ಮಂಗಳವಾರ, ನವೆಂಬರ್ 30, 2021

ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತರಾದ ಡಾ॥ವೆಂಕಟೇಶ್ ಬಡಿಗೇರ್ ಅವರಿಗೆ ಅಭಿನಂದನಾ ಸನ್ಮಾನ

ವಿಜಯನಗರ ಜಿಲ್ಲಾ ರಕ್ಷಣಾ ವೇದಿಕೆ (ರಿ) ಹೊಸಪೇಟೆಯ ವತಿಯಿಂದ ಲಿಂಗೈಕ್ಯ ಡಾ ಸಂಗನಬಸವ ಮಹಾಸ್ವಾಮಿಗಳು ಹಾಗೂ ಪುನೀತ್ ರಾಜ್ ಕುಮಾರ್ ನುಡಿನಮನ ಕಾರ್ಯಕ್ರಮದಲ್ಲಿ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತರಾದ 
ಶ್ರೀ ಡಾ ವೆಂಕಟೇಶ್ ಬಡಿಗೇರ್.ವಿಜಯನಗರ ಜಿಲ್ಲೆಯ ಹೆಮ್ಮೆಯ ಪುತ್ರರಾಗಿದ್ದಾರೆ.ಪ್ರಸ್ತುತ ಅಕ್ಷಯ ಕಾಲೇಜ್ ವಾಣಿಜ್ಯ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಅತಿಥಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಜೊತೆಗೆ ಕಲ್ಲು ತೇರಿನ ಕುಸುರಿ ಎಂಬ ಸಂಪಾದಿತ ಕೃತಿ ಹೊರತಂದಿದ್ದಾರೆ ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಾತಾ ಮಂಜಮ್ಮ ಜೋಗುತಿ ಅವರಿಂದ ಹಾಗೂ ಗಣ್ಯ ಮಾನ್ಯರ ಸಮ್ಮುಖದಲ್ಲಿ ಶ್ರೀ ವೆಂಕಟೇಶ್ ಬಡಿಗೇರ್ ರವರಿಗೆ ಸನ್ಮಾನಿಸಲಾಯಿತು.

💐💐💐ಮಾನ್ಯರಿಗೆ ವಿಚಾರ ಮಂಟಪ ಸಾಹಿತ್ಯ ಪತ್ರಿಕಾ ಬಳಗದ ಪರವಾಗಿ ತುಂಬು ಹೃದಯದ ಅಭಿನಂದನೆಗಳು. 💐💐💐

ಮಂಗಳವಾರ, ನವೆಂಬರ್ 23, 2021

ಬೆಳದಿಂಗಳ ಬಿಸಿಲು ತೀಕ್ಷ್ಣ(ಕವಿತೆ) - ಪ್ರೊ.ಗಂಗಾರಾಂ ಚಂಡಾಲ ಮೈಸೂರು.

ಅಮಾವಾಸ್ಯೆಯನ್ನು ಕೊಲ್ಲಬಹುದು
ಅಮಾವಾಸ್ಯೆ ಆಲಸ್ಯ ಬೆಳದಿಂಗಳ
ಹೆಗಲೆರಿದೆ.
ಅಮಾವಾಸ್ಯ ಅಟ್ಟಹಾಸಕ್ಕೆ ನೊಂದ ಬೆಳದಿಂಗಳ ಹೃದಯ.
ಅಮಾವಾಸ್ಯೆ ಕೊಲ್ಲುವುದು ಅಷ್ಟು ಸುಲಭವಲ್ಲ.
ಬೆಳದಿಂಗಳ ಬೆಳಕಿನಲ್ಲಿ ಧ್ಯಾನ ಕೂತು ಲೋಕಗಳ ಸುತ್ತಿ.
ಬೆಳಕು ಹರಿದಾಗ ಮಣ್ಣಿನೊಂದಿಗೆ ಬೆರೆತು ಹೋಗಿದ್ದಾರೆ.
ಎಂಟೆದೆಯ ಅಮಾವಾಸ್ಯೆ ಪತ್ತೆದಾರಿ
ಸೂರ್ಯನೆದುರು.
ಕೊಲೆಗಡುಕರು ಅಮಾವಾಸ್ಯೆ ತಿಥಿಯಂದು ಎತ್ತಿದ ಕೈ.
ಉರಿವ ಏಕಾಂತ ದೀಪ ಬೆಳದಿಂಗಳು
ಕತ್ತಲೆ ಮಾರುಣ ಹೋಮ.
ಗಾಡ ಕತ್ತಲೆಗೆ ಅಧಿಪತಿ ಯಜಮಾನ
ಬೆಳಕಿನ ಗುಲಾಮನಾಗುವ ಇಷ್ಟವಿಲ್ಲ
ಬೆಳಕಿನ ಎರವಲು ಪಡೆದ ಅಮಾವಾಸ್ಯೆ.
ಕತ್ತಲೆಗೆ ಕೈಕಾಲು ಕಾಲುದಾರಿ ಯಾತ್ರೆ
ಆಯಾಸಗೊಂಡ ದೀರ್ಘ ರಾತ್ರಿ
ಕೊಲ್ಲಬಹುದು ಬೆಳದಿಂಗಳ ಒಂದು ಇರುಳನ್ನು.
ಅಮಾವಾಸ್ಯೆ ಸಾಕ್ಷಿ ಎಂಬಂತೆ ಚಂದ್ರ
ಅಮಾವಾಸ್ಯೆಗೆ ಸೆಡ್ಡು ಹೊಡೆದು ಇರುಳು.
ಒಂಟಿ ನಕ್ಷತ್ರ ಅಳುವುದು ಪೆಟ್ರೋಲ್ ಬೆಲೆ ಏರಿಸಿದ್ದ ಕುರಿತು.
ಕುಂಟುತ್ತಾ ತೆವಳುತ್ತಾ ಕಪ್ಪಿಟ ಮೋಡದ ಬದುಕು.
ದೀರ್ಘ ರಾತ್ರಿ ಆಡಳಿತ ಭರವಸೆಯ
ಮೋಡಿಗೆ ಸಿಲುಕಿ.
ಸೂರ್ಯ ಉದಯ ಚಿಂದಿ ಆಯುವ
ಆಡಳಿತಗಾರರು ಮಲಗಿರಲು.
ಕೂರ್ಮ ನಡಿಗೆ ಕತ್ತಲೆಡೆಗೆ ದಿಕ್ಸೂಚಿ ಭಾಷಣ.
ಕತ್ತಲೆ ಸರಿಸುವ ನಾಯಕ ಅಮಾವಾಸ್ಯೆ ತಿಥಿಯಂದು ಊಟ
ಬೆಳದಿಂಗಳು ನೊಂದವರಿಗೆ ಬೆಣ್ಣೆ.
ನಿಂಬೆ ಹಣ್ಣು ಕೊಟ್ಟು ಕಷ್ಟ ನಿವಾರಣೆ
ಹೊರಗಿರುವ ನಕ್ಷತ್ರ ರಾಶಿ ಫಲ ರಕ್ತ ಮಾಂಸ ಬೇಡುವವರು ಯಾಗದೆಸರಲ್ಲಿ.
ಓಟು ಬ್ಯಾಂಕ್ ಎಂಬ ಕೋಮುಗಲಭೆ ಅಮಾವಾಸ್ಯೆ ತಿಥಿಯಂದು.
ಕೋಟ್ಯಾಂತರ ನಕ್ಷತ್ರ ಬೆಳಕು ಕಾಣದೆ ಹಸಿವು ಮಕ್ಕಳಲ್ಲಿ.
ಬಿರುಗಾಳಿ ಬೀಸಿ ಗುಡುಗು ಸಿಡಿಲು ಮಿಂಚು ಸಾಲು ಸಾಲು ಚಿತ್ರಗಳು.
ಕತ್ತಲೆ ಪರದೆ ಸರಿಯಿತು ಐದು ವರ್ಷ ವಯಸ್ಸು ದಾಟಿ.
ಅಮಾವಾಸ್ಯೆ ಅಮಾನತು ಮಾಡಲಾಗಿದೆ.
ಬೆಳದಿಂಗಳಿಗೆ ಎಫ್ಐಆರ್ ದಾಖಲಾಗಿದೆ
ಜೈ ಎಂದವರಿಗೆ ಪ್ರಶಸ್ತಿ ಪ್ರಧಾನ.
ಚಂದ್ರನು ಸಾಕ್ಷಿ ಹಗಲಿಗೆ ಆಡಳಿತಕ್ಕೆ.
ದಾರಿ ತೋರುವ ದೀಪ ಪ್ರಜಾಪ್ರಭುತ್ವ.
ಓಟು ಹಾಕದೆ ಮಾಡಬಹುದಾದ ಉಸಾಬರಿ ಬೇಕು.
ಖಾತೆಗೆ ಹದಿನೈದು ಲಕ್ಷ ಕೈಗೊಂದು ಉದ್ಯೋಗ ಭಕ್ತರಿಗೆ.
ಅಮಾವಾಸ್ಯೆ ಕಳೆದು ಬೆಳದಿಂಗಳು ಬಂದಂತೆ ಆಡಳಿತ ಬದಲು.
- ಪ್ರೊ.ಗಂಗಾರಾಂ ಚಂಡಾಲ ಮೈಸೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನಾ ಕೇಳದ ಹುಟ್ಟಿಗೇಕೆ ಶಿಕ್ಷೆ?? (ಕವಿತೆ) - ಡಿ.ಶಬ್ರಿನಾ ಮಹಮದ್ ಅಲಿ.

ನಾ ಕಣ್ಣುಬಿಡುವ ಮೊದಲೇ
ಹೆತ್ತವರಿಂದ ತಿರಸ್ಕಾರವಂತೆ!
ನಡೆದಾಡುವ ಮೊದಲೇ
ನಾ ಹೊರೆಯಾದೆನಂತೆ!
ಮಾತನಾಡುವ ಮೊದಲೇ
ನಾ ಅಪ್ರಯೋಜಕಿಯಂತೆ!
ಅಕ್ಷರ ಕಲಿಯುವ ಮೊದಲೇ
ನಾ ಅಬಲೆಯಂತೆ!
ನಾ ಕೇಳದ ಹುಟ್ಟಿಗೆ 
ನಮಗೇಕೆ ಇಂಥಾ ಶಿಕ್ಷೆ.?

ಚಾಕರಿಗಾಗಿ ಹೆಣ್ಣಂತೆ
ನೌಕರಿಗಾಗಿ ಗಂಡಂತೆ!
ಕಥೆ ಪುರಾಣಗಳಲಿ 
ಹೆಣ್ಣು ಆದಿಶಕ್ತಿಯಂತೆ!
ನೆಲ ಉತ್ತಿಬಿತ್ತಿದರೂ
ಸಂಸಾರದ ನೊಗ ಹೊತ್ತರೂ
ಭೂಮಿ ಮೇಲಿನ ನಾವು
ಕೇವಲ ಗೃಹಿಣಿಯಂತೆ!
ನಾ ಕೇಳದ ಹುಟ್ಟಿಗೆ 
ನಮಗೇಕೆ ಇಂಥಾ ಶಿಕ್ಷೆ?

ನಮ್ಮ ಹುಟ್ಟನ್ನೆ
ಹಿಯ್ಯಾಳಿಸಿದವರಿಗೆ
ಕಾಮ ನೀಗಿಸಲು
ನಮ್ಮ ದೇಹ ಬೇಕಂತೆ!
ಹಸುಗೂಸದಾರೆನಂತೆ!
ಬಾಲಕಿಯಾದರೆನಂತೆ!
ಹುಚ್ಚಿಯಾದರನೆಂತೆ!
ಒಟ್ಟಿನಲಿ ಹೆಣ್ಣಾದರಾಯಿತಂತೆ!
ನಾ ಕೇಳದ ಹುಟ್ಟಿಗೆ 
ನಮಗೇಕೆ ಇಂಥಾ ಶಿಕ್ಷೆ?

ನಮ್ಮ ನೋವಿನ ಕಂಬನಿ
ಸೀರೆಯ ಸೆರಗು ಬಲ್ಲದು!
ಅಡುಗೆಮನೆಯ ಒಲೆ ಬಲ್ಲದು!
ಬಚ್ಚಲುಮನೆಯ ಗೋಡೆ ಬಲ್ಲದು!
ಮಲಗುವ ದಿಂಬುಗಳು ಬಲ್ಲವು!
ಪಕ್ಕದಲ್ಲಿರುವ ನೀವು ಬಲ್ಲದಾದಿರಿ!
ಇದನ್ನು ನೀವು ನಿಮ್ಮ 
ಗೆಲವು ಎಂದು ಬೀಗುವಿರಿ...!
ನಾ ಕೇಳದ ಹುಟ್ಟಿಗೆ
ನಮಗೇಕೆ ಇಂಥಾ ಶಿಕ್ಷೆ..?
 - ಡಿ.ಶಬ್ರಿನಾ ಮಹಮದ್ ಅಲಿ, ಶಿಕ್ಷಕಿ, ಚಳ್ಳಕೆರೆ, ಚಿತ್ರದುರ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮಾನವಿಯತೆ ಮೂಲ ಶೀ ಕನಕದಾಸರು (ಲೇಖನ) - ಅಶ್ವಜೀತ ದಂಡಿನ , ಬೀದರ.

ಮನುವಿನ ಶಾಸನದಿಂದ ವೈದಿಕಶಾಹಿಗಳ ಉಪಟಳ ಹೆಚ್ಚಾಗಿ ಜಾತಿ-ಮತ, ಬೇಧ-ಭಾವ, ಡಾಂಭಿಕತೆ, ಮೂಢನಂಬಿಕೆ, ಅಜ್ಞಾನ, ಅಂದಕಾರ ತುಂಬಿ ಕೊಳೆತು ನಾರುತ್ತಿವ ಈ ಸಮಯದಲ್ಲಿನ ತಾರತಮ್ಯ ಮತ್ತು ಜಾತಿಯ ಹೆಸರಿನಲ್ಲಿ ಬಡವರ ಮೇಲೆ ನಡೆಯುತ್ತಿರುವ ಅನ್ಯಾಯ ಕಂಡು "ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ..?" ಎಂದು ಸವಾಲನ್ನು ಎಸೆಯುವುದರ ಮೂಲಕ ಸಾಂಪ್ರದಾಯಿಕ ಜಾತಿಯನ್ನು ಬೋಧಿಸುವ ವೈದಿಕಧರ್ಮ ಮತ್ತು ವೈದಿಕಶಾಹಿಗಳ ದೌರ್ಜನ್ಯ ದಬ್ಬಾಳಿಕೆಯನ್ನು ಖಾರವಾಗಿ ಟೀಕಿಸಿದ್ದವರು ದಾಸರಲ್ಲಿ ಶ್ರೇಷ್ಠ ಶ್ರೀ ಕನಕದಾಸರು.

         ಇವರು ಕ್ರಿ.ಶ.1508 ರಲ್ಲಿ ಹಾವೇರಿ ಜಿಲ್ಲೆ,ಸಿಗ್ಗಾವಿ ತಾಲೂಕಿನ ಬಾಡಯಂಬ ಗ್ರಾಮದಲ್ಲಿ  ಕುರುಬ ಗೌಡ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಇವರ ಮೂಲ ಹೆಸರು ತಿಮ್ಮಪ್ಪನಾಯಕ ಎಂದಾಗಿತ್ತು. ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆಯನ್ನು ನೀಡಿದ ಕನಕದಾಸರು ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು.

         ಒಮ್ಮೆ ಕನಕದಾಸರು ಉಡುಪಿಯ ಶ್ರೀಕೃಷ್ಣನ ದೇವಸ್ಥಾನಕ್ಕೆ ಕೃಷ್ಣನ ದರ್ಶನ ಪಡೆಯಲು ಹೋದಾಗ, ಅವರು ಶೂದ್ರರರಾದ ಒಂದೇ ಒಂದು ಕಾರಣಕ್ಕೆ ಅಲ್ಲಿನ ಪುರೋಹಿತ ಶಾಹಿ ಮತ್ತು ವೈದಿಕ ಸಂಪ್ರದಾಯಸ್ಥ ಬ್ರಾಹ್ಮಣರು ಅವರನ್ನು ಜಾತಿಯ ಹೆಸರಿನಲ್ಲಿ ಅವಮಾನಗೊಳಿಸಿ  ದೇವಸ್ಥಾನದಿಂದ ಹೊರ ತಳಿದರು.  ಇದು ಇತಿಹಾಸದ ಪುಟಗಳಲ್ಲಿ ಇಂದಿಗೂ ಕಪ್ಪು ಚುಕ್ಕಿಯಾಗಿ ಉಳಿದಿದೆ.

         ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೆ ಕಳೆದು ಹೋದವು. ಅದರು ಇನ್ನೂ ಈ ಜಾತಿ ವ್ಯವಸ್ಥೆಯ ಅನಿಷ್ಟ ಪದ್ಧತಿ ಕಳೆದಿಲ್ಲ. ಕೆಲವೊಂದು ಕಡೆ ಸುಧಾರಣೆ ಕಂಡಿದೆ ಸುಳ್ಳಲ್ಲ. ಅದರೆ ಜಾತಿ ವ್ಯವಸ್ಥೆಯ ಹೆಸರಿನಲ್ಲಿ ಮುಗ್ಧ ಬಡಜನರ ಮೇಲೆ ನಿರಂತರ ಅನ್ಯಾಯ ಅತ್ಯಾಚಾರ ನಡೆಯುತ್ತಿರುವುದು ಪ್ರಸ್ತುತ ಸಮಾಜದಲ್ಲಿ ಕಾಣುತ್ತಿದೆವೆ. ದಿನ ಬೆಳಗಾದರೆ ಸಾಕು ಟಿವಿಗಳಲ್ಲಿ ಪತ್ರಿಕೆಗಳಲ್ಲಿ ನಿರಂತರ ಸುದ್ದಿಯಾಗುತ್ತಿವೆ. 

         ಇತ್ತೀಚಿಗೆ ಸೆಪ್ಟೆಂಬರ್ 25ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ದಲಿತ ಬಾಲಕ ದೇವಾಲಯ ಪ್ರವೇಶಿಸಿದ ಎನ್ನುವ ಕಾರಣಕ್ಕೆ ಗ್ರಾಮಸ್ಥರು ಸಾರ್ವಜನಿಕವಾಗಿ ಶಿಕ್ಷೆ ವಿಧಿಸಿ ದಂಡ ಹಾಕಿರುವುದು.  ಗುಂಡ್ಲುಪೇಟೆಯಲ್ಲಿ ದಲಿತ ವ್ಯಕ್ತಿಯೊಬ್ಬ ದೇವಾಲಯ ಪ್ರವೇಶಿಸಿದ್ದ ಎನ್ನುವ ಒಂದೇ ಕಾರಣಕ್ಕೆ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಷ್ಟೇ ಅಲ್ಲದೆ ಬೆತ್ತಲೆಯಾಗಿ ಮೆರವಣಿಗೆಯನ್ನೂ ಕೂಡ ಮಾಡಿದ್ದರು.
         
         ಕ್ರಿ.ಶ 2018 ಮೇ 18ರಂದು ನಮ್ಮ ದೇಶದ ಪ್ರಪ್ರಥಮ ಪ್ರಜೆಯಾದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪುರಿ ಜಗನ್ನಾಥ್ ಮಂದಿರಕ್ಕೆ ಹೋದಾಗ ಅವರು ದಲಿತರೇನ್ನುವ ಕಾರಣಕ್ಕೆ ಪುರಿ ಜಗನ್ನಾಥ್ ಮಂದಿರದಲ್ಲಿ ಪ್ರವೇಶ ನಿರಾಕರಿಸಲಾಯಿತ್ತು.

         ಯಾವ ಜನರು ಅಂದು ಕನಕದಾಸರಿಗೆ ಶೂದ್ರನೆಂದು ಉಡುಪಿಯ ದೇವಾಸ್ಥಾನದ ಒಳಗೆ ಬಿಡಲಿಲ್ಲವೊ ಅದೇ ಜನರು ಸ್ವಾತಂತ್ರ ಭಾರತದ ಪ್ರಥಮ ಪ್ರಜೆ ರಾಷ್ಟ್ರಪತಿ ಅವರನ್ನು ಪುರಿ ಜಗನ್ನಾಥ್ ಮಂದಿರದಲ್ಲಿ ಪ್ರವೇಶಿಸದಂತೆ ತಡೆದರು. ಈ ವಿಷಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ವಿಶ್ವ ಸಂಸ್ಥೆಯ ಮುಂದೆ ತಲೆ ತಗ್ಗಿಸುವಹಾಗೆ ಮಾಡಿತು.
         
        ಕ್ರಿ.ಪೂ.185 ರಿಂದ  ಇಲ್ಲಿಯವರೆಗೆ ಮನು ಧರ್ಮಶಾಸ್ತ್ರದ ಶಾಸನವನ್ನು ಮನುವಾದಿಗಳು ಒಂದಲ್ಲ ಒಂದು ರೀತಿಯಲ್ಲಿ ಕಾಯ್ದು ಕೊಂಡು ಬಂದಿದ್ದಾರೆ. ಇಂತಹ ಮನುವಾದವನ್ನು  ಮಟ್ಟಹಾಕಲು ಮತ್ತೊಬ್ಬ ಕನಕದಾಸರು ಹುಟ್ಟಿ ಬರಬೇಕಾಗಿದೆ. ಇಂದಿನ ದಿನಗಳಲ್ಲಿ ಯುವಕರು ಅವರ ತತ್ವ ಸಿದ್ಧಾಂತ ಮೈಗೂಡಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕ್ಕಾಗಿದೆ. ಕುಲ ಮತ ಧರ್ಮಗಳು ತೊರೆದು ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಸಿಖ್, ಸಾಯಿ, ಇಸಾಯಿ ಇತ್ಯಾದಿ ಹಲವಾರು ಧರ್ಮಿಯರೆಲ್ಲ ಒಂದುಗೂಡಿ ಸಹೋದರ ಸಹೋದರಿಯರಂತೆ ಐಕ್ಯತೆ ಭಾವವನ್ನು ಬೆಳೆಸಿಕೊಂಡು   ಬದುಕಬೇಕಾಗಿದೆ. ಮತ ಎನ್ನುವ ಸಹವಾಸವನ್ನು ತೊರೆದು ಎಲ್ಲರು ವಿಶ್ವ ಮಾನವರಾಗಿ ಪ್ರಬುದ್ಧ ನಾಡನ್ನು ಕಟ್ಟಬೇಕ್ಕಾಗಿದೆ. 

    -  ಅಶ್ವಜೀತ ದಂಡಿನ , ಬೀದರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸೋಮವಾರ, ನವೆಂಬರ್ 22, 2021

ಕಲರ್ಫುಲ್ ಲಡ್ಡು (ಕವಿತೆ) - ಅಂಜನ್ ಕುಮಾರ್.

ಕಲರ್ ಕಲರ್ ಫುಲ್ ಲಡ್ಡು
ಕಲರ್ ಕಲರ್ ಫುಲ್ ಲಡ್ಡು
ಬಾ ಬಾರೆ ನನ್ನ ಮುದ್ದು
ನೀ ನನ್ನ ಹೃದಯ ಕದ್ದು
ನಾ ಲವ್ ನಲ್ಲಿ ಬಿದ್ದು 
ಕೊಡು ಬಾರೆ ಈ ಮನಸಿಗೆ ಮದ್ದು

ನಿನ್ನ ನಗುವೇ ನನಗೆ
ಒಂದ್ ತರ ಸುಂದರ 
ನಿನ್ನ ಕಂಡು ಈ ಕಣ್ಣಿಗೆ
ಕಣ್ ಒಡೆಯುವ ಅವಸರ
ನೀ ಬಾ ಬಾರೆ ನನ್ನ ಲಡ್ಡು ಮುದ್ದು ಪೆದ್ದು.

ನಿನ್ನ ಮಾತೇ ನನಗೆ
ಒಂಥರಾ ಸಿಹಿ ಜೀವಮೃತ
ನೀ ಕದ್ದ ಈ ಮನಸಿಗೆ
 ನಿನ್ನ ಹೆಸರೇ ಹೃದಯದ ಬಡಿತ 
ನೀ ಬಾ ಬಾರೆ ಲಡ್ಡು ನನ್ನ ಮುದ್ದು ಪೆದ್ದು

ನೀ ಇಲ್ಲದ ಆ ಕ್ಷಣ
ನನ್ನ ಮನಸಲ್ಲಿ ಒಂಥರಾ ತಲ್ಲಣ
ನೀ ಸುಂದರ ಹೂ ಬಣ್ಣ
ಈ ಮನಸ್ಸಿಗೆ ನಿನ್ನ ಪ್ರೀತಿಯೇ ಬಣ್ಣ
ನೀ ತೊರೆದ ಕ್ಷಣ ಈ ದೇಹ ಸೇರಲಿ ಮಶಣ.! 
- ಅಂಜನ್ ಕುಮಾರ್ (ಕವಿ ಕಾವ್ಯ ಕಲ್ಪನೆ)- 7483146697.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮುಗ್ಧ ಮನದ ಹೂಗಳು (ಕವಿತೆ) - ಭವ್ಯ ಟಿ.ಎಸ್.

ಬಂದಿದೆ ಬಂದಿದೆ ಮಕ್ಕಳ ದಿನ
ಪುಟಾಣಿಗಳ ಸಂಭ್ರಮದ ಶುಭದಿನ
ಚಾಚಾ ನೆಹರು ಹುಟ್ಟಿದ ಸುದಿನ
ಹಿರಿಯರೂ ಮಕ್ಕಳಾಗಲು ಬಯಸುವ ದಿನ

ಎಳೆಯರು ನಾವು ಮುಗ್ಧಮನದ ಹೂಗಳು
ಕಪಟ ವಂಚನೆಗಳರಿಯದ ಬಿಳಿಹಾಳೆಗಳು
ಸ್ವಚ್ಛಂದವಾಗಿ ಹಾರಾಡುವ ಬಾನಾಡಿಗಳು
ದೇಶದ ಭವ್ಯ ಭವಿಷ್ಯದ ಕನಸುಗಳು

ಕೈ ಕೈ ಹಿಡಿದು ನಲಿದು ಆಡುವ ಗೆಳೆಯರು
ಭೇದಭಾವ ಮರೆತ ಸಮತೆಯ ಬಾಂಧವರು
ಹಾರುವೆವು ಭಾನುವಿನೆತ್ತರಕೆ ನಾವೀಗ ಏರಿ
ಬೆರೆಯುವೆವು ಜಾತಿಮತಗಳ ಗಾಳಿಗೆ ತೂರಿ

ಬಂಧಿಸದಿರಿ ನಮ್ಮನು ಒತ್ತಡಗಳ ಬೇಲಿಯೊಳಗೆ
ಕುಂದಿಸದಿರಿ ನಮ್ಮ ಶಕ್ತಿಗಳ ಕತ್ತಲೆಯೊಳಗೆ
ದಂಡಿಸದಿರಿ ಅರಿಯದೆ ಮಾಡಿದ ತಪ್ಪುಗಳಿಗೆ
ಪೀಡಿಸದಿರಿ ಮೃದು ಹೃದಯಗಳ ಶೋಷಣೆಗಳಿಗೆ

ಪ್ರೀತಿ ಮಮತೆಯ ಬಯಸುವ ಮುದ್ದು ಮಕ್ಕಳು
ಹಾಲಿನಂತಹ ನಿಷ್ಕಲ್ಮಶ ಭಾವದ ಕೂಸುಗಳು
ಆಟಪಾಠಗಳಲಿ ಒಂದಾಗುವೆವು ನಗುನಗುತಾ 
ಸಾಗಿಹೆವು ಹೊಸದಿಗಂತದೆಡೆಗೆ ಮೇರೆ ಮೀರುತಾ
- ಭವ್ಯ ಟಿ.ಎಸ್. ಶಿಕ್ಷಕರು.ಹೊಸನಗರ, ಶಿವಮೊಗ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಚಿತ್ರಗವನ - ಕಟ್ಟೆ ಎಂ. ಎಸ್. ಕೃಷ್ಣಸ್ವಾಮಿ, ಮಂಡ್ಯ.

ಕಿಟಿಕಿ ಕುಡ್ಯಯ ಮೇಲೆ ಕುಳಿತಿರುವ
ಜೋಡಿ ಶುಕಗಳ ಕಂಡು ಏನ ಬಯಸಿದೆ,,
ಒಳಚಿತ್ತದಿ ಯಾರ ನೂತ  ನೆನದು
ಯಾರ ಆಗಮನಕೆ ಕಾದಿದೆ,,//೧//

ಅಂದದ ಹಸುರು ಕೆಂಪು ಮಿಶ್ರಿತ
ಲಂಗ ರವಿಕೆ ದವಣಿ ತೊಟ್ಟು,,
ಕೈಗಳ ಜೋಡಿಸಿ ಕುಳಿತ ನೋಟದಿ
ಚಂದದ ಕರಕೆ ಕಂಕಣವ ತೊಟ್ಟು,,//೨//

ಕಾಮನಬಿಲ್ಲಂತ ಉಬ್ಬಿನ ಸೊಬಗಿನ
ಸೌಂದರ್ಯದ ಚಂದದ ಗೊಂಬೆಯೇ,,
ಕಿವಿಗೆ ಹರಳಿನ ಚಿನ್ನದ ಓಲೆಯ
ಧರಿಸಿರುವ ಅಂದಗಾತಿಯೇ,,//೩//

ಯಾರೇ ನೀನು ಸ್ವರ್ಗ ಗೌರಿ
ನಗು ಮೊಗದ ಚೆಲುವ ಸುಂದರಿಯೇ,,
ಹಣೆಯಲಿ ಸಿಂಧೂರ ತಿಲಕವಿಟ್ಟು
ಅರಳಿದ ನಯನದ ಸಿಂಗಾರಿ ಬಂಗಾರಿಯೇ,,//೪//
- ಕಟ್ಟೆ ಎಂ. ಎಸ್. ಕೃಷ್ಣಸ್ವಾಮಿ, ಮಂಡ್ಯ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

ಫಲಿತಾಂಶ ಪ್ರಕಟಣೆ (ಹತ್ತನೇ ಪಾಕ್ಷಿಕ ಅವಧಿ) - ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.

ಸ್ಪರ್ಧೆಯ ವಿವರ :  "ಪ್ರತಿ ಹದಿನೈದು ದಿನಕ್ಕೊಮ್ಮೆ  ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ಬ್ಲಾಗ್ ನಲ್ಲಿ ಅತಿ ಹೆಚ್ಚು ವಿಕ್ಷಕರನ್ನು (views) ಪಡೆದ ಒಬ್ಬರನ್ನು ವಾರದ ಉತ್ತಮ ಬರಹಗಾರ/ಬರಹಗಾರ್ತಿ ಎಂದು ಗುರುತಿಸಿ  ಗೌರವಿಸಿ ಪ್ರಮಾಣ ಪತ್ರ ನೀಡಲಾಗುವುದು" ಎಂದು ಈ ಹಿಂದೆ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು ಅದಕ್ಕೆ ಸಂಭಂಧಿಸಿದಂತೆ ಅತಿ ಹೆಚ್ಚು ವೀಕ್ಷಕರನ್ನು‌ ಪಡೆದಿರುವ ಬರಹಗಾರರನ್ನು ಈ ದಿನದ ಗೌರವಕ್ಕೆ ಆಯ್ಕೆ ಮಾಡಲಾಗಿದೆ...
 
 ಶ್ರೀ ಬಿ. ಕುಬೇರಪ್ಪ (ಮುತ್ತುಕಂದ)
 ಇವರ 
"ಅಪ್ಪು ಗೆ ಬರವಣಿಗೆಯ ಅಪ್ಪುಗೆ" ಎಂಬ ಹೆಸರಿನ‌ ಕವಿತೆ ದಿನಾಂಕ : ೦೧.೧೧.೨೦೨೧ ರಿಂದ ೧೫.೧೧.೨೦೨೧  ರ ನಡುವಿನ ೧೦ ನೇ ಪಾಕ್ಷಿಕ ಅವಧಿಯಲ್ಲಿ  ವಿಚಾರ ಮಂಟಪ ಸಾಹಿತ್ಯ ಜಾಲ ಪತ್ರಿಕೆಯ ಜಾಲತಾಣದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಪಡೆದಿದ್ದು ಇವರನ್ನು ಈ ವಾರದ ಅತಿ ಹೆಚ್ಚು ವೀಕ್ಷಕರನ್ನು ಪಡೆದ ಉತ್ತಮ ಬರಹಗಾರರು ಎಂದು ಗುರುತಿಸಿ ಗೌರವಿಸಿ ಅಭಿನಂದನಾ ಪತ್ರವನ್ನು ನೀಡಲಾಗಿದೆ. 
 
ಇವರಿಗೆ ವಿಚಾರ ಮಂಟಪ ಬಳಗದ ಸಮಸ್ತ ಓದುಗರ, ಬರಹಗಾರರ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಹಾಗೂ  ಶುಭಹಾರೈಕೆಗಳು. 💐💐💐💐💐


(ನಿಮ್ಮ ಬರಹ ಗಳ  ಪ್ರಕಟಣೆಗಾಗಿ ಸಂಪರ್ಕಿಸಿ :
9448713659 ಸಂಪಾದಕರು ವಿಚಾರ ಮಂಟಪ ಸಾಹಿತ್ಯ ಪತ್ರಿಕೆ, (ವಾಟ್ಸಪ್ ಮಾತ್ರ)).

ಕವಿ ಮಾನ್ಯ (ಕವಿತೆ) - ಜಿ.ಟಿ.ಆರ್. ದುರ್ಗ, ಬಂಗಾರಪೇಟೆ.

ಸಾಹಿತ್ಯ ಬರೆಯುವರ ಕೈಯಲ್ಲಿದೇ....
ಅದರಲ್ಲಿ ಬರೆಯಬೇಕು ಸತ್ಯ ಒಂದಿದೇ...
ನಿತ್ಯದ ಉಸಿರಂತೆ ಗಾಳಿಯಂತಾಬೇಕು
ಬೆಳಕನು ಕೊಡುವ ಸೂರ್ಯನಂತಿರಬೇಕು

ರವಿ ಕಾಣದನ್ನು ಕವಿ ಕಂಡು ಬರೆಯುವ
ಜಗದಲ್ಲಿನ ಕುರುಹುಗಳ ಹುಡುತಲಿರುವ
ನಿಗುಢವಾದ ವಿಷಯವ ಲಿಖಿತದಿ ಮುದ್ರಿಸುವ
ಅಕ್ಷರದಲ್ಲಿ ಚಿತ್ರಿಸುವ ಮನಸು ಶುಭ್ರ ಮಾಡುವ

ಎಲ್ಲರಲ್ಲು ಒಂದೊಂದು ನೋವುಗಳ ಕಂಡು
ಪದಗಳ ಪದ್ಯದಲ್ಲಿ ಸ್ವರ ರಾಗವನ್ನು ಕಂಡು
ಕಲ್ಲಲ್ಲಿ ಕೆತ್ತುವಂತ ಶಿಲೆಯಂತೆ ರೂಪಿಸುವ
ಪ್ರಕೃತಿ ನಾಚಿಸುವಂತ ಹಾಡೊಂದು ಬರೆಯುವ

ಕವಿ ವರ್ಮನ ಕಲ್ಪನೆ ತಿಳಿದವರಿಲ್ಲ
ಜಗಕೆ ಬೆಳಕು ಕೊಡುವ ಸೂರ್ಯ ಚಂದ್ರರೆಲ್ಲ
ದಿನವು ಪೃಥ್ವಿ ಕಾಯುಂತೆ ಲೋಕ ಚಿಂತನೆ
ಕವಿಯ ಬರಹದಲ್ಲಿ ಜನರ ಜ್ಞಾನ ಚಿಂತನೆ

ಯಾರಿಗೂ ಕೆಟ್ಟದನ್ನು ಆಲೋಚಿಸದ ಕಲ್ಪನೆ
ಇರಿವೆಂಭತ್ತು ಕೋಟಿ ಜೀವ ಕೇಳುವಂತ ಸತ್ಯನೆ
ಬರೆಯವ ಕವಿಯ ಬೆಳಕಿಗೆ ತರುವ ಮಹಾನೀಯ
ಬರಲಿ ಸಾಹಿತ್ಯದ ಅರಮನೆಯ ಕವಿಮಾನ್ಯ
- ಜಿ. ಟಿ. ಆರ್. ದುರ್ಗ, ಜಿ ಹೆಚ್ ಎಲ್ , ಬಂಗಾರಪೇಟೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ದಾಸಶ್ರೇಷ್ಠ (ಕವಿತೆ) - ಮಧುಮಾಲತಿ ರುದ್ರೇಶ್, ಬೇಲೂರು.

ಶ್ರೇಷ್ಠರಲ್ಲಿ ಶ್ರೇಷ್ಠ ದಾಸ ನೆನಿಸಿದೆˌˌ
 ಹರಿಭಕ್ತಿಗೆ ಮಿಗಿಲಿಲ್ಲವೆಂದರುಹಿದೆˌˌˌ

 ಕನಕ-ಪುರಂದರರು ದಾಸ ಶ್ರೇಷ್ಠರೊಳುˌ
 ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳು ˌˌˌˌ

ಕುಲ ಕುಲವೆಂದು ಹೊಡೆದಾಡದಿರೆಂದು 
ಸಮರ ಸಾರಿದಿರಿ ದಿಟತನದಿ ಅಂದುˌˌˌ

 ತಿರುಪತಿ ಆರಾಧ್ಯನ ಕೃಪಾಸಿಂಧು ˌˌ
ಹೆತ್ತವರ ಪ್ರೀತಿಯ ತಿಮ್ಮಪ್ಪನೆ ಅಂದುˌˌˌ

 ಮೋಹನ ತರಂಗಿಣಿ ರಾಮಧಾನ್ಯಚರಿತೆ
 ಅರಳಿದವು ಹರಿಭಕ್ತಿಸಾರ ನಳಚರಿತ್ರೆ ˌˌˌˌ

ಬಾ ರಂಗ ಎನ್ನ ಮನಕೆ ಹೃದಯ ಸದನಕೆˌˌ
 ಹಾಡಿ ಕರೆದಿರಿ ಬಿಡದೆ ಹರಿಯನು ಮನಕೆ ˌˌˌ

ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇˌˌˌ
 ಹರಿದಿದೆ ಹರಿಭಕ್ತಿಯ ಭಾವಲಹರಿಯೇˌˌˌ

 ಬೆಳಗಲಿ ಮನುಕುಲವ ಕನಕನ ಸಂದೇಶˌˌ
 ಅಳಿಯಲಿ ಕುಲಹಿರಿದೆಂಬ ಮದದ ವಿಷ ˌˌˌ
- ಮಧುಮಾಲತಿ ರುದ್ರೇಶ್ ಬೇಲೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ದಾಸ ಶ್ರೇಷ್ಠ (ಕವಿತೆ) ಡಾ. ಸುರೇಶ್ ಕಲಾಪ್ರಿಯಾ.

ತಿರುಗಿಸಲು ನಾನಾರು....? 
ನಿಮ್ಮಂತೆ ಸಾಮಾನ್ಯ...! 
ದೇವನನ್ನು ತಿರುಗಿಸಲು ಧೈರ್ಯವಾವುದು ಇಲ್ಲಿ? 
ಮನದ ಭಕ್ತಿಯು ಸೋಕಿ ಗೆದ್ದಿತವನ..! 

ತಿಮ್ಮಪ್ಪನಾಗಿ ಹುಟ್ಟಿದೆನು ನಾನಾಗ
ಕನಕವಾಯಿತು ನಾಮ ಧನಕನಕ ಸೋಕಿ! 
ಸಾಮಾನ್ಯರೊಳಗೊಬ್ಬ  ಸಾಮಾನ್ಯ ನಾನು 
ಶ್ರೇಷ್ಠರಾಗಿಸಿದಿರೆನ್ನ ದಾಸನೆನುತಾ

ದರುಶನಕೆ ಹಾತೊರೆದು 
ಅಲೆದಲೆದು ನಾ ಸೋತೆ  
ಕೇಶವನ ಹೊತ್ತು ಕಾಗಿನೆಲೆಯಲ್ಲಿ ನಿಂತೆ 
ಪುಣ್ಯವಾಯಿತು ಭೂಮಿ ಪಾದ ಧೂಳಿನಿಂದ 

ಮನದ ಮಾತನ್ನು ನುಡಿದೆ 
ನೆಲೆ ಅರಿತು ನಡೆಯಿರೆಂದೆ 
ಅನುಸರಿಸುವವಗಾಯ್ತು  ಅದುವೇ ಪಾಠ ಅನುಸರಿಸದವರಿಗದು ಕೊಂಕು ನೋಟ 

ಸಕಲರೆಲ್ಲರೂ ಜಗದ ಕುಲದ ನೆಲೆಯನು ಅರಿತು ನಡೆದರೆ ಕಾಣುವುದು ನಿಜದ ಸ್ವರ್ಗ 
ದಾಸನಾಗಿಯೇ ನಾನು ನುಡಿದ ಮಾತನು ನಂಬಿ
ನಡೆದವರು ಪಡೆವರು ಮುಕ್ತಿ ಮಾರ್ಗ
- ಡಾ. ಸುರೇಶ್ ಕಲಾಪ್ರಿಯಾ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮಕ್ಕಳ ಸ್ವಭಾವ ಮತ್ತು ತಂದೆ ತಾಯಿಯ ಪ್ರೀತಿ - ರಾಜು ಬೈರೆಡ್ಡಿ ಗೋಗಿ.

ಮಕ್ಕಳು ಎಂದರೆ  ಹೂ ತೋಟದಲ್ಲಿರುವ ಮೊಗ್ಗುಗಳಂತೆ ನಾವು ಜೋಪಾನವಾಗಿ ನೋಡಿಕೊಳ್ಳಬೇಕು ಏಕೆಂದರೆ ಅವು ಮುಂದಿನ ನಮ್ಮ ಭವ್ಯ ಭಾರತದ ಪ್ರಜೆಗಳು. ಮಕ್ಕಳು ಎಂದರೆ ದೇವರ ಸಮಾನ ಅವರು ಯಾವತ್ತಿಗೂ ಕೂಡ ಸುಳ್ಳು ಮಾತನ್ನು ಆಡಲು ಹಿಂಜರಿಯುತ್ತಾರೆ ಈಗಿನ ಮಕ್ಕಳು ಬರೀ ಮೊಬೈಲ್ ಫೋನ್ಗಳನ್ನು ಹಿಡಿದು ಅದರಲ್ಲಿ ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ  ಪಾಲಕರಂತೆ ಮಕ್ಕಳು ಕೂಡ ಅವರನ್ನೇ ಅನುಸರಿಸುತ್ತಾರೆ ನೀವು ಪುಸ್ತಕ ಹಿಡಿದು ಓದುತ್ತಾ ಕುಳಿತರೆ ನಿಮ್ಮ ಮಕ್ಕಳು ಕೂಡ ಪುಸ್ತಕವನ್ನು ಹಿಡಿಯುತ್ತಾರೆ ನೀವು ಮೊಬೈಲ್ ಫೋನ್ ಹಿಡಿದುಕೊಂಡು ಕುಳಿತರೆ ಮಕ್ಕಳ ಕೂಡ ಫೋನನ್ನು ಹಿಡಿದುಕೊಂಡು ಕೊಡುತ್ತಾರೆ ನಿಮ್ಮ ಮಕ್ಕಳು ನಿಮ್ಮ ಮಾತನ್ನು ಕೇಳುವುದಿಲ್ಲ ಆದರೆ ನಿಮ್ಮನ್ನು ಅನುಸರಿಸುತ್ತಾರೆ ಹಿಂದಿನ ಕಾಲದಲ್ಲಿ ಮಕ್ಕಳು ಬುಗುರಿ ಚಿನ್ನಿದಾಂಡು ಕುಂಟೆಬಿಲ್ಲೆ ಗೋಲಿ ಇನ್ನಿತರ ಆಟಗಳನ್ನು ಮೈದಾನದಲ್ಲಿ ಆಡುತ್ತಿದ್ದರು ಆದರೆ  ಈಗಿನ ಮಕ್ಕಳು ಬರೆ ಮೊಬೈಲ್ ಫೋನ್ನಲ್ಲಿ ವಿಡಿಯೋಗೇಮ್ ಆಡುವುದರ ಮೂಲಕ ತಮ್ಮನ್ನು ತಾವೇ ಹಾಳುಮಾಡಿಕೊಂಡು ತಮ್ಮ ಗ್ರಹಿಕೆಯನ್ನು ಕೂಡ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಒಬ್ಬ ಹುಡುಗ ಶಾಲೆಗೆ ಹೋಗುತ್ತಿರಬೇಕಾದರೆ ಅವನು ಮೊಬೈಲ್ ಫೋನನ್ನು ಮನೆಯಲ್ಲೇ ಬಿಟ್ಟು ಹೋಗಬೇಕಾದರೆ ಅವನಿಗೆ ದಾರಿಯ ಮಧ್ಯೆ ಫೋನ್ ಬಿಟ್ಟಿರುವುದನ್ನು ನೆನಪಿಸಿಕೊಳ್ಳುತ್ತಾನೆ ಆಗವನು ಹಿಂದುರಿಗಿ ಮೊಬೈಲನ್ನು ತೆಗೆದುಕೊಂಡು ಮರಳಿ ಮತ್ತೆ ತರಗತಿಗೆ ಹಿಂದಿರುಗುತ್ತಾನೆ ಇದರಿಂದಲೇ ನಾವು ತಿಳಿದು ಕೊಳ್ಳಬೇಕಾದದ್ದು ಏನೆಂದರೆ ಮೊಬೈಲ್ ಫೋನ್ ಇಲ್ಲದೆ ನಮ್ಮ ಜೀವನವೇ ಇಲ್ಲ ಎಂಬಂತಾಗಿದೆ ಅದಕ್ಕಾಗಿ ಪೋಷಕರು ಮಕ್ಕಳಿಗೆ ಆ ಚಟವನ್ನು ಬಿಡಿಸಿ ಅವರಿಗೆ ಓದಲು ಒಳ್ಳೆಯ ಪುಸ್ತಕ ಒಳ್ಳೆ ಕಥಾಸಂಕಲನ ಒಳ್ಳೆಯ ಕಾದಂಬರಿ ದಿನನಿತ್ಯದ ದಿನಪತ್ರಿಕೆ ಇನ್ನಿತರ ಹಲವಾರು ಪುಸ್ತಕಗಳನ್ನು ಅವರಿಗೆ ಕೊಡಬೇಕು ಏಕೆಂದರೆ ಮಕ್ಕಳು ನಮ್ಮ ಮುಂದಿನ ಭವ್ಯ ಭಾರತದ ಸಂಸ್ಕೃತಿ ಪರಂಪರೆ ಪ್ರಜಾಪ್ರಭುತ್ವವನ್ನು ಉಳಿಸಲು ಅವರಿಗೆ ಆ ಜ್ಞಾನ ಅತ್ಯವಶ್ಯಕ ಬರಿ ನೀವು ಮನೆಯ  ಮಕ್ಕಳಾಗದೆ.  ನಿಮ್ಮ  ತಂದೆ-ತಾಯಿಯ ಮಕ್ಕಳಾಗದೆ ದೇಶದ ಮಕ್ಕಳಾಗಿ ಭಾರತಮಾತೆಯ ಮಕ್ಕಳಾಗಿ ದೇಶದ ಆಚಾರ ವಿಚಾರ ಬಗ್ಗೆ ಚಿಂತನೆ ಮಾಡಿ ತಂದೆ-ತಾಯಿಯರನ್ನು ದೇವರನ್ನು ಕಾಣಲು ತಂದೆ-ತಾಯಿ ನಮಗೆ ದೇವರು ಕೊಟ್ಟ ವರ ಅವರನ್ನು ನಾವು ಬಚ್ಚಿಟ್ಟುಕೊಂಡು ನಮ್ಮ ಮನದಂಗಳದಲ್ಲಿ ಕಾಪಾಡಿಕೊಳ್ಳಬೇಕು ಅವರು ನಿಮ್ಮನ್ನು ಎಳೆಯ ವಯಸ್ಸಿನಿಂದ ಹಿಡಿದು ಮುಪ್ಪಿನವರೆಗೆ ನಿಮ್ಮ ಭುಜಕ್ಕೆ ಭುಜ ಕೊಟ್ಟು ನಿಮ್ಮನ್ನು ಸಾಧನೆಯ ಹಾದಿಯತ್ತ ಕೊಂಡೊಯ್ಯಲು ಅವರು ಹಗಲಿರುಳು ಶ್ರಮಿಸಿ ನಮ್ಮನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡಿ ಅವರು ನಮ್ಮಲ್ಲಿ ಖುಷಿಯನ್ನು ಕಾಣುತಾರೆ ಆಗ ನಾವು ಅವರನ್ನು ಅವರ ಮುಪ್ಪಿನ ಸಮಯದಲ್ಲಿ ಅವರನ್ನು ಅವರು ನಮಗೆ ಹೇಗೆ ನೋಡಿಕೊಂಡಿದ್ದಾರೆ ಹಾಗೆ ನಾವು ಅವರಿಗೆ ಮಕ್ಕಳಂತೆ ಕಾಣಬೇಕು ಅವರನ್ನು ಆಶ್ರಮಕ್ಕೆ ಸೇರಿಸಲಾಗಿದೆ ನಿಮ್ಮ ಮನೆಯಲ್ಲಿ ಅವರನ್ನು ಸಾಕಿ ಸಲುಹಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ನೀವು ಚೆನ್ನಾಗಿ ನೋಡಿಕೊಂಡರೆ ನಮ್ಮ ದೇಶದಲ್ಲಿ ಯಾವ ವೃದ್ಧಾಶ್ರಮಗಳ ಅವಶ್ಯಕತೆ ಇರುವುದಿಲ್ಲ ಬರಿ ನೆನಪು ಮಾತ್ರ ಅದಕ್ಕಾಗಿ ತಂದೆ-ತಾಯಿಯರನ್ನು ನೋಯಿಸದೆ ಅವರ ಮಾತಿಗೆ ಮತ್ತು ಅವರ ಆಸೆಯನ್ನು ಪೂರೈಸಲು ನಾವು  ಹಗಲಿರುಳು ಶ್ರಮಿಸಿ ಅವರಿಗೆ ನಾವು ಮುಖದಲ್ಲಿ ಮಂದಹಾಸವನ್ನು ಮೂಡಿಸುವುದು ನಮ್ಮ ಆಧ್ಯ ಕರ್ತವ್ಯ ಆ ಕರ್ತವ್ಯವನ್ನು ನಾವು ನೀವು ತಪ್ಪದೆ ಮಾಡೋಣ ಮತ್ತೆ ತಂದೆ-ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳೋಣ ಎಂದು ಈ ಮೂಲಕ ಪ್ರತಿಜ್ಞೆ ಮಾಡೋಣ ಮಕ್ಕಳು ನಮ್ಮಪ್ಪ ನಮ್ಮ ಆಸೆ ಪೂರೈಸು ಎಂದು ಸದಾ ಕನಸು ಕಾಣುತ್ತಿರುವ ನನ್ನ ತಂದೆ-ತಾಯಿಯರಿಗೆ ನಾನು ಹೇಳುವುದಿಷ್ಟೇ ಚಿಂತೆ ಮಾಡಬೇಡಿ ಅಮ್ಮ ಮಗ ಹಿಮಾಲಯ ಪರ್ವತದೇತ್ಖರಕ್ಕೆ ಬೆಳೆದು ಎಲ್ಲರಿಂದಲೂ ಒಳ್ಳೆಯದನ್ನು ಸ್ವೀಕರಿಸುತ್ತಾನೆ.
- ರಾಜು ಬೈರೆಡ್ಡಿ ಗೋಗಿ, ತಾ/ ಶಹಾಪುರ ಜಿ/ ಯಾದಗಿರಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹೃದಯ ಚೂರಾಯಿತು (ಕವಿತೆ) - ಶ್ರೀ ಇಂಗಳಗಿ ದಾವಲಮಲೀಕ.

ಯಾಕೋ ನನಗೆ ಕುಡಿಯಬೇಕೆನಿಸಿತ್ತು ಮದ್ಯ
ಕುಡಿಯಲೆಂದು ಹೊರಟೆ ಅಂಗಡಿಯತ್ತ
ಅದುರ ತೊಡಗಿತು ಕಾಲು ತೊದಲಿತು ನಾಲಿಗೆ
ಕವಿಯುತಿತ್ತು ಕತ್ತಲೆ ಬಾಳಿಗೆ ಆದರೂ ಬೇಕಿತ್ತು

ಹೊರಟ ನಿಂತವನಿಗೆ ಬಿಗುಮಾನ ಗತ್ತು
ನಾನು ಕುಡಿಯುವೆನೆಂಬ ಗತ್ತು ಗಂಭೀರ
ಹೊತ್ತು ನಡೆದೆ  ಕತ್ತಗಲಿಸಿ ಕತ್ತಲೆಯಲಿ
ಅಂಧಕಾರದ ಬಲೆಯೊಳಗೆ ಸಿಕ್ಕಿ ಹಾಕಿ

ಬಾಳಲ್ಲಿ ಎದ್ದ ಬಿರುಗಾಳಿಯ ಹೊಡೆತಕ್ಕೆ
ಸಿಕ್ಕು ದಾಸನಾಗಿ ಬಿಟ್ಟೆ ಕುಡಿತದ ಚಟಕ್ಕೆ
ಅಪ್ಪ ಅಮ್ಮನಿಲ್ಲದ ಬಾಳಿನ ನೋವನ್ನು
ಕಂಡು ಉಣ್ಣಲು ಬಂದೆ ಅಂಗಡಿಗೆ

ಹೆಂಡತಿಯೆಂಬಳು ಕಂದನ ಕಟ್ಟಿಕೊಂಡು
ಹೆದರಿ ಬಿದ್ದಳು ತವರಿಗೆ ಎರವಾದಳು
ಹೆರವರಿಗೆ ಮತ್ತೆ ಕೆರವಾದಳು ಅಲ್ಲಿ
ತುತ್ತು ಕೂಳಿಗೂ ತಾತ್ಸಾರ ಮತ್ಸರದಿ

ಕಾಳ ಕತ್ತಲೆಯ ಮೂಲೆಯಲ್ಲಿ ಸಣ್ಣ
ಮಿಣುಕು ಹುಳು ಮಿಂಚಿ ಮರೆಯಾಯಿತು
ಗವ್ವೆನ್ನುವ ಕತ್ತಲು ಹೆಜ್ಜೆಯೊಂದ ಇಟ್ಟೆ
ಕಟ್ಟೆಯೊಡೆದು ಬಂತು ಮಹಾಪೂರ 

ಮೇಜಿನ ಹತ್ತಿರ ಕುಳಿತವನಿಗೆ ಬಂದನೊಬ್ಬ
ಕೈಯಲ್ಲೊಂದು ಪೆನ್ನು ಹಾಳೆಯ ಹಿಡಿದು
ಏನು ಬೇಕೆಂದು ಕೇಳಿ ಪಟ್ಟಿ ಮಾಡಿದ
ನೋಡಿದನೊಮ್ಮೆ ಕೆಂಡಗಣ್ಣುಗಲಿ ನನ್ನ

ಕೂಗಿ ಕರೆದೆ ಹೇಳಿದೆ ಮಾತೊಂದ ನೀ
ಇಲ್ಲಿಗೆ ಬರಬೇಡ ಆಗುವೆ ನನ್ನಂತೆ ನೀ
ಮಹಾ ಕುಡುಕ ಅವನಂದ ಮೊದಲು
ನೀ ಬಾರದಿರು ಮೆಲ್ಲಗೆ ಇಲ್ಲಿಗೆ 

ನಿನ್ನ ಮಗನಾಗುವನು ನನ್ನಂತೆ ಇಲ್ಲಿ
ಹೇಳಲೇನಿತ್ತು ಅಲ್ಲಿಗೆ ಬಂದೆ ನಡೆದು
ಮನೆಗೆ ಯಾರೂ ಇಲ್ಲ ನಾನು ಏಕಾಂಗಿ
ಹುಡಗನ ಮಾತಿಗೆ ಹೃದಯ ಚೂರಾಗಿತ್ತು.

- ಶ್ರೀ ಇಂಗಳಗಿ ದಾವಲಮಲೀಕ, ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಅಮ್ಮ-ಮಮತೆಯ ಕಡಲು (ಪುಸ್ತಕ ಪರಿಚಯ) - ಸುಪ್ರೀತಾ ಶೆಟ್ಟಿ ಗುಬ್ಬಚ್ಚಿ, ಮುಳ್ಳುಗುಡ್ಡೆ ಕುಂದಾಪುರ.

ಎಂಬುದು ಒಂದು ಅದ್ಭುತ ಪದ. ಪ್ರತಿ ಜೀವಿಗೂ ಪುಳಕ ತರುವ ಈ ಸಂಬಂಧ ಮನುಷ್ಯನಿಗಷ್ಟೆ ಅಲ್ಲದೆ ಪ್ರಾಣಿ,ಪಕ್ಷಿ ಕ್ರಿಮಿ,ಕೀಟ ಎಲ್ಲದಕ್ಕೂ ಒಂದು ರೀತಿಯ ವಿಶಿಷ್ಟ,ವಿಭಿನ್ನ ಅನುಭವ ತರುವ ಜೀವ.
ನಾವೆಷ್ಟೆ ಕಲಿತರೂ ಅಮ್ಮ ನಮ್ಮನ್ನ ಓದಿ ಬಿಡುತ್ತಾಳೆ,ನಾವೆಷ್ಟೆ ಬುದ್ದಿವಂತಿಕೆ ತೋರಿದರೂ ಅಮ್ಮನ ಸೂಕ್ಷ್ಮ ದೃಷ್ಟಿಗಿಂತ ಮಿತಿ ಮೀರಲಾಗುವುದೇ ಇಲ್ಲ.ಬಹುಷಃ ಅಮ್ಮನ್ನ ಕನ್ನಡಿ ಅನ್ನಬಹುದು ನಮ್ಮ ಎಲ್ಲಾ ವೇಷಗಳು ಅವಳೆದುರು ಸ್ಪಷ್ಟ.
ಎಷ್ಟೇ ಆಧುನಿಕ ತಂತ್ರಜ್ಞಾನ ಬರಲಿ ಅಮ್ಮನಂತೆ ಮನಸ್ಸನ್ನ ತಿಳಿದುಕೊಳ್ಳೋ ಯಾವ ತಂತ್ರವೂ ಬಂದಿಲ್ಲ.
ಅಮ್ಮನ ಬಗ್ಗೆ ಹೇಳ ಹೊರಟರೆ ಪುಸ್ತಕಗಳೇ ಸಾಲದು,ಪದಗಳಿಗೆ ನಿಲುಕದವಳವಳು.
ಪುಸ್ತಕ ಅಂದಾಕ್ಷಣ ನೆನಪಾಯ್ತು,ಈಗ ನಾನು ಬರೆಯುತ್ತಿರೋದು ಪುಸ್ತಕದ ಬಗ್ಗೆ ,*ಅಮ್ಮ* ಮಮತೆಯ ಕಡಲು,ಓದೋವಾಗಲೇ ಅಮ್ಮನ ಮಮತೆ ಮನದಲ್ಲಿ ಅಲೆ ಎಬ್ಬಿಸುತ್ತದೆ.
*ಹೆಗ್ಗದ್ದೆ ಪ್ರಕಾಶನ* ದಿಂದ ಮುದ್ದಾಗಿ ಮೂಡಿ ಬಂದಿರೋ ಒಂದು ವಾತ್ಸಲ್ಯ ಪೂರಿತ ಹೊತ್ತಿಗೆ *ಅಮ್ಮ*.ಕೆರಾಡಿ ಚಂದ್ರಶೇಖರ್ ಶೆಟ್ಟಿಯವರು ಅವರ ತಾಯಿ *ಕೃಷ್ಣಮ್ಮ* ನವರಿಗೆ ಭಕ್ತಿಪೂರ್ವಕವಾಗಿ ಅರ್ಪಣೆ ಮಾಡಿರುವ ಕೃತಿ ಇದು.
ಪ್ರತಿ ಪುಟದಲೂ ,ಪ್ರತಿ ಪದದಲ್ಲೂ,ಪ್ರತಿ ಅಕ್ಷರಗಳಲ್ಲೂ ಅಮ್ಮನೆಂಬ ಸಿಹಿಯ ಸವಿಯಿದೆ.೧೭೬ ಪುಟಗಳ ಈ ಕೃತಿಯಲ್ಲಿ ಬರಿ ಚಂದ್ರಶೇಖರ್ ಶೆಟ್ಟಿಯವರ ತಾಯಿಯ ಬಗ್ಗೆ ಬರೆದಿಲ್ಲ.ಅಲ್ಲಿ ಬರೆದಿದ್ದು ತಾಯಿ ಎಂಬ ದೇವರ ಬಗ್ಗೆ,ಪ್ರತಿಯೊಂದು ಮಗು ಓದಲೇಬೇಕಾದ ಈ ಕೃತಿಯ ಬಗ್ಗೆ ಹೇಳಲು ನಾನೇನು ವಿಮರ್ಶಕಿ ಅಲ್ಲ.ಆದರೂ ನನಗೆ ತಿಳಿದಷ್ಟು ಬರೆಯಬೇಕೆನಿಸಿದೆ,ತಪ್ಪಿದ್ದರೆ ಕ್ಷಮೆ ಇರಲಿ.
*ಅಮ್ಮ - ಮಮತೆಯ ಕಡಲು* ಕೃತಿಗೆ ಮುನ್ನುಡಿ ಬರೆದ *ಜಾನಕಿ ಬ್ರಹ್ಮಾವರ* ಅವರು ಹೇಳುವಂತೆ "ಇದನ್ನು ಓದುವವರು ಅಮ್ಮನ ಮಕ್ಕಳೆ ತಾನೇ? ಹಾಗಾಗಿ ಓದಿದವರ ಮನಮನವೂ ಅಮ್ಮಂದಿರೊಂದಿಗೆ ಬೆಸೆಯುತ್ತಾ,ಆಪ್ತತೆಯ ಎಳೆ ಎಳೆಯನ್ನು ಮೆಲುಕು ಹಾಕುತ್ತಾ ಸಾಗುತ್ತದೆ.ಅಮ್ಮ ಅವರವರ ಕಿವಿಯಲ್ಲಿ ಹಿತೋಕ್ತಿ ಉಸುರಿದಂತೆ ಭಾಸವಾಗುತ್ತದೆ."
ನಿಜ ,ಅಮ್ಮ ಎಲ್ಲರ ಜೀವನದಲ್ಲೂ ಬಹುಮುಖ್ಯ ಪಾತ್ರಧಾರಿ,ಅಮ್ಮನಿಲ್ಲದ ಮಗುವನ್ನು ಉತ್ತಮ ಗುಣಗಳೊಂದಿಗೆ ಬೆಳೆಸಿರುವ ಅದು ಅಪ್ಪನೊಬ್ಬನೆ ಬೆಳಿಸಿರುವುದು ತುಂಬಾ ವಿರಳ,
ಆದರೆ ಅಪ್ಪನಿಲ್ಲದೆ,ಮನೆಯವರೂ ಇಲ್ಲದೆ ಶಿಸ್ತಿನಿಂದ, ಸಂಸ್ಕಾರದಿಂದ ಅಮ್ಮನೊಬ್ಬಳೆ ಬೆಳೆಸಿದ ಎಷ್ಟೋ ಮಕ್ಕಳು ನಮ್ಮ ಕಣ್ಮುಂದೆ ಇರುವುದನ್ನು ನಾವು ಕಾಣಬಹುದು.
ಲೇಖಕರ ಮೊದಲ ಮಾತಲ್ಲೆ ಥಾಮಸ್ ಆಲ್ವಾ ಎಡಿಸನ್,ತೇನ್ ಸಿಂಗ್ ಅವರು ಅಮ್ಮನ ಬಗ್ಗೆ ನುಡಿದ ಹೆಮ್ಮೆಯ ಮಾತುಗಳನ್ನು ಉಲ್ಲೇಖಿಸಿದ್ದಾರೆ,ಜೊತೆಗೆ,ಕರ್ಣನಿಗೆ ಸಾಕು ತಾಯಿ ರಾಧೇಯಿಯ ಮೇಲಿದ್ದ ಪ್ರೀತಿ, ರಾಮನ ಮೇಲೆ  ಕೌಸಲ್ಯೆಯ  ಮಮತೆಯನ್ನು ಬಿಂಬಿಸಿದ್ದಾರೆ.
ಮುಂದಿನ ಪುಟ ತರೆದಾಗ ಹೆಗ್ಗದ್ದೆ ಪ್ರಕಾಶನದ ಪ್ರಕಾಶಕರಾದ *ಸಂದೀಪ್ ಶೆಟ್ಟಿ ಹೆಗ್ಗದ್ದೆ* ಇವರು ಪ್ರಕಾಶಕರ ಮಾತುಗಳಲ್ಲಿ "ಈ ಕೃತಿ ಪ್ರತಿಯೊಬ್ಬ ಹೆಣ್ಣು ಮಗಳ ಪಾಲಾಗಬೇಕು,ಪ್ರತಿ ಮನೆಯ ತಾಯಿಯ ಮಡಿಲು ಸೇರಬೇಕು ಎನಿಸಿತ್ತು.ಅಮ್ಮ ಎನ್ನುವವಳ ನಮ್ಮೆಲ್ಲರ ಜೀವದನಿ,ನಮ್ಮುಸಿರಿನ ಒಡಲು,ಅವಳು ಆತ್ಮವಿಶ್ವಾಸದ ಅನನ್ಯ ನಂಟು,ಅಷ್ಟೆ ಏಕೆ ನಮ್ಮ ವಾತ್ಸಲ್ಯದ ಒರತೆ,ಎಂದು ಲೇಖಕರು ಹೇಳುತ್ತಾರೆ" ಎನ್ನುತ್ತಾ ಅಮ್ಮನ ಬಗೆಗಿನ ತನ್ನ ಭಾವನೆಯನ್ನು ಬಿಚ್ಚಿಡುತ್ತಾರೆ,
ಈಗ ಅಮ್ಮನೆಂಬ ಮಮತೆಯ ಕಡಲಿನ ಅಲೆಗಳು ತೋಳು ಚಾಚಿ ನಮ್ಮನ್ನು ಅಪ್ಪಿಕೊಳ್ಳಲು ತಯಾರಾಗುತ್ತವೆ.
೨೧ ಶೀರ್ಷಿಕೆಯಡಿಯಲ್ಲಿ ಅಮ್ಮನ ವಾತ್ಸಲ್ಯದ ನವಿಲು ಗರಿ ಬಿಚ್ಚುತ್ತದೆ. ೧ *ನೆನಪಾಗಿ ಉಳಿದ ನನ್ನಮ್ಮ ಕೃಷ್ಣಮ್ಮ* ಎನ್ನುವ ತಲೆಬರಹದಡಿಯಲ್ಲಿ ಸಾಗುವ ಅಮ್ಮನ ಕುರಿತಾದ ಭಾವಪೂರ್ಣ ಮಾತುಗಳು ಒಮ್ಮೆ ಮಂದಹಾಸ ಮೂಡಿಸಿದರೆ,ಮತ್ತೊಮ್ಮೆ ಹುಬ್ಬೇರಿಸುವಂತೆ,ಮಗದೊಮ್ಮೆ ಕಣ್ಣಂಚು ತೇವಗೊಳ್ಳುವಂತೆ ಮಾಡುತ್ತಾ ಸಾಗುತ್ತದೆ,
*ಅಪಥ್ಯವೆನಿಸುವ ಅಮ್ಮನ ಮಾತು* (ಪುಟಸಂಖ್ಯೆ ೮೯) ಹಾಗೂ *ತುಂಟ ಮಕ್ಕಳು ಮತ್ತು ಅಮ್ಮನ ಸಹನೆ* (ಪುಟ ಸಂಖ್ಯೆ ೯೨) ವಿಷಯ ಇಟ್ಟುಕೊಂಡು ಬರೆದಿರುವ ಒಂದಷ್ಟು ವಿಷಯಗಳು ನಮ್ಮದೆ ಮಾತುಗಳಾಗಿವೆ. 
ಅಮ್ಮನ ಬುದ್ದಿ ಮಾತುಗಳು ನಮಗೆ ಪಥ್ಯ ಎನಿಸುವುದೇ ಇಲ್ಲ.ಅಯ್ಯೋ ನಿಂದೇನಮ್ಮ ಯಾವಾಗ್ಲೂ ಅದೆ ಹೇಳ್ತೀಯಾ ಅನ್ನೋ ನಮಗೆ ಅವಳ ಕಾಳಜಿ ತಿಳಿಯುವುದು ಅವಳಿಂದ ದೂರ ಬಂದಾಗ ಅಥವಾ,ಅವಳೇ ದೂರಾದಾಗ.
ಇನ್ನು ತುಂಟ ಮಕ್ಕಳಿದ್ದರಂತೂ ಅಮ್ಮನ ಸಹನೆಗೂ ಪರೀಕ್ಷೆ ಎದುರಾಗತೊಡಗುತ್ತದೆ.
ಅಮ್ಮ ಒಂದು ಏಟು ಹೊಡಿತಾಳೆ,ಬೈತಾಳೆ ನಿಜ, ಆದ್ರೆ ಅದರಲ್ಲಿರೋ ಮಮತೆ ಆ ಮಗುವಿಗೂ ಗೊತ್ತಿರುತ್ತೆ,ಅಪ್ಪ ಬೈದಾಗ ಭಯದಿಂದ ದೂರ ನಿಲ್ಲೋ ಮಗು,ಅಮ್ಮ ಹೊಡೆದ್ರು ಮತ್ತೆ ಅವಳ  ಬಳಿಯೇ ಹೋಗೋದು ಅವಳ ವಾತ್ಸಲ್ಯದ ಸೆಳೆತವಲ್ಲದೆ ಮತ್ತೇನು.
*ಮಕ್ಕಳ ಗ್ರಾಮದ ಮಮತೆಯ ಅಮ್ಮ* (ಪುಟ ಸಂಖ್ಯೆ ೧೩೫) ತಾಯೆಂದರೆ ಬರಿ ತಾನು ಹೊತ್ತು ಹೆತ್ತ ಮಕ್ಕಳಿಗಷ್ಟೆ ಅಲ್ಲ ,ಅವಳ ಮಮತೆಯ ಕಡಲಲ್ಲಿ ಬೇರೆ ಮಕ್ಕಳು ವಾತ್ಸಲ್ಯದ ಮುತ್ತುಗಳಾಗಿ ಇರುವುದನ್ನು ಹೇಳುತ್ತಾ, ಅಂತ ಮಹಾಮಾತೆ *ಎಸ್ ಒ ಎಸ್ ಮದರ್ ಗೀತಾ ಸಿಂಗ್* ಅವರ ಕುರಿತು ಒಂದಷ್ಟು ವಿಚಾರಗಳನ್ನು ನಮ್ಮ ಮುಂದಿಟ್ಟಿದ್ದಾರೆ.
*ಮಹಾಮಾತೆಯರ ಸಾಹಸಗಾಥೆ* (ಪುಟ ಸಂಖ್ಯೆ ೧೪೧) ಇಲ್ಲಿ ಜಯಶ್ರೀ ಎಂಬಾಕೆಯ ಕಷ್ಟಕರವಾದ ಜೀವನ ಹಾಗೂ ಅವಳ ಸಾಧನೆಯನ್ನು ತಿಳಿಸಿದರೆ, ೧೪೫ ನೇ ಪುಟದಲ್ಲಿ ಜಪಾನ್ ನ ಇಶಿನೊಮಾಕಿ ಎಂಬ ನಗರದಲ್ಲಿ ನಡೆದ ಭೂಕಂಪನದಲ್ಲಿ ಕಣ್ಮರೆಯಾದ ಕೊಹೇರು ಎಂಬ ೧೨ ವರ್ಷದ ಮಗಳನ್ನು ಹುಡುಕುತ್ತ ಹೊರಟ ನವೋಮಿ ಹಿರಾತ್ಸುಕ ಎಂಬ ತಾಯಿಯೊಬ್ಬಳ ಬದುಕಿನ ಆರ್ದ್ರ ಚಿತ್ರಣವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ ಲೇಖಕರು.ಓದುತ್ತಾ ಹೋದಂತೆ ಆ ತಾಯಿಯ ಸಂಕಟ,ಆ ಕರುಳಿನ ಸೆಳೆತ,ಎಲ್ಲವೂ ಕಣ್ಮುಂದೆ ಬಂದು ಕಣ್ಣಂಚಿನಿಂದ ಹನಿಯೊಂದು ಜಾರುವುದು ನಮಗೆ ತಿಳಿಯುವುದೇ ಇಲ್ಲ.
*ಮಗುವಿನ ಪೋಷಣೆಯಲ್ಲಿ ಅಮ್ಮನೊಡನೆ ಅಪ್ಪ* (ಪುಟ ಸಂಖ್ಯೆ ೧೬೦).ಮಕ್ಕಳ ಬೆಳವಣಿಗೆಯಲ್ಲಿ  ಅಪ್ಪನ ಪಾತ್ರ ಮುಖ್ಯ ಎಂಬುದನ್ನು ಸಂಕ್ಷಿಪ್ತವಾಗಿ ಸುಂದರವಾಗಿ ನಮ್ಮ ಮುಂದಿಟ್ಟು ಲೇಖಕರು ಸಂಕಲನದ ಕೊನೆಯ ಹಂತಕ್ಕೆ ಬರುತ್ತಾರೆ,ಕೊನೆಯ ಪುಟಗಳಲ್ಲೂ ತಾಯಿ ದೇವತೆಗೆ ಗೀತನಮನ ಸಲ್ಲಿಸಿ ಓದಿಗೊಂದು ಪೂರ್ಣವಿರಾಮವನ್ನಿಡುತ್ತಾರೆ ಆದರೂ ನಮ್ಮೊಳಗಿನ ಅಮ್ಮನ ಮೇಲಿನ ಮಮತೆಯ ಕಡಲಿನ ಅಲೆಗಳು ಮಾತ್ರ ಹೃದಯದ ದಂಡೆಗೆ ಮೃದು ಸ್ಪರ್ಶ ನೀಡುತ್ತಲೆ ಇರುತ್ತದೆ.
ಮತ್ಯಾವುದೋ ಒಂದು ಪುಟದ ಒಂದಷ್ಟು ಸಾಲುಗಳು ಕಾಡುತ್ತದೆ.
ನನಗಂತೂ ಪ್ರತಿ ಪುಟದಲ್ಲೂ ನನ್ನಮ್ಮನೇ ಕಂಡಿದ್ದಂತೂ ಸುಳ್ಳಲ್ಲ.ಜೊತೆಗೆ ನಾನೂ ತಾಯಿ ಅದು ಒಂದು ಹೆಣ್ಣು ಮಗುವಿನ ತಾಯಿ ಎಂಬ ಹೆಮ್ಮೆಯೂ ಮೂಡುತ್ತದೆ.ಯಾಕೆ ಅಂತೀರಾ? ಗಂಡಿಗಿಂತ ಅಮ್ಮನನ್ನ  ಹೆಣ್ಣು ಸ್ವಲ್ಪ ಜಾಸ್ತಿ ಅರ್ಥ ಮಾಡಿಕೊಳ್ಳ ಬಲ್ಲಳು.ಇದು ನನ್ನ ಅನಿಸಿಕೆ.ಯಾಕಂದರೆ ಅವಳು ತಾಯಿಯಾಗುವ ಸಮಯದಿ ಅಮ್ಮನ ನೋವು,ತಾಯಾದ ಮೇಲೆ ಮಗುವಿನ ಪಾಲನೆಯಲಿ ಅಮ್ಮ ಹೇಳುವ ಮಾತುಗಳು.ಪಾಪ ಆಗ ಅಮ್ಮ ಎಷ್ಟು ಕಷ್ಟ ಪಟ್ಟಿರಬಹುದು ಎಂದು ಅನ್ನಿಸದೆ ಇರದು.
ನಮ್ಮ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಅವರಲ್ಲಿ ನಮ್ಮನ್ನು ಕಂಡುಕೊಂಡರೆ ನಮ್ಮಮ್ಮ ಪಟ್ಟ ಖುಷಿ,ಅವಳ ಪಾಡು,ಅವಳ ಜವಾಬ್ಧಾರಿಗಳು,ನಮ್ಮನ್ನೂ ಇದೇ ರೀತಿ ನೋಡಿಕೊಂಡಿದ್ರು ಎನ್ನುವ ಯೋಚನೆಗಳು ಬಂದೇ ಬರುತ್ತೆ.
ಅಮ್ಮನ ಬಗ್ಗೆ ಬರೆಯಲು ನಮ್ಮ ಇಡೀ ಜೀವನ ಸಾಲದು.ಅದಕ್ಕೆ ಇರಬೇಕು ಲೇಖಕರು ಅಮ್ಮನನ್ನು ಮಮತೆಯ ಕಡಲು ಎಂದಿರುವುದು.
ಕೊನೆಯದಾಗಿ ಓದುಗ ಮನಸಿಗೆ ಹೇಳುವುದೆಂದರೆ ಪ್ರತಿ ತಾಯಿಯೂ ಓದಬೇಕಾದ ಕೃತಿ.ಈಗೀನ ಕೆಲವು ಮಕ್ಕಳಿಗೆ ತಾಯಿ ,ತಂದೆಯ ಬಗ್ಗೆ ಗೌರವ ,ಪ್ರೀತಿ ಸ್ವಲ್ಪ ಕಡಿಮೆ ಆಗಿದೆ ಬಹುಷಃ *ಅಮ್ಮ-ಮಮತೆಯ ಕಡಲು* ಪ್ರತಿ ಮಗುವೂ ಓದಿದರೆ ತನ್ನ ತಾಯಿಯ ಮೇಲಿನ ಭಾವನೆಗಳನ್ನು ,ಅವಳ ಆಂತರ್ಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ.
*......ಬಂದೇ ಬರುವೆನು ಮತ್ತೆ ನಿನ್ನ ತೊಡೆಗೆ,ಮೂರ್ತ ಪ್ರೇಮದೆಡೆಗೆ!*
*ಅಮ್ಮ ನಿನ್ನ ಎದೆಯಾಳದಲ್ಲಿ*
*ಗಾಳಕ್ಕೆ ಸಿಕ್ಕ ಮೀನು.....*
ಗುನುಗುತಿರಿ ಸುಮ್ಮನೆ ಹೀಗೆ ಅಮ್ಮನ ನೆನಪುಗಳೇ ಹಾಗೆ.

(ಅಮ್ಮ-ಮಮತೆಯ ಕಡಲು
ಕೃತಿಗಾಗಿ ಸಂಪರ್ಕಿಸಿ :ಸಂದೀಪ್ ಶೆಟ್ಟಿ ಹೆಗ್ಗದ್ದೆ.+91 96119 76709)
- ಸುಪ್ರೀತಾ ಶೆಟ್ಟಿ ಗುಬ್ಬಚ್ಚಿ, ಮುಳ್ಳುಗುಡ್ಡೆ ಕುಂದಾಪುರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನಮ್ಮ ಕನ್ನಡನಾಡು ಪುಣ್ಯಭೂಮಿ (ಕವಿತೆ) - ರೇವಣಸಿದ್ದಪ್ಪ ಎಚ್ ಎಲ್ ಚನ್ನಪಟ್ಟಣ.

ಕನ್ನಡನಾಡು ಎಷ್ಟು ಸೊಬಗು 
ಕನ್ನಡಾಂಬೆಯ ಮಡಿಲೇ ಹಾಲುಂಡ ತವರು
ಕನ್ನಡ ಎಂದರೆ ಮುಖದಲಿ ಅರಳುವುದು ನಗು
ಕನ್ನಡಾಂಬೆಯ ಸಿರಿಗೆ ಸಾಟಿಯಿಲ್ಲ ಯಾರು

ತುತ್ತ ತುದಿಯಲಿರುವ ಬೀದರಿನ ಅಂದ 
ಬಿಜಾಪುರದ ಗೋಳಗುಮ್ಮಟ  ಚಂದ
ಹಾವೇರಿ ಹಾನಗಲ್ ಶಿವಕುಮಾರ ಮಠ
ನಾಡಲಿ ಶುರು ಬೊಮ್ಮಾಯಿ‌ ಆಟ

ಮಂಗಳೂರು ಜನತೆಯ ಮುಗ್ಧತೆ
ಧರ್ಮಸ್ಥಳದ ಪಾವಿತ್ರ್ಯತೆ ಶುದ್ಧತೆ
ಕಾಯುತಿಹಳು  ದುರ್ಗಾಪರಮೇಶ್ವರಿ
ಹಸಿವ ನೀಗಿಸಿಹಳು ಅನ್ನಪೂರ್ಣೇಶ್ವರಿ

ಮಲೆನಾಡ ಸೊಬಗು ಕಣ್ಣಿಗೆ ತಂಪು
 ಶ್ರೀಧರಆಶ್ರಮ ಆತ್ಮದ್ಧೋರದ ಕಂಪು
ತೀರ್ಥಹಳ್ಳಿಯ ಕೋಗಿಲೆಯ ಇಂಪು
ಕನ್ನಡಕೆ ಕುವೆಂಪುರವರ ಚಾಪು

ರೇಷ್ಮೆನಾಡಿನ ಕಣ್ವಸೀಮೆಯ ವನ
ಮಂಡ್ಯದ ಸಕ್ಕರೆಯ ಮನಸಿನ ಜನ
ಪ್ರೀತಿಯ ಪ್ರತೀಕ ಹಾಸನದ ಜನ
ಜೀವಕೊಟ್ಟ ಚನ್ನಪಟ್ಟಣ(ಬೊಂಬೆನಾಡು)
 ಪ್ರೀತಿಕೊಟ್ಟ ಹಾಸನ(ಸೌಂದರ್ಯದ ನಾಡು)
ಸದಾ ಮಿಡಿಯುವುದು  ಮನ
- ಸಿದ್ದು ವಾಸುದೇವ್ ಬೊಂಬೆನಾಡು
ರೇವಣಸಿದ್ದಪ್ಪ ಎಚ್ ಎಲ್ ಚನ್ನಪಟ್ಟಣ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನನ್ನ ಕನಕ (ಕವಿತೆ) - ಗಂಗಜ್ಜಿ ನಾಗರಾಜ್.

ಬಾಡದಲಿ ಜನಿಸಿದೆ ಬಾಡದ ಹೂ ಎನಿಸಿದೆ..ಕಾಗಿನೆಲೆ ಕ್ಷೇತ್ರದೊಳು ಕಲ್ಪವೃಕ್ಷವೆನಿಸಿದೆ.. ಬೀರಪ್ಪ ಬಚ್ಚಮ್ಮರ ಮುದ್ದಿನ ಮಗನಾದೆ.. ತಿಮ್ಮಪನ್ನ ಹರಕೆಯ ಮುದ್ದಿನ ಪ್ರಸಾದವು ನೀನಾದೆ..                                             ನಡೆದುಕೊಂಡು ಊರೂರು ಅಲೆಯುತ್ತಾ.. ತಮ್ಮ ಕೀರ್ತನೆಗಳ ಮೂಲಕವೇ ಸಮಾಜದ ಅಂಕು- ಡೊಂಕುಗಳನ್ನು ತಿದ್ದಿದ ಮಹಾನ್ ಪುರುಷ ನೀನು.

ಶ್ರೀ ಕೃಷ್ಣನ ಆರಾಧಕ ಆಧ್ಯಾತ್ಮಿಕ ಚಿಂತಕ. ಕನ್ನಡ ದಾಸ ಸಾಹಿತ್ಯದ ಮೇರು ಪೂಜಕ.. ಭಕ್ತಿ ಭಾವುಕತೆಯ ಸರಳ ಪ್ರಾಮಾಣಿಕ.. ಕನಕನ ಕಿಂಡಿಗೆ ಜನ್ಮ ನೀಡಿದ ಜನಕ.
       ವ್ಯಾಸರಾಯರ ಅಚ್ಚು ಮೆಚ್ಚಿನ ಶಿಷ್ಯರು  ಆದಿಕೇಶವನ ಪರಮ ಭಕ್ತರು ಶ್ರೀ ಕನಕ ದಾಸರು.. ಮೇಲು ಕೀಳೆಂಬುದ ನೀ ಅಳಿಸಿದೆ.. ಕುಲದ ನೆಲೆಯನ್ನು ನೀ ತಿಳಿಸಿದೆ.. ಬೀಸೋ ಗಾಳಿ ಹರಿಯೋ ನೀರು ಎಂದಾದರೂ ಕೇಳಿತೆಯೇ ನೀ ಯಾವ ಕುಲವೆಂದು .. ಕನಕ ನಿನ್ನಂತಾಗಬೇಕು.       
                            -  ಗಂಗಜ್ಜಿ. ನಾಗರಾಜ್                                ಹವ್ಯಾಸಿ ಬರಹಗಾರರು                           ಸಾಸ್ವಿಹಳ್ಳಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕನಕದಾಸರ ಸ್ಮರಣೆ (ಲೇಖನ) - ಶಿವನಗೌಡ ಪೊಲೀಸ್ ಪಾಟೀಲ, ಹವ್ಯಾಸಿ ಬರಹಗಾರರು ಕೊಪ್ಪಳ.

ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಅದ್ವೀತಿಯ ಸ್ಥಾನಗಳಿಸಿ, ಚಿರಸ್ಮರಣೀಯರಾಗಿದ್ದಾರೆ. ಭಕ್ತಿ ಪಂಥದ ಮುಖ್ಯ ದಾಸರಲ್ಲಿ ಒಬ್ಬರು ಭಕ್ತ ಕನಕದಾಸರು.
ಶ್ರೀ ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ 1508-1606 ರಲ್ಲಿ  ಕರ್ನಾಟಕದಲ್ಲಿ 15-16 ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ದವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರಂತೆ.

ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರು ಬರಿ ಕುರುಬ ಜಾತಿಗೆ ಸಿಮಿತವಾತ ಭಕ್ತವಲ್ಲ, ಎಲ್ಲಾ ಜಾತಿಗಳಿಗೆ ಬೇಕಾದವರು. 15-16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾರು ಎಂದರೆ ತಪ್ಪಾಗಲಾರದು.
 ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಯ.

 ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂದೆ ನಿಂತು ಹಾಡತೊಡಗಿದರಂತೆ ("ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ"). ಆಗ ಹಿಂಭಾಗದ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತಂತೆ. (ಈಗಲೂ ಉಡುಪಿ ಕೃಷ್ಣನ ದೇವಸ್ಥಾನದ ಹಿಂದುಗಡೆಯ ಗೋಡೆಯಲ್ಲಿರುವ ಬಿರುಕಿನಲ್ಲಿ ಶ್ರೀಕೃಷ್ಣನ ಕಾಣಬಹುದು. ಇಲ್ಲಿ ಒಂದು ಕಿಟಕಿಯನ್ನು ನಿರ್ಮಿಸಿ ಅದನ್ನು 'ಕನಕನ ಕಿಂಡಿ'ಎನ್ನುವರು 

ವಾದಿರಾಜರು, ಪುರಂದರದಾಸರು, ಕನಕದಾಸರು ತ್ರಿವೇಣೀ ಸಂಗಮದಂತೆ. ಅವರು ಮೂರು ಮಂದಿಯೂ ಒಂದೇ ಓರಗೆಯವರು, ಒಂದೇ ಮನಸ್ಸಿನವರು, ಸಮಕಾಲೀನರು, ಪರಸ್ಪರ ಗೌರವಾದರಗಳನ್ನು ಹೊಂದಿದ್ದವರು. ಪ್ರತಿಯೊಬ್ಬರಿಗೂ ಇನ್ನಿಬ್ಬರ ಪ್ರೌಢಿಮೆ ಔನ್ನತ್ಯಗಳ ಅರಿವಿತ್ತು. 120 ವರ್ಷಗಳ ಕಾಲ ಬದುಕಿದ್ದ ವಾದಿರಾಜರು  ತಮ್ಮ ಮಠದಲ್ಲಿ ಸರ್ವಾಂಗೀಣ ಸುಧಾರಣೆ ತರುವ ತವಕ ಇತ್ತಾದರೂ ಅಲ್ಲಿ ಭದ್ರವಾಗಿ ಬೇರೂರಿದ್ದ ಮಡಿವಂತಿಕೆಯನ್ನು ಹೋಗಲಾಡಿಸಲು ಅವರಿಂದಾಗಿರಲಿಲ್ಲ. ವಾದಿರಾಜರೊಂದಿಗೆ ತಮಗಿದ್ದ ಸ್ನೇಹವನ್ನು ದುರುಪಯೋಗ ಪಡಿಸಿಕೊಂಡು ಮಠದಲ್ಲಿ ಪ್ರವೇಶ ಪಡೆಯುವ ಧಾರ್ಷ್ಟ್ಯವೂ ಕನಕರಿಗಿರಲಿಲ್ಲ.

ಕನಕದಾಸರ ಸಾಹಿತ್ಯಕೃತಿಗಳು, ಅವರ ಬಗೆಗಿನ ಐತಿಹ್ಯಗಳು, ಅವರ ಕುರಿತು ಇತರೇ ಸಾಹಿತ್ಯಗಳಲ್ಲಿ ಅಥವಾ ಶಾಸನಗಳಲ್ಲಿನ ಮಾಹಿತಿಗಳನ್ನು ಕ್ರೋಢೀಕರಿಸಿ ಕನಕದಾಸರ ಸ್ಥೂಲ ಜೀವನ ಚಿತ್ರಣವನ್ನು ರಚಿಸಬಹುದಲ್ಲದೆ ಪರಿಪೂರ್ಣ ಜೀವನಚರಿತ್ರೆಯ ನಿರೂಪಣೆ ಸಾಧ್ಯವಿಲ್ಲದ ಮಾತು. ಆದರೆ ವಿದ್ವತ್ ನೆಲೆಯಲ್ಲಿ ವಿದ್ವತ್ಸಂಪನ್ನ ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಅದ್ವೀತಿಯ ಸ್ಥಾನಗಳಿಸಿ, ಚಿರಸ್ಮರಣೀಯರಾಗಿದ್ದಾರೆ ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಮೋಹನತರಂಗಿಣಿ,
ನಳಚರಿತ್ರೆ,ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ.

ಮೋಹನತರಂಗಿಣಿಯು 42 ಸಂಧಿಗಳಿಂದ ಕೂಡಿದ್ದುಸಾಂಗತ್ಯದಲ್ಲಿ ರಚಿತವಾಗಿರುವ 2700 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ತಮ್ಮ  ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧ ವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿ ಮನಸಿನ ಕನಕ ತನ್ನ ಅನುಭವವನ್ನೆಲ್ಲ ಬರಹ ರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನ ಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ವೀರರಸ, ರೌದ್ರರಸ ಕಾವ್ಯದಲ್ಲಿ ಮೇಳೈಸಿವೆ.

" ಸೋಮಸೂರಿಯ ವೀಥಿಯ ಇಕ್ಕೆಗಳಲಿ
ಹೇಮ ನಿರ್ಮಿತ ಸೌಧದೋಳಿ
ರಮಣೀಯತೆವೆತ್ತ ಕಳಸದಂಗಡಿಯಿರ್ದುಂ
ವಾ ಮಹಾ ದ್ವಾರಕಾಪುರದೇ
ಓರಂತೆ ಮರಕಾಲರು ಹಡಗಿನ ವ್ಯವ
ಹಾರದಿ ಗಳಿಸಿದ ಹಣವ
ಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕು
ಬೇರಂಗೆ ಕಡವ ಕೊಡುವರು."

ನಳಚರಿತ್ರೆಯು 9 ಸಂಧಿಗಳಿಂದ ಕೂಡಿದ್ದು ಭಾಮಿನೀ ಷಟ್ಪದಿಯಲ್ಲಿ ರಚನೆಯಾಗಿರುವ 481 ಪದ್ಯಗಳಿವೆ.ಮಹಾಭಾರತದಂತಹ ರಾಷ್ಟ್ರ ಮಹಾಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಆರ್ಯೇತರ ಪ್ರೇಮಕಥೆ ನಳ ದಮಯಂತಿಯರ ಕಥೆ. ೧೩ನೇ ಶತಮಾನದ ನಳ ಚಂಪೂವಿಗಿಂತ ಈ ನಳಚರಿತ್ರೆ ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಅಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣನೆಯಿಂದ ಶೋಭಿಸುತ್ತಾ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ನಳ ಮತ್ತು ದಮಯಂತಿಯರು ಹಂಸದ ಮೂಲಕ ಪ್ರೇಮ ಸಂದೇಶಗಳನ್ನು ಕಳಿಸುವುದು, ಅವರ ಸಂತೋಷ-ಆಮೋದ-ಪ್ರವೋದ ನಂತರದ ಕಷ್ಟಕಾಲ ಹಾಗೂ ಅದರ ನಂತರದ ಪುನರ್ಮಿಲನ ಹೀಗೆ ಎಲ್ಲರಿಗೂ ಈ ಕಥೆ ಚಿರಪರಿಚಿತ. ಕಷ್ಟ ಕಾಲದಲ್ಲಿ ಕಾಡಿನಲ್ಲಿ ಮಲಗಿರುವಾಗ ದಮಯಂತಿಯನ್ನು ಕು

" ಲಲಿತ ಹೇಮದ ತೂಗಮಂಚದ
ಹೊಳೆವ ಮೇಲ್ವಾಸಿನಲಿ ಮಲಗು
ಲಲನೆಗೀ ವಿಧಿ ಬಂದುದೇ ಹಾ!
ಎನುತ ಬಿಸುಸುಯ್ದ..."

ನಳಚರಿತ್ರೆಯಲ್ಲಿ ಕರುಣರಸಕ್ಕೇ ಪ್ರಾಧಾನ್ಯತೆ ಇದೆ. ಇನ್ನು ನಳಚರಿತ್ರೆಯಲ್ಲಿನ ಶೃಂಗಾರರಸದ ಬಗ್ಗೆ ಹೇಳುವುದಾದರೆ ಅದು ಪ್ರೌಢಶೃಂಗಾರ ಎನ್ನಬಹುದೇನೋ? ಅಲ್ಲಿ ಮೋಹನ ತರಂಗಿಣಿಯಲ್ಲಿ ಅದು ಕಣ್ಣು ಕುಕ್ಕುವ ಶೃಂಗಾರ, ಆದರೂ ಅದು ಹುಳಿಮಾವಿನಂತೆ ಹಂಚಿ ತಿನ್ನಲಾಗದು. ಮುಕ್ತವಾಗಿ ಚರ್ಚಿಸಲಾಗದು. ನಳಚರಿತ್ರೆಯ ಶೃಂಗಾರವಾದರೆ ಮಲ್ಲಿಗೆ ಮಾವಿನ ಹಾಗೆ, ಮಧುರ ರುಚಿ, ಮಧುರ ಸುವಾಸನೆ.

ರಾಮಧಾನ್ಯಚರಿತ್ರೆ ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿರುವ 156 ಪದ್ಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರಧಾನ್ಯವೆಂದು ಪರಿಭಾವಿಸಲಾಗಿರುವ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಿರೂಪಿಸಲಾಗಿದೆ. ಇದರಲ್ಲಿ ಯುದ್ಧದ ಸನ್ನಿವೇಶ ಇಲ್ಲವಾದರೂ ವೀರರಸದ ಮಾತುಗಳಿಗೇನೂ ಕೊರತೆಯಿಲ್ಲ.
ನುಡಿಗೆ ಹೇಸದ ಭಂಡ ನಿನ್ನೊಳು ಕೊಡುವರೇ ಮಾರುತ್ತರವ ಕಡುಜಡವಲಾ, ನಿನ್ನೊಡನೆ ಮಾತೇಕೆ?

"ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವಲಾ
ಎಲವೂ ನೀನೆಲ್ಲಿಹೆಯೋ ನಿನ್ನಯ ಬಳಗವದು."

 ರಾಗಿಯ ನೆಪ ಹಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರ ಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರ ಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು, ನವ್ಯೋತ್ತರದ ಸೂರು ಎಂದರೆ ಬಹುಶ: ತಪ್ಪಾಗಲಾರದು.

ಹರಿಭಕ್ತಿಸಾರ ೧೧೦ ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನೀ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯಂತಿದೆ. ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕವಿ ಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ.

ಕೀರ್ತನೆಗಳು  316 ಕೀರ್ತನೆಗಳನ್ನು ರಚಿಸಿದ್ದಾರೆ. ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. 'ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ 'ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- 'ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ' ಎಂದು ಸಂತೋಷಪಟ್ಟಿದ್ದಾರೆ. 'ಎಲ್ಲಿ ನೋಡಿದರಲ್ಲಿ ರಾಮ' ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ 'ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು' ಎಂಬ ಧನ್ಯತಾಭಾವ. 'ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ' ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ 'ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ' ಎಂದುಕೊಳ್ಳುತ್ತಾರೆ.

ಪುರಂದರದಾಸ, ಕನಕದಾಸ, ಜಗನ್ನಾಥದಾಸ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವ ಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತ ಜ್ಞಾನದ ಅನಿವಾರ್ಯತೆಯನ್ನು ನಿರಾಕರಿಸಿ, ಜಾತಿ ಮತಗಳ ಕಟ್ಟು ಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡ ಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂವಾದಿರಾಜರು. ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ.

" ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ.
ತೀರ್ಥವನು ಪಿಡಿದವರು ತಿರುನಾಮಧಾರಿಗಳೇ
ಜನ್ಮ ಸಾರ್ಥಕವಿರದವರು ಭಾಗವತರಹುದೇ
ಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ."

ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.

"ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ
ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
ನೀ ದೇಹದೊಳಗೊ, ನಿನ್ನೊಳು ದೇಹವೂ
ಬಯಲು ಆಲಯದೊಳಗೊ, ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ
ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ
ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ.."

"ತಾಯಿ ತಂದೆಯ ಬಿಟ್ಟು ತಪವ ಮಾಡಲೂ ಬಹುದು
ದಾಯಾದಿ ಬಂಧುಗಳ ಬಿಡಲೂ ಬಹುದು
ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು
ಕಾಯಜ ಪಿತ ನಿನ್ನ ಅರೆಘಳಿಗೆ ಬಿಡಲಾಗದು 
ಪ್ರಾಣವ ಪರರು ಬೇಡಿದರೆತ್ತಿ ಕೊಡಬಹುದು
ಮಾನದಲಿ ಮನವ ತಗ್ಗಿಸಬಹುದು
ಜಾಣ ನಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣಾ ನಿನ್ನ ಅರೆಘಳಿಗೆ ಬಿಡಲಾಗದು.."


ಕರ್ನಾಟಕ ಸರ್ಕಾರವು 2008ರಿಂದ ಕನಕದಾಸ ಜಯಂತಿಯನ್ನು ಆಚರಿಸುತ್ತಿದೆ.ಇಂತಹ ಶ್ರೇಷ್ಠ ದಾಸರಾದ ಕನಕದಾಸರ ಜನ್ಮದಿನವನ್ನು ವಿಶೇಷವಾಗಿ ಆಚರಣೆ ಮಾಡಲು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.ಇಂತಹ ಸಂದರ್ಭದಲ್ಲಿ ಇಂಥ ಮಹಾನ್ ಸುರೇಶ್ ತರ ಸಾಧನೆ ಅವರ ಸಾಹಿತ್ಯ ಸೇವೆ ಮತ್ತು ಆ ಸಾಹಿತ್ಯದಲ್ಲಿರುವ ಸಾರವನ್ನು  ಅರಿತು ನಾವು ಬದುಕಬೇಕಾಗಿದೆ.
- ಶಿವನಗೌಡ ಪೊಲೀಸ್ ಪಾಟೀಲ, ಹವ್ಯಾಸಿ ಬರಹಗಾರರು ಕೊಪ್ಪಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
 

ವರುಣನಿಗೆ ಒಂದು ಮನವಿ (ಕವಿತೆ) - - ಶ್ರೀಮತಿ ಭಾಗ್ಯ ಗಿರೀಶ್, ಹೊಸದುರ್ಗ.

ನಿಲ್ಲಿಸೋ ವರುಣ ನಿನ್ನ ಆರ್ಭಟ
ನೋಡಲಾಗುತ್ತಿಲ್ಲ ಜನರ ಪರದಾಟ
ಕುಂಭದ್ರೋಣ ಮಳೆಯ ಈ ಆಟ
ರೈತರಿಗೆಲ್ಲ ತಂದಿದೆ ಭಾರಿ ಸಂಕಟ.

ಜನ ಜೀವನವಾಗಿದೆ ತುಂಬಾ ದುಸ್ತರ
ಕೊಚ್ಚಿಹೋಗಿದೆ ನಿನ್ನ ಹರಿವಿಗೆ ಸುಂದರ ಪರಿಸರ
ನೋಡು,ಬದುಕು- ಬವಣೆ- ಭಾವನೆ ಕಷ್ಟದ ಆಗರ
ಮುಳುಗಿದೆ ರೈತ ಕುಟುಂಬದ ಬೆವರಿನ ಸಾರ.

ಜನರ ಆರೋಗ್ಯದಲ್ಲೂ ಏರುಪೇರು
ರಸ್ತೆಯಲಿ ನದಿಯಂತೆ ನಿಂತಿದೆ ನೀರು
ಅತೀವೃಷ್ಟಿ ರೈತರಿಗೆ ತಂದಿದೆ ರಕ್ತ ಕಣ್ಣೀರು
ಇನ್ನಾದರೂ ಮಳೆರಾಯ ಸ್ವಲ್ಪ ಸಮಾಧಾನದಿಂದಿರು.

ಜೀವನ ನೌಕೆ ಸಾಗಲು ಶಾಂತ ವಾತಾವರಣ ಬೇಕು
ಅತಿವೃಷ್ಟಿ-ಅನಾವೃಷ್ಟಿ ಆಗದಿದ್ದರೆ ಸಾಕು
ಕಾಲಕಾಲಕ್ಕೆ ಮಳೆ ಬಂದು ಬೆಳೆಯಾದರೆ ಸಾಕು
ನಿಸರ್ಗದ ಮೊಗದಲ್ಲಿ ಮಂದಹಾಸ ತುಂಬಿರಬೇಕು.
- ಶ್ರೀಮತಿ ಭಾಗ್ಯ ಗಿರೀಶ್, ಹೊಸದುರ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಶರಣ ಸಂಸ್ಕೃತಿ (ಲೇಖನ) ಸಂಗಮೇಶ ಎನ್ ಜವಾದಿ, ಸಾಹಿತಿ, ಪತ್ರಕರ್ತ, ಬೀದರ ಜಿಲ್ಲೆ.

ಶರಣ ಸಂಸ್ಕೃತಿ ಮೈಮರೆತಿಹುದು
ಶರಣ ಸಂಸ್ಕೃತಿ ಮೈಮರೆತಿಹುದು ಮಲಗಿದೆ ಪ್ರಜ್ಞಾವಂತರ ಸಮಾಜ,
ಎಚ್ಚರವಾಗಿ ಮೆರೆಯುವುದೆಂದು? ಶರಣ ಧರ್ಮ ಮಹಾನ್
ನನ್ನೀ ಕಲ್ಯಾಣ ನಾಡು ಮಹಾನ್                                      
ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ನಾಗರಿಕತೆಯು, ಪವಿತ್ರ ವಚನ ಕಾವ್ಯದ ನೈಜತೆಯು
ಸಕಲ ಶರಣರ ಸಿದ್ಧಾಂತಗಳು, ನಡೆ ನುಡಿಯ ಮೌಲ್ಯಾಧಾರಿತ ಆಚಾರಗಳು
ವಾಸ್ತವದ ಅರಿವಿನಲ್ಲಿ, ಹಾರಾಡಿದೆ ಬಾನಂಗಳದಲ್ಲಿ.                      
ಬಸವ ಶಕ್ತಿಯು ಏಳುವುದೆಂದು! ಸರ್ವರದುನ್ನತಿಗೆ ಶ್ರಮಿಸುವುದೆಂದು!
ಸತ್ಯದ ದೀಪ್ತಿ ಬೆಳಗುವುದೆಂದು! ತ್ಯಾಗ ಸಾಹಸ ಶೌರ್ಯ ಮೊಳಗುವುದೆಂದು!
ಎಂದಿಗೆ ಶರಣರ ಪುನರುತ್ಥಾನ! ಕರುನಾಡಿನ ಬಸವ ಕಲ್ಯಾಣ!               

ಶರಣರ ಚಿಂತನೆಗಳು ಜಗದಲ್ಲಿ ಬೆಳಗಲು ಮೈ ಕೊಡವೇಳಲಿ, ಶಿವಶರಣರ ಸೇವೆಗೆ  ನಾವೆಲ್ಲರೂ ನಿಲ್ಲಲಿ
ಬಸವಚೇತನ ತುಂಬಿ ಮೈ ನವಿರೇಳಲಿ, ಶರಣರು ತೋರಿದ ದಾರಿಯ ತುಳಿಯಲಿ
ಅಂದಿಗೆ ಹೊಸ ಬೆಳಕು, ನೂತನ ನೆಮ್ಮದಿಯ ಬದುಕು.

ದ್ವೇಷಾ ಸೂಯೆ ಮತ್ಸರಗಳಿಗೆ ವಿರಾಮ ನೀಡಲಿ
ಶಾಂತಿ ಸ್ನೇಹ ಸೌಹಾರ್ದತೆ ಮೂಡಲಿ ಸರ್ವರಲ್ಲಿಯೂ ಬಸವ ಪರಂಪರೆ  ಕಾಣಲಿ, 
ಇದೆ ಶರಣ ಸಂಸ್ಕೃತಿ, ಇದೆ ಬಸವ ಸಂಸ್ಕೃತಿ, ಇದೆ ಮಾನವೀಯ ಮೌಲ್ಯಗಳನ್ನು ಸಾರುವ ಸಮತೆಯ ಸಂಸ್ಕೃತಿ.
 - ಸಂಗಮೇಶ ಎನ್ ಜವಾದಿ, ಸಾಹಿತಿ, ಪತ್ರಕರ್ತ, ಬೀದರ ಜಿಲ್ಲೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ತಲ್ಲಣಸದಿರು ತನುವ (ಕವಿತೆ) - ಶಿವಾ ಮದಭಾಂವಿ, ಬೆಳಗಾವಿ.

ಅನಿಸುತ್ತಿದೆ ಯಾಕೋ
ಅರಿವಿಲ್ಲದೆ ಹಾಕುತ್ತಿರುವೇ ಚೌಕಾಕಾರ
ಕ್ಷಮಿಸುವೇಯಾ ಏನ್ನ ಮನ
ಬಿಡದಿರು ಎನ್ನ ಮನವ

ಹೇಗಿದ್ದರೂ ನನ್ನಾಕೆ
ಎಲ್ಲಿದ್ದರೂ ನನ್ನಾಕೆ
ಆ ದೇವರೆ ಕೂಡಿಸಿಟ್ಟವನೆ ನಮ್ಮ ಜೋಡಿ
ಇನ್ಯಾಕ ಬೇಕು ಬೇರೆಯವರ ಉಸಾಬರಿ

ಆಗಿರುವೇ ನನ್ನ ಪ್ರಾಣ
ಏಳೇಳು ಜನ್ಮ ನೀ ನನ್ನ ಉಸಿರು
ನೀ ಇಲ್ಲದೆ ಹೋದರೆ
ಇದ್ದಂಗ ಕಗ್ಗತ್ತಲ ಕಾಡ
ಹಿಡಿಯುವುದೊಂದೆ ಮಾರ್ಗ ಪರಶಿವನ ಪಾದ

ಇನ್ನೆಂದೂ ಮಾಡಲಾರೆ ಹೀಗೆಂದು
ಆದರೂ ಇರು ನೀ ಸುರಕ್ಷಿತವಾಗಿ
ಬೆಳಕಲ್ಲೂ ದೂಡುವ ಗೊಸೂಂಬೆಗಳಿರುವರು ಹತ್ತಿರದಲ್ಲಿ

ಬೇಜಾರಾಗಬೇಡ ತಪ್ಪು ನನ್ನದೆ
ಅರಿವಿಲ್ಲದೆ ಚುಚ್ಚುತ್ತಿರುವೇ ಅಂಕುಶ
ಕ್ಷಮಿಸುವೇಯಾ ನನ್ನ
ಕ್ಷಮಿಸುಬಿಡು ಇದೊಮ್ಮೆ
ದೊಡ್ಡ ಮನಸ್ಸು ಮಾಡಿ...
- ಶಿವಾ ಮದಭಾಂವಿ, ಬೆಳಗಾವಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಓದಿದಷ್ಟು ದಾಹ ತೀರದು(ಕವಿತೆ) - ಶಾಂತಾರಾಮ ಶಿರಸಿ, ಉತ್ತರ ಕನ್ನಡ.

ರವಿ ಬೆಳಗೆರೆಯವರ ಅಕ್ಷರಗಳ ಬರವಣಿಗೆಯ ಜ್ಞಾನ ಕಣಜವದು. 

"ದಿ ಅನ್ ಸ್ಟಾಪೆಬಲ್ ವ್ರೈಟಿಂಗ್ ಮಶಿನ್ ಎಂದರೆ, 
ದಿ ಜರ್ನಿ ಆಫ್ ರವಿ ಬೆಳಗೆರೆ"ಯವರನ್ನು ಕೈ ಮಾಡಿ ತೋರಿಸಲೇಬೇಕು...... 
ಅಕ್ಷರಗಳ ಅಬ್ಬರದಿಂದ ಅಂಬರದಲ್ಲಿ ರಾರಾಜಿಸುತ್ತಿದ್ದ ರವಿ ಬೆಳಗೆರೆ. 
ಚೂರಿಗಿಂತ ಚೂಪು- ರವಿ ಬೆಳಗೆರೆಯವರ  ಲೇಖನಿಯ ಛಾಪು.

ರವಿ ಕಾಣದ್ದನ್ನು ಕವಿಕಂಡ-ರವಿ-ಕವಿ ಇಬ್ಬರೂ ಕಾಣದ್ದನ್ನು ಈ ರವಿ ಬೆಳಗೆರೆ ಕಂಡ ಎಂದರೆ ಸರಿ ಹೊಂದುವ ಮಾತಾಗಿದೆ.

ರವಿ ಬೆಳಗೆರೆ ಎಂದರೆ ಆ ವ್ಯಕ್ತಿತ್ವ ಹಾಗೇ ಕಣ್ಮುಂದೆ ಬಂದು ನಿಲ್ಲುತ್ತೆ.
ಅದು ನಾನು ಪದವಿ ಓದುತ್ತಿರುವ ಸಮಯ. 
ಅದಕ್ಕಿಂತ ಮುಂಚೆ ಹಾಯ್ ಬೆಂಗಳೂರು ಪತ್ರಿಕೆಯ ಬಗ್ಗೆ ಕೇಳಿದ್ದೆ. ಆದರೆ ಆಸಕ್ತಿ ತೋರಲಿಲ್ಲ. ಒಂದು ವಾಟ್ಸಪ್ ಸ್ಟೇಟಸ್ ನ ವೀಡಿಯೋ ಮಾತ್ರ ನೋಡಿದ್ದು.
ಅದ್ಯಾವುದೆಂದರೆ "ಸರ್ ದುಡ್ಡು ಮಾಡೋದು ಹೇಗೆ... " ಎನ್ನುವ  ವೀಡಿಯೋ ನೋಡಿದ್ದೇ ತಡ. 
ಅಲ್ಲಿಂದ ರವಿಬೆಳಗೆರೆಯ ಹಾಯ್ ಬೆಂಗಳೂರಿನ ಪತ್ರಿಕೆಯ ಕಡೆಗೆ ಒಲವು, ಅವರ ಬಗೆಗಿನ ಹುಡುಕಾಡುವಿಕೆ, ತಡಕಾಡುವಿಕೆ, ಬುಕ್ಸ್, ಓ ಮನಸೇ ಮ್ಯಾಗ್ಸಿನ್,ಅಂತರ್ಜಾಲದಲ್ಲಿ ಅವರ ಬಗ್ಗೆ ಏನೇನುಂಟೋ ಅವಷ್ಟನ್ನೂ ಜಾಲಾಡಿ ಜರಡಿ ಹಿಡಿದು ಸಾಣಿಸಿದ್ದೆ.
ಅಷ್ಟೊಂದು ಆಸೆ. 

ಅದಕ್ಕಿಂತಲೂ ಹೆಚ್ಚು ರವಿಬೆಳಗೆರೆಯವರು ಬಿಡುಗಡೆ ಮಾಡುವ ಧ್ವನಿಸುರುಳಿಗಳು ಒಂದಕ್ಕಿಂತ ಒಂದು ಅಚ್ಚುಮೆಚ್ಚು ಹಿಡಿಸುತ್ತಿದ್ದವು ಅವೇನೋ ಕೇಳಿಸಿಕೊಳ್ಳುವ ಹುಚ್ಚ. 
ಅದರಲ್ಲಿ ತುಂಬಾ ಇಷ್ಟವಾದದ್ದು  ಅವರ ಸರ್ ದುಡ್ಡು ಮಾಡೋದು ಹೇಗೆ ಎಂಬುವಲ್ಲಿ ಬರುವ ಕೊಟ್ರೇಶಿಯ ಕಥೆ ಎಂದಾಕ್ಷಣ ಏನೋ ಒಂದು ಹುಮ್ಮಸ್ಸು... 

ಇನ್ನೊಂದು ಹಾಯ್ ಬೆಂಗಳೂರು ಕಾಣಲಾರೆವು, ಇನ್ನೊಬ್ಬ ರವಿ ಬೆಳಗೆರೆ ಕಾಣಲಾರೆವು. 
ನಿದ್ದೆಗಣ್ಣಲ್ಲೂ ರವಿಬೆಳಗೆರೆಯವರ ಹೆಸರು ಕೇಳಿದಾಗ ತಬ್ಬಿಬ್ಬಾಗುವ ಅನೇಕರು ತುಂಬಾ ಭಯಭೀತರಾಗಿರುತ್ತಿದ್ದರು(ಹಾಯ್ ಬೆಂಗಳೂರಿನ ಸಂಪಾದಕೀಯದಲ್ಲಿ). 

ಆಡು ಮುಟ್ಟದ ಸೊಪ್ಪಿಲ್ಲ ಎಂಬ ನುಡಿಯಂತೆ ಬೆಳಗೆರೆಯವರು ತಲುಪದ ಜಾಗಲವಿಲ್ಲ, ಮುಟ್ಟದ ವಿಷಯವಿಲ್ಲ,ಮಾತಾಡದ ವಿಷಯವಿಲ್ಲ. ಅವನ್ನೆಲ್ಲ ನನ್ನ ಹತ್ತಿರ ಹೇಳಲು ಸಾಧ್ಯವಿಲ್ಲ. 
ಅವರನ್ನು ಮುಟ್ಟಲೂ ಸಾಧ್ಯವಿಲ್ಲ. 
ಏಕೆಂದರೆ ಬೆಳಗೆರೆಯವರು ಆಕಾಶದಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿದ್ದರಲ್ಲಾ. 
ಅದೊಂದು ಮೇರು ಪರ್ವತ, ಜ್ಞಾನದ ಗಣಿ, ಅಕ್ಷರಗಳಿಂದಲೇ ಜ್ವಾಲೆ ಎಬ್ಬಿಸುವ ಜ್ವಾಲಾಮುಖಿ. 

ರವಿ ಬೆಳಗೆರೆ ನೋಡಿದರೆ ಮುದ್ದು ಮೊಗದ ಕರುನಾಡ ಕುವರ, 
ಸರಸ್ವತೀ ಪುತ್ರ, 
ಪತ್ರಿಕಾಲೋಕದ ಮೇರು ವರದಿಗಾರ ಇವರ ಜ್ಞಾನದ ಮುಂದೆ ನಿಲ್ಲುವವರು ಯಾರ.. 
ಪ್ರತಿಭಾನ್ವಿತ ಸೂತ್ರಧಾರ-ಪಾತ್ರಧಾರ, 
ಸಹಾಯಹಸ್ತದ ಸಾಹುಕಾರ, 
ಅಂತವರ್ಯಾರೂ ಇನ್ನೂ ನಮಗೆ ಸಿಗಲಾರ, ಹೊಳೆಯುತ್ತಿರುವ ನಕ್ಷತ್ರ, 
ಛಲದಂಕ ಮಾತುಗಾರ,
ದೂರದೃಷ್ಟಿಯುಳ್ಳ ಬರವಣಿಗೆಯ ಹಂಟರ್, 
ದೂರದರ್ಶನದಲ್ಲಿ ಮಿನುಗುವ ಸ್ಟಾರ್, 
ದಿ ಲೀಡರ್ ಆಫ್ ಲಿಟ್ರೇಚರ್... 

ಅವರ  ಬರಹಗಳ ಪುಸ್ತಕದ ಜೊತೆಗಿನ ಜರ್ನಿಯು ನಮಗೆ ಪಾಠ, 
ಅವರ ಬಗ್ಗೆ ಓದುವಿಕೆ ಇನ್ನೂ ಮುಗಿಯದ ಆಟ... 
ರವಿಬೆಳಗೆರೆಯವರ ಅದ್ಭುತ ಅನೇಕ ಬರಹ, 
ಅವಗಳನ್ನು ಓದುತಿರೆ/ಧ್ವನಿ ಸುರುಳಿಗಳ ಆಲಿಸುತಿರೆ ತೀರದ ಓದುವಿಕೆಯ/ಆಲಿಸುವಿಕೆಯ ದಾಹ.... 
ಅಂತವರನ್ನು  ಕಂಡಿದ್ದು, ಅವರ ಬರವಣಿಗೆ ಓದುತ್ತಿರುವುದು,ಅವರ ಧ್ವನಿ ಆಲಿಸುತ್ತಿರುವ ನಾವೇ ಭಾಗ್ಯವಂತರು... 

ರವಿ ಬೆಳಗೆರೆಯವರು ಹೇಳುವ ಕೊಟ್ರೇಶಿಯ ಸಾಲಿನಲ್ಲಿ ಬರುವವರಲ್ಲಿ ನಾನೂ ಒಬ್ಬಾತ, 
ರವಿಬೆಳಗೆರೆಯವರ ಬರವಣಿಗೆ, ಧ್ವನಿಯನ್ನು ಸದಾ ಹಿಂಬಾಲಿಸುವಾತ.... 
- ಶಾಂತಾರಾಮ ಶಿರಸಿ, ಉತ್ತರ ಕನ್ನಡ.
8762110543
7676106237.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹೆಣ್ಣಿನ ಸಿಂಗಾರ (ಕವಿತೆ) - ಮೌನೇಶ.ಎನ್.ವಿಶ್ವಕರ್ಮ.

ತೆಳ್ಳನೇ ಹೆಣ್ಣೊಂದು 
ಬೆಳ್ಳನೇ ವಸ್ತ್ರ ಧರಿಸಿ
ಹೋರಟವಳೆ ಕಪ್ಪು ರಸ್ತೆಯಲ್ಲಿ..

ರತ್ನ ಗಂಭದಿ
ರಂಗ ಮಂಚದಿ
ರಂಗು ರಂಗಾಗಿಹಳು ನೋಡಲ್ಲಿ..

ರವಿಯ ಕಿರಣದಿ 
ರಂಗೇರಿದ ವರ್ಣದಿ 
ಪಳಪಳನೇ ಹೋಳೆಯುತ್ತಿಹಳು ನೋಡಲ್ಲಿ…

ಕಣ್ಣ ಕಾಂತಿಯಲ್ಲಿ
ಸಣ್ಣ ಹೆಜ್ಜೆಯಲ್ಲಿ
ನುಣಗೆ ಬಳುಕುತ್ತಾ ಹೋರಟವಳೆ ನೋಡಲ್ಲಿ…

ಅವಳ ಈ ವಯ್ಯಾರ 
ಕಪ್ಪು ರಸ್ತೆಗೆ ಶೃಂಗಾರ
ನೋಡುಗರಿಗೆ ಮಂದಾರ 
ಇದೇ ಹೆಣ್ಣಿನ ಸಿಂಗಾರ…..
- ಮೌನೇಶ.ಎನ್.ವಿಶ್ವಕರ್ಮ.
ಮು|| ಕೋಟಗೇರಾ ತಾ||ಜಿ||ಯಾದಗಿರಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಬಹುಮುಖ ಪ್ರತಿಭೆ ವಿದ್ಯಾ ರೆಡ್ಡಿ (ಲೇಖನ) - ಅಶ್ವಜೀತ ದಂಡಿನ, ಯುಗ ಬರಹಗಾರ, ಬೀದರ.

ವಿದ್ಯಾ ರೆಡ್ಡಿ ಶ್ರೀಮತಿ  'ವಿದ್ಯಾ ಮಂಜುನಾಥ್ ರೆಡ್ಡಿ' ಅವರು ಕ್ರಿ.ಶ. 1983 ಫೆಬ್ರವರಿ 28 ರಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಪ್ಪಲಕಟ್ಟಿ ಯಲ್ಲಿ ತಾಯಿ ರಂಗಮ್ಮ  ತಂದೆ  ಶ್ರೀಮಂತ ಅವರ ಉದರದಲ್ಲಿ ಎರಡನೇ ಮಗಳಾಗಿ ಜನಿಸಿದರು.
        ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ಪುಲಗಡ್ಡಿಯಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು   ನಾಯಕ್ ಸ್ಟೂಡೆಂಟ್ ಫೆಡರೇಶನ್ ಸ್ಕೂಲ್ ಗೋಕಾಕನಲ್ಲಿ  ಮುಗಿಸಿದ್ದಾರೆ .  ಜೆ ಎಸ್ ಎಸ್ ಕಾಲೇಜ್ ಧಾರವಾಡನಲ್ಲಿ  ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮುಗಿಸಿ,  ಪದವಿ ಶಿಕ್ಷಣವನ್ನು  ಎಲ್ ಇ  ಟಿ ಕಾಲೇಜ್ ಗೋಕಾಕನಲ್ಲಿ ಮುಗಿಸಿದ್ದಾರೆ. ಎಂ ಎ ಸೋಶಿಯಾಲಜಿಯನ್ನು  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ, ಎಂ ಎ ಕನ್ನಡವನ್ನು  ಮೈಸೂರು ವಿಶ್ವವಿದ್ಯಾಲಯದಲ್ಲಿ ಪಡೆದು,  SLET ಪರೀಕ್ಷೆಯಲ್ಲಿಯೂ ಪಾಸಾಗಿದ್ದಾರೆ. . ಸರಳ, ಶಾಂತ ಸ್ವಭಾವದ, ಸೂಕ್ಷ್ಮಮತಿ ಹಾಗೂ ಕ್ರಿಯಾಶೀಲತೆಯುಳ್ಳ ಶ್ರೀಮತಿ 'ವಿದ್ಯಾ ರೆಡ್ಡಿ' ಅವರು ತಮ್ಮ ವೃತ್ತಿಯ ಜೊತೆ ಜೊತೆಗೆ  ಸಾಹಿತ್ಯದ ಅಭಿರುಚಿಯನ್ನು ಮೈಗೂಡಿಸಿಕೊಂಡು ಸಮಾಜಮುಖಿ ಕಾರ್ಯಗಳಿಗೆ  ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆಗೆ, ಕಾದಂಬರಿ, ಕವಿತೆ, ವಿಮರ್ಶೆ, ಲೇಖನಗಳು ಹಾಗೂ ಕಥೆಗಳನ್ನು ರಚಿಸಿ   ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

        ಗೌರವಾನ್ವಿತ ಕವಯಿತ್ರಿಗಳ ಮೇಲೆ  ದ ರಾ ಬೇಂದ್ರೆ, ಕುವೆಂಪು, ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ, ಎಸ್ಎಲ್ ಭೈರಪ್ಪ, ಮತ್ತು ಗೀತಾ ನಾಗಭೂಷಣ. ಅವರ ಪ್ರಭಾವ ಬೀರಿರುವುದು ಕಂಡುಬರುತ್ತದೆ. 

        ಇವರ ಹಲವಾರು ಬರವಣಿಗೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರ  ಮನಗೆದ್ದಿವೆ. ಇವರು ಕ್ರಿ.ಶ , 2020 ಎಪ್ರಿಲ್ 8 ರಂದು "ಮಂಜು ಮುಸುಕಿದ ಹಾದಿ" ಎನ್ನುವ  ಕಾದಂಬರಿ, ಮತ್ತು "ಅಂದಗಾತಿ" ಎನ್ನುವ ಕವನ ಸಂಕಲನವನ್ನು ಒಟ್ಟಿಗೆ ಹೊರತಂದಿದ್ದಾರೆ.
       
        ಜೊತೆಗೆ ಪುಸ್ತಕಗಳನ್ನು ಓದುವುದು, ಬರೆಯುವುದು, ಸಂಗೀತಕ್ಕೆ ಸಂಬಂಧ ಪಟ್ಟoತೆ ಹಾಡುವುದು, ಕೇಳುವುದು,  ಪುಸ್ತಕಗಳ ಸಂಗ್ರಹ. ಕನ್ನಡ ಕವಿಗೋಷ್ಠಿಗಳಲ್ಲಿ ಚಿಂತನಾಗೋಷ್ಠಿ ಗಳಲ್ಲಿ,  ವಿಚಾರಸಂಕಿರಣಗಳಲ್ಲಿ,  ಉಪನ್ಯಾಸಗಳಲ್ಲಿ, ಸಂದರ್ಶನಗಳಲ್ಲಿ,  ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಲವಾರು ಪ್ರಶಸ್ತಿ ಪುರಸ್ಕೃತ ಗೌರವಗಳನ್ನು  ತಮ್ಮದಾಗಿಸಿಕೊಂಡಿದ್ದಾರೆ. ತಮ್ಮನ್ನು  ಸಾಹಿತ್ಯ ಮತ್ತು ಸಮಾಜ ಸೇವಾ ಚಟುವಟಿಕೆಗಳಲ್ಲಿ  ತೊಡಗಿಸಿಕೊಂಡಿದ್ದಾರೆ.
        
         ನಿಪ್ಪಾಣಿಯಲ್ಲಿಯ  ಜ್ಞಾನ ಮೇವ ಜಯತೆ ಪ್ರತಿಷ್ಠಾನದ  ಎಂ ಡಿ ಯಾಗಿ ಹಲವಾರು ಸಾಮಾಜಿಕ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಬಹುಜನ ಹಿತರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ.

         ಕೊರೋನಾದಂಥ ಕೆಟ್ಟ ಪರಿಸ್ಥಿತಿಯ ಸಂದರ್ಭದಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚಿನ ಮಾಸ್ಕಗಳನ್ನು ಮನೆಯಲ್ಲಿಯೇ  ಹೊಲಿದು ಬಡವರಿಗೆ, ಪೊಲೀಸ್ ಇಲಾಖೆಗೆ, ಪೌರಾಡಳಿತ ಇಲಾಖೆಯ ಕೆಲಸಗಾರರಿಗೆ ಉಚಿತವಾಗಿ ಹಂಚುವುದರ ಮೂಲಕ ಮಾನವಿಯತೆ ಮೆರೆದಿದ್ದಾರೆ. ಮತ್ತು ಅನಾಥಾಶ್ರಮದ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು  ಏರ್ಪಡಿಸುವುದರ ಮೂಲಕ ಅನಾಥಮಕ್ಕಳ ಬಾಳಿಗೆ ಆಶ್ರಯವಾಗಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.

         ಜ್ಞಾನ ಮೇವ ಜಯತೆ ಪ್ರತಿಷ್ಠಾನದ ವತಿಯಿಂದ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಗಿಡಗಳನ್ನು ನೆಡುವುದರ ಮೂಲಕ ಇಂದಿನ ಯುವಪೀಳಿಗೆಗೆ ಸ್ಫೂರ್ತಿದಾಯಕವಾಗಿದ್ದಾರೆ. ಮತ್ತು ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ್ದಾರೆ.

         ಶ್ರೀಮತಿ 'ವಿದ್ಯಾ ರೆಡ್ಡಿ' ಅವರ ಈ ಸಾಧನೆಗೆ  ನಾಡಿನ ಹಲವಾರು ಸಂಘ-ಸಂಸ್ಥೆಗಳಿಂದ ಪ್ರಶಸ್ತಿ-ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ. ಇವರ "ಮಂಜು ಮುಸುಕಿದ ಹಾದಿ" ಕಾದಂಬರಿಗೆ ಕ್ರಿ.ಶ 2020 ರಲ್ಲಿ  ಆಜೂರ ಪ್ರತಿಷ್ಠಾನದ ವತಿಯಿಂದ *"ಆಜೂರ ಪ್ರಶಸ್ತಿ"* ,  ಕ್ರಿ.ಶ 2021ರಲ್ಲಿ ರಾಜ್ಯ ಯುವ ಬರಹಗಾರರ ಕೇಂದ್ರ ಸಮಿತಿ ಬೆಂಗಳೂರು ವತಿಯಿಂದ *ಕುದ್ಮಲ್ ರಂಗರಾವ್ ಪ್ರಶಸ್ತಿ* , ಚೇತನ ಫೌಂಡೇಶನ್ ಹುಬ್ಬಳ್ಳಿ ವತಿಯಿಂದ *ಬಸವ ಸೇವಾರತ್ನ ಪ್ರಶಸ್ತಿ* , ಸಪ್ತಸ್ವರ ಸಂಗೀತ ಕಲಾ ಬಳಗ ಬೆಳಗಾವಿ ವತಿಯಿಂದ  *ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ* ಮತ್ತು ಕನ್ನಡ ಸೇವೆಗೆ  *"ಕನ್ನಡ ನಿಧಿ"* ಪ್ರಶಸ್ತಿ  ದೊರೆತಿದೆ.
         
      ಪ್ರಸ್ತುತ ಕವಿಗಳು ತಮ್ಮ ಪತಿ ಮಂಜುನಾಥ್ ರೆಡ್ಡಿ ಮತ್ತು ಮುದ್ದು ಮಕ್ಕಳಾದ ನಿಸರ್ಗಾ ರೆಡ್ಡಿ , ನಿರ್ಮಿತಾ ರೆಡ್ಡಿ ಅವರ ಜೊತೆಗೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ನೆಲೆಸಿದ್ದಾರೆ.
✍️ ಅಶ್ವಜೀತ ದಂಡಿನ, ಯುಗ ಬರಹಗಾರ, ಬೀದರ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಬಾಳಿದೇತಕೆ (ಕವಿತೆ) - ತುಳಸಿದಾಸ ಬಿ. ಎಸ್.

ದೇವರಿಲ್ಲದ ಗುಡಿಯು
ತಾಯಿಯಿಲ್ಲದ ಕುಡಿಯು
ಚೋಮನಿಲ್ಲದ ದುಡಿಯ
ಹಾಗೆ ನನ್ನೀ ಬದುಕೆ ಶೋಕ ಸಾಗರ

ಅನ್ನವಿರದ ಮನೆಯು
ಬಣ್ಣ ಮಾಸಿದ ಬಟ್ಟೆ
ಎಣ್ಣೆ ಕಾಣದ ನೆತ್ತಿ
ಗೇಣೆ ಸೋರುವ ಸೂರು ಎಲ್ಲ ಸಹಿಸಿದೆ

ಮೆಚ್ಚಿದ ನನಗಾಗಿ 
ಹುಚ್ಚಿಯಾಗಿ ಬಂದೆ
ಇಚ್ಛೆಯಂತೆ ಬದುಕಿ
ಸ್ವಚ್ಛ ಪ್ರೇಮವ ನೀಡಿ ಪರ ಲೋಕ ನೀ ಹೇಗೆ ಬೇಗ ಸೇರಿದೆ

ಸಿಡಿಲಿ ಬಡಿದಿದೆ ಮನಕೆ
ಒಡಲೊಳಾರದು ಕಿಚ್ಚು
ಕುಡಿಗಳೆಳೆಯರು ಇನ್ನು
ನಡೆದೆ ಎಲ್ಲರನಗಲಿ ನೀನಿರದ ಭುವಿಯಲ್ಲಿ ಹೇಗೆ ಬದುಕಲಿ

ಜಗವೂ ನಗಲೂ ಇಲ್ಲ
ಮತ್ತೆ ಅಳಲೂ ಇಲ್ಲ
ನೋವು ನುಂಗುತ ಬೆಳೆದೆ
ಸಾವು ಗೆಲ್ಲದೆ ಸೋತೆ ಬೇವಿನಂತ ಕಹಿ ಬಾಳಿದೇತಕೆ
                             
 - ತುಳಸಿದಾಸ ಬಿ. ಎಸ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮಹಿಷ ಅರಸು(ಕವಿತೆ) - ತುಂಬಲ ಸುರೇಶ್.

ಮಹಿಷ ರಾಕ್ಷಸನೆಂದು
ಭಿತ್ತಿದರು ವಿಷ ಬೀಜವಾ
ಮನುವಾದಿಗಳು ಮೌಢ್ಯದ ಮನೆಯಲ್ಲಿ?
ದ್ರಾವಿಡರು ಬೌದ್ಧರು ಮರೆಯುವುದಿಲ್ಲ
ಮಹಿಸೂರಿನ ಜನಕನನ್ನು !

ಹೂವಿನಂತಹ ಮನಸ್ಸಿನ ಮಹಿಷನಿಗೆ
ಹಾವನ್ನು ಕೊಟ್ಟು ಹಿಡಿಸಿದರು
ಹಲ್ಲುಗಳ ಕೊರೆಯಮಾಡಿ
ಕ್ರೂರ ರೂಪವನ್ನು ತೊಡಿಸಿದರು

ಪೌರಾಣಿಕ - ಪುರಾಣಗಳನ್ನು ಕಟ್ಟಿಕೊಂಡು
ನವರಾತ್ರಿಯನ್ನು ಸೃಷ್ಟಿಸಿದರು
ಕಾಣದ ದೇವರ ದುರ್ಗಿಯ ಮಾಡಿ
ಮಹಿಷನಿಗೆ ಅಸುರ ಪಟ್ಟವನ್ನು ಕಟ್ಟಿದರು 

ಸಮಾನತೆಯನ್ನು ಸಾರಿದವನನ್ನು
ಸನಾತನವಾದಿಗಳು
ದೂರಿದರು
ಶಾಂತಿಯ ಸಾರಲು ಬಂದವನನ್ನು
ಸಾವಿನ ಮನೆಗೆ ನೂಕಿದರು
- ತುಂಬಲ ಸುರೇಶ್, 9620166872.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಭಾನುವಾರ, ನವೆಂಬರ್ 14, 2021

ವೀರಯೋಧ ಸಂದೀಪ್ ಉನ್ನಿಕೃಷ್ಣನ್ (ಕವಿತೆ) - ಅಂಬರೀಶ D. ನಾಯ್ಕೋಡಿ.


ಭಾರತದ ಅಣ್ಣ
ಸಂದೀಪ್ ಉನ್ನಿಕೃಷ್ಣ
ತಂದೆ-ತಾಯಿ ಪಟ್ಟರು ಆನಂದ,
ಸೇನೆಗೆ ಸೇರಿದ ನಮ್ಮ ಕಂದ....!

ದೇಶ ರಕ್ಷಣೆ ಮಾಡುವೆ ಎಂದು ಎಂದ,
ತೊಟ್ಟ ಪಣ ಬಿಡಲಿಲ್ಲ ಈ ಕಂದ.
ಹೋದನು ಸೇನೆಗೆ ಖುಷಿಯಿಂದ,
ವೈರಿಗಳ ಜೀವ ತೆಗೆದನು ಧೈರ್ಯದಿಂದ....!

ಶೌರ್ಯದಿಂದ ನಿಲ್ಲಿಸಿದ ಉಗ್ರರ ಅಟ್ಟಹಾಸ,
ತಾಯಿನಾಡು ರಕ್ಷಣೆಗೆ ಮಾಡಿದ ಹರಸಾಹಸ.
ಭಾರತಾಂಬೆಯ ವೀರಪುತ್ರ ಈತ,
ಇನ್ನೊಂದು ಹೇಳುವೆ ಪ್ರೀತಿಯ ಮಾತ...!

ಉಸಿರುಬಿಟ್ಟು ಹಾರಿಸಿದ ಬಾವುಟ,
ಬಾನೆತ್ತರದಲ್ಲಿ ಹಾರುತಿದೆ ಪಟಪಟ.
ಕೇಸರಿ, ಬಿಳಿ, ಹಸಿರು
ಸೈನಿಕರಿಗೆ ಆಯಿತು ಉಸಿರು....!

ಸೈನಿಕ ನೀ ಈ ದೇಶದ ನಾಯಕ
ಮೆಚ್ಚಲೇಬೇಕು ಈ ನಿನ್ನ ಕಾಯಕ.
ಹೇಳುವೆ ಕಣ್ಣೀರಿನ ಕಥೆಯೊಂದ,
ಸಂದೀಪ ಇಲ್ಲದಂತಾಯ್ತು ಇನ್ನ ಮುಂದ....!

ಮಡಿದನು ಭಾರತಾಂಬೆಯ ಮಡಿಲಲ್ಲಿ
ರಕ್ತ ಕುದಿಯುತ್ತಿತ್ತು ಒಡಲಲ್ಲಿ.
ಮತ್ತೊಮ್ಮೆ ಹುಟ್ಟಿ ಬನ್ನಿ ತಾಯ್ನಾಡಿನಲ್ಲಿ,
ಜಯದ ಬಾವುಟ ಹಾರಿಸೋಣ ಭಾರತದ ನೆಲದಲ್ಲಿ...! 
                 - ಅಂಬರೀಶ D. ನಾಯ್ಕೋಡಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಪ್ರೀತಿಯ ದೀಪಾವಳಿ (ಕವಿತೆ) - - ಆಶಾ.ಎಲ್.ಎಸ್, ಶಿವಮೊಗ್ಗ.

ಮತ್ತೆ ಬಂದಿತು ದೀಪಾವಳಿ
ಎಲ್ಲೆಲ್ಲೂ ಸಡಗರದ ಹಾವಳಿ
ಹಚ್ಚೋಣ ಪ್ರೀತಿಯ ಪ್ರಣತಿ
ಬೆಳಗಲಿ ಎಲ್ಲರೆದೆಯಲ್ಲಿ ಜ್ಯೋತಿ

ಕರಗಲಿ ಮನದ ದ್ವೇಷ ಅಸೂಯೆ
ಹರಡಲಿ ಎಲ್ಲೆಲ್ಲೂ ಪ್ರೀತಿಯ ಛಾಯೆ
ಲೆಕ್ಕವಿಲ್ಲದಷ್ಟು ದೀಪಗಳ ಉತ್ಸವ
ಹೃದಯದಲಿ ಬೆಳಗಲಿ ಸ್ನೇಹಭಾವ

ಸಿಡಿಯದಿರಲಿ ಮಾತಿನ ಕಿಡಿ
ಹೊಮ್ಮಿಬರಲಿ ಹೊಂದಿಕೆಯ ನುಡಿ
ಮತ್ತೆ ಮತ್ತೆ ಹಚ್ಚೋಣ ಪ್ರೀತಿಯ ದೀಪ
ಎಲ್ಲರ ಹೃದಯದಲಿ ಬೆಳಗಲಿ ಪ್ರೀತಿಯ ದೀಪ

- ಆಶಾ.ಎಲ್.ಎಸ್, ಶಿವಮೊಗ್ಗ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕೈತಪ್ಪಿದ ಅಮೂಲ್ಯ ಸಂಪತ್ತು (ಸಣ್ಣ ಕತೆ) - ವೈಷ್ಣವಿ ಪುರಾಣಿಕ್ ಕುಂಭಾಸಿ.

ಒಬ್ಬ ‌ಯುವಕನು ಮಾತೃ ಋಣವನ್ನು ತೀರಿಸಲೆಂದು ತನ್ನ ತಾಯಿಗೆ ಒಂದು ಲಕ್ಷ ‌ಬಂಗಾರದ ನಾಣ್ಯಗಳನ್ನು ಕೊಟ್ಟು ಇದರಿಂದ ನಿನಗೆ ಇಷ್ಟ ವಾದುದನ್ನು ‌ಮಾಡಿಸಿಕೊ,  ‌ನನಗೆ ತಾಯಿ ಋಣದಿಂದ ‌ಮುಕ್ತಿ ಸಿಗುತ್ತದೆ ಎನ್ನುತ್ತಾನೆ. ತಾಯಿ ಮುಗುಳ್ನಗುತ್ತ ಹೀಗೆ ಹೇಳಿದಳು. ಮಗು  ನನ್ನ ಋಣ ತೀರಿಸಲು  ಈ ಹಣ ‌ನನಗೆ ‌ಬೇಡ , ನೀನು ಒಂದು ದಿನ ‌ರಾತ್ರಿ ನನ್ನ  ಬಳಿ‌ ಇದ್ದು ಸೇವೆ ಮಾಡಿದರೆ  ಸಾಕು‌ ಅಂತ ‌ಹೇಳಿದಳು. ತಾಯಿ ಹೇಳಿದಂತೆ ‌ಮಗನು ಸರಿಯೆಂದನು 
ರಾತ್ರಿ ತಾಯಿಯ ಮಂಚದ. ಬಳಿ ಮಲಗುತ್ತಾನೆ. ಮಗನು ‌ನಿದ್ರೆಗೆ ಜಾರುತ್ತಾನೆ.   ಆಗ  ತಾಯಿ ಮಗನೆ ನನಗೆ  ದಾಹ ಆಗುತ್ತದೆ ಸ್ವಲ್ಪ ನೀರು ಕುಡಿಸು ಎಂದು ಹೇಳುತ್ತಾಳೆ. ಮಗನು ಸಂತೋಷ ದಿಂದ ಎದ್ದು  ಗ್ಲಾಸಿನಿಂದ ತಾಯಿಗೆ ನೀರನ್ನು ‌ಕುಡಿಸುತ್ತಾನೆ. ತಾಯಿ ಎರಡು ಗುಟುಕು  ನೀರನ್ನು ‌ಕುಡಿದಾಗ  ಲೋಟ ಪಕ್ಕಕ್ಕೆ ಜಾರಿ  ಬೀಳುತ್ತದೆ. ‌ಮಗನು‌‌ ಮೌನದಿಂದ ಮಲಗುತ್ತಾನೆ. 
                 ಮತ್ತೆ ಮಗನು ನಿದ್ರೆಗೆ ಜಾರಲು  ತಾಯಿ ಮತ್ತೆ ಮಗನಿಗೆ  ಸ್ವಲ್ಪ ನೀರು  ಕುಡಿಸು ಅಂತ  ಕೇಳುತ್ತಾಳೆ . ಮಗನು ಮತ್ತೆ ಎದ್ದು ನೀರು ಕುಡಿಸುತ್ತಾನೆ ಮತ್ತೆ ನೀರು ಚೆಲ್ಲಿ ಹಾಸಿಗೆಯೆಲ್ಲ. ಒದ್ದೆಯಾಗುತ್ತದೆ   ಮಗ ತಾಯಿಯನ್ನು ಏನು ಮಾಡಿದೆ   ಅಮ್ಮಾ ಅಂತ‌ ಪ್ರಶ್ನಿಸಿದ, ಅದಕ್ಕೆ ‌ ತಾಯಿ ಆಕಸ್ಮಾತ್ತಾಗಿ ಆಯಿತು ಮಗು ಅಂತ ಹೇಳಿದಳು.  ಸ್ವಲ್ಪ  ಸಮಯದ ನಂತರ   ತಾಯಿ ಮತ್ತೆ ನೀರು ‌ಕುಡಿಸಲು  ಹೇಳಿದಳು ಅದಕ್ಕೆ ಮಗ ಕೋಪಿತನಾಗಿ ಈವಾಗ ತಾನೆ  ನೀರು ಕುಡಿದೆ ಯಲ್ಲವೆ   ಎಷ್ಟು ನೀರು  ಕುಡಿಯುವೆ ನೀನೇನಾದರು  ಹತ್ತಿಯ. ಬೀಜ ಗಳನ್ನು  ತಿಂದೆಯಾ ಅಂತ ಹೇಳಿ ನೀರನ್ನು ಕೊಟ್ಟನು. ಮತ್ತೆ ನೀರನ್ನು ಕುಡಿಯಲು ಹೋಗಿ ನೀರು ಚೆಲ್ಲುತ್ತದೆ.
     ಆ ಸಂದರ್ಭದಲ್ಲಿ ಆ ಮಗನು ತಾಳ್ಮೆಯನ್ನು ಕಳೆದು ಒಮ್ಮೆ ಜೋರಾಗಿ ಬಾಯಿಬಂದ ಬೈದು ನೀವು ನನ್ನನ್ನು ಪರೀಕ್ಷೆ ಮಾಡುತ್ತಾ ಇದ್ದೀರಾ ಎಂದು ಮಲಗಿಕೊಂಡನು. ಇತ್ತ ತಾಯಿಯವರು ಇದೆ ನೋಡಿ ಮಕ್ಕಳನ್ನು ದೊಡ್ಡವರು ಮಾಡುವ ತನಕ ನಾವು ಎಷ್ಟಲ್ಲ ಕಷ್ಟ ಪಡುತ್ತೇವೆ, ನಾವುಗಳು ಸಾವಿರಾರು ಹರಕೆಯನ್ನು ಹೊತ್ತುಕೊಂಡು ಒಳ್ಳೆಯ ಕೂಸು ಆಗಲಿ ಎಂದು ಬೇಡಿಕೊಳ್ಳುತ್ತೇವೆ ಅವರೇ ನಮ್ಮ ಕೊನೆಯ ಕಾಲದಲ್ಲಿ ನೋಡಿಕೊಳ್ಳುತ್ತಾರೆ ಎನ್ನುವ ಭಾವನೆಗಳು ಎಲ್ಲವೂ ಗಾಳಿಯಲ್ಲೇ ಲೀನವಾಯಿತು ಎಂದು ಅಲ್ಲೇ ಇದ್ದ ಸಣ್ಣ ಪುಸ್ತಕದ ಹಾಳೆಯನ್ನು ತೆಗೆದುಕೊಂಡು "ಅಮೂಲ್ಯ ಸಂಪತ್ತು" ನಿಮಗೆ ಬೇಕು ಎಂದರು ಸಿಗುವುದಿಲ್ಲ ಎಷ್ಟೇ ಕರೆದರು ಬರುವುದಿಲ್ಲ ಎಂದು ಬರೆಯುವ ಹೊತ್ತಿಗೆ ಇತ್ತ ಮುಂಜಾನೆ ತುಳಸಿ ಕಟ್ಟೆಯಲ್ಲಿ ಹಚ್ಚಿದ ದೇವರ ದೀಪವು ಆರಿ ಹೋಯಿತು.ಇತ್ತ ಆಕೆಯ ಜೀವನ ಅಂತ್ಯವಾಯಿತು.
     
- ವೈಷ್ಣವಿ ಪುರಾಣಿಕ್ ಕುಂಭಾಸಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಲ್ಪನಾ ಕನ್ಯೆ ( ಕವಿತೆ) - ಭವ್ಯ ಟಿ.ಎಸ್.

ನಿನ್ನ ಕಾಡಿಗೆ ಕಂಗಳ ಮೋಡಿಗೆ ಸೋತೆ ಈ ದಿನ
ಕಣ್ಣ ಕಾಂತಿಯಲಿ ಬಾಳ ಬೆಳಕ ಕಂಡೆ ನಾ
ಮನದಿ ಮೂಡಿದ ಕಲ್ಪನೆಯ ಕನ್ಯೆ ನೀನೇನಾ
ಹೃದಯವ ನೋಟದಲ್ಲೇ ಕದ್ದ ಚೆಲುವೆ ನೀನಾ 

ಮತ್ತೆ ಮತ್ತೆ ನೋಡಲು ಕರೆದಿವೆ ನಯನಗಳು
ಕಾರ್ಮೋಡದಂತೆ ಕವಿದಿವೆ ಆ ಮುಂಗುರುಳು
ಪದಗಳಿಲ್ಲದ ಕವಿ ನಾನೀಗ ನಿನ್ನ ವರ್ಣಿಸಲು
ಮರೆಯಲಾರದ ನೆನಪುಗಳ ಹೂಗೊಂಚಲು

ಸೆಳೆವ ಮಿಂಚಿನ ಕಣ್ಣುಗಳ ಚೆಲುವಿನೊಡತಿಯೇ
ಪ್ರತಿಕ್ಷಣವೂ ಎದೆಬಡಿತದಂತೆ ಬೆರೆತ ಸ್ಫೂರ್ತಿಯೇ
ಬಯಕೆಗಳ ಚಿಗುರೊಡೆಸಿದ ಜೀವನ ಸಂಗಾತಿಯೇ
ಪ್ರೇಮಲೋಕದಿ ಕಂಗೊಳಿಸುವ ರೂಪರತಿಯೇ

 ಕಂಗಳೆಂಬ ಹೂಬನದಲ್ಲಿ ವಿಹರಿಸುವ ಭ್ರಮರ
ಸೌಂದರ್ಯದ ಮಕರಂದ ಸವಿದಷ್ಟೂ ಮಧುರ
ಪ್ರೇಮಾನುಭೂತಿ ಮಿಡಿದ ನಯನಗಳೇ ಸಾಗರ
ಬೆಳದಿಂಗಳ ತಂಪೆರೆದ ಮುಗ್ಧಮೊಗದ ಚಂದಿರ

- ಭವ್ಯ ಟಿ.ಎಸ್.
ಶಿಕ್ಷಕರು.ಹೊಸನಗರ
ಶಿವಮೊಗ್ಗ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗಜಲ್ - ಮಾಜಾನ್ ಮಸ್ಕಿ.

ಹೃದಯ ಹೃದಯಗಳ ಮಿಲನ ಎಂದಾಯಿತು ಕೇಳಬೇಡ ಸುಮ್ಮನಿರು 
ತಿಳಿದೋ ತಿಳಿಯದೆ ಬೆರೆತಿರುವೆ ಏಕೆ ಹೀಗಾಯಿತು ಕೇಳಬೇಡ ಸುಮ್ಮನಿರು 

ಅರಿಯದ ಮನಕ್ಕೆ ಜೊತೆಯಾಗಿರುವೆ ನೀನು ಸದಾ 
ಸ್ಪಂದನೆ ಇಲ್ಲದೇ ಸ್ಪಂದಿಸಿದೆ  ಏನಾಯಿತು ಕೇಳಬೇಡ ಸುಮ್ಮನಿರು  

ಘನೀಕರಿಸಿದ ಭಾವನೆ ಕರಗಿದ ಮೋಡವಾಗಿರುವೆ ನೀ 
ಪ್ರತಿ ಸಂಜೆಯ ಸಿಂಧೂರ ಹೇಗಾಯಿತು ಕೇಳಬೇಡ ಸುಮ್ಮನಿರು 

ನೀನಿಟ್ಟ ಮುತ್ತುಗಳಲ್ಲಿ ಬದುಕುತ್ತಿರುವೆ ನಾನು ಕೊರಳ ಹಾರ ಯಾಕಾಯಿತು ಕೇಳಬೇಡ ಸುಮ್ಮನಿರು 

ನೆನಪುಗಳು ಕನಸುಗಳು ಬೆರೆತು ಒಂದಾಗಿವೆ *ಮಾಜಾ*
ಪ್ರೀತಿಯ ಮಹಲು ಯಾವಾಗಾಯಿತು ಕೇಳಬೇಡ ಸುಮ್ಮನಿರು 
- ಮಾಜಾನ್ ಮಸ್ಕಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಲಿಸಿದವರಾರು? (ಕವಿತೆ) - - ಜಗದೀಶ ತಿಗರಿ, ವಿಜಯನಗರ ಜಿಲ್ಲೆ.

ಆ ಶ್ವಾನಕ್ಕೆ ಗುರು ಯಾರು? 
ಮೊಳೆಯಿತು ಹೇಗೆ ನಿಯತ್ತಿನ ಚಿಗುರು..
ಹಸಿದ ಹೊಟ್ಟೆಗೆ ಸಿಕ್ಕ 
ರೊಟ್ಟಿಯ ತುಣುಕು ಕಲಿಸಿತೇನೋ... 
ಸಾಲಾಗಿ ಹೊರಟಿವೆ ನೋಡಲ್ಲಿ ಇರುವೆ
ಆ ವಿಧದ ಶಿಸ್ತಿನ ಕಿರೀಟವಿಟ್ಟವರಾರು?
ಅಗೋ ಅಲ್ಲಿ ನೋಡು ಹದ್ದು
ಮೋಡಗಳ ಮಹಡಿಯ ಮೇಲೆ ವಿರಾಜಮಾನ
ಅದೆಂಥಾ! ಆತ್ಮ ವಿಶ್ವಾಸ
ಮೂಡಿಸಿದ ಮಹನೀಯನಾರು?
ಕಾಸು ಕೂಡಿಡಲಿಲ್ಲ, ವೇಷ ತೊಡಲೇ ಇಲ್ಲ;
ಮೊಸವನಂತು ಮಾಡಲೇ ಇಲ್ಲ;
ಹುಲ್ಲು ಹಾಸಿಗೆಯಲ್ಲಿ ಸುಖ ಶಯನ;
ಎಲ್ಲಿ ಕಲಿತವು ಈ ಖಗ - ಮೃಗಗಳೆಲ್ಲ,
ಮನುಜ ಕಲಿಯದ ಈ ಸರಳ ಪಾಠವ?
- ಜಗದೀಶ ತಿಗರಿ 
ಪ್ರಥಮ ದರ್ಜೆ ಸಹಾಯಕ
ಹೊಳಗುಂದಿ
ಹೂವಿನ ಹಡಗಲಿ ತಾ
ವಿಜಯನಗರ ಜಿ
8970273749


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಚುಟುಕುಗಳು - ಭರತ್ ಕುಮಾರ್ ಆರ್, ಕೊಣನೂರು.

ತವರಿನ ಪ್ರೀತಿ ತಾಯಿ ಇರುವ ತನಕ
ಅಣ್ಣನ ಪ್ರೀತಿ ಅತ್ತಿಗೆ ಬರುವ ತನಕ
ಜನಗಳ ಪ್ರೀತಿ ನಮ್ಮ ಹತ್ತಿರ ಒಂದುಸ್ಥಾನ ಇರುವತನಕ
ಸಂಬಂದಿಕರ ಪ್ರೀತಿ ನಮ್ಮ ಹತ್ತಿರ ಹಣ ಇರುವತನಕ
ನನ್ನ ಪ್ರೀತಿ ಸಾಯುವ ತನಕ /೧/

ತಾಯಿ ಇಲ್ಲದಿದ್ದರೆ ಹಸಿವಿನ ಬೆಲೆ ತಿಳಿಯುತ್ತದೆ
ಅದೇ ತಂದೆ ಇಲ್ಲದಿದ್ದರೆ ಮನೆಯ ಜವಾಬ್ದಾರಿ ಬೆಲೆ ತಿಳಿಯುತ್ತದೆ
ಅದೇ ತಂದೆ ತಾಯಿ ಇಬ್ಬರು ಇಲ್ಲದಿದ್ದರೆ ಜೀವನದ ಬೆಲೆ ತಿಳಿಯುತ್ತದೆ /೨/

ನೆನದವರಿಗೆ ನೆನಪಾಗಿ
ನೊಂದವರಿಗೆ ನೆರವಾಗಿ
ಪ್ರೀತಿಸುವ ಹೃದಯಕ್ಕೆ ಉಸಿರಾಗಿ
ಸ್ನೇಹಿತರ ಬದುಕಿಗೆ ಬೆಳಕಾಗಿ
ಇರುವುದು ನಿಜವಾದ ಸ್ನೇಹ/೩/

ಚನ್ನಾಗಿರೊ ಮನಸ್ಸು ಹುಡುಕಿ
ಆದರೆ ಚನ್ನಾಗಿರೊ ಮುಖ ಹುಡುಕಬೇಡಿ
ಒಳ್ಳೆಯ ಮುಖ ಯಾವತ್ತು ಚನ್ನಾಗಿರೊಲ್ಲ
ಆದರೆ ಒಳ್ಳೆ ಮನಸ್ಸು ಯಾವತ್ತು ಬೇಜಾರ್ ಮಾಡಲ್ಲ....... ಓಕೆ... ಫ್ರೆಂಡ್/೪/

ನಮ್ಮ ಮುಖದ ಸೌoದರ್ಯವನ್ನು
ನಾವೇ ನೋಡಿಕೊಳ್ಳಲು ಸಾಧ್ಯವಿಲ್ಲ
ಅದಕ್ಕೆ ಕನ್ನಡಿಯ ಸಹಾಯ ಬೇಕು
ಹಾಗೆ ನಮ್ಮ ಸರಿ ತಪ್ಪುಗಳನ್ನು ನಾವೇ
ಸರಿಪಡಿಸಿ ಕೊಳ್ಳಲು ಸಾಧ್ಯವಿಲ್ಲ
 ಅದಕ್ಕೆ ಕನ್ನಡಿಯಂಥಹಾ ಮನಸಿರೊ ಸ್ನೇಹಿತರು ಬೇಕು/೫/

ವಿದ್ಯಾರ್ಥಿಗಳೇ ಚಿನ್ನ
ವಿದ್ಯೆಯೇ ಫಲಕ
ವಿದ್ಯಾಮಂದಿರವೇ ಗಣಿ
ಹೆಣ್ಣಿಗೆ ಅಂದವೇ ಆಶ್ರಯ
ಹೂವಿಗೆ ಪರಿಮಳದ ಆಶ್ರಯ
ಕಾಲೇಜಿಗೆ ವಿದ್ಯಾರ್ಥಿಗಳ ಆಶ್ರಯ
ವಿದ್ಯೆಗೆ ಗುರುಗಳ ಆಶ್ರಯ/೬/
- ಭರತ್ ಕುಮಾರ್ ಆರ್ ಸರಗೂರು ಕೊಣನೂರು ಹೋಬಳಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನೆಮ್ಮದಿಯ ನಿಟ್ಟುಸಿರು (ಕವಿತೆ) - ಭರತ್ ಕೆ.ಆರ್.

ಬಡತನದ ಬೇಗೆಯ ಕಣ್ಣಾರೆ ಕಂಡು
ಸುಡುತಿಹುದು ಮನ ಮನಸ್ಸುಗಳನ್ನು
ಒಳಗೊಳಗೇ ತಾನು ಕಸಿವಿಸಿಗೊಂಡು
ತಬ್ಬಿಬ್ಬಾಗಿ ಮಂಕಾಗಿ  ಕುಳಿತಿಹರು//

ಬಡತನದಲ್ಲಿ ಸಿರಿತನ ಕಂಡವರು
ಪುಟ್ಟ ಗುಡಿಸಲ ಸೂರಿನಡಿಯಲ್ಲಿ
ಪ್ರೀತಿಯನ್ನು ಹಂಚುತ್ತಾ ಬೆಳೆದವರು
ಬೇದ ಭಾವ ತೋರದ ಮುಗ್ಧ ಜನರು//

ಪ್ರತ್ಯೇಕ ಕೊಠಡಿಗಳ ಗೊಡೆಯಿಲ್ಲ
ಬಿರುಕು ಮೂಡಿದ ಮನಮನಸ್ಸುಗಳಿಲ್ಲ
ಅಸ್ಸುಯ್ಯೆ ಇಂದ ಕೂಡಿದ ಬಂದುತ್ವವಿಲ್ಲ
ತಾನು ತನ್ನದೆನ್ನುವ ಘರ್ವವಿಲ್ಲ//

ಸಿರಿತನಕ್ಕೆ ಮಾರುಹೋಗದ ಮಂದಿ
ಬಡತನಕ್ಕೆ ಕುಗ್ಗಿ ಹಿಂಜರಿಯದ ಮಂದಿ
ಕಷ್ಟಕ್ಕೆ ಒಗ್ಗೂಡಿ ಜೊತೆಗೂಡುವ ಮಂದಿ
ಮನುಷತ್ವ ಅರಿತು ಮುನ್ನಡೆಯುವ ಮಂದಿ //

ನೆರೆಹೊರೆಯೊಳು ಸಹಬಾಳ್ವೆ ನೆಡೆಸಿಹರು
ಎಲ್ಲಾ ಕೂತು ಹಂಚುಂಡಿ ತಿನ್ನುವರು
ಶುದ್ಧ ಮನಸ್ಸಿನ ಮುಗ್ಧ ಮನಸ್ಸಿನವರು
ಏನು ಇಲ್ಲದ ಬಡ ಜನರು ನನ್ನವರು//
✍️ಭರತ್ ಕೆ ಆರ್  S/O ರಂಗಸ್ವಾಮಿ. ಎಂಜಿನಿಯರಿಂಗ್ ವಿದ್ಯಾರ್ಥಿ, ಹಾಸನ ಜಿಲ್ಲೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾರ್ತಿಕ ದೀಪ (ಕವನ) - ರೇವಣಸಿದ್ದಪ್ಪ ಎಚ್ ಎಲ್ ಚನ್ನಪಟ್ಟಣ.

ಅಂಧಕಾರವ ಅಳಿಸುವ ಹಣತೆ
 ಶಿವನ ಆರಾಧನೆ ಕಾರ್ತಿಕಮಾಸದ ಶ್ರೇಷ್ಠತೆ
ಮುಕ್ತಿಗೆ ಭಕ್ತಿಮಾರ್ಗ ಬಿಟ್ಟರಿಲ್ಲ ಮಾನ್ಯತೆ

ನೀಗುವುದು ಮನುಷ್ಯ ಜೀವನದ ಕೊರತೆ
ಇರಬೇಕು ಮನಸ್ಸಿನಲ್ಲಿ ಶುದ್ಧತೆಯ ಧೃಢತೆ
ನೀಡಬೇಕು ಶಿವಭಕ್ತಿಗೆ ಆಧ್ಯತೆ

ಶಿವನ ಭಜಿಸುವಾಗ ಇರಲಿ ಏಕಾಗ್ರತೆ
ಶಿವಪೂಜೆಗೆ ಬಿಲ್ವಪತ್ರೆಯೇ ಪ್ರಾಮುಖ್ಯತೆ
ಸದಾ ಇರಲಿ ಮನಸ್ಸಿನಲ್ಲಿ ಸ್ಥಿರತೆ
- ಸಿದ್ದು ವಾಸುದೇವ್ ಬೊಂಬೆನಾಡು
ರೇವಣಸಿದ್ದಪ್ಪ ಎಚ್ ಎಲ್ ಚನ್ನಪಟ್ಟಣ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ದಣಿವಿಲ್ಲದೆ ಧಣಿ (ಕಿರು ಕವನ) - ಸವಿತಾ ಆರ್ ಅಂಗಡಿ. ಮುಧೋಳ.

ಸೂರ್ಯೋದಯಕ್ಕೆ ಮುನ್ನ ನಡೆಯುವನು ಗದ್ದೆಯತ್ತ
 ಮಳೆಯೆನ್ನದೆ ಬಿಸಿಲೆನ್ನದೆ ನಿರಂತರ ದುಡಿಯುತ್ತ
 ಪ್ರಕೃತಿಯನ್ನು ಅರಿತವನಾತ
 ಮಣ್ಣಲ್ಲಿ ಮಣ್ಣಾಗಿ ಹೊನ್ನನ್ನು ಬೆಳೆಯುವನಾತ
 ದವಸ ಧಾನ್ಯ ಬೆಳೆದು  ಅನ್ಯರಿಗೆ ಅನ್ನದಾತ
 ಭೂತಾಯಿಯ ಸೇವೆಗೆ ಜೀವನ ಮುಡಿಪಾಗಿಡುವನಾತ
 ತುತ್ತು ಅನ್ನಕ್ಕಾಗಿ ಬೆವರು ಹರಿಸಿ ದುಡಿಯುವನಾತ
 ಹಸಿರಿಗೆ ಉಸಿರು ಕೊಡುವ ಪುಣ್ಯದಾತ
 ಜಗದ ಹಸಿವನ್ನು ನೀಗಿಸುವ ಧಾನ್ಯದಾತ
 ನಿತ್ಯ ನಿರಂತರ ದುಡಿಯುವ ದಣಿವಿಲ್ಲದ ದನಿ ಆತ.
✍️ ಸವಿತಾ ಆರ್ ಅಂಗಡಿ. ಮುಧೋಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗಜಲ್ - ಸುಪ್ರೀತಾ ಶೆಟ್ಟಿ (ಗುಬ್ಬಚ್ಚಿ) ಮುಳ್ಳುಗುಡ್ಡೆ, ಕುಂದಾಪುರ.

ಕನಸುಗಳ ಕೂಡಿಟ್ಟ ಪುಟ್ಟ ಅರಮನೆ ಚೂರಾಗಿ ಹೋಗಿದೆ,
ಜೊತೆ ಸೇರಿ ಬೆಳೆಸಿದ ಗಿಡವೀಗ ಕೊಡಲಿಗೆ ಬಲಿಯಾಗಿ ಹೋಗಿದೆ/

ನಾವು ನಡೆದ ಹಾದಿಯಲಿ,
ಮುಳ್ಳು ಪೊದೆಗಳು ತುಂಬಿವೆ/

ನಂಬಿ ಕೈ ಮುಗಿದ ಹುತ್ತವೂ ಮರೆಯಾಗಿ ಹೋಗಿದೆ,
ಅಡುಗೆ ಮನೆಯಲಿ ನಿನ್ನ ಕೈ ಬಳೆಯ ಸದ್ದಿಲ್ಲ/

ಪ್ರೀತಿಯ ಮಾತೆಲ್ಲ ಜೇಡರ ಬಲೆಯಲಿ ಬಂಧಿಯಾಗಿ ಹೋಗಿದೆ/

ನಾವಿಬ್ಬರು ನೆಟ್ಟಿದ್ದ ಬಳ್ಳಿಯ ತುಂಬಾ ಮಲ್ಲಿಗೆ ಅರಳಿದೆ,
ನಿನ್ನ  ಗೋರಿಯ ಮೇಲೆ ಬಿದ್ದ ಹೂವು ಒಣಗಿ ಹೋಗಿದೆ/

ನಾ ಕೂಡಿಟ್ಟ ಹಣದಿ ನಿನಗಾಗಿ ತಂದ ಉರುಗೋಲು ಮುರಿದಿದೆ/

ನಮ್ಮ ಮಕ್ಕಳು ಮರೆತು ಹೋದ ಹಳೆಯ ಫೋಟೋ ಅನಾಥವಾಗಿ ಹೋಗಿದೆ/

ನೀನೋ ಪುಣ್ಯವತಿ 'ಗುಬ್ಬಚ್ಚಿ'ಯಂತೆ ನನ್ನೆದೆಯ ಮೇಲೆ ಚಿರನಿದ್ರೆಗೆ ಜಾರಿದೆ/

ನಾ ನಿನ್ನ ನೆನಪುಗಳ ಮೂಟೆಯೊಂದಿಗೆ ಆಶ್ರಮ ಸೇರಿ ವರುಷಗಳಾಗಿ ಹೋಗಿದೆ/
- ಸುಪ್ರೀತಾ ಶೆಟ್ಟಿ (ಗುಬ್ಬಚ್ಚಿ) ಮುಳ್ಳುಗುಡ್ಡೆ ,ಕುಂದಾಪುರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕನ್ನಡ ನಾಡು, ನುಡಿ ಸಂಸ್ಕೃತಿ, ಕಾವ್ಯ ಪರಂಪರೆ (ಲೇಖನ) - ಶ್ರೀಮತಿ ಸೂಗಮ್ಮ ಡಿ ಪಾಟೀಲ್ ಉತ್ನಾಳ್ (ವಿಜಯಪುರ ಜಿಲ್ಲೆ).

ಕನ್ನಡನಾಡು ೧೯೫೬ ಕ್ಕೂ ಮೊದಲು ಹೈದ್ರಾಬಾದು, ಮದ್ರಾಸು ಹಾಗೂ ಮುಂಬೈ ಮುಂತಾದ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿತ್ತು. ಕನ್ನಡ ನಾಡಿನ ಏಕೀಕರಣಕ್ಕಾಗಿ ನಡೆದ ತೀವ್ರ ಚಳವಳಿಯ ಫಲವಾಗಿ ಭಾರತ ಸರ್ಕಾರವು ೧೯೫೪ ರಲ್ಲಿ ಫಜಲ್ ಅಲಿ ಸಮಿತಿಯನ್ನು ರಚಿಸಿತು.
ಈ ಸಮಿತಿಯು ಕನ್ನಡ ಮಾತಾಡುವ ಭೂಭಾಗಗಳನ್ನು ಒಂದುಗೂಡಿಸಿ ಮೈಸೂರು ರಾಜ್ಯವನ್ನು ರಚಿಸಲು ಸಲಹೆ ನೀಡಿತು. ಹಾಗಾಗಿ ಭಾಷಾ ಆಧಾರದ ಮೇಲೆ ರಾಜ್ಯಗಳ ಪುನರ ರಚನೆಯಾಗಲಾಗಿ ನವೆಂಬರ್  ೧,  ೧೯೫೬ ರಂದು ಏಕೀಕೃತ ಮೈಸೂರು ರಾಜ್ಯದ ಉದಯವಾಯಿತು. ಕನ್ನಡಿಗರ ಒತ್ತಾಯದ ಮೇರೆಗೆ ನವೆಂಬರ್ ೧ ೧೯೭೩ ರಂದು ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ಮರು ನಾಮಕರಣ ಮಾಡಲಾಯಿತು.

ಪರಂಪರೆಯ ತಾಣ:

ಕರ್ನಾಟಕವು ಭವ್ಯ ಪರಂಪರೆಯನ್ನು ಹೊಂದಿದೆ. ಅದು ಅಪಾರ ಭೌಗೋಳಿಕ ಸಂಪತ್ತನ್ನು ಹೊಂದಿದ್ದು, ಕಲೆ, ಸಾಹಿತ್ಯ, ಲಲಿತ ಕಲೆ, ಹಾಗೂ ಕ್ರೀಡೆಗಳಲ್ಲಿ ತನ್ನದೇ ಆದ ಛಾಪನ್ನು ಮೂಢಿಸಿದೆ. ಈ ನಾಡನ್ನು ಮೌರ್ಯರು, ಹೊಯ್ಸಳರು, ಗಂಗರು, ಚಾಲುಕ್ಯರು ವಿಜಯನಗರ ಅರಸರು ಹಾಗೂ ಮೈಸೂರಿನ ಒಡೆಯರು ಮುಂತಾದ ಪ್ರಮುಖ ರಾಜರು ಆಳಿದ್ದು ಅನೇಕ ಸಾಮ್ರಾಜ್ಯಗಳ ತವರು ಮನೆಯಾಗಿದೆ. ಇಲ್ಲಿ ಮಯೂರ ವರ್ಮ, ನೃಪತುಂಗ, ಕೃಷ್ಣದೇವರಾಯ ಮುಂತಾದ ವೀರರು ಆಳಿ ಹೋಗಿದ್ದಾರೆ. ಬಸವಣ್ಣ, ಪುರಂದರದಾಸ,ಕನಕದಾಸ, ಇಂತಹ ಮಹನೀಯರು ಜನಿಸಿದ ಪುಣ್ಯಭೂಮಿ ನಮ್ಮದು. 

ಆಂಗ್ಲ ವ್ಯಾಮೋಹ:

ಇಂತಹ ನಾಡಿನಲ್ಲಿಂದು ಆಂಗ್ಲ ಭಾಷೆ ವ್ಯಾಮೋಹ ಹೆಚ್ಚಾಗುತ್ತಿದೆ ಕನ್ನಡ ಮಣ್ಣಲ್ಲಿ ಹುಟ್ಟಿ ಕಾವೇರಿ ನೀರು ಕುಡಿದು ಅನ್ಯ ಭಾಷೆ, ಅನ್ಯ ರಾಜ್ಯವನ್ನು ಶ್ರೀಮಂತಗೊಳಿಸುವದೇಕೆ?
ದಯಮಾಡಿ ಈಗಲೇ ಎಚ್ಚೆತ್ತುಕೊಳ್ಳಿ ಪ್ರಗತಿ ನಮ್ಮ ನುಡಿ ನೆಲದ್ದಾಗಲಿ ಅದರ ಏಳಿಗೆಗೆ ನಮ್ಮ ನಿಮ್ಮೆಲ್ಲರ ಶ್ರಮವಿರಲಿ.
ಈ ನಾಡಿಗಾಗಿ ಎಂದಿಗೂ, ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ,
ಬಾಯ್ ಒಲಿಸಾಕಿದ್ರೂನೆ –
ಮೂಗ್ನಲ್ ಕನ್ನಡ್ ಪದವಾಡ್ತೀನಿ !
ನನ್ನ ಮನಸನ್ನ್ ನೀ ಕಾಣೆ !
ಅನ್ನೋದು ತಾಯಿನುಡಿಯ ಶ್ರೇಷ್ಠತೆಯನ್ನು ಸಾರುತ್ತದೆ. ಕವಿ ಜಿ.ಪಿ.ರಾಜರತ್ನಂ  ಅವರ ಆಶಯದಂತೆ ನಾವು ನೀವೆಲ್ಲಾ ಬಾಳೋಣ.
- ಶ್ರೀಮತಿ ಸೂಗಮ್ಮ ಡಿ ಪಾಟೀಲ್
ಉತ್ನಾಳ್ (ವಿಜಯಪುರ ಜಿಲ್ಲೆ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಇನಿಯನಿಗಾಗಿ ಕಾಯುತಿರುವ ಈ ಪುಟ್ಟ ಜೀವ (ಕವಿತೆ) - ಶಾಂತಾರಾಮ ಶಿರಸಿ, ಉತ್ತರ ಕನ್ನಡ.

ನನ್ನ ಹೃದಯದರಮನೆಯ ಪ್ರೀತಿಯ ಇನಿಯ, 
ಈ ಮನ ಬಯಸುತಿದೆ ನಿನ್ನ  ಪ್ರೀತಿಯ,
ಈ ಹೃದಯಕೆ ನೀಡುವೆಯಾ ಪ್ರೀತಿಯ ಅಪ್ಪುಗೆಯ, 
ಓ ನನ್ನ ಪ್ರೀತಿಯ ಗೆಳೆಯ... 

ಮನಸು ಬಯಸುತಿಹುದು ನಿನ್ನ, 
ಬಯಸಿಹೆ ನಾ ಮಾತುಕತೆಯ ಭಾವನೆಗಳೊಂದಿಗಿನ ಮಿಲನ, 
ಈ ಯಾನ ಸಾಗುತಿರಬೇಕು ದಿನ-ಪ್ರತಿದಿನ, 
ಪ್ರತಿದಿನ ಕಾಣುತ್ತಿರುವೆ ನಾ ನಿನ್ನದೇ ಕನಸನ್ನ... 

ನಿನ್ನ ಕಾಣದೇ ಒಂಟಿಯಾಗಿ ಪರಿತಪಿಸುತಿರುವ, 
ಈ ಪುಟ್ಟ ಜೀವ, 
ಪ್ರತಿಕ್ಷಣ ನನ್ನೆದೆ ಬಡಿದುಕೊಳ್ಳುತಿಹುದು ಢವ-ಢವ, 
ನಿನದೇ ನೆನಪುಗಳ ಅಳುಕಿನ ಭಾವ.. 

ನನ್ನ ಒಲವೇ ನೀನೊಮ್ಮೆ ಬಂದರೆ ಶರಣಾಗುವೆ ನಿನಗೆ ಸೋತು, 
ಕೂರುವೆ ನಾ ನಿನ್ನ ಬೆನ್ನಹತ್ತು, 
ಒರಗುವೆ ನಿನ್ನ ಮಡಿಲಲ್ಲಿ ಕ್ಷಣಹೊತ್ತು - ಅದೇ ಎನಗೆ ಮುತ್ತು, 

ನಿನ್ನಿಂದ ಬಯಸಲಾರೆ ಚಿನ್ನ-ಒಡವೆ, ವೈಡೂರ್ಯ, ಮುತ್ತು-ಹವಳ-ಹರಳು, 
ನಿನ್ನ ಅಪ್ಪುಗೆಯ ಆ ಆಲಿಂಗನದ ಆನಂದದ ಕ್ಷಣಗಳು, 
ತುಂಬಿ ಬರುವವು ಎನ್ನ ಕಣ್ಣ ಕಂಬನಿಗಳು,
ನೀನೇ ಆಸರೆಯಾಗುವೆ ಎಂದು ನಂಬಿರುವವಳು, 
ನನ್ನಂತೆ ಇನಿಯನಿಗಾಗಿ ಪರಿತಪಿಸುತಿರುವ ಅವೆಷ್ಟೋ ಜೀವಗಳು, 

ಈ ಮುದುಡಿದ ತಾವರೆಯ ಅರಳಿಸು-ಸಂತೈಸು, 
ಬಂದು ಮೆಲ್ಲ ಮಾತಾಡಿ- ಸ್ಪರ್ಶಿಸಿ ಈ ಜೀವವ ಉಳಿಸು, 
ನೀನಾಗು ನನ್ನ ಹೃದಯದರಮನೆಯ ಅರಸು.... 
- ಶಾಂತಾರಾಮ ಶಿರಸಿ, ಉತ್ತರ ಕನ್ನಡ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹಳೆ ನೆನಪು ಹೊಸ ಸೊಗಸು (ಲೇಖನ) - ಸೌಮ್ಯ ಗಣಪತಿ ನಾಯ್ಕ, ಕಾನಸೂರು.

ನಮಗೆಲ್ಲ ಹಳೆಯ ನೆನಪುಗಳನ್ನು ಮೆಲುಕು ಹಾಕುವುದು ಅಂದರೆ ತುಂಬಾ ಇಷ್ಟ. ಆ ತುಂಟ ತರಲೇ, ನಗು- ಅಳು, ಕೋಪ, ಕ್ರೋಧ, ಮೋಹ, ಮತ್ತು ಪ್ರೀತಿ ಇವುಗಳೆಲ್ಲಾ ಮಾನವನ ಒಂದು ಅಂಗ  ಇದ್ದ ಹಾಗೆ, ಇದನ್ನೆಲ್ಲ ನೆನಪಿಸಿಕೊಂಡು ಇಂದು ನಾನು ನನ್ನ ಹಳೆಯ ನೆನಪನ್ನು  ಹೊಸ ಸೊಗಸಿನೋಡನೆ ನಿಮ್ಮೋಡನೆ ನಾನು ಹಂಚಿಕೊಳ್ಳಲು ಬಯಸಿ, ನನಗೆ ನೆನಪಿಸುವ ಎಲ್ಲಾ ನೆನಪನ್ನು ಮರುಕಳುಹಿಸಲು ಬಯಸುತ್ತೇನೆ. 
              ನನಗೆ ಆಗ ತುಂಬಾ ಚಿಕ್ಕ ವಯಸ್ಸು ಸುಮಾರು 4-5  ವರ್ಷವೆನೋ  ನನಗೋ ಬಕೆಟ್ ನಲ್ಲಿ  ಸ್ನಾನ ಮಾಡೋದು ಅಂದ್ರೆ ತುಂಬಾ  ಇಷ್ಟ, ನೀರಲ್ಲಿ ಕಾಲು ಮುಳುಗಿಸಿ ನನ್ನ ಕಾಲುಗಳು ಅದೇಷ್ಟು ಸುಂದರವಾಗಿ ಕಾಣುತ್ತವೆ ಎಂದು ಹೇಳುತ್ತಾ ಆನಂದ ಸವಿಯೋದು ಅಂದರೆ ತುಂಬಾ ಇಷ್ಟ. ಹೀಗೆ  ಸ್ನಾನ ಮಾಡ್ತಾ ಮಾಡ್ತಾ ಒಂದು ದಿನ    ಮಧ್ಯಾನ್ಹದ ವೇಳೆ ಸುಮಾರು ಒಂದು ಗಂಟೆ ಆಗಿತ್ತು, ಆಗ ನಾನು ನೀರಲ್ಲಿ ಸ್ನಾನ ಮಾಡ್ತಾ ಇರೋವಾಗ ಕಾಲು ಜಾರಿ ಕೊಳಚೆ  ನೀರಲ್ಲಿ ಬಿದ್ದಾಗ  ನನ್ನ ಮುಖದಲ್ಲಿ  ಮೂಡುವ ಆ ಮುನಿಸು ನೋಡಿ ನನ್ನ ತಾಯಿ- ತಂದೆಯವರು ಹೊಟ್ಟೆ ತುಂಬ ನಕ್ಕಿದ್ದರು. ನನಗಾಗಿ ತುಸು ಕೋಪ ಇತ್ತು. ಅಪ್ಪ ಅಮ್ಮನಿಗೆ ತುಂಬ ಬೈದು ಅಳುತ್ತಾ ಕೂತು ಚಾದರ ಹೊದಿಸಿಕೊಂಡು ಮಲಗಿದ್ದೆ ಅಂತ ನನ್ನ  ತಾಯಿಯವರು ನನಗೆ ಹೇಳಿದಾಗ   ಹಳೆಯ ನೆನಪು ತಮಾಷೆ ರೂಪದಲ್ಲಿ ಮರು ಕಳುಹಿಸಿದ ನೆನಪನ್ನು ನೆನಪಿಸಿಕೊಂಡಾಗ ಅದೇನೋ  ಹರುಷವಾಯಿತು ನನ್ನ ಮನಸ್ಸಿಗೆ.  
          ಮತ್ತೆ ಭಾನಿ ಅಂದರೆ ನಾವು ಚಿಕ್ಕವರಿರುವಾಗ ಕಣ್ಣಿರು ತುಂಬಲು ಬಕೆಟ್ ಬಳಸುತ್ತಿರಲಿಲ್ಲ  ಬದಲು ಮಣ್ಣಿನ ಭಾನಿ ಬಳಸುತ್ತಾ ಇದ್ದರು. ನಮ್ಮ ಮನೆಯಲ್ಲಿ ತುಂಬಾ ದೊಡ್ಡ ಭಾನಿ  ಇತ್ತು. ಅದರ  ತುಂಬಾ ನೀರು ತುಂಬಿತ್ತು. ನನಗೆ ಆಗ ಏನೂ ತಿಳಿಯುತ್ತಿರಲಿಲ್ಲ. ಆ ಭಾನಿಯೋಳಗೆ ನಾನು ಮುಳುಗಿ ಬಿಟ್ಟಿದ್ದೆನಂತೆ. ಉಗುರಂಚು ಎಳೆಯಿಂದ  ಬೆರೆಯಾದ ಹಾಗೆ ನಾನು ಕೂಡಾ  ಸಾವಿನಂಚಿನಿಂದ ಪಾರಾದೆ ಎಂದು ನನ್ನ ತಾಯಿಯವರು ನನಗೆ ಹೇಳುತ್ತಾರೆ. ಇದು ಗಂಭೀರವಾದ ವಿಷಯವಾದರೂ  ನನಗೆ ಇದು ನೆನಪಾದಾಗಲೆಲ್ಲ ತಮಾಷೆಯಾಗಿ ಪರಿಭ್ರಮಿಸುತ್ತದೆ. ಅದೇಷ್ಟು ಸುಂದರವಾದ ಅನುಭವವದು ಕೆಲವೊಮ್ಮೆ ನಾನು ಪುಟ್ಟ ಹೆಜ್ಜೆಯನ್ನಿಡುತ್ತಾ ಮನೆ ತುಂಬ ನನ್ನ ಪುಟ್ಟ ಪುಟ್ಟ ಹೆಜ್ಜೆಯಿಂದ ರಂಗೋಲಿ ಹಾಳು ಮಾಡುತ್ತ,  ಅಮ್ಮನ ಹತ್ತಿರ  ಕಿವಿ ಹಿಂಡಿಸಿಕೊಳ್ಳುತ್ತಾ  ಇರಬೇಕೆಂದು ಬಹಳ ಅನಿಸುತ್ತದೆ. 
               ನಂತರ ಸುಮಾರು ನನಗೆ 6- 7ವರ್ಷ ವಯಸ್ಸಾದಾಗ   ಶಾಲೆಗೆ ಸೇರಿಸಿದರು. ಆಗ ತಾನೇ ಅಮ್ಮನಿಗೆ 8 ತಿಂಗಳಾಗಿತ್ತು. ನನಗೆ  ಅಮ್ಮನ ನೆನಪಾಗಿ ಅಂಗನವಾಡಿಗೆ ಹೋಗದೆ    ನನ್ನ ತಾಯಿಯವರು ನೆನಪಾಗಿ ಓಡಿ ಬಂದು ಬೀಡುತಿದ್ದೆ. ಇದನ್ನೆಲ್ಲ ನೆನಪಿಸಿಕೊಂಡಾಗ ನನಗೆ  ಅಮ್ಮನ ಮಡಿಲಲ್ಲಿ ಮಗು ಆಗಿ ಇರಬೇಕಾಗಿತ್ತು ಅನಿಸುತ್ತದೆ. ಅದೊಂದು ಸುಂದರ ಕ್ಷಣ  .  
                 ನನಗೆ ಆಗ  9 ವರ್ಷಕ್ಕೆ ಬಿದ್ದಾಗ ನಾನು 4  ನೇ ತರಗತಿಯಲ್ಲಿ  ಇದ್ದೇ, ನಾನು  ಕಲಿತಿದ್ದು ಪ್ರಾಥಮಿಕ ಶಾಲೆಯಾದ  ಸರಕಾರಿ ಶಾಲೆಯಲ್ಲಿ  ಓದಲು ಪ್ರಾರಂಭಿಸಿದೆ. ಅಲ್ಲಿ ರಮೇಶ್ ಸರ್ ರವರು  ಇದ್ದರು.  ಅವರಿಗೆ  ಎಲ್ಲ ವಿದ್ಯಾರ್ಥಿ ಗಳು ಒಂದೇ ಆಗಿತ್ತು. ಆದರೆ ನನ್ನನ್ನು ತುಂಬ ಸತಾಯಿಸುತಿದ್ದರು. ಒಂದು ಭಾರಿ ನಾನು ನನ್ನ ಗೆಳತಿಯೊಬ್ಬಳಿಗೆ ಆಟವಾಡುವ ಸಮಯದಲ್ಲಿ ನನಗೆ ತಿಳಿದೋ ತಿಳಿಯದೆಯೋ   ಹೊಡೆದು ಬಿಟ್ಟಿದ್ದೆ. ಆ ಕ್ಷಣ ರಮೇಶ್ ಸರ್ ನನಗೆ ತುಂಬಾ ಹೊಡೆದಿದ್ದರು. ತುಂಬಾ ದೊಡ್ಡ ಬಾರಿ ಕೋಲಿನಿಂದ ಹೊಡೆದಿದ್ದರು. ನಾನು   ಜೋರಾಗಿ ಅಳುತ್ತಾ ಇದ್ದೆ. ಆಗ    ಸರ್ ಪುಟ್ಟ ಮಗುವಿನ ಹಾಗೆ ನನ್ನನ್ನು ಸಲಹಿದರು. ತಮ್ಮ ಅವಳಿ- ಜವಳಿ ಮಕ್ಕಳಂತೆ ನನ್ನನ್ನು ನೋಡಿಕೊಂಡರು. 
             11-12 ರಲ್ಲಿ ನಮಗೆ  'ಸಮಾಜ 'ವಿಷಯವನ್ನು    ಕಲಿಸುತ್ತಾ  ಇದ್ದರು. ಅವರಿಗೆ ನಾನು ಅಂದ್ರೆ ತುಂಬ ಪ್ರೀತಿ ಗೊತ್ತಿಲ್ಲ ಯಾವ ಜನುಮದ  ಋುಣಾನು ಬಂಧನೋ ಏನೋ ತಾಯಿಯಂತೆ ಭಾಸ ಆಗುತ್ತಾ ಇದ್ದರು. ಅವರಿಗೂ ನಾನು ಮಗಳಾಗಿದ್ದೇನೋ ಏನೋ ತಿಳಿದಿಲ್ಲ. ಅರಿವಿಲ್ಲದ ವಯಸ್ಸು ಆಳ ಹುಡುಕಿದವರು  ಯಾರೆಂದು ನಾನೆಂದು ಹೇಳಲು ಸಾಧ್ಯವಿಲ್ಲ. ಇದೆಲ್ಲಾ ನನ್ನ ಯಾವುದೋ  ಜನ್ಮದ ಪುಣ್ಯ ವೆನೋ ಎಂದೆನಿಸುತದೆ. 
               ಮತ್ತು ಕೊನೆಯದಾಗಿ ನಾನು 7 ನೇಯ ತರಗತಿಯಲ್ಲಿ ಇರುವಾಗ ನಮಗೆ ಇಂಗ್ಲಿಷ್ ಕಲಿಸಲು ಇಬ್ಬರು ಶಿಕ್ಷಕಿಯರು ಬಂದರು, ಅವರ ಹೆಸರು ಜಯಲಕ್ಷ್ಮಿ, ಮತ್ತು   ಅನ್ನಪೂರ್ಣ ಟೀಚರ್  ಇಬ್ಬರು ನನಗೆ ತುಂಬಾ ಇಷ್ಟವಾದ ಶಿಕ್ಷಕಿಯರು ಇಂಗ್ಲಿಷ್ ಅಂದರೆ ತಲೆ ತಿರುಗುತ್ತಿರುವಾಗ ನನ್ನ ತಲೆಯಲ್ಲಿ ಇಂಗ್ಲಿಷ್ ಶಾಶ್ವತವಾಗಿ  ಉಳಿದಿರುವ ಹಾಗೆ  ಮಾಡಿದರು. ಆದರೆ ವಿಧಿಯಾಟ ನೋಡಿ ನಮ್ಮಿಂದ ಉಳಿಸಿಕೊಳ್ಳಲು ಸಾಧ್ಯವಿರಲಿಲ್ಲ. ಅವರೇ ಅನ್ನಪೂರ್ಣ ಟೀಚರ್ ಇವರು ತುಂಬಾ ಶಾಂತ ಸ್ವರೂಪಿಯಾಗಿದ್ದರು. ಆದರೆ ಇದು ದೇವರಿಗೂ  ಇಷ್ಟವಾಗಲಿಲ್ಲ ಏನೋ   ಬೇಗ ನಮ್ಮಿಂದ ಅವರನ್ನು ಎಂದು ಕಾಣದ ಲೋಕಕ್ಕೆ ಕೊಂಡೈದನು. ಇದು ನೋವಿನ ಅನುಭವ ಆದರೂ, ಹಳೆ ನೆನಪು ಅದೆಷ್ಟೋ ಸವಿ ನೆನಪನ್ನು ಮೆಲಕು ಹಾಕಿದೆ ನೆನೆದಾಗ ಸುಖದ ಜೊತೆಗೆ ಸಂಕಟವು ಆಗುತ್ತದೆ. ನಾನು ಜೋರಾಗಿ  ಅತ್ತು ಬಿಟ್ಟಿದ್ದೇ. 
                 ನಂತರ ನಾನು ಪ್ರೌಢಶಾಲೆಯಾದ ಶ್ರೀ ಕಾಳಿಕಾ ಭವಾನಿ ಸೆಕೆಂಡರಿ ಸ್ಕೂಲ್ ಕಾನಸೂರು ಗೆ ಸೇರಿಕೊಂಡೆ. ಅಲ್ಲಿಯೂ ಕೂಡಾ  ಗುರು ಎಂಬ ದೈತ್ಯಾಕಾರದ ಆಲದ ಮರ ನಮಗೆಲ್ಲ ಆಶ್ರಯ ನೀಡಿದೆ. ನಾವು ಕಲಿಯುವಾಗ ನನ್ನ ಗುರುಗಳಾದ  ಶಾಂತ ಟೀಚರ್ (ತಾಯಿಯ ಅನುಭವ ವಾಗುವುದು),ಪ್ರವೀಣ್ ಸರ್,  ಮೀನಾ ಟೀಚರ್, ಯಶಸ್ವಿನಿ ಟೀಚರ್, ಮಾರುತಿ ಸರ್( ಅಣ್ಣನ ಹಾಗೆ), ಗುರೂಜಿ ಎಂದೇ ಪ್ರಖ್ಯಾತಿ ಪಡೆದಿರುವ ಕನ್ನಡಾಂಬೆ ಕನ್ನಡದ ಕಂದ ಎಂದು ಕರೆಸಿಕೊಳ್ಳುವ ನಮ್ಮ ಪ್ರೀತಿಯ  ಎಸ್. ಎಮ್. ಭಟ್ಟರು ಹೀಗೆ ಹಲವಾರು ಮಂದಿ ಇವರೆಲ್ಲರ ಜೋತೆ   ನಾವೆಲ್ಲರೂ ಅನ್ಯೋನ್ಯವಾಗಿ ಇದ್ದೆವು. ಇದೆಲ್ಲಾ ಹಳೆ ನೆನಪು  ಹೊಸ ನೆನಪಾಗಿ ಮರುಕಳಿಸಿತು  ನನಗೆ ಇಂದು. ಹ!! ಮರೆತೆ  , ಎಮ್. ಆರ್. ಶೇಷಗಿರಿ ಸರ್ ರವರು ನಮ್ಮೆಲ್ಲರಿಗೂ ತಂದೆಯಾಗಿದ್ದರು. ಸಹ ಶಿಕ್ಷಕರಿಗೆ ಸಹಪಾಠಿಯಾಗಿ  , ನಮಗೆ ಅವರ ಪಾಠಗಳನ್ನು ಕೇಳಿದಾಗ ಮತ್ತೊಮ್ಮೆ ಕೇಳಬೇಕು ಅನ್ನಿಸುತ್ತಿತ್ತು. 
               ಇದೆಲ್ಲಾ ನನ್ನ ಶಾಲಾ ದಿನಗಳು ಪರೀಕ್ಷೆಯ ಸಮಯದಲ್ಲಿ ತಡವರಿಸುತ್ತಾ ಬರುವುದು, ನಾಳೆ ಪರೀಕ್ಷೆ ಅಂದಾಗ ಆಗುವ ಭಯ, ಏನೂ ಓದದೇ ಬಂದಂತಹ ವಿದ್ಯಾರ್ಥಿಗಳನ್ನು ನೋಡಿದಾಗ  ಅಯ್ಯೋ ಪಾಪ ಏನು ಓದಿಲ್ಲವೆನೋ  ಅಂದುಕೊಂಡು ನಾವು ಬೇಸರ ಮಾಡಿಕೊಂಡ ಸಮಯವೆಲ್ಲ  ಒಂದೊಮ್ಮೆ ನೆನೆದಾಗ ಆ ಕ್ಷಣ  ತಲ್ಲಣ ವಾಗಿ  ಮಾರ್ಪಡಬಾರದ ಅನ್ನೋ ಕಾತುರ  ಮನಸ್ಸಲ್ಲಿ ಹರಿದಾಡುವುದು.ಈ ರೀತಿಯಾಗಿ ನನಗೆ ನನ್ನ ಶಾಲಾ ದಿನಗಳು, ಶಿಕ್ಷಕರ ನೆನಪು ಮರುಕಳಿಸಿತು. ಹಾಗೆ ಎಲ್ಲರ ಜೀವನದಲ್ಲೂ ಕೂಡಾ ಹಳೆಯ ನೆನಪು  ಹೊಸ ಸೊಗಸಾಗಿ ಉದ್ದವಾಗುತ್ತದೆ. ನನ್ನ ಸವಿ ನೆನಪಿಗೆ ಕಾರಣಿ ಕರ್ತರಾದ ಪ್ರತಿ ಶಾಲಾ ಶಿಕ್ಷಕರಿಗೆ ಇಲ್ಲಿಂದಲೇ ನನ್ನದೊಂದು ನಮನ  . ಇಷ್ಟೋಂದು ಅವಿಸ್ಮರಣೀಯವಾದ ಅನುಕರಣೀಯ ಅನುಭವ ನೀಡಿ ನಮ್ಮಂತಹ ಅದೆಷ್ಟೋ ಬಂಡೆ ಕಲ್ಲುಗಳಿಗೆ ರೂಪು ರೇಷೆ ನೀಡಿ ಉತ್ತಮ ಗುಣಮಟ್ಟದ, ಚಾರಿತ್ರಿಕ ವೈಚಾರಿಕತೆ ತೋಡಿಸಿ, ನಮ್ಮನ್ನೆಲ್ಲ ಸಹನೆಯ ಸಹಿಸಿಕೊಂಡ ನನ್ನ ಗೌರವಾನ್ವಿತ ಪ್ರತಿ ಗುರು  ವೃಂದಕ್ಕೂ ನನ್ನ ಶೀರ  ಸಾಸ್ಟಾಂಗ ಕರ ಮುಗಿವ ನಮನಗಳು ಸದಾಕಾಲವೂ ನಿಮ್ಮಲ್ಲರ ಬದುಕು  ಹೊತ್ತಿಲಲ್ಲಿ  ಉರಿಯುವ ಜ್ಯೋತಿಯಾಗಿ ಕೋಟಿ ಕೋಟಿ ಮಕ್ಕಳ ಬಾಳು ಹಸನಾಗಲಿ.... ಕೋಟಿ ಕೊಟ್ಟರು ಕರಗದ ನಿಮ್ಮ ಸೇವೆಯನ್ನು ನಾವೆಂದೂ ಮರೆಯಲು ಅಸಾಧ್ಯ! ಇತಿಹಾಸಕಾರರು ನೀವು, ಪ್ರೇರೆಪಣಾಕಾರರು ನೀವು, ನಿಮ್ಮಿಂದ ನಾವು, ಧನ್ಯವಾದಗಳು ನಿಮ್ಮ ಸೇವಾವೃತ್ತಿಗೆ.,... 
   - ಸೌಮ್ಯ ಗಣಪತಿ ನಾಯ್ಕ , ಕಾನಸೂರು.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...