೀತಿಸುವವರು ಸಿಗಲಿ ಸಿಗದಿರಲಿ ಕೊನೆಯವರೆಗೂ ಸ್ವಚ್ಛ ಮನಸ್ಸಿನಿಂದ ಪ್ರೀತಿಸಿ, ಯಾಕೆಂದರೆ "ಹಚ್ಚಿಕೊಂಡವರೆ ಬಿಟ್ಟು ಹೋದ ಮೇಲೆ ಮತ್ತೆ ಯಾರನ್ನ ಮೆಚ್ಚು ಕೊಳ್ಳುವುದನ್ನು ಮರೆತುಬಿಡುತ್ತಾರೆ."

- ಉದಯ ಬಡಿಗೇರ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಶನಿವಾರ, ಡಿಸೆಂಬರ್ 11, 2021

ಸ್ವಾತಂತ್ರ್ಯ ಎಂದರೇನು (ಲೇಖನ) - ಭಾರತಿ ಟಿ. ಗೌಡ.

 ಅಂದು ಯಾರೂ ಊಹಿಸಿರದ ದಿನ. ಬಿಳಿಯರಿಂದ ಸ್ವಾತಂತ್ರ್ಯ ಸಿಕ್ಕ ದಿನ. ಮಧ್ಯರಾತ್ರಿ ಗಂಟೆ ಹೊಡೆಯುತ್ತಿದ್ದಂತೆ ಇಡೀ ಜಗತ್ತು ಮಲಗಿರುವಾಗ ನಮ್ಮ ದೇಶದ ಮಹಾನ್ ವ್ಯಕ್ತಿಗಳು ಭಾರತಕ್ಕೆ ಚಲನಶೀಲತೆ ಮತ್ತು ಸ್ವಾತಂತ್ರ್ಯವನ್ನು ತಂದುಕೊಡುತ್ತಾರೆ. ಅವರ ಸಾಹಸ, ಪೌರುಷಗಳು ಇಂದು ಇತಿಹಾಸದ ಪುಟಗಳಲ್ಲಿ ಅಚ್ಚಾಗಿವೆ. ಬಹುಕಾಲ ಬ್ರಿಟಿಷರಿಂದ ಅದುಮಿಟ್ಟ ನಮ್ಮ ದೇಶದ ಚೇತನ ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದೆ. ಪರಕೀಯರ ವಶವಾಗಿದ್ದ ಆ ದುರಾದೃಷ್ಟದ ಕಾಲವನ್ನು ಮುಗಿಸಿದ್ದೇವಾದರೂ, ಪರಿಪೂರ್ಣವಾದ ಸ್ವಾತಂತ್ರ್ಯ ಇನ್ನೂ ಲಭಿಸಿಲ್ಲ ಎನ್ನುವುದು ನನ್ನ ಭಾವನೆ. ಇದು ಅಂದು ನಮಗಾಗಿ ಹೋರಾಡಿ ಮಡಿದವರ ತಪ್ಪಲ್ಲ. ಸಿಕ್ಕಿದ ಆ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಈಗಿನ ಜನರ ತಪ್ಪು.
     ನಮ್ಮಲ್ಲಿ ಹತ್ತು ಹಲವಾರು ಘಟನೆಗಳು ಪ್ರತಿದಿನವೂ ಸಂಭವಿಸುತ್ತಿರುತ್ತವೆ. ಕೊಲೆ-ದರೋಡೆ, ಅತ್ಯಾಚಾರ ಇವೆಲ್ಲವೂ ಪ್ರತೀ ದಿನವೂ ಸಹಜವಾಗಿ ನಡೆಯುತ್ತಿವೆ ಎನ್ನುವುದನ್ನು ಮಾಧ್ಯಮಗಳಲ್ಲಿ ನೋಡುತ್ತೇವೆ. ಕೇಳುತ್ತೇವೆ.
ಇಂದಿಗೂ ರಸ್ತೆಗಳಲ್ಲಿ ಒಬ್ಬ ಹೆಣ್ಣು ಒಬ್ಬಂಟಿಯಾಗಿ ನಡೆಯುವಂತಿಲ್ಲ. ಮನೆಗೆ ಬೀಗ ಹಾಕಿ ಎಲ್ಲರೂ ಮನೆಯಿಂದ ಹೊರ ಹೋಗುವಂತಿಲ್ಲ. ಸ್ವಾತಂತ್ರ್ಯ ಸಿಗುವ ಮೊದಲು ಪರಕೀಯರು ದೌರ್ಜನ್ಯ ನಡೆಸುತ್ತಿದ್ದರು. ಈಗ ನಮ್ಮವರೇ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ನಮಗೆ ಮುಕ್ತಿ (ಸ್ವಾತಂತ್ರ್ಯ) ಸಿಕ್ಕಿರುವುದು ಬ್ರಿಟಿಷರಿಂದ ಮಾತ್ರ. ಆದರೆ, ಕಳ್ಳ-ಖದೀಮರಿಂದ, ಕಾಮುಕರಿಂದ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಬರೀ ಹೇಳಲು, ಬರೆಯಲು ಮತ್ತು ಹಬ್ಬ ಆಚರಿಸಲು ಮಾತ್ರ ನಾವು ಸ್ವತಂತ್ರರು.
ಓದುವ ಮಕ್ಕಳು ಇನ್ಯಾರದ್ದೋ ಮನೆಯಲ್ಲಿ ಜೀತದಾಳಾಗಿ ದುಡಿಯುತ್ತಿದ್ದಾರೆ. ಅವರಿಗೆಲ್ಲಿದೆ ಸ್ವಾತಂತ್ರ್ಯ..?!
ಅಂದು  ನಮ್ಮ ಸ್ವಂತಂತ್ರ್ಯ ಬಿಳಿಯರ ಕೈಯಲ್ಲಿತ್ತು. ಇಂದು ಬಿಳಿಯ ವಸ್ತ್ರ ಧರಿಸಿ ಮೆರೆಯುತ್ತಿರುವ ರಾಜಕಾರಣಿಗಳ ಕೈವಶವಾಗಿದೆ. ಅವರು ನಡೆಸಿದಂತೆ ನಾವು ನಡೆಯಬೇಕು. ರೈತ ತಾನೇ ಬೆಳೆದ ಬೆಳೆಗೆ ತೃಪ್ತಿಯಾಗುವಂತ ಬೆಲೆ ಕಾಣುವುದು ಅಸಾಧ್ಯ ಎಂದಾದರೆ, ಈ ದೇಶದ ಬೆನ್ನೆಲುಬು ಅವನು.. ಅವನಿಗೆಲ್ಲಿದೆ ಸ್ವಾತಂತ್ರ್ಯ..??
     ಒಟ್ಟಾರೆಯಾಗಿ ಹೇಳುವುದಾದರೆ, ಭಾರತ ದೇಶ ಬೇರೆ ದೇಶಗಳಿಂದ ಮುಕ್ತವಾಗಿದೆ, ಸ್ವಾತಂತ್ರ್ಯ ಪಡೆದುಕೊಂಡಿದೆಯೇ ಹೊರತಾಗಿ ಇಲ್ಲಿನ ಜನತೆ ಪ್ರತೀ ಕ್ಷಣವೂ ಭಯದಿಂದ ಸಾಗುತ್ತಿದ್ದಾರೆ. ತಮ್ಮಂತೆ ತಾವು ಇರಲು ಸಾಧ್ಯವಾಗುತ್ತಿಲ್ಲ. ಅವರ ಸ್ವಾತಂತ್ರ್ಯವನ್ನು ಮೇಲಿನವರು (ಆಡಳಿತ ನಡೆಸುವವರು) ಕಿತ್ತುಕೊಳ್ಳುತ್ತಿದ್ದಾರೆ. ರಾಜಕಾರಣಿಗಳು "ನಾವು ಸ್ವತಂತ್ರರು." ಎಂದು ಉದ್ದುದ್ದ ಭಾಷಣ ಮಾಡುತ್ತಾರೆ. ಅವರಿಗೆ ಸಿಕ್ಕ ಸ್ವಾತಂತ್ರ್ಯ ಅವರನ್ನು ನಂಬಿದ ಜನರಿಗೆ ಸಿಗುತ್ತಿಲ್ಲ. ಹಾಗಾದರೆ, ಅವರ ಖುಷಿಯಂತೆ ನಾವಿರುವುದು ಸ್ವಾತಂತ್ರ್ಯವೇ..?
- ಭಾರತಿ ಟಿ. ಗೌಡ,  ಶಿರಸಿ (ಉ. ಕ.)
ಪ್ರಥಮ ಬಿ.ಎಸ್.ಸಿ. ವಿದ್ಯಾರ್ಥಿನಿ. 


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
                       

ಮಾನವ ಹಕ್ಕುಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ (ಲೇಖನ) - - ಬಸವರಾಜ H ಹೊಗರನಾಳ.

ಮಾನವ ಹಕ್ಕುಗಳು ಭಾರತದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯು ಬಹಳ ಸಂಕಿರ್ಣವಾಗಿ ರಚನೆಯಾಗಿದೆ. ಕಾರಣವೆಂದರೆ ದೇಶದ ವಿಶಾಲವಾದ ಭೂಭಾಗ ಮತ್ತು ಅತ್ಯದ್ಭುತ ವೈವಿಧ್ಯತೆಯಲ್ಲಿ, ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದ ನೀತಿ ಮತ್ತು ಈ ದೇಶದ ಸಾರ್ವಭೌಮತ್ವ, ಸಾಮಾಜಿಕ ಸಮಾನತೆ, ಪ್ರಜಾತಂತ್ರ ಗಣರಾಜ್ಯ ರಾಷ್ಟ್ರವಾಗಿದ್ದು ಮತ್ತು ಇತಿಹಾಸವನ್ನು ದಾಖಲಿಸಿದ್ದ ಹಳೆಯ ವಸಾಹಾತುಶಾಹಿ ಪ್ರಾಂತ್ಯಗಳಂತಿದೆ. ಭಾರತ ಸಂವಿಧಾನವು ಮೂಲಭೂತ ಹಕ್ಕುಗಳ ನೀಡಿಕೆಯ ಜೊತೆಗೆ ಧಾರ್ಮಿಕ ಸ್ವತಂತ್ರ್ಯವನ್ನೂ ಒದಗಿಸಿದೆ. ವಾಕ್ಯಾಂಗದ ಉಪ ನಿಯಮಗಳು ಮಾತನಾಡುವ ಹಕ್ಕು ಸ್ವತಂತ್ರ್ಯತೆಯನ್ನು ಒದಗಿಸಿದೆ,ಕಾರ್ಯಾಂಗ ಮತ್ತು ನ್ಯಾಯಾಂಗ ಬೇರೆ ಬೇರೆಯಾಗಿದ್ದು, ದೇಶದ ಒಳಗೆ ಮತ್ತು ಹೊರಗೆ ಎಲ್ಲಾ ಚಲನೆಯ ಸ್ವತಂತ್ರ್ಯವನ್ನೂ ಸಹ ನಮಗೆ ನೀಡಲಾಗಿದೆ. ಮತ್ತೆ ಮತ್ತೆ ಒತ್ತಿ ಒತ್ತಿ ಹೇಳುವಂತೆ ಅದರಲ್ಲಿಯೂ ಭಾರತೀಯ ಮಾನವ ಹಕ್ಕುಗಳ ತಂಡವು ಮತ್ತು ಕ್ರಿಯಾಶೀಲರು ಹೇಳುವಂತೆ, ಹಲವಾರು ಬಡತನದಲ್ಲಿ ಬೆಂದು ಹೋದ ವ್ಯಕ್ತಿಗಳು ಅಥವಾ ಕೆಳವರ್ಗದಲ್ಲಿ ಹುಟ್ಟಿರುವ ಬಡವರು ಬಹಳ ಕಷ್ಟ ಅನುಭುವಿಸಿದ್ದು ಈಗಲೂ ಸಹ ಕೆಲವರು ಅದನ್ನೇ ಅನುಭವಿಸುತ್ತಿದ್ದಾರೆ, ಗಣನಿಯ ತಾರತಮ್ಯದ ವಿವೇಚನೆಯಿಂದ ಇನ್ನೂ ತೋಳಲಾಡುತ್ತಿದ್ದಾರೆ. ಭಾರತದಲ್ಲಿ ಮಾನವ ಹಕ್ಕುಗಳು ಮತ್ತು ವಿಶ್ವದ ಕೆಲ ದೇಶಗಳಲ್ಲಿ ಮಾನವ ಹಕ್ಕುಗಳ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಈ ದೇಶವು ಸಾಮಾನ್ಯವಾಗಿ ಮಾನವ ಹಕ್ಕುಗಳಿಗೆ ಸಂಬಂಧಪಟ್ಟಂತೆ ಗಮನವಿಟ್ಟುಕೊಂಡು ಕುಳಿತುಕೊಳ್ಳುವಂತಿಲ್ಲ, ಬೇರೆ ದೇಶದಲ್ಲಿರುವಂತೆ ಏಷ್ಯದ ಬಹುತೇಕ ದೇಶಗಳಲ್ಲಿ ಈ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡು, ವಿಶ್ವವು 2009 ರಲ್ಲಿ ಸ್ವತಂತ್ರ್ಯಕ್ಕೆ 3 ನೇ ಸ್ಥಾನವನ್ನು ಕೊಟ್ಟಿರುವುದು ನಮ್ಮ ನಿಮ್ಮೆಲ್ಲರಿಗೆ ಸ್ವಾತಂತ್ರ್ಯತೆಯಲ್ಲಿ ಅತ್ಯಂತ ಉನ್ನತ ಮಟ್ಟದ ಸ್ಥಾನವನ್ನು ಕೊಟ್ಟಿರುವುದು ಸಂತೋಷದಾಯಕ ವಿಷಯವಾಗಿದೆ. ಇದರಲ್ಲಿ ಧಾರ್ಮಿಕ ಗುಂಪುಗಳ ನಡುವಿನ ಕೋಮು ಗಲಭೆ ಬ್ರಿಟಿಷರ ಆಡಳಿತ ಕಾಲದಿಂದಲೂ ಸ್ವಾತ್ಯಂತ್ರ್ಯದ ದಿನದವರೆಗೂ ನೆಡೆಯುತ್ತಲೇ ಬಂದಿವೆ.

ಭಾರತದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯು ಬಹಳ ವಿಪರೀತವಾಗಿ ರಚನೆಯಾಗಿರುವುದನ್ನು ನಾವು ಸಹಜವಾಗಿ ಕಂಡಿರುವುದು ಬಹಳ ಪ್ರಮುಖವಾಗಿದೆ. ಕಾರಣವೆಂದರೆ ದೇಶದ ವಿಶಾಲವಾದ ಭೂಭಾಗ ಮತ್ತು ಈ ದೇಶದಲ್ಲಿ ಸಾರ್ವಭೌಮತ್ವ, ಸಾಮಾಜಿಕವಾಗಿ ಸಮಾನತೆ, ಪ್ರಜಾತಂತ್ರ, ಗಣರಾಜ್ಯ ರಾಷ್ಟ್ರವಾಗಿದೆ..ಹಾಗೆಯೇ ಮಾನವನಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ ಕೆಲಸವನ್ನು ಗಳಿಸುವ ಸಾರ್ವಜನಿಕ ಹಕ್ಕು ಹಾಗೂ ಮಾನವನ ಹಕ್ಕುಗಳ ದೌರ್ಬಲ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಪೊಲೀಸ್ ಸುಧಾರಣೆ ಕಾಯಿದೆಯನ್ನು ಜಾರಿಗೆ ತರಲಾಯಿತು, "ಇಂಡಿಯನ್ ಪೆನಾಲ್ ಕೋಡ್ ಸೆಕ್ಷನ್ 377 ರ ಅನ್ವಯ ಸ್ಪಷ್ಟವಿಲ್ಲದ "ಅಸ್ವಾಭಾವಿಕ ಲಿಂಗ ಕಾಯ್ದೆ ಸಲಿಂಗಕಾಮಗಳಿಗೆ ಅಸಂವಿಧಾನಾತ್ಮಕವಾಗಿದ್ದು, ಖಾಸಗಿಯಾಗಿ ಇಬ್ಬರು ನಡುವಿನ ಒಪ್ಪಂದಕ್ಕೆ ತಡೆಯಾಗಿದ್ದು ಅಪರಾಧಿ ಭಾವದಿಂದ ನೋಡದಿರಲು ತಂದ ಕಾಯ್ದೆ ಅದರಲ್ಲಿ ಮಾನವನಿಗಾಗಿಯೇ ಜಾರಿಗೆ ತಂದಂತಹ ಕಾಯಿದೆಗಳು ಈ ಕೆಳಗಿನಂತಿವೆ, ಮೂಲಭೂತ ಹಕ್ಕುಗಳು, ವಿವರಣೆಗಳು, ಸಂಪಾದಿಸಿದ ಭಾರತೀಯ ಸಂವಿಧಾನದಿಂದ ಮಾನ್ಯತೆ ಪಡೆದ ಆರು ಮೂಲಭೂತ ಹಕ್ಕುಗಳನ್ನು ಈ ಕೆಳಗೆ ನೀಡಲಾಗಿದೆ
*ಸಮಾನತೆಯ ಹಕ್ಕು
*ಸ್ವತಂತ್ರ್ಯದ ಹಕ್ಕು
*ಶೋಷಣೆಯ ವಿರುದ್ಧದ ಹಕ್ಕು
*ಧರ್ಮದ ಸ್ವತಂತ್ರ್ಯದ ಹಕ್ಕು
*ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು
*ಸಾಂವಿದಾನಿಕ ಪರಿಹಾರದ ಹಕ್ಕು
ಭಾರತ ಸಂವಿಧಾನದ ರಚನೆಯಿಂದ ಪ್ರಜಾಪ್ರಭುತ್ವದ ಸಾರ್ವಭೌಮತ್ವದ ಗಣರಾಜ್ಯವಾಗಿ ಶ್ರೀಸಾಮಾನ್ಯರಿಗೆ ಮತದಾನ ಮಾಡುವ ಹಕ್ಕು ಸಂವಿಧಾನದ 3ನೇ ಭಾಗದಲ್ಲಿ ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿದ್ದು, ಭಾರತದ ಉಚ್ಚ ಮತ್ತು ಶ್ರೇಷ್ಠ ನ್ಯಾಯಾಲಯಗಳು ಅಂಗಿಕಾರ, ಹಿಂದುಳಿದ ಜಾತಿ ಹಾಗೂ ವರ್ಗದ ಜನರಿಗೆ ವಿದ್ಯಾಭ್ಯಾಸ, ಉದ್ಯೋಗ ಮತ್ತು ರಾಜಕೀಯವಾಗಿ ಪ್ರತಿನಿಧಿಸುವಿಕೆಯ ಹಕ್ಕುಗಳ ಪ್ರಧಾನ.
1952 ರಲ್ಲಿ ಬುಡಕಟ್ಟು ಅಪರಾಧಿ ಜನಾಂಗವನ್ನು ವಿಭಾಗಿಸಿ ಮತ್ತು ಅವರನ್ನು ವಿರೋದಿಸಿ ಪ್ರಕಟಿಸಿ ಹ್ಯಯಬಿಚುಯೇಲ್ ಅಫೇನ್ಡರ್ಸ್ ಕಾಯಿದೆಯನ್ನು ಜಾರಿಗೊಳಿಸಲಾಯಿತು. ಇದರಿಂದಾಗಿ ಪ್ರಜಾಪ್ರಭುತ್ವದ ಜೀವಂತಿಕೆ ಇರುವುದೇ ನಾಗರೀಕ ಸಮಾಜದ ಸ್ವತಂತ್ರ ಬದುಕಿನಿಂದ. ಹಾಗಾಗಿ ಸಂವಿಧಾನ ಹಾಗೂ ಕಾನೂನು ನೀಡಿರುವ ಮಾನವ ಹಕ್ಕುಗಳನ್ನು ಬೆಂಬಲಿಸಿ, ಬಾಳಬೇಕಿದೆ ಇಂದಿನ ಯುವ ಪೀಳಿಗೆ ಹಾಗೂ ಯುವಕರಿಗೆ ಮಾನವ ಹಕ್ಕುಗಳ ಉಳುವಿಗಾಗಿ ಹಾಗೂ ಮಾನವನ ಅಭಿವೃದ್ಧಿಗೆ ಬೇಕಾಗಿರುವ ಮೂಲಭೂತ ಹಕ್ಕುಗಳ ಕುರಿತು ಜಾಗೃತರನ್ನಾಗೀಸಬೇಕಿದೆ‌.

ಮಾನವ ಹಕ್ಕುಗಳು ಎಂದರೆ ನಮ್ಮ ಬದುಕನ್ನು ಅರ್ಥಪೂರ್ಣವನ್ನಾಗಿಸಿ ತೃಪ್ತಿದಾಯಕವಾಗುವಂತೆ ಮಾಡುವಂತಹ ಮೂಲಭೂತ ಅರ್ಹತೆಗಳು ಹಾಗೂ ಸ್ವತಂತ್ರ್ಯಗಳನ್ನು ಮಾನವ ಹಕ್ಕುಗಳೆಂದು ಕರೆಯಲಾಗುತ್ತದೆ. ನಿರ್ಭೀತಿಯಿಂದ ಇರುವುದು, ಕಸಿದುಕೊಳ್ಳುವುದರಿಂದ ಮುಕ್ತಿ ಪಡೆಯುವುದು ಹಾಗೂ ನಮ್ಮ ಎಲ್ಲಾ ಸಾಮರ್ಥ್ಯಗಳನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ಅವಕಾಶವನ್ನು ಪಡೆಯುವುದು ನಮ್ಮ ನಿಮ್ಮೆಲ್ಲರ ಮೂಲಭೂತ ಅಕಾಂಕ್ಷೆಯಾಗಿದೆ. ಆದಕಾರಣದಿಂದಲೇ ಮಾನವ ಹಕ್ಕುಗಳನ್ನು ಕೆಲವೊಮ್ಮೆ 'ಸಹಜವಾದ ಹಕ್ಕುಗಳು 'ಎಂದು ಕರೆಯಲಾಗುತ್ತದೆ. ಎಲ್ಲಾ ಅಂತಾರಾಷ್ಟ್ರೀಯ ಸಮುದಾಯವು, ಭಾರತವೂ ಸೇರಿದಂತೆ, ಈ ಹಕ್ಕುಗಳನ್ನು ಹಾಗೂ ಹಕ್ಕುಗಳ ಅರ್ಥವೇನು ಎಂಬುದನ್ನು ಒಪ್ಪಿಕೊಂಡಿವೆ. ಸಂವಿಧಾನವನ್ನು ಬರೆದಾಗ, ಮಾನವ ಹಕ್ಕುಗಳನ್ನು ಮೂಲಭೂತ ಹಕ್ಕುಗಳು ಮತ್ತು ರಾಜ್ಯನೀತಿಯ ನಿರ್ದೇಶನ ತತ್ವವಿರುವ ಭಾಗ 3 & ಭಾಗ 4ರಲ್ಲಿ ಸೇರಿಸಲಾಗಿತ್ತು. ಅವುಗಳೆಲ್ಲವೂ ಸೇರಿ 'ಸಂವಿಧಾನ ಪ್ರಜ್ಞೆ 'ಎಂದು ರೂಪಗೊಂಡಿದೆ. ನ್ಯಾಯಸಮ್ಮತವಾದ ಸಾಮಾಜಿಕ ವ್ಯವಸ್ಥೆಯನ್ನು ಎಲ್ಲರಿಗೂ ದೊರಕಿಸಿಕೊಡುವ ಸಲುವಾಗಿ ನಾಗರೀಕ ಹಾಗೂ ರಾಜಕೀಯ ಸ್ವತಂತ್ರ್ಯಗಳನ್ನು ಒಟ್ಟಿಗೆ ಸೇರಿಸಬೇಕೆಂದು ಸಂವಿಧಾನದ ಅನುಯಾಯಿಗಳು ಭಾವಿಸಿದರು. ನಿರ್ದೇಶಕ ತತ್ವಗಳ ಉದ್ದೇಶ ಎಲ್ಲಾ ನೀತಿಗಳು ಮತ್ತು ಕಾನೂನು ರಚನೆಗಳಿಗೆ ಮಾರ್ಗದರ್ಶನ ನೀಡುವುದಾಗಿದೆ', ಬದಲಾವಣೆಯ ದಿಕ್ಸೂಚಿಯಾಗಬಹುದು', ಮತ್ತು ಕಾನೂನು ರಚನೆಗಳಿಗೆ ಮಾರ್ಗದರ್ಶನ ನೀಡುವುದಾಗಿದೆ. ಇದರಿಂದ ನಾವು ನೀವೆಲ್ಲರೂ ಮಾನವ ಹಕ್ಕುಗಳ ಬಗ್ಗೆ ತಿಳಿದುಕೊಂಡು ಹಾಗೂ ಅವುಗಳ ಬಗ್ಗೆ ಇನ್ನೊಬ್ಬರಿಗೆ ತಿಳಿಯಪಡಿಸಿಕೊಳ್ಳುವುದನ್ನು ಕಲಿಯಬೇಕೆಂದು ಕೇಳಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಸಾಮಾಜಿಕ ಕರ್ತವ್ಯ ಆಗಿದೆ. ಹಾಗೂ ಮನುಕುಲದವರೆಲ್ಲರೂ ವಿಶ್ವಮಾನವನ ಹಕ್ಕುಗಳಿಗೆ ಮತ್ತು ಕರ್ತವ್ಯಗಳಿಗೆ ಮಹತ್ವವನ್ನು ಕೊಡಬೇಕಾಗಿದೆ..!
- ಬಸವರಾಜ H ಹೊಗರನಾಳ✍
ಪತ್ರಿಕೋದ್ಯಮ ವಿದ್ಯಾರ್ಥಿ,ಧಾರವಾಡ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...