ಮಂಗಳವಾರ, ಸೆಪ್ಟೆಂಬರ್ 28, 2021

ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ (ರಿ) ವತಿಯಿಂದ ಪ್ರಶಸ್ತಿ ಪ್ರದಾನ : ಡಾ. ವೆಂಕಟೇಶ ಬಿ. ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ.

ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ (ರಿ) ವತಿಯಿಂದ ಪ್ರಶಸ್ತಿ ಪ್ರದಾನ

ಡಾ. ವೆಂಕಟೇಶ ಬಿ. ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ
ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ (ರಿ) ಹಾಸನ ಇವರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ  ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸೃಜನಶೀಲ ವೃತ್ತಿ ಕಾರ್ಯ ದಕ್ಷತೆ
ಯನ್ನು ಗುರುತಿಸಿ ಇವರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಕೊಡಲಾಗುವ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿಗೆ  ಶಿಕ್ಷಕರಾದ 
ಡಾ. ವೆಂಕಟೇಶ ಬಿ. ಅವರು ಭಾಜನ
ರಾಗಿದ್ದಾರೆ.ಇವರಿಗೆ ದಿನಾಂಕ 26 ಸೆಪ್ಟೆಂಬರ್ 2021 ರಂದು *ಹಾಸನದ ಹಾಸನಾಂಬ ಕಲಾ ಭವನ* ದಲ್ಲಿ  ಏರ್ಪಡಿಸಿದ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆ
ಯಲ್ಲಿ ಭಾರತ ಸ್ಕೌಟ್ಸ್  ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯಾಯುಕ್ತರು ಆದ ಶ್ರೀ ಪಿ.ಜಿ.ಆರ್ ಸಿಂಧ್ಯರವರು, ಬನವಾಸೆಯ ಶ್ರೀ ರಂಗ ಸ್ವಾಮಿ, 
ಮತ್ತು ಹಾಸನ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ  ಗಣ್ಯರ ಸಮ್ಮುಖದಲ್ಲಿ,  ದಕ್ಷ ಐಪಿಎಸ್ ಅಧಿಕಾರಿಗಳಾಗಿರುವ  ಶ್ರೀ ರವಿ ಡಿ ಚೆನ್ನಣ್ಣನವರು  ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ರಾಜ್ಯಾಧ್ಯಕ್ಷರಾದ ಶ್ರೀ ಸಿ ಎನ್. ನಾಗೇಶ ಅವರು ತಿಳಿಸುವ ಮೂಲಕ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂಧಿಸಿದರು.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ (ರಿ) ವತಿಯಿಂದ ಪ್ರಶಸ್ತಿ ಪ್ರದಾನ : ಶ್ರೀ ಮಲ್ಲಿಕಾರ್ಜುನ ಬಡಿಗೇರ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ.

ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ (ರಿ) ವತಿಯಿಂದ ಪ್ರಶಸ್ತಿ ಪ್ರದಾನ

ಶ್ರೀ ಮಲ್ಲಿಕಾರ್ಜುನ ಬಡಿಗೇರ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ
ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ (ರಿ) ಹಾಸನ ಇವರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ  ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸೃಜನಶೀಲ ವೃತ್ತಿ ಕಾರ್ಯ ದಕ್ಷತೆ
ಯನ್ನು ಗುರುತಿಸಿ ಇವರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಕೊಡಲಾಗುವ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿಗೆ ಹೊರನಾಡ ಮುಂಬೈ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಬಿಲ್ಲವರ ಸಂಸ್ಥೆಯ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ ಶಿಕ್ಷಕರಾದ

 ಶ್ರೀ ಮಲ್ಲಿಕಾರ್ಜುನ.ಈ. ಬಡಿಗೇರ ಅವರು ಭಾಜನ
ರಾಗಿದ್ದಾರೆ.ಇವರಿಗೆ ದಿನಾಂಕ 26 ಸೆಪ್ಟೆಂಬರ್ 2021 ರಂದು *ಹಾಸನದ ಹಾಸನಾಂಬ ಕಲಾ ಭವನ* ದಲ್ಲಿ  ಏರ್ಪಡಿಸಿದ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆ
ಯಲ್ಲಿ ಭಾರತ ಸ್ಕೌಟ್ಸ್  ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯಾಯುಕ್ತರು ಆದ ಶ್ರೀ ಪಿ.ಜಿ.ಆರ್ ಸಿಂಧ್ಯರವರು, ಬನವಾಸೆಯ ಶ್ರೀ ರಂಗ ಸ್ವಾಮಿ, 
ಮತ್ತು ಹಾಸನ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ  ಗಣ್ಯರ ಸಮ್ಮುಖದಲ್ಲಿ,  ದಕ್ಷ ಐಪಿಎಸ್ ಅಧಿಕಾರಿಗಳಾಗಿರುವ  ಶ್ರೀ ರವಿ ಡಿ ಚೆನ್ನಣ್ಣನವರು  ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು. 

ಎಂದು ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ರಾಜ್ಯಾಧ್ಯಕ್ಷರಾದ ಶ್ರೀ ಸಿ ಎನ್. ನಾಗೇಶ ಅವರು ತಿಳಿಸುವ ಮೂಲಕ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂಧಿಸಿದರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

ಸ್ವತಂತ್ರವಿಲ್ಲದ ಬದುಕು (ಕವಿತೆ) - ಶ್ರೀಮತಿ ಸೂಗಮ್ಮ ಡಿ ಪಾಟೀಲ್ಉತ್ನಾಳ್ (ಬಿಜಾಪುರ).

ಸ್ವತಂತ್ರವಿಲ್ಲದ ಬದುಕು

ಹೆಣ್ಣಿಗೇ ಎಲ್ಲಿಹದು ಹೇಳಿ  ಸ್ವತಂತ್ರ 
ಬಡವನ  ಮನೆಯಲ್ಲಿ ಹೆಣ್ಣಾಗಿ ಹುಟ್ಟೋದೇ  ಅತಂತ್ರ
ಸ್ತ್ರೀ ಎಂಬ   ಕಾರಣಕೆ ತಂದೆಯ ಮನೆಯಲ್ಲಿಯೂ ಪರತಂತ್ರ//

ಅತ್ತೆಯ ಮನಿಯಲಿ ಅವಳ   ಅಡಿಯಾಳಗಿ ಬಾಳುವ ಷಡ್ಯಂತ್ರ
ಎದುರಾಗಿ ಮಾತಾಡಿದರೆ ಸಂಸ್ಕಾರವಿಲ್ಲದವಳು  ಅನ್ನೋ ಮಂತ್ರ //

ಕೂತರು ನಿಂತರು ಕೊಂಕಾಡುವರೇ ನಮ್ಮ ಹತ್ರ   
ಎಷ್ಟು ಸೋತು ನಡೆದರು ಕರುಣೆ ಇಲ್ಲ ಇವರತ್ರ 
ಹೆಣ್ಣು ಎಂಬ ತಾತ್ಸಾರವೇ ಇಂದಿಗೂ ಪ್ರೀತಿಗೆ ಕತ್ರಿ//

ಮಗಳೆಂಬ ಭಾವ ಇಹುದು  ಜನರೆದುರು ಮಾತ್ರ 
ಅತ್ತೆ ಎಂಬ ಗರ್ವ ಹೋಗದು ಇದೇ ಬಾಳಿನ ತಂತ್ರ //

ಸೊಸೆ ಎಂದ್ರೆ ಮಗನ ಕಿತ್ತುಕೊಂಡವಳೆಂಬ ಖಳನಾಯಕಿ ಪಾತ್ರ
ಸುತನೆಂದರೆ ಹೆಂಡತಿ ಗುಲಾಮನೆಂದು ಅತ್ತೆ ಕೊಟ್ಟ  ಪ್ರಮಾಣ ಪತ್ರ //

ತವರ ತೊರೆದು ನಿಮ್ಮ ನಂಬಿ ಬಂದಿಹ ಹೆಣ್ಣಿಗೇ ಎಲ್ಲಿದೆ ಪ್ರೀತಿ
ಇದೇ ಅಲ್ಲವೇ ಇಂದು ಅಸ್ತಿತ್ವವಿರುವ ಅವಿಭಕ್ತ ಕುಟುಂಬದ ರೀತಿ //
- ಶ್ರೀಮತಿ ಸೂಗಮ್ಮ ಡಿ ಪಾಟೀಲ್
ಉತ್ನಾಳ್ (ಬಿಜಾಪುರ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

ಮನಬಿಚ್ಚಿ ನನ್ನದೊಂದು ವಿಮರ್ಶೆ (ಪುಸ್ತಕ ವಿಮರ್ಶೆ) - ಶ್ರೀಮತಿ ಮಾಳೇಟಿರ ಸೀತಮ್ಮ ವಿವೇಕ್, ಹಾಸನ.

ಮನಬಿಚ್ಚಿ ನನ್ನದೊಂದು ವಿಮರ್ಶೆ
"ಮನ ಬಿಚ್ಚಿ ಹಾಡಿ ಬಿಡಲೇ" ವಿಮರ್ಶಾತ್ಮಕ ಕೃತಿಯ ಬಗ್ಗೆ ನಾನು ಕೂಡ ವಿಮರ್ಶೆ ಬರೆಯಬೇಕೆಂದು ಶ್ರೀಯುತ ಅನಂತರಾಜು ಅವರು ಹೇಳಿದಾಗ ಸಂತೋಷವಾಗಿ ಒಪ್ಪಿಕೊಂಡು ಬಿಟ್ಟೆ. ಆ ನಂತರ ನೋಡಿ ಅವರು ಕಳುಹಿಸಿದ ಪಿ.ಡಿ.ಎಫ್ ಒಳಗೆ ಅನೇಕ ಸಾಹಿತ್ಯ ದಿಗ್ಗಜರು ಒದಗಿಸಿದ ವಿಮರ್ಶೆ ಓದುತ್ತಾ ಹೋದಂತೆ ಮನಸು ಸಣ್ಣಗೆ ಕಂಪಿಸಿದ್ದು.! ಏಕೆಂದರೆ ಮೊದಲಿಗೆ ಕಳುಹಿಸಿದ ಪಿ.ಡಿ.ಎಫ್ ಓದಲಿಕ್ಕೇ ಐದು ದಿನ ತೆಗೆದುಕೊಂಡಿದ್ದಲ್ಲದೆ ಅನಂತರಾಜು ಅವರ ಕೃತಿ, ಲೇಖನಗಳ ರಾಶಿ ಅವುಗಳನ್ನು ವಿಮರ್ಶೆ ಮಾಡಿದ ಪರಿ, ವಿಮರ್ಶೆ ಮಾಡಿದವರ ಜ್ಞಾನಭಂಡಾರ ನನ್ನಲ್ಲಿ ಹೊಸ ಕಂಪನವನ್ನೇ ಮೂಡಿಸಿತ್ತು... ಹೀಗೂ ಕೃತಿ ಹೊರತರಬಹುದೇ ಎಂದು ಆಶ್ಚರ್ಯವಾಯಿತಲ್ಲದೆ, ಇವರಿಗೆ ಇಷ್ಟೊಂದು ಕ್ರಿಯಾಶೀಲವಾಗಿ ಸುಲಲಿತವಾಗಿ ಬರೆಯಲು ಪ್ರೇರಣೆಯಾದ ರಹಸ್ಯ ಏನೆಂದು ಯೋಚಿಸುವಂತೆ ಮಾಡಿಸಿತ್ತು! ಇವರ ಅನೇಕ ಪತ್ರಿಕಾ ಲೇಖನ ಓದುತ್ತಾ ಬಂದಿದ್ದೇನೆ. ಅವುಗಳನ್ನೋದುವಾಗ ಬರುವ ಭಾವ ಒಂದು ರೀತಿಯದಾದರೆ ನಾಟಕ ವಿಮರ್ಶೆ, ವಚನ ಸಾಹಿತ್ಯ ವಿಮರ್ಶೆ, ಸಾಧಕರ ಪರಿಚಯ, ಪ್ರಬಂಧಗಳ ವಿಮರ್ಶೆ, ಹೀಗೆ ಒಟ್ಟಾರೆ ಅವರ ಸರಳ ಬರವಣಿಗೆಯ ಪುಸ್ತಕಗಳು ಮತ್ತೊಂದು ರೀತಿಯ ಗಂಭೀರ ಕೈಚಳಕ ಮೂಕವಿಸ್ಮಿತಗೊಳಿಸಿತ್ತು. ಇವರನ್ನು ಮೊದಲು ಭೇಟಿಯಾದಾಗ ಎಂಥಾ ಸರಳ ವ್ಯಕ್ತಿತ್ವ ಆದರೆ ಎಷ್ಟೊಂದು ಜನ ಸಂಪರ್ಕ ಹೊಂದಿರುವವರಲ್ಲವೇ ಅಂದುಕೊಂಡಿದ್ದೇ, ಅದು ತಪ್ಪಾಗಲಿಲ್ಲ ಕೂಡ ಅವರಿಂದಾಗಿಯೇ ಅದೆಷ್ಟೋ ವೇದಿಕೆಗಳು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಮಾಡಿಕೊಂಡಿದ್ದಾರೆ ಎಂಬುದನ್ನು ಸ್ವತಃ ಕಂಡುಕೊಂಡಿದ್ದೇನೆ...  ಈ ಕೃತಿಯಲ್ಲಿ ಅನೇಕ ಕವಿ-ಕವಯತ್ರಿಯರು ತಮ್ಮ ವಿಮರ್ಶೆಯಲ್ಲಿ ಸಾಹಿತ್ಯ ಕ್ಷೇತ್ರವೆಂದೇ ಗುರುತಿಸಲ್ಪಡುವ ಗೊರೂರು ಹಾಗೂ ಅಲ್ಲಿನ ಅಗ್ರಮಾನ್ಯರ ಹೆಸರುಗಳೊಂದಿಗೆ ಅದೇ ಸಾಲಿನಲ್ಲಿ ನಿಲ್ಲುವ ಗೊರೂರು ಅನಂತರಾಜು ಅವರ ಸಾಹಿತ್ಯ ಕೃಷಿ ಬಗ್ಗೆ ತಿಳಿಸುತ್ತಲೇ ಅವರ ಹೆಸರಿನೊಂದಿಗೆ ಸೇರಿದ ಗೊರೂರು ಸಾಲುಗಳಲ್ಲಿ ಅವರಿಗಿರುವ ಹುಟ್ಟೂರು ಪ್ರೇಮವನ್ನೂ ಸಾರಿ ಹೇಳಿರುವುದು ಗೋಚರಿಸುತ್ತದೆ. ಮನಬಿಚ್ಚಿ ಹಾಡಿ ಬಿಡಲೆ ಕೃತಿಯ ಇನ್ನೊಂದು ವಿಶೇಷತೆ ಎಂದರೆ ವಿಮರ್ಶೆಯೊಳಗೆ ಅನೇಕರ ಹೊಸ ವಿಚಾರಗಳು ಒಂದೆಡೆ ಕ್ರೋಢೀಕರಣವಾಗಿರುವುದು. ಶ್ರೀ ಎಂ.ವಿ.ತ್ಯಾಗರಾಜ್ ಅವರ ಕಸ್ತೂರಿ ಬಾ ಜೀವನ ಚರಿತ್ರೆ ಉರಿಯುಂಡ ಕರ್ಪೂರದಲ್ಲಿ ಕಂಡುಬರುವ "ಬಾಪೂ ನನ್ನ ಕೊನೆಯಾಸೆ ನೆರವೇರಿಸಿ ಕೊಡುವಿರಾ. ನಾನು ಸಾಯುವ ಮುನ್ನ ನನ್ನ ಮುದ್ದಿನ ಮಗ ಹರಿಲಾಲನನ್ನು ನೋಡಬೇಕು" ಎಂಬ ಮನಮುಟ್ಟುವ ಸಾಲುಗಳು, ಕಸ್ತೂರಿ ಬಾಯಿ ತನ್ನ ಪತಿಯ ಉದ್ಧೇಶ ಹೋರಾಟಗಳಿಗಾಗಿ ತನ್ನ ಬದುಕನ್ನೇ ದಾರೆ ಎರೆದಾಕೆ ಎಂಬ ಸಾಲುಗಳು ಇಂದಿನ ಹೆಣ್ಣು ಮಕ್ಕಳಿಗೆ ಸ್ತ್ರೀ ಎಷ್ಟು ಪ್ರಭಾವಶಾಲಿ ಎಂಬುದನ್ನು ಮನವರಿಕೆ ಮಾಡಿಸುವಂತಿದೆ. ಹಾಗೇ ಶಿಲುಬೆ ಏರಿದ ನಂತರ ಯೇಸು ಪಾಲೆಸ್ತೈನ್ ಬಿಟ್ಟು ಕಾಶ್ಮೀರದಲ್ಲಿ ಕಾಣಿಸಿಕೊಂಡ ಅಜರತ್ ಅಬು ಹುಕೈ ಅವರ ರಂಜ್ ಅಲ್ ಉಮ್ಮಲದಂತಹ ಪುಸ್ತಕ ಉಲ್ಲೇಖ ಮಾಡಿರುವಂತಹದೆಲ್ಲ ಈ ಕೃತಿಯಲ್ಲಿ ಗಮನ ಸೆಳೆಯುತ್ತದೆ. ಹಾಗೆ  ಸಂವೇದನೆಗಳಿಂದ ಮೌಲ್ಯಯುತ ವಿಚಾರಗಳನ್ನು ಹೊರತರುವ ಪ್ರಯತ್ನದಲ್ಲಿ ಇವರು ಅಕ್ಷರದೊಳಗೆ ಅನ್ವೇಷಣೆ ಮಾಡುತ್ತಿರುವಂತೆಯೂ, ಏನೋ ಹುಡುಕಾಟ ನಡೆಸುತ್ತಿರುವ ಸಾಹಿತ್ಯ ವಿಜ್ಞಾನಿಯಾಗಿಯೂ ಕಾಣುತ್ತಾರೆ. ಇವರ ಲೇಖನಗಳ ಬಗ್ಗೆ ಹರಿದಿರುವ ಅಭಿಪ್ರಾಯಗಳಲ್ಲೂ ಮಾತಿಗಿಂತ ಸರಾಗವಾಗಿ ಬರಹಗಳಲ್ಲಿ ಯಾರನ್ನೂ ನೋಯಿಸದ, ಹೃದಯಕ್ಕೆ ಹತ್ತಿರವಾಗಬೇಕೆಂಬ, ಮುಂದಿನ ಪೀಳಿಗೆಗೆ ಇಂದು ನಡೆಯುವ ಹಬ್ಬ ಹರಿದಿನ ಜಾತ್ರೆ ಬಾಲ ಕಾರ್ಮಿಕ ಹಕ್ಕು ಮಹಿಳೆ ಕಲಾಕ್ಷೇತ್ರ ಹೀಗೆ ಪ್ರತಿಯೊಂದು ವಿಚಾರಗಳ ಬಗ್ಗೆ ತಿಳಿಸಬೇಕೆಂಬ ಮಿಡಿತವಿದೆ ಎಂಬುದು ಸೂಚ್ಯವಾಗಿ ಕಾಣುತ್ತದೆ. ಕೊನೆಯಲ್ಲಿ ಹೇಳುವುದೇನೆಂದರೆ ತಮ್ಮನ್ನು ತಾವು ಇಷ್ಟರ ಮಟ್ಟಿಗೆ ಕನ್ನಡ ಸೇವೆಗೆ ಇಳಿಸಿಕೊಂಡು, "ಮಾತನಾಡುವ ಕಲೆ ಸಿದ್ಧಿಸಿರುವ ಮಾನವನಿಗಿಂತ ಶ್ರೇಷ್ಠ ಜನ್ಮ ಯಾವುದು" ಎಂಬ ನಿತ್ಯಸತ್ಯವನ್ನು ಆತ್ಮದಿಂದ ಅರಿತು ನಡೆಯುತ್ತಿರುವಂತೆ ನನಗೆ ಭಾಸವಾಗುತ್ತಿದ್ದಾರೆ ಶ್ರೀ ಗೊರೂರು ಅನಂತರಾಜು ಅವರು ಇವರ ಬಗ್ಗೆ ಬರಿಯುವಷ್ಟು ಪ್ರಭುದ್ಧತೆ ಎನಗಿಲ್ಲ ಆದರೂ ಅವರ ವ್ಯಕ್ತಿತ್ವವನ್ನು ಹತ್ತಿರದಿಂದ ನೋಡಿರುವುದು ಈ ವಿಮರ್ಶೆ ಬರೆಯಲು ಸ್ಪೂರ್ತಿ ನೀಡಿದೆ, ಅಂತಹ ಸರಳ ಸ್ವಭಾವದ ಲೇಖನಿ ಪ್ರೇಮಿಯು ಇನ್ನಷ್ಟು ಎತ್ತರಕ್ಕೆ ಬೆಳೆದು ಕಲಾರಾಧಕರೆಲ್ಲರಿಗೂ ದಾರಿದೀಪವಾಗಲಿ ಎಂದು ಹಾರೈಸುತ್ತ ಶುಭಕೋರುತ್ತೇನೆ.

- ಶ್ರೀಮತಿ ಮಾಳೇಟಿರ ಸೀತಮ್ಮ ವಿವೇಕ್, ಹಾಸನ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ‌ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹೊಳ್ಳಿ ಹೊಳ್ಳಿ ನೋಡ್ಯಾಳೋ"...! (ಕವಿತೆ) - ಹನುಮಂತ ದಾಸರ, ಹೊಗರನಾಳ.

"ಹೊಳ್ಳಿ ಹೊಳ್ಳಿ ನೋಡ್ಯಾಳೋ"...!

ಸಂಜೀಕ ನೆನೆದರ ನನ್ನವಳ ಹೆಸರ
ಸನಿಹಕ್ಕ ಸುಳಿದೈತಿ ಅವಳೆದೆಯ ಹುಸಿರ,
ನವಿಲ್ಹಾಂಗ ನುಲಿದಾಳೋ ನವಲೂರ ರತಿಯು
ಹುಬ್ಬಾರಿಸಿ ನಡೆದಾಳೋ ಹುಬ್ಬಳ್ಳಿ ಸತಿಯು...!!

ನಸುನಕ್ಕ ಕರೆದಾಳೋ ಸನ್ನೆಯಲಿ ಸಂಗಾತಿ
ಕೈ ಮಾಡಿ ಸೆಳೆದಾಳೋ ಧಾರವಾಡ ನಯಗಾತಿ,
ಕೆಂಗಣ್ಣ ಕಣ್ಣೊಳಗ ಗುರಿಯಿಟ್ಟ ನೋಡ್ಯಾಳೋ
ಗುಸುಗುಸು ಮಾಡುತಾ ಗುಂಗ ಹಿಡಿಸ್ಯಾಳೋ...!!

ಮೈಸೂರ ಮಲ್ಲಿಗೆ ಮುಡುಕೊಂಡ ಬರುತಾಳೋ
ಬೇಲೂರ ಬಾಲೆಯಂಗ ನುಲಿನುಲಿದ ನಾಟ್ಯಾವಾಡ್ಯಾಳೋ,
ಕೆಂದುಟಿಗೆ ಹಚ್ಯಾಳೋ ಕೆಂಪಾದ ತಿಳಿಬಣ್ಣ
ತೆಳ್ಳನ ಸೊಂಟದ ಮ್ಯಾಗ ಹೊತ್ತ ನಡೆದಾಳೋ ಕೊಡವನ್ನ....!!

ಹಳ್ಳಕ್ಕ ನೀ ಬರತಿ ತೊಟ್ಟ ತೆಳ್ಳನ ದಡಿಸೀರೆ
ತಿರುತಿರುಗಿ ನಾ ನೋಡೇನ ಒಂದೊಂದು ಸಾರಿ,
ನಡೆದ ಬರತಿ ಸೊಂಟವ ಬಳುಕಿಸುತ
ಮೆಂಟಲ್ಲ ಆಗೇನ ನಿನ ಬಣ್ಣಕ್ಕ ಮನಸೋತ...!!

ಹೊಳ್ಳಿಹೊಳ್ಳಿ ನೋಡ್ಯಾಳೋ ಹೊಂಬೆಳಕ ಚೆಲುವೆ
ಗುಸುಗುಸು ನಸುನಕ್ಕ ನನ್ಯಾಕ ನೀ ಸೆಳೆವೆ,
ಕಂಕಣ ಕಟ್ಟಿ ಕೈಹಿಡಿದು ನಡೆಸುವೆ
ಕೋಮಲೆ ಕನಸಿಗೆ ನನಸಾಗಿಸಿ ನಾನಿರುವೆ....!!

- ಹನುಮಂತ ದಾಸರ, ಹೊಗರನಾಳ.
ಮೊ: 9945246234.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಭಾನುವಾರ, ಸೆಪ್ಟೆಂಬರ್ 26, 2021

ಸತ್ಯದ ಕೋಲು (ಲೇಖನ) - - ಮಂಜುನಾಥ ಹಿರೇಮಠ ದಂಡಸೋಲಾಪುರ (ಚಾಮನಾಳ )ಯುವ ಸಾಹಿತಿಗಳು ಮತ್ತು ಶಿಕ್ಷಕರು.

"ಸತ್ಯದ ಕೋಲು "

ಲೋಕದಾಸೆಗಳೇ ಕತ್ತಲಾಗಿರುವದು. ಕತ್ತಲೆ ಎಂದರೆ ಅಜ್ಞಾನಗಳಾಗಿರುವವು. ಆಸೆಗಳು ನಮ್ಮ ಮನದಲ್ಲಿ ಇರುವವರೆಗೆ ಅದಕ್ಕೆ ಸಂಭಂದಿಸಿದ ಅಜ್ಞಾನಗಳು ನಮ್ಮ ಮನದಲ್ಲಿ ಇರುತ್ತವೆ. ಇವುಗಳನ್ನು ಮನದಿಂದ ಹೊರಗೆ ಹಾಕಬೇಕೆಂದರೆ ಮತ್ತೆ ಬರುತ್ತವೆ. ಒಂದು ಬಾಗಿಲಿನಿಂದ ಹೊರಗೆ ಹಾಕಿದರೆ ಮತ್ತೊಂದು ಬಾಗಿಲಿನಿಂದ ಒಳಗೆ ಬರುತ್ತವೆ.ಮನೆಯೊಳಗೆ ನಾಯಿ  ಬಂದಿರುವಾಗ ಹೊರಗೆ ಹೋಗು ಎಂದರೆ ಹೋಗಲಾರದು ಅದಕ್ಕೆ ಒಂದು ಕೋಲನ್ನು ಹಿಡಿದರೆ ಹೊರಗೆ ಹೋಗುತ್ತದೆ. ಅದರಂತೆ ನಮ್ಮ ಮನದಲ್ಲಿ ಅಜ್ಞಾನವೆಂಬುದೇ ನಾಯಿಯಾಗಿರುವದು ಹೊರಗಿನ ನಾಯಿಯನ್ನು ನಾವೆಲ್ಲರೂ ಓಡಿಸಲು ಧೈರ್ಯ ಮಾಡುತ್ತಿರುವೆವು ಆದರೆ ಅಂತರಂಗದ ನಾಯಿಯನ್ನು  ಓಡಿಸುವ ಧೈರ್ಯ ನಮ್ಮಿಂದಾಗುತ್ತಿಲ್ಲ. ಹೊರಗಿನ ನಾಯಿ ಕೋಲಿಗೆ ಹೇಗೆ ಅಂಜುವದೋ ಅದರಂತೆ ಅಂತರಂಗದ ನಾಯಿ ಸತ್ಯವೆಂಬ ಕೋಲು ಹಿಡಿದಾಗ ಹೆದರುವದು. ಅದರಂತೆ ಯಾವ  ಆತ್ಮದಲ್ಲಿ ಪರಮಾತ್ಮ  ಸದಾ ಇರುವನೋ ಆ ಮನದಲ್ಲಿ ಯಾವ ರೀತಿಯ ಅಜ್ಞಾನವೆಂಬ ನಾಯಿ ಬರುವದಿಲ್ಲ. ಮಾಲೀಕನಿಲ್ಲದ ಮನೆಯು ಅಶುಚಿಯಾಗಿರುತ್ತದೆ, ಅದರಂತೆ ಎಲ್ಲಿ ಪರಮಾತ್ಮನಿರುವದಿಲ್ಲವೋ  ಆ ಮನದಲ್ಲಿ ಅನೇಕ ಅಜ್ಞಾನವೆಂಬ ಪ್ರಾಣಿಗಳು ವಾಸಿಸುತ್ತವೆ ಇದರಿಂದ ಮನವು ಅಶುಚಿಯಾಗಿರುತ್ತದೆ. ಹೀನ  ಶಕ್ತಿಗಳು ಹೋಗು ಎಂದರೆ ಹೋಗಲಾರವು- ಒಳ್ಳೆಯ ಶಕ್ತಿಗಳು ಬಾ ಎಂದರೆ ಬರಲಾರವು. ಆಸೆಗಳನ್ನೇ ತುಂಬಿಕೊಂಡಿರುವ ಈ ಮನುಷ್ಯ ಜೀವಿಯು  ಮೋಹಕ್ಕೆ ಬಲಿಯಾಗಿ ಜೀವನವೇ ಮೋಹವೆಂದು ನಂಬಿದ ಮೂರ್ಖರೆ ಜಾಸ್ತಿ. ಧರ್ಮವೆಂಬ ಜ್ಞಾನ ಬಾ  ಎಂದರೆ ಬರುವದು ಯಾವಾಗ?  ನಾವು ಸತ್ಯವೆಂಬ -ಪ್ರಾಮಾಣಿಕತೆ ಎಂಬ ಮಾರ್ಗದಲ್ಲಿ ನಡೆದಾಗ ಯಾವ ಶಕ್ತಿಯು ಬಾ ಎಂದಾಗ ಬರುತ್ತದೆ. ಸತ್ಯದ  ಆಧಾರವೇ ಧರ್ಮದ  ಆಧಾರ. ಕಾಮ ಕಾಂಚನಕ್ಕೆ ಬಲಿಯಾಗುವ ಜೀವಿಗಳು ಎಂದಿಗೂ ಶಿವನ ಕೃಪೆಗೆ ಪಾತ್ರವಾಗುವದಿಲ್ಲ. ಲೋಕದಾಸೆಗಳೆಂದರೆ ಕತ್ತಲಾಗಿರುವದು ಸತ್ಯ ಧರ್ಮದಾಸೆಗಳು ಬೆಳಕಾಗಿರುವದು ಲೋಕದಾಸೆ ಇದ್ದವರು ಕತ್ತಲಲ್ಲಿ ಇದ್ದಂತೆ. ಬೆಳಕು ಇದ್ದಲ್ಲಿ ಕತ್ತಲಿಗೆ ಅವಕಾಶ  ಇಲ್ಲ ಹಾಗೆಯೇ ಎಲ್ಲಿ ಧರ್ಮವಿದೆ ಅಲ್ಲಿ ಅಧರ್ಮಕ್ಕೆ ಅವಕಾಶವಿಲ್ಲ ಯಾರು ಧರ್ಮದ ಪಾಲನೆ  ಮಾಡುವರೋ ಅವರು ದೇವರ  ಕೃಪೆಗೆ ಪಾತ್ರರಾಗುತ್ತಾರೆ ಅಷ್ಟೆ ಏಕೆ ಧರ್ಮದ ಅಂಶ ರಕ್ತಗತವಾಗಿ ಬರುತ್ತದೆ ಇಷ್ಟ ದೇವನನ್ನು ಮನದಲ್ಲಿ ಸ್ಥಾಪಿಸಿಕೊಂಡು ಭಕ್ತಿಯ ಸುರಿಮಳೆಗೈದರೆ ಇಷ್ಟ ದೇವರ ಕೃಪೆಯಾಗಿ ಸ್ವರ್ಗ ಪ್ರಾಪ್ತಿಯಗುತ್ತದೆ ಇಲ್ಲವಾದರೆ ನರಕ ಕಟ್ಟಿಟ್ಟ ಬುತ್ತಿ.  ಶಿವನು ಕೊಟ್ಟ ಜೀವನ ಯಾವ ಸತ್ಯವನ್ನು ಸಾಧಿಸದೆ ನಮ್ಮ ಮನವೆಂಬ ಖಾಲಿಪೆಟ್ಟಿಗೆಯನ್ನು  ರಕ್ಷಿಸು, ಕಾಪಾಡು ಎಂದು ಮೊರೆ ಇಟ್ಟರೆ ಆ ಮನವನ್ನು ದೇವರು ಕಾಪಾಡಲಾರನು. ಕಾರಣ ಮನದಲ್ಲಿ ಧರ್ಮವೇ ಇಲ್ಲ.  ಜಗತ್ತಿನ ಶೃಷ್ಟಿಕರ್ತ ಆ ಶಿವನು ತಂದೆ ತಾಯಿ ಇದ್ದಂತೆ . ಜನರು ಕಷ್ಟ ಬಂದಾಗ, ಜೀವ ಹೋಗುವ ಸಂದರ್ಭದಲ್ಲಿ  ಮಾತ್ರ ದೇವರನ್ನು ನೆನಪಿಸುವವರೇ ಜಾಸ್ತಿ. ಸತ್ಯದ ಕೋಲು ಪ್ರಾಮಾಣಿಕತೆಗೆ ಸ್ಫೂರ್ತಿ - ಪ್ರಾಮಾಣಿಕತೆ ಧರ್ಮಕ್ಕೆ ಸ್ಫೂರ್ತಿ -ಧರ್ಮಕ್ಕೆ ಆ ಶಿವನು ಸ್ಫೂರ್ತಿ. ದೇವರು ನಿರ್ಮಿಸಿದ ಈ ದೊಡ್ಡ ಜಾತ್ರೆಯಲ್ಲಿ ಕೆಲವರು ಕಾಮಕಾಂಚನ ಖರೀದಿ ಮಾಡಿರುವರು, ಈನ್ನೂ ಕೆಲವರು ಸತ್ಯ ಧರ್ಮದವೆಂಬ ಬಂಗಾರವನ್ನು ಖರೀದಿಸಿದ್ದಾರೆ ಮುಂದೆ ಶಿವನು ಲೆಕ್ಕಾಚಾರ ಮಾಡುತ್ತಾನೆ ಅಲ್ಲಿ ಸ್ವರ್ಗ ಮತ್ತು ನರಕ ನಿಶ್ಚಯವಾಗುತ್ತದೆ.. ಧರ್ಮ ಗಳಿಸಿದವರು ಮತ್ತೆ ಮರುಜನ್ಮಕ್ಕೂ ಯೋಗ್ಯರಾಗುವರು. ಸತ್ಯದ ಕೋಲು ಧರ್ಮದ  ಹಾದಿಗೆ ಸೋಪಾನ.

- ಮಂಜುನಾಥ ಹಿರೇಮಠ ದಂಡಸೋಲಾಪುರ (ಚಾಮನಾಳ )ಯುವ ಸಾಹಿತಿಗಳು ಮತ್ತು ಶಿಕ್ಷಕರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ) 

ಭೂತ (ಕವಿತೆ) - ಶ್ರೀ ತುಳಸಿದಾಸ ಬಿ ಎಸ್‌.

ಭೂತ

ಗಟ್ಟಿಯಾಗಿ ನಿಂತು ನಾನು ಮುಟ್ಟಿ ಗುರಿಯನು ಹಿಗ್ಗಿದೆ
ಚಿಟ್ಟೆಯಂತೆ ಬಣ್ಣ ಬಾಳಿಗೆ ನಲಿದು ಕುಣಿದೆನು ಸುಗ್ಗಿಗೆ
ಒಟ್ಟಿನಲ್ಲಿ  ಕಷ್ಟ ಸರಿಸಿದ ಶಕ್ತಿಗೊಮ್ಮೆಲೆ ಬಾಗಿದೆ
ನೆಟ್ಡ ಕನಸಿಗೆ ರೆಕ್ಕೆ ಬಂದಿತು ದೂರದೂರಿಗೆ ಸಾಗಿದೆ

ಬಂಧು ಬಳಗ ದೂರ ಮಾಡಿತು ಇಲ್ಲಿ ಬಂದೆ ಬೆವೆತೆನು
ಬೆಂದು ಹೋದೆ ಇಲ್ಲಿನುಳಿವಿಗೆ ನೊಂದ ಜೀವ ಸವೆದಿದೆ
ಚೆಂದದಿಂದ ಕಂಡ ಕನಸಿಗೆ ಭೂತದ ಈಟಿಯ ತಿವಿತವು
ಇಂದೆ ಭರವಸೆ ಕಿರಣವೊಂದನು ರವಿಯೆ ಹೊತ್ತು ತರುವೆಯ

ಕಷ್ಟ ಪಡಲು ಮದುವೆ ಆಯಿತು ನಷ್ಟ ನಲ್ಲನು ದೂರವು
ಇಷ್ಟ ಪಟ್ಟ ಗುರುವಿನ ಹುದ್ದೆ ನರಕ ತೋರತ ನಡೆದಿದೆ
ಚೇಷ್ಟೆ ಭೂತವು ಕುಣಿಕೆ ಬಿಗಿದು ವಿಕಟವಾಗಿ ನಗುತಿದೆ
ನಷ್ಟ ಜೀವಕೆ ವರ್ಗವೆಂದು ನೋವು ಕಾಣದೆ ಕಣ್ಣಿಗೆ

ಇಂತ ಕಷ್ಟ ಇರದು ಎಂದು ಮೆಚ್ಚಿ ಹುದ್ದೆಗೆ ಸೇರಿದೆ
ಅಂತು ನಮ್ಮ ಒಂಟಿ ಮಾಡಿ ಸುಖವ ತಾನು ಕಸಿದಿದೆ 
ಬಂತು ಕನಸಿಲಿ ವರ್ಗಭೂತವು ಬೆಚ್ಚಿ ಬೀಳುವೆ ಅನುದಿನ
ಚಿಂತೆ ಕಾಡಿದೆ ಮಗುವು ಅಳುತಿದೆ ತಂದೆ ಮುಖವನು ಕಾಣದೆ

ಅಗಲಿಸೆಮ್ಮ ಕಾಡಬೇಡ ಕಣ್ಣು ತೆರೆಸು ಪ್ರಭುಗಳ
ನಗುತ ಎಲ್ಲರು ಜೊತೆಗೆ ಬಾಳುವ ದಿನವ ಬೇಗ ಕರುಣಿಸು
ಬಿಗದ ಉಸಿರು ಸಡಿಲವಾಗಲಿ ಮೊಗದಿ ನಗವನು ಮರಳಿಸು
ಬೇಗಬೇಗನೆ ವರ್ಗ ನಡೆದು ಎಲ್ಲರೊಟ್ಟಿಗೆ ಬಾಳಲಿ
- ಶ್ರೀ ತುಳಸಿದಾಸ ಬಿ ಎಸ್‌
ಶಿಕ್ಷಕರು ಗೊರೇಬಾಳ ಕ್ಯಾಂಪ್, ಸಿಂಧನೂರು, ರಾಯಚೂರು (ಜಿ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸೂಸೈಡ್ ಬೇಕಾ ? (ಕವಿತೆ) - ಶ್ರೀಧರ ಗಸ್ತಿ, ಧಾರವಾಡ.

ಸೂಸೈಡ್ ಬೇಕಾ ?

ಬಾರದೇನು ಬರುವುದೇನು
ಮರಳಿ ಜೀವಗೂಡಿಗೆ
ಭಾವ ತುಂಬಿದ ಬೀಡಿಗೆ

ಅಮೂಲ್ಯ ಜೀವಕೆ ಏನಿದು ಬೇಸರ
ಮನುಜ ಬಿಡಿಸಲಾಗದ ಆಗರ
ಏಕೀ ಹರಿಶ್ಚಂದ್ರನ ಘಾಟಕೆ ಅವಸರ 

ಜನ್ಮ ತಳೆದ ಶಿಶುವೆಗೇಕೆ
ಮರಣ ಶೈಯೇಯ ಹಂದರ
ಕರುಳು ಕೇಳಿಸಲಿಲ್ಲವೇ ಆಕ್ರಂದಣದ ರೋಧನ

ಬಯಕೆ ಬವಣೆ ದೂರ ಮಾಡಿ
ದಣಿವ ದೇಹ ಕುಣಿಸಿದೆ
ಎಲ್ಲ ಇದ್ದು ಇಲ್ಲದಾಗೆ ಏಕೆ ಪಯಣ ಬೆಳೆಸಿದೆ

ಬಗೆಹರಿಯದ ಒಗಟೇನು ಅಲ್ಲ
ಈ ಬಂಧ ಬಿಡಿಸಲಾಗದ ಬಂಧ ?
ಘೋರ ಅಪಚಾರ ಆತ್ಮಹತ್ಯೆಯ ಈ ವರ್ತನೆ.

ಆತ್ಮಹತ್ಯೆ ಪರಿಹಾರವಲ್ಲ
ಬದುಕಿನ ಈ ಬಂಡಿಗೆ
ಇದ್ದು ಗೆಲ್ಲುವುದೇ ಮನುಜಮತದ ಅಭಿಮತ

✍ ಶ್ರೀಧರ ಗಸ್ತಿ ಧಾರವಾಡ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಅನುಭವಾಮೃತ ಸೇವಾಮೃತವಾದಡೆ ಇಳೆಯೊಂದು ಸ್ವರ್ಗ ಕಾಣಾ (ಪುಸ್ತಕ ವಿಮರ್ಶೆ) - ಶ್ರೀ ಕೆ. ಬಾರಾವಲಿ ಬಾವಿಹಳ್ಳಿ.

"ಅನುಭವಾಮೃತ ಸೇವಾಮೃತವಾದಡೆ ಇಳೆಯೊಂದು ಸ್ವರ್ಗ ಕಾಣಾ"
     ಒಂದು ವಿಮರ್ಶಾ ಗ್ರಂಥವನ್ನು ಮತ್ತೆ ವಿಮರ್ಶಿಸುವುದು ಎಂದರೆ ನೀರೊಳಗಿದ್ದು ಬೆವರು  ಸುರಿಸಿದಂತೆಯೇ ಸರಿ. ಅದರಲ್ಲೂ ಹಿರಿಯರು,ಕವಿಗಳು,ಲೇಖಕರು,ಉತ್ತಮ ವಿಮರ್ಶಕರು ಹಾಗೂ ಉತ್ತಮ ಸಂಘಟನಾ ಶೀಲರೂ ಆಗಿರುವ ಗೊರೂರು ಅನಂತರಾಜು ರವರು 163 ಪುಟಗಳ *"ಅನುಭವಾಮೃತ ಸೇವಾಮೃತ"* ಎಂಬುದು ಸುಮಾರು 25 ಕೃತಿಗಳ ಮೇಲೆ ಬರೆದಿರುವ ವಿಮರ್ಶಾಗ್ರಂಥ ಮತ್ತು ಈ ವಿಮರ್ಶಾಗ್ರಂಥ ಕುರಿತು ಇತರ ಲೇಖಕರು ಬರೆದ 6 ವಿಮರ್ಶಾ ಲೇಖನಗಳನ್ನು ಒಳಗೊಂಡ ವಿಶಿಷ್ಟ ವಿಮರ್ಶಾಗ್ರಂಥ.ಇದನ್ನು ವಿಮರ್ಶಿಸುತ್ತಾ ಹೋದಾಗ ಜೀವನದ ಹಲವು ಅನುಭವಗಳ ಸಾರ ಸವಿಯುವ ಅವಕಾಶ ನನಗೆ ಲಭಿಸಿದ್ದು ಸುಳ್ಳಲ್ಲ. ಈ ವಿಮರ್ಶಾಕಾರ್ಯದ ಹಾದಿಯಲ್ಲಿ ಮೊದಲಿಗೆ ಚಿಂತಕ ಎಚ್. ಗಂಗಾಧರನ್ ಅವರ ಸರ್ವಧರ್ಮ ಸಮನ್ವಯ ಸಾರುವ 'ಅನುಭವಾಮೃತ'ದ ಸಾರ ಇಂದಿನ ಜಾತಿಗಳ ಕೊಳಕಲ್ಲಿ ಬಿದ್ದು ಒದ್ದಾಡುತ್ತಿರುವ ರೋಗಗ್ರಸ್ತ ಸಮಾಜಕ್ಕೆ 'ಭಗವಾನ್ ಬಸವೇಶ್ವರರ ದಿವ್ಯ ತತ್ವಗಳು' ಮತಾಂಧತೆಯ ಅಂಧಕಾರ ಕವಿದ ಸಮಾಜಕ್ಕೆ ಬದುಕ ಹಾದಿಗೆ ಬೆಳಕನ್ನು ಚೆಲ್ಲುವಲ್ಲಿ ಯಶ ಕಂಡಿದೆ ಎನಿಸುವುದು. 

18ನೇ ಶತಮಾನದಲ್ಲಿ ಮಹಾರಾಷ್ಟ್ರದ ಅಧಿಪತಿಯಾಗಿದ್ದ ಅಹಲ್ಯಾಬಾಯಿಯ ಪತಿ ಖಂಡೇರಾವ್ ಹೋಳ್ಕರ್ ನಿಧನರಾದಾಗ ಮನೆತನದ ಸಂಪ್ರದಾಯದಂತೆ ಸಹಗಮನಕ್ಕೆ ಸ್ವಪ್ರೇರಣೆಯಿಂದಲೇ ಸಿದ್ಧವಾಗಿದ್ದ ಅಹಲ್ಯಾಬಾಯಿಯನ್ನು ಅವರ ಮಾವ ವಿನಂತಿಸಿಕೊಂಡು ಸಹಗಮನ ತಪ್ಪಿಸಿದ ಪರಿಣಾಮವಾಗಿ ಮುಂದೆ ಆ ವೀರಮಹಿಳೆ ಎನೆಲ್ಲ ಗಂಡಾಂತರಗಳನ್ನು ಎದುರಿಸಿ 30 ವರ್ಷಗಳ ಕಾಲ ಜನಮೆಚ್ಚುವ ಆಡಳಿತ ನಡೆಸಲು ಸಾಧ್ಯವಾಯಿತು. ಆಕೆಯು ತನ್ನ ಆಡಳಿತದ ಅವಧಿಯಲ್ಲಿ ನೆರೆಹೊರೆಯವರಲ್ಲಿ ಸಹಕಾರ ಶಾಂತಿಯ ಬೆಳಕನ್ನು ಬಿತ್ತಿದರು. ಆಕೆಯ ಕಾಲದಲ್ಲಿ ಯಾವ ಆಕ್ರಮಣವೂ ನಡೆಯಲಿಲ್ಲ.ರೈತರ ಅಭ್ಯುದಯಕ್ಕಾಗಿ ನೀರಾವರಿ ಯೋಜನೆಗಳನ್ನು ರೂಪಿಸಿದರು. ನಿರ್ಗತಿಕರಿಗೆ ಭೂಮಿಯನ್ನೊದಗಿಸಿ ಜೀವನೋಪಾಯ ಮಾರ್ಗ ಕಲ್ಪಿಸಿದರು. ಇದು ಇಂದು ಆಡಳಿತ ನಡೆಸುವ ಸರ್ಕಾರಗಳಿಗೆ ಮಾರ್ಗದರ್ಶಿ ಸೂತ್ರವಾದರೆ ಈ ಇಳೆಯಲ್ಲಿಯೇ ಸ್ವರ್ಗ ಕಾಣಬಹುದಲ್ಲವೇ..? ಎಂಬ ಭಾವನೆ ಬಾರದಿರದು...!

 ಅಮೇರಿಕಾದ ಎಡ್ಗರ್ ಕೈಸಿಯು ಸಮ್ಮೋಹನಶಾಸ್ತ್ರಜ್ಞ ಹಾರ್ಟ್ ರವರು ತಮಗೆ ಪರಿಚಯವಿದ್ದ ಲಯನೆ ಎಂಬುವರ ಮೂಲಕ ಒಂದು ವರ್ಷ ನಿರಂತರ ಸಮ್ಮೋಹನ ಚಿಕಿತ್ಸೆ ಮೂಲಕ ಗಂಟಲು ನಾಳದ ನರ ದೌರ್ಬಲ್ಯ ಸಂಪೂರ್ಣ ಮಾಯವಾಗಿ ಸ್ಪಷ್ಟವಾಗಿ ಮಾತನಾಡತೊಡಗಿದರು. ಈ ಅನುಭವಾಮೃತವು ಇಂದಿನ ಸಮಾಜಕ್ಕೆ ತನ್ನ ಸೇವೆ ವಿಸ್ತರಿಸಬಲ್ಲದು. ಹೀಗೆ 128 ಲೇಖನವುಳ್ಳ 814 ಪುಟಗಳ *'ಅನುಭವಾಮೃತ'* ಕೃತಿಯು *'ಸೇವಾಮೃತ'* ವಾಗಿ ಸಮಾಜಕ್ಕೆ ಸಲ್ಲುವುದು ಎಂಬುದು ವಿಮರ್ಶಕ ಗೊರೂರು ಅನಂತರಾಜು ರವರ ವಿಚಾರಧಾರೆ ಒಪ್ಪವಂತಹುದೇ ಆದರೂ ಅದನ್ನು ರುಜು ಮಾರ್ಗದ ಮೂಲಕ ಸಮಾಜಕ್ಕೆ ತಲುಪಿಸುವ ಸುವರ್ಣ ಮಾಧ್ಯಮದ ಅಗತ್ಯ ಇದ್ದೇ ಇದೆ ಎನ್ನುವುದನ್ನು ಮರೆಯುವಂತಿಲ್ಲ. ಅಣ್ಣಾಜಪ್ಪ ಗುಂಜೇವುರವರ *ಹೊಳೆನರಸೀಪುರ ತಾಲೂಕು ಇತಿಹಾಸ* ಕೃತಿಯು ಹತ್ತಾರು ವಿಷಯಗಳ ಸಂಗ್ರಹದ ಗೂಡು ಎಂದು ವಿಮರ್ಶಿಸಿರುವ ಗೊರೂರು ಅನಂತರಾಜು ರವರು ಅದು  ಅಣ್ಣಾಜಪ್ಪ ಗುಂಜೇವುರವರ ಬಹುದಿನದ ಪರಿಶ್ರಮದ ಫಲವಾಗಿ ಮೂಡಿಬಂದ ಜೇನುಗೂಡು ಎಂದು ವಿಮರ್ಶಿಸಿರುವುದು ಗೊರೂರು ಅನಂತರಾಜು ರವರೊಳಗೊಬ್ಬ ಬರಹಗಾರರಿಗೆ ಬೆನ್ನು ತಟ್ಟುವ ವಿಶಿಷ್ಟ ವಿಮರ್ಶಕನಿದ್ದಾನೆ ಎಂಬುದನ್ನು ತೋರಿಸಿಕೊಡುತ್ತದೆ,ಮಾತ್ರವಲ್ಲ ಆ ಕೃತಿಯು ಹೊಳೆನರಸೀಪುರ ತಾಲೂಕು ಪ್ರಾಗೈತಿಹಾಸ, ಮೇಲ್ಮೈ ಲಕ್ಷಣಗಳು,ಬೆಟ್ಟದ ಮೇಲಿನ ದೇವಸ್ಥಾನಗಳು, ಪಾಳೇಗಾರರು ಆಳ್ವಿಕೆ,ಹೊಯ್ಸಳ ಹೆಜ್ಜೆ ಗುರುತುಗಳು, ಜನಾಗೀಯ ಸಂಸ್ಕೃತಿ,ಸಾಹಿತ್ಯ,ಜಾನಪದ ಕಲೆ, ರಾಜಕೀಯ ಹೀಗೆ ಎಲ್ಲಾ ವಿಷಯಗಳ ಮೇಲೂ 448 ಪುಟಗಳಲ್ಲಿ 194 ಶೀರ್ಷಿಕೆಯಲ್ಲಿ ಕಿರಿದಾಗಿ ಪರಿಚಯಿಸುತ್ತಾರೆ ಎಂದು ವಿಮರ್ಶಿಸುವ ಮೂಲಕ ಓದುಗರ ಹೃದಯ ತಟ್ಟುವ ಮೂಲಕ ಓದುಗರನ್ನು ಪ್ರೇರೇಪಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮ  ಪ್ರಾದೇಶಿಕ ಇತಿಹಾಸ ಓದುವ ಮೂಲಕ ತಮ್ಮ ಹೃದಯ ಶ್ರೀಮಂತಿಕೆ ಹೆಚ್ಚಿಸಿಕೊಳ್ಳಬಹುದು ಮಾತ್ರವಲ್ಲ ತಮ್ಮ ನಾಡು ನೆಲೆಯ ಬಗ್ಗೆ ಅಭಿಮಾನ ಮೂಡಿಸಲು ಪ್ರೇರಣಾದಾಯಕವಾಗುವುದು.
ಪುಟ್ಟಣ್ಣ ಕಣಗಾಲ್ ಅವರ ಸಿನಿಮಾ ಪಯಣ ಕುರಿತಾದ ಎಸ್. ಪ್ರಕಾಶ್‌ ರವರ  *ಬೆಳ್ಳಿ ಮೋಡದ ಅಂಚಿನಿಂದ* ಕೃತಿ ಬಗ್ಗೆ ಗೊರೂರು ಅನಂತರಾಜು ರವರ ವಿಮರ್ಶೆ ಓದುಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಾ ಸಾಗುತ್ತದೆ. ಪುಟ್ಟಣ್ಣ ಕಣಗಾಲ್ ರವರು ಚಿತ್ರನಿರ್ದೇಶನಕ್ಕೆ ತೊಡಗಿಸಿಕೊಂಡಾಗ ಕ್ಯಾಮೆರಾ ಕೇವಲ ಒಂದೇ ಕೋನದಲ್ಲಿ ನಿಂತು ನಾಟಕದ ದೃಶ್ಯೀಕರಣ ಮಾಡುತ್ತಿತ್ತು. ಛಾಯಾಗ್ರಹಣವು ಚಿತ್ರಕ್ಕೆ ಚಾಲನೆ ನೀಡಬಲ್ಲದು ಎಂಬುದನ್ನು *"ಬೆಳ್ಳಿಮೋಡ"*  ಎಂಬ ತಮ್ಮ ಮೊದಲ ಚಿತ್ರದಿಂದ ಮೊದಲು ಗುರ್ತಿಸಿದವರು ಪುಟ್ಟಣ್ಣನವರು ಎಂಬ ವಾಸ್ತವವನ್ನು ಬಿಚ್ಚಿಡುವ ಮೂಲಕ ಎಚ್. ಎಸ್. ಪ್ರಕಾಶ್‌ ರವರ ಕೃತಿಯ ಮೇಲೆ ಮತ್ತಷ್ಟು ಹೊಳಪಿನ ಬೆಳಕು ಚೆಲ್ಲಿದ್ದಾರೆ.
  ಪುಟ್ಟಣ್ಣ ಕಣಗಾಲರು ಸದಾ ಪ್ರಯೋಗಶೀಲ ಪ್ರವೃತ್ತಿಯವರು. ಅವರು ಸಾಹಿತ್ಯ ಕೃತಿಗಳನ್ನು ತಮ್ಮ  ಸ್ವತಂತ್ರ  ಚಿಂತನಾಶೀಲ ಗುಣದಿಂದ ಚಲನಚಿತ್ರ ವ್ಯಾಕರಣಕ್ಕೆ ಸರಿ ಹೊಂದಿಸುತ್ತಿದ್ದರು.  ಸ್ಟುಡಿಯೋಗಳಿಗೆ ಸೀಮಿತವಾಗದೇ ಹೊರಾಂಗಣದಲ್ಲಿ ಚಿತ್ರೀಕರಣ ಮಾಡಿ, ಹೊಸ ಕಲಾವಿದರಿಂದ ಅಭಿನಯ ಮಾಡಿಸಿ,ಚಲನಚಿತ್ರಗಳಿಗೆ ಒಂದು ಹೊಸ ಮೆರಗು ನೀಡುತ್ತಿದ್ದರು. ಹಾಡುಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಿ, ಚಲನಚಿತ್ರಗಳನ್ನು ಸೂಪರ್ ಹಿಟ್ ಮಾಡುತ್ತಿದ್ದರು. ಆ ಮೂಲಕ ಕನ್ನಡ ಸಂಸ್ಕೃತಿ ಬಗ್ಗೆ ಹೆಮ್ಮೆ ಉಕ್ಕಿಸುವಂತಹ ಸನ್ನಿವೇಶಗಳನ್ನು, ಗೀತೆಗಳನ್ನು ಬಳಸಿ, ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಮೂಲಕ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ಹುಬ್ಬೇರಿಸಿ ನೋಡುವಂತೆ ಮಾಡಿದ್ದು ಕನ್ನಡ ಚಿತ್ರರಂಗದ ತಾಕತ್ತನ್ನು ಹೆಚ್ಚಿಸಿತು ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಮಾತೇ ಸರಿ.
ಕೆ. ಬಾರಾವಲಿ ಬಾವಿಹಳ್ಳಿ
(ಬಾರಾಸಾಹೇಬ ಕಲಾರಿ) 
# 590 ಮನ್ಸೂರ್ ಮಂಜಿಲ್
39ನೇ ವಾರ್ಡ್ ದಾನಮ್ಮ ಗುಡಿ ಹತ್ತಿರ, ಆನಂದನಗರ  ಹಳೇ ಹುಬ್ಬಳ್ಳಿ, ಹುಬ್ಬಳ್ಳಿ -580024.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕ್ಷಮಿಸಿ ಬಿಡು ಮನವೇ (ಕವಿತೆ) - ಎಸ್. ರಾಜುಕವಿ ಸೂಲೇನಹಳ್ಳಿ, ಕಾದಂಬರಿಕಾರರು.

  ಕ್ಷಮಿಸಿ ಬಿಡು ಮನವೇ

ವಸ್ತುಗಳು ಹಾಗೇ ಬಳಸಿಕೊಂಡವರ
ನಂಬಿಕೆಗೆ ದ್ರೋಹ ಬಗೆದವರ
ಅಗತ್ಯಕ್ಕೆ ತಕ್ಕಂತೆ ನಟಿಸುವರನ್ನ
ಪ್ರೀತಿ ಅರ್ಥ ಗೊತ್ತಿಲ್ಲದ ಮನುಜರನ್ನ

ಮಾನವೀಯ ಮೌಲ್ಯ ಮರೆತವರನ್ನ
ನೂರು ಉಪದೇಶ ಸಾರಿ ಪಾಲಿಸದವರನ್ನ
ವ್ಯಕ್ತಿತ್ವಕ್ಕೆ ಕುಂದು ತಂದವರನ್ನ
ಮೋಸದ ಅಸ್ತ್ರ ಪ್ರಯೋಗಸಿದವರನ್ನ

ಭವಿಷ್ಯದ ಕನಸಿಗೆ ಕೊಳ್ಳಿ ಇಟ್ಟವರನ್ನ
ನಿಸ್ವಾರ್ಥ ಮನಸ್ಸಿಗೆ ನೋವು ಮಾಡಿದವರನ್ನ
ಮಾರ್ಗ ಮಧ್ಯೆ ಗಾಳಿಗೆ ತೂರಿದವರನ್ನ
ಮರೆತು ಬಿಡು ಭಗವಂತ ಶಿಕ್ಷೆಯ ಕೊಟ್ಟಾನು

- ಎಸ್. ರಾಜುಕವಿ ಸೂಲೇನಹಳ್ಳಿ
ಕಾದಂಬರಿಕಾರ
ಮೊ:೯೭೪೧೫೬೬೩೧೩.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನಿಸರ್ಗದ ಮಡಿಲು ಆ ಗ್ರಾಮ (ಸಣ್ಣ ಕತೆ) - ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ.

ನಿಸರ್ಗದ ಮಡಿಲು ಆ ಗ್ರಾಮ

ಒಂದು ಚಿಕ್ಕ ಗ್ರಾಮ, ಕೇವಲ ಬೆರಳೆಣಿಕೆಯಷ್ಟು ಮನೆಗಳಿದ್ದವು.ಆದರೆ ಕಣ್ಣಿಗೆ ಹಬ್ಬ ಮತ್ತು ಸಂತೋಷವನ್ನ ನೀಡುವ ಹೊಲಗದ್ದೆಗಳಿದ್ದವು ಆ ಗ್ರಾಮದ ಸುತ್ತ ಮುತ್ತ. ಅದಕೆ ಕಾರಣ ಅವರು ರವಿ ಕಿರಣಗಳು ಧರೆಗೆ ತಲುವ ಮೊದಲೆ ತಮ್ಮ ತಮ್ಮ ಹೊಲಗದ್ದೆಗಳಲ್ಲಿ ಕಾಯಕ ನಿರತರಾಗಿರುತ್ತೀದ್ದರು.ಇಷ್ಟೆಲ್ಲಾ ಸೌಂದರ್ಯ ರಾಶಿಯಿಂದ ಸುಂದರ ಸ್ವರ್ಗಮಯವಾದ ಆ ಊರಲ್ಲಿ ನನ್ನ ನೆಮ್ಮದಿಯನ್ನ ಹಾಳು ಮಾಡಿದ ಘಟನೆಯೊಂದು ನನ್ನ ಕಣ್ಮುಂದೆ ಅಳಿಯದೆ ಉಳಿದು ಬಿಟ್ಟಿತು.ಅದೆನೆಂದರೆ ಅವರು ಗಾಢವಾಗಿ ನಂಬಿದ್ದ ಮೂಢನಂಬಿಕೆ. ಆ ಗ್ರಾಮದಲ್ಲಿ ಅನಾಚಾರದ ವಾಮಾಚಾರವು ಮೆರೆಯುತ್ತಿತ್ತು.ಭೂತ ಪ್ರೇತ ಮಾಟ ಮಂತ್ರ ತಂತ್ರಗಳು ಹೆಜ್ಜೆ ಹೆಜ್ಜೆಗೂ ಕಣ್ಮುಂದೆ ಗೋಚರಿಸುತ್ತಿದ್ದವು.ಅನೇಕ ತಂತ್ರಜ್ಞಾನಗಳ ಬಳಕೆಯ ನಡುವೆಯೂ ಇಂತಹ ನೀಚ ಪದ್ಧತಿಯು ಅಳಿಯದೆ ಉಳಿದದ್ದು ಹೇಗೆ ಅನಿಸುತ್ತಿತ್ತು ನನಗೆ.ನಾನು ಮತ್ತೆ ಮತ್ತೆ ಯೋಚಿಸಿ ಆ ಗ್ರಾಮದ ಒಬ್ಬ ಹಿರಿಯ ಅಜ್ಜಿಯ ಮನೆಗೆ ಬೇಟಿ ನೀಡಿ ವಿಚಾರಿಸಿದಾಗ ಈ ಮೂಢ ನಂಬಿಕೆ ಇನ್ನೂ ಜೀವಂತವಾಗಿ ಈ ಗ್ರಾಮದಲ್ಲಿ ಇರಲು ಕಾರಣಕರ್ತನಾದ ವ್ಯಕ್ತಿಯ ಇತಿಹಾಸ ತಿಳಿದಿತು.ತನ್ನ ಬೆಳೆ ಬೆಯಿಸಿಕೊಳ್ಳಲು ಇಡೀ ಗ್ರಾಮ ವನ್ನ ಬಲಿ ನೀಡಿದ್ದ ಪೂಜಾರಿ.ದೇವರು ಮೈಮೇಲೆ ಬಂದವರಂತೆ ನಟಿಸಿ ತಾನು ಸಾಕಿದ ಕೇಲವು ಎಂಜಲು ತಿನ್ನುವ ಮನುಷ್ಯ ನಾಯಿಗಳಿಂದ ಜನರಿಗೆ ತೊಂದರೆ ತರಿಸಿ ತನ್ನಿಂದ ಮಾತ್ರ ಪರಿಹಾರ ಎಂದು ತನ್ನ ಕೆಲಸ ಕಾರ್ಯಗಳನ್ನ ಇಡೇರಿಸಿಕೊಳ್ಳುತ್ತಿದ್ದ ವಿಚಾರವನ್ನ ನನಗೆ ತಿಳಿಸಿದ ಅಜ್ಜಿಗೆ ಧನ್ಯವಾದ ಹೇಳಿ ನಾನು ಅಲ್ಲಿಯೆ ಇರಲು ಬಯಸಿದೆ."ಅಲ್ಲೇ ಇದ್ದು ಇಂದಿನ ಮಕ್ಕಳೆ ನಾಳೆಯ  ಸುಂದರ ಸಮಾಜದ ಪ್ರಜೆಗಳು"ಅವರ ಮನ ಗೆದ್ದು ಅವರಿಗೆ ವಿದ್ಯಾದಾನ ಮಾಡಲು ಪ್ರಾರಂಭಿಸಿದೆ.ನಾನು ರೈತನಾಗಿ ನಾಟಿ ಮಾಡಿದೆ ಶಿಕ್ಷಕನಾಗಿ ಪಾಠಮಾಡಿದೆ ಒಟ್ಟಾಗಿ ಎಲ್ಲಾ ಪಾತ್ರದಲ್ಲಿ ನಾನು ಜೀವ ತುಂಬಿ ಆ ಗ್ರಾಮದಲ್ಲಿ ನನ್ನ ಪ್ರಭುತ್ವ ಸ್ಥಾಪಿಸಿದೆ.ಆ ಗ್ರಾಮದ ಪ್ರತಿಯೊಂದು ಮಗುವಿಗೂ ನಾನು ಒಳ್ಳೆಯ ಸಂಸ್ಕಾರ ನೀಡಿದ ಕಾರಣ ಪೂಜಾರಿಯ ಮೂಢ ನಂಬಿಕೆ ಮಾಯ ಆಯ್ತು ಕೆಲವೆ ಕೆಲವು ದಿನದಲ್ಲಿ ಅದಕೆ ಕಾರಣ ನನ್ನ ನೀತಿ ಕಥೆಗಳು ಮತ್ತು ಪುರಾಣ ಪ್ರವಚನಗಳು .ಒಂದು ದಿನ ನನಗೂ ಪೂಜಾರಿಗೂ ಸ್ಪರ್ಧೆ ಯು  ನಡೆದೆ ಬಿಟ್ಟಿತು ಪೂಜಾರಿ ತನ್ನ ಮೂಢ ನಂಬಿಕೆಯನ್ನ ಉಳಿಸಲು ಎಲ್ಲಾ ಕಸರತ್ತು ಮಾಡಿದ ಆದರೆ  ಕೊನೆಗೆ ಸೋತು ನನಗೆ ಶರಣಾದ ಅದಕೆ ಕಾರಣ ನನಗೆ ನನ್ನ ಗುರು ಕಲಿಸಿದ ವಿದ್ಯೆ ಮೆರೆಯಿತು ಆ ಗ್ರಾಮದಲ್ಲಿ  ವಿದ್ಯಾ ದಾನ ಶ್ರೇಷ್ಠ ದಾನ ಎಂದರೆತೆನು ನಾನು ಅದರ ಪರಿಣಾಮ ಇಂದು ಆ ಗ್ರಾಮದಲ್ಲಿ ಎರಡು ಮೂರು ವಿದ್ಯಾಕೇಂದ್ರಗಳನ್ನ ಸ್ಥಾಪಿಸಿ ಆದರ್ಶ ಗ್ರಾಮ ವನ್ನಾಗಿ ಮಾಡಿದ ತೃಪ್ತಿ ಯು ಸಹ ನನಗೆ ದೊರೆಯಿತು.ಒಳ್ಳೆಯ ವಿಚಾರ ಒಳ್ಳೆಯದನ್ನು ಮಾಡಲು ಪ್ರೇರಣೆ ಆಗುತ್ತದೆ ಎಂಬ ಆಚಾರವನ್ನು ನಾನು ನಂಬಿದೆ ಇತರರನ್ನು ನಂಬಿಸಿದೆ.ಧನ್ಯವಾದಗಳು.

- ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ.
ಸಾ!! ಭೈರಾಪೂರ
ತಾ!ಜಿ!!ಕೊಪ್ಪಳ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸ್ಪಂದನ ಸಿರಿ ಸಾಹಿತ್ಯ ವೇದಿಕೆ ಕೋಲಾರ : ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಉಪನ್ಯಾಸ ಕಾರ್ಯಕ್ರಮದ ವರದಿ.

ಸ್ಪಂದನ ಸಿರಿ ಸಾಹಿತ್ಯ ವೇದಿಕೆ ಕೋಲಾರ ಜಿಲ್ಲಾ ಘಟಕದ ಉದ್ಘಾಟನೆ.
ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವಿನೂತನವಾದ ಸಹೃದಯ ಸಂಗಮ ಬಳಗ, ಬದುಕು ಬರಹದ  ೫೧ನೇ ಮಾಲಿಕೆಯಲ್ಲಿ ದಿ-೨೬-೦೯-೨0೨೧ ರಂದು ಅಂತರ್ಜಾಲ ತಾಣ ಗೂಗಲ್ ಮೀಟ್ ನಲ್ಲಿ  ಕೋಲಾರ ಜಿಲ್ಲಾ ಘಟಕದ ಉದ್ಘಾಟನೆ, ಹಾಗೂ  ಡಿ.ವಿ.ಜಿ. ಯವರ ವಿಚಾರಧಾರೆ, ದೇಹಾಂಗ ದಾನದ ಕುರಿತ ಉಪನ್ಯಾಸ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.
 ಶ್ರೀ ರಾಜ್ ಕುಮಾರ್ ವಿ. ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಪಂದನ ಸಿರಿ ವೇದಿಕೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರು ಆದ  ಶ್ರೀಮತಿ ಕಲಾವತಿ ಮಧುಸೂದನ, ಹಾಗೂ   ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ  ಡಾ. ನಾಗಮಣಿ ಸಿ. ಎಂ. ಕೋಲಾರ ಹಾಗೂ  ಶ್ರೀಮತಿ ಶುಭಮಂಗಳ ಹಾಸನ ಇವರು ಕೋಲಾರ ಜಿಲ್ಲಾ ಘಟಕಕ್ಕೆ ಶುಭಾಶಯಗಳನ್ನು ಕೋರಿದರು.

 
ಶ್ರೀ ವರುಣ್ ರಾಜ್ ಜೀ ಇವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡುತ್ತಾ ಸ್ಪಂದನ ಸಿರಿ ಸಾಹಿತ್ಯ ವೇದಿಕೆಯು ನಡೆದು ಬಂದ  ಹಾದಿ ಹಾಗೂ ಅವರ ಸೇವಾ ಕಾರ್ಯಕ್ರಮಗಳನ್ನು ಪ್ರಶಂಸಿಸಿದಲ್ಲದೇ, ಸಾಹಿತ್ಯಕ್ಕೆ ಅನ್ಯ ಎಂಬುದು ಇಲ್ಲ ಅದೇ ಮಾದರಿಯಲ್ಲಿ ನಮ್ಮ ವೇದಿಕೆ ಸೀಮೆಗಳಿಲ್ಲದೇ ಸೇವೆಯನ್ನು ಮಾಡುತ್ತಾ ಬರುತ್ತಿದೆ. ಇದನ್ನ ಕೋಲಾರ ಜಿಲ್ಲಾ ಘಟಕದ ಪಧಾದಿಕಾರಿಗಳು ಅನುಸರಿಸಬೇಕು ಎಂದು ಆಶಯ ವ್ಯಕ್ತಪಡಿಸಿ ಶುಭಾಶಯಗಳನ್ನು ಕೋರಿದರು. ದೇಹಾಂಗದಾನದ ಕುರಿತು ಸರ್ಕಾರಿ ವೈದ್ಯಕೀಯ ಕಾಲೇಜು, ಹಾಸನದ ಶರೀರಶಾಸ್ತ್ರ ವಿಭಾಗದ ವೈಧ್ಯರಾದ  ಡಾ||ಪ್ರಕಾಶ್ ಬಿ.ಎಸ್. ಇವರು ಉಪನ್ಯಾಸ ನೀಡುತ್ತಾ ದೇಹಾಂಗದಾನದ ಮಹತ್ವ, ದೇಹಾಂಗದಾನದ ಪ್ರಕ್ರಿಯೆಗಳು, ಹಾಗೂ ಆಸ್ಪತ್ರೆ ದಾನವಾಗಿ ಪಡೆದ ಮೃತ ದೇಹವನ್ನು ವೈಧ್ಯಕೀಯ ಬಳಕೆಯ ನಂತರ ದೇಹಕ್ಕೆ  ಸೂಕ್ತ ಸಂಸ್ಕಾರಗಳನ್ನು ಒದಗಿಸಲಾಗುವುದು. ಇದರ ಕುರಿತು ಹಲವು ಅಪಕಲ್ಪನೆಗಳಿವೆ ಹಾಗೂ ಧಾರ್ಮಿಕ ಮೌಡ್ಯಗಳಿವೆ ಇದನ್ನು ಅರಿತು ಎಲ್ಲರೂ ದೇಹದಾನಕ್ಕೆ ಮುಂದಾಗಬೇಕೆಂದು ವಿವರಿಸಿದರು. ಉಪನ್ಯಾಸದ ನಂತರ ಅರ್ಥಪೂರ್ಣವಾದ ಸಂವಾದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ ಕುಮಾರ್ ವಿ ಇವರು ಕಾರ್ಯಕ್ರಮದ ಯಶಸ್ಸು ಹಾಗೂ ಎಲ್ಲರ ಸಹಕಾರಕ್ಕಾಗಿ ಧನ್ಯವಾದಗಳನ್ನು ತಿಳಿಸಿ, ಮುಂದೆಯೋ ಎಲ್ಲರ ಸಹಕಾರ ಹೀಗೆ ಇರಬೇಕೆಂದು ಆಶಯ ವ್ಯಕ್ತಪಡಿಸಿದರು.
 ಕಾರ್ಯಕ್ರಮದಲ್ಲಿ ಶ್ರೀ ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ,  ಶ್ರೀಮತಿ ಲಕ್ಷ್ಮಿ ಮೂರ್ತಿ, ಅರಕಲಗೂಡು, ಶ್ರೀಮತಿ ಸಿ ಎನ್ ಭಾಗ್ಯಲಕ್ಷ್ಮಿ ಮಂಡ್ಯ, 
ಶ್ರೀಮತಿ ಸುನಂದ ಕೃಷ್ಣ, ಗಾಯಕಿ,  ಶ್ರೀಮತಿ ಆಶಾ ಶ್ರೀಧರ್ ಶಿವಮೊಗ್ಗ, ಶ್ರೀಮತಿ ರೇಷ್ಮಾ ಆಲೂರು, ಶ್ರೀಮತಿ  ಕೆ ಕೆ ಮಮತ ಪ್ರವೀಣ್, ಮಾಲಾ ಪ್ರಸಾದ್, ಶ್ರೀಮತಿ  ಲಲಿತಾ ಕೆ ಆಚಾರ್, ಶ್ರೀಮತಿ ಲಲಿತಮ್ಮ ಆರ್, ಶ್ರೀ ಅನಸೂಸಲು ಬಾಲಕೃಷ್ಣ, ಶ್ರೀಮತಿ ಅಲಿಮಾ ಮುಂತಾದವರು ಗೀತ ಗಾಯನ, ವಚನ ಗಾಯನ‌‌ ಮುಂತಾದ ಕಾರ್ಯಕ್ರಮಗಳ ಮೂಲಕ ಕೋಲಾರ ಜಿಲ್ಲಾ ಘಟಕಕ್ಕೆ ಶುಭಾಶಯಗಳನ್ನು ಕೋರಿದರು.

ವರದಿ - ಗೌತಮ್ ಗೌಡ, ಕೀರಣಗೆರೆ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಶುಕ್ರವಾರ, ಸೆಪ್ಟೆಂಬರ್ 24, 2021

ಸನ್ಮಾರ್ಗದ ಬೇರು ಕಹಿ, ಆದರೆ ಫಲಿತಾಂಶ ಸಿಹಿ (ಲೇಖನ) - ಕೀರ್ತಿ ಬಸವರಾಜ ಖೋಳಂಬಿ.

ಸನ್ಮಾರ್ಗದ ಬೇರು ಕಹಿ, ಆದರೆ ಫಲಿತಾಂಶ ಸಿಹಿ

       ಗೆಜ್ಜೆ ಬೆಲೆ ಸಾವಿರ ಸಾವಿರ ಇದ್ದರೂ ಹಾಕೋದು ಕಾಲಿಗೆ. ಕುಂಕುಮದ ಬೆಲೆ ಪೈಸೆಯಲ್ಲಿ. ಆದರೆ ಹಚ್ಚೋದು ಹಣೆಗೆ. ಬೆಲೆ ಮುಖ್ಯ ಇಲ್ಲ ಇಲ್ಲಿ ಕೃತಿ ಮುಖ್ಯ. ಉಪ್ಪಿನಂತೆ ಕಟು ಮಾತನಾಡುವವನು ನಿಜ ಸ್ನೇಹಿತ. ಸಕ್ಕರಂತಯೇ ಸಿಹಿ ಮಾತನಾಡುವವನು ನಯವಂಚಕ . ಅದಕ್ಕೆ ಉಪ್ಪಿನಲ್ಲಿ ಹುಳು ಬಿದ್ದ ಇತಿಹಾಸವಿಲ್ಲ.ಇತಿಹಾಸದಲ್ಲಿ  ಹುಳು ಬೀಳದ  ಸಿಹಿ ಇಲ್ಲ. ಕಾಣದ ದೇವರಿಗೆ ನಾವು ಹಾಲು, ನವಿದ್ಯಾ, ಪೂಜೆ-ಪುನಸ್ಕಾರಗಳು.ಹಸಿದ ಬಡವನಿಗೆ ಒಣ ರೊಟ್ಟಿ, ಹಳಸಿದ ಅನ್ನ, ಇದು ಎಂತಹ ಮಾನವೀಯತೆ  ಹೇ ಮಾನವ, 

ಈ ಜೀವನ ಅಷ್ಟೊಂದು ಒಳ್ಳೆಯದಲ್ಲ. ಜೀವನ ಒಳ್ಳೆಯದೇ ಆಗಿದ್ದರೆ ಈ ಮನುಷ್ಯ ಅಳುತ್ತಲೇ ಈ ಜಗತ್ತಿಗೆ ಬರುತ್ತಿರಲಿಲ್ಲ. ಮತ್ತು ಹೋಗುವಾಗ ಎಲ್ಲರನ್ನು ಅಳಸಿ ಹೋಗುತ್ತಿರಲಿಲ್ಲ. ಬಾ ಎಂದರು ಸನ್ಮಾರ್ಗದಲ್ಲಿ ಬರುವುದಿಲ್ಲ. ಯಾರು ಕರೆಯದಿದ್ದರೂ ಕೆಟ್ಟ ಮಾರ್ಗದಲ್ಲಿ ಎಲ್ಲರೂ ಬರುತ್ತಾರೆ. ಅದಕ್ಕೆ ಸಾರಾಯಿ ಮಾರುವವನ ಬಳಿ ಎಲ್ಲರೂ ಹೋಗುತ್ತಾರೆ, ಆದರೆ ಹಾಲು ಮಾರುವವನು ಬೀದಿ ಬೀದಿ ಅಲೆಯುತ್ತಾನೆ. ಹಾಲು ಮಾರುವವನಿಗೆ ಕೇಳುತ್ತಾರೆ ಹಾಲಿನಲ್ಲಿ ನೀರು ಬೆರೆಸಿದೆಯಂತಾ ದುಪ್ಪಟ್ಟ ಹಣ  ಕೊಟ್ಟು  ತೆಗೆದುಕೊಳ್ಳುತ್ತೇವೆ. ಸಾರಾಯಿಗೆ ನಾವೇ ನೀರು ಬೆರಸುತ್ತೇವೆ. ಈಗಿನ ಜೀವನದಲ್ಲಿ ಎಂತಹ  ಮಾನವೀಯತೆಯನ್ನು  ನಾವು ಕಾಣುತ್ತೇವೆ. 🙏🙏☺️☺️

- ಕೀರ್ತಿ ಬಸವರಾಜ ಖೋಳಂಬಿ
 ಪತ್ರಿಕೋದ್ಯಮ ವಿದ್ಯಾರ್ಥಿನಿ
ತಾಲೂಕು: ಅಥಣಿ 
ಜಿಲ್ಲಾ: ಬೆಳಗಾವಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಡಲ ಭಾರ್ಗವ ( ಕವಿತೆ) - ಶ್ರೀ ಜಿ ಟಿ ಆರ್ ದುರ್ಗ, ಬಂಗಾರಪೇಟೆ.

ಕಡಲ ಭಾರ್ಗವ

ಸುರಿಸುರಿದು ಬರುವ ಮಳೆ ಹನಿಯು
ಕಡಲನ್ನು ಹುಡುಕುತೈತೇ..... ತೀರ
ಮುಗಿಲ ಹನಿ ಬಿದ್ದ ಕೆರೆ ಕುಂಟೆ ಹತ್ತಿರ
ಎಲ್ಲೆಲ್ಲು ಹುಡುಕಿ ಒಂದಾಗಿ ಸೇರಿ
ಬಂದಾವು ರಾಶಿ ರಾಶಿ......

ಮನವೇಕೊ ಕೇಳುತ್ತಿದೆ ಒಲವೆತ್ತಿ ತೋರಿ
ಗರಿ ಕೆದರಿ ಹೇಳುತ್ತಿದೆ ಕೂಗಿ ಕೂಗಿ
ಗಿರಿಶಿಖರದೊಳಗೆ ಚಿಗುರುತ್ತಿದೆ ಹೇಳಿ
ಒಳಗೊಳಗೆ ಹಸಿರು ಚಿಗುರಿದೆ ಕೇಳಿ

ಬರಿ ಬಾದೆಯೊಳಗೆ ಉಲುಸಾದ ಕಡಲು
ಬರಿದಾಗಲಿಲ್ಲ ತೊರೆ ತೊರೆಯ ಒಡಲು
ಆ ಮುಗಿಲನೊಮ್ಮೆ ನೋಡುತಲಿ ಬಾಗಿ
ಕೂಡಿದವು ಕರಿ ಕಪ್ಪು ಮೋಡಗಳು ಸಾಗಿ

ತಡವಾಯ್ತು ಹನಿಗಳೆ ಒಣಗುತ್ತಿದೆ ಗಂಟಲು
ಸುರಿಸುರಿದು ಬರುತ್ತೈತೆ ಹನಿಹನಿಗಳ ಸಾಲು
ಎಲ್ಲಾ ಮೌನ...ಕಾಡು ಮೇಡುಗಳ ತಾಣ
ಭೋರ್ಗರೆದು ಬರುತ್ತಿರುವ ಮಗಿಲಿನ ಬಾಣ

ತುಟಿಯ ಬಿಚ್ಚಿದರು ಹೊರಬಾರದ ಮಾತು
ಕಣ್ಮುಚ್ಚಿ ಕುಳಿತ್ತಿದ್ದ ಕಡಲ ತೀರದ ಭಾರ್ಗವ
ದೂರದ ತೀರದಲಿ ನೋಡುತ್ತ ಕುಳಿತ್ತಿರುವ
ಹನಿ ಹನಿಗಳ ಪೋಣಿಸುವ ಕಡಲ ಸತ್ಯವ
- ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗಝಲ್ - ಆಶಾ.ಎಲ್.ಎಸ್., ಶಿವಮೊಗ್ಗ.

ಗಝಲ್

ನಿನ್ನ ದನಿಯ ಮೋಡಿಗೆ ಸಿಲುಕಿರುವೆ ಗೆಳೆಯಾ/
ನಿನ್ನ ಮಧುರದನಿಗೇ ಕರಗಿ ಸೋತು ಹೋಗಿರುವೆ ಗೆಳೆಯಾ//

ನೀ ಯಾರೋ ಸಖ ಎಲ್ಲಿದ್ದೆ ಇಲ್ಲಿತನಕ / 
 ಹೃದಯಗುಡಿಯಲಿ ನೆಲೆಸಿ ಮೋಡಿ ಮಾಡಿರುವೆ ಗೆಳೆಯಾ//

ನಿನ್ನ ಸ್ವರ ಆಲಿಸಲು ದಿನವು  ಕಾತರಿಸುವೆನು /
ಸೋಲದ ಮನವಿಂದು ಏಕೋ ಕಾಡುತಿವೆ ಗೆಳೆಯ//

ಜನ್ಮಜನ್ಮದ ಬಾಂಧವ್ಯದ ನಲ್ಮೆಯ ಭರವಸೆಯಿತ್ತವನು/
ಜೀವನದಲಿ ಹೊಸ ಬೆಳಕ ತಂದಿರುವೆ ಗೆಳೆಯಾ//

ಪ್ರೀತಿ ಸ್ನೇಹ ಅನುಬಂಧದ  ಸಂಕೋಲೆ ತೊಡಿಸಿರುವೆ/
ಬಾಳಿನಲಿ ನವ ಕಾಂತಿ ಮೂಡಿಸಿರುವೆ ಗೆಳೆಯ//

ನನ್ನೆದೆಯ ಬೇಗುದಿಗಳ ಕಳೆಯುತ ನಾನಿರುವೆ ಎಂದವನೇ/
ಒಲ್ಮೆಗೆ ಆದೈವವಿತ್ತ ಕೊಡುಗೆ ನೀನಾಗಿರುವೆ ಗೆಳೆಯ//

ಶ್ರೀಶಾಳ ಅಂತರಾಳದಲಿ ನಿನ್ನ  ಹೆಸರೇ ಮಿಡಿಯುತಿರುವುದು/
ಬಾಳಿನ ದಿವ್ಯ ಸ್ಪಂದನವು ನೀನಾಗಿರುವೆ ಗೆಳೆಯಾ//

✍️ ಆಶಾ.ಎಲ್.ಎಸ್., ಶಿವಮೊಗ್ಗ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಸಾರ್ವಜನಿಕ ಸೇವೆಯ ಮಹತ್ವ ತಿಳಿಸುತ್ತಿರುವ ( ಲೇಖನ) - ರಾಷ್ಟ್ರೀಯ ಸೇವಾ ಯೋಜನೆ (ಲೇಖನ) - ಶಿವನಗೌಡ ಪೊಲೀಸ್ ಪಾಟೀಲ ಉಪನ್ಯಾಸಕರು.

ವಿದ್ಯಾರ್ಥಿಗಳಲ್ಲಿ  ವ್ಯಕ್ತಿತ್ವ ವಿಕಸನ ಮತ್ತು ಸಾರ್ವಜನಿಕ ಸೇವೆಯ ಮಹತ್ವ ತಿಳಿಸುತ್ತಿರುವ -ರಾಷ್ಟ್ರೀಯ ಸೇವಾ ಯೋಜನೆ

NSS ನ 51 ಮಹೋತ್ಸವ ರಾಷ್ಟ್ರೀಯ ಸೇವಾ ಯೋಜನೆ:

ರಾಷ್ಟ್ರೀಯ ಸೇವಾ ಯೋಜನೆ (National Service Scheme) ಎನ್ನುವುದು ಭಾರತ ಸರ್ಕಾರದಿಂದ ಪ್ರಾಯೋಜಿತವಾದ ಸಾರ್ವಜನಿಕ ಸೇವಾ ಸಂಸ್ಥೆ. ಇದನ್ನು ನಡೆಸುವವರು ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ (Department of Youth Affairs and Sports). ಗಾಂಧೀಜಿಯವರ ಶತವರ್ಷವಾದ 1969ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಈ ಸಂಸ್ಥೆಯ ಮುಖ್ಯ ಉದ್ದೇಶವು ಭಾರತೀಯ ವಿದ್ಯಾರ್ಥಿಗಳ ವ್ಯಕ್ತಿತ್ವ್ಸವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದಾಗಿದೆ. ಈ ಸ್ವಯಂಪ್ರೇರಿತ ಸಂಸ್ಥೆಯ ಮೂಲ ತತ್ವವು ವಿದ್ಯಾರ್ಥಿಗಳಿಗೆ ಲೋಕಸೇವೆಯ ಮೂಲಕ ರಾಷ್ತ್ರನಿರ್ಮಾಣದ ಕಾರ್ಯಗಳಲ್ಲಿ ಒಳಗೊಂದಂತಹ ಅನುಭವವನ್ನು ನೀಡುವುದು, ಹಾಗೂ ಇದರೊಂದಿಗೆ ರಾಷ್ಟ್ರಪ್ರೇಮ ಮತ್ತು ಸೇವಾ ಭಾವನೆಗಳನ್ನು ಬೆಳೆಸುವುದಾಗಿದೆ.

ಈ ಸಂಘಟನೆಯನ್ನು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ಬಗೆಯಲ್ಲಿ ತಿಳಿಯಲು ಇರುವು ಒಂದು ಸರಕಾರದ ಯೋಜನೆ. ಗಾಂಧೀಜಿ ಯವರ ಸರ್ವೋದಯ ತತ್ವದ ನೆಲೆಯಲ್ಲಿ ಯೋಚನೆ ಮಾಡುವಾಗ, ಇಂತಹ ಒಂದು ವಿಚಾವರನ್ನು ಅನುಷ್ಠಾನಕ್ಕೆ ತಂದರು. ಹೀಗೆ ಎನ್.ಎಸ್.ಎಸ್. ಎಂಬ ಪರಿಕಲ್ಪನೆ ಬಂತು. ಮೊದಲು ಪದವಿ ಕಾಲೇಜುಗಳಲ್ಲಿ ಮತ್ತು ಸ್ನಾತಕೋತ್ತರ ಕೇಂದ್ರಗಳಲ್ಲಿ ಇದ್ದ ಎನ್.ಎಸ್.ಎಸ್.ನಂತರ ಪಿ.ಯು.ಸಿ ವಿಭಾಗದ ವಿದ್ಯಾರ್ಥಿಗಳಿಗೂ ವಿಸ್ತರಣೆಯಾಯಿತು

ಎನ್. ಎಸ್. ಎಸ್. ಧ್ಯೇಯವಾಕ್ಯ - ನನಗಲ್ಲ, ನಿನಗೆ - Not me, but you ಆಗಿದೆ.

ಪ್ರಜಾಪ್ರಭುತ್ವದೇಶದಲ್ಲಿ ಬದುಕುನ ಹಾಗೇನೆ ನಿಸ್ವಾರ್ಥ ಸೇವೆಯಲ್ಲಿ ಮತ್ತು ಬೇರೆ ವ್ಯಕ್ತಿಗಳೊಂದಿಗೆ ಮೆಚ್ಚಿಕೆಯಾಗಿ ಗುರುತಿಸಿಕೊಂಡು ಮಾನವೀಯತೆಯನ್ನು ಎತ್ತಿ ತೋರಿಸುವ ಅಗತ್ಯವನ್ನು ಎನ್.ಎಸ್.ಎಸ್. ದ್ಯೇಯ ವಾಕ್ಯ ಪ್ರತಿಬಿಂಬಿಸುತ್ತದೆ.


ಬಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಮೇಲೆ ಯು.ಜಿ.ಸಿ.(University Grants Commission) ಸರ್ವೆಪಲ್ಲಿ ರಾಧಾಕೃಷ್ಣನ್ರನ್ನು ಅಧ್ಯಕ್ಷರನ್ನಾಗಿ ಮಾಡಿ ಶಿಕ್ಷಣಸಂಸ್ಥೆಗಳಲ್ಲಿ ಸ್ವಯಂಸೇವಕರನ್ನು ರಾಷ್ಟ್ರದ ಸೇವೆಗಾಗಿ ತಯಾರು ಮಾಡಬೇಕುಂದು ಹೇಳುವ ಒಂದು ಪ್ರಸ್ತಾವನೆಯನ್ನು ಸರಕಾರದ ಮುಂದಿಟ್ಟರು.ಈ ಆಲೋಚನೆಯನ್ನು ಜನವರಿ 1950ನೆಯ ಇಸವಿಯಲ್ಲಿ ಸೆಂಟ್ರಲ್ ಅಡ್ವೈಸರಿ ಬೋರ್ಡ್ ಆಫ್ ಎಡ್ಯುಕೇಶನ್(CABE)ಸಭೆಯಲ್ಲಿ ಮತ್ತೊಮ್ಮೆ ಪ್ರಸ್ತಾಪ ಮಾಡದರು. ಈ ನೆಲೆಯಲ್ಲಿ ಉಂಟಾದ ಆಲೋಚನೆಯನ್ನು ಪರೀಕ್ಷೆ ಮಾಡಿ, ದೇಶದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದೇಶ ಭಕ್ತಿಯಲ್ಲಿ ಸ್ವಯಂ ಸೇವಕರಾಗಿ ಸ್ವಸಹಾಯದೊಂದಿಗೆ ಕೆಲಸ ಮಡಬೇಕೆಂದು ತೀರ್ಮಾನ ಆಯಿತು. 

ಇದನ್ನು ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ 1952ರಲ್ಲಿ ಸರಕಾರ ಬಳಕೆಗೆ ತಂದರು. ಸೇವಾ ಮನೋಭಾವದ ಅಗತ್ಯದಲ್ಲಿ ಸಮಾಜ ಮತ್ತು ಸಾಮಾನ್ಯರ ಸೇವೆಯ ನೆಲೆಯಲ್ಲಿ ಭಾರತದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಒಂದು ವರ್ಷ ಸ್ವಯಂ ಸೇವಕರಾಗಿರಬೇಕೆಂಬ ಒತ್ತಡ ತಂದರು.

1958ರಲ್ಲಿ  ಅವರು ಸಮಾಜ ಸೇವೆ ಎಂದು ಕರೆಸಿಕೊಳ್ಳುವ ಆಲೋಚನೆಯನ್ನು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮೊದಲು ಆರಂಭಿಸಬೇಕೆಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಶಿಕ್ಷಣ ಇಲಾಖೆಯ ಮಾರ್ಗದರ್ಶನದಲ್ಲಿ ಇದೊಂದು ಸಕ್ರೀಯ ಯೋಜನೆಯಾಗಿ ಸಂಸ್ಥೆಗಳಲ್ಲಿ ರಾಷ್ಟ್ರೀಯ ಸೇವೆಯೆಂದು ಶೈಕ್ಷಣಿಕ ಅಗತ್ಯ ಪಡೆದ ಯೋಜನೆ ರೂಪುಗೊಂಡಿತು.1952ರಲ್ಲಿ ಇದೊಂದು ಯೋಜನೆ ಆಗಿ ರಚನೆ ಆಯಿತು. ಈ ಯೋಜನೆ ಕಾಲೇಜುಗಳಲ್ಲಿ ಆರಂಭಿಸುವ ಮೊದಲು ರಾಜ್ಯಗಳ ಶಿಕ್ಷಣ ಮಂತ್ರಿಗಳಿಗೆ ಒಂದು ಕಾರ್ಯಾಗಾರವನ್ನು ನಡೆಸಲಾಯಿತು. ಈ ಕಾರ್ಯಾಗಾರದಲ್ಲಿ ಒಪ್ಪಿಗೆ ಪಡೆದುಕೊಂಡು ಯೋಜನೆಯು ರಾಷ್ಟ್ರೀಯ ಸೇವೆಗಾಗಿ ಕೂಡಲೇ ಆರಂಭ ಆಗಬೇಕು. ಹಾಗೆ ಇದಕ್ಕಾಗಿ ಒಂದು ಕಮಿಟಿ ರಚನೆ ಮಾಡಬೇಕು. ಇದನ್ನು ಕೂಡಲೇ ಚಾಲನೆಗೆ ತರಬೇಕೆಂದು ಸರ್ವಾನುಮತದ ಅನುಮೋದನೆ ಮಾಡಿದರು. ಹೀಗೆ ಸಿ.ಡಿ.ದೇಶ್‍ಮುಖ ಇವರ ಅಧ‍್ಯಕ್ಷತೆಯಲ್ಲಿ ಆಗಸ್ಟ್ 28, 1959ರಲ್ಲಿ ರಾಷ್ಟ್ರೀಯ ಸೇವೆಯ ಕಮಿಟಿಯನ್ನು ಮಾಡಬೇಕೆಂದು ಸಲಹೆ ಕೊಟ್ಟರು. ಈ ಸಮಿತಿ ಒಂಬತ್ತು ತಿಂಗಳು ಅಥವಾ ಒಂದು ವರ್ಷಕ್ಕೆ ರಾಷ್ಟ್ರೀಯ ಸೇವೆಯನ್ನು ಪರಿಚಯ ಮಾಡಬೆಕೆಂದು ಶಿಫಾರಸ್ ಮಾಡಿತು. ಹಾಗೆ ಶಿಫಾರಸ್ ಯಾಕೆಂದರೆ ಇದರ ಅನುಷ್ಠಾನದಲ್ಲಿ ಆ ವರ್ಷದ ಆರ್ಥಿಕ ಪರಿಣಾಮಗಳು ಮತ್ತು ತೊಂದರೆಗಳನ್ನು ಸ್ವೀಕರಿಸುತ್ತಿದ್ದರು.

1960ನೆ ಇಸವಿಯಲ್ಲಿ ಬೇರೆ ದೇಶದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವೆ ಹೇಗೆ ಜಾರಿ ಆಗಿದೆ ಎನ್ನುವ ಅಧ್ಯಯನಕ್ಕೆ ಸರ್ಕಾರ ಕೆ.ಜಿ.ಸೈಯ್ಯಿದೈನ್‍ ಎಂಬರನ್ನು ನೇಮಕ ಮಾಡಿತು. ಇವರು ಅಧ್ಯಯನ ಮಾಡಿ ಯುವ ರಾಷ್ಟ್ರೀಯ ಸೇವೆ ಹೇಳುವ ನೆಲೆಯಲ್ಲಿ ಭಾರತದ ವಿದ್ಯಾರ್ಥಿಗಳ ಸಾಮಾಜಿಕ ಸೇವೆಯನ್ನು ಒಂದು ಅಭಿವೃದ್ಧಿ ಕಾರ್ಯಸಾಧ್ಯ ಯೋಜನೆಯೆಂದು ತೆಗೆದುಕೊಂಡು ಸರಕಾರಕ್ಕೆ ವರದಿ ಸಲ್ಲಿಸಿದರು.

ಸಂಸ್ಥೆಗಳು:
ಡಿ.ಎಸ್.ಕೊಠಾರಿ ಇವರ ನೇತೃತ್ವದಲ್ಲಿ ೧೯೬೪-೧೯೬೬ರಲ್ಲಿ ಶಿಕ್ಷಣದ ಪ್ರತಿ ಹಂತದಲ್ಲಿ ವಿದ್ಯಾರ್ಥಿಗಳು ಸಮಾಜ ಸೇವೆಯನ್ನು ಸಂಘಟಿತವಾಗಿ ಮಾಡಬಹುದೆಂದು ಶಿಕ್ಷಣ ಆಯೋಗಕ್ಕೆ ಶಿಫಾರಸ್ ಮಾಡಿದರು. ಈ ಅಭಿಪ್ರಾಯವನ್ನು ಏಪ್ರಿಲ್ 1967ನೆಯ ಸಮಾವೇಶದ ಸಂದರ್ಭದಲ್ಲಿ ರಾಜ್ಯದ ಶಿಕ್ಷಣ ಸಚಿವರು ಗಮನಕ್ಕೆ ತೆಗೆದುಕೊಂಡರು. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್(ಎನ್.ಸಿ.ಸಿ.) (ಇದೊಂದು ಸ್ವಯಂಪ್ರೇರಿತ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಸಂಘಟನೆ) ಅಲ್ಲದೆ ಹೊಸ ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್.ಎಸ್.) ಸೇರಬೇಕೆಂದು ಶಿಫಾರಸು ಮಾಡಿದರು.

ಸೆಪ್ಟೆಂಬರ್ 1969ರಂದು ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಅಧಿವೇಶನದ ಒಂದು ವಿಶೇಷ ಸಮಿತಿಯಲ್ಲಿ ಈ ಶಫಾರಸುಗಳನ್ನು ಪರೀಕ್ಷಿಸಲು ಸಲಹೆ ಮಾಡಿ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ರಾಷ್ಟ್ರೀಯ ಸೇವೆ ಶಿಕ್ಷಣದ ಒಂದು ಅವಿಬಾಜ್ಯ ಅಂಗ ಆಗಿರಬೇಕೆಂದು ಅವರ ಅನುಭವವನ್ನು ಹೇಳಿದರು.

ಎನ್.ಎಸ್.ಎಸ್. ಎಂದರೆ ‘ನಾನು ಸದಾ ಸಿದ್ಧ’ ಅಥವಾ ‘ನಾನು ಶಿಸ್ತಿನ ಸಿಪಾಯಿ’ ಎಂದು ಅರ್ಥೈಸಬಹುದು. ‘ಎನ್.ಎಸ್.ಎಸ್.ನವರು ದೇಶ ಕಟ್ಟುತ್ತಾರೆ’. ‘ಎನ್.ಸಿ.ಸಿ.ಯವರು ದೇಶವನ್ನು ರಕ್ಷಿಸುತ್ತಾರೆ. ಎನ್.ಎಸ್.ಎಸ್.ನವರದದು ‘ಕಟ್ಟುವ ಮತ್ತು ಮೆತ್ತುವ ಕೆಲಸ’. ಇದರಿಂದ ಶ್ರಮದ ಮಹತ್ವ [Dignity of Labor] ವಿದ್ಯಾರ್ಥಿಗಳಿಗೆ ತಿಳಿಯುತ್ತದೆ.

ಎನ್.ಎಸ್.ಎಸ್. ಚಿಹ್ನೆ ಮತ್ತು ಘೋಷವಾಕ್ಯ:

ರಾಷ್ಟ್ರೀಯ ಸೇವಾ ಯೋಜನೆಯ ಚಿಹ್ನೆ ಚಕ್ರದ ಗುರುತು ಚಕ್ರ ಯಾವತ್ತೂ ಚಲನಶೀಲವಾಗಿದ್ದು ಚಲಿಸುತ್ತಾ ಬೆಳವಣಿಗೆ ಹೊಂದುವುದನ್ನು ತಿಳಿಸುತ್ತದೆ. ಈ ಚಲನಶೀಲತೆ ವಿದ್ಯಾರ್ಥಿ ಬದುಕಿನಲ್ಲೂ ಕಾಣಬೇಕೆಂಬುದು ಇದರ ಉದ್ದೇಶ. ಒಡಿಶಾ ರಾಜ್ಯದ ಕೊನಾರ್ಕ್ ಸೂರ್ಯ ದೇವಾಲಯದ ರಥದ ಚಕ್ರವನ್ನು ಆಧಾರವಾಗಿರಿಸಿ ಎನ್.ಎಸ್.ಎಸ್. ಚಿಹ್ನೆಯನ್ನು ನಿರ್ಮಿಸಲಾಗಿದೆ.ರಥದ ಚಕ್ರದಲ್ಲಿ 8 ಅಡ್ಡಪಟ್ಟಿಗಳಿದ್ದು, ಪ್ರತಿಯೊಂದು ಕಾಲದ ಸಂಕೇತವಾಗಿದ್ದು, 3 ಗಂಟೆಗಳ ಒಂದೊಂದು ಹಂತವನ್ನು ತಿಳಿಸುತ್ತದೆ. ಸ್ವಯಂ ಸೇವಕ 24 ಗಂಟೆಗಳೂ ಸೇವೆಗೆ ಲಭ್ಯನಿದ್ದಾನೆ ಎಂದು ತಿಳಿಸುತ್ತದೆ. ಚಿಹ್ನೆಯಲ್ಲಿ ಕೆಂಪು-ಬಿಳಿ-ನೀಳಿ ಬಣ್ಣಗಳಿವೆ. ಕೆಂಪು ಬಣ್ಣವು ಉತ್ಸಾಹ ಮತ್ತು ತ್ಯಾಗವನ್ನು, ಬಿಳಿ ಬಣ್ಣವು ಶಾಂತಿ ಮತ್ತು ಸಹಬಾಳ್ವೆಯನ್ನು, ಅಕಾಶ ನೀಲಿ ಬಣ್ಣವು ಸಮೃದ್ಧಿ ಮತ್ತು ಮನುಷ್ಯನ ಅಭಿವೃದ್ಧಿಯನ್ನು ಧ್ವನಿಸುತ್ತದೆ.

ರಾಷ್ಟ್ರೀಯ ಸೇವಾ ಯೋಜನೆಯ ಉದೇಶ;;
1.ಪರಿಸರ ಸಂರಕ್ಷಣೆ
2ಆರೋಗ್ಯ ಜಾಗೃತಿ.
3.ಶ್ರಮದಾನ
4.ಪ್ರಗತಿಪರ ಚಿಂತನೆ
5.ಪ್ರಾಕೃತಿಕ ವಿಕೋಪ ಮತ್ತು ಪ್ರಕೃತಿ ಸಂರಕ್ಷಣೆ
6.ಶೈಕ್ಷಣಿಕಮತ್ತು ಸಾಂಸ್ಕೃತಿಕ ಚಟುವಟಿಕೆಗಳು
7.ಮಕ್ಕಳು ಮತ್ತು ಮಹಿಳಾ ಜಾಗೃತಿ
8.ಪ್ರಾಚ್ಯವಸ್ತುಗಳ ಸಂರಕ್ಷಣೆ
9.ರಾಷ್ಟ್ರೀಯ ಜಾಗೃತಿ ಮೂಡಿಸುವುದು

ಎನ್.ಎಸ್.ಎಸ್.ಗೆ ಸೇರಿದವರಿಗೆ ಸೇರುವ ಮೊದಲು ಉಂಟಾಗುವ ಪ್ರಶ್ನೆಯಿದು. ಸಮಾಜ ಸೇವೆಯಿಂದ ನಮಗೇನು ಲಾಭವೆಂದು ಅದರಲ್ಲಿ ತೊಡಗಿದ ಮೇಲೆ ಗೊತ್ತಾಗುವುದು. ತೊಡಗಿಕೊಂಡವರಿಗಾಗುವ ಲಾಭಗಳು ಹೀಗಿವೆ;

ಶಿಸ್ತು - Discipline
ಸಮಯ - Timing Sense
ಸಹಬಾಳ್ವೆ/ಸಹಭೋಜನ/ಹೊಂದಾಣಿಕೆ - Living Together
ಶ್ರಮದ ಮಹತ್ವ – Dignity of labor
ಪರಿಣಾಮಕಾರಿ ಭಾಷಣ ಕಲೆ - Effective public Specking
ಸಭಾ ಕಂಪನ ನಿವಾರಣೆ - Stage Fear
ಪ್ರತಿಭಾ ಪ್ರದರ್ಶನ/ಪ್ರತಿಭಾ ಕಾರಂಜಿ - Talent Show
ವ್ಯಕ್ತಿತ್ವ ವಿಕಸನ - Personality development
ಆತ್ಮ ವಿಶ್ವಾಸ/ಮಾನಸಿಕ ಸ್ಥೈರ್ಯ - Self Confidence
ರಾಷ್ಟ್ರೀಯ ಭಾವೈಕ್ಯ/ರಾಷ್ಟ್ರಭಕ್ತಿ – National Integration
ಜೀವನ ಪ್ರೀತಿ/ಜೀವನ ಶೈಲಿ - Life Style

ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳಲ್ಲಿ ಎರಡು ವಿಧ.
1.ದೈನಂದಿನ ಶಿಬಿರ
2.ವಿಶೇಷ ಶಿಬಿರ

ದೈನಂದಿನ ಶಿಬಿರ - Regular Activities:
20 ಗಂಟೆಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಬಗೆಗೆ ಪ್ರ-ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನ ನೀಡಬಹುದು.20 ಗಂಟೆ ಸಸಿ ನೆಡುವುದು, ಸಾರ್ವಜನಿಕ ಅರಣ್ಯ, ಕಾಲೇಜು ಪರಿಸರ ಸ್ವಚ್ಛತೆ ಮಾಡುವ ಕಾರ್ಯಕ್ರಮ ನಡೆಸುವುದು.
ದತ್ತು ಗ್ರಾಮವೊಂದನ್ನು ಆಯ್ದುಕೊಂಡು ದತ್ತುಗ್ರಾಮದಲ್ಲಿ ಸಾಕ್ಷರತೆ, ಸಂಪೂರ್ಣ ಸ್ವಚ್ಛತಾ ಆಂದೋಲನ, ವೈದ್ಯಕೀಯ ಶಿಬಿರ, ಏಡ್ಸ್ ಜಾಗೃತಿ ಶಿಬಿರ, ಪ್ಲಾಸ್ಟಿಕ್ ಜಾಗೃತಿ ಶಿಬಿರ, ಅಂತರ್ ಜಲ ಸಂರಕ್ಷಣೆ, ಭೂ ಸವಕಳಿ ತಡೆಗಟ್ಟುವುದು, ಚೆಕ್ ಡ್ಯಾಮ್ ನಿರ್ಮಾಣ, ವಿವಿಧ ಜಾಗೃತಿ ಕುರಿತಂತೆ ಬೀದಿ ನಾಟಕ ಇತ್ಯಾದಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
20 ಗಂಟೆಗಳಲ್ಲಿ ರಾಷ್ಟ್ರೀಯ ಹಬ್ಬ, ದಿನಾಚರಣೆ, ಉತ್ಷವ, ಜಯಂತಿಗಳನ್ನು ಆಚರಿಸುವುದು. ಉದಾ: ಸ್ವಾತಂತ್ರ್ಯ ದಿನಾಚರಣೆ, ಗಾಂಧಿಜಯಂತಿ, ಗಣರಾಜ್ಯೋತ್ಸವ, ಕೋಮುಸೌಹಾರ್ಧತಾ ದಿನ, ಏಡ್ಸ್ ಜಾಗೃತಿ ದಿನ, ಶಿಕ್ಷಕರ ದಿನ, ಬೀಚ್ ಸ್ವಚ್ಛತೆ ದಿನ ಇತ್ಯಾದಿ.12 ಗಂಟೆಗಳಲ್ಲಿ ಕಾಲೇಜಿನಲ್ಲಿ ರಕ್ತದಾನ, ಮಲೇರಿಯಾ ಜಾಗೃತಿ, ರಾಜೀವ ಗಾಂಧಿ ಊರ್ಜಾ ದಿವಸ, ಎನರ್ಜಿ ಕ್ಲಬ್, ಎರೆಗೊಬ್ಬರ ತಯಾರಿ, ಸಾವಯವ ಕೃಷಿ, ಸ್ವದೇಶಿ ಚಿಂತನೆ, ವಯಸ್ಕರ ಶಿಕ್ಷಣ, ಸ್ತ್ರೀ ಸಬಲೀಕರಣ, ಹದಿಹರೆಯದ ಸಮಸ್ಯೆಗಳು, ಜೀವನ ಶೈಲಿ ಇತ್ಯಾದಿ ಹಲವಾರು ಕಾರ್ಯಕ್ರಮಗಳನ್ನು ನಡೆಸುವುದು.

ವಿಶೇಷ ಶಿಬಿರ - Special Activities:
ಹತ್ತು ದಿನಗಳ ವಾರ್ಷಿಕ ವಿಶೇಷ ಶಿಬಿರವು ರಾಷ್ಟ್ರೀಯ ಸೇವಾ ಯೋಜನೆಯ ಇನ್ನೊಂದು ಪ್ರಮುಖ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಪ್ರತಿಯೊಂದು ಕಡ್ಡಾಯವಾಗಿ ಹಮ್ಮಿಕೊಳ್ಳುವುದು. ಶಿಬಿರವನ್ನು ನಿಗದಿತ ರಜಾ ದಿನಗಳಲ್ಲಿ ಯಾವುದಾದರೂ ಒಂದು ಹಳ್ಳಿಯಲ್ಲಿ ಸಕಲ ತಯಾರಿಯೊಂದಿಗೆ ಆಯೋಜಿಸಬೇಕು. ಶಿಬಿರವನ್ನು ದತ್ತು ಗ್ರಾಮದಲ್ಲೇ ಹಮ್ಮಿಕೊಳ್ಳುವುದು ಅಪೇಕ್ಷಣೀಯ. ಒಂದೇ ಸ್ಥಳದಲ್ಲಿ ಹಲವು ವರ್ಷಗಳ ಕಾಲ ಶಿಬಿರ ಹಮ್ಮಿಕೊಂಡು ಶಾಶ್ವತ ಯೋಜನೆಯನ್ನು ನಿರ್ದಿಷ್ಟವಾಗಿ ಮುಗಿಸುವುದು. ವಾರ್ಷಿಕ ವಿಶೇಷ ಶಿಬಿರದಲ್ಲಿ ಒಂದು ಘಟಕದಿಂದ 50 ವಿದ್ಯಾರ್ಥಿ ಸ್ವಯಂ ಸೇವಕರನ್ನು ಆಯ್ಕೆ ಮಾಡಿ ಶಿಬಿರದಲ್ಲಿ ಪಾಲ್ಗೊಲ್ಲುವಂತೆ ಮಾಡುವುದು.

ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕನ ಕರ್ತವ್ಯಗಳು:

# ಸ್ವಯಂ ಸೇವಕನು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಉತ್ತಮ ಅಭಿಪ್ರಾಯವನ್ನು ಜನರಲ್ಲಿ ಬಿಂಬಿಸುವುದು.
ಸಮುದಾಯದ ಆವಶ್ಯಕತೆಗಳು, ಸಮಸ್ಯೆಗಳು ಮತ್ತು ಸಂಪನ್ಮೂಲಗಳನ್ನು ಗುರುತಿಸುವುದು.
# ತಾನು ಕಲಿತ ಅನುಭವದ ಸಹಾಯದಿಂದ ಸಮುದಾಯದ ಆವಶ್ಯಕತೆಗಳಿಗೆ ಸ್ಪಂದಿಸುವುದು.
# ಪ್ರತಿಯೊಂದು ಕಾರ್ಯಕ್ರಮವನ್ನು ಡೈರಿ ಪುಸ್ತಕದಲ್ಲಿ ವ್ಯವಸ್ಥಿತವಾಗಿ ಬರೆದು ಕಾಲಕಾಲಕ್ಕೆ ಆದ ಬೆಳವಣಿಗೆಗಳನ್ನು ಗಮನಿಸುವುದು.
# ವರ್ಷಕ್ಕೊಮ್ಮೆ ರಕ್ತದಾನ ಮಾಡುವುದು. (ಆರೋಗ್ಯವಂತ ಪುರುಷರು ಪ್ರತೀ ಮೂರು ತಿಂಗಳಿಗೊಮ್ಮೆ ಮತ್ತು ಸ್ತ್ರೀಯರು ಪ್ರತೀ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು)ಯೋಜನಾಧಿಕಾರಿ ಅಥವಾ ತಂಡದ ನಾಯಕನ ಅಡಿಯಲ್ಲಿ ಅವರ ಮಾರ್ಗದರ್ಶನದಂತೆ ಕೆಲಸ ಮಾಡುವುದು.
# ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಮತ್ತು ಕೆಲಸಕಾರ್ಯಗಳನ್ನು ಸ್ವತಃ ನಿರ್ವಹಿಸುವುದು.

 24 ಗಂಟೆಗಳೂ ಸೇವೆಗೆ ಲಭ್ಯರಾಗಿರುವುದು.
ರಾಷ್ಟ್ರೀಯ ಸೇವಾ ಯೋಜನೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರೀಯವಾಗಿ ಪಾಲ್ಗೊಳ್ಳುವುದು.
# ಶಿಸ್ತು, ಸಮಯ ಪಾಲನೆ, ಸಹಬಾಳ್ವೆ, ಶ್ರಮದಾನ ಇತ್ಯಾದಿಗಳನ್ನು ಚಾಚೂ ತಪ್ಪದೆ ಪಾಲಿಸುವುದು.
# ಕೆಲಸ ಮಾಡುವಾಗ ಕಡ್ಡಾಯವಾಗಿ ರಾಷ್ಟ್ರೀಯ ಸೇವಾ ಯೋಜನೆಯ ಬ್ಯಾಡ್ಜನ್ನು ಧರಿಸುವುದು.
# ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ತನ್ನ ಸ್ನೇಹಿತರನ್ನು ಪ್ರೇರೇಪಿಸುವು.
- ಶಿವನಗೌಡ ಪೊಲೀಸ್ ಪಾಟೀಲ
ಉಪನ್ಯಾಸಕರು
ಹವ್ಯಾಸಿ ಬರಹಗಾರರು ಕೊಪ್ಪಳ
9845646370.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕೈ ತುಂಬ ಹೂ (ಕವಿತೆ) - ವೆಂಕಟೇಶ್ ಬಡಿಗೇರ್ ಕಮಲಾಪುರ - ಹಂಪಿ.


 ಕೈತುಂಬ ಹೂ

ಹಳೆಯ ನಾನು ಗೆಳೆಯ ನೀನು
ಹಂಪೆಯ ಕುವರರು ನಾವು
ಗುರುಸಿದ್ಧರ ಸಮಾಗಮ
ಹಂಪೆಯ ವೆಂಕ. ಭಾಷಾ
  ಸಿದ್ದು ಅರುಣಾ ಬಸಪ್ಪ
ಇರುತಿರಲು  ನೆಮ್ಮದಿಗಿಲ್ಲ ಸುಂಕ.

ಮೈಕೊಡವಿ ನಿಂತೈತಿ ಗೂಳಿಯಂತೆ
ರಾಯರ ಒಲುಮೆಯ ಪ್ರೀತಿಯ ಗೂಳಿ
ಒಲುಮೆಗೆ ತಲೆತೂಗೈತಿ
ಕೈ ತುಂಬ ಹೂ ಕೊಟ್ಟೈತಿ

ಮನದ ಕನ್ನಡಿಯಲಿ
ಸುವರ್ಣಾಕ್ಷರ ಬರದೈತಿ
ಗುರುರಾಯ ರಾಘವೇಂದ್ರ
ಹಂಪೆ ವಿರುಪಾಕ್ಷ
ರಾಯರ ಕರುಣೆಯ ದೀಪ
ನಂದಾದೀಪ

ಶಿವ ಪಾರ್ವತಿಯಂತೆ  ಹಣತೆಗಳು
ಶುಭಕೋರುತ್ತಿವೆ ತೃಪ್ತಭಾವಗಳು
ಎಲ್ಲರ ಮನದಲಿ ಸ್ನೇಹದಾ ಹಣತೆ ಹಚ್ಚಿದ ಸಿದ್ಧ 
ನೋವು ಕಷ್ಟ ನುಂಗಿ
 ಮೂಡಿದ ದೈವ ವೀಣೆಯ ಮಿಡಿದವ
 ಮುಖದಲಿ ನಗೆಯ ಮೀಸಿ ತೀಡಿದವ
ಇವನಾರವ ಇವನಾರವ ಇವ ನಮ್ಮವ
ಇವ ಹಂಪೆಯ ಕೂಸಲ್ಲವೇ?
 ಸೊಲ್ಲ ಮಾತಾಡದಿರು ಗಾವಲಿಗರೇ?
ಇಹಪರ ಮುಕ್ತಿಗೆ ಹಾಲಿನ ತೊರೆ ಆಗೋಣ॥.

- ವೆಂಕಟೇಶ್ ಬಡಿಗೇರ್ ಕಮಲಾಪುರ - ಹಂಪಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕನ್ನಡಿ ಮುಂದಿನ ನಗ್ನ ಚಿತ್ರಗಳು (ಪುಸ್ತಕ ಅವಲೋಕನ) - ಶ್ರೀ ಇಂಗಳಗಿ ದಾವಲಮಲೀಕಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು.

ಕನ್ನಡಿ ಮುಂದಿನ ನಗ್ನ ಚಿತ್ರಗಳು 
    
   
ಕನ್ನಡ ಸಾರಸ್ವತ ಲೋಕದಲ್ಲಿ ಕವಿಯನ್ನು ವಯಸ್ಸು, ಹುದ್ದೆಗಳಿಂದ ಅಳಿಯಲಾಗದು. ಕವಿಯನ್ನು ಕಾವ್ಯ, ಭಾವದಿಂದ, ಕಲ್ಪನಾ ರಚಿತ ಕಾವ್ಯಶಕ್ತಿ, ಸಾಹಿತ್ಯದ ಗಟ್ಟಿತನ, ಕವನಗಳ ಅಂತಃಶಕ್ತಿ, ಕವಿಯ ಚಾರಿತ್ರ್ಯ, ಬರಹ ಬದುಕಿನ ಸಂಬಂಧ, ಶಿಕ್ಷಣ, ಸಮಾಜ, ಸಂಘಟನೆಗಳಿಗೆ ಕವಿಯ ಕೊಡುಗೆ, ಜಗದಲಿ ತಾನಿದ್ದು ಜಗದಗಲದ ತಾರ್ಕಿಕ, ಮಾರ್ಮಿಕ, ಬದಲಾವಣೆಗಳಲ್ಲಿ  ಕವಿಯ ಪ್ರಯತ್ನಗಳು, ಕವಿಯ ನಡಾವಳಿಕೆಗಳೊಂದಿಗೆ,  ಸ್ತ್ರೀ ಸಮ್ಮಾನ, ಸಹಕಾರ, ಪರೋಪಕಾರ, ಆತ್ಮಿಯತೆ, ಗೌರವ, ನನ್ನತನವನ್ನು ಧಾರೆ ಎರೆಯುವ ಧಾರಾಳತನ, ಮಿತಭಾಷೆ, ನಾಡು ನುಡಿಯ ಪ್ರೇಮ, ಜಗದ ಕಂಟಕಗಳನ್ನು ತನ್ನ ಸಂಕಟಗಳೆಂದು ಮುಂದಾಳುತನದಿಂದ ಭಯವಿಲ್ಲದೆ ಎದೆಯೊಡ್ಡಿ ಜಯವನ್ನು ಹೆಕ್ಕಿ ಜಯದ ಶ್ರೇಯಸ್ಸು ಇನ್ನೊಬ್ಬರಿಗೆ ನೀಡುವವ, ಪರಿಸರದಲಿ ತಾನಿದ್ದು ರಸಋಷಿಯಂತೆ ವಿರಮಿಸದೆ ಕಸದಲ್ಲೂ ಹೊಸದನ್ನು ಸಂಶೋಧಿಸುವ ಕವಿ, ಸ್ವಾರ್ಥತೆಗೆ ನೀರು ಹಾಕಿ ನಿಸ್ವಾರ್ಥತೆಗೆ ನಿತ್ಯ ನಾಂದಿ ಹಾಡುತ, ನಿಂತ ನೀರಾಗದೆ ಸದಾ ಹರಿಯುತ ಏರಿಗೂ ಈಜುವವನು ಕವಿ. ಕವಿ ಸಮಾಜಕ್ಕೆ ಒಬ್ಬ ಮಾದರಿ ವ್ಯಕ್ತಿ. ಕವಿಯ ಬರಹವಷ್ಟೆ ಅಲ್ಲದೆ ಅವನ ಬದುಕು ಸಮಾಜಕ್ಕೆ ಒಂದು ಪಾಠವಾದೀತು. ನಮ್ಮ ಕರುನಾಡಲ್ಲಿ ಸರ್ವ ಸಂಪನ್ನ ಕವಿಗಳಿದ್ದು ನಮ್ಮ ದೇಶಕ್ಕಷ್ಟೆ ಅಲ್ಲದೆ ಇಡೀ ಜಗತ್ತಿಗೆ ತಮ್ಮ ಜ್ಞಾನದ ಅರಿವನ್ನು ಪೀಠಗಳಿಂದ ತೋರಿಸಿದ್ದಾರೆ. 
      ಆತ್ಮೀಯ ಓದುಗ ಮಿತ್ರರೆ ಇಂದು ಕನ್ನಡಿ ಮುಂದಿನ ನಗ್ನ ಚಿತ್ರಗಳು  ಎಂಬ ಗಜಲ್ ಸಂಕಲನವನ್ನು ರಚಿಸಿ ಕನ್ನಡ ತಾಯಿಯ ಪಾದದಡಿ ಇಟ್ಟು ಪ್ರತಿ ಕನ್ನಡಿಗರ ಮನ ಮನೆಗಳಿಗೆ ತಮ್ಮ ಬರಹದ ಕಾವ್ಯಶಕ್ತಿಯನ್ನು ಕರುಣಾ ಭಾವದಿಂದ, ತಮ್ಮ ಮನದಾಳದಲ್ಲಿ ಸದಾ ಕೋಲಾಹಲ ಏಳುವ ಅಲೆಗಳ ಪ್ರತಿ ಶಬ್ದಗಳನ್ನು ಜೋಡಿಸಿ,  ತಮ್ಮ ಮನದಂತರಾಳದಲ್ಲಿ ಬೀಳುವ ಉಲ್ಕಾಪಾತದ ಉಲ್ಕೆಗಳನ್ನು ಆಯಿಸಿ ಚಿಕ್ಕ ವಯಸ್ಸಿನಲ್ಲಿ ಚೊಕ್ಕದಾಗಿ ಕವನಗಳ  ರಚಿಸಿ, ನಾಡಿನಾದ್ಯಂತ ಹಿರಿಕಿರಿ ಕವಿಗಳೊಂದಿಗೆ ಸಂಪರ್ಕದಲ್ಲಿದ್ದು ಅವರೆಲ್ಲರ ಹರಕೆ-ಆಶೀರ್ವಾಗಳೊಂದಿಗೆ ತಮ್ಮ ಮೊದಲ ಗಜಲ್ ಸಂಕಲನದ ಸಂತಸದಲ್ಲಿದ್ದಾರೆ. ಹಾವೇರಿ  ಜಿಲ್ಲೆಯ ರಾಣಿಬೆನ್ನೂರ ತಾಲೂಕಿನ  ದಂಡಗಿಹಳ್ಳಿ   ಎಂಬ ಚಿಕ್ಕ ಹಳ್ಳಿಯ ಕಾವ್ಯ ಪ್ರತಿಭೆಯ ಕವಿ ಸಹೋದರ ಶ್ರೀ ಪ್ರಶಾಂತ್ ಅಂಗಡಿ.
    ಅನೇಕ ಹಿರಿಯ ಕವಿಗಳಷ್ಟು ಗಟ್ಟಿ ಸಾಹಿತ್ಯ, ಸತ್ವಯುತ ಕಾವ್ಯ ಬರೆಯುವ ಶ್ರೀ ಪ್ರಶಾಂತ್ ಅಂಗಡಿಯವರು ಅನೇಕ ಕವಿಗೋಷ್ಠಿಗಳಲ್ಲಿ ನನಗೆ ಭೇಟಿಯಾಗಿದ್ದರು. ಸರ್ ನೀವು ನನ್ನ ಕೃತಿಗೆ ಅಭಿಪ್ರಾಯಗಳನ್ನು   ಬರೆದುಕೊಡಿ ಎಂದಾಗ,ಎಲ್ಲೋ ಒಂದು ಕಡೆಗೆ ಮುಜುಗರ, ಸಂಕೋಚಗಳು ಜೊತೆಗೆ ಅಷ್ಟು ಅಭಿಪ್ರಾಯಗಳನ್ನು ನನ್ನಿಂದ ಬರೆಯಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿತು.  ಕನ್ನಡಿ ಮುಂದಿನ ನಗ್ನ ಚಿತ್ರಗಳು ಎನ್ನುವ ಗಜಲ್ ಸಂಕಲನವನ್ನು ಪಡೆದು ಓದುವ ಚಡಪಡಿಯೊಂದಿಗೆ ಅಲ್ಲೆ ಒಂದೆರಡು ಗಜಲ್ ಗಳನ್ನು ಓದಬೇಕೆಂದು ಕೃತಿಯನ್ನು ತೆರೆದು ನೋಡಿದರೆ ಈ ಎಲ್ಲಾ ಗಜಲ್ ಗಳು  ಕವಿಯದ್ದೆ  ಮನಸ್ಸಿನ  ಪ್ರಶ್ನೆಗಳೇ  ನನ್ನ ಮನದಲ್ಲಿ ಏಳತೊಡಗಿದವು. ಮನೆಗೆ ಬಂದು ಪ್ರತಿಯ ಗಜಲ್ ಗಳನ್ನು ಓದುತಿದ್ದರೆ ಓದುತ್ತಾ ಓದುತ್ತಾ ಆ ಎಲ್ಲ ಗಜಲ್ ಗಳು ತಮ್ಮಷ್ಟಕ್ಕೆ ತಾವೇ ನನ್ನಿಂದ ಓದಿಸಿಕೊಂಡು ಹೋಗುತ್ತಿವೆ. ಪ್ರತಿ ಗಜಲ್ ಗಳಲ್ಲಿ  ಸಂದೇಶಗಳನ್ನು, ಉಪದೇಶಗಳನ್ನು, ಹಾಗೂ ಮಾರ್ಗದರ್ಶನ ಮಾಡುವ ಪರಿಯನ್ನು ಓದಿದರೆ ಈ ಕವಿಯ ಮೆದುಳು ಕಾವ್ಯ ಜಗತ್ತಿನಲ್ಲಿ ಹಾಗೂ ಬದುಕಿನಲ್ಲಿ ತುಂಬಾ ಅನುಭವ ಪಡೆದುಕೊಂಡಿದೆ ಎಂದೆನಿಸುತ್ತದೆ. 
    ಈ ಕವಿಯ ಕಾವ್ಯದ ಪ್ರತಿ ಗಜಲ್ ಗಳಲ್ಲಿ ಸಮಾಜ ಕಳಕಳಿ ಎದ್ದು ಕಾಣುತ್ತದೆ. ಇಂದಿನ ಯುವಕರಿಗೆ ಉತ್ತಮ ಸಂದೇಶ ಸಾರುತ ಪ್ರತಿಯೊಬ್ಬರೂ ತಮ್ಮ ಬದುಕನ್ನು ಸುಧಾರಿಸಿಕೊಂಡು ಉತ್ತಮ ನಾಗರಿಕರಾಗುವ ಗುಣತುಂಬುವ ಉಪದೇಶ, ಕಳವಳ ಇವರ ಕಾವ್ಯದ ಮುಖ್ಯ ಉದ್ದೇಶವಾಗಿದ್ದು ವಿಶೇಷವಾಗಿದೆ. ಇಲ್ಲಿ ನಾನು 'ವಿಶೇಷವಾಗಿದೆ' ಎಂಬ ಪದ ಬಳಕೆ ಮಾಡಲು ಒಂದು ಮುಖ್ಯ ಕಾರಣವಿದೆ, ಅದೇನೆಂದರೆ ಇಂದಿನ ಕಾಲಘಟ್ಟದಲ್ಲಿ ಅನೇಕ ಯುವಕವಿಗಳು ಹೆಣ್ಣು, ಕೆಂದುಟಿ, ಪ್ರೀತಿ, ಪ್ರೇಮ, ಮಿಲನ, ಹೃದಯಗಳಾಟದ,  ಕದ್ದು ಮುಚ್ಚಿ ಮರಸುತ್ತುವಂತ ಕಾವ್ಯರಚನೆಯಲ್ಲಿ ಮುಂದಿರುತ್ತಾರೆ ಆದರೆ ಶ್ರೀ ಪ್ರಶಾಂತ್ ಅಂಗಡಿಯವರ ಕಾವ್ಯದಲ್ಲಿ ಹಾಗೆಲ್ಲಿ ಕಂಡು ಬಾರದೇ ಇರುವದರಿಂದ ಈ ಗಜಲ್ ಕವಿಯನ್ನು ವಿಶೇಷ ಕವಿ ಮತ್ತು ಕಾವ್ಯ ಎಂದು ಸಂಬೋಧಿಸಿರುವೆ. ಗಜಲ್ ಸಂಕಲನದಲ್ಲಿ ಕವಿಯು ಆಧ್ಯಾತ್ಮ, ಸತ್ಸಂಗ ಬದುಕು, ಅರಿತು ಬದುಕುವ ನಡೆ, ಸತ್ಯಾಸತ್ಯದ ವ್ಯತ್ಯಾಸದ ತೂಕ, ಸಮಾನತೆ, ಸಮ್ಮಾನಗಳ ಆಚಾರ ವಿಚಾರ ಸಾರುವ ಸಂತರಾಗಿದ್ದಾರೆ. 
    ಸದೃಢತೆ ಕಳೆದುಕೊಂಡ ಸಮಾಜಕ್ಕೆ ಸಂತೈಸುವವನು  ಕವಿ ಯಾಗಲಾರ, ಸಮಾಜ ಕೆಳಮಟ್ಟಕ್ಕೆ ಇಳಿಯದಂತೆ ನೋಡುವವ, ಸಮಾಜ ಅಭಿವೃದ್ಧಿಗಾಗಿ ಸದಾ ಹಂಬಲಿಸುವವ, ಮರಗುವವ. ತನ್ನ ಪರಿಸರವನ್ನು ಸಾರಾಸಗಟಾಗಿ ಸುಧಾರಿಸವವನು ಸಮ ಸಮಾಜದ ಮಾದರಿ ಪ್ರಜೆಯಾದವನು ಕವಿ ಅನಿಸಿಕೊಂಡಾನು. ಹಾಗೇನೇ ಇಲ್ಲಿ ಕವಿ ಶ್ರೀ ಪ್ರಶಾಂತ ಅಂಗಡಿಯವರು ಪ್ರತಿ ಗಜಲ್ ಗಳಲ್ಲಿ ದಾಸರು, ಸಂತರಂತೆ ಉಪದೇಶಗಳನ್ನು ಸುವಿಚಾರಾಧಿಯಾಗಿ ಹೇಳಿದ್ದಾರೆ. ಪ್ರತಿಯೊಬ್ಬರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎನ್ನುವ ಮಾತು ಇಷ್ಟವಾಗುವದು. ಜಗದಲ್ಲಿ ಪ್ರತಿಯೊಬ್ಬರು ಕೂಡಾ ನಾನೆ ಒಳ್ಳೆಯವನು, ನಾನೇ ಸರಿ, ನಾನೇ ಜಾಣ ಎಂದೆಲ್ಲಾ ಹೇಳುತ್ತಾ ಸದಾ ಪಾಪದ ತಪ್ಪುಗಳನ್ನು ಮಾಡುತ್ತಿರುತ್ತಾರೆ ಆದರೆ ಎಲ್ಲರು ತಮ್ಮನ್ನು ತಾವು ಅಥೈ೯ಸಿಕೊಂಡು , ಸರಿತಪ್ಪುಗಳನ್ನು ತೂಗುತ್ತ ಬದುಕಿದರೆ ಸಮಾಜದಲ್ಲಿ ಅನ್ಯಾಯ, ಅತ್ಯಾಚಾರ, ಭ್ರಷ್ಟಾಚಾರ, ಕಳ್ಳತನ, ಕೊಲೆ, ಸುಲಿಗೆ ನಡೆಯುವದಿಲ್ಲವೇನೊ ಎಂಬುದು ಕವಿಯ ಆಶಯ.
     ಮುಖ್ಯವಾಗಿ ಕವಿ ತನ್ನ ಮನದ ಭಾವನೆಗಳನ್ನು ಬಿತ್ತರಿಸುತ್ತ ಕಾವ್ಯಕ್ಕೆ ಅಲಂಕಾರ ಪ್ರಾಸಗಳ ಗೋಜಿಗೆ ಹೋಗದೆ, ನೇರ ಸಂದೇಶದಂತೆ, ಉಪದೇಶಗಳಂತೆ ಅತ್ಮಿಯತೆಯ ಸಲಹೆಯಂತೆ ಪದಪದಗಳ ಪೋಣಿಸಿ ಗಜಲ್ ಗಳನ್ನು ಬರೆದಿದ್ದಾರೆ. ಹಿರಿಯ ಕವಿ ಡಾ.ಗೌರಿಶ ಕಾಯ್ಕಿಣಿ ಯವರ ಹೇಳಿಕೆಯಂತೆ ಒಬ್ಬ ಯುವ ಕವಿ ಎಂಬ ಚಿಗುರು ಸಸಿಗೆ ನೀರು ಗೊಬ್ಬರ ಹಾಕಿ ಪ್ರೋತ್ಸಾಹಿಸಬೇಕು ಅದು ಮುಂದೆ ಬೆಳೆದು ಹೆಮ್ಮರವಾಗುವದು ಎಂಬಂತೆ ಆತ್ಮಿಯ ಸಹೋದರ ಕವಿ ಶ್ರೀ ಪ್ರಶಾಂತ ಅಂಗಡಿಯವರ ಈ ಗಜಲ್ ಸಂಕಲನದಲ್ಲಿ ಜಾತಿ,ಧರ್ಮ, ದೇವರು,ಮೇಲು,ಕೀಳು ಸೇರಿದಂತೆ ಹಲವಾರು ಸಾಮಾಜಿಕ ಮೌಢ್ಯಗಳು ಚುಚ್ಚಿ ಚುಚ್ಚಿ ಬದುಕು ನಶ್ವರವಾಗುತ್ತಿರುವುದನ್ನು ತಮ್ಮ ಸೂಕ್ಷ್ಮ ಗ್ರಹಿಕೆಯಿಂದ ಅವುಗಳಿಗೆ ಗಜಲ್ ರೂಪಕೊಟ್ಟು ಸಮಾಜದ ನೋವುಗಳಿಗೆ ಸ್ಪಂದಿಸುತ್ತಾರೆ.ಎಲ್ಲದಕ್ಕೂ ಮೀರಿದ್ದು ಮಾನವೀಯತೆ ಎನ್ನುವ ಗಜಲ್ ಕವಿ ಈ ಮಣ್ಣಿನ ಸೊಗಡು, ಪ್ರೀತಿ, ಪ್ರೇಮ, ಪ್ರಣಯ, ಹಾಸ್ಯ,ದಾರಿದ್ರ್ಯ, ಸಾಮಾಜಿಕ ಬದುಕನ್ನು ಕಟ್ಟಿಕೊಡುವ ಒಂದು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
    ಈ ಗಜಲ್ ಗಳನ್ನು ಓದುತ್ತಾ ಹೋದಂತೆಲ್ಲಾ ನಮ್ಮದೇ ಬದುಕಿನ ನಗ್ನ ಚಿತ್ರಗಳನ್ನು ನಾವೇ ನೋಡಿಕೊಂಡಂತೆ ಭಾಸವಾಗುತ್ತದೆ. ಯಾವುದೇ ರೀತಿಯ ಬದುಕನ್ನು ಕಟ್ಟಿಕೊಂಡ ಮೇಲೆ ನಮ್ಮ ವಾಸ್ತವ ಜಗತ್ತಿನ ಅಂತಃಚಕ್ಷು ತೆರೆದು ನೋಡಿದರೆ ಅಲ್ಲಿ ಬರೀ ಶೂನ್ಯ ಸಂಪಾದನೆ ಎನ್ನುವುದು ಕವಿ ಅಭಿಪ್ರಾಯ ಪಡುತ್ತಾರೆ
          ಕನ್ನಡಿ ಮುಂದಿನ ನಗ್ನ ಚಿತ್ರಗಳು    ಎಂಬ ಪ್ರಥಮ ಗಜಲ್ ಸಂಕಲನಕ್ಕೆ ಪ್ರೋತ್ಸಾಹಿಸಿ ನನ್ನ ನಾಲ್ಕಾರು ಮಾತುಗಳನ್ನು ಬರೆದು ನೀಡಿರುವೆ. ಕವಿಯ ಕಾವ್ಯ ಹೆಮ್ಮರವಾಗಿ ಬೆಳೆಯಲಿ. ಕನ್ನಡ ಸಾರಸ್ವತ ಲೋಕದಲ್ಲಿ ಕವಿಗೆ ಹೆಚ್ಚಿನ ಯಶಸ್ಸು ಸಿಗಲಿ. ಈ ಯುವಕವಿಯಿಂದ ಇನ್ನು ಹೆಚ್ಚಿನ ಕೃತಿಗಳು ಹೊರಬರಲಿ ಎಂದು ಕೋಟಿ ಕನ್ನಡಿಗರು ಶುಭ ಹಾರೈಸೋಣ. 
 -   ಶ್ರೀ ಇಂಗಳಗಿ ದಾವಲಮಲೀಕ
ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನನ್ನ ಬದುಕು (ಕವಿತೆ) - ಭಾವಗಳ ಬಂಡಿ (ಶಿರೀಷ ವಿದ್ಯಾರ್ಥಿನಿ)ತಾ.ಜಿ. ಯಾದಗಿರಿ.

 ನನ್ನ ಬದುಕು 

ಖುಷಿಯಲ್ಲಿ ನಾ ಹಿಗ್ಗುವೆ..
ದುಃಖದಲ್ಲಿ ನಾ ಕುಗ್ಗುವೆ..
ಜೀವನವೇ ಜಿಗುಪ್ಸೆಯಾಗಿದೆ..
ಆದರೂ ಬದುಕಿರುವೆ..
ಹೆತ್ತವಳ ಆ ಖುಷಿಗಾಗಿ..!

ಜೀವನವೆಂಬ ಈ ಚದುರಂಗದಾಟದಲ್ಲಿ..
ಒತ್ತೆಯಾಳುವಿನಂತೆ ನಾನಿಲ್ಲಿ..
ನನ್ನ ಬದುಕಿಗೆ ಯಾವ ಅರ್ಥವೂ.. 
ಕಲ್ಪಿಸದ  ಆ ದೇವರು
ಯಾಕದರೂ.. ಇನ್ನೂ ಬದುಕಿಸಿದ್ದಾನೆ..
ಎಂದು ಹೇಳುತಿದೆ ಈ ನೊಂದ ಮನವು..!

ಮನಸ್ಸಿನಲ್ಲಿ ಹೊರಲಾಗದ 
ಭಯಾನಕ ಭಾವನೆಗಳು..
ನಿದ್ರೆಯಲ್ಲಿ ನನಸಾಗದ
ಅದೆಷ್ಟೋ ಕನಸುಗಳು..
ಕಾಡುತಿವೆ ಹಗಲಿರುಳು 
ಈ ನೊಂದವಳನು ಬಿಡದೇ..!

ನೆನಪಿನ ಅಲೆಯಲ್ಲಿ.. 
ಮೌನದ ಪಯಣ ನನ್ನದಿಲ್ಲಿ..
ಸಾಗುವ ಹಾದಿಯಲ್ಲಿ.. 
ಬರೀ ಸವಾಲುಗಳೇ ನನಗಿಲ್ಲಿ..
ಮೆಟ್ಟಿ ಬದುಕ ಬಲ್ಲೆ ನಾ ಈ ಭುವಿಯಲ್ಲಿ..
ಆದರೂ ಮೌನವಾಗಿದೆ ಮನವೇಕೋ ಇಲ್ಲಿ..!?

- ಭಾವಗಳ ಬಂಡಿ (ಶಿರೀಷ ವಿದ್ಯಾರ್ಥಿನಿ)
ತಾ.ಜಿ. ಯಾದಗಿರಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಪ್ರೇಮದೊಲವೇ(ಕಲ್ಪನೆ ಕವನ) - ಶ್ರೀ ಸೋಮಶೇಖರ ಹ ರಾಂಪೂರ.

ಪ್ರೇಮದೊಲವೇ(ಕಲ್ಪನೆ ಕವನ)

ಕಿರುನಗೆಯ ಬೀರಿದವಳೆ
ಕರವ ನೀ ಕೂಡಿಸಿದವಳೆ
ಜಡೆಯ ಮಹಾರಾಣಿಯೇ
ಏನು ಪಿಸು ಗುನುಗುತಿರುವೇ!

ಹಣೆಗೆ ದೃಷ್ಟಿ ನೀ ನೆಟ್ಟವಳೆ
ಮದರಂಗಿಯ ನಿನ್ನ ಕರಗಳೆ
ಚೆಲುವನ ಕರ ಅಪ್ಪಿಕೊಂಡಿವೇ
ಜಿನುಗುತಿವೇ ಪ್ರೀತಿಯ ಮಾತೇ!

ದಾಳಿಂಬೆ ದಂತದ ಬೊಂಬೆಯೇ
ನಸು-ನಾಚುತ ನೀ ಕುಳಿತಿರುವೇ
ಮೆಲ್ಲ-ಪಿಸು ಮಾತು ಹೇಳುತಿರುವೇ
ನಲ್ಲಗೆ ಬೆಲ್ಲದಂತಹ ಗೊಂಬೆಯೆ!

ನಿಲುವ ಸಮವಸ್ತ್ರ ತೊಟ್ಟವಳೆ
ಕೈ ಬೆರಳು ಸಲುಗೆಯ ಚೆಲುವೇ
ಕಾಡಿಗೆ ಕಣ್ಣಿನ ಮೊಗದೊಲವೇ
ರತೀಯ ಮಾತಿನ ನನ್ನೊಲವೇ!
- ಶ್ರೀ ಸೋಮಶೇಖರ ಹ ರಾಂಪೂರ ಸಹ ಶಿಕ್ಷಕರು ಎಚ್.ಪಿ.ಎಸ್ ಗುಂದಗಿ ವಿಜಯಪೂರ ಜಿಲ್ಲೆ
ಮೊ.೭೭೯೫೦೪೮೯೪೭.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಬುಧವಾರ, ಸೆಪ್ಟೆಂಬರ್ 22, 2021

ಕಲ್ಪನೆಯ ಕವನ (ಕವಿತೆ) - ಸವಿತಾ ಆರ್ ಅಂಗಡಿ ಮುಧೋಳ.

ಕಲ್ಪನೆಯ ಕವನ

 ಕಲ್ಪನೆಯಿಂದ ಕವನ ಕಟ್ಟಿರುವೆ
 ಅನುಭವದಿಂದ ಚುಟುಕು ಬರೆದಿರುವೆ
 ವಿಚಾರಣೆ ಮಾಡಿ ಲೇಖನ ಬರೆದಿರುವೆ
 ನಡೆ-ನುಡಿ ಆಚಾರದಂತೆ ವಚನ ಕೇಳುವೆ
 ಹೃದಯ ಅಂತರದಿಂದ ರಾಗ ಹಾಡುವೆ
 ಜೀವಿಸಲು  ಉಸಿರಾಟ ಕೊಡು ಎಂದು ಮರವ ಕೇಳುವೆ
 ದಿನನಿತ್ಯ ಭಗವಂತನಲ್ಲಿ ಮೊರೆಹೋಗುವೆ
 ತುಂಬಿ ಹರಿಯುವ ನದಿಗಳು ಕಂಡು ಸಂತಸಗೊಳ್ಳುವೆ
 ಕೋಗಿಲೆಯ ದಾನ ಕೇಳಿ ಮಂಕಾಗುವೆ
 ನವಿಲಿನ ನರ್ತನ ನೋಡಿ ಬೆರಗಾಗುವೆ
 ಹೊತ್ತು ಹೆತ್ತು ಸಾಕಿದ ತಾಯಿಯ ಋಣವ ತೀರಿಸುವೆ
 ಗುರುಹಿರಿಯರ ಕಂಡಲ್ಲಿ ನಮಸ್ಕರಿಸುವೆ
 ದುಷ್ಟರ ಸಂಗ ತೆಜೆಸಿ ಸಜ್ಜನರ ಸಂಗಕ್ಕೆ ಕಾಯುವೆ
 ವಿದ್ಯಾದಾನ ನೀಡೆಂದು ಗುರು ವಲ್ಲಿ ಕೇಳುವೆ
 ದೇವರನಾಮವನ್ನು ಭಕ್ತಿಯಿಂದ ಭಜಿಸುವೆ
 ಹೇ ಬಗವಂತ ಸದಾ ನಿನ್ನ ಆಶ್ರಯದಲ್ಲಿರುವೆ
 ಎಲ್ಲರ ಬದುಕಲ್ಲಿ ಸುಖ ನೀಡೆಂದು ದೇವರ ಪ್ರಾರ್ಥಿಸುವೆ
 ಸದಾ ನಿನ್ನ ನಾಮವ ನೆನೆಯುವೆ


✍️ ಸವಿತಾ ಆರ್ ಅಂಗಡಿ  ಮುಧೋಳ.



( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ ) 

ಹೃದಯ ಮಿಡಿತ ( ಕವಿತೆ) - ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ.

ಹೃದಯ ಮಿಡಿತ

*ಹೃದಯ ಹೃದಯ ನೀನೇ ಸನಿಹ* 
*ಹೃದಯದ ಕದವ ತೆರೆಯೇ ನೇಹ ..//*
*ಮನಸಿಗಿಲ್ಲ ಬಣ್ಣ ಅಳಲು ಬೇಡ ಕರುಣ*
*ಅಂತರಂಗದೊಳಗೆ ಆವರಿಸಿದೆ ನೀನೇ ಅರುಣ..//ಹೃದಯ//*

*ಹಣಿತ ನೊಂದ ಹೃದಯವಿದು  ಹಂಬಲಿಸಿದೆ*
*ಮಮತೆಗಾಗಿ ಕಣ್ಣೀರ ಕೊಡಿ ಹರಿಸಿದೆ..*
*ಕದದ ಸನಿಹದಿ ಶಶಿಕಿರಣದಿ*
*ತಾರೆಗಳ ಸೊಬಗಿನ ಸುಮ ನಗುವಿದೆ..//ಹೃದಯ//*

*ಚಿಲಿಪಿಲಿ ಹಕ್ಕಿಪಕ್ಷಿಗಳ ಸ್ವರವಿದೆ*
*ಬೆಳ್ಮುಗಿಲ ಬೆಳ್ಳಕ್ಕಿಯ ಮುಗಿಲು ನಲಿದಿದೆ..*
*ಪ್ರಕೃತಿ ಮಾತೆಯ  ಸೊಬಗಿದೆ ಗಂಧ*
*ಓ ಮನವೇ,ಈ ಬಂಧವಾಗಲಿ ಅನುಬಂಧ..//ಹೃದಯ//*

*ವಸಂತ ಕೋಗಿಲೆ ಮತ್ತೆ ಹಾಡಲಿ*
*ಋತುಗಳು ನಿನ್ನ ಶ್ರುತಿ ಲಾಪಕಾಗಿ ಕಾದಿದೆ..*
*ಆಗಸದ ಗುಡುಗು ಮಿಂಚಲಿ ನಾದವಿದೆ*
*ಸುರಿವ ಹನಿಹನಿ ವರ್ಷಧಾರೆಯಲಿ ಸಾರವಿದೆ..//ಹೃದಯ//*

*ಅನುರಾಗದ ಲತೆಯಲಿ ಕುಸುಮವು ಅರಳಿದೆ*
*ಓ ಒಲವೇ,ನಾಕದ ಬಾಗಿಲು ತೆರೆದಿದೆ..*
*ಧರೆಗೆ ಇಬ್ಬನಿ ಕರಗಿ ಧಾರೆಯಾಗಿ ಹರಿದಿದೆ*
*ಓ ಒಲವೇ,ಹೃದಯ ಮಿಡಿತದಿ ನಲಿದಿದೆ..//ಹೃದಯ//*

- ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಅಡ್ವೈಸರ್ ಅಂಚೆ ಜೀವ ವಿಮೆ ಮಂಡ್ಯ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ ) 

ದೇಹಾಂಗದಾನ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ (ಪ್ರಕಟಣೆ) - ವಿಚಾರ ಮಂಟಪ ಸಾಹಿತ್ಯ ವೇದಿಕೆಯ ಸಹಯೋಗದಲ್ಲಿ.

ದೇಹಾಂಗದಾನ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ.
*ದೇಹಾಂಗದಾನ ಸಾಹಿತ್ಯ ಪರಿಷತ್ತು - ಕರ್ನಾಟಕ*  *ವಿಚಾರ ಮಂಟಪ ಸಾಹಿತ್ಯ ವೇದಿಕೆ - ಕರ್ನಾಟಕ* *ಶಾರದಾ ಮಹಿಳಾ ಸೇವಾ ಸಮಾಜ* ಇವರ ಸಂಯುಕ್ತ ಆಶ್ರಯದಲ್ಲಿ *ದೇಹಾಂಗದಾನ ದಿನದ ಅಂಗವಾಗಿ* *ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ* 

ದಿನಾಂಕ : 23.09.2021 ರಂದು ಸಂಜೆ 06.00 ರಿಂದ

*ಕಾರ್ಯಕ್ರಮದ ಅದ್ಯಕ್ಷತೆ : ಡಾ ಇಂಚರಾ ನಾರಾಯಣ ಸ್ವಾಮಿ, ಇಂಚರ ಕುಟೀರ - ಕೋಲಾರ*

*ಉಪನ್ಯಾಸ ಮತ್ತು ನಿರೂಪಣೆ : ಶ್ರೀಮತಿ‌ ಕಲ್ಪನಾ ಡಿ ಎನ್, ಪ್ರಧಾನ ನಿರ್ವಾಹಕರು. ದೇಹಾಂಗದಾನ ಸಾಹಿತ್ಯ ಪರಿಷತ್ತು, ಸಂಸ್ಥಾಪಕರು ಶಾರದಾ ಮಹಿಳಾ ಸೇವಾ ಸಮಾಜ*. 

*ದೇಹಾಂಗದಾನ ಜಾಗೃತಿ ಗೀತೆ : ಶ್ರೀಮತಿ ಸುಮಾ ಬಸವರಾಜ ಹಡಪದ, ಖ್ಯಾತ ಗಾಯಕರು*. 

*ಮುಖ್ಯ ಅತಿಥಿಗಳು*

*ಶ್ರೀಮತಿ ಕಲಾವತಿ ಮಧುಸೂದನ , ಅಧ್ಯಕ್ಷರು , ಸ್ಪಂದನ ಸಿರಿ ವೇದಿಕೆ - ಕರ್ನಾಟಕ.*

*ಶ್ರೀ ರಾಜೇಂದ್ರ ಪಾಟೀಲ, ಪತ್ರಕರ್ತರು, ಕವಿ ಹಾಗೂ ಲೇಖಕರು.*

*ವಿಶೇಷ ಉಪಸ್ಥಿತಿ*

*ಶ್ರೀ ರಾಜ್ ಕುಮಾರ ವಿ. ಪ್ರಧಾನ ಕಾರ್ಯದರ್ಶಿಗಳು, ಕರುನಾಡು ಸಾಹಿತ್ಯ ಪರಿಷತ್ತು, ಕೋಲಾರ ಜಿಲ್ಲಾ ಘಟಕ*.

*ಶ್ರೀ ವರುಣ್ ರಾಜ್ ಜೀ, ಗೌರವ ಅಧ್ಯಕ್ಷರು, ವಿಚಾರ ಮಂಟಪ ಸಾಹಿತ್ಯ ವೇದಿಕೆ - ಕರ್ನಾಟಕ*.

ದೇಹಾಂಗದಾನ ಸಾಹಿತ್ಯ ಪರಿಷತ್ತು, ವಿಚಾರ ಮಂಟಪ ಸಾಹಿತ್ಯ ವೇದಿಕೆ ಹಾಗೂ ಶಾರದಾ ಮಹಿಳಾ ಸೇವಾ ಸಮಾಜದ ಎಲ್ಲಾ ಗೌರವ ಪಧಾದಿಕಾರಿಗಳು ಹಾಗೂ ಸದಸ್ಯರು

ಸ್ವಾಗತ ಕೋರುವವರು : ಪೂಜಾ ಐ ಸಿ.
ಪ್ರಾರ್ಥನೆ : ಶ್ರೀಮತಿ ಪಾರ್ವತಿ ಹಮ್ಮಿಗಿ.
ವಂದನಾರ್ಪಣೆ : ಶ್ರೀ ವರುಣ್ ರಾಜ್ ಜೀ.

*ಸರ್ವರಿಗೂ ಸುಸ್ವಾಗತ*


Join Zoom Meeting


 Meeting ID: 865 174 1882

Passcode: JH4RMw


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ ) 



ರಾಜ್ಯ ಮಟ್ಟದ ಕವನ ಸ್ಪರ್ಧೆ(ಪ್ರಕಟಣೆ):: ವಿಚಾರ ಮಂಟಪ ಸಾಹಿತ್ಯ ವೇದಿಕೆ.

ರಾಜ್ಯ ಮಟ್ಟದ ಕವನ ಸ್ಪರ್ಧೆ: ವಿಚಾರ  ಮಂಟಪ ಸಾಹಿತ್ಯ ವೇದಿಕೆ.
*ಜಿಲ್ಲಾ ಘಟಕ   :-   ಬೀದರ*

🍁🍁🍁🍁🍁🍁🍁🍁

  *ರಾಜ್ಯ ಮಟ್ಟದ ಕವನ ಸ್ಪರ್ಧೆ*
     💐💐💐💐💐
*ದಿನಾಂಕ- 26 ಸೆಪ್ಟೆಂಬರ್ 2021*
          
       *_ಸ್ಪರ್ಧೆ : 04*

⏰ *ಸಮಯ :  ಮಧ್ಯಾಹ್ನ 12 PM ಗಂಟೆಯಿಂದ ರಾತ್ರಿ 9:30 PM ಗಂಟೆಯವರೆಗೆ*

🌺🌺🌺🌺🌺🌺🌺🌺

*ವಿಷಯ : ಹೆಣ್ಣಿಗೆ ಕಾವಲಾಗು....  ಕಾಮುಕನಲ್ಲ*

☘️☘️☘️☘️☘️☘️☘️☘️
*ನಿರ್ವಹಣೆ :-ಪರಮೇಶ.ಡಿ.ವಿಳಸಪೂರೆ*
🍁🍁🍁🍁🍁🍁🍁🍁

*ಸ್ಪರ್ಧೆಯ ನಿಯಮಗಳು*
👇👇👇👇👇👇👇

ಸದ್ಯ ನಮ್ಮ ಸಮಾಜದಲ್ಲಿ ಹೆಣ್ಣಿನ ಮೇಲೆ ವಿಕೃತವಾಗಿ ನಡೆಯುತ್ತಿರುವ ಅತ್ಯಾಚಾರ ಮತ್ತು ಅವಳ ಹತ್ಯೆಯನ್ನು ಖಂಡಿಸಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

     ಹೆಣ್ಣುತನಕ್ಕೆ ರಕ್ಷಣೆಯಿಲ್ಲದ ಸರ್ಕಾರದ ವಿರುದ್ಧ ಮತ್ತು ಈ ಕೃತ್ಯವನ್ನು ಮಾಡುತ್ತಿರುವ ಕಾಮುಕರಿಗೆ ಶಿಕ್ಷೆಯನ್ನು  ಒದಗಿಸುವ ವಿಷಯವನ್ನು ಆಧಾರಿಸಿ 
ನಿಮ್ಮ ಕವನವು ರಚನೆಯಗಲಿ.

🔸 ನಿಮ್ಮ ಕವನವು ಸ್ವರಚಿತವಾಗಿದು ಇದಕ್ಕಿಂತ ಮೊದಲು ಎಲ್ಲಿಯೂ ಪ್ರಕಟಗೊಂಡಿರಬಾರದು.

🔹ಒಬ್ಬರು ಒಂದೇ ಕವನ ಕಳಿಸಬೇಕು. ವಯಸ್ಸಿನ ನಿರ್ಭಂಧವಿಲ್ಲ. ಹೊಸ ವೈಚಾರಿಕ ಕವನಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು

🔸ನಿಮ್ಮ ಕವನ ಕನಿಷ್ಠ  16- 18 ಸಾಲುಗಳ ಮಿತಿಯಲ್ಲಿರಲಿ.

🔹 ಕೊಟ್ಟಿರುವ ವಿಷಯಕ್ಕೆ  ಸೂಕ್ತವಾಗದ ಕವನವು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

🔸 ಕವನವು ಕಡ್ಡಾಯವಾಗಿ whatsapp ನಲ್ಲಿಯೇ  ಟೈಪ್ ಮಾಡಿ ಕಳಿಸಬೇಕು. ಪಿಡಿಎಪ್, ಪೋಟೋ ಹೊಡೆದು, docx, jpg, tif ಮುಂತಾದ ಪಾರ್ಮಾಟಿನಲ್ಲಿ ಕಳಿಸಿದರೆ ಸ್ಪರ್ಧೆಗೆ ಪರಿಗಣಿಸುದಿಲ್ಲ.

🔹 ಈ ಕವನ ಸ್ಪರ್ಧೆಯಲ್ಲಿ ಎಲ್ಲಾ ವಯೋಮಾನದವರು ಭಾಗವಹಿಸಬಹುದು.

🔸ಕವನವು ವಿಚಾರ ಮಂಟಪ ಸಾಹಿತ್ಯ ವೇದಿಕೆ(ಬೀದರ)  ಬಳಗದಲ್ಲಿ ಸಂಪೂರ್ಣ ವಿಳಾಸದ ಜೊತೆಗೆ ಹಾಕಬೇಕು. 

🔸ಸಮಯಕ್ಕೆ ಮುಂಚೆ ಹಾಗೂ ನಂತರ ಬಂದ ಕವನಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.


🔹 ಸ್ಪರ್ಧೆ ನಡೆಯುವ ಸಮಯದಲ್ಲಿ ಯಾವುದೇ ಕವನಕ್ಕೆ ವಿಮರ್ಶೆ ಮಾಡಬಾರದು. 

🔸 ಸ್ಪರ್ಧೆಯಲ್ಲಿ ವಿಜೇತರಾದ ಕವಿಗಳಿಗೆ E- Certificate ವಿದ್ಯುನ್ಮಾನ ಪ್ರಮಾಣ ಪತ್ರ ನೀಡಲಾಗುವುದು.

🔹ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- 

*ಪರಮೇಶ.ಡಿ.ವಿಳಸಪೂರೆ*
ಜಿಲ್ಲಾ ಕಾರ್ಯದರ್ಶಿ/ಬಳಗದ ನಿರ್ವಾಹಕರು +91 80506 83835

*ರೋಹಿಣಿ. ಬಿರಾದಾರ್* ಮಹಿಳಾ ಕಾರ್ಯದರ್ಶಿ 
+919353315077

*ಅಂಜನ್ ಕುಮಾರ್*
ರಾಜ್ಯ ಅಧ್ಯಕ್ಷರು +91 74831 46697

*ವರುಣ್ ರಾಜ್*
ರಾಜ್ಯ ಗೌರವ ಅಧ್ಯಕ್ಷರು

 *ಅಶ್ವಜೀತ ದಂಡಿನ* 
 ಜಿಲ್ಲಾಧ್ಯಕ್ಷರು 

*ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ*


*ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು*



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)



ಗೊರೂರು ಅನಂತರಾಜು ಮುರಿದು ಬಿದ್ದ ಭಜನೆ ಮನೆ ( ಪುಸ್ತಕ ಪರಿಚಯ) - ಶ್ರೀಮತಿ ಮಾಲಾ ಚಂದ್ರಶೇಖರ್ ಚೆಲುವನಹಳ್ಳಿ.

ಗೊರೂರು ಅನಂತರಾಜು ಮುರಿದು ಬಿದ್ದ ಭಜನೆ ಮನೆ

ಹಾಸನ ಎಂದಾಕ್ಷಣ ಶಿಲ್ಪಕಲೆಗಳ ತವರೂರು ಸಾಹಿತ್ಯ 
ಸಂಸ್ಕೃತಿಗಳ  ಆಗರ, ಹಿರಿಯ ಸಾಹಿತಿಗಳು, ರಾಜಕಾರಣಿಗಳನ್ನು ದೇಶಕ್ಕೆ ಕೊಡುಗೆಯಾಗಿ ಕೊಟ್ಟಿರುವ ಅರೆ ಮಲೆನಾಡು, ಅರೆ ಬಯಲು ಸೀಮೆಯ ಸುಂದರ, ವೈಭವೋಪೇತ ಜಿಲ್ಲೆ ಎಂಬುದು ಮೊದಲು ನೆನಪಾಗುತ್ತದೆ.
   ಹಾಸನ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಸರಳ ಶೈಲಿಯ ಬರವಣಿಗೆಯಲ್ಲಿ ಛಾಪು ಮೂಡಿಸಿರುವ ಸಾಹಿತಿಗಳಲ್ಲಿ ಶ್ರೀಯುತ ಗೊರೂರು ಅನಂತ ರಾಜುರವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.ಇತ್ತೀಚೆಗಷ್ಟೇ ಅತ್ಯುನ್ನತ ಪ್ರಶಸ್ತಿಯಾದ *ಕವಿ ವಿಭೂಷಣ *ಪ್ರಶಸ್ತಿ ಪಡೆದಿರುವುದು ಅವರ ನೈಪುಣ್ಯತೆಗೆ ನಿದರ್ಶನವೆನ್ನಬೇಕು, ಇಂತಹ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದರೂ, ಸಲ್ಪವೂ ಗರ್ವವಿಲ್ಲದ ಸರಳ, ಸಜ್ಜನಿಕೆಯ ವ್ಯಕ್ತಿ ಗೊರೂರು ಅನಂತ ರಾಜುರವರು.
       ಯಾವುದೇ ಪತ್ರಿಕೆಯಲ್ಲಿಯಾಗಲೀ ಅವರದೊಂದು ಲೇಖನ ಇರಲೇಬೇಕು ಎನ್ನುವಷ್ಟರ ಮಟ್ಟಿಗೆ ಅವರು ಸಾಹಿತ್ಯದಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡಿರುವುದು ಸ್ತುತ್ಯಾರ್ಹ, ಅವರ ಬರಹಗಳನ್ನು ಓದುತ್ತಿದ್ದರೆ ಅವರ ಜ್ಞಾನದ ಆಳ, ಅರಿವಿನ ವಿಸ್ತಾರ, ಕ್ಷಣವೂ ವಿರಮಿಸಲು ಬಿಡದೇ ಸದಾ ಬರೆಯುತ್ತಿರುವ ಲೇಖನಿ, ಕ್ರಿಯಾಶೀಲವಾಗಿರುವ ಅವರ ಮನಸ್ಸು ಇವೆಲ್ಲವುಗಳ ಬಗ್ಗೆ ಕ್ಷಣ ಕಾಲ ಯೋಚಿಸುವಂತಾಗುವುದು ಸಹಜ.
    ಪಾಚ್ಚಾತ್ಯ ನಾಟಕಗಳು, ಕಲೆಗಳು ಹಾಗೂ ರಂಗಭೂಮಿಯ ಬಗ್ಗೆಯೂ ಅಧ್ಯಯನ ಮಾಡಿ  ವಿಮರ್ಷಾತ್ಮಕ ಲೇಖನಗಳನ್ನು ಬರೆದಿರುವುದು ಓದಿದಾಗ ಅವರ ಅಧ್ಯಯನ ವಿಶ್ವ ಮಟ್ಟಕ್ಕೆ ಏರಿರುವುದು ಖಚಿತವಾಗುತ್ತದೆ.ಅಲ್ಲದೇ ತಾನೇ ಬರೆದು ಪ್ರಕಟವಾದ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಕೊಡಲು ಅಲೆದು ಕೊನೆಗೆ ತಮ್ಮ ಹುಟ್ಟೂರು ಗೊರೂರಿನಲ್ಲೂ ತಾವೇ ಮುಂಚೂಣಿಯಲ್ಲಿ ನಿಂತು ಓಡಾಡಿ ಒಂದು ಗ್ರಂಥಾಲಯವನ್ನು ಸ್ಥಾಪಿಸಿದ್ದು, ಹಳೇ ಚಲನ ಚಿತ್ರಗಳು ಹೇಗೆ ಆಗಿನ ಕಾಲಕ್ಕೆ ಜನರಿಗೆ ಪ್ರೇರಣೆಯಾಗಿದ್ದವು ಎಂದು ತಮ್ಮದೇ ಸರಳ ಶೈಲಿಯಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತೆ ಬರೆಯುತ್ತಾ ಪೌರಾಣಿಕ ನಾಟಕಗಳ ದೃಶ್ಯಗಳ ಬಗ್ಗೆ, ಅಲ್ಲದೇ,ಬಿಂಡಿಗದ ದೇವಿರಮ್ಮನ ದೇವಸ್ಥಾನಕ್ಕೆ ಪ್ರವಾಸ ಹೋದ ಬಗ್ಗೆ ಬರೆಯುತ್ತಾ ತಮ್ಮ ಸ್ವಂತ ಊರಾದ ಗೊರೂರಿನಲ್ಲಿಯೂ ಅನೇಕ ಚಲನ ಚಿತ್ರಗಳ, ಧಾರಾವಾಹಿಗಳ ಚಿತ್ರೀಕರಣ ಮಾಡಲು ಓಡಾಡಿ ನಂತರ ಬೇರೆ ಕಡೆ ಹೋಗಿದ್ದು, ಚಿತ್ರೀಕರಣ ಮಾಡಿದ ಚಿತ್ರಗಳೂ ತೆರೆ ಕಾಣದೇ ನಿಂತು ಹೋಗಿದ್ದು ಅವೆಲ್ಲವೂ ತಮಗೆ ಹತಾಶೆಯಾಯಿತು ಎಂದು ಹೇಳುತ್ತಾ ಕೊನೆಗೆ ""ಮುರಿದು ಬಿದ್ದ ಭಜನೆ ಮನೆ""ಯ ಬಗ್ಗೆ ಬರೆಯುತ್ತ ಆ ಚಿತ್ರದಲ್ಲಿ ಕೊನೆಗೆ ತನ್ನಹೆಸರನ್ನು ಹೇಳಿದ್ದಕ್ಕಾಗಿ ಸಮಾಧಾನ ಪಟ್ಟುಕೊಳ್ಳುವುದು  ಇಂತಹ ಅನೇಕ ವಿಷಯಗಳನ್ನು ಕೂಡ ಲೇಖನಗಳ ಮೂಲಕ ಬರೆಯುವ ಹವ್ಯಾಸ ನಮ್ಮಂಥ ಉದಯೋನ್ಮುಖ ಬರಹಗಾರರಿಗೆ ಪ್ರೇರಣೆ ಎಂದರೆ ತಪ್ಪಾಗಲಾರದು.
        ಮುರಿದು ಬಿದ್ದ ಭಜನೆ ಮನೆಯ ಅವರ ಭಾವನಾತ್ಮಕ ಸಂಬಂಧ, ಅಲ್ಲಿ ನಡೆಯುತ್ತಿದ್ದ ಎಲ್ಲ ವಿಶೇಷಗಳೊಡನೆ ವರ್ಣಿಸುವಾಗ ಅವೆಲ್ಲವೂ ಕಣ್ಮುಂದೆ ಬಂದಂತೆ ಅನ್ನಿಸುವುದು ಸುಳ್ಳಲ್ಲ.ಇನ್ನು ಲಾಕ್ ಡೌನ್ ಆದ ಸಂದರ್ಭಕ್ಕೆ ಹೊಂದುವಂತೆ ಬರೆದಿರುವ ಸಮಯ ಕಳೆಯಲು ಬೇಸರವೇ *ದಿ ಬೆಟ್ *ಕಥೆ ಓದಿ,ಎಂಬ ಲೇಖನವಂತೂ  ವಿಸ್ಮಯ ಎನ್ನಿಸದೇ ಇರದು. "ಲಾಯರ್ ಮತ್ತು ಬ್ಯಾಂಕರ್ ನಡುವೆ 20  ಲಕ್ಷದ ಬೆಟ್ ಕಟ್ಟುವ ಕಥಾನಕ. ಒಬ್ಬ 25  ವರ್ಷ ಪ್ರಾಯದ ವಕೀಲ ಯಾರ ಸಂಪರ್ಕವೂ ಇರದೇ, ಕೋಣೆಯಿಂದ ಹೊರಗೂ ಹೋಗದೇ, ಟಿವಿ, ಫೋನ್ ಇಲ್ಲದೇ 20  ಲಕ್ಷ ಹಣಕ್ಕಾಗಿ ಏಕಾಂತ ಸೆರೆ ವಾಸ ಅನುಭವಿಸುವಾಗಿನ ಮನ ಮಿಡಿಯುವ ಕಥಾನಕ.ಅದೇ ಅವಧಿಯಲ್ಲಿ ವಕೀಲ ಅನೇಕ ಪುಸ್ತಕಗಳನ್ನೂ ಓದುತ್ತಾ ಉತ್ತಮ ಕೃತಿಗಳನ್ನು ಬರೆದು ಕೊನೆಗೆ ಆಗುವ ದುಃಖದ ಅಂತ್ಯ, ಓದುಗರ ಮನಸ್ಸನ್ನು ಸೆರೆ ಹಿಡಿಯುವಲ್ಲಿ ಸಫಲವಾಗಿದೆ ಎಂದರೆ ತಪ್ಪಿಲ್ಲ."ಕಥೆ ಗೆ ವಸ್ತುವಾದಳು ಹುಡುಗಿ "ಎಂಬ ಕತೆಯoತೂ ಕೊನೆಯಲ್ಲಿ ಆಕೆ ಏನಾದಳು,ಏನಾಯಿತು ಎಂಬ ಜಿಜ್ಞಾಸೆಗೆ ಓದುಗರನ್ನು ದೂಡುತ್ತದೆ 
      ಇನ್ನು ಸನ್ಮಾನ, ಪ್ರಶಸ್ತಿ, ಪರಂತೂ ಎಂಬ ಹಾಸ್ಯ ಲೇಖನ ಕಥೆಗಳು, ಅವುಗಳ ಕಥಾ ವಸ್ತು, ಪಾತ್ರಗಳು, ಹೆಸರುಗಳು, ಸನ್ನಿವೇಶ, ಸಂದರ್ಭಗಳು,ಅದರಲ್ಲಿ ಬರುವ ಸಂಭಾಷಣೆಗಳಂತೂ ಓದುತ್ತಾ ನಗು ತಡೆಯಲಾರದೇ ಕೆಲ ಹೊತ್ತು ಸುಧಾರಿಸಿಕೊಂಡು ನಂತರ ಓದುತ್ತಾ ಮತ್ತೂ ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಗಿಸುವಲ್ಲಿ ಯಶಸ್ವಿಯಾಗಿವೆ. ರೆಕ್ಸೋನ, ಲೈಫ್ ಬಾಯ್, ಲಕ್ಸ್ ನ ನಗೆಹನಿಗಳಂತೂ  ಮತ್ತೆ ಮತ್ತೆ ಕೇಳಬೇಕು, ಓದಬೇಕು ಎನಿಸುವುದರಲ್ಲಿ ಸಂಶಯವಿಲ್ಲ.ಹೀಗೇ ಸಾಹಿತ್ಯದ ಎಲ್ಲಾ ಪ್ರಕಾರಗಳ ಬರವಣಿಗೆಯನ್ನೂ ಕರತಲಾಮಲಕ 
ಮಾಡಿಕೊಂಡಿರುವ ಗೊರೂರು ಅನಂತ ರಾಜು ಅವರು ತಮ್ಮ ಸಾಧನೆಯ ಜೊತೆ ಜೊತೆಗೆ ಬೆಳಕಿಗೆ ಬಾರದ ಅನೇಕ ಪ್ರತಿಭೆಗಳಿಗೂ ಪ್ರೋತ್ಸಾಹಿಸಿ ನಮ್ಮಂಥ ಅಲ್ಪ ಮತಿಗಳ ಚಿತ್ತಕ್ಕೂ ಅಪಾರ ಜ್ಞಾನ ತುಂಬುತ್ತಾ ತಮ್ಮೊಡನೆ ಸಾಧನೆಯ ಪಥದತ್ತ ಕರೆದೊಯ್ಯುತ್ತಿರುವುದು ಶ್ಲಾಘನೀಯ ಹಾಗೂ ಹಾಸನ ಜಿಲ್ಲೆಗೂ ಅವರಿಂದ ಹಿರಿಮೆ ಬಂದಿದೆಯೆಂದರೆ ತಪ್ಪಾಗಲಾರದು.ಶ್ರೀಯುತರನ್ನು ನಾನು ಕೇವಲ ಎರಡು ಬಾರಿ ಭೇಟಿಯಾಗಿದ್ದರೂ ಸ್ವಲ್ಪವೂ ಗರ್ವವಿಲ್ಲದ ಸದಾ ನಗು ನಗುತ್ತಿರುವ ಸರಳ, ಸಜ್ಜನಿಕೆಯ, ಸುಸಂಸ್ಕೃತ ವ್ಯಕ್ತಿ ಅನಂತ ರಾಜು , ಅಂತಹ ಮಹಾನ್ ವ್ಯಕ್ತಿ ನಮ್ಮ ಜಿಲ್ಲೆಯವರು ಎನ್ನುವುದು  ಜಿಲ್ಲೆಗೆ ಒಂದು ಹೆಮ್ಮೆಯ ವಿಷಯವಾಗಿದೆ.
- ಶ್ರೀಮತಿ ಮಾಲಾ ಚಂದ್ರಶೇಖರ್ 
ಚೆಲುವನಹಳ್ಳಿ.
ಉಪಾಧ್ಯಕ್ಷರು, ಸಿರಿಗನ್ನಡ ವೇದಿಕೆ ಹಾಸನ ಜಿಲ್ಲೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ) 

ಕಲ್ಪನೆಯ ಚೆಲುವೆ( ಚೇತನ) (ಕವಿತೆ) - ಯಮನೂರಪ್ಪ ಎಸ್ ಅರಬರ.

ಕಲ್ಪನೆಯ  ಚೆಲುವೆ( ಚೇತನ)

ಕಲ್ಪನೆಗೂ ಮೀರಿದೆ ಚೆಲುವೆ ನಿನ್ನ ಆ ಸೌಂದರ್ಯ...!
ನಿನ್ನೆಯ ಪ್ರೀತಿ ಪ್ರೇಮವ ಬಯಸುತ್ತಿದೆ ನನ್ನ ಹೃದಯದ ಆಂತರ್ಯ...!!
ನಿನ್ನ ಚೆಲುವ ನೋಡಿ ನಾಚುತ್ತಿದ್ದಾನೆ ದಿನ ಬೆಳಗೊ ಸೂರ್ಯ...!
ಮಿಂಚುವ ನಿನ್ನ ಚೆಲುವ ನೋಡಿ ಮರೆತೆ ಬಿಟ್ಟ ಬೆಳದಿಂಗಳ ಚಂದ್ರ ತನ್ನ ಕಾರ್ಯ...!!

ಹೃದಯವನು ಕದಿಯುವ ಹಾಗೆ ಇದೆ ಆ ನಿನ್ನ ನೋಟ...!
ನಿನ್ನ ಪ್ರೀತಿಸಲು ತೆರೆದಿರುವೆ ನನ್ನ ಮನದ ಪುಟ....!!
ನಿನ್ನ ರೂಪವ ನೋಡಿ ಅರಳಿ ನಿಂತಿದೆ ಎನ್ನ ಹೃದಯದ ಹೂದೋಟ...!
ನೀ ನನ್ನ ಪರಿಶುದ್ಧ ಪ್ರೀತಿಯನ್ನು ಒಪ್ಪಿದರೆ ನನ್ನ ಜೀವನವೆಲ್ಲಾ ಹಬ್ಬದೂಟ...!!

ರಂಭೆ ಊರ್ವಶಿ ಮೇನಕೆಯರನ್ನೇ ಮೀರಿಸುವ ನಿನ್ನ ಮೈ ಮಾಟದ ಬಣ್ಣ...!
ಪ್ರೀತಿಯ ಕಿರಣ ತೋರುತಿದೆ ನಿನ್ನ ಕಾಡಿಗೆಯ ಕಣ್ಣ...!!
ಅವಳ ಅಂದ ಚಂದಕ್ಕೆ ಯಾರು ಸಾಟಿ ಇಲ್ಲವ ಅಣ್ಣ....!
ಅವಳ ನಗುವಿನ ಸಿಂಚನಕ್ಕೆ ಸ್ವಾದ ಕಳೆದುಕೊಂಡಿದೆ ಮಾವಿನ ಹಣ್ಣ....!!

ಅವಳ ವೈಯ್ಯಾರಕೆ ಮನ ಸೋತ ಬೆಳದಿಂಗಳ ಚಂದಿರ...!
ಅವಳ ಗೆಜ್ಜೆಯ ನರ್ತನವೇ ಭುವಿಹೊಳು ಬಲು  ಸುಂದರ...!!
ಭಾವನೆಯ ಮಾತುಗಳನ್ನು ಮಾತನಾಡುವಳು ಸರ ಸರ....!
ಅವಳೇ ನನ್ನ ಪ್ರೀತಿಯ ಜೀವನದ ಬದುಕಿಗೆ  ಜೀವನಾಧಾರ...!!!!
  - ಯಮನೂರಪ್ಪ ಎಸ್ ಅರಬರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸೋಮವಾರ, ಸೆಪ್ಟೆಂಬರ್ 20, 2021

ಬಯಲ ಹಕ್ಕಿ (ಕವನ) - ಗೌತಮ್ ಗೌಡ, ಕೀರಣಗೆರೆ, ರಾಮನಗರ.

 ಬಯಲ ಹಕ್ಕಿ

ಪಂಜರದ ಕಂಬಿ ಮುರಿದು
ಆಗಸದಗಲ ರೆಕ್ಕೆ ಚಾಚುವ
ಬಯಲಕ್ಕಿಯಾದೆ!

ಅನಂತ ತಾ ಅನಂತ ಬಯಲು
ಕೇಳುವವರು ಹೇಳುವವರು ಮೊದಲಿಲ್ಲ!
ಎಷ್ಟು ಬೇಕೋ ಅಷ್ಟು ಹಾರುವೆ
ಧಣಿದರೆ ಎಲ್ಲಿ ಬೇಕೋ ಅಲ್ಲಿ ಮಲಗುವೆ!
ಕೂಗಿದರೂ ಕಿರುಚಿದರೂ
ಯಾರು ಕೇಳರು! 
ಬಟ್ಟಾ ಬಯಲು!

ಯಾರು ನನ್ನ ಕೊಂದರೂ 
ಯಾರು  ಹೆಕ್ಕಿ ತಿಂದರೂ
ಯಾರು ಕೇಳರು!
ಎಷ್ಟು ಬೇಕೋ ಅಷ್ಟು ತಿನ್ನುವೆ
ಒಂದು ತುತ್ತು ಕೂಳಿಕ್ಕುವವರೂ ಇಲ್ಲ !
ಎಷ್ಟು ಬೇಕೋ ಅಷ್ಟು ಹಾಡುವೆ
ಗಂಟಲೋಣಗಿದರೆ
ಹನಿ ನೀರು ಬಿಡುವವರೂ ಇಲ್ಲ!

ಎಷ್ಟು ಬೇಕೋ ಏನು ಬೇಕೋ
ಮಾತನಾಡುವೆ, 
ಮಾತನಾಲಿಸುವವರು ಒಬ್ಬರೂ ಇಲ್ಲ!
ಬಯಲಿನಷ್ಟು ಏಕಾಂಗಿ
ಮತ್ತೆ ಪಂಜರಸೇರಲು ವಲ್ಲದ ಮನ!

ಈ ಬಯಲಿನಲಿ 
ಎಷ್ಟು ಹಾರಿದರೇನು?
ಎಷ್ಟು ಹಾಡಿದರೇನು?
ನನ್ನದೂ ಎಂಬ ಗೂಡಿಲ್ಲ!
ನನ್ನವರು ಮೊದಲೇ ಇಲ್ಲ

ಬರೀ ಹಾರಾಟ, ಬರೀ ಹಾರಾಟ
ನನ್ನವರಿಲ್ಲ ಎಂಬ ಗೋಳಾಟ..!!
 
 - ಗೌತಮ್ ಗೌಡ
ಕೀರಣಗೆರೆ, ರಾಮನಗರ. 9902549766.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗಾದೆ : ವಿಸ್ತರಣೆ ಮತ್ತು ವಿಶ್ಲೇಷಣೆ - ಶ್ರೀಮತಿ ಸವಿತಾ ಆರ್ ಅಂಗಡಿ ಮುಧೋಳ.

ಗಾದೆ : ವಿಸ್ತರಣೆ ಮತ್ತು ವಿಶ್ಲೇಷಣೆ 

೧) ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅಲೆದಾಡಿದರಂತೆ.

 ಗಾದೆಗಳು ಹಿಂದಿನ ಕಾಲದಿಂದಲೂ ಬಂದಂತ ಒಂದು ಅನುಭವದ ಮಾತುಗಳು. ಮೊದಲಿನ ಕಾಲದಲ್ಲಿ ಹಿರಿಯರು ಯಾವುದಾದರೊಂದು  ಸಂದರ್ಭಕ್ಕೆ ತಕ್ಕಂತೆ ಮಾತನಾಡಿರುವ ರು ಅದು ನಿಜವಾಗಲೂ ಸತ್ಯವೇ ಆಗಿರುತ್ತದೆ. ಅವನ್ದು ಅನುಭವದ ಮಾತು ಗಾದೆ ಮಾತಾಗಿ ಪರಿವರ್ತನೆಗೊಳ್ಳುವುದು.
 ಉದಾಹರಣೆಗೆ ಹನುಮನ ದಿನದಲ್ಲಿ ಒಬ್ಬ ಹುಡುಗನಿಗೆ ಅವನಿಗೆ ತಕ್ಕ ಕನ್ಯೆಯನ್ನು ಹುಡುಕಬೇಕಾಗುತ್ತದೆ. ಹಾಗೆಯೇ ಅನೇಕ ಕಡೆ ವಿಚಾರ ಕೂಡ ಮಾಡಿರುವರು. ತಮಗೆ ಹೊಂದಾಣಿಕೆಯಾಗುವಂತೆ ಕಣ್ಣೀರನ್ನು ಅವರು ಹುಡುಕಾಡುತ್ತಾ ಹೋಗುತ್ತಾರೆ. ಹೀಗೆ ಎರಡು ವರ್ಷ ಕಳೆಯುವರು ಅವರಿಗೆ ತಮ್ಮ ತಮಗೆ ಸರಿಸಮನಾದ ಕನ್ಯೆ ಬೇಕಾಗಿರುವುದು ಹೀಗಾಗಿ ಅವರು ಮನೆಯಲ್ಲಿ ವಿಚಾರವನ್ನೇ ಮಾಡಿರಲಿಲ್ಲ ಒಂದು ದಿನ ತಂದೆಯ ಕಡೆಯಿಂದ ಒಂದು ದೂರದ ಸಂಬಂಧಿ ಇರುವುದು ಗೊತ್ತಾಗುವುದು ನಾಗಗಳ ತಾಯಿ ಎಂದು ವಿಚಾರಿಸಿದ ಮಧ್ಯಸ್ಥಿಕೆ ವಹಿಸುವ ವ್ಯಕ್ತಿಯು ಹೇಳವನು. ಆಗ ಆ ಹುಡುಗಿಯನ್ನು ನೋಡಲು ಹೋದಾಗ ಅವರಿಗೆ ಒಪ್ಪಿಗೆ ಆಗುವುದು ಆಗ ನಾವು ಈ ಗಾದೆ ಮಾತನ್ನು ನೆನಪು ಮಾಡಿಕೊಂಡರೆ ಅದು ನಿಜ ಆಗುತ್ತದೆ. ಅದೇನೋ ಹೇಳ್ತಾರಲ್ಲ ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅಲೆದಾಡಿದದಂತೆ ಹಾಗಾಯಿತು. ಮೊದಲಿನ ಹಿರಿಯರು ಇಂಥ ಸಂದರ್ಭl ಸರಿಯಾದ ಹೇಳಿಕೆ ಕೊಡುವದು ಸಹ ಅಷ್ಟೇ ಮುಖ್ಯ. ಇಲ್ಲದಿದ್ದರೆ . ಅತಿಯಾದ
 ಸಂದರ್ಭದಲ್ಲಿ ಆಡಿದ ಮಾತುಗಳು ಗಾದೆ ಮಾತಾಗಿ ಹೊರಬರುವವು.

 ೨) ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲಲ್ಲಾ.

 ಒಂದೊಂದು ಗಾದೆಗಳು ಒಂದೊಂದು ಅರ್ಥವನ್ನು ಕೊಡುವವು. ರೂಗಳನ್ನು ಅವಲೋಕಿಸಿ ನೋಡಿದಾಗ ಆದ ಅನುಭವಗಳು ನೆನಪಾಗುವ ವು. ಆ ಸಂದರ್ಭಕ್ಕೆ ಆ ಮಾತುಗಳು ಒಂದಕ್ಕೊಂದು  ಹೊಂದಾಣಿಕೆ ಇರುವದು. ಹೀಗೊಂದು ಗಾದೆ ನೆನಪಾಯಿತು ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲಲ್ಲ. ಈ ಮಾತನ್ನು ಯಾಕೆ ಅಂದ್ರು?.
 ಇವಾಗ ಒಂದು ಮನೆಯಲ್ಲಿ ಆ ಮನೆಯ ಜವಾಬ್ದಾರಿಯನ್ನು ಹೊತ್ತಂತ ವ್ಯಕ್ತಿಯಾಗಲಿ, ಮಹಿಳೆ ಯಾಗಲಿ, ಕಿರಿಯರಲ್ಲಿ ಹಿರಿಯರಲ್ಲಿ ಯಾರೇ ಇರಲಿ ಆ ಮನೆಯ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿರುತ್ತಾರೆ. ಒಂದು ವೇಳೆ ಅವರಿಗೆ ಏನಾದರೂ ಆರೋಗ್ಯ ಸಮಸ್ಯೆ ಅಥವಾ ಎಲ್ಲಿಯಾದರೂ ಹೋಗುವುದು ಇಂಥ ವೇಳೆಯಲ್ಲಿ ಏನಾದರೂ ಸಮಸ್ಯೆ ಬಂದರೆ ಅವರು ಇಲ್ದೇನೇ ಇರಬಹುದು ಆ ಸಂದರ್ಭದಲ್ಲಿ ಇದ್ದವರು ಮುಂದಿನ ಕಾರ್ಯವನ್ನು ನಡೆಸಿಕೊಂಡು ಹೋಗಲೇ ಬೇಕಾಗುವುದು. ಆ ಸಂದರ್ಭದಲ್ಲಿ ಈ ಮಾತನ್ನು ಅಲ್ಲಿ ಪ್ರಸ್ತಾಪ ಮಾಡಬೇಕಾಗುತ್ತದೆ ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲಲ್ಲ ಎಲ್ಲವೂ ನೀಡದೆ ನಡೆಯುತ್ತೆ ಇದ್ದವರು ಮಾಡಿಕೊಂಡು ಹೋಗಬೇಕು ಅಂತ ಈ ಗಾದೆ ಮಾತು ಅಲ್ಲಿ ಈ ಗಾದೆ ಮಾತು ಅಲ್ಲಿ ಪ್ರಸ್ತಾಪವಾಗುವುದು. ದಿನನಿತ್ಯದ ಕಾರ್ಯಗಳನ್ನು ಮತ್ತು ಯಾರಾದರೂ ಜವಾಬ್ದಾರಿ ವಹಿಸಿಕೊಂಡು ಮಾಡಲಿ ಬೇಕಾಗುವುದು ಹಾಗೆಯೇ ಮುಂದುವರಿಸಿಕೊಂಡು ಹೋಗುವರು. ಇದೆ ಅರ್ಥ ಕೊಡುವುದು ಈ ಗಾದೆ ಮಾತು.
✍️ ಸವಿತಾ  ಆರ್ ಅಂಗಡಿ  ಮುಧೋಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮರೆತೇನೆಂದರ ಮರೆಯಲೆಂಗ - ಬಸವರಾಜ ನಾಗೂರ, ಮುದ್ದೇಬಿಹಾಳ.

ಮರೆತೇನೆಂದರ ಮರೆಯಲೆಂಗ

ಮರತೇನೆಂದರ ಮರೆಯಲೆಂಗ ಗುರುನಾಥರನ್ನ
ಮಧುರ ನೆನಪಿನೊರತೆ ಬಿಟ್ಟುಹೋದ ಯೋಗಿಯನ್ನ ॥ । ಪಲ್ಲವಿ । 

ಉತ್ತಿ ಬಿತ್ತಿ ಬೆವರು ಚೆಲ್ಲಿ ಕಣಜ ತುಂಬಿದ ರೈತನನ್ನ
ಶರಣ ಗುಣದ ಬಸವ ತತ್ವದ ಸರಳ ದಾರ್ಶನಿಕನನ್ನ ॥ ।ಅನುಪಲ್ಲವಿ ।

ಹೃದಯತುಂಬ ಸವಿಜೇನ ತುಂಬಿದ ತಾಯಿಯನ್ನ
ಬಡತನವನಪ್ಪಿ ಸಂಸ್ಕಾರವ ಕಲಿಸಿದ ತಂದೆಯನ್ನ
ಸುಜ್ಞಾನ ಸದ್ವಿಚಾರ ಸಂಸ್ಕೃತಿಯರುವಿದ ಗುರುಗಳನ್ನ
ಬಣ್ಣಬಣ್ಣದ ಮಧುರ ನೆನಪು ತುಂಬಿದ ಗೆಳೆಯರನ್ನ॥ ।೧। ।ಪ।

ಕಲಕೇರಿ ಜಾತ್ರ್ಯಾಗ ಅಪ್ಪನ್ಹೆಗಲೇರಿ ನೋಡಿದ ತೇರನ್ನ
ಮಂಜನಾಥನ ಸನ್ನಿದಾನದಲನ್ನಪ್ರಸಾದದ ಸವಿಯನ್ನ
ನಡಿಗೇರಿಲಿಂಗನ ಹೊತ್ತು ಕೃಷ್ಣೆಯೊಡಲಿಗೆ ಹೋದದನ್ನ
ಮನದ ಬ್ರಾಂತಿ ಕಳಚಿದ ಗ್ರಾಮದೇವಿ ದ್ಯಾಮವ್ವನನ್ನ ॥ ।೨। ।ಪ।

ಮೊದಲ ನೋಡಿದ ಚೆಲುವಿಯ ಮಿಂಚಿನ ಕಣ್ಣನ್ನ
ಮೊದಲ ಬರೆದ ಪ್ರೇಮಪತ್ರದೆರಡು ಸಾಲುಗಳನ್ನ
ಮೊದಲಸಲ ಅರಳಿದ ಅನುರಾಗದ ಅನುಭವವನ್ನ
ಮೊದಲಸಲ ಮಳೆಯಲಿ ನೆನೆದ ಮಧುರ ಕ್ಷಣವನ್ನ ॥ । ೩। ।ಪ।

- ಬಸವರಾಜ ನಾಗೂರ, ಮುದ್ದೇಬಿಹಾಳ.


( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಬೀದರ ನಾಡು ಕಲೆ, ಸಾಹಿತ್ಯ, ಸಂಸ್ಕೃತಿ, ಧರ್ಮಗಳ ತವರೂರು. - ಡಾ.ಕೆ.ಎಸ್.ಬಂಧು, (ಕಾರ್ಯಕ್ರಮದ ವರದಿ)

ಬೀದರ ನಾಡು ಕಲೆ, ಸಾಹಿತ್ಯ, ಸಂಸ್ಕೃತಿ, ಧರ್ಮಗಳ ತವರೂರು. 
ಹುಮನಾಬಾದ :
ಬೀದರ ನಾಡು ಕಲೆ,ಸಾಹಿತ್ಯ,ಸಂಸ್ಕೃತಿ,ಧರ್ಮಗಳ ತವರೂರು.ಇಲ್ಲಿ ಜನ್ಮತಾಳುವುದು ಪುಣ್ಯ,ಇಂತಹ ನೆಲದಲ್ಲಿ ಜನಿಸಿದ ನಾವೇ ದನ್ಯರು. ಹೀಗಾಗಿ ಈ ಭಾಗದ ಅನೇಕ ಸಾಹಿತಿಗಳು ಸಮಾಜಿಕ ಸೇವೆ, ಸಾಹಿತ್ಯ,ಶಿಕ್ಷಣ,ಸಂಘಟನೆಗಳಲ್ಲಿ ಕೆಲಸ ಮಾಡುತ್ತಿರುವುದು ಸಂತಸ ತಂದಿದೆಯೆಂದು ಕಲಬುರಗಿಯ ಹಿರಿಯ ಸಾಹಿತಿ ಡಾ.ಕೆ.ಎಸ್.ಬಂಧು ಅವರು ನುಡಿದರು.
     ನಗರದ ಸಾಯಿ ಬಡಾವಣೆಯ ಕೃಷ್ಣ ಕುಂಜದಲ್ಲಿ ಜರುಗಿದ ಧರಿ ನಾಡು ಕನ್ನಡ ಸಂಘ ಮತ್ತು ಕರ್ನಾಟಕ ಜಾನಪದ ಪರಿಷತ್ತು ಸಂಯುಕ್ತವಾಗಿ ಏರ್ಪಡಿಸಿದ ಧರಿನಾಡಿನ ಸಾಹಿತಿ- ಕವಿ- ಕಲಾವಿದರ ಜೀವನ ಸಾಧನೆ: ಅವಲೋಕನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ  ತಮ್ಮ ವೃತ್ತಿ ಜೀವನದೊಂದಿಗೆ ಸಾಮಾಜಿಕ ಕಾರ್ಯ ಮಾಡುತ್ತಲೇ ಸಾರಿಕಾ ಗಂಗಾರವರು ಸಾವಿತ್ರಿಬಾಯಿ ಫುಲೆ ಅವರ ಚಿಂತನೆಗಳು ಇಡೀ ಬೀದರ ಜಿಲ್ಲಾದ್ಯಾಂತ
ಪಸರಿಸುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
         ಸಾಹಿತಿ-ಚಿಂತಕ ಡಾ.ಗವಿಸಿದ್ಧಪ್ಪ ಪಾಟೀಲ ರವರು ಮಾತನಾಡಿ ಸಾರಿಕಾ ಗಂಗಾ ಅವರ ಜೀವನ ಹೋರಾಟಮಯ ಬದುಕು,ಓದುವ ಅಭಿರುಚಿ,ಶಿಕ್ಷಕ ವೃತ್ತಿಯಲ್ಲಿ ಮಾಡಿದ ಸಾಧನೆಯ ಸೇವೆ,ಸಾಹಿತ್ಯ ರಚನೆಯಲ್ಲೂ ಹಿಂದೆ ಬೀಳದೆ ಸಂಘಟಕಿಯಾಗಿ, ಹತ್ತು ಹಲವು  ಕಾರ್ಯಗಳನ್ನು ಮಾಡುತ್ತಿರುವ ಸಾರಿಕಾ ಗಂಗಾ ರವರ ಸೇವೆ ಸ್ಮರಣೀಯವಾದದ್ದು ಎಂದು ಬಣ್ಣಿಸಿದರು.
  ‌ಡಾ.ಕೆ.ಚಂದ್ರಕಾಂತ ದುಬಲಗುಂಡಿಯ ಗಂಗಾ ಮನೆತನದ ಇತಿಹಾಸ ತಿಳಿಸಿ, ಮಾತಾಡಿದರು.ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಆನ್ ಲೈನ್ ಪ್ರಬಂಧ ಸ್ಪರ್ಧೆ ಯಲ್ಲಿ  ಪ್ರಶಸ್ತಿ ಪಡೆದ ವೀರಂತರೆಡ್ಡಿ ಜಂಪಾ ಮತ್ತು ರಾಜ್ಯ ಸಂಘಟನೆಯ ಸದಸ್ಯತ್ವ ಪಡೆದ ಭುವನೇಶ್ವರಿಯವರನ್ನು ಸನ್ಮಾನಿಸಲಾಯಿತು. ಗೀತಾ ರೆಡ್ಡಿ ಹಾಡನ್ನು ಹಾಡಿ ರಂಜಿಸಿದರು.ಸಾಹಿತಿ ಡಾ.ಜಯದೇವಿ ಗಾಯಕವಾಡ ಇದ್ದರು.ಅಧ್ಯಕ್ಷತೆಯನ್ನು ಯುವ ಸಾಹಿತಿ ಕೆ.ವೀರಾರೆಡ್ಡಿ ವಹಿಸಿ ಸಾರಿಕಾ ಅವರ ವ್ಯಕ್ತಿತ್ವ ಸೃಜನಶೀಲ ಬರವಣಿಗೆ ಅಪಾರವೆಂದರು.
ಜೈಶ್ರೀ ಕಾಳಗಿ ಪ್ರಾರ್ಥನಾಗೀತೆ ಹಾಡಿದರು.ಸ್ವಾಗತ ಪ್ರಾಸ್ತಾವಿಕವನ್ನು ಕಜಾಪ ಅಧ್ಯಕ್ಷ ಶರದಕುಮಾರ ನಾರಾಯಣಪೇಟ್ಕರ, ಭುವನೇಶ್ವರಿ ನಿರೂಪಿಸಿದರು,ಧರಿನಾಡು ಸಂಘದ ಅಧ್ಯಕ್ಷ ಸಿದ್ಧಾರ್ಥ ಮಿತ್ರಾ ವಂದಿಸಿದರು.ಮಲ್ಲಿಕಾರ್ಜುನ ಸಂಗಮಕರ್,ಈಶ್ವರ ತಡೋಳಾ,ಉಮೇಶ ಮಠದ,ಬಸವರಾಜ ದಯಾಸಾಗರ,ಶಶಿಧರ ಗಾವಲ್ಕರ,ನಂದಕುಮಾ ಮರೂರ,ಕರುಣಾದೇವಿ,ಅರುಣಾ ಶಿಂಧೆ,ಸುಜಾತ ಬಡಿಗೇರ,ಶ್ರೀದೇವಿ, ನೀಲಾವತಿ ಶರದ್,ವಾಣಿ ಭಯನೂರ,ಜ್ಯೋತಿ ಕೊಟ್ಟರಗಿ,ಶ್ವೇತಾರೆಡ್ಡಿ,ಉಮಾದೇವಿ ಹರಸೂರ,ವೈಶಾಲಿ ನಂದಗಿ,ಮಹಾದೇವಿ  ಶೀಲ
ಶೀಲವಂತ, ಮ್ಯಾಡಮ್,ಪ್ರೇಮಾ ನೆಲವಾಳೆ,ಅರವಿಂದ ಹುಡಗಿಕರ್,ಡಾ.ಪೀರಪ್ಪ ಸಜ್ಜನ,ರಮೇಶ ಸಜ್ಜನ,ಗಣೇಶ ರಾಠೋಡ,ಗೇ ಮು ಚವ್ಹಾಣ,ಶಿವು ಪವಾರ,ಅಶೋಕ ಹಾಲಹಳ್ಳಿ, ವಿಜಯಕುಮಾರ ಚಟ್ಟಿ,ಸಂಜನಾ ಕನಕಟಕರ್ ಇತರರು ಇದ್ದರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ದೊಡ್ಡಯ್ಯನ ಪ್ರಿಯ ಚಿಕ್ಕಯ್ಯ (ಸಣ್ಣ ಕತೆ) - ಭರತ್ ಕೆ ಆರ್ ಕಾರಭ,

ದೊಡ್ಡಯ್ಯನ ಪ್ರಿಯ ಚಿಕ್ಕಯ್ಯ 

     ಒಂದಾನೊಂದು ಹಳ್ಳಿ ಆ ಹಳ್ಳಿಯಲ್ಲಿ ದೊಡ್ಡಯ್ಯ ಮತ್ತು ಚಿಕ್ಕಯ್ಯ ಎಂಬ ಇಬ್ಬರು ಗೆಳೆಯರಿದ್ದರು. ಅವರೇನು ಬಡವರೇನಲ್ಲಾ ಅವರ ಬಳಿ ತಾತನು ಸಂಪಾದಿಸಿದ ಹೊಲ ತೋಟ ಗದ್ದೆಗಳಿದ್ದವು. ಆದರೆ ನಾಲ್ಕು ಜನರಂತೆ ನಾವು ಚೆನ್ನಾಗಿ ದುಡಿದು ಬಾಳಬೇಕೆಂಬ ಆಸೆ ಅವರದ್ದು.ಅಂತೆಯೇ ಇಬ್ಬರು ಮಾತನಾಡಿಕೊಂಡು ನಮ್ಮ ಬಳಿ ಭೂಮಿ ಇದೆ ನೀರಿಗೆನು ತೊಂದರೆ ಇಲ್ಲಾ ಎಂದು ತೀರ್ಮಾನಿಸಿ ವರ್ಷಕ್ಕೆ ಫಲಕೊಡುವಂತಹ ದಾಳಿಂಬೆಯನ್ನು ಬೆಳೆಯೋಣವೆಂದು  ಸಸಿಗಳನ್ನು ನೆಡಿಸಿದರು.ಚಿಕ್ಕಯ್ಯನ ಹೆಂಡತಿ ತುಂಬಾ ಒಳ್ಳೆಯವಳು ರೀ ಬೆಳಿಯೋ ಬೆಳೆಯಲ್ಲಿ ನಷ್ಟ ಆದ್ರೆ ಏನು ಮಾಡೋದು ಅಂದ್ಲು.ಅದುಕ್ಕೆ ಚಿಕ್ಕಯ್ಯನು ನೋಡು ಸಸಿಗಳನ್ನು ನಮ್ಮ ಮಕ್ಕಳಂತೆ ನೋಡಿಕೊಂಡು ಆರೈಕೆ ಮಾಡಿದ್ರೆ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತೆ ತಿಳಿತಾ ಓಗಿ ಕ್ಯಾಮೆ ನೋಡು ಏನು ಚಿಂತೆ ಮಾಡಬೇಡ ಅಂತಾನೆ. ಚಿಕ್ಕಯ್ಯನು ಗಿಡಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಮುಸ್ಸಂಜೆಯ ಹೊತ್ತಲ್ಲಿ ನೀರು ಹಾಯಿಸುತ್ತಿದ್ದ ಆರು ತಿಂಗಳಿಗೆ ಎರಡು ಭಾರಿ ಗೊಬ್ಬರವನ್ನು ಹಾಕಿಸುತ್ತಿದ್ದ .ಗಿಡಗಳ ಅಕ್ಕ ಪಕ್ಕ ಬಂದ ಕಳೆಯನ್ನು ತೆಗಿಸಿ ಮಣ್ಣನ್ನು ಹದಗೊಳಿಸುತ್ತಿದ್ದ ಆದರೆ ದೊಡ್ಡಯ್ಶನು ಗಿಡಗಳಿಗೆ ಸರಿಯಾಗಿ ಪಾಲನೆ ಪೋಷಣೆ ಮಾಡುತ್ತಿರಲಿಲ್ಲ.ನೀರನ್ನು ಮಠ ಮಠ ಮಧ್ಯಾನ ಹಾಯಿಸುತ್ತಿದ್ದಾ.ಗಿಡಗಳಿಗೆ ಗೊಬ್ಬರವನ್ನು ಸರಿಯಾಗಿ ಹಾಕಿಸುತ್ತಿರಲಿಲ್ಲ. ಗಿಡದ ಬುಡದಲ್ಲಿ ಬಂದ ಕಳೆಯನ್ನು ತೆಗೆಸದೆ ಮಣ್ಣನ್ನು ಹದ ಗೊಳಿಸುತ್ತಿರಲಿಲ್ಲ. ಸೋಮಾರಿಯಾಗಿದ್ದನು ಆಡಿ ಗೂಡಿ ಐದನೇ ವರ್ಷಕ್ಕೆ ಕಾಲಿಟ್ಟಿತು ಚಿಕ್ಕಯ್ಯನು ದಾಳಿಂಬೆಯನ್ನು ಕುಯ್ಯಲು ಪ್ರಾರಂಭಿಸಿದನು ಆದರೆ ದೊಡ್ಡಯ್ಯ ನ ಗಿಡಗಳಲ್ಲಿ ಹಣ್ಣುಗಳು ಬಿಡಲೇ ಇಲ್ಲ ಇನ್ನು ಚಿಕ್ಕ ಗಿಡಗಳಂತೆ ಕಾಣಿಸುತ್ತಿದ್ದವು. ಕೆಲವು ಬಾಡಿ ಬತ್ತಿದಂತಿದ್ದವು ಇನ್ನೂ ಕೆಲವು ಹುಳುಗಳು ತಿಂದು ಹಾಳಾಗಿದ್ದವು. ಅತ್ತ ಚಿಕ್ಕಯ್ಯನು ಅತ್ತ ಬಂದ ಹಣ್ಣಿನ ಫಲವನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಿ ಬರುತ್ತಿದ್ದಾ ತುಂಬಾ ಲಾಭವೂ ಆಯಿತು ತನ್ನ ಹೆಂಡತಿಗೆ ಮೈತುಂಬಾ ಒಡವೆ ಮಾಡಿಸಿ ಹಾಕಿಸಿದನು.ಅದನ್ನು ನೋಡಿದ ದೊಡ್ಡಯ್ಶನು ಹೆಂಡತಿ ನಿಮಗೇನು ಬುದ್ಧಿ ಇಲ್ವಾ ಆ ಚಿಕ್ಕಯ್ಯ ನ ನೋಡಿ ಕಲತ್ಕೊಳಿ. ಅಂತ ಬಯ್ಯೋಕೆ ಶುರು ಮಾಡಿದ್ಲು ಅದುಕ್ಕೆ ಇವನು ನೋಡು ಇನ್ನೊಂದು ವರ್ಷದೊಳಗೆ ನಾನು ಕೂಡ ಹೀಗೆ ಆಗಿರ್ತೀನಿ ಅಂತ ಹೇಳಿ ಸುಮ್ಮನಾದನು.  ದೊಡ್ಡಯ್ಶನು ಚಿಕ್ಕಯ್ಯನ ಹತ್ತಿರ ಬಂದು ಅಬ್ಬಾ ಭಲೇ ಕಿಲಾಡಿ ಕಣೋ ನೀನು ಎಂತ ಲಾಭ ಪಡೆದೆ ನನ್ನುನ ನೋಡು ತುಂಬಾ ನಷ್ಟ ಆಗಿ ಅಲೆದಾಡ್ತ ಇದೀನಿ .ನೀನು ಏನು ಮಾಡಿದೆ ಸ್ವಲ್ಪ ನಂಗೂ ವಸಿ ಹೇಳು ನಾನು ಹಂಗೇ ಮಾಡ್ತೀನಿ .ಅದುಕ್ಕೆ ಚಿಕ್ಕಯ್ಯ ನೋಡು ಗಿಡಗಳಿಗೆ ಆರು ತಿಂಗಳಿಗೆ ಎರಡು ಭಾರಿ ಗೊಬ್ಬರವನ್ನು ಕೊಟ್ಟರೆ ಗಿಡಗಳಿಗೆ ಚೈತನ್ಯ ಮತ್ತು ಪೋಷ್ಟಿಕಾಂಶ ದೊರೆಯುತ್ತದೆ. ಬಂದ ಕಳೆಯನ್ನು ತಗಿಸಬೇಕು ತಗಿಸಿದ್ರೆ ಗಿಡಕ್ಕೆ ಪೋಷ್ಟಿಕಾಂಶ  ನೇರವಾಗಿ ಗಿಡಕ್ಕೆ ಮಾತ್ರ ಸೇರುತ್ತೆ  ಬಂದಂತ ಕಳೆಗಳಿಗೆ ಸಿಗೊಲ್ಲ ಗೊತ್ತಾ. ದೊಡ್ಡಯ್ಯ ಹೇಳಪ್ಪ ಕೇಳ್ತೀನಿ .ಹೂ ಸರಿ ಕೇಳುಸ್ಕೋ ಮಣ್ಣನ್ನು ಹದ ಗೊಳಿಸಿದ್ರೆ ನೀರು ಬೇಗ ಗಿಡದ ಬೇರು ಸೇರುತ್ತೆ .ಹಾಗೂ ನೀರನ್ನು ಗಿಡಮರಗಳಿಗೆ ಮಠ ಮಠ ಮಧ್ಯಾನ ಹ್ ಆಯಿಸಬಾರದು ಯಾಕೆ ಅಂದ ದೊಡ್ಡಯ್ಯ ? ಯಾಕೆ ಗೊತ್ತಾ ಆ ಸಮಯದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ಬಿದ್ದು ಉಷ್ಣಾಂಶ ಅಂದ್ರೆ ತಾಪ ಮಾನ ಹೆಚ್ಚಾಗಿರುತ್ತದೆ.ನೀರನ್ನು ಗಿಡಮರಗಳಿಗೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ.ಆದ್ರೆ ಮುಂಜಾನೆ ಮುಸ್ಸಂಜೆಯ ವೇಳೆಯಲ್ಲಿ ನೀರನ್ನು ಹಾಯಿಸಿದ್ರೆ ಗಿಡಗಳು ನೀರನ್ನು ಹಿಡಿದಿಟ್ಟುಕೊಳ್ಳುತ್ತವೆ . ಗಿಡಗಳ ಸುತ್ತ ತೇವಾಂಶ ಹಾಗೆ ಇರುತ್ತೆ ಗೊತ್ತಾ ನಾನು ಕೂಡ ಈ ಕ್ರಮವನ್ನೇ ಪಾಲಿಸಿ ಗಿಡಗಳನ್ನು ಪೋಷಣೆ ಮಾಡಿದೆ. ಅದುಕ್ಕೆ ಇಷ್ಟು ದೊಡ್ಡ ಪ್ರತಿಫಲವನ್ನು ಪಡೆದೆ .ನೀನು ಕೂಡ ಈ ರೀತಿಯಲ್ಲಿ ಮಾಡು.ಇನ್ನೊಂದು ವರ್ಷದಲ್ಲಿ ನಿನಗು ಪ್ರತಿಫಲ ಸಿಗುತ್ತೆ. ಗೊತ್ತಾಯಿತು ಬೀಡು ಹಾಗೆ ಮಾಡ್ತೀನಿ ಅಂದ ದೊಡ್ಡಯ್ಯ.ಈ ರೀತಿಯಾಗಿ ಚಿಕ್ಕಯ್ಯನು ಪರಿಹಾರ ಹೇಳಿ ಸಮಾಧಾನ ಮಾಡಿ ಹೋದನು.ದೊಡ್ಡಯ್ಶನು ಕಷ್ಟಪಟ್ಟು ದುಡಿಯ ತೊಡಗಿದ ಶ್ರಮವಹಿಸಿದ . ಅಂತೆಯೇ ಗಿಡಗಳು ಫಲ ಕೊಡಲು ಪ್ರಾರಂಭಿಸಿದವು ಬೆಳೆಯ ಲಾಭವನ್ನು ಪಡೆದನು ಚಿಕ್ಕಾಯ್ಯನಿಗೂ  ಕೂಡ ಎರಡನೇ ಭಾರಿ ಎರಡನೇ ಭಾರಿ ಫಲವನ್ನು ಕೊಡಲು ಪ್ರಾರಂಭಿಸಿದವು. ಬಂದ ಬೆಳೆಯ ಇಬ್ಬರು ಒಟ್ಟಿಗೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರತೊಡಗಿದರು. ಆದರೆ ದೊಡ್ಡಯ್ಶನ ಹೆಂಡತಿಗೆ ಮತಿಗೆಟ್ಟು ದುರಾಸೆಯುಂಟಾಗಿ . ಚಿಕ್ಕಯ್ಯನಿಗಿಂತ ಶ್ರೀಮಂತರಾಗಬೇಕು ಅಂತ ಗಂಡನ ತಲೆ ಕೆಡಿಸಲು ಮುಂದಾದಳು. ಚಿಕ್ಕಯ್ಯನು ಬಂದ ಹಣವನ್ನು ತನ್ನ ಕುಟುಂಬಕ್ಕೆ ಬೇಕಾಗುವಷ್ಟು ಇಟ್ಟುಕೊಂಡು. ಉಳಿದುದನ್ನು ಬಡವರಿಗೆ ಅನಾಥ ಮಕ್ಕಳಿಗೆ ಕೈಲಾದಷ್ಟು ಧನ ಸಹಾಯ ಮಾಡುತ್ತಿದ್ದ.ಇತ್ತ ದೊಡ್ಡಯ್ಯ ಉಳಿದ ಜಮೀನಿಗೆಲ್ಲ ದಾಳಿಂಬೆಯ ಸಸಿಯನ್ನು ನೆಡಿಸಿದನು .ಅದು ಸಾಲದೆಂದು ಬೇರೆಯವರ ಜಮೀನನ್ನು ಗುತ್ತಿಗೆ ಪಡೆದುಕೊಂಡು ಸಸಿಗಳನ್ನು ಬೆಳೆಯಲು ಪ್ರಯತ್ನ ಮಾಡಿದನು ಗಿಡಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಆದರೆ ಫಸಲು ಬರುಲು ತಡವಾಗುವುದು ಎಂದು ಗೊಬ್ಬರವನ್ನು ಆರು ತಿಂಗಳಿಗೆ ನಾಲ್ಕು ಭಾರಿ ಚಲ್ಲಿಸುತ್ತಿದ್ದನು. ನೀರನ್ನು ದಿನಕ್ಕೆ ಎರಡು ಭಾರಿ ಹಾಯಿಸುತ್ತಿದ್ದನು. ಇದರ ಪರಿಣಾಮ ಗಿಡಗಳು ಹೊಣಗಲು ಪ್ರಾರಂಭಿಸಿದವು ಇನ್ನು ಕೆಲವು ಕರಗಿ ಹೋದವು.ಇದನ್ನ ನೋಡಿದ ದೊಡ್ಡಯ್ಯ ಇನ್ನೂ ಏನು ಮಾಡೋದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯ್ತು ಎಂದು ಚಿಕ್ಕಯ್ಶನ ಬಳಿ ಹೋದ.ನೆಡೆದ ಸಂಗತಿಯನ್ನೆಲ್ಲಾ ಹೇಳಿದ. ಅಲ್ಲಾ ನಿಂಗೆ ಬುದ್ದಿ ಇಲ್ಲಾ ಅಂತ ಚಿಕ್ಕಯ್ಯ ಬಯ್ಯತೊಡಗಿದ.ಅತಿಗೊಬ್ಬರ ನೀರು ಬಿದ್ದರೆ ಗಿಡಗಳು ಉಳಿತವ ಅತಿಯಾದ ತಾಪಮಾನ ವಾದ್ರೇನೆ ನಮಿಗೆ ತಡಿಯೋಕೆ ಆಗಲ್ಲಾ ಅಂತದ್ರಲ್ಲಿ ನೀನು ಹಿಂಗೆ ಮಾಡಿದ್ದೀಯ ಎಂದು ಬುದ್ದಿ ಹೇಳಿ ಮನವರಿಕೆ ಮಾಡಿದನು .ನಂತರ ತನ್ನ ತಪ್ಪಿನ ಅರಿವಾಗಿ ಇರುವ ಗಿಡಗಳನ್ನು ಚೆನ್ನಾಗಿ ಹಾರೈಕೆ ಮಾಡ ತೊಡಗಿದನು .ಬೇರೆ ತರಹದ ಮರ ,ಗಿಡಗಳನ್ನು ಮತ್ತು ಹೂ ಗಿಡಗಳನ್ನು ಬೆಳೆಯತೊಡಗಿದ .ಬಂದ ಲಾಭದಲ್ಲಿ ಅನಾಥಾಶ್ರಮ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ, ಬಡ ಮಕ್ಕಳ ಓದಿಗೆ ಮೀಸಲಿಟ್ಟ ಮತ್ತು ತನ್ನ ಗೆಳೆಯ ಚಿಕ್ಕಯ್ಯನಿಗೆ ಗೌರವವನ್ನು ಸಲ್ಲಿಸಿದ .ಎಲ್ಲರೂ ನೆಮ್ಮದಿಯಿಂದ ಜೀವನವನ್ನು ಸಾಗಿಸತೊಡಗಿದರು...
                             _✍️ಭರತ್ ಕಾರಭ
- ಭರತ್ ಕೆ ಆರ್ ಕಾರಭ,
S/O ರಂಗಸ್ವಾಮಿ,
ಎಂಜಿನಿಯರಿಂಗ್ ವಿದ್ಯಾರ್ಥಿ,
ಕಾರೇಕೆರೆ ಊರು,
ಹಾಸನ ಜಿಲ್ಲೆ
ಮೊ:6363668307.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಪತಂಗದ ಪರಾಗಸ್ಪರ್ಶ (ಕವಿತೆ) - ಶಾಂತಾರಾಮ ಶಿರಸಿ, ಉತ್ತರ ಕನ್ನಡ.

ಪತಂಗದ ಪರಾಗಸ್ಪರ್ಶ... 

ಸೆರೆಹಿಡಿದವನಿಗೊಂದು ಶಹಬ್ಬಾಷ್.... 
ಸುಂದರವಾದ ಜೀವ ಜಾತಿಯ ವಿವಿಧ ಆಕರ್ಷಕ ಬಣ್ಣವು ಕಣ್ಣಿಗೆ ರಸದಾನಂದವ ಉಣಬಡಿಸುತ್ತಿದೆ... 
ಜೀನ್ಸಾ ದರ್ಬೇರಾ ಜಾತಿಗೆ ಸೇರಿದ ಈ ಹೂಗಳ ಮೇಲೆ ಕುಳಿತಿರುವ ಪತಂಗ ಹೂವಿಗೇ ಸಾಟಿಯಾಗಿ ತನ್ನ ವ್ಯಕ್ತಿತ್ವವನ್ನೇ ಸೌಂದರ್ಯ ಸ್ಪರ್ಧೆಗೆ ಒಡ್ಡುವಂತಿದೆ. 

ಈಗಲೂ ನಮ್ಮ ಹಚ್ಚ-ಹಸಿರ ಹಳ್ಳಿಯ ಸಿರಿಯಲ್ಲಿ ರಂಗು-ರಂಗಿನ ಪತಂಗಗಳ ಚಲನ-ವಲನ, ಪರಾಗಸ್ಪರ್ಶದ ಸವಿಯನ್ನೂ ಈಗಲೂ ಸವಿಯುತ್ತಿರುವೆವು... 
ಇಂತಹ ಚಿತ್ರಗಳು ಈಗ ಹಳ್ಳಿಗಳಲ್ಲಿ ಮಾತ್ರ ಕಾಣಸಿಗುತ್ತವೆ.
ಶ್ರಾವಣದಿಂದ ದೀಪಾವಳಿಯವರೆಗೆ ಬದುಕುವ ಮೂಲಕ
ಕಂಬಳಿ ಹುಳಗಳ ರೂಪಾಂತರದ ಪತಂಗಗಳು ಮರೆಯಾಗುತ್ತಿವೆ.
ಮತ್ತೆ ಮಳೆಗಾಲದಲ್ಲಿ ಪ್ರಕೃತಿಯಿಂದ ಬಣ್ಣವನ್ನು ಎರವಲು ಪಡೆದಂತೆ ಜನಿಸುತ್ತವೆ.. 

ಆಹಾ! ಮನಸ್ಸಿಗೆ ಅತೀ ಆನಂದ.
ನಿತ್ಯ ಬದುಕಿನಲಿ ನಾವು ಸವಿಯುತ್ತಿರುವೆವು ಇವುಗಳ ಅಂದ-ಚಂದ... 
- ಶಾಂತಾರಾಮ ಶಿರಸಿ, 
ಉತ್ತರ ಕನ್ನಡ... 
8762110543
7676106237.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗಜಲ್ ಪ್ರಕಾರಗಳು ಮತ್ತು ಆಯಾಮಗಳು ಕುರಿತ ಉಪನ್ಯಾಸ ಕಾರ್ಯಕ್ರಮ(ವರದಿ) - ತನುಶ್ರೀ ಪ್ರಕಾಶನ, ಸೂಲೇನಹಳ್ಳಿ.

ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ವತಿಯಿಂದ ಆಯೋಜಿಸಿದ್ದ ಆರನೇ ಆನ್‌ಲೈನ್ ಗಜಲ್ ಪ್ರಕಾರಗಳು ಮತ್ತು ಆಯಾಮಗಳು ಕುರಿತು ಉಪನ್ಯಾಸ ಕಾರ್ಯಕ್ರಮ
ದಿ :೨೦/೦೯ /೨೦೨೧ ರಂದು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ವತಿಯಿಂದ ಆಯೋಜಿಸಿದ್ದ ಆನ್‌ಲೈನ್ ಗಜಲ್ ಪ್ರಕಾರಗಳು ಮತ್ತು ಆಯಾಮಗಳು ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಆದರಲ್ಲಿ ಉಪನ್ಯಾಸ ನೀಡಲು ಶ್ರೀಯುತ ಜಭೀವುಲ್ಲಾ ಎಂ ಆಸದ್ ಮೊಳಕಾಲ್ಮೂರು ಗಜಲ್ ಕವಿಗಳು ತಮ್ಮ ಉಪನ್ಯಾಸದಲ್ಲಿ ಗಜಲ್ ಪ್ರಕಾರಗಳು ಎಷ್ಟು ಇವೆ ಎಂಬುದನ್ನು ಕೂಲಂಕಷವಾಗಿ ವಿಶ್ಲೇಷಣೆ ನೀಡಿ ಆದರ ಪ್ರಕಾರಗಳು ಆದ ಕಾಫಿಯಾನ, ಸೂಫಿ, ಆಜಾಧಿ, ಇನ್ನೂ ಮುಂತಾದ ಪ್ರಕಾರಗಳ ಬಗ್ಗೆ ಅರ್ಥ ಆಗುವ ಶೈಲಿಯಲ್ಲಿ ಹೇಳಿಕೊಟ್ಟರು. ಆನಂತರ ಪ್ರಾಸ್ತಾವಿಕ ನುಡಿಯಲ್ಲಿ ಎಸ್. ರಾಜುಕವಿ ಸೂಲೇನಹಳ್ಳಿ ಸಂಸ್ಥಾಪಕರು ಮಾತನಾಡಿ ನಮ್ಮ ಪ್ರಕಾಶನ ಆರಂಭ ಆಗಿ ಕಳೆದ ಆರು ತಿಂಗಳಿಂದ ಸತತ ಜ್ಞಾನಧಾರೆ ಎರೆಯುವ ವಿಚಾರಗಳನ್ನು ನುರಿತ ಸಾಹಿತಿಗಳಿಂದ ನೀಡುತ್ತಿದ್ದೇವೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜ್ಞಾನ ಒದಗಿಸುವ ಕಾರ್ಯ ಮಾಡುತ್ತೇವೆ ನಮ್ಮೊಂದಿಗೆ ನೀವು ಇರಬೇಕು ಮಿತ್ರರೇ ಎಂದು ಮಾತು ಮುಗಿಸಿದರು.

 ಸಂಸ್ಥೆಯ ರಾಜ್ಯ ಸಂಚಾಲಕರು ಆದ ಶ್ರೀಯುತ ಕೆ. ಶ್ರೀಧರ್ ಅವರು ತಮ್ಮ ನುಡಿಗಳಲ್ಲಿ  ನಮ್ಮ ಸಂಸ್ಥೆಯು ಉತ್ತಮ ಗುರಿ ಮತ್ತು ಉದ್ದೇಶಗಳು ಹೊಂದಿದೆ ತಮ್ಮೆಲ್ಲರ ಸಹಕಾರ ಮೂಲಕ ಉತ್ತಮ ಸ್ಪರ್ಧೆಯನ್ನು ಕಾರ್ಯಕ್ರಮ ನೀಡುತ್ತಾ ಬಂದಿದೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ನುಡಿದರು. ಕಾರ್ಯಕ್ರಮದ ನಿರೂಪಣೆ ಉದಯ್ ಬಡಿಗೇರ್ ಮೈದೂರು ಅಚ್ಚುಕಟ್ಟಾಗಿ ನೇರವೇರಿಸಿ ಕೊಟ್ಟರು ಕಾರ್ಯಕ್ರಮ ನೀರ್ವಹಣೆ ಕಾರ್ತಿಕ್ ಆಚಾರ್ಯ ಎಂ ಕಲ್ಲಹಳ್ಳಿ ಮಾಡಿದರು ವಂದನಾರ್ಪಣೆ ಕು. ನೇತ್ರಾವತಿ ನೆಲ್ಲಿಕಟ್ಟೆ ನೇರವೇರಿಸಿದರು. ಈ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿ ಸುಮಾರು ೩೦ ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...